Tag: ಲ್ಯಾಗ್ ಮಂಜು

  • ಬಿಗ್‍ಬಾಸ್ ಮನೆಯಲ್ಲಿ ಮಂಜು ಕಲಿತಿದ್ದೇನು..?- ಮುಂದಿನ ಯೋಚನೆ, ಯೋಜನೆಗಳ ಬಗ್ಗೆ ವಿನ್ನರ್ ಮಾತು

    ಬಿಗ್‍ಬಾಸ್ ಮನೆಯಲ್ಲಿ ಮಂಜು ಕಲಿತಿದ್ದೇನು..?- ಮುಂದಿನ ಯೋಚನೆ, ಯೋಜನೆಗಳ ಬಗ್ಗೆ ವಿನ್ನರ್ ಮಾತು

    ಬೆಂಗಳೂರು: ಬಿಗ್ ಬಾಸ್ ಸೀಸನ್ 8ರಲ್ಲಿ ಮಂಜು ಪಾವಗಡ ಅವರು ವಿನ್ನರ್ ಆಗಿದ್ದಾರೆ. ಗೆದ್ದ ಖುಷಿಯಲ್ಲಿರುವ ಮಂಜು ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ದೊಡ್ಮೆನಯಲ್ಲಿ ಕಲಿತಿದ್ದೇನು ಹಾಗೂ ತಮ್ಮ ಮುಂದಿನ ಯೋಜನೆ, ಯೋಜನೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

    ಇದು ಬಿಗ್ ಬಾಸ್ ಅಲ್ಲ. ಇಲ್ಲಿ ನಾವು ಜೀವನದ ಪಾಠ ಕಲಿಯುತ್ತೇವೆ. ಜೀವನದಲ್ಲಿ ಪ್ರತಿಯೊಂದು ನಿರ್ಧಾರ ಎಷ್ಟು ಮುಖ್ಯ, ಯಾರ ಜೊತೆ ಸ್ನೇಹ ಮುಖ್ಯ, ಯಾವ ಸಮಯದಲ್ಲಿ ಯಾವ ನಿರ್ಧಾರ ಸೂಕ್ತವಾಗಿ ತೆಗೆದುಕೊಳ್ಳಬೇಕು. ಒಂದು ವೇಳೆ ನಾವು ತೆಗೆದುಕೊಂಡಿರುವ ನಿರ್ಧಾರ ತಪ್ಪಾಗಿದ್ದರೆ, ಅದಕ್ಕೆ ಮುಂದೆ ನಾವೇನು ಮಾಡಬೇಕು. ಕೂಡಲೇ ಕ್ಷಮೆ ಕೇಳಬೇಕಾ ಅಥವಾ ಯೋಚನೆ ಮಾಡಬೇಕಾ..?, ಒಂದು ಸಲ ನಿರ್ಧಾರ ತೆಗೆದುಕೊಳ್ಳಬೇಕಾದರೆ 10 ಸಲ ಯೋಚನೆ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಯೋಚನೆ ಮಾಡಿ ಮಾತಾಡಬೇಕು ಅನ್ನೋದನ್ನು ನಾನು ಬಿಗ್ ಬಾಸ್ ಮನೆಯಲ್ಲಿ ಕಲಿತಿದ್ದೇನೆ ಎಂದು ಹೇಳಿದರು.

    ಮುಂದಿನ ಯೋಜನೆ, ಯೋಚನೆಗಳೆನು..?
    ಸದ್ಯಕ್ಕೆ ಗೆದ್ದ ಖುಷಿಯಲ್ಲಿ ಏನು ಮಾಡಬೇಕು ಅಂತ ತೋಚುತ್ತಿಲ್ಲ. ಅಷ್ಟೇ ಅಲ್ಲದೆ ಮನೆಯಿಂದ ಹೊರಗಡೆ ಬಂದ ತಕ್ಷಣ ಜನರ ಪ್ರೀತಿ, ವಿಶ್ವಾಸ ಕಂಡು ಮೂಕನಾಗಿದ್ದೇನೆ ಎಂದು ಮಂಜು ತಿಳಿಸಿದರು. ಇದನ್ನೂ ಓದಿ: ಇಷ್ಟೊಂದು ದೊಡ್ಡ ಮೊತ್ತವನ್ನು ಜೀವನದಲ್ಲೇ ನೋಡಿಲ್ಲ: ಮಂಜು

    ಕಲಾವಿದನಾದವನು ಮುಂದಿನ ದಿನಗಳಲ್ಲಿ ಅವಕಾಶಗಳಿಗೆ ಕಾಯುವುದಾಗಿದೆ. ಒಳ್ಳೊಳ್ಳೆಯ ಅವಕಾಶ ಸಿಗಬೇಕು. ಮುಂದೆ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಆಸೆ ಇದೆ. ದೊಡ್ಡ ದೊಡ್ಡವರ ಜೊತೆ ನಟನೆ ಮಾಡಬೇಕು, ಒಳ್ಳೊಳ್ಳೆಯ ಪಾತ್ರಗಳು ಸಿಗಬೇಕು ಎಂಬುದೇ ನನ್ನ ದೊಡ್ಡ ಆಸೆಯಾಗಿದೆ ಎಂದರು.

