Tag: ವಂಡರ್ ಲಾ

  • ಅಂತಾರಾಷ್ಟ್ರೀಯ ಪುತ್ರಿಯರ ದಿನಾಚರಣೆ – ಹೆಣ್ಣು ಮಕ್ಕಳಿಗೆ ಉಚಿತ ವಂಡರ್‌ಲಾ ಪಾಸ್

    ಅಂತಾರಾಷ್ಟ್ರೀಯ ಪುತ್ರಿಯರ ದಿನಾಚರಣೆ – ಹೆಣ್ಣು ಮಕ್ಕಳಿಗೆ ಉಚಿತ ವಂಡರ್‌ಲಾ ಪಾಸ್

    ಬೆಂಗಳೂರು: ಅಂತರಾಷ್ಟ್ರೀಯ ಪುತ್ರಿಯರ ದಿನಾಚರಣೆ ಪ್ರಯುಕ್ತ ಸೆ.26ರಂದು ಎಲ್ಲಾ ಪುತ್ರಿಯರಿಗೆ ಉಚಿತವಾಗಿ ಪಾಸ್ ನೀಡುವುದಾಗಿ ವಂಡರ್ ಲಾ ಪ್ರಕಟಿಸಿದೆ.

    ಎಲ್ಲಾ ಹೆಣ್ಣು ಮಕ್ಕಳಿಗೂ ಅಂತಾರಾಷ್ಟ್ರೀಯ ಪುತ್ರಿಯರ ದಿನಾಚರಣೆ ಶುಭಕೋರಿರುವ ವಂಡರ್ ಲಾ, ಪುತ್ರಿಯರಿಗಾಗಿ ಉಚಿತ ಪಾಸ್ ನೀಡುತ್ತಿದೆ.

    Wonder Laಸೆ.26 ರಂದು ಹೆಣ್ಣು ಮಕ್ಕಳು ಬೆಂಗಳೂರು, ಕೊಚ್ಚಿ, ಹೈದರಾಬಾದ್ ಪಾರ್ಕ್‍ಗಳ ವಂಡರ್ ಲಾ  ಪೋಷಕರ ಜೊತೆ ಭೇಟಿ ನೀಡಿದರೆ ಮಾತ್ರ ಉಚಿತ ಪ್ರವೇಶ ಪಡೆಯಬಹುದು.  ಇದನ್ನೂ ಓದಿ: ದೇಶಕ್ಕೆ 600 ವೈದ್ಯಕೀಯ ಕಾಲೇಜು, ಏಮ್ಸ್‌ನಂಥ 50 ಸಂಸ್ಥೆ ಬೇಕು: ನಿತಿನ್ ಗಡ್ಕರಿ 

    ಪುತ್ರಿಯರು ತಮ್ಮ ಪೋಷಕರ ಜೊತೆ ತೆರಳಿ ಯಾರ ಪುತ್ರಿ ಎಂಬುದನ್ನು ಖಚಿತ ಪಡಿಸಿ, ಸಂಬಂಧಪಟ್ಟ ದಾಖಲೆ ತೋರಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ವಂಡರ್ ಲಾ ವೆಬ್‍ಸೈಟ್ www.wonderla.com ಗೆ ಭೇಟಿ ನೀಡಬಹುದು.

  • ಹಬ್ಬಕ್ಕೆ ವಂಡರ್ ಲಾದಿಂದ ಬಂಪರ್ ಆಫರ್- ಗಣೇಶ ಹೆಸರಿರೋ 100 ಮಂದಿಗೆ ಉಚಿತ ಪಾಸ್

    ಹಬ್ಬಕ್ಕೆ ವಂಡರ್ ಲಾದಿಂದ ಬಂಪರ್ ಆಫರ್- ಗಣೇಶ ಹೆಸರಿರೋ 100 ಮಂದಿಗೆ ಉಚಿತ ಪಾಸ್

    ಬೆಂಗಳೂರು: ಇಂದು ದೇಶಾದ್ಯಂತ ಗಣೇಶ ಹಬ್ಬವನ್ನು ಜನರು ಸಡಗರದಿಂದ ಆಚರಿಸುತ್ತಿದ್ದಾರೆ. ಈ ಮಧ್ಯೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ವಂಡರ್ ಲಾ ಈ ಬಾರಿ ಗಣೇಶ ಹಬ್ಬಕ್ಕೆ ಬಂಪರ್ ಆಫರ್ ನೀಡಿದೆ. ಇದನ್ನೂ ಓದಿ:  ಗಣೇಶನಿಗೆ ಪ್ರಿಯವಾದ ಬೇಸನ್ ಲಾಡು ಮಾಡುವ ಸರಳ ವಿಧಾನ

