Tag: ಲ್ಯಾಬ್ ಟೆಕ್ನಿಷಿಯನ್

  • ಕೊರೊನಾ ಸೋಂಕಿತರಿಗೆ ಪುಸ್ತಕ ನೀಡಿ ಆತ್ಮಸ್ಥೈರ್ಯ ತುಂಬಿದ ಲ್ಯಾಬ್ ಟೆಕ್ನಿಷಿಯನ್

    ಕೊರೊನಾ ಸೋಂಕಿತರಿಗೆ ಪುಸ್ತಕ ನೀಡಿ ಆತ್ಮಸ್ಥೈರ್ಯ ತುಂಬಿದ ಲ್ಯಾಬ್ ಟೆಕ್ನಿಷಿಯನ್

    ಹಾವೇರಿ: ಕೊರೊನಾ ಸೋಂಕು ಬಂದರೆ ಭಯ ಪಡುವವರೆ ಹೆಚ್ಚು. ಅದರಲ್ಲೂ ಆಸ್ಪತ್ರೆಯಲ್ಲಿ ಸೋಂಕಿತರು ಗುಣಮುಖರಾಗುವವರೆಗೂ ಭಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಸೋಂಕಿತರ ಭಯ ದೂರವಾಗಿಸಲು ಮತ್ತು ಜ್ಞಾನ ಹೆಚ್ಚಿಸಿಕೊಳ್ಳಲು ಅವರಿಗೆ ಓದಲು ಪುಸ್ತಕಗಳನ್ನು ನೀಡುವ ಮೂಲಕ ಆತ್ಮಸ್ಥೈರ್ಯ ತುಂಬಲು ಹಾವೇರಿ ಜಿಲ್ಲೆ ಸವಣೂರು ತಾಲೂಕು ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಮುಂದಾಗಿದ್ದಾರೆ.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರು ಸುಮ್ಮನೆ ಕಾಲಕಳೆಯಲಾಗದೆ ಭಯದಲ್ಲಿ ದಿನಕಳೆಯುತ್ತಿದ್ದಾರೆ ಎಂಬುದನ್ನು ಗಮನಿಸಿದ, ಸವಣೂರು ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಮಹಾಂತೇಶ್ ಹೊಳೆಮ್ಮನವರ ಎಂಬುವರು 70 ಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ತಾಲೂಕು ಆಸ್ಪತ್ರೆಯಲ್ಲಿರೋ ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್‍ನ ಸಿಬ್ಬಂದಿಗೆ ಪುಸ್ತಕಗಳ ಹಸ್ತಾಂತರ ಮಾಡಿದ್ದಾರೆ. ಪುಸ್ತಕಗಳನ್ನ ಓದೋ ಮೂಲಕ ಸೋಂಕಿತರಲ್ಲಿನ ಭಯ ದೂರ ಮಾಡಲು, ಸೋಂಕಿತರಲ್ಲಿ ಆತ್ಮಸ್ಥೈರ್ಯ ಮೂಡಿಸಲು ವಿನೂತನ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಸೋಂಕಿತರೊಂದಿಗೆ ಬರ್ತ್ ಡೇ ಆಚರಿಸಿಕೊಂಡ ಆರೋಗ್ಯಾಧಿಕಾರಿ

    ಇವರ ಈ ಹೊಸ ಪ್ಲಾನ್‍ನಿಂದಾಗಿ ಸೋಂಕಿತರು ಆಸ್ಪತ್ರೆಯಲ್ಲಿ ಪುಸ್ತಕಗಳನ್ನು ಓದುತ್ತ ಸೋಂಕಿನಿಂದ ಮುಕ್ತರಾಗುತ್ತಿದ್ದಾರೆ. ಮಹಾಂತೇಶ್ ಅವರ ಈ ಕಾರ್ಯಕ್ಕೆ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಹಾಗೂ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕೊರೊನಾ ಟೆಸ್ಟ್‌ಗೆ ಬಂದ ಯುವತಿಯ ಗುಪ್ತಾಂಗದಿಂದ ಸ್ಯಾಂಪಲ್ ಪಡೆದ!

