Tag: ಲ್ಯಾಬ್

  • ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ – ಪರಮೇಶ್ವರ್

    ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸ ಅಲ್ಲ, ಮೇಕೆ ಮಾಂಸ – ಪರಮೇಶ್ವರ್

    – ಅನಾವಶ್ಯಕ ದುರುದ್ದೇಶದಿಂದ ದೂರು: ಗೃಹಸಚಿವ

    ದಾವಣಗೆರೆ: ರಾಜಸ್ಥಾನದಿಂದ (Rajasthan) ಬೆಂಗಳೂರಿಗೆ (Bengaluru) ಬಂದ್ದದ್ದು, ನಾಯಿ ಮಾಂಸ (Dog Meat) ಅಲ್ಲ, ಮೇಕೆಯ ಮಾಂಸ ಎಂಬುದು ವರದಿಯಲ್ಲಿ ದೃಢವಾಗಿದೆ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ (G Parmeshwar) ಸ್ಪಷ್ಟಪಡಿಸಿದ್ದಾರೆ.

    ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಲ್ಯಾಬ್‌ನಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ಅನಾವಶ್ಯಕವಾಗಿ ದುರುದ್ದೇಶದಿಂದ ದೂರು ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ಮೇಕೆ ಮಾಂಸ?

    ರಾಜಸ್ಥಾನದಿಂದ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ. ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಮಾಂಸ ಮಾರಾಟ ಮಾಡುವುದು ವೃತ್ತಿ. ಅದು ನಾಯಿ ಮಾಂಸ ಅಲ್ಲ ಮೇಕೆ ಮಾಂಸ ಎಂಬುದು ವರದಿಯಲ್ಲಿ ದೃಢವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸಚಿವರಿಗೆ ಡಿಕೆಶಿ ಮನವಿ

    ರಾಜ್ಯದ ಸಂಪತ್ತು ಹಾಳಾಗುತ್ತಿದೆ, ಸಂಪತ್ತು ಲೂಟಿ ಆಗುತ್ತಿದೆ ಅಂತ ಬಿಜೆಪಿಯವರು ಪಾದಯಾತ್ರೆ ಮಾಡುತ್ತಿರುವುದಾಗಿ ಬಿಜೆಪಿಯವರು ಹೇಳಿದ್ದಾರೆ. ಅವರ ಪಾದಯಾತ್ರೆ ಅನವಶ್ಯಕವಾಗಿದೆ. ಸಿಎಂ ಮೇಲೆ ಅನಾವಶ್ಯಕ ಆರೋಪ ಮಾಡಿ ಪಾದಯಾತ್ರೆ ಮಾಡುತ್ತಿದ್ದಾರೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಆಗಿಲ್ಲ. ಕಾನೂನು ಉಲ್ಲಂಘನೆ ಆಗಿಲ್ಲದಿದ್ದರೂ ಆಗಿದೆ ಎಂದು ಬಿಂಬಿಸಲು ಬಿಜೆಪಿಯವರು ಹೊರಟಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ ಸಿಬಿಐ ತನಿಖೆ ಮಾಡಿದ್ರೆ ಬಿಎಸ್‌ವೈ ಇದ್ದಾನೋ, ಬಿವೈವಿ ಇದ್ದಾನೋ ಎಂದು ಗೊತ್ತಾಗುತ್ತೆ: ಯತ್ನಾಳ್

    ನಾವು ರಾಜ್ಯದ ಜನತೆಗೆ ಸತ್ಯ ತಿಳಿಸುವ ಪ್ರಯತ್ನ ಮಾಡುತ್ತೇವೆ. ಅದಕ್ಕಾಗಿ ಮುಖ್ಯಮಂತ್ರಿಗಳು ಒಂದು ಆಯೋಗ ನೇಮಕ ಮಾಡಿದ್ದಾರೆ. ಮುಖ್ಯಮಂತ್ರಿ ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಕಾನೂನು ಬಾಹಿರ ಕೆಲಸ ಆಗಿಲ್ಲ. ವಾಲ್ಮೀಕಿ ಹಗರಣವನ್ನು ನಾವು ಜಸ್ಟಿಫೈ ಮಾಡುತ್ತಿಲ್ಲ. ವಾಲ್ಮೀಕಿ ಹಗರಣದ ಬಗ್ಗೆ ಎಸ್‌ಐಟಿ, ಸಿಬಿಐ ತನಿಖೆಯಾಗುತ್ತಿದೆ. ಅದರ ವರದಿ ಬರಲಿ. ಒಂದು ವೇಳೆ ವಾಲ್ಮೀಕಿ ಹಗರಣದಲ್ಲಿ ಮಂತ್ರಿಗಳ ಅಕೌಂಟ್ ಹಣ ಹೋಗಿದೆ ಎಂದು ಸಾಬೀತಾದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: 2010 ರಲ್ಲೇ ಸಿಎಂ ಆಗಬೇಕಿತ್ತು, ಆಗ ಅವಕಾಶ ಕೈ ತಪ್ಪಿತ್ತು: ವಿಜಯ್‌ ಶಂಕರ್‌

  • ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾದ ಲ್ಯಾಬ್‍ನಿಂದಲೇ-ಯುಎಸ್ ರಿಪಬ್ಲಿಕನ್ ವರದಿ

    ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾದ ಲ್ಯಾಬ್‍ನಿಂದಲೇ-ಯುಎಸ್ ರಿಪಬ್ಲಿಕನ್ ವರದಿ

    ಬೀಜಿಂಗ್: ಕೊರೊನಾ ವೈರಸ್ ಚೀನಾದಿಂದ ಹರಡಿದೆ ಎಂದು ಇಡೀ ವಿಶ್ವದ ಇತರ ದೇಶಗಳು ಬೊಟ್ಟು ಮಾಡುತ್ತಿದೆ. ಆದರೆ ಚೀನಾ ಇದನ್ನು ನಿರಾಕರಿಸುತ್ತ ಬಂದಿದೆ. ಇದೀಗ ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾ ಲ್ಯಾಬ್‍ನಿಂದಲೇ ಎಂದು ಸಾಕ್ಷಿ ಸಿಕ್ಕಿದೆ ಎನ್ನುವುದನ್ನು ಯುಎಸ್ ರಿಪಬ್ಲಿಕನ್ ವರದಿ ಮಾಡಿದೆ.

    ಕೊರೊನಾ ವೈರಸ್ ಹರಡಿರುವುದು ಚೀನಾದ ಲ್ಯಾಬ್ ನಿಂದಲೇ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಅಮೆರಿಕಾದ ಹೌಸ್ ಆಫ್ ಫಾರಿನ್ ಅಫೇರ್ಸ್ ಕಮಿಟಿಯ ಸದಸ್ಯ ಮೈಕ್ ಮೆಕಲ್ ತಿಳಿಸಿದ್ದಾರೆ ಎಂದು ಯುಎಸ್ ರಿಪಬ್ಲಿಕನ್ ವರದಿ ಮಾಡಿದೆ. ಆದರೆ ಚೀನಾ ಮಾತ್ರ ಈವರೆಗೆ ಕೊರೊನಾ ವೈರಸ್ ಲ್ಯಾಬ್ ನಿಂದ ಲೀಕ್ ಆಗಿಲ್ಲ. ಅದು ವುಹಾನ್‍ನ ಮಾರುಕಟ್ಟೆಯಿಂದ ಹರಡಿದೆ ಎಂದು ಹೇಳುತ್ತ ಬಂದಿದೆ.   ಇದನ್ನೂ ಓದಿ: ವುಹಾನ್ ಲ್ಯಾಬ್ ತನಿಖೆಗೆ ಮುಂದಾದ WHO – ಚೀನಾದಿಂದ ವಿರೋಧ

