Tag: ವಂಚಕರು

  • ಮರ್ಯಾದೆಗೆ ಅಂಜಿ ಎಂಜಿನಿಯರ್ ಆತ್ಮಹತ್ಯೆ

    ಮರ್ಯಾದೆಗೆ ಅಂಜಿ ಎಂಜಿನಿಯರ್ ಆತ್ಮಹತ್ಯೆ

    ಬೆಂಗಳೂರು: ಮರ್ಯಾದೆಗೆ ಅಂಜಿ ಎಂಜಿನಿಯರ್‌ರೊಬ್ಬರು  ಜ.18ರಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮಲ್ಲೇಶ್ವರಂ ರೈಲ್ವೇ ಹಳಿ ಮೇಲೆ ತಲೆ ಕೊಟ್ಟು ಎಂಜಿನಿಯರ್ ರೋಹಿತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹುಡುಗಿ ವೇಷದಲ್ಲಿ ವಂಚಕರು ರೋಹಿತ್‍ಗೆ ಪರಿಚಯವಾಗಿದ್ದರು. ಬಳಿಕ ವಂಚಕರು ಇದನ್ನು ವೀಡಿಯೋ ಮಾಡಿಕೊಂಡು ಹಣಕ್ಕಾಗಿ ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು.

    ರೋಹಿತ್ ವಂಚಕರ ಜಾಲಕ್ಕೆ ಸಿಲುಕಿ 3 ಬಾರಿ ಹಣ ನೀಡಿದ್ದರು. ಆದರೂ ಸಹ ಆರೋಪಿಗಳು ಮತ್ತಷ್ಟು ಹಣಕ್ಕಾಗಿ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು. ಈ ವೇಳೆ ಅವರು ಆರೋಪಿಗಳಿಗೆ ನೇರವಾಗಿ ಭೇಟಿಯಾಗಿ ನಾನು ನಿಮ್ಮ ಜೊತೆ ಮಾತನಾಡಬೇಕು ಅಂತ ಅಂಗಲಾಚಿದ್ದರು. ಆದರೂ ಆರೋಪಿಗಳು ಅವರ ಮಾತನ್ನು ಧಿಕ್ಕರಸಿ ಹಣ ಕೊಡದಿದ್ದರೆ ವೀಡಿಯೋ ಹೊರಗಡೆ ಬಿಡೋದಾಗಿ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ: ರಮೇಶ್ ಜಾರಕಿಹೊಳಿ

    ಕೊನೆಗೆ ರೋಹಿತ್ 2 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ರೈಲ್ವೇ ಪೊಲೀಸ್ ಎಎಸ್‍ಐ ಗುರುಮೂರ್ತಿಯವರ ಪುತ್ರನಾಗಿದ್ದಾರೆ. ಈ ಹಿಂದೆ ಅವರ ತಂದೆ ಕೋವಿಡ್‍ನಿಂದ ನಿಧನರಾಗಿದ್ದು, ಇದೀಗ ಮಗನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಹಿತ್ ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಲು ಹುಡುಕಾಟ ನಡೆಸುತ್ತಿದ್ದರು. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳನ್ನ ಬಸ್ಸಿನಲ್ಲಿ ತಾವೇ ಡ್ರೈವ್ ಮಾಡಿ ರೌಂಡ್ ಹಾಕಿಸಿದ ಶಿವಣ್ಣ

  • ಆನ್‍ಲೈನ್‍ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚಿಸ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್!

    ಆನ್‍ಲೈನ್‍ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚಿಸ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್!

    ಬೆಳಗಾವಿ: ಆನ್‌ಲೈನ್‌ ನಲ್ಲಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗನ್ನು ಬೆಳಗಾವಿಯ ಉದ್ಯಮಬಾಗ ಠಾಣೆ ಇನ್ಸ್‌ಪೆಕ್ಟರ್‌  ಎಸ್.ಸಿ ಪಾಟೀಲ್ ನೇತೃತ್ವದ ತಂಡ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧತರನ್ನು ಧಾರವಾಡ ತಾಲೂಕಿನ ಹೊಸ ತೇಗೂರು ಗ್ರಾಮದ ಬಸವರಾಜ ಗೋಕಾವಿ, ಮಂಜುನಾಥ ದೊಡ್ಡಮನಿ, ಬಸವರಾಜ ಬೆಳವಡಿ, ಮಡಿವಾಳಪ್ಪ ಗರಗದ ಎಂದು ಗುರುತಿಸಲಾಗಿದೆ.