    ಕೊರೊನಾ ಟೆಸ್ಟ್‌ಗೆ ಬಂದ ಯುವತಿಯ ಗುಪ್ತಾಂಗದಿಂದ ಸ್ಯಾಂಪಲ್ ಪಡೆದ!

    – ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

    ಮುಂಬೈ: ಕೊರೊನಾ ವೈರಸ್ ಭೀತಿಯ ನಡುವೆ ಮಹಾರಾಷ್ಟ್ರದ ಅಮಾರವತಿಯಲ್ಲಿ ಕಾಮುಕನೊಬ್ಬ ಅಟ್ಟಹಾಸ ಮೆರೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

    ಹೌದು. ಕೊರೊನಾ ವೈರಸ್ ಭೀತಿಯಿಂದ 24 ವರ್ಷದ ಯುವತಿಯೊಬ್ಬಳು ಟೆಸ್ಟ್ ಗೆ ಎಂದು ಲ್ಯಾಬ್ ಟೆಕ್ನಿಷಿಯನ್ ಬಳಿ ಬಂದಿದ್ದಾಳೆ. ಈ ವೇಳೆ ಕಾಮುಕ, ಕೊರೊನಾ ಟೆಸ್ಟ್ ನಲ್ಲಿ ಗುಪ್ತಾಂಗದಿಂದಲೂ ಸ್ಯಾಂಪಲ್ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ ಎಂದು ಹೇಳಿ ಆಕೆಯನ್ನು ಪುಲಾಯಿಸಿದ್ದಾನೆ. ಅಲ್ಲದೆ ಸ್ಯಾಂಪಲ್ ಕೂಡ ಪಡೆದುಕೊಂಡಿದ್ದಾನೆ.

    ಯುವತಿ ಸ್ಥಳೀಯ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ತಮ್ಮ ಸಹೋದ್ಯೋಗಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಈಕೆಯೂ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಬಂದಿದ್ದಾಳೆ. ಆದರೆ ಕೊರೊನಾ ಟೆಸ್ಟ್ ಅನ್ನೇ ಬಂಡವಾಳ ಮಾಡಿಕೊಂಡ ಕಾಮುಕ, ಕೊರೊನಾ ಬಂದಿದೆಯೋ, ಇಲ್ಲವೋ ಎಂದು ನಿಖರವಾಗಿ ತಿಳಿದುಕೊಳ್ಳಬೇಕಾದರೆ ಗುಪ್ತಾಂಗದ ಸ್ವಾಬ್ ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ಕಾಮುಕ ಲ್ಯಾಬ್ ಟೆಕ್ನಿಷಿಯನ್ ಹೇಳಿದ್ದಾನೆ.

    ಟೆಸ್ಟ್ ಬಳಿಕ ಯುವತಿ ತನ್ನ ಸಹೋದರನ ಜೊತೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಹೀಗಾಗಿ ಸಹೋದರ ಈ ಬಗ್ಗೆ ವೈದ್ಯರ ಜೊತೆ ಮಾಹಿತಿ ಕೇಳಿದ್ದಾನೆ. ಈ ವೇಳೆ ವೈದ್ಯರು, ಅಂತಹ ಯಾವುದೇ ಪರೀಕ್ಷೆ ಇಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಬಳಿಕ ಯುವತಿಗೆ ತಾನು ದೌರ್ಜನ್ಯಕ್ಕೊಳಗಾದೆ ಎಂದು ಗೊತ್ತಾದ ಕೂಡಲೇ ಆಕೆ ಪೊಲೀಸ್ ಠಾಣೆಗೆ ತೆರಳಿ ಲ್ಯಾಬ್ ಟೆಕ್ನಿಷಿಯನ್ ವಿರುದ್ಧ ದೂರು ದಾಖಲಿಸಿದ್ದಾಳೆ. ಪರಿಣಾಮ ಕಾಮುಕನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ.

    ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಲ್ಲದೆ ಆರೋಪಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

  • ಚಾಮರಾಜನಗರದಲ್ಲಿ ಕೋವಿಡ್-19 ಲ್ಯಾಬ್ ಟೆಕ್ನಿಷಿಯನ್, ಪ್ರೊಬೆಷನರಿ ಪಿಎಸ್‍ಐ ಸೇರಿ 13 ಮಂದಿಗೆ ಕೊರೊನಾ

    ಚಾಮರಾಜನಗರದಲ್ಲಿ ಕೋವಿಡ್-19 ಲ್ಯಾಬ್ ಟೆಕ್ನಿಷಿಯನ್, ಪ್ರೊಬೆಷನರಿ ಪಿಎಸ್‍ಐ ಸೇರಿ 13 ಮಂದಿಗೆ ಕೊರೊನಾ

    ಚಾಮರಾಜನಗರ: ಜಿಲ್ಲೆಯ ಮೆಡಿಕಲ್ ಕಾಲೇಜಿನ ಮಹಿಳಾ ಲ್ಯಾಬ್ ಟೆಕ್ನಿಷಿಯನ್, ಪೊಲೀಸ್ ಇಲಾಖೆಯ ವೈರ್‍ಲೆಸ್ ಪಿಎಸ್‍ಐ ಹಾಗೂ ಭೂಮಾಪಕಿಯ ಸಹಾಯಕ ಸೇರಿದಂತೆ ಇಂದು 13 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 33ಕ್ಕೆ ಏರಿದೆ.

    ಇಂದು ಮೆಡಿಕಲ್ ಕಾಲೇಜಿನ ಕೋವಿಡ್ ಪ್ರಯೋಗಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬದನಗುಪ್ಪೆ ಗ್ರಾಮದ ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಹಾಗೂ ಆಕೆಯ ಪತಿಗೆ ಸೋಂಕು ತಗುಲಿದೆ. ಈ ಹಿನ್ನಲೆಯಲ್ಲಿ ಇವರು ವಾಸಿಸುತ್ತಿದ್ದ ಚಾಮರಾಜನಗರ ತಾಲೂಕು ಬದನಗುಪ್ಪೆ ಗ್ರಾಮದ ಬೀದಿಯೊಂದನ್ನು ಸೀಲ್‍ಡೌನ್ ಮಾಡಲಾಗಿದೆ.

    ಚಾಮರಾಜನಗರ ಪೊಲೀಸ್ ಇಲಾಖೆಯಲ್ಲಿ ವೈರ್‍ಲೆಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‍ಐ ಒಬ್ಬರಿಗೂ ಕೊರೊನಾ ಸೋಂಕು ತಗುಲಿದ್ದು, ಇವರು ವಾಸಿಸುತ್ತಿದ್ದ ಚಾಮರಾಜನಗರ ತಾಲೂಕು ಚಂದಕವಾಡಿ ಗ್ರಾಮದ ಬೀದಿಯನ್ನು ಸಹ ಸೀಲ್‍ಡೌನ್ ಮಾಡಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.

    ಚಾಮರಾಜನಗರದ ಭೂಮಾಪಕಿಯ ಸಹಾಯಕನಿಗೂ ಸೋಂಕು ತಗುಲಿದೆ. ಈತ ವಾಸ ಮಾಡುತ್ತಿದ್ದ ಚಾಮರಾಜನಗರ ತಾಲೂಕು ಭುಜಗನಪುರ ಗ್ರಾಮದ ಬೀದಿಯನ್ನು ಸೀಲ್‍ಡೌನ್ ಮಾಡಿ ಗ್ರಾಮಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಅಲ್ಲದೆ ಬಂದೀಗೌಡನಹಳ್ಳಿಯ ಇಬ್ಬರಿಗೆ ಗುಂಡ್ಲುಪೇಟೆಯ ಮೂವರಿಗೆ ಹಾಗೂ ಕೊಳ್ಳೇಗಾಲದ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ.

    ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ಗಡಿಭಾಗದ ಪ್ರದೇಶಗಳಲ್ಲಿ ಯಾರೂ ಒಳ ನುಸುಳದಂತೆ ಜಿಲ್ಲಾಡಳಿತ ಕ್ರಮವಹಿಸಿದೆ ಎನ್ನಲಾಗುತ್ತಿದೆ.

    ಎಪಿಎಂಸಿ ತರಕಾರಿ ಮಂಡಿಗೆ ರಜೆ
    ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚಾಮರಾಜನಗರ ಎಪಿಎಂಸಿ ತರಕಾರಿ ಮಂಡಿಯನ್ನು ಆರು ದಿನಗಳ ಕಾಲ ಬಂದ್ ಮಾಡಲು ನಿರ್ಧರಿಸಲಾಗಿದೆ. ಜೂನ್ 29ರಿಂದ ಜುಲೈ 4ರ ವರೆಗೆ ತರಕಾರಿ ಮಂಡಿಗೆ ರಜೆ ಮಾಡಲು ತರಕಾರಿ ವ್ಯಾಪಾರಿಗಳು, ದಲ್ಲಾಳಿಗಳು ತೀರ್ಮಾನಿಸಿದ್ದಾರೆ.

    ಗುಂಡ್ಲುಪೇಟೆ ಪಟ್ಟಣದಲ್ಲಿ 18ಕ್ಕೂ ಹೆಚ್ಚು ಪ್ರಕರಣ ಪತ್ತೆಯಾದ ಬೆನ್ನಲ್ಲೇ ಸಂಘಟನೆಗಳು ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ವೇಳೆ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ವ್ಯಾಪಾರ ವಹಿವಾಟನ್ನು ನಡೆಸಿ ನಂತರ ಲಾಕ್ ಡೌನ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಸಭೆಯಲ್ಲಿ ನಿರ್ಧಾರ ಕೈಗೊಂಡಿರುವ ಬಗ್ಗೆ ಶಾಸಕ ನಿರಂಜನ್ ಕುಮಾರ್ ಮಾಹಿತಿ ನೀಡಿದರು.

  • ಕುಣಿಯಲ್ಲಿ ಕೂರಿಸಿದ್ದ ಮೃತದೇಹದಿಂದ ಗಂಟಲು ದ್ರವ ಕಲೆಕ್ಟ್

    ಕುಣಿಯಲ್ಲಿ ಕೂರಿಸಿದ್ದ ಮೃತದೇಹದಿಂದ ಗಂಟಲು ದ್ರವ ಕಲೆಕ್ಟ್

    – ಭಯದಿಂದಲೇ ಕುಣಿಯಲ್ಲಿಳಿದ ಮಹಿಳಾ ಲ್ಯಾಬ್ ಟೆಕ್ನಿಷಿಯನ್

    ಹಾವೇರಿ: ಮಹಿಳಾ ಲ್ಯಾಬ್ ಟೆಕ್ನಿಷಿಯನ್‍ಯೊಬ್ಬರು ಕುಣಿಯಲ್ಲಿ ಕೂರಿಸಿದ್ದ ಮೃತದೇಹದಿಂದ ಗಂಟಲು ದ್ರವ ಸಂಗ್ರಹಿಸಿದ ಘಟನೆ ಸವಣೂರು ತಾಲೂಕಿನ ಹಿರೇಮುಗದೂರು ಗ್ರಾಮದಲ್ಲಿ ನಡೆದಿದೆ.

    ಹಿರೇಮುಗದೂರು ಗ್ರಾಮದ ವ್ಯಕ್ತಿಯೊಬ್ಬರು ಮೇ 10ರಂದು ಮೃತಪಟ್ಟಿದ್ದರು. ಈ ಕುರಿತು ಸವಣೂರು ತಾಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಲ್ಯಾಬ್ ಟೆಕ್ನಿಷಿಯನ್ ಶೋಭಾ ಅವರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ತಕ್ಷಣವೇ ಹಿರೇಮುಗದೂರು ಗ್ರಾಮದ ಹೋಗಿದ್ದರು. ಆದರೆ ಅವರು ಹೋಗುವಷ್ಟರಲ್ಲಿ ಮೃತದೇಹವನ್ನ ಸಂಬಂಧಿಕರು ಧಪನ್ ಮಾಡಲು ಕುಣಿಯಲ್ಲಿ ಕೂರಿಸಿದ್ದರು.