    ಇಂತಹ ಕಥೆ ಮಾಡಬೇಕೆಂಬ ಯೋಚನೆಯಿಲ್ಲ. ಯಾಕಂದರೆ ನಾನೊಬ್ಬ ರಂಗಭೂಮಿ ಕಲಾವಿದ. ಹೀಗಾಗಿ ಇಂತದ್ದೇ ಪಾತ್ರ ಮಾಡಬೇಕು ಎಂಬ ಆಸೆ ಇಲ್ಲ. ನಾವೇನೇ ಮಾಡಿದರೂ ಜನಕ್ಕೋಸ್ಕರ. ಜನ ನನ್ನ ಇಷ್ಟಪಟ್ಟಿದ್ದಾರೆ. ಹೀಗಾಗಿ ಇದನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ನನಗೂ ಖುಷಿ ಇದೆ ಎಂದು ಹೇಳಿದರು. ಇದನ್ನೂ ಓದಿ: ದಿವ್ಯಾ ಸುರೇಶ್ ಬಗ್ಗೆ ಲ್ಯಾಗ್ ಮಂಜು ಹೇಳಿದ್ದೇನು..?

    ಒಟ್ಟಿನಲ್ಲಿ ಬಿಗ್ ಬಾಸ್ ತಂಡಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನನ್ನ ಜೀವನವನ್ನೇ ಬದಲಾಯಿಸಿದೆ. ಇಷ್ಟು ಜನರ ಪ್ರೀತಿ ವಿಶ್ವಾಸ ಕೊಟ್ಟಿದೆ. ಜನ ನನ್ನ ಇಷ್ಟೊಂದು ಇಷ್ಟ ಪಡುತ್ತಾರೆ ಅಂದುಕೊಂಡಿರಲಿಲ್ಲ. ಹೀಗಾಗಿ ನನ್ನನ್ನು ಆ ವೇದಿಕೆಗೆ ಕರೆದುಕೊಂಡು ಹೋದ ಬಿಗ್ ಬಾಸ್ ತಂಡಕ್ಕೆ ನಾನು ಯಾವತ್ತೂ ಚಿರಋಣಿಯಾಗಿರುವುದಾಗಿ ಲ್ಯಾಗ್ ಮಂಜು ಹೇಳಿದ್ದಾರೆ.

  • ಬಿಗ್‍ ಮನೆಯಲ್ಲಿ 55 ದಿನದ ಬಳಿಕ ಲ್ಯಾಗ್ ಮಂಜು ಹೇಳಿದ್ದೇನು ಗೊತ್ತಾ?

    ಬಿಗ್‍ ಮನೆಯಲ್ಲಿ 55 ದಿನದ ಬಳಿಕ ಲ್ಯಾಗ್ ಮಂಜು ಹೇಳಿದ್ದೇನು ಗೊತ್ತಾ?

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ದಿನಕಳೆದಂತೆ ಸ್ಪರ್ಧಿಗಳಿಗೆ ಬಿಗ್‍ಬಾಸ್ ಮನೆಯ ಅಸಲಿ ಕತೆ ಒಂದೊಂದಾಗಿ ಗೊತ್ತಾಗುತ್ತಿದೆ. ಬಿಗ್‍ಮನೆಗೆ ಬರುವ ಮುಂಚೆ ಇದ್ದಂತಹ ಕುತೂಹಲಗಳು ಇದೀಗ ಒಂದೊಂದಾಗಿ ಅನುಭವವಾಗಿ ಮಾರುತ್ತಿದೆ. ಈ ಮಧ್ಯೆ ಬಿಗ್‍ಬಾಸ್ ಮನೆಯಲ್ಲಿ 55 ದಿನ ಕಳೆದು ಮುನ್ನುಗ್ಗುತ್ತಿರುವ ಮಂಜು ಪಾವಗಡ ಅವರು ಮನೆಯ ಪರಿಸ್ಥಿತಿ ಹಾಗೂ ತಮ್ಮ ಅಭಿಪ್ರಾಯಾಗಳನ್ನು ಬಿಗ್‍ಬಾಸ್ ಕ್ಯಾಮೆರಾದ ಮುಂದೆ ನಿಂತು ಬಿಚ್ಚಿಟ್ಟಿದ್ದಾರೆ.