    ಆರೋಪಿಗಳು ಓಎಲ್‌ಎಕ್ಸ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ಅಮಾಯಕರಿಗೆ ವಂಚಿಸುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಬೆಳಗಾವಿ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಒಂದು ತಿಂಗಳ ಬಳಿಕ ವಂಚಕರ ತಂಡವನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ವಂಚನೆಗೆ ಬಳಸಿದ್ದ ಇಂಡಿಕಾ ಕಾರು 1ಲಕ್ಷ 80 ಸಾವಿರ ನಗದು ಮೊಬೈಲ್‍ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಓಎಲ್‌ಎಕ್ಸ್‌ನಲ್ಲಿ ಸ್ವಿಪ್ಟ್ ಕಾರ್ ಮಾರಾಟ ಮಾಡುವುದಾಗಿ ಹೇಳಿ ಬೆಂಗಳೂರಿನ ಹೆಬ್ಬಾಳ ಮೂಲದ ಮೊಹಮ್ಮದ್ ಶಹಬಾಜ್ ಬ್ರದರ್ಸ್‍ಗೆ ವಂಚಕರು ಮೋಸ ಮಾಡಿದ್ದರು. ಬೆಳಗಾವಿ ಮೂಲದ ಫೈಜುಲ್ಲಾ ತನ್ನ ಸ್ವಿಪ್ಟ್ ಕಾರಿನ ಫೋಟೋವನ್ನು ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಾಗಿ ಹಾಕಿದ್ದರು. ಓಎಲ್‌ಎಕ್ಸ್‌ನಲ್ಲಿ ಹಾಕಿದ್ದ ಫೈಜುಲ್ಲಾ ಅವರ ಕಾರಿನ ಫೋಟೋ ಸ್ಕ್ರೀನ್ ಶಾಟ್ ತೆಗೆದು, ಆರೋಪಿಗಳು ಬೇರೆ ಖಾತೆ ಸೃಷ್ಟಿಸಿದ್ದಾರೆ. ಬಳಿಕ ಇದನ್ನು ನೋಡಿ ಕಾರು ಖರೀದಿಸಲು ಬಂದಿದ್ದ ಮೊಹಮ್ಮದ್ ಶಹಬಾಜ್ ಬ್ರದರ್ಸ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಚೂರಿ ತೋರಿಸಿ, ಅವರ ಬಳಿಯಿದ್ದ 2 ಲಕ್ಷ 80 ಸಾವಿರ ಹಣ, ಮೊಬೈಲ್ ದೋಚಿ ಖದೀಮರ ಗ್ಯಾಂಗ್ ಪರಾರಿಯಾಗಿತ್ತು.

    ಸದ್ಯ ಆರೋಪಿಗಳನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದವರ ಬಂಧನ

    ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದವರ ಬಂಧನ

    ತುಮಕೂರು: ಜನರಿಗೆ ನಿಧಿ ಆಸೆ ತೋರಿಸಿ ಕೈಗೆ ಇದ್ದಿಲು ಕೊಟ್ಟು ವಂಚಿಸುತ್ತಿದ್ದ ವಂಚಕರ ತಂಡವೊಂದನ್ನು ತುಮಕೂರು ಡಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿದ ಡಿಸಿಬಿ ಇನ್ಸ್ ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ರಮೇಶ್ ಮತ್ತು ಹರೀಶ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಚಂದನ್ ಪರಾರಿಯಾಗಿದ್ದಾನೆ. ತುಮಕೂರು ಹೊರವಲಯದ ಯಲ್ಲಾಪುರದ ನಿವಾಸಿಗಳಾದ ಈ ವಂಚಕರ ತಂಡ ಕಳೆದ ಒಂದು ತಿಂಗಳಿನಿಂದ ನಗರದ ಹಲವರಿಗೆ ಫೋನ್ ಮಾಡಿ ನಿಧಿ ಸಿಕ್ಕಿದೆ, ಬೇಕಾದರೆ 2 ಲಕ್ಷ ರೂ. ತಗೊಂಡು ಬನ್ನಿ ಎಂದು ಹೇಳಿ ವಂಚಿಸುತ್ತಿದ್ದರು.

    ಸಾರ್ವಜನಿಕರ ದೂರಿನ ಮೇರೆಗೆ ಗ್ರಾಹಕರ ಸೋಗಿನಲ್ಲಿ ಹೋದ ಡಿಸಿಬಿ ಪೊಲೀಸರು ಯಲ್ಲಾಪುರದ ನಿರ್ಜನ ಪ್ರದೇಶದಲ್ಲಿ ನಿಧಿ ಮಾರಲು ಕಾಯುತಿದ್ದ ತಂಡದ ಮೇಲೆ ದಾಳಿ ನಡೆಸಿದೆ. ಅಲ್ಲದೆ ಈ ವಂಚಕರು ಚಿನ್ನದ ನಾಣ್ಯದ ಬದಲು ಪಾತ್ರೆಯ ಇದ್ದಿಲು ತುಂಬಿಕೊಂಡು ಬಂದಿದ್ದು ಪತ್ತೆಯಾಗಿದೆ. ಇದ್ದಿಲು ತುಂಬಿದ ಪಾತ್ರೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.