    Wonder La

    ಹೌದು, ಗಣೇಶ ಚತುರ್ಥಿ ದಿನದ ಅಂಗವಾಗಿ ವಂಡರ್ ಲಾ ವತಿಯಿಂದ ವಿಶೇಷ ಕೊಡುಗೆ ನೀಡಲಾಗಿದೆ. ಭಗವಾನ್ ಶ್ರೀ ಗಣೇಶನ 108 ಹೆಸರುಗಳ ಪೈಕಿ ಯಾವುದೇ ಹೆಸರು ನೀವು ಇಟ್ಟುಕೊಂಡಿದ್ದರೆ, ಅವರಿಗೆ ಸೆಪ್ಟೆಂಬರ್ 10ರ ಗಣೇಶ ಹಬ್ಬದಂದು ಉಚಿತ ಪಾಸ್ ನೀಡುತ್ತಿದೆ. ಇಂಥ 100 ಪಾಸ್ ನೀಡಲು ನಿರ್ಧರಿಸಿದೆ. ಇದನ್ನೂ ಓದಿ:  6,50,000 ರೂ.ಗೆ ದೇವರ ತೆಂಗಿನಕಾಯಿ ಖರೀದಿಸಿದ ಭಕ್ತ!

    Wonder La

    ಶ್ರೀ ಗಣೇಶನ ವಿವಿಧ ಹೆಸರು ಹೊಂದಿರುವ ಜನರು ವಂಡರ್ ಲಾಗೆ ನೇರವಾಗಿ ಭೇಟಿ ನೀಡಿ ಉಚಿತ ಪಾಸ್ ಪಡೆಯಬಹುದು. ಈ ಕೊಡುಗೆ ಪಡೆಯಲು ಅರ್ಹರಾಗಿರುವವರು ನಿಮ್ಮ ಹೆಸರನ್ನು ಸೂಚಿಸುವ ಯಾವುದಾದರೂ ಗುರುತಿನ ಚೀಟಿ ತರುವುದು ಕಡ್ಡಾಯ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 080-37230333, 080-35073966.

  • ಕೋವಿಡ್ ಏಂಜಲ್ಸ್ ಕುಟುಂಬಗಳಿಗೆ ವಂಡರ್‌ಲಾ ವತಿಯಿಂದ ಉಚಿತ ಪಾಸ್

    ಕೋವಿಡ್ ಏಂಜಲ್ಸ್ ಕುಟುಂಬಗಳಿಗೆ ವಂಡರ್‌ಲಾ ವತಿಯಿಂದ ಉಚಿತ ಪಾಸ್

    ಬೆಂಗಳೂರು: ಕೋವಿಡ್‍ಗಾಗಿ ಹಗಲಿರುಳು ಶ್ರಮಿಸುತ್ತಿರುವ ಕೋವಿಡ್ ಫ್ರಂಟ್‍ಲೈನ್ ವಾರಿಯರ್ಸ್ ಗಳಿಗಾಗಿ (ಕೋವಿಡ್ ಏಂಜಲ್ಸ್) ವಂಡರ್‍ಲಾ ಹಾಲಿಡೇಸ್ ಗೌರವಾರ್ಥವಾಗಿ ಉಚಿತ ವಂಡರ್‍ಲಾ ಪಾರ್ಕ್ ಪಾಸ್ ನೀಡಲು ಮುಂದಾಗಿದೆ.

    ವೈದ್ಯರು, ನರ್ಸ್ ಗಳು, ಸಹಾಯಕ ಸಿಬ್ಬಂದಿ, ಮಾಧ್ಯಮ ವರದಿಗಾರರು, ಪೊಲೀಸರು, ಸ್ಮಶಾನದಲ್ಲಿ ಕೆಲಸ ಮಾಡುವವರು, ಆಶಾ ಕಾರ್ಯಕರ್ತೆಯರು ಈ ಕೊಡುಗೆಗೆ ಅರ್ಹರಾಗಿದ್ದಾರೆ. ಜೊತೆಗೆ ಸಾಮಾಜಿಕ ಕಾರ್ಯಕರ್ತರಿಗೂ ಸಹ ಉಚಿತ ಪಾಸ್ ನೀಡಲು ನಿರ್ಧರಿಸಿದೆ. ಈ ಉಚಿತ ಪಾಸ್ ಒಟ್ಟು 1,500 ಕೋವಿಡ್ ಏಂಜಲ್ಸ್‍ಗಳು ಹಾಗೂ ಅವರ ಕುಟುಂಬವೂ ಸೇರಿದಂತೆ ಒಟ್ಟು 6 ಸಾವಿರ ಮಂದಿಗೆ ಸಿಗಲಿದೆ. ಜೊತೆಗೆ ಭೋಜನ, ಚಹಾ ಹಾಗೂ ಎಲ್ಲಾ ರೈಡ್‍ಗಳ ಬಳಕೆಗೂ ಉಚಿತ ಅವಕಾಶವಿರಲಿದೆ.