    ಮಧ್ಯರಾತ್ರಿ ಎದ್ದು ಬಿಗ್‍ಬಾಸ್ ಕ್ಯಾಮೆರಾದ ಮುಂದೆ ನಿಂತ ಮಂಜು, ಬಿಗ್‍ಬಾಸ್ ಎರಡು ದಿನಗಳಿಂದ ನೀವು ಕೊಟ್ಟ ಟಾಸ್ಕ್ ನಿಂದಾಗಿ ಕೆಲವರು ತುಂಬಾನೆ ಕಷ್ಟಪಡುತ್ತಿದ್ದಾರೆ. ಇಲ್ಲಿನ ಪರಿಸ್ಥಿತಿ ನನಗೆ ಈಗ ಸರಿಯಾಗಿ ಅರ್ಥವಾಗುತ್ತಿದೆ. ನಾನು ಬಿಗ್‍ ಮನೆಗೆ ಬರುವ ಮುಂಚೆ ಇಲ್ಲಿ ಯಾಕೆ ಈರೀತಿ ಜಗಳವಾಡಿಕೊಂಡು ಇರುತ್ತಾರೆ ಎಂದು ಅಂದುಕೊಂಡಿದ್ದೆ ಆದರೆ ಇದೀಗ ನನಗೆ ಇದೆಲ್ಲ ಯಾಕೆ ಎಂದು ಸರಿಯಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದರು.

    ಇಲ್ಲಿನ ಈಗಿನ ಸ್ಥಿತಿಯನ್ನು ಕಂಡು ನಾನು ತುಂಬಾ ಎಂಜಾಯ್ ಮಾಡುತ್ತಿದ್ದೇನೆ. ನನಗೆ ವಾರನುಗಟ್ಟಲೆ ಸ್ನಾನ ಮಾಡದೆ ಎಲ್ಲ ಅಭ್ಯಾಸ ಇದೆ. ಆದರೆ ಇಲ್ಲಿರುವ ಕೆಲವು ಸ್ಪರ್ಧಿಗಳು ದೊಡ್ಡ ದೊಡ್ಡ ಮನೆತನದಿಂದ ಬಂದವರು ಅವರಿಗೆ ಒಂದು ದಿನ ಸ್ನಾನ ಮಾಡಿಲ್ಲ ಅಂದ್ರು ಆಗುವುದಿಲ್ಲ. ಹಾಗಾಗಿ ಅವರು ತುಂಬಾ ಕಷ್ಟಪಡುತ್ತಿದ್ದಾರೆ. ಆದರೆ ನನಗೆ ಇದೆಲ್ಲ ಅಭ್ಯಾಸ ಇದೆ ಹಲ್ಲು ಉಜ್ಜಿದರು ಆಗುತ್ತದೆ ಇಲ್ಲದಿದ್ದರು ಆಗುತ್ತದೆ. ಅವರೆಲ್ಲರು ಕೂಡ ಸ್ನಾನ ಮಾಡಿ ಫಫ್ರ್ಯೂಮ್ ಹಾಕುತ್ತಾರೆ. ನಾನು ಅವರಂತೆ ಇರುವುದಕ್ಕೋಸ್ಕರ ಹಾಕಿಕೊಳ್ಳುತ್ತಿದ್ದೇನೆ. ನಾನಂತು ಈ ದಿನಗಳನ್ನು ತುಂಬಾ ಖುಷಿಯಿಂದ ಕಳೆಯುತ್ತಿದ್ದೇನೆ ಅದಕ್ಕಾಗಿ ನಿಮಗೆ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.

    ಬಿಗ್‍ಮನೆಯಲ್ಲಿ ದಿನಗಳು ಕಳೆಯುತ್ತಿದೆ. ಅದರಂತೆ ಸ್ಪರ್ಧಿಗಳು ಕೂಡ ತಮ್ಮ ತಮ್ಮ ಆಟದಲ್ಲಿ ಹೆಚ್ಚಿನ ಗಮನವಿಟ್ಟುಕೊಂಡು ಮುಂದೆ ಹೋಗಳು ಬಯಸುತ್ತಿದ್ದಾರೆ. ಇದರೊಂದಿಗೆ ಸಣ್ಣ ಸಣ್ಣ ಜಗಳ, ಟಾಸ್ಕ್, ಜೋಡಿ ಹಕ್ಕಿಗಳ ಮಾತು, ಹರಟೆ ಹೀಗೆ ನೋಡುಗರಿಗೆ ಖುಷಿ ನೀಡುತ್ತಿದೆ.

  • ದಿವ್ಯಾ ಸುರೇಶ್‍ನ ಇಷ್ಟಪಡ್ತಿದ್ದೀನೆಂದು ಮನಸಾರೆ ಹೇಳಿದ ಮಂಜು

    ದಿವ್ಯಾ ಸುರೇಶ್‍ನ ಇಷ್ಟಪಡ್ತಿದ್ದೀನೆಂದು ಮನಸಾರೆ ಹೇಳಿದ ಮಂಜು

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ದಿನಗಳು ಮುಂದೆ ಹೋಗುತ್ತಿದ್ದಂತೆ ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಕಾಲಕಳೆಯುತ್ತಿದ್ದಾರೆ. ಈ ನಡುವೆ ಕೆಲ ಸ್ಪರ್ಧಿಗಳಿಗೆ ಕೆಲವರಲ್ಲಿ ಪ್ರೀತಿ ಚಿಗುರೊಡೆದಿದೆ. ಇದೇ ಸಾಲಿನಲ್ಲಿ ಮಂಜು ಅವರು ಕೂಡ ದಿವ್ಯಾ ಸುರೇಶ್ ರನ್ನು ಕಂಡು ಮನಸಾರೆ ಇಷ್ಟಪಡುತ್ತಿದ್ದೇನೆಂದು ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ.

    ಶುಭಾ, ಮಂಜು ಬಳಿ ಬಂದು ನೀನು ನನ್ನ ಹಾಗೆ ಮನಸ್ಥಿತಿಯವನು, ನಿನಗೆ ಬೇರೊಬ್ಬರೊಂದಿಗೆ ಯಾವುದನ್ನು ಮುಚ್ಚಿಡಲು ಆಗುವುದಿಲ್ಲ. ಹಾಗಾಗಿ ನಿನ್ನ ಬಳಿ ಒಂದು ಪ್ರಶ್ನೆ ಕೇಳುತ್ತೇನೆ. ಪ್ರಾಮಾಣಿಕವಾಗಿ ಉತ್ತರ ಕೊಡು ಎಂದು ಉಪಾಯದಿಂದ ನಿನಗೆ ದಿವ್ಯಾ ಸುರೇಶ್ ಮೇಲೆ ನಿಜವಾಗಿಯೂ ಲವ್ ಆಗಿಲ್ವ, ಅವಳನ್ನು ಇಷ್ಟಪಡುತ್ತೀಯಾ ಎಂದು ಕೇಳಿದ್ದಾರೆ.

    ಶುಭಾ ಅವರ ಪ್ರಶ್ನೆಗೆ ಉತ್ತರಿಸಿದ ಮಂಜು 100% ಇಷ್ಟಪಡುತ್ತೇನೆ. ಆದರೆ ಆ ರೀತಿಯಲ್ಲ. ಕೆಲವೊಮ್ಮೆ ಅನಿಸುತ್ತದೆ ಆದರೆ ಅದು ನಿಜಜೀವನದಲ್ಲಿ ಆಗಲ್ಲ ಅನಿಸುತ್ತೆ. ಒಂದೊಮ್ಮೆ ಆಕೆಯೊಂದಿಗೆ ನಾನು ಪ್ರೀತಿ ವಿಷಯವಾಗಿ ಮಾತನಾಡಿದ್ದೆ. ಆಗ ದಿವ್ಯ ತನ್ನ ಕಷ್ಟಗಳನ್ನು ನನ್ನೊಂದಿಗೆ ಹೇಳಿಕೊಂಡಿದ್ದಾಳೆ. ಆಕೆ ಜೀವನದಲ್ಲಿ ತುಂಬಾ ನೊಂದಿದ್ದಾಳೆ. ಆಕೆಗೆ ನನ್ನಂತಹ ಒಬ್ಬ ಉತ್ತಮ ಸ್ನೇಹಿತ ಬೇಕಾಗಿದ್ದಾನೆ ಎಂದು ಅವಳ ಅಭಿಪ್ರಾಯವಾಗಿತ್ತು. ಹಾಗಾಗಿ ಅವಳೊಂದಿಗೆ ಸ್ನೇಹಿತನಾಗಿರುತ್ತೇನೆ. ಅವಳು ನನ್ನನ್ನು ತುಂಬಾ ಅರ್ಥ ಮಾಡಿಕೊಂಡಿದ್ದಾಳೆ. ಅದು ನನಗೆ ಖುಷಿ ಎಂದು ಶುಭಾ ಜೊತೆ ಮಂಜು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

    ಬಿಗ್‍ಮನೆಯಲ್ಲಿ ಇರುವಷ್ಟು ದಿನ ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಂಡಾಗ ಇಷ್ಟಪಡುವುದು ಸಹಜ. ಆದರೆ ಅದು ಮುಂದಿನ ದಿನಗಳಲ್ಲಿ ಯಾವ ರೀತಿ ಮುಂದುವರಿಯುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

  • ರಾಜೀವ್ ತಲೆಗೂದಲ ಮೇಲೆ ಬಿತ್ತು ಲ್ಯಾಗ್ ಮಂಜು ಕಣ್ಣು!