    ಹಲವು ದೇಶಗಳು ಮತ್ತು ಸಂಶೋಧನ ತಂಡಗಳು ಚೀನಾದ ಲ್ಯಾಬ್‍ನಿಂದ ಕೊರೊನಾ ವೈರಸ್ ಲೀಕ್ ಆಗಿರುವ ಬಗ್ಗೆ ಈ ಹಿಂದೆ ತಿಳಿಸಿದ್ದರು. ಆದರೆ ಚೀನಾ ಮಾತ್ರ ಇದನ್ನು ತಿರಸ್ಕರಿಸುತ್ತಾ ಬಂದಿದೆ. ಈ ನಡುವೆ ಅಮೆರಿಕದ ಸಂಶೋಧನ ತಂಡವೊಂದು ವೈರಸ್‍ನ ಸತ್ಯಾಂಶ ತಿಳಿಯಲು ಸಾಕ್ಷಿ ಸಂಗ್ರಹಿಸಿದೆ. ಇದನ್ನೂ ಓದಿ: ಕೊರೊನಾ ವೈರಸ್ ಲ್ಯಾಬ್‍ನಲ್ಲಿ ಸೃಷ್ಟಿಯಾಗಿಲ್ಲ- WHO ಹೇಳಿಕೆಯನ್ನು ಮುಂದಿಟ್ಟ ಚೀನಾ

    2019ರಲ್ಲಿ ಕೊರೊನಾ ವೈರಸ್ ಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿತ್ತು. ಆದರೆ ಚೀನಾ ಇದನ್ನು ಮುಚ್ಚಿಟ್ಟು ಇತರ ದೇಶಗಳಿಗೂ ಹರಡುವಂತೆ ಮಾಡಿತು. ಬಳಿಕ ವೈರಸ್ ಕುರಿತು ಹಲವು ಸಂಶೋಧನೆಯಲ್ಲಿ ಕಂಡುಬಂದ ಅಂಶಗಳ ಕುರಿತು ತನ್ನದೆ ವಾದದ ಮೂಲಕ ನಿರಾಕರಿಸುತ್ತ ಬಂದಿದೆ. ಆದರೆ ಇದೀಗ ಯುಎಸ್ ರಿಪಬ್ಲಿಕನ್ ವರದಿಯ ಪ್ರಕಾರ ಚೀನಾದ ಲ್ಯಾಬ್‍ನಿಂದಲೇ ಕೊರೊನಾ ವೈರಸ್ ಲೀಕ್ ಆಗಿರುವ ಬಗ್ಗೆ ಸಾಕ್ಷಿ ಸಿಕ್ಕಿರುವುದಾಗಿ ತಜ್ಞರ ತಂಡ ತಿಳಿಸಿರುವುದು ಕೂತುಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸತ್ಯಾಂಶ ಹೊರಬರುವ ಸಾಧ್ಯತೆ ಇದೆ. ಇದನ್ನೂ ಓದಿ: ವುಹಾನ್ ಮಾರುಕಟ್ಟೆಯ ಸೀಗಡಿ ಮಾರುತ್ತಿದ್ದ ಮಹಿಳೆ ಕೊರೊನಾ ‘ಝೀರೋ ಪೇಶೆಂಟ್

  • ಕೋವಿಡ್ ರಿಸಲ್ಟ್ ವಿಳಂಬ – 40 ಲ್ಯಾಬ್‍ಗಳ ಮೇಲೆ ದಂಡ ಪ್ರಯೋಗ

    ಕೋವಿಡ್ ರಿಸಲ್ಟ್ ವಿಳಂಬ – 40 ಲ್ಯಾಬ್‍ಗಳ ಮೇಲೆ ದಂಡ ಪ್ರಯೋಗ

    – ಕೋವಿಡ್ ಪರೀಕ್ಷೆ ವ್ಯವಸ್ಥೆ ಅವಲೋಕಿಸಿದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ
    – 9 ಜಿಲ್ಲೆಗಳಲ್ಲಿ ಟೆಸ್ಟ್ ಹೆಚ್ಚಿಸಲು ಸೂಚನೆ
    – 3 ಲಕ್ಷ ವೈಲ್ಸ್ ಬ್ಲ್ಯಾಕ್ ಫಂಗಸ್ ಔಷಧಿಯ ತುರ್ತು ಖರೀದಿಗೆ ನಿರ್ದೇಶನ

    ಬೆಂಗಳೂರು: ಕೋವಿಡ್ ಪರೀಕ್ಷೆ ವರದಿಗಳನ್ನು ವಿಳಂಬ ಮಾಡಿದ ಸರ್ಕಾರಿ ಮತ್ತು ಖಾಸಗಿ ಲ್ಯಾಬ್‍ಗಳ ಮೇಲೆ ಸರ್ಕಾರ ಮೊದಲೇ ಎಚ್ಚರಿಕೆ ನೀಡಿದಂತೆ ದಂಡ ಪ್ರಯೋಗ ಮಾಡಿದೆ.

    ಸ್ಯಾಂಪಲ್ ಕಳಿಸಿಕೊಟ್ಟ 24 ಗಂಟೆಗಳ ಒಳಗಾಗಿ ರಿಸಲ್ಟ್ ಕೊಡದೆ, ಐಸಿಎಂಆರ್ ಪೋರ್ಟಲ್ ಗೆ ಅಪ್‍ಲೋಡ್ ಮಾಡದ ಕಾರಣಕ್ಕೆ ಪ್ರತೀ ಒಂದು ಸ್ಯಾಂಪಲ್ ಮೇಲೆ 200 ರೂ.ನಂತೆ ದಂಡ ವಿಧಿಸಲಾಗಿದೆ.

    ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸಭೆಯ ನಂತರ ಡಿಸಿಎಂ ಈ ಮಾಹಿತಿ ಹಂಚಿಕೊಂಡರು.

    ಡಿಸಿಎಂ ಹೇಳಿದ್ದಿಷ್ಟು;
    24 ಗಂಟೆ ಒಳಗಾಗಿ ರಿಸಲ್ಟ್ ಕೊಡಬೇಕು ಎಂದು ಸರಕಾರವು ಲ್ಯಾಬ್‍ಗಳಿಗೆ ಡೆಡ್‍ಲೈನ್ ವಿಧಿಸಿತ್ತು. ಆದರೆ, ಕೆಲ ಲ್ಯಾಬ್‍ಗಳು ಪರಿಸ್ಥಿತಿಯ ತೀವ್ರತೆ ಅರಿಯದೇ ಉಪೇಕ್ಷೆ ಮಾಡಿರುವುದು ಅಕ್ಷಮ್ಯ. ಹೀಗಾಗಿ ದಂಡ ಹಾಕಲಾಗಿದೆ. ಮೇ 8ರಿಂದ ಜಾರಿಗೆ ಬರುವಂತೆ ದಂಡ ಕ್ರಮ ಕೈಗೊಳ್ಳಲಾಗಿದ್ದು, 3,034 ಸ್ಯಾಂಪಲ್‍ಗಳ ವರದಿ ನೀಡಲು ತಡ ಮಾಡಿದ ಕಾರಣಕ್ಕೆ ಸರಕಾರಿ ಸ್ವಾಮ್ಯದ 9 ಪ್ರಮುಖ ಲ್ಯಾಬ್‍ಗಳಿಗೆ 6,06,800 ರೂ. ಹಾಗೂ ಖಾಸಗಿ ವಲಯದ 31 ಲ್ಯಾಬ್‍ಗಳಿಂದ 7,069 ಸ್ಯಾಂಪಲ್‍ಗಳು ವಿಳಂಬವಾಗಿ ಬಂದಿದ್ದು, ಅವುಗಳಿಗೆ ಒಟ್ಟು 14,13,800 ರೂ. ದಂಡ ವಿಧಿಸಲಾಗಿದೆ.

    ಐಸಿಎಂಆರ್ ಪೋರ್ಟಲ್ ಗೆ ಅಪ್‍ಲೋಡ್ ಮಾಡದೇ ಫಲಿತಾಂಶದ ವರದಿಗಳನ್ನು ಬಹಿರಂಗ ಮಾಡಿದ ಕಾರಣಕ್ಕಾಗಿ 5 ಲ್ಯಾಬ್‍ಗಳಿಗೆ ದಂಡ ವಿಧಿಸಿ ಮುಚ್ಚಿಸಲಾಗಿದೆ. ಜತೆಗೆ, ಇನ್ನೂ ಬಹಳ ವಿಳಂಬ ಮಾಡಿದ 41 ಲ್ಯಾಬ್‍ಗಳಿಗೆ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ. ಸ್ಯಾಂಪಲ್ ತಲುಪಿದ 24 ಗಂಟೆಯೊಳಗೆ ರಿಸಲ್ಟ್ ಕೊಡುವುದರ ಜತೆಗೆ, ಪಾಸಿಟೀವ್ ಬಂದವರ ಮಾಹಿತಿಯನ್ನು ಐಸಿಎಂಆರ್ ಪೋರ್ಟಲ್  ಗೆ ಆಪ್‍ಲೋಡ್ ಮಾಡಬೇಕು. ಹೀಗೆ ಆಗದಿರುವುದರಿಂದ ಚಿಕಿತ್ಸೆ ತಡವಾಗಿ ಅನೇಕರು ಜೀವ ಕಳೆದುಕೊಂಡಿದ್ದಾರೆ. ಲ್ಯಾಬ್‍ಗಳ ಇಂಥ ದೋರಣೆಯನ್ನು ಸಹಿಸಲು ಸಾಧ್ಯವಿಲ್ಲ.

    1,100 ಸ್ಯಾಂಪಲ್ ರಿಸಲ್ಟ್ ತಡ ಮಾಡಿದ್ದಕ್ಕೆ ಮೆಡ್‍ಜಿಯೋನೋಂ ಲ್ಯಾಬ್‍ಗೆ 2,20,000 ರೂ., 862 ರಿಸಲ್ಟ್ ತಡ ಮಾಡಿದ ಕಿದ್ವಾಯಿ ಸ್ಮಾರಕ ಆಸ್ಪತ್ರೆಯ ಲ್ಯಾಬ್‍ಗೆ 1,72,400 ರೂ.,  659 ವರದಿ ವಿಳಂಬ ಮಾಡಿದ ಯುರೋಫಿನ್ಸ್ ಕ್ಲಿನಿಕಲ್ ಗೆನೆಟಿಕ್ಸ್ ಇಂಡಿಯಾ ಲ್ಯಾಬ್‍ಗೆ  1,31,800 ರೂ. ದಂಡ ವಿಧಿಸಲಾಗಿದೆ. ಸರಕಾರಿ ಸ್ವಾಮ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ದಂಡಕ್ಕೆ ತುತ್ತಾದ ಲ್ಯಾಬ್‍ಗಳಿವು.

    ಇನ್ನು, ಖಾಸಗಿ ಲ್ಯಾಬ್‍ಗಳಿಗೆ ಬಂದರೆ 938 ವರದಿಗಳನ್ನು ತಡವಾಗಿ ನೀಡಿದ ಡಾ.ಲಾಲ್ ಪಾಥ್‍ ಲ್ಯಾಬ್ಸ್ ಗೆ  1,87,600 ರೂ., 918  ರಿಸಲ್ಟ್ ನೀಡಲು ತಡ ಮಾಡಿದ್ದಕ್ಕೆ ಮೆಡ್‍ಜಿಯೋನೋಂ ಲ್ಯಾಬ್‍ಗೆ 1,83,600 ರೂ., ಮಣಿಪಾಲ್ ಆಸ್ಪತ್ರೆಯ ಲ್ಯಾಬ್ 880  ವರದಿಗಳನ್ನು ತಡ ಮಾಡಿದ್ದಕ್ಕಾಗಿ 1,76,000 ರೂ., 756 ರಿಸಲ್ಟ್ ತಡ ಮಾಡಿದ ಪ್ರಿಮಾ ಡಯಾಗ್ನಿಸ್ಟಿಕ್ ಲ್ಯಾಬ್‍ಗೆ 1,51,200 ರೂ., 585 ವರದಿ ವಿಳಂಬ ಮಾಡಿದ 1ಎಂಜಿ ಲ್ಯಾಬ್ಸ್‍ಗೆ 1,17,000 ರೂ., ಬೆಂಗಳೂರು ಅರ್ಬನ್ ಲ್ಯಾಬ್ಸ್ (05) 509 ವರದಿಗಳನ್ನು ವಿಳಂಬ ಮಾಡಿದ್ದಕ್ಕಾಗಿ 1,01,800 ರೂ. ದಂಡ ವಿಧಿಸಲಾಗಿದೆ. ಖಾಸಗಿ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ದಂಡಕ್ಕೆ ತುತ್ತಾದ ಲ್ಯಾಬ್‍ಗಳಿವು.

    ಟೆಸ್ಟ್ ಹೆಚ್ಚಿಸಲು ಸೂಚನೆ:
    ಸದ್ಯಕ್ಕೆ 9 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಾಗಿರುವುದರಿಂದ ಎಲ್ಲಡೆ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಮನೆಮನೆಗೂ ತೆರಳಿ ರೋಗ ಲಕ್ಷಣಗಳಿದ್ದವರನ್ನು ಪರೀಕ್ಷೆ ಮಾಡಬೇಕು. ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಪ್ರಮಾಣವನ್ನು ದುಪ್ಪಟ್ಟು ಮಾಡಬೇಕು. ಒಬ್ಬ ಪಾಸೀಟಿವ್ ಬಂದವರು ಪತ್ತೆಯಾದರೆ ಅವರಿಗೆ ಪ್ರಾಥಮಿಕ ಹಂತದಲ್ಲಿ ಸಂಪರ್ಕಕ್ಕೆ ಬಂದ ಕನಿಷ್ಠ ನಾಲ್ವರನ್ನಾದರೂ ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಸೋಂಕು ಕಂಡು ಬಂದರೆ ಅಂಥವರನ್ನು ಕೂಡಲೇ ಸ್ಥಳೀಯ ಕೋವಿಡ್ ಕೇರ್ ಗಳಿಗೆ  ಶಿಫ್ಟ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

    ಚಾಮರಾಜನಗರದಲ್ಲಿ ಕಿಟ್‍ಗಳಿಲ್ಲ ಅಂತ ನೆಪ ಹೇಳಿ ಪರೀಕ್ಷೆ ನಡೆಸುತ್ತಿಲ್ಲ ಎಂಬ ಮಾಹಿತಿಯನ್ನು ಶಾಲಿನಿ ರಜನೀಶ್ ಗಮನಕ್ಕೆ ತಂದರು. ಕೂಡಲೇ ಅಲ್ಲಿಗೆ ಅಗತ್ಯವಾದ ರಾಟ್ ಮತ್ತು  ಆರ್‍ಟಿಪಿಸಿಆರ್ ಕಿಟ್‍ಗಳನ್ನು ಕಳಿಸುವಂತೆ ಸೂಚಿಸಿದ್ದೇನೆ.

    ಬ್ಲ್ಯಾಕ್ ಫಂಗಸ್ ತುರ್ತು ಔಷಧಿ ಖರೀದಿ:
    ಸದ್ಯಕ್ಕೆ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಔಷಧಿಗೆ ಬಹಳ ಬೇಡಿಕೆ ಇದ್ದು, ತಮ್ಮಲ್ಲಿ ಸ್ಟಾಕ್ ಇದ್ದರೆ ಯಾರು ಬೇಕಾದರೂ ತುರ್ತಾಗಿ  ಪೂರೈಕೆ ಮಾಡಬಹುದು. ನಿಗದಿತ ದರ ನೀಡಿ ಸರಕಾರ ತಕ್ಷಣ ಖರೀದಿ ಮಾಡಲಿದೆ. ಆಂಫೊಟೆರಿಸಿನ್-ಬಿ ಔಷಧಿಯನ್ನು (Amphotericin-B; 50mg) 3 ಲಕ್ಷ ವೈಲ್ಸ್ ಖರೀದಿ ಮಾಡುವಂತೆ ಸಭೆಯಲ್ಲಿದ್ದ ಕೋವಿಡ್ ಔಷಧಿ ಉಸ್ತುವಾರಿ ಅಧಿಕಾರಿ ಅಜುಂ ಪರ್ವೇಜ್ ಅವರಿಗೆ ನಿರ್ದೇಶನ ನೀಡಲಾಯಿತು. ಇನ್ನು, ರಾಜ್ಯದಲ್ಲಿ ರೆಮಿಡಿಸಿವರ್ ಬೇಡಿಕೆಗಿಂತ ಹೆಚ್ಚು ಪ್ರಮಾಣದಲ್ಲಿ ದಾಸ್ತಾನಿದೆ.

    ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಲ್ಯಾಬ್ ಉಸ್ತುವಾರಿ ಅಧಿಕಾರಿ ಶಾಲಿನಿ ರಜನೀಶ್,  ಕೋವಿಡ್ ಔಷಧಿ ಉಸ್ತುವಾರಿ ಅಧಿಕಾರಿ ಅಜುಂ ಪರ್ವೇಜ್, ಡಿಸಿಎಂ ಕಾರ್ಯದರ್ಶಿ ಪ್ರದೀಪ್ ಪ್ರಭಾಕರ್ ಮುಂತಾದವರು ಸಭೆಯಲ್ಲಿದ್ದರು.

  • ಕೋವಿಡ್ ನಿಯಮ ಉಲ್ಲಂಘನೆ – ವಿರಾಜಪೇಟೆ ಡೆಂಟಲ್ ಕಾಲೇಜು ವಿರುದ್ಧ ಎಫ್‍ಐಆರ್

    ಕೋವಿಡ್ ನಿಯಮ ಉಲ್ಲಂಘನೆ – ವಿರಾಜಪೇಟೆ ಡೆಂಟಲ್ ಕಾಲೇಜು ವಿರುದ್ಧ ಎಫ್‍ಐಆರ್

    ಮಡಿಕೇರಿ: ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸಲು ಸರ್ಕಾರ ಈಗಾಗಲೇ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತೆ ಸೂಚಿಸಿದೆ. ಆದರೆ ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣದ ಹೊರವಲಯದಲ್ಲಿರುವ ಖಾಸಗಿ ಡೆಂಟಲ್ ಕಾಲೇಜು ಆಡಳಿತ ಮಂಡಳಿ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದೆ. ಕಾಲೇಜು ನಡೆಸದಂತೆ ಸ್ಪಷ್ಟ ಸೂಚನೆ ಇದ್ದರೂ ಕಾಲೇಜನ್ನು ನಡೆಸುತ್ತಿತ್ತು. ಹಾಗಾಗಿ ಇದೀಗ ಕಾಲೇಜು ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಡೆಂಟಲ್ ಕಾಲೇಜಿನಲ್ಲಿ ತರಗತಿಗಳು ನಡೆಸುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ವಿರಾಜಪೇಟೆ ತಹಶೀಲ್ದಾರ್ ಆರ್.ಯೋಗಾನಂದ್ ಅವರು ವಿರಾಜಪೇಟೆ ಪಟ್ಟಣ ಪೊಲೀಸರೊಂದಿಗೆ ಕಾಲೇಜಿನ ಮೇಲೆ ಏಕಾಏಕಿ ದಾಳಿ ಮಾಡಿದರು. ಈ ವೇಳೆ ಕಾಲೇಜಿನಲ್ಲಿ ಕೋವಿಡ್ ನಿಯಮಗಳನ್ನು ಮೀರಿ ಆಂತರಿಕ ಪರೀಕ್ಷೆಗಳನ್ನು ನಡೆಸುತ್ತಿರುವುದನ್ನು ಸ್ವತಃ ತಹಶೀಲ್ದಾರ್ ಖುದ್ದು ವೀಕ್ಷಿಸಿದರು. ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲ್ಯಾಬ್ ತರಗತಿಗಳನ್ನು ನಡೆಸುತ್ತಿದ್ದನ್ನು ಗಮನಿಸಿದರು. ಈ ವೇಳೆ ಉಪನ್ಯಾಸಕರನ್ನು ವಿಚಾರಿಸಿದಾಗ ನಾವು ಯಾವುದೇ ತರಗತಿ ನಡೆಸುತ್ತಿರಲಿಲ್ಲ. ಸಂಶೋಧನೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದೆವು ಎಂದು ಸಮಾಜಾಯಿಷಿ ನೀಡಿದ್ದಾರೆ.

    ಇದೇ ವೇಳೆ ತರಗತಿ ಕೊಠಡಿಗಳಿಂದ ಹೊರಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಕೇಳಿದಾಗ ವಿದ್ಯಾರ್ಥಿಗಳು ಲ್ಯಾಬ್ ತರಗತಿಯಲ್ಲಿ ಇದ್ದೇವು ಎನ್ನೋದನ್ನು ಒಪ್ಪಿಕೊಂಡರು. ಜೊತೆಗೆ ಕಾಲೇಜು ಆವರಣದಲ್ಲಿರುವ ಹೋಟೆಲಿನಲ್ಲಿ ವಿದ್ಯಾರ್ಥಿಗಳಿಗೆ ಅಲ್ಲಿಯೇ ಊಟ ನೀಡಲಾಗುತ್ತಿತ್ತು. ವಿದ್ಯಾರ್ಥಿಗಳು ಒಂದೊಂದು ಟೇಬಲ್‍ನಲ್ಲೂ ಗುಂಪು ಗುಂಪಾಗಿ ಕುಳಿತು ಊಟ ಮಾಡುತ್ತಿದ್ದರು, ಜೊತೆಗೆ ಕ್ಯಾಂಟೀನ್ ನಲ್ಲೂ ವಿದ್ಯಾರ್ಥಿಗಳು ಕುಳಿತು ವಿವಿಧ ತಿನಿಸುಗಳನ್ನು ತಿನ್ನುತಿದ್ದರು.

    ತಕ್ಷಣವೇ ಎಚ್ಚೆತ್ತುಕೊಂಡು ತಹಶೀಲ್ದಾರ್ ಇದ್ದ ಸ್ಥಳಕ್ಕೆ ಬಂದ ಕಾಲೇಜು ಡೀನ್ ತರಗತಿ ನಡೆಸುವುದಕ್ಕೆ ನಮಗೆ ಅವಕಾಶ ಇದೆ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದರು. ಆದರೆ ತಹಶೀಲ್ದಾರ್ ಅವರು ಎಲ್ಲವನ್ನೂ ಪರಿಶೀಲಿಸಿ ಕಾಲೇಜು ವಿರುದ್ಧ ಶಿಸ್ತು ಕ್ರಮ ಕೈಗೊಂಡು ಸರ್ಕಾರದ ನಿಯಮದ ಪ್ರಕಾರ ಪ್ರಕರಣ ದಾಖಲಿಸಲಾಗುವುದು. ಕಾಲೇಜಿನಲ್ಲಿ ಹಲವು ವಿಷಯಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಕಾಲೇಜು ವಿರುದ್ಧ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

  • ಲಸಿಕೆ ಸ್ಥಿತಿಗತಿ ತಿಳಿಯಲು ಪುಣೆ ಲ್ಯಾಬ್‍ಗೆ ಭೇಟಿ ನೀಡಲಿದ್ದಾರೆ ಮೋದಿ

    ಲಸಿಕೆ ಸ್ಥಿತಿಗತಿ ತಿಳಿಯಲು ಪುಣೆ ಲ್ಯಾಬ್‍ಗೆ ಭೇಟಿ ನೀಡಲಿದ್ದಾರೆ ಮೋದಿ

    – ಸೀರಮ್ ಲ್ಯಾಬ್ ಭೇಟಿ ನೀಡಲಿದ್ದಾರೆ ಪ್ರಧಾನಿ
    – ಆಕ್ಸ್‍ಫರ್ಡ್ ಕೋವಿಶೀಲ್ಡ್ ಲಸಿಕೆ ಯಶಸ್ವಿಯಾದ ಬೆನ್ನಲ್ಲೇ ಭೇಟಿ

    ನವದೆಹಲಿ: ಲಸಿಕೆ ತಯಾರಿ ಹಾಗೂ ವಿತರಣಾ ವ್ಯವಸ್ಥೆಯ ಕುರಿತು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹ ವಿತರಣೆ ಭರ್ಜರಿ ತಯಾರಿ ನಡೆಸಿವೆ. ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಸಿಎಂ ಹಾಗೂ ಅಧಿಕಾರಿಗಳೊಂದಿಗೆ ಆಗಾಗ ಸಭೆ ನಡೆಸುತ್ತಲೇ ಇದ್ದಾರೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಲಸಿಕೆ ತಯಾರಿಸುತ್ತಿರುವ ಲ್ಯಾಬ್‍ಗೆ ಭೇಟಿ ನೀಡಲಿದ್ದಾರೆ.