    ಇದರ ಉಪಯೋಗ ಪಡೆಯಲು ಅರ್ಹರು http://www.wonderla.com ವಂಡರ್‍ಲಾ ವೆಬ್‍ಸೈಟ್‍ನಲ್ಲಿ ಭೇಟಿ ನೀಡಬಹುದು. ಅಥವಾ ತಮ್ಮ ಸುತ್ತಮುತ್ತಲು ಇರುವ ಈ ವಾರಿಯರ್ಸ್‍ಗಳ ಕೆಲಸಗಳನ್ನು ಎತ್ತಿ ತೋರಿಸುವ ವಿಡಿಯೋ ಹಾಗೂ ಫೋಟೋಗಳನ್ನು @wonderla_in ಅಥವಾ wonderla @ facebook.com/ Wonderla ಫೇಸ್‍ಬುಕ್ ಪೇಜ್‍ಗೆ ಟ್ಯಾಗ್ ಮಾಡಬಹುದು. ಇದನ್ನೂ ಓದಿ: ಐವರ ಮುಡಿಗೇರಿದ ಮಿಸೆಸ್ ಸೌತ್ ಇಂಡಿಯಾ 2021 ಕಿರೀಟ

    ಈ ಕೊಡುಗೆಯು ಆಗಸ್ಟ್ 2ರಿಂದ 8ರವರೆಗೆ ಇರಲಿದ್ದು, ಈ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳಬಹುದು. ಅಥವಾ 08037230333 ಮತ್ತು 080 35073966 ಇಲ್ಲಿಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು. ಆಯ್ಕೆಯಾದ 1500 ಕೋವಿಡ್ ಏಂಜಲ್ಸ್ ಕುಟುಂಬಗಳಿಗೆ (6000 ಜನ) ಉಚಿತ ಪಾಸ್ ಜೊತೆಗೆ ಇತರೆ ಸೌಲಭ್ಯ ಹಾಗೂ ಗೌರವಗಳು ಸಲ್ಲಲಿದೆ.

  • ಮುಂಜಾನೆ ಭೀಕರ ಅಪಘಾತ – ಐದು ಮಂದಿ ದಾರುಣ ಸಾವು

    ಮುಂಜಾನೆ ಭೀಕರ ಅಪಘಾತ – ಐದು ಮಂದಿ ದಾರುಣ ಸಾವು

    ಆನೇಕಲ್: ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐದು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ತಮಿಳುನಾಡು ಈರೋಡ್‍ನ ಕಾವೇರಿಪಟ್ಟಣಂ ಬಳಿ ನಡೆದಿದೆ.

    ಘಟನೆಯಲ್ಲಿ ಬಸ್ಸಿನಿಂದ ಇಳಿಯುತ್ತಿದ್ದ ಪ್ಯಾಸೆಂಜರ್ ಹಾಗೂ ಓಮ್ನಿಯಲ್ಲಿದ್ದ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ದುರ್ದೈವಿಗಳನ್ನು ಪ್ರಶಾಂತ್, ಲಿಂಗಾ, ಸುರೇಂದರ್, ಶಿವಕುಮಾರ್, ಓಮ್ನಿ ಚಾಲಕ ಹಾಗೂ ಬಸ್ ಪ್ಯಾಸೆಂಜರ್ ದೇವರಾಜು ಎಂದು ಗುರುತಿಸಲಾಗಿದೆ.

    ಸ್ನೇಹಿತರೆಲ್ಲ ಸೇರಿ ಈರೋಡ್ ಜಿಲ್ಲೆಯ ಭವಾನಿಯಿಂದ ಬೆಂಗಳೂರಿನ ವಂಡರ್ ಲಾ ಹೊರಟಿದ್ದರು. ಈ ಸಂದರ್ಭದಲ್ಲಿ ಅಂದರೆ ಮುಂಜಾನೆ 4 ಗಂಟೆ ಸುಮಾರಿಗೆ ಪ್ರವಾಸಿ ತಾಣಕ್ಕೆ ಹೋಗುವ ದಾರಿಯಲ್ಲಿ ಈ ದುರಂತ ಸಂಭವಿಸಿದೆ.