    ರಾಜೀವ್ ತಲೆಗೂದಲ ಮೇಲೆ ಬಿತ್ತು ಲ್ಯಾಗ್ ಮಂಜು ಕಣ್ಣು!

    ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಮನೆಯ ಸದಸ್ಯರಿಗೆ, ಪಿಸಿಕಲ್ ಟಾಸ್ಕ್, ಕ್ವೀಜ್ ಹೀಗೆ ಹಲವು ರೀತಿಯ ಟಾಸ್ಕ್‍ಗಳನ್ನು ನೀಡಿರುವುದನ್ನು ನೋಡಿದ್ದೇವೆ. ಅಲ್ಲದೆ ಈ ಹಿಂದಿನ ಸೀಸನ್‍ಗಳಲ್ಲಿ ಕೂದಲಿನ ಮೇಲೆ ಪ್ರೀತಿ ಇಟ್ಟುಕೊಂಡಿದ್ದ ಕೆಲ ಸದಸ್ಯರ ಹೇರ್ ಕಟ್ ಮಾಡಿಸಿರುವುದನ್ನು ನೋಡಿದ್ದೇವೆ. ಸದ್ಯ ಬಿಗ್‍ಬಾಸ್ ಸೀಸನ್-8ರಲ್ಲಿ ಮನೆಯ ಎಲ್ಲಾ ಪುರುಷ ಸದಸ್ಯರಲ್ಲಿ ಹೆಚ್ಚು ತಲೆಕೂದಲು ಹೊಂದಿರುವವರು ಎಂದರೆ ರಾಜೀವ್.

    ಲಾಂಗ್ ಹೇರ್ ಬೆಳೆಸಿಕೊಂಡು ಸಖತ್ ಸ್ಟೈಲಿಶ್ ಆಗಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟವರು ರಾಜೀವ್. ಕೂದಲು ಬಗ್ಗೆ ಅದೇನೋ ಒಂದು ರೀತಿಯ ಪ್ರೀತಿ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ನಿನ್ನೆ ರಾಜೀವ್ ಜುಟ್ಟು ಬಿಟ್ಟುಕೊಂಡು ಮನೆಯಲ್ಲಿ ಓಡಾಡುತ್ತಿರುತ್ತಾರೆ. ಇದನ್ನು ನೋಡಿ ಮಂಜು ಬಿಗ್‍ಬಾಸ್‍ಗೆ ಪರೋಕ್ಷವಾಗಿ ರಾಜೀವ್ ಕೂದಲಿಗೆ ಕತ್ತರಿ ಹಾಕಿಸುವಂತೆ ಕ್ಲೂ ನೀಡಿದ್ದಾರೆ.

    ಅಣ್ಣ ಈ ಟೈಮ್‍ನಲ್ಲಿ ಕೂದಲು ಜಾಸ್ತಿ ಇರಬಾರದು. ಯಾಕೆಂದರೆ ನಾವು ತಿನ್ನುವ ಊಟವನ್ನೆಲ್ಲಾ ಕೂದಲೇ ಹೆಚ್ಚಾಗಿ ತಿನ್ನುತ್ತದೆ ಎನ್ನುತ್ತಾರೆ. ಆಗ ರಾಜೀವ್ ಹೋದರೆ ಹೋಗಲಿ ಬಿಡು ಎಂದು ಹೇಳುತ್ತಾರೆ. ಈ ವೇಳೆ ಮಂಜು ಬಿಗ್‍ಬಾಸ್ ನಾನು ನಿಮಗೊಂದು ರಿಕ್ವೆಸ್ಟ್ ಮಾಡುತ್ತೇನೆ. ನಮ್ಮಣ್ಣ ಬಹಳ ಸಣ್ಣ ಆಗುತ್ತಿದ್ದಾರೆ. ಆಗ ರಾಜೀವ್ ಮಂಜು ಬೇಡ ಏನು ಹೇಳಬೇಡ ಪ್ಲೀಸ್ ಸುಮ್ಮನಿದ್ದು ಬಿಡು, ಕೂದಲು ಬಗ್ಗೆ ಏನು ಮಾಡಬೇಡ. ಬಿಗ್‍ಬಾಸ್ ಜೊತೆ ಯಾಕೋ ಜಗಳ ಮಾಡುತ್ತಿದ್ದೀಯಾ ಎಂದು ತಲೆ ಮೇಲೆ ಕೈ ಹಿಡಿದುಕೊಳ್ಳುತ್ತಾರೆ. ಅದಕ್ಕೆ ಮಂಜು ಇಲ್ಲ ಅಣ್ಣ ಬರೀ ಹೇಳಿದ್ದಷ್ಟೇ ಎನ್ನುತ್ತಾ, ಚೆನ್ನಾಗಿರುವುದಿಲ್ಲ ಬಿಗ್‍ಬಾಸ್ ನಮ್ಮ ಅಣ್ಣನ ಕೂದಲಿಗೆ ಏನಾದರೂ ಮಾಡಿದರೇ ಎಂದು ಕೈ ಸನ್ನೆ ಮೂಲಕ ಕತ್ತರಿಸುವಂತೆ ಕ್ಯಾಮೆರಾ ಮುಂದೆ ಹಾಸ್ಯಮಯವಾಗಿ ಅವಾಜ್ ಹಾಕುತ್ತಾರೆ.

    ಈ ವೇಳೆ ಮನೆ ಮಂದಿಯೆಲ್ಲಾ ರಾಜೀವ್ ನಿಮ್ಮ ಕೂದಲು ಕತ್ತರಿಸಲೆಂದು ಮಂಜು ಬಿಗ್‍ಬಾಸ್‍ಗೆ ಫಿಟ್ಟಿಂಗ್ ಹಾಕಿಕೊಡುತ್ತಿದ್ದಾರೆ ಎಂದು ಹೇಳುತ್ತಾರೆ. ಅಲ್ಲದೆ ಇತ್ತೀಚೆಗಷ್ಟೇ ರಾಜೀವ್ ಮಡದಿ ಕ್ಯಾಪ್ಟನ್ ಆದಾಗ ವಾಯ್ಸ್ ರೆಕಾರ್ಡರ್ ಕಳಿಸುವ ಮೂಲಕ ವಿಶ್ ಮಾಡಿದ್ದರು. ಈ ವೇಳೆ ನೀವು ಕೂದಲನ್ನು ಕೆಳಗೆ ಕಟ್ಟುತ್ತಿದ್ದೀರಾ, ಅದು ನಿಮಗೆ ಚೆನ್ನಾಗಿ ಕಾಣಿಸುತ್ತಿಲ್ಲ. ಮನೆಯಲ್ಲಿ ಹೇಗೆ ಕೂದಲನ್ನು ಮೇಲೆ ಕಟ್ಟುತ್ತಿದ್ರೋ ಹಾಗೇ ಬಿಗ್‍ಬಾಸ್ ಮನೆಯಲ್ಲಿ ಕೂಡ ಕೂದಲನ್ನು ಮೇಲಕ್ಕೆ ಕಟ್ಟಿಕೊಳ್ಳಿ ಎಂದು ತಿಳಿಸಿದ್ದರು.

    ಈ ಹಿಂದೆ ಬಿಗ್‍ಬಾಸ್ ಸೀಸನ್-3ರಲ್ಲಿ ನಟ ಚಂದನ್‍ರವರ ಹೇರ್ ಟ್ರೀಮ್ ಮಾಡಿಸಲಾಗಿತ್ತು. ಅಲ್ಲದೆ ಬಿಗ್‍ಬಾಸ್ ಸೀಸನ್-7ರಲ್ಲಿ ಬಿಗ್‍ಬಿಸ್ ದೀಪಿಕಾ ದಾಸ್‍ಗೆ ಶೈನಿ ಶೆಟ್ಟಿ ಗಡ್ಡ ತೆಗೆಸುವಂತೆ ಟಾಸ್ಕ್ ನೀಡಿದ್ದರು.

  • ರಘು ಕೂದಲು ಉದುರಿದ್ಯಾಕೆ? ಲ್ಯಾಗ್ ಮಂಜು ತರಲೆ ಉತ್ತರ

    ರಘು ಕೂದಲು ಉದುರಿದ್ಯಾಕೆ? ಲ್ಯಾಗ್ ಮಂಜು ತರಲೆ ಉತ್ತರ

    ಬಿಗ್‍ಬಾಸ್ ಸೀಸನ್ 8ರ ಮೂರನೇ ವಾರದಲ್ಲಿ ಸ್ಪರ್ಧಿಗಳ ನಿಜವಾದ ಮುಖ ಪ್ರೇಕ್ಷಕರ ಮುಂದೆ ಬರ್ತಿದೆ. ನಿನ್ನೆ ಎಪಿಸೋಡ್ ನಲ್ಲಿ ಸಂಬರಗಿ ಕಣ್ಣೀರು, ಶುಭಾ ಮುನಿಸು, ಗೀತಾ ಲೆಕ್ಕಾಚಾರದ ಆಟ, ಮಂಜನ ಕಾಮಿಡಿ ನಡುವೆ ದೇಸಿ ಗೇಮ್, ಚಂದ್ರಕಲಾ ಮತ್ತು ಶಂಕರ್ ಅಶ್ವಥ್ ಸೇಫ್ ಜೋನ್ ಹೀಗೆ ಒಂದೊಂದು ಗುಣಗಳು ನೋಡಲು ಸಿಗುತ್ತಿವೆ. ಇಂದು ವಾಹಿನಿ ಪ್ರೋಮೋ ರಿಲೀಸ್ ಮಾಡಿದ್ದು, ರಘು ಕೂದಲು ಉದುರಿದ್ಯಾಕೆ ಅಂತ ಮಂಜು ಹೇಳಿದ್ದಾರೆ.

