Tag:

  • 40ರ ಹರೆಯದಲ್ಲೂ ಬೋಲ್ಡ್ ಫೋಟೋಶೂಟ್- ಮೀರಾ ಜಾಸ್ಮಿನ್ ಲುಕ್‍ಗೆ ಅಭಿಮಾನಿಗಳು ಫಿದಾ

    40ರ ಹರೆಯದಲ್ಲೂ ಬೋಲ್ಡ್ ಫೋಟೋಶೂಟ್- ಮೀರಾ ಜಾಸ್ಮಿನ್ ಲುಕ್‍ಗೆ ಅಭಿಮಾನಿಗಳು ಫಿದಾ

    ಬೆಂಗಳೂರು: ನಟಿ ಮೀರಾ ಜಾಸ್ಮಿನ್ ಬೋಲ್ಡ್ ಆಗಿ ಪೋಸ್ ಕೊಟ್ಟು ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

    ಮಲಯಾಳಂ, ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ ಮೀರಾ ಮೀರಾ ಜಾಸ್ಮಿನ್‌ಗೆ ಇಂದು (ಫ.15) ಜನ್ಮದಿನದ ಸಂಭ್ರಮ. ಅವರಿಂದು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಅಭಿಮಾನಿಗಳು, ಆತ್ಮೀಯರು ಶುಭಾಶಯಗಳನ್ನು ತಿಳಿಸಿದ್ದಾರೆ. ಇತ್ತಿಚೆಗಷ್ಟೇ ಇನ್‍ಸ್ಟಾಗ್ರಾಮ್‍ಗೆ ಎಂಟ್ರಿ ಕೊಟ್ಟಿರುವ ಮೀರಾ, ಹುಟ್ಟಿದ ಹಬ್ಬದ ದಿನದಂದು ವಿಶೇಷ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ.

    ಸಖತ್ ಬೋಲ್ಡ್ ಅವತಾರದಲ್ಲಿ ಅವರು ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. 40ರ ಹರೆಯದಲ್ಲೂ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಅವರ ಫೋಟೋಗಳನ್ನು ನೋಡಿ, ಫ್ಯಾನ್ಸ್ ಫಿದಾ ಆಗಿದ್ದಾರೆ. ಅಂದಹಾಗೆ, ಕಳೆದ 3-4 ವರ್ಷಗಳಿಂದ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದ ಮೀರಾ, ಈಗ ಪುನಃ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮಲಯಾಳಂ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:  ಸ್ಯಾಂಡಲ್‍ವುಡ್ ಪದ್ಮಾವತಿ ರಮ್ಯಾ ಕಮ್ ಬ್ಯಾಕ್ ಪಕ್ಕಾ

     

    View this post on Instagram

     

    A post shared by Meera Jasmine (@meerajasmine)

    2001ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಮೀರಾ ಚತುರ್ಭಾಷಾ ತಾರೆಯಾಗಿ ಮಿಂಚಿದ್ದಾರೆ. ಮೌರ್ಯ ಚಿತ್ರದ ಮೂಲಕ ಕನ್ನಡಕ್ಕೆ ಪಾದರ್ಪಣೆ ಮಾಡಿದ್ದರು. 2014ರಲ್ಲಿ ದುಬೈ ಮೂಲದ ಅನಿಲ್ ಜೊತೆಗೆ ಮೀರಾ ಮದುವೆಯಾದ ಬಳಿಕ ಮೂರ್ನಾಲ್ಕು ವರ್ಷಗಳಿಂದ ಬಣ್ಣದ ಲೋಕದಿಂದ ದೂರ ಉಳಿದಿದ್ದರು. ಮೀರಾ ಪುನಃ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಂದನವನದಲ್ಲಿ ಲವ್ಲಿ ವ್ಯಾಲೆಂಟೈನ್ಸ್ ಡೇ – ಅಭಿಮಾನಿಗಳೊಂದಿಗೆ ಹಂಚಿಕೊಂಡ್ರು ಸ್ಪೆಷಲ್ ಫೋಟೋ!

  • 2014ಕ್ಕೂ ಮೊದಲು ಗುಂಪು ಹತ್ಯೆ ನಡೆಯುತ್ತಲೇ ಇರಲಿಲ್ಲ: ರಾಹುಲ್ ಗಾಂಧಿ

    2014ಕ್ಕೂ ಮೊದಲು ಗುಂಪು ಹತ್ಯೆ ನಡೆಯುತ್ತಲೇ ಇರಲಿಲ್ಲ: ರಾಹುಲ್ ಗಾಂಧಿ

    ನವದೆಹಲಿ: 2014ಕ್ಕೂ ಮೊದಲು ಗುಂಪು ಹತ್ಯೆ ನಡೆಯುತ್ತಲೇ ಇರಲಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ(Rahul Gandhi) ಆಡಳಿತ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಅದು ಅಧಿಕಾರಕ್ಕೆ ಬರುವುದಕ್ಕೂ ಮೊದಲು ದೇಶದಲ್ಲಿ ಗುಂಪು ಹತ್ಯೆ (lynching) ಎಂಬುದನ್ನು ಪ್ರಾಯೋಗಿಕವಾಗಿ ನೋಡಲು ಸಾಧ್ಯವೇ ಇರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿದ ನಂತರವೇ ಗುಂಪು ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಅದಕ್ಕೂ ಮೊದಲು ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಗುಂಪು ಹತ್ಯೆಗಳು ನಡೆಯುತ್ತಿರಲಿಲ್ಲ ಎಂದಿದ್ದಾರೆ. ಪಂಜಾಬ್‍ನಲ್ಲಿ ಇತ್ತೀಚೆಗೆ 24ಗಂಟೆಯೊಳಗೆ ಎರಡು ಗುಂಪು ಹತ್ಯೆಗಳು ನಡೆದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಟ್ವೀಟ್ ಮಾಡಿದ್ದಾರೆ. ದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅವಶ್ಯಕತೆ ಏನಿದೆ?: ಎಚ್.ಡಿ ರೇವಣ್ಣ

    bjp - congress

    ಪಂಜಾಬ್‌ನಲ್ಲಿ ಆಗಿದ್ದೇನು?: ಪಂಜಾಬ್‍ನ ಕಪುರ್ತಲಾದಲ್ಲಿ ವಲಸೆ ಕಾರ್ಮಿಕನೊಬ್ಬನನ್ನು ಹತ್ಯೆ ಮಾಡಲಾಗಿದೆ. ಕಾರ್ಮಿಕ ಶ್ರೀ ಗುರು ಗ್ರಂಥ ಸಾಹಿಬ್‍ನ ರೂಪವನ್ನು ಅಪವಿತ್ರಗೊಳಿಸಲು ಪ್ರಯತ್ನಿಸಿದನು ಎಂದು ಆತನನ್ನು ಹಿಡಿದು ಥಳಿಸಿದ್ದಾರೆ. ಈ ಯುವಕ ಕಳ್ಳತನ ಮಾಡಲು ಬಂದಿದ್ದಾನೆಯೇ ಹೊರತು ಅಪ್ರಾಮಾಣಿಕನಾಗಿರಲು ಅಲ್ಲ ಎಂದು ಪೊಲೀಸರು ಹೇಳಿದ್ದಾರೆ. ದನ್ನೂ ಓದಿ: ದೇಶದಲ್ಲಿ 200 ಗಡಿ ದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ನಾಲ್ಕನೇ ಸ್ಥಾನದಲ್ಲಿ ಕರ್ನಾಟಕ

    RAHUL GANDHI

    ಗೋಲ್ಡನ್ ಟೆಂಪಲ್‍ನಲ್ಲಿ ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸಲು ಯತ್ನಿಸಿದ ಯುವಕನನ್ನು ಅಮೃತಸರದ ಗೋಲ್ಡನ್ ಟೆಂಪಲ್‍ನಲ್ಲಿ ಹತ್ಯೆ ಮಾಡಲಾಗಿದೆ. ಕೋರ್ಟ್ ನಲ್ಲಿಟ್ಟಿದ್ದ ಕತ್ತಿಯನ್ನು ಯುವಕ ಎತ್ತಿಕೊಂಡು ಅನುಚಿತವಾಗಿ ವರ್ತಿಸಿದ್ದಾನೆ. ಇದನ್ನು ಕಂಡ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಥಳಿಸಿ ಕೊಂದಿದ್ದಾರೆ.