    ಲ್ಯಾಬ್ ಟೆಕ್ನಿಷಿಯನ್ ಶೋಭಾ ಅವರು ಭಯದಿಂದಲೇ ಕುಣಿಯಲ್ಲಿಳಿದು ಮೃತದೇಹದ ಗಂಟಲು ದ್ರವ ಕಲೆಕ್ಟ್ ಮಾಡಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದ ಅವರು ಪಿಪಿಇ ಕಿಟ್ ಧರಿಸಿ ಕುಣಿಯಲ್ಲಿ ಇಳಿದಿದ್ದರು.

    ಸವಣೂರು ಪಟ್ಟಣದ ಇಬ್ಬರಲ್ಲಿ ಕೊರೊನಾ ಕೇಸ್ ದೃಢಪಟ್ಟಿದ್ದರಿಂದ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿತ್ತು. ಹೀಗಾಗಿ ಲ್ಯಾಬ್ ಟೆಕ್ನಿಷಿಯನ್ ಶೋಭಾ ಸ್ಮಶಾನಕ್ಕೆ ತೆರಳಿ ಮೃತದೇಹದ ಸ್ವ್ಯಾಬ್ ಕಲೆಕ್ಟ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ತಾಲೂಕಿನ ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

    ಲ್ಯಾಬ್ ಟೆಕ್ನಿಷಿಯನ್‍ಗಳಿಗೆ ಇಲಾಖೆಯಿಂದ ಗಂಟಲು ದ್ರವ ಮಾಡುವ ತರಬೇತಿ ನೀಡಲಾಗಿರುತ್ತದೆ. ಆದರೂ ಸ್ಮಶಾನಕ್ಕೆ ಹೋಗಿ ಕುಣಿಯಲ್ಲಿಳಿದು ಸ್ವ್ಯಾಬ್ ಕಲೆಕ್ಟ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

  • ನಾನು ಜೈಲೂಟ ತಿಂದು ಬಂದವನು, ನನ್ನನ್ನೇ ಎದುರು ಹಾಕೋತೀರಾ – ಲ್ಯಾಬ್ ಟೆಕ್ನಿಷಿಯನ್‍ಗೆ ರಾಮನಗರ ಡಿಎಚ್‍ಓ ಧಮ್ಕಿ

    ನಾನು ಜೈಲೂಟ ತಿಂದು ಬಂದವನು, ನನ್ನನ್ನೇ ಎದುರು ಹಾಕೋತೀರಾ – ಲ್ಯಾಬ್ ಟೆಕ್ನಿಷಿಯನ್‍ಗೆ ರಾಮನಗರ ಡಿಎಚ್‍ಓ ಧಮ್ಕಿ

    ರಾಮನಗರ: ನಾನು ಜೈಲಿಗೆ ಹೋಗಿ ಬಂದವನು. ನನ್ನನ್ನೇ ಎದುರು ಹಾಕೋತೀರಾ ಎಂದು ರಾಮನಗರ ಡಿಎಚ್‍ಓ ಅಮರ್‌ನಾಥ್‌ ರೌಡಿಗಳ ರೀತಿ ಲ್ಯಾಬ್ ಟೆಕ್ನಿಷಿಯನ್ ಗೆ ಅವಾಜ್ ಹಾಕಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

    ಆಸ್ಪತ್ರೆಯಲ್ಲಿ ಸಿಸಿಟಿವಿ ಅಳವಡಿಕೆ ಬಗ್ಗೆ ನಡೆದ ಅಕ್ರಮವನ್ನು ಕೇಳಲು ಬಂದವರ ಮೇಲೆ ಡಿಎಚ್‍ಓ ತಮ್ಮ ಪೌರುಷ ತೋರಿದ್ದಾರೆ. ಕಳೆದ 6 ತಿಂಗಳ ಹಿಂದೆ ರಾಮನಗರ ಡಿಎಚ್‍ಓ ಕಚೇರಿಯಲ್ಲಿಯೇ ಚನ್ನಪಟ್ಟಣ ತಾಲೂಕಿನ ನಂಜಾಪುರ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್‍ ಗೆ ಅಮರ್‌ನಾಥ್‌ ಅವರು ಅವಾಜ್ ಹಾಕಿದ್ದಾರೆ.