    ಹಾಲ್ ನಲ್ಲಿ ಮಂಜು, ಅರವಿಂದ್, ರಘು, ದಿವ್ಯಾ ಸುರೇಶ್ ಮತ್ತು ದಿವ್ಯಾ ಉರುಡುಗ ಕುಳಿತಿದ್ದರು. ದಿವ್ಯಾ ಸುರೇಶ್ ಮುಂದೆ ನಾನು ಸುಳ್ಳು ಹೇಳುವ ರೀತಿ ಕಾಣಬಹುದು. ಆದ್ರೆ ಸುಳ್ಳು ಹೇಳ್ತೀನಾ ಅಂತ ರಘು ಹೇಳಿದ್ರು. ರಘು ಮಾತು ಕೇಳಿದ ಅರವಿಂದ್ ನಗಲಾರಂಭಿಸಿದರು. ಅಲ್ಲಿಯೇ ಕುಳಿತಿದ್ದ ಮಂಜು, ಇಷ್ಟು ವರ್ಷದಲ್ಲಿ ರಘು ಇದುವರೆಗೂ ನಿಜನಾ ಹೇಳಿಲ್ಲ ಅನ್ನೋದು ನನ್ನ ಅನಿಸಿಕೆ. ನಿಜ ಹೇಳಿದ್ರೆ ಕೂದಲು ಜೋರಾಗಿ ಬೆಳೆದಿರೋದು ಅಂತ ಕಾಲೆಳೆದರು.

    ಸುಳ್ಳು ಹೇಳೋರಿಗೆ ಹೆಚ್ಚು ಕೂದಲು ಉದುರೋದು. ಬೇಕಿದ್ರೆ ನಮ್ಮ ಮಾವ ಸಂಬರಗಿಯನ್ನ ಕೇಳು. ಸೆಕ್ಷನ್ 56ರ ಪ್ರಕಾರ ಕೂದಲು ಉದುರೋದೇ ಸುಳ್ಳು ಹೇಳಲು ಅಂತ ಹೇಳ್ತಾರೆ. ಬೇಕಿದ್ರೆ ಕರಿ ಗೊಂಬೆ ಮತ್ತು ರಘುನನ್ನ ನೋಡಿ ಅಂತ ಹೇಳಿ ಹಾಲ್ ನಲ್ಲಿ ಕುಳಿತಿದ್ದ ಎಲ್ಲರನ್ನ ನಗಿಸಿದರು.

    ಈ ವಾರ ಜೋಡಿಯಾಗಿ ಟಾಸ್ಕ್ ನೀಡಿರುವ ಬಿಗ್‍ಬಾಸ್ ಎಲ್ಲರಿಗೂ ರಿಚಾರ್ಜ್ ಸ್ಟಿಕ್ ನೀಡಿದ್ದಾರೆ. ಅದನ್ನ ಕಾಪಾಡಿಕೊಳ್ಳುವದರ ಜೊತೆಗೆ ಬೇರೆಯವರ ಸ್ಟಿಕ್ ಪಡೆದುಕೊಂಡ ಜೋಡಿ ವಿನ್ ಆಗಲಿದೆ. ಹಾಗಾಗಿಯೇ ಎಲ್ಲರೂ ಬೇರೆಯವರ ರಿಚಾರ್ಜ್ ಸ್ಟಿಕ್ ಹುಡುಕೋದರಲ್ಲಿ ಬ್ಯುಸಿಯಾಗಿದ್ದಾರೆ.

  • ಮಂಜು ತ್ಯಾಗದಿಂದ ದೊಡ್ಮನೆ ಮಂದಿಗೆ ಸಿಕ್ತು ಬೆಡ್ ರೂಮ್!

    ಮಂಜು ತ್ಯಾಗದಿಂದ ದೊಡ್ಮನೆ ಮಂದಿಗೆ ಸಿಕ್ತು ಬೆಡ್ ರೂಮ್!