    ವ್ಯಕ್ತಿಯೊಬ್ಬರು ರಸ್ತೆ ದಾಟಲು ಯತ್ನಿಸಿದ್ದಾರೆ. ಹೀಗಾಗಿ ಬಸ್ಸಿನ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ಹಿಂದಿನಿಂದ ಬಂದ ಓಮ್ನಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಓಮ್ನಿ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಪರಿಣಾಮ 5 ಮಂದಿ ಸ್ಥಳದಲ್ಲಿ ಮೃತಪಟ್ಟರೆ ಓಮ್ನಿಯಲ್ಲಿದ್ದ ಗೌತಮ್, ಭರಣಿ ಹಾಗೂ ಅಶೋಕ್ ಎಂಬವರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ಕಾವೇರಿಪಟ್ಟಣಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • ಕೊರೊನಾ ವೇಳೆ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗೆ ಭರ್ಜರಿ ಆಫರ್ ನೀಡಿದ ಬಿಎಂಟಿಸಿ

    ಕೊರೊನಾ ವೇಳೆ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗೆ ಭರ್ಜರಿ ಆಫರ್ ನೀಡಿದ ಬಿಎಂಟಿಸಿ

    ಬೆಂಗಳೂರು: ಕೊರೊನಾ ವೇಳೆಯಲ್ಲೂ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗೆ ಬಿಎಂಟಿಸಿ ಭರ್ಜರಿ ಆಫರ್ ನೀಡಿದೆ.

    ಕೊರೊನಾ ಲಾಕ್‍ಡೌನ್ ಬಳಿಕ ಕೊರೊನಾದ ಜೊತೆಗೆ ಬಿಎಂಟಿಸಿ ಬಸ್‍ಗಳನ್ನು ಸರ್ಕಾರ ರಸ್ತೆಗಿಳಿಸಿತ್ತು. ಸಾರ್ವಜನಿರ ಹಿತ ದೃಷ್ಟಿಯಿಂದ ಅಂದು ಬಿಎಂಟಿಸಿ ನೌಕಕರು ಕೊರೊನಾ ನಡುವೆಯೂ ಎದರದೇ ಕಾರ್ಯನಿರ್ವಹಿಸಿದ್ದರು. ಕೊರೊನಾ ವೇಳೆಯೂ ಕೆಲಸ ಮಾಡಿದ್ದ ಸಿಬ್ಬಂದಿಗೆ ಬಿಎಂಟಿಸಿ ಒಂದು ದಿನ ವಂಡರ್ ಲಾಗೆ ಹೋಗುವ ಆಫರ್ ನೀಡಿದೆ.

    ಬಿಎಂಟಿಸಿ ಸಿಬ್ಬಂದಿಗಳಿಗೆ ಒಟ್ಟು 200 ವಂಡರ್ ಲಾ ಉಚಿತ ಪಾಸ್‍ಗಳನ್ನು ವಿತರಿಸಿದ್ದು, ಈ ಒಂದು ಪಾಸ್‍ನಲ್ಲಿ ನಾಲ್ಕು ಜನ ಹೋಗುವಂತೆ ಅವಕಾಶ ಮಾಡಿಕೊಟ್ಟಿದೆ. Corona-eleven.wonderland.comಗೆ ಹೋಗಿ ಕೂಪನ್ ಕೋಡ್ ನಮೂದಿಸಿದರೆ ವಂಡರ್ ಲಾಗೆ ಹೋಗಿ ಎಂಜಾಯ್ ಮಾಡಬಹುದುದಾಗಿದೆ.

  • ವಂಡರ್ ಲಾಗೆ ನುಗ್ಗಿದ ಚಿರತೆ- ಆತಂಕದಲ್ಲಿ ಪ್ರವಾಸಿಗರು

    ವಂಡರ್ ಲಾಗೆ ನುಗ್ಗಿದ ಚಿರತೆ- ಆತಂಕದಲ್ಲಿ ಪ್ರವಾಸಿಗರು

    ರಾಮನಗರ: ಮಂಚನಾಯಕನಹಳ್ಳಿ ಬಳಿಯಿರುವ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ಗೆ ಚಿರತೆಯೊಂದು ನುಗ್ಗಿದ್ದು ಪ್ರವಾಸಿಗರು ಮತ್ತು ಸಿಬ್ಬಂದಿ ಆತಂಕದಲ್ಲಿದ್ದಾರೆ.

    ವಂಡರ್ ಲಾ ಸಮೀಪದ ಅರಣ್ಯಕ್ಕೆ ಬೆಂಕಿ ಬಿದ್ದಿತ್ತು. ಬೆಂಕಿಯಿಂದ ಪಾರಾಗಲು ಚಿರತೆ ವಂಡರ್ ಲಾ ಗೆ ನುಗ್ಗಿದೆ ಎನ್ನುವ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ.

    ಸ್ಥಳಕ್ಕೆ ಅರಣ್ಯಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ. ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದೆ.