Tag: ಲ್ಯಾಗ್ ಮಂಜು

  • ದಿವ್ಯಳನ್ನು ಬಿಗ್‍ ಮನೆಯಿಂದ ಕಳಿಸಿಕೊಡ್ಬೇಕು ಅಂತ ಮಂಜು ಹೇಳಿದ್ಯಾಕೆ..?

    ದಿವ್ಯಳನ್ನು ಬಿಗ್‍ ಮನೆಯಿಂದ ಕಳಿಸಿಕೊಡ್ಬೇಕು ಅಂತ ಮಂಜು ಹೇಳಿದ್ಯಾಕೆ..?

    ಬೆಂಗಳೂರು: ಬಿಗ್‍ಬಾಸ್ ಸೀಸನ್ 8ರ ಮೊದಲ ವೀಕೆಂಡ್ ಎಪಿಸೋಡ್ ಪ್ರಸಾರವಾಗಿದೆ. ‘ವಾರದ ಕಥೆ ಕಿಚ್ಚನ ಜೊತೆ’ಯಲ್ಲಿ ಸುದೀಪ್ ಎಂದಿನಂತೆ ತಮ್ಮ ಮಾತುಗಾರಿಕೆ, ಹಾಸ್ಯದಿಂದ ಮನೆಯ ಸದಸ್ಯರು ತಮ್ಮ ಮಾತಿಗೆ ತಲೆದೂಗುವಂತೆ ಮಾಡಿದರು. ಅಂತೆಯೇ ಸುದೀಪ್ ಅವರು ಎಲ್ಲರ ಬಳಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಹೇಳಿದರು.

    ಹೌದು. ಬಿಗ್ ಮನೆಯಲ್ಲಿ ಅತ್ಯಂತ ಉತ್ಸಾಹದಿಂದ ಮನೆಮಂದಿಯನ್ನು ನಗಿಸುವ ಲ್ಯಾಗ್ ಮಂಜು ಬಳಿ ಮನೆಯ ಸದಸ್ಯರ ಯಾವ ಒಂದು ವಿಚಾರ ಒಳ್ಳೆಯದಿದೆ ಹಾಗೂ ಈ ಒಂದು ವಿಚಾರದಿಂದ ಅವರಿಂದ ದೂರ ಇರಬೇಕು ಎಂಬುದನ್ನು ತಿಳಿಸುವಂತೆ ಹೇಳುತ್ತಾರೆ. ಅಲ್ಲದೆ ಕಿಚ್ಚ ಅವರು ಒಬ್ಬೊಬ್ಬರ ಹೆಸರನ್ನು ಹೇಳುತ್ತಾ ಬಂದರು. ದಿವ್ಯ ಉರುಗುಡ ಹೆಸರು ಹೇಳುತ್ತಿದ್ದಂತೆಯೇ ಮಂಜು ಆಕೆಯಿಂದ ಇದೇ ವಿಚಾರಕ್ಕೆ ಹುಷಾರಾಗಿರಬೇಕು ಎಂದರು.

    ಸ್ಪೋರ್ಟ್, ಟಾಸ್ಕ್ ಅಂತ ಬಂದಾಗ ದಿವ್ಯ ಯಾರನ್ನೂ ಲೆಕ್ಕಕ್ಕೆ ತಗೊಳಲ್ಲ. ರಾಕ್ಷಸಿಯಂತೆ ಒಬ್ಬಳೇ ಸಿಕ್ಕಾಪಟ್ಟೆ ಫೈಟ್ ಮಾಡ್ತಾಳೆ. ಇದು ನನಗೆ ತುಂಬಾ ಒಳ್ಳೆಯ ವಿಚಾರ ಅಂದ್ರು.

    ಇನ್ನು ತುಂಬಾ ಹುಷಾರಾಗಿರಬೇಕಾದ ವಿಚಾರ ಅಂದ್ರೆ ಫಸ್ಟ್ ಅವಳನ್ನು ಇಲ್ಲಿಂದ ಕಳಿಸಬೇಕು ಅನ್ನೋದಾಗಿದೆ ಅಂದ್ರು. ಲ್ಯಾಗ್ ಮಂಜು ಹೀಗೆ ಹೇಳ್ತಿದ್ದಂದೆ ಕಿಚ್ಚ ಸೇರಿದಂತೆ ಮನೆ ಮಂದಿಯೆಲ್ಲಾ ಜೋರಾಗಿ ನಕ್ಕರು. ಇತ್ತ ಮಂಜು ಹೀಗೆ ಹೇಳ್ತಿದ್ದಂತೆ ದಿವ್ಯ ಅವರು ಮಂಜು…… ಅಂತ ನಗುವಿನ ಜೊತೆ ಸಿಟ್ಟು ಹೊರಹಾಕಿದ ಪ್ರಸಂಗವೂ ನಡೆಯಿತು.

  • ಅಯ್ಯಯ್ಯೋ ನಾನು ತಿಳ್ಕೊಂಡು ನಿಧಿ ಸುಬ್ಬಯ್ಯ ಅಲ್ಲ ಅವ್ರು: ಲ್ಯಾಗ್ ಮಂಜು

    ಅಯ್ಯಯ್ಯೋ ನಾನು ತಿಳ್ಕೊಂಡು ನಿಧಿ ಸುಬ್ಬಯ್ಯ ಅಲ್ಲ ಅವ್ರು: ಲ್ಯಾಗ್ ಮಂಜು

    – ಸುದೀಪ್ ಮುಂದೆ ಮಂಜು ಕಂಪ್ಲೇಂಟ್
    – ನಿಧಿ ಸುಬ್ಬಯ್ಯ ಕೊಳಕಾಗಿ ಬೈತಾರೆ ಸರ್!

    ಬೆಂಗಳೂರು: ಬಿಗ್‍ಬಾಸ್ ಸೀಸನ್ ಎಂಟರ ಆವೃತ್ತಿಯ ಮೊದಲ ವೀಕೆಂಡ್ ನಲ್ಲಿ ಒಂಟಿ ಮನೆಯ ಮಂದಿ ತಮ್ಮ ಅನುಭವಗಳನ್ನ ಅಭಿನಯ ಚಕ್ರವರ್ತಿ ಸುದೀಪ್ ಜೊತೆ ಹಂಚಿಕೊಂಡರು. ಮೊದಲ ವಾರ ಯಶಸ್ವಿಯಾಗಿ ಪೂರೈಸಿದ ಸೆಲೆಬ್ರಿಟಿಗಳ ತಮ್ಮಲ್ಲಾದ ಸಣ್ಣ ಪುಟ್ಟ ಗೊಂದಲಗಳನ್ನ ಪೈಲ್ವಾನ ಮುಂದೆ ಹೇಳಿ ಬಗೆಹರಿಸಿಕೊಂಡರು. ಇನ್ನು ಸುದೀಪ್ ಸಹ ಎಂದಿನಂತೆ ಎಲ್ಲರ ಜೊತೆ ಫ್ರೆಂಡ್ಲಿಯಾಗಿ ಮಾತನಾಡುತ್ತಾ ತಮಾಷೆಗೆ ಕೆಲವರ ಕಾಲೆಳೆದು ಟಿವಿ ಮುಂದೆ ಕುಳಿತ ವೀಕ್ಷಕರನ್ನ ನೆಗೆಗಡಿಲಿನಲ್ಲಿ ತೇಲಿಸಿದರು. ಸುದೀಪ್ ಜೊತೆ ಮಾತನಾಡುತ್ತಾ ಕಾಮಿಡಿ ಆ್ಯಕ್ಟರ್ ಪಾವಗಡದ ಮಂಜು, ನಾನು ತಿಳಿದ ನಿಧಿ ಸುಬ್ಬಯ್ಯ ಇವರು ಅಲ್ಲವೇ ಅಲ್ಲ ಎಂದು ಹೇಳಿದರು.

    ವೀಕೆಂಡ್‍ನಲ್ಲಿ ಸುದೀಪ್ ಮುಂದೆ ಮಂಜು ಹೇಳಿದ ಕಂಪ್ಲೇಂಟ್ ಇದು. ನಿಧಿ ಸುಬ್ಬಯ್ಯ ನಾವ್ ತಿಳ್ಕೊಂಡೆ ಇಲ್ಲ ಸರ್.. ತುಂಬಾನೇ ಕೆಟ್ಟದಾಗಿ ಕೊಳಕಾಗಿ ಬೈತಾರೆ ಸರ್. ಚುಚ್ಚಿ ಬಿಡ್ತೀನಿ, ಸಾಯಿಸಿ ಬಿಡ್ತೀನಿ ಅಂತ ಪಕ್ಕದಲ್ಲಿ ಇರೋರಿಗೂ ಗೊತ್ತಾಗದಂತೆ ಬೈತಾರೆ. ಏನೇನು ಮಾತಾಡ್ತಾರೆ ಅವರು. ನನ್ನ ದುರಾದೃಷ್ಟಕ್ಕೆ ನನಗೊಬ್ಬನಿಗೆ ಕೇಳಿಸುತ್ತೆ. ಯಾರು ಹೇಳಿದ್ರೂ ನಂಬಲ್ಲ ಸರ್ ಅಂತ ಸುದೀಪ್ ಮುಂದೆ ಬಡ ಬಡ ಅಂತ ವರದಿ ಒಪ್ಪಿಸಿದ್ರು ಮಂಜು.

    ಅರೇ ಇಷ್ಟಕ್ಕೂ ಮಂಜು ಯಾಕೆ ಹೀಗೆ ಹೇಳಿದ್ರೂ ಅಂತ ನೀವು ಯೋಚಿಸ್ತಿದ್ದಾರೆ ಅಲ್ವಾ.. ನಾವ್ ಹೇಳ್ತೀವಿ ನೋಡಿ. ವೀಕೆಂಡ್ ಚರ್ಚೆ ವೇಳೆ ಸುದೀಪ್, ಮನೆಯಲ್ಲಿರೋರ ಪಾಸಿಟಿವ್ ಮತ್ತು ನೆಗೆಟಿವ್ ಗುಣ ಹೇಳುವಂತೆ ಮಂಜುಗೆ ಹೇಳಿದ್ರು. ಮೊದಲು ದಿವ್ಯಾ ಹೆಸರು ಹೇಳಿದಾಗ ಎಲ್ಲರ ಜೊತೆ ಬೆರಿತಾಳೆ ಅಂತ ಅಂದುಕೊಳ್ಳೋ ರೀತಿ ಇರ್ತಾಳೆ. ಆದ್ರೆ ಹಾಗೆ ಇರಲ್ಲ. ದಿವ್ಯಾ ತುಂಬಾ ಕನ್ನಿಂಗ್ ಇರ್ತಾರೆ ಹಾಗಾಗಿ ಅವರ ಹತ್ರ ಹುಷಾರಾಗಿ ಇರಬೇಕು ಅಂತ ಮಂಜು ಹೇಳಿದಾಗ ಇಡೀ ಮನೆಯ ಮಂದಿಯೆಲ್ಲ ನಗೆಗಡಿಲಿನಲ್ಲಿ ತೇಲಾಡಿದ್ರು. ಅದೇ ರೀತಿ ನಿಧಿ ಸುಬ್ಬಯ್ಯ ಹೆಸ್ರು ಹೇಳಿದಾಗಲೂ ಮಂಜು ಫನ್ನಿಯಾಗಿ ಆನ್ಸರ್ ಮಾಡಿ ಎಲ್ಲರನ್ನ ನಗಿಸಿದ್ರು.

  • ‘ಬಿಗ್’ ಮನೆಯಲ್ಲಿ ಸಂಬರ್ಗಿ, ಮಂಜು ನಡುವೆ ಮಾವ-ಅಳಿಯ ಆಟ..!

    ‘ಬಿಗ್’ ಮನೆಯಲ್ಲಿ ಸಂಬರ್ಗಿ, ಮಂಜು ನಡುವೆ ಮಾವ-ಅಳಿಯ ಆಟ..!

    ಬೆಂಗಳೂರು: ಬಿಗ್ ಬಾಸ್ ಸೀಸನ್-8 ದಿನದಿಂದ ದಿನಕ್ಕೆ ಸಖತ್ ಕಲರ್ ಫುಲ್ ಆಗ್ತಿದೆ. ಟಾಸ್ಕ್, ಜಗಳ, ಮಜಾ, ನಗು ಎಲ್ಲದರ ಹೂರಣ ಕಿರುತೆರೆ ಪ್ರೇಕ್ಷಕರಿಗೆ ಸಿಕ್ತಿದೆ. ಅದ್ರಲ್ಲೂ ಲ್ಯಾಗ್ ಮಂಜು ಮನೆಮಂದಿಯನ್ನು ಸಿಕ್ಕಾಪಟ್ಟೆ ನಗಿಸ್ತಿದ್ದಾರೆ. ಮೈಕ್ ಹಾಕಿ ದಿವ್ಯಾ ಜೊತೆ ಮದುವೆಯಾಗಿದ್ದ ಮಂಜು ಅಂದಿನಿಂದ ಪ್ರಶಾಂತ್ ಸಂಬರ್ಗಿಯನ್ನು ಮಾವ ಮಾವ ಅಂತಾ ರೇಗಿಸಿ ಹಾಸ್ಯ ಮಾಡ್ತಿದ್ರು. ಇದೀಗ ಮಂಜು ಒಂಟಿ ಮನೆಯಿಂದ ಹೊರಗಡೆ ಹೋದ್ಮೇಲೆ ಪ್ರಶಾಂತ್ ಸಂಬರ್ಗಿಯನ್ನು ಮಾವ ಅಂತಾ ಕರೆಯುತ್ತಾರಂತೆ.

    ನಾಲ್ಕನೇ ದಿನ ದೊಡ್ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತುಕೊಂಡಿದ್ರು. ಈ ವೇಳೆ ಮಂಜು ಪಾವಗಡ ನಾನು ಎಲ್ಲೇ ಹೋದ್ರೂ ನನ್ನ ಮಾವನನ್ನು ಕರೆದುಕೊಂಡು ಹೋಗ್ತೀನಿ. ಯಾರೂ ಏನೂ ಹೇಳಲ್ಲ. ಅವ್ರ ಹೆಸ್ರು ಕೇಳಿದ್ರೆ ಎಲ್ರೂ ಭಯ ಬೀಳ್ತಾರೆ. ನಾನು ಬಿಗ್ ಬಾಸ್ ಮುಗಿದ್ಮೇಲೆ ಯಾರಾದ್ರೂ ನನಗೆ ಏನಾದ್ರೂ ಹೇಳಿದ್ರೆ ನನ್ನ ಮಾವ ಸಂಬರ್ಗಿ ಅಂತ ಹೇಳ್ತೀನಿ, ಏನೇ ಹೇಳಿದ್ರೂ ನನ್ನ ಮಾವನ ಹೆಸ್ರು ಹೇಳ್ತೀನಿ. ನನಗೆ ಸಮಸ್ಯೆಯೇ ಆಗೋದಿಲ್ಲ ಅಂತ ಮಂಜು ಪಾವಗಡ ಹೇಳಿದ್ರು. ಲ್ಯಾಗ್ ಮಂಜು ಹೀಗೆ ಹೇಳ್ತಿದ್ದಂತೆ ಮನೆ ಮಂದಿಯಲ್ಲ ಬಿದ್ದು ಬಿದ್ದು ನಕ್ಕಿದ್ರು.

    ಅಷ್ಟಕ್ಕೂ ಮಂಜು ಪ್ರಶಾಂತ್ ಸಂಬರ್ಗಿಯಿಂದ ಬಯಸುತ್ತಿರುವುದೇನು…? ಸಂಬರ್ಗಿಯ ನೇರ ನುಡಿ ಮಾತುಗಳನ್ನಾ…? ಇಲ್ಲ ಬೇರೆ ವಿಚಾರನಾ…? ಎಲ್ಲದಕ್ಕೂ ಉತ್ತರ ಸಿಗಬೇಕು ಅಂದ್ರೆ ಜಸ್ಟ್ ವೇಟ್ ಅಂಡ್ ವಾಚ್.