    ಆಕ್ಸ್‌ಫರ್ಡ್ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಕೋವಿಶೀಲ್ಡ್ ಹೆಸರಿನ ಲಸಿಕೆಯ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಜತೆಗೂಡಿ ಸೀರಮ್ ಭಾರತದಲ್ಲಿ ಕೋವಿಡ್ ವೈರಸ್ ನಿಯಂತ್ರಣದ ಲಸಿಕೆ ತಯಾರಿಕೆಗೆ ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಪುಣೆಯ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‍ಐಐ)ದ ಲ್ಯಾಬ್‍ಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪ್ರತಿ ನಿಮಿಷಕ್ಕೆ 500, ಪ್ರತಿ ಗಂಟೆಗೆ 30 ಸಾವಿರ ಸೀಸೆ ಲಸಿಕೆ ಉತ್ಪಾದಿಸುತ್ತೇವೆ: ಸೀರಮ್‌ ಸಿಇಓ

    ಆರಂಭದಲ್ಲಿ ಎಷ್ಟು ಜನರಿಗೆ ವ್ಯಾಕ್ಸಿನ್ ನೀಡಬಹುದು, ಬಿಡುಗಡೆ ಹೇಗೆ, ಉತ್ಪಾದನೆ ಹಾಗೂ ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಕುರಿತು ಸೀರಮ್ ಇನ್‍ಸ್ಟಿಟಿಟ್ಯೂಟ್ ಆಫ್ ಇಂಡಿಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಒಟ್ಟು ಏಳು ಸಂಸ್ಥೆಗಳಿಗೆ ಪ್ರಿ ಕ್ಲಿನಿಕಲ್ ಟೆಸ್ಟ್, ಮರುಪರಿಶೀಲನೆ ಹಾಗೂ ವಿಶ್ಲೇಷಣೆಗಾಗಿ ಕೊರೊನಾ ಲಸಿಕೆ ತಯಾರಿಸಲು ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದೆ. ಇವುಗಳ ಪೈಕಿ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‍ಐಐ)ಹಾಗೂ ಜೆನ್ನೋವಾ ಬಯೋಫಾರ್ಮಾಸಿಟಿಕಲ್ಸ್ ಸಹ ಸೇರಿವೆ.

    1 ಸಾವಿರ ರೂ.
    ಕೊರೊನಾ ಲಸಿಕೆ ಕುರಿತು ಎಸ್‍ಐಐ ಸಿಇಓ ಆದರ್ ಪೂನಾವಾಲ ಗುರುವಾರ ಮಾಹಿತಿ ನೀಡಿದ್ದು, ಆಕ್ಸ್‌ಫರ್ಡ್ ನ ಈ ಕೊರೊನಾ ಲಸಿಕೆ ಮುಂದಿನ ವರ್ಷ ಫೆಬ್ರವರಿ ವೇಳೆಗೆ ಆರೋಗ್ಯ ಸಿಬ್ಬಂದಿ ಹಾಗೂ ಹಿರಿಯ ನಾಗರಿಕರಿಗೆ ಸಿಗಲಿದೆ. ಏಪ್ರಿಲ್ ವೇಳೆಗೆ ಸಾಮಾನ್ಯ ಜನರಿಗೂ ಸಿಗಲಿದೆ. ಅಗತ್ಯ 2 ಡೋಸ್‍ಗೆ 1 ಸಾವಿರ ರೂ.ಗೆ ವ್ಯಾಕ್ಸಿನ್ ಸಿಗಬಹುದು. ಇದು ಅಂತಿಮ ಪ್ರಯೋಗದ ಫಲಿತಾಂಶ ಹಾಗೂ ನಿಯಂತ್ರಕ ಅನುಮೋದನೆಗಳನ್ನು ಅವಲಂಬಿಸಿರುತ್ತದೆ ಎಂದು ವಿವರಿಸಿದ್ದಾರೆ.

    ವಿಶೇಷ ಎಂಬಂತೆ ಎರಡು ಯುಎಸ್ ಲಸಿಕೆಗಳಾದ ಫೀಜರ್ ಹಾಗೂ ಮಾಡರ್ನಾ ಸಂಸ್ಥೆಗಳು ತಮ್ಮ 3ನೇ ಹಂತದ ಪ್ರಯೋಗಗಳಿಂದ ಕ್ರಮವಾಗಿ ಶೇ.95 ಹಾಗೂ ಶೇ.94.5 ಯಶಸ್ಸಿನ ಪ್ರಮಾಣವನ್ನು ತೋರಿಸಿವೆ.

  • 24 ಗಂಟೆಯಲ್ಲಿ 4,42,031 ಸ್ಯಾಂಪಲ್ ಟೆಸ್ಟ್-ಲ್ಯಾಬ್ ಗಳ ಹೊಸ ದಾಖಲೆ

    24 ಗಂಟೆಯಲ್ಲಿ 4,42,031 ಸ್ಯಾಂಪಲ್ ಟೆಸ್ಟ್-ಲ್ಯಾಬ್ ಗಳ ಹೊಸ ದಾಖಲೆ

    ನವದೆಹಲಿ: ಕಳೆದ 24 ಗಂಟೆಯಲ್ಲಿ 4,42,031 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸುವ ಮೂಲಕ ಸರ್ಕಾರದ ಲ್ಯಾಬ್ ಗಳು ಹೊಸ ದಾಖಲೆಯನ್ನು ಬರೆದಿವೆ.

    ಈ ಮೊದಲು ಒಂದೇ ದಿನ 3,62,153 ಮಾದರಿಯನ್ನು ಪರೀಕ್ಷೆ ಮಾಡಲಾಗಿತ್ತು. ಇತ್ತ ಖಾಸಗಿ ಲ್ಯಾಬ್ ಗಳು 79,878 ಮಂದಿಯ ಕೊರೊನಾ ಪರೀಕ್ಷೆ ಮಾಡಿವೆ. ಕೊರೊನಾ ನಿಯಂತ್ರಣಕ್ಕಾಗಿ ಹೆಚ್ಚು ಶಂಕಿತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಹಾಗಾಗಿ ಕೇಂದ್ರ ಸರ್ಕಾರ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಳ ಮಾಡಿಕೊಳ್ಳುತ್ತಿದೆ.

    ಶನಿವಾರ ದೇಶದಲ್ಲಿ 48 ಸಾವಿರಕ್ಕೂ ಅಧಿಕ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಟೆಸ್ಟಿಂಗ್ ಹೆಚ್ಚಳವಾದ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆಯೂ ಸಹ ಏರಿಕೆಯಾಗಿದೆ. ಭಾರತದಲ್ಲಿ ಗುಣಮುಖರಾಗುತ್ತಿರುವ ಪ್ರಮಾಣ ಶೇ.63.53ರಷ್ಟಿದೆ. ದೇಶದ ರಾಜಧಾನಿಯಲ್ಲಿ ರಿಕವರಿ ರೇಟ್ ಶೇ.87.29 ಇದೆ.