  • ಗೆಳೆಯ ಚಕ್ರವರ್ತಿಗೆ ಸಂಬರಗಿ ಚಾಲೆಂಜ್

    ಗೆಳೆಯ ಚಕ್ರವರ್ತಿಗೆ ಸಂಬರಗಿ ಚಾಲೆಂಜ್

    ಮಂಗಳವಾರದ ಬಿಗ್‍ಬಾಸ್ ಎಪಿಸೋಡ್ ಅಕ್ಷರಷಃ ರಣಾಂಗಣವಾಗಿ ಬದಲಾಗಿತ್ತು. ಯಾರು ನಂಬರ್ ಒನ್ ವಿಚಾರದಲ್ಲಿ ಅನಾವಶ್ಯಕ ವಿಚಾರಗಳನ್ನ ಮುನ್ನಲೆಗೆ ತಂದ ಪ್ರಶಾಂತ್ ಸಂಬರಗಿ ವಿರುದ್ಧ ಮತ್ತೊಮ್ಮೆ ಇಡೀ ಮನೆ ಕೆಂಡವಾಗಿತ್ತು. ನಿನ್ನ ವಾದಗಳನ್ನ ಸರಿಯಾದ ಮಾರ್ಗದಲ್ಲಿ ಮಂಡಿಸು ಎಂದು ಸಲಹೆ ಹೇಳಿದ ಗೆಳೆಯ ಚಕ್ರವರ್ತಿಗೆ ಪ್ರಶಾಂತ್ ಸಂಬರಗಿ ಚಾಲೆಂಜ್ ಹಾಕಿದರು.

    ಈ ಟಾಸ್ಕ್ ನಲ್ಲಿ ವೋಟಿಂಗ್ ಇರಲಿಲ್ಲ. ಆದ್ರೂ ವೋಟಿಂಗ್ ಮಾಡಿ ನನಗೆ 11ನೇ ಸ್ಥಾನ ನೀಡಿದ್ರು. ಎಲ್ಲ ಆಟ ಮುಗಿದ್ಮೇಲೆ ಮಾತಾಡೋದು ತಪ್ಪು. ಐದರಿಂದ 11ನೇ ಸ್ಥಾನಕ್ಕೆ ಬಂದಾಗಲೇ ಮಾತಾಡಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕಿತ್ತು ಎಂದು ಸಲಹೆ ನೀಡಿದರು.

    ಈ ವೇಳೆ ನಿಗಿ ನಿಗಿ ಕೆಂಡವಾಗಿದ್ದ ಪ್ರಶಾಂತ್ ಸಂಬರಗಿಯ ಸಮಾಧಾನಕ್ಕೆ ಶಮಂತ್ ಮುಂದಾದ್ರು. ನಿಮ್ಮ ಪೆಟ್ರೋಲ್, ಫ್ಯೂಯೆಲ್ ಸೇವ್ ಮಾಡಿಕೊಳ್ಳಿ. ಮುಂದಿನ ನಾಲ್ಕೈದು ವಾರ ನಿಮ್ಮ ಆಟ ತೋರಿಸಿ ಅಂತ ಹೇಳಿದ್ರು. ಆದ್ರೆ ಕೋಪದಿಂದ ಕುಣಿಯುತ್ತಿದ್ದ ಸಂಬರಗಿ, ಇದು ದ್ವೇಷದ ಆಟ ಎಂದು ಹೇಳಿ ಇಡೀ ಮನೆ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ರು.

    ಇನ್ನೂ ಅಲ್ಲಿಯೇ ನಿಂತಿದ್ದ ಚಕ್ರವರ್ತಿ, ಆಟದ ವೇಳೆ ಪ್ರಶಾಂತ್ ಸಂಬರಗಿಯ ಕೆಲ ಹೇಳಿಕೆಗಳನ್ನ ಖಂಡಿಸಿದ್ರು. ದಿವ್ಯಾ ಸುರೇಶ್ ಜೊತೆ ಚೆನ್ನಾಗಿಯೇ ಮಾತಾಡ್ತಿಯಾ. ಮಂಜು ವಿಷಯದಲ್ಲಿ ಆಕೆ ಹೆಸರನ್ನ ಬಳಸಿಕೊಳ್ಳೋದು ತಪ್ಪು. ಮಂಜು ಕಾಮಿಡಿ ಇಷ್ಟ ಆಗಲ್ಲ ಅಂದ್ರೆ ನೇರವಾಗಿ ಹೇಳು. ಪದೇ ಪದೇ ದಿವ್ಯಾ ಹೆಸರನ್ನ ತೆಗೆದುಕೊಳ್ಳಬೇಡ. ಎಲ್ಲ ವಿಷಯಗಳನ್ನ ತಾಳ್ಮೆಯಿಂದ ಯೋಚಿಸಿ ಬಗೆಹರಿಸಿಕೊಳ್ಳಬೇಕೇ ಹೊರತು ಹೀಗೆ ಕೂಗಾಡಿಲ್ಲ ಎಂದು ಸಂಬರಗಿಗೆ ಚಕ್ರವರ್ತಿ ತಿಳಿ ಹೇಳಿದರು.