    ನಂಜಾಪುರದ ಆಸ್ಪತ್ರೆಗೆ ಸಿಸಿಟಿವಿಯನ್ನ ಟೆಂಡರ್ ನೀಡದೇ ಅಳವಡಿಸಲಾಗುತಿತ್ತು. ಇದನ್ನು ಆಸ್ಪತ್ರೆಯ ವೈದ್ಯರು ಹಾಗೂ ಲ್ಯಾಬ್ ಟೆಕ್ನಿಷಿಯನ್ ಪುಟ್ಟಸ್ವಾಮಿಗೌಡ ವಿರೋಧಿಸಿದ್ದರು. ಇದರಿಂದ ವೈದ್ಯರ ಸಭೆ ದಿನದಂದು ಪುಟ್ಟಸ್ವಾಮಿಗೌಡರನ್ನ ಕರೆದು ಅಮರ್‌ನಾಥ್‌ ಧಮ್ಕಿ ಹಾಕಿದ್ದಾರೆ.

    ನಾನು ಅರೆಸ್ಟ್ ಆಗಿ 10 ದಿನ ಪರಪ್ಪನ ಅಗ್ರಹಾರದಲ್ಲಿ ಇದ್ದು, ಜೈಲೂಟ ತಿಂದು ಬಂದವನು. ಒಂದು ಮರ್ಡರ್ ಮಾಡಿದರೂ ಅಷ್ಟೇ 10 ಮರ್ಡರ್ ಮಾಡಿದರೂ ಅಷ್ಟೇ ನಾನು ಏನು, ನನ್ನ ಹಿನ್ನೆಲೆ ಏನು ಅಂತ ತಿಳ್ಕೊಳ್ಳಿ. ನನ್ನನ್ನ ಯಾರೂ ಕೆಣಕಬೇಡಿ ಎಂದು ಡಾಕ್ಟರ್ ಗಳ ಮುಂದೆಯೇ ರೌಡಿಗಳ ರೀತಿ ಲ್ಯಾಬ್ ಟೆಕ್ನಿಷಿಯನ್ ಗೆ ಅವಾಜ್ ಹಾಕಿದ್ದಾರೆ. ಈ ದೃಶ್ಯವನ್ನು ಕೆಲವರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದು, ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ನನಗೆ ಡಿಸ್ಮಿಸ್, ಸಸ್ಪೆನ್ಸನ್ ಅನ್ನೋದು ಪುಟ್ಕೋಸಿ. ಜೈಲಿಗೆ ಹೋಗಿ ಬಂದವನಿಗೆ ಇದೆಲ್ಲ ಯಾವ ಲೆಕ್ಕ. ನಾನ್ ಏನೂ, ನನ್ನ ಹಿನ್ನೆಲೆ ಏನೂ ಅನ್ನೊದನ್ನ ತಿಳ್ಕೋಬೇಕಿತ್ತು. ಡಿಎಚ್‍ಓ ಪೊಸ್ಟ್ ಕತ್ತೆ ಬಾಲ, ಇವತ್ತೇ ಬೇಕಾದರೆ ರಿಸೈನ್ ಮಾಡುತ್ತೇನೆ ಎಂದು 60 ಜನ ಡಾಕ್ಟರ್ ಮುಂದೆಯೇ ಅವಾಜ್ ಹಾಕಿದ್ದಾರೆ.

    https://www.youtube.com/watch?v=qa6yVMlKBhQ