  • ಕೊರೊನಾ ಅಪಾಯಕಾರಿ ರಾಜ್ಯಗಳಿಂದ ಬಂದವರಿಗೆ ಸ್ವಂತ ಖರ್ಚಿನಲ್ಲೇ ಕೋವಿಡ್ ಟೆಸ್ಟ್

    ಕೊರೊನಾ ಅಪಾಯಕಾರಿ ರಾಜ್ಯಗಳಿಂದ ಬಂದವರಿಗೆ ಸ್ವಂತ ಖರ್ಚಿನಲ್ಲೇ ಕೋವಿಡ್ ಟೆಸ್ಟ್

    ಬೆಂಗಳೂರು: ಕೊರೊನಾ ಅಪಾಯಕಾರಿ ರಾಜ್ಯದಿಂದ ವಿಮಾನ, ರೈಲಿನಲ್ಲಿ ಬಂದವರಿಗೆ ಇನ್ನುಮುಂದೆ ಸ್ವಂತ ಖರ್ಚಿನಲ್ಲಿ ಕೋವಿಡ್-19 ಟೆಸ್ಟ್‍ಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

    ಈ ಕುರಿತು ಪ್ರಕಟಣೆ ಹೊರಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇದುವರೆಗೂ ಸರ್ಕಾರದ ವತಿಯಿಂದ ಗಂಟಲು ದ್ರವ ಸಂಗ್ರಹಿಸಿ ಉಚಿತ ಪರೀಕ್ಷೆ ಮಾಡಲಾಗುತ್ತಿತ್ತು. ಆದರೆ ಈಗ ಪ್ರತಿಯೊಬ್ಬರು ಪರೀಕ್ಷೆಗೆ 650 ರೂಪಾಯಿ ನೀಡಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಒಂದೇ ದಿನ ಅತೀ ಹೆಚ್ಚು 248 ಮಂದಿಗೆ ಕೊರೊನಾ- 2,781ಕ್ಕೆ ಏರಿದ ಸೋಂಕಿತರ ಸಂಖ್ಯೆ

    ಪ್ರಕಟಣೆಯಲ್ಲಿ ಏನಿದೆ?:
    ಕೋವಿಡ್-19 ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆಗೊಳಿಸುವ ವಿಷಯದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ನಗರ ಮತ್ತು ಉಳಿದ ಎಲ್ಲಾ ಜಿಲ್ಲೆಗಳ ಸಾಮರ್ಥ್ಯದಲ್ಲಿ ಪರಿಮಿತಿ ಇರುತ್ತದೆ. ಕೋವಿಡ್-19ರ ಸಂಕಷ್ಟದಲ್ಲಿರುವ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರೆಲ್ಲರನ್ನು ಹೋಟೆಲ್/ವಸತಿ ಗೃಹಗಳಲ್ಲಿ 7 ದಿನಗಳ ಕಾಲ ಕ್ವಾರಂಟೈನ್‍ಗೆ ಒಳಪಡಿಸಲು ಸಾಧ್ಯವಾಗುವುದಿಲ್ಲ. ಕಾರಣವೇನೆಂದರೆ ಹೋಟೆಲ್/ ವಸತಿ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅನೇಕ ಪೂರ್ವ ಮತ್ತು ಈಶಾನ್ಯ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂದಿರುಗಿರುತ್ತಾರೆ.

    ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಒಳಪಡುವ ಕೆಲವು ವಿಶಿಷ್ಟ ಗುಂಪಿನ ಪ್ರಯಾಣಿಕರ ಗಂಟಲು ದ್ರವವನ್ನು ಮಾತ್ರ ಲ್ಯಾಬ್ ಪರೀಕ್ಷೆ ಮಾಡುವ ನಿರ್ಣಯವನ್ನು ರಾಜ್ಯ ಕೈಗೊಂಡಿದೆ. ಈ ಮೂಲಕ ಕೋವಿಡ್ ಶಂಕಿತರನ್ನು ಶೀಘ್ರಗತಿಯಲ್ಲಿ ಪರೀಕ್ಷೆ ಮಾಡಲು ಖಾಸಗಿ ಪ್ರಯೋಗಾಲಯಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ.

    ಇತ್ತೀಚೆಗೆ ಅವರೊಂದಿಗೆ ನಡೆಸಿದ ವಿಮಾನ ಮತ್ತು ರೈಲುಗಳ ಮುಖಾಂತರ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರ ಗಂಟಲು ಮಾದರಿಗಳನ್ನು ಸಂಗ್ರಹಿಸಿ ಪ್ರಸಕ್ತ ರಾಜ್ಯ ಸರ್ಕಾರದ ಪರೀಕ್ಷಾ ನಿಯಮದಂತೆ ಕೋವಿಡ್-19 ಆರ್‌ಟಿ- ಪಿಸಿಆರ್ ಪರೀಕ್ಷೆ ನಡೆಸಿ 24 ಗಂಟೆಯ ಒಳಗಾಗಿ ಫಲಿತಾಂಶ ನೀಡುವ ಸಾಮರ್ಥ್ಯ ಮತ್ತು ಸನ್ನದ್ದತೆ ಕುರಿತು ಖಾಸಗಿ ಪ್ರಯೋಗಾಲಗಳೊಂದಿಗೆ ಚರ್ಚೆ ನಡೆಸಲಾಗಿರುತ್ತದೆ. ಪ್ರಯೋಗಾಲಯ ಪರೀಕ್ಷೆಗಳ ಕುರಿತು ಆರೋಗ್ಯ ಇಲಾಖೆಯ ಪ್ರಸ್ತಾವನೆಯನ್ನು ಸದರಿ ಖಾಸಗಿ ಲ್ಯಾಬ್‍ಗಳಿಗೆ ಒಪ್ಪಿರುತ್ತಾರೆ.

    ಗಂಟಲು, ರಕ್ತದ ಮಾದರಿಗಳನ್ನು ಪೊಲಿಂಗ್ ವಿಧಾನದಲ್ಲಿ ಪರೀಕ್ಷಿಸಲು (ಐಸಿಎಂಆರ್ ಮಾರ್ಗಸೂಚಿಯಂತೆ 1 ಪೊಲ್‍ನಲ್ಲಿ 5 ಮಾದರಿಗಳು ಇರತಕ್ಕದ್ದು) ಪರೀಕ್ಷೆ ಶುಲ್ಕವಾಗಿ ಪ್ರತಿ ಯಾತ್ರಿಕರಿಂದ, ಫಲಿತಾಂಶ ಪಾಸಿಟಿವ್ ಇರಲಿ ಅಥವಾ ನೆಗೆಟಿವ್ ಇರಲಿತಲಾ 650 ರೂ. ನಂತೆ ಶುಲ್ಕವನ್ನು ಖಾಸಗಿ ಲ್ಯಾಬ್‍ಗಳು ಪಡೆಯತಕ್ಕದ್ದು.

  • ತುಮಕೂರು, ಗದಗ, ವಿಜಯಪುರಗಳಲ್ಲೂ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ

    ತುಮಕೂರು, ಗದಗ, ವಿಜಯಪುರಗಳಲ್ಲೂ ಕೋವಿಡ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ

    – ಕರ್ನಾಟಕದಲ್ಲಿ ಈಗ 26 ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳು ಕಾರ್ಯನಿರತ
    – ಮೇ ಅಂತ್ಯದೊಳಗೆ ರಾಜ್ಯದಲ್ಲಿ 60 ಕೋವಿಡ್ ಟೆಸ್ಟಿಂಗ್ ಲ್ಯಾಬ್

    ಬೆಂಗಳೂರು: ಗದಗ, ತುಮಕೂರು ಮತ್ತು ವಿಜಯಪುರಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಿಗೆ ಕೇಂದ್ರ ಸರ್ಕಾರದ ಅನುಮತಿ ದೊರಕಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೀಗ 26 ಕೋವಿಡ್ ಟೆಸ್ಟಿಂಗ್ ಲ್ಯಾಬ್‍ಗಳು ಕಾರ್ಯ ನಿರ್ವಹಿಸುವಂತಾಗಿದೆ.

    ರಾಜ್ಯದಲ್ಲಿ ಈಗ ದಿನಕ್ಕೆ 5,000 ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ಲಭ್ಯವಾದಂತಾಗಿದ್ದು, ವೈದ್ಯಕೀಯ ಸೌಲಭ್ಯ ಹೆಚ್ಚಳ ಮತ್ತು ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಪ್ರಸ್ತುತ ಆರ್.ಟಿ.ಪಿ.ಸಿ.ಆರ್ ಲ್ಯಾಬ್ – 15, ಸಿಬಿಎನ್‍ಎಎಟಿ – 03 ಮತ್ತು ಖಾಸಗಿಯ 08 ಲ್ಯಾಬ್ ಗಳು ಕಾರ್ಯ ನಿರ್ವಹಿಸುತ್ತಿವೆ.