    ನಾನು ಇನ್ಮುಂದೆ ಹೆಣ್ಣಿನ ಹೆಸರು ಬಳಸಬಾರದು ಅಂತ ಡಿಸೈಡ್ ಮಾಡಿದ್ದೀನಿ. ನಿನಗಿಂತ ಹೆಚ್ಚು ಮಹಿಳೆಯರನ್ನ ಗೌರವಿಸುತ್ತೇನೆ ಮತ್ತು ಪೂಜಿಸುತ್ತೇನೆ. ಯಾರ ವೈಯಕ್ತಿಕ ವಿಚಾರಗಳನ್ನು ಮಾತಾಡಿಲ್ಲ. ಯಾರ ಪರ್ಸನಲ್ ವಿಚಾರ ಮಾತಾಡಿದ್ದೀನಿ ಅಂತ ತೋರಿಸು ಎಂದು ಚಕ್ರವರ್ತಿಗೆ ಸಂಬರಗಿ ಸವಾಲು ಹಾಕಿದರು.

  • ಜಿ.ಪರಮೇಶ್ವರ್ ಗೆ ಅವಾಚ್ಯ ಪದದಿಂದ ನಿಂದಿಸಿದ ಬಿಜೆಪಿ ಮುಖಂಡ

    ಜಿ.ಪರಮೇಶ್ವರ್ ಗೆ ಅವಾಚ್ಯ ಪದದಿಂದ ನಿಂದಿಸಿದ ಬಿಜೆಪಿ ಮುಖಂಡ

    ತುಮಕೂರು: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಕೊರಟಗೆರೆ ಬಿಜೆಪಿ ಅಭ್ಯರ್ಥಿ ವೈ ಎಚ್ ಹುಚ್ಚಯ್ಯ ಲೋಫರ್ ಎಂದು ಅವಾಚ್ಯವಾಗಿ ಬೈಯುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

    ಕೊರಟಗೆರೆ ಕ್ಷೇತ್ರದ ಹರಿಯಪ್ಪನ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸದಾಶಿವ ಆಯೋಗದ ವರದಿ ಜಾರಿಗೆ ಜಿ. ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಆರೋಪ ಹುಚ್ಚಯ್ಯ ಕ್ಷೇತ್ರದ ಜನರಲ್ಲಿ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಪರಮೇಶ್ವರ್ ಬೆಂಬಲಿಗ ಹಾಗೂ ದಲಿತ ಮುಖಂಡ ರಾಜು ಎನ್ನುವವರು ಮಧ್ಯಪ್ರವೇಶಿಸಿ ಸದಾಶಿವ ಆಯೋಗ ವರದಿಗೆ ವಿರೋಧ ವ್ಯಕ್ತಪಡಿಸಿದಕ್ಕೆ ಸಾಕ್ಷ್ಯ ಕೊಡಿ ಎಂದು ಹುಚ್ಚಯ್ಯ ರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸಿಡಿಮಿಡಿಗೊಂಡ ಹುಚ್ಚಯ್ಯ ಆ ಲೋಫರ್ ಹೆಸರು ಹೇಳಬೇಡ ಎಂದಿದ್ದಾರೆ.

    ಹುಚ್ಚಯ್ಯರ ಮಾತಿನಿಂದ ಆಕ್ರೋಶಗೊಂಡ ರಾಜು ಕೂಡಾ ಪ್ರತಿಯಾಗಿ ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಹುಚ್ಚಯ್ಯ ನಿಂದನೆ ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪೊಲೀಸರಿಗೆ ದೂರು ಕೊಡಲು ಪರಮೇಶ್ವರ್ ಬೆಂಬಲಿಗರು ಸಜ್ಜಾಗಿದ್ದಾರೆ.