    ಇದಕ್ಕೂ ಮುನ್ನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಏಪ್ರಿಲ್ ಅಂತ್ಯದೊಳಗೆ ರಾಜ್ಯದಲ್ಲಿ 27 ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದರು. ಫೆಬ್ರವರಿ ಆರಂಭದಲ್ಲಿ 2 ಲ್ಯಾಬ್‍ಗಳಿದ್ದ ಕರ್ನಾಟಕದಲ್ಲಿ ಈಗ 26 ಲ್ಯಾಬ್‍ಗಳು ಕಾರ್ಯನಿರ್ವಹಿಸುತ್ತಿದ್ದು ಮೇ ಅಂತ್ಯದೊಳಗೆ 60 ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸಲಿವೆ.

    ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಠ 2 ಪ್ರಯೋಗಾಲಯ ಹೊಂದುವುದು ಸರ್ಕಾರದ ಗುರಿ ಎಂದು ಡಾ.ಸುಧಾಕರ್ ತಿಳಿಸಿದ್ದಾರೆ. ಇದರಿಂದಾಗಿ ತ್ವರಿತ ಗತಿಯಲ್ಲಿ ಪಾಸಿಟೀವ್ ಪ್ರಕರಣಗಳನ್ನು ಗುರುತಿಸಿ ಪ್ರತ್ಯೇಕಿಸಲು ಸಾಧ್ಯವಾಗುತ್ತಿದ್ದು, ರಾಜ್ಯದಲ್ಲಿ ಕೊರೋನ ವೈರಾಣು ಹರಡದಂತೆ ತಡೆಗಟ್ಟಲು ಇದು ಬಹಳ ಮಟ್ಟಿಗೆ ಸಹಕಾರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.

    4ಖಿ (ಟ್ರೇಸ್, ಟ್ರ್ಯಾಕ್, ಟೆಸ್ಟ್ ಮತ್ತು ಟ್ರೀಟ್) ಯೋಜನೆಯೊಂದಿಗೆ ಕರ್ನಾಟಕವು ಅತ್ಯಂತ ಸಮರ್ಥವಾಗಿ ಕೋವಿಡ್ ಸಂಕಷ್ಟವನ್ನು ಎದುರಿಸುತ್ತಿದ್ದು ಹೆಚ್ಚಿನ ಪ್ರಯೋಗಾಲಯಗಳನ್ನು ಹೊಂದುವುದರಿಂದ ಹೆಚ್ಚು ಟೆಸ್ಟ್ ಗಳನ್ನು ಕಡಿಮೆ ಅವಧಿಯಲ್ಲಿ ನಡೆಸಬಹುದಾಗಿದೆ. ಇದರಿಂದ ಚಿಕಿತ್ಸೆಗೆ ಅನುಕೂಲವಾಗಿದ್ದು ಕೋವಿಡ್ ನಿಯಂತ್ರಿಸುವ ಮತ್ತು ಸೋಂಕಿತರನ್ನು ಗುಣಮುಖರನ್ನಾಗಿ ಮಾಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಿದೆ.

  • ಕೊರೊನಾ ವೈರಸ್ ಲ್ಯಾಬ್‍ನಲ್ಲಿ ಸೃಷ್ಟಿಯಾಗಿಲ್ಲ- WHO ಹೇಳಿಕೆಯನ್ನು ಮುಂದಿಟ್ಟ ಚೀನಾ

    ಕೊರೊನಾ ವೈರಸ್ ಲ್ಯಾಬ್‍ನಲ್ಲಿ ಸೃಷ್ಟಿಯಾಗಿಲ್ಲ- WHO ಹೇಳಿಕೆಯನ್ನು ಮುಂದಿಟ್ಟ ಚೀನಾ

    – ಲ್ಯಾಬ್‍ನಲ್ಲಿ ಸೃಷ್ಟಿಯಾಗಿದ್ದಕ್ಕೆ ಯಾವುದೇ ಸಾಕ್ಷಿ ಇಲ್ಲ

    ಬೀಜಿಂಗ್: ಲ್ಯಾಬ್‍ನಲ್ಲಿ ಕೊರೊನಾ ವೈರಸ್ ಸೃಷ್ಟಿ ಮಾಡಿರುವುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಎರಡು ಬಾರಿ ಹೇಳಿದೆ ಎಂದು ಚೀನಾ ತಿಳಿಸಿದೆ.

    ಇಂದು ಇಡೀ ವಿಶ್ವಕ್ಕೆ ದೊಡ್ಡ ತಲೆನೋವಾಗಿರುವ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ. ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡ ಸೋಂಕು ಇಂದು ವಿಶ್ವವ್ಯಾಪಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆದರೆ ಇದನ್ನು ಚೀನಾ ಬಯೋವೆಪನ್ ಆಗಿ ಬಳಸುತ್ತಿದೆ. ಇದು ಚೀನಾದ ಲ್ಯಾಬ್‍ನಲ್ಲಿ ತಯಾರದ ಭಯಾನಕ ವೈರಸ್ ಎಂಬ ಮಾತುಗಳು ಜಾಗತಿಕ ಮಟ್ಟದಲ್ಲಿ ಕೇಳಿ ಬಂದಿದ್ದವು. ಇದನ್ನು ಓದಿ: ಕೊರೊನಾ ವೈರಸ್ ಸೃಷ್ಟಿ ಆಗಿದ್ದು ಎಲ್ಲಿ – ರಹಸ್ಯ ಭೇದಿಸಲು ಹೊರಟ ಅಮೆರಿಕ

    ಈ ಮಾತುಗಳನ್ನು ಚೀನಾ ಮುಂಚೆಯಿಂದಲೂ ತಳ್ಳಿ ಹಾಕಿಕೊಂಡು ಬಂದಿತ್ತು. ಈಗ ಮತ್ತೆ ಈ ವಿಚಾರವಾಗಿ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝೋವೋ ಲಿಜಿಯಾನ್, ಕೊರೊನಾ ಚೀನಾದ ವೈರಸ್ ಅಲ್ಲ. ಇದು ಯಾವುದೇ ಪ್ರಯೋಗಾಲಯಗಳಲ್ಲಿ ಮಾಡಲ್ಪಟ್ಟ ವೈರಸ್ ಅಲ್ಲ. ಇದಕ್ಕೆ ಯಾವುದೇ ಸಾಕ್ಷಿ ಕೂಡ ಇಲ್ಲ. ಇದೇ ಮಾತನ್ನು ವಿಶ್ವ ಆರೋಗ್ಯ ಸಂಸ್ಥೆ ಎರಡು ಬಾರಿ ಹೇಳಿದೆ ಎಂದು ಹೇಳಿದ್ದಾರೆ.

    ಬುಧವಾರ ಮಾತನಾಡಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಸಂಭವಿಸಿರುವ ಈ ಭಯಾನಕ ಪರಿಸ್ಥಿತಿ ಯಾಕೆ ಸೃಷ್ಟಿ ಆಗಿದೆ ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದರು. ಟ್ರಂಪ್ ಅವರ ಪ್ರತಿಕ್ರಿಯೆಗೆ ಮಾಧ್ಯಮಗಳು ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಬಳಿ ಈ ಬಗ್ಗೆ ನೀವು ಮಾತನಾಡಿದ್ದೀರಾ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಲ್ಯಾಬ್ ಬಗ್ಗೆ ಮಾತನಾಡಿದ ವಿಚಾರವನ್ನು ಚರ್ಚಿಸಲು ಇಷ್ಟ ಪಡುವುದಿಲ್ಲ. ಈ ವಿಚಾರವನ್ನು ಚರ್ಚಿಸುವ ಸರಿಯಾದ ಸಮಯ ಇದಲ್ಲ ಎಂದು ಉತ್ತರಿಸಿದ್ದರು. ಇದನ್ನು ಓದಿ: ಕೊರೊನಾ ಚೀನಾ ವೈರಸ್ ಅನ್ನಬೇಡಿ: ಭಾರತಕ್ಕೆ ಚೀನಾ ಮನವಿ

    ಈ ಹಿಂದೆಯೂ ಕೂಡ ಟ್ರಂಪ್ ಅವರು ಕೊರೊನಾ ವೈರಸ್ ನ್ನು ಚೀನಾ ವೈರಸ್ ಎಂದು ಹೇಳಿದ್ದರು. ಈ ವಿಚಾರವಾಗಿ ಕಿಡಿಕಾರಿದ್ದ ಚೀನಾ ಕೆಲ ಅಮೆರಿಕದವರು ಬೇಕು ಎಂದೇ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಹೇಳುತ್ತಿದ್ದಾರೆ. ಯಾವುದೇ ಒಂದು ವೈರಸ್ ಅನ್ನು ಒಂದು ದೇಶಕ್ಕೆ ಸೀಮಿತಗೊಳಿಸುವುದು ತಪ್ಪು ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ ಎಂದು ಜಾಗತಿಕ ಮಟ್ಟದಲ್ಲಿ ಕೊರೊನಾ ಚೀನಾ ವೈರಸ್ ಅಲ್ಲ ಎಂದು ಅಭಿಯಾನ ಆರಂಭಿಸಿತ್ತು.

    ಒಂದು ಭಯಾನಕ ವೈರಸ್ ಅನ್ನು ಒಂದು ದೇಶಕ್ಕೆ ಸೀಮಿತ ಮಾಡಿದರೆ, ಅದೂ ದೇಶದ ಮುಂದಿನ ಬೆಳವಣಿಗೆಗೆ ಮಾರಕವಾಗುತ್ತದೆ. ಈ ಕಾರಣಕ್ಕೆ ಕೊರೊನಾವನ್ನು ಚೀನಾ ವೈರಸ್ ಎನ್ನಬೇಡಿ ಎಂದಿತ್ತು. ಜೊತೆಗೆ ಭಾರತ ಕೊರೊನಾ ವೈರಸ್ ಅನ್ನು ಚೀನಾ ವೈರಸ್ ಎಂದು ಕರೆಯುವ ಸಂಕುಚಿತ ಮನೋಭಾವನೆಯನ್ನು ಹೊಂದಿಲ್ಲ ಎಂದು ಚೀನಾ ರಾಯಭಾರಿ ಅಂದು ಹೇಳಿದ್ದರು.

  • ಖಾಸಗಿ ಲ್ಯಾಬ್‍ಗಳಲ್ಲಿ ಕೊರೊನಾ ಟೆಸ್ಟ್- ಜನರ ಶುಲ್ಕ ಮರುಪಾವತಿಸಬಹುದೇ?

    ಖಾಸಗಿ ಲ್ಯಾಬ್‍ಗಳಲ್ಲಿ ಕೊರೊನಾ ಟೆಸ್ಟ್- ಜನರ ಶುಲ್ಕ ಮರುಪಾವತಿಸಬಹುದೇ?

    – ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

    ನವದೆಹಲಿ: ಖಾಸಗಿ ಲ್ಯಾಬ್ ಗಳಲ್ಲಿ ಕೊರೊನಾ ಸೋಂಕು ಪರೀಕ್ಷೆ ನಡೆಸುವ ಶುಲ್ಕವನ್ನು ಸರ್ಕಾರ ಭರಿಸಲು ಅಥವಾ ಮರುಪಾವತಿಸಲು ಸಾಧ್ಯವೇ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದೆ.

    ಕೊರೊನಾ ವೈರಸ್ ಸೋಂಕು ಪರೀಕ್ಷೆ ನಡೆಸಲು ಖಾಸಗಿ ಲ್ಯಾಬ್‍ಗಳು ಹೆಚ್ಚಿನ ಹಣ ಪಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಮತ್ತು ಎಲ್ಲರಿಗೂ ಉಚಿತವಾಗಿ ಟೆಸ್ಟ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ವಕೀಲ ಶಶಾಂಕ್ ದಿಯೋ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಶೋಕ್ ಭೂಷಣ್ ನೇತೃತ್ವದ ದ್ವಿ ಸದಸ್ಯ ಪೀಠ ಕೇಂದ್ರ ಸರ್ಕಾರಕ್ಕೆ ಹೀಗೆ ಪ್ರಶ್ನಿಸಿದೆ.

    ದೇಶದಲ್ಲಿ 5000 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಮತ್ತಷ್ಟು ಹೆಚ್ಚಿನ ಪರೀಕ್ಷೆಗಳು ನಡೆಯುತ್ತಿದೆ. ಪರೀಕ್ಷೆ ನಡೆಸುವ ಕೆಲ ಖಾಸಗಿ ಲ್ಯಾಬ್ ಗಳು ಹೆಚ್ಚಿನ ಹಣ ಪಡೆಯುವ ಸಾಧ್ಯತೆ ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದರು.

    ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಖಾಸಗಿ ಲ್ಯಾಬ್ ಗಳಲ್ಲಿ ಉಚಿತ ಪರೀಕ್ಷೆ ನಡೆಸುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು. ದೇಶದ 118 ಸರ್ಕಾರಿ ಲ್ಯಾಬ್ ಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಇದು ಸಾಕಾಗುತ್ತಿಲ್ಲ. ಈ ಹಿನ್ನೆಲೆ ಖಾಸಗಿ 47 ಲ್ಯಾಬ್ ಗಳಿಗೆ ಪರವಾನಿಗೆ ನೀಡಿದೆ. ದೇಶದಲ್ಲಿ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆ ಖಾಸಗಿ ಲ್ಯಾಬ್ ಗಳಿಗೆ ಅವಕಾಶ ನೀಡಿದೆ ಎಂದು ವಿವರಿಸಿದರು.

    ಖಾಸಗಿ ಲ್ಯಾಬ್ ಗಳು ಹೆಚ್ಚಿನ ಶುಲ್ಕ ವಿಧಿಸದಂತೆ ಎಚ್ಚರಿಕೆ ವಹಿಸಬೇಕು ಮತ್ತು ಈ ಶುಲ್ಕವನ್ನು ಸರ್ಕಾರ ಮರುಪಾವತಿ ಮಾಡುವ ಬಗ್ಗೆ ಪರಿಶೀಲಿಸಿ ಎಂದು ನ್ಯಾ. ಅಶೋಕ್ ಭೂಷಣ್ ಸಲಹೆ ನೀಡಿದರು. ಅಲ್ಲದೇ ಖಾಸಗಿ ಲ್ಯಾಬ್‍ಗಳು ಅಗತ್ಯ ಕಡೆಗಳಿಂದ ಸೂಕ್ತ ಪರವಾನಿಗೆ ಪಡೆದಿವೆಯೋ ಇಲ್ಲವೇ ಅನ್ನೊದು ಖಾತ್ರಿಪಡಿಸಿಕೊಳ್ಳಬೇಕು ಎಂದರು.

    ಈ ವೇಳೆ ಅರ್ಜಿದಾರ ವಕೀಲ ಶಶಾಂಕ್ ದಿಯೋ ಖಾಸಗಿ ಲ್ಯಾಬ್ ಗಳಲ್ಲಿ ಪರೀಕ್ಷೆ ಗೆ 4, 500 ಶುಲ್ಕ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಿಗದಿ ಮಾಡಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥಿತ ಪರೀಕ್ಷೆಗಳು ನಡೆಯದ ಮತ್ತು ಅಲ್ಲಿ ಜನರ ಸಂಖ್ಯೆ ಹೆಚ್ವಿರುವ ಕಾರಣ ಹೆಚ್ಚಿನವರು ಖಾಸಗಿ ಲ್ಯಾಬ್ ಗಳತ್ತ ಮುಖ ಮಾಡಲಿದ್ದಾರೆ ಎಂದು ವಾದಿಸಿದರು.