    ಕಳೆದ ಒಂದು ವಾರದಿಂದ ಚಳಿ ಹಾಗೂ ಸೊಳ್ಳೆ ಕಾಟದಿಂದ ಹೊರಗೆ ನಿದ್ರೆ ಮಾಡಲು ಆಗದೇ ಕಷ್ಟ ಪಡುತ್ತಿರುವ ಬಿಗ್‍ಬಾಸ್ ಸ್ಪರ್ಧಿಗಳು ಬೆಡ್ ರೂಮ್‍ನನ್ನು ಹಿಂದಿರುಗಿಸುವಂತೆ ಬಿಗ್‍ಬಾಸ್‍ಗೆ ಎಷ್ಟೋ ಬಾರಿ ಮನವಿ ಮಾಡಿದ್ದರು. ಆದರೂ ಕೂಡ ಬಿಗ್‍ಬಾಸ್ ಮನಕರಗಲಿಲ್ಲ. ಆದರೆ ನಿನ್ನೆ ಜೋಡಿ ಟಾಸ್ಕ್ ವೊಂದರಲ್ಲಿ ಗೆದ್ದ ಮಂಜುವಿನಿಂದ ಇದೀಗ ದೊಡ್ಮನೆ ಮಂದಿಗೆ ಬೆಡ್ ರೂಮ್ ದೊರೆತಿದೆ.

    ಹೌದು ನಿನ್ನೆ ಬಿಗ್‍ಬಾಸ್ ಸದಸ್ಯರಿ ಮಸ್ತ್ ಮಸ್ತ್ ಮೊಟ್ಟೆ ಬಂತು ಎಂಬ ಟಾಸ್ಕ್ ನೀಡಿದ್ದರು. ಅದರ ಅನುಸಾರ ಪ್ರತಿ ಜೋಡಿಯ ಒಬ್ಬ ಸದಸ್ಯ ಗಾರ್ಡನ್ ಏರಿಯಾದಲ್ಲಿ ಚಿನ್ನ, ಬೆಳ್ಳಿ, ಬಿಳಿ ಮೊಟ್ಟೆಯನ್ನು ಕ್ಯಾಚ್ ಹಿಡಿದು ಬುಟ್ಟಿಯೊಂದಕ್ಕೆ ಹಾಕಬೇಕಾಗಿತ್ತು. ಮತ್ತೋರ್ವ ಸದಸ್ಯ ಮೊಟ್ಟೆಯನ್ನು ಒಂದು ಬುಟ್ಟಿಯಿಂದ ಮತ್ತೊಂದು ಬುಟ್ಟಿಗೆ ವರ್ಗಾಯಿಸಬೇಕಿತ್ತು.

    ಅದರಂತೆ ಈ ಟಾಸ್ಕ್‍ನಲ್ಲಿ ಎಲ್ಲಾ ಜೋಡಿಗಳನ್ನು ಹಿಂದಿಕ್ಕಿ ಲ್ಯಾಗ್ ಮಂಜು ಹಾಗೂ ಗೀತಾ 6 ಗೋಲ್ಡನ್ ಮೊಟ್ಟೆ ಹಾಗೂ 4 ಸಿಲ್ವರ್ ಮೊಟ್ಟೆ ಗಳಿಸುವ ಮೂಲಕ 800 ಅಂಕ ಪಡೆದು ವಿಜೇತರಾಗುತ್ತಾರೆ. ಆಟದಲ್ಲಿ ಗೆದ್ದ ಮಂಜು ಹಾಗೂ ಗೀತಾಗೆ ಬಿಗ್‍ಬಾಸ್ ರಿಚಾರ್ಜ್ ಯಂತ್ರವನ್ನು ಕಳುಹಿಸುತ್ತಾರೆ. ಬಳಿಕ ಬಿಗ್‍ಬಾಸ್ ನಿಮಗೆ ಸಿಕ್ಕಿರುವ ರಿಚಾರ್ಜ್ ಯಂತ್ರ ವಿಶೇಷವಾದದ್ದೂ ಇದು ನಿಮ್ಮ ಬಳಿಯೇ ಇರುತ್ತದೆ. ಅದನ್ನು ಯಾರು ಕದಿಯುವಂತಿಲ್ಲ. ಒಂದು ವೇಳೆ ವಿಶೇಷ ಯಂತ್ರವನ್ನು ಹಿಂದಿರುಗಿಸಿದರೆ ಬೆಡ್‍ರೂಮ್‍ನನ್ನು ಮನೆಯ ಸದಸ್ಯರಿಗಾಗಿ ಬಿಗ್‍ಬಾಸ್ ಹಿಂದಿರುಗಿಸುತ್ತಾರೆ ಎಂದು ಘೋಷಿಸುತ್ತಾರೆ.

    ಈ ವೇಳೆ ಮಂಜು ಹಾಗೂ ಗೀತಾ ಹಿಂದೆ-ಮುಂದೆ ಯೋಚಿಸದೇ ಯಂತ್ರವನ್ನು ಬಿಗ್‍ಬಾಸ್‍ಗೆ ಹಿಂದಿರುಗಿಸಿ ಮನೆ ಮಂದಿಗೆ ಬೆಡ್ ರೂಮ್ ಹಿಂದಿರುಗಿಸಿ ಕೊಡಿಸುತ್ತಾರೆ. ಇದರಿಂದ ಫುಲ್ ಖುಷ್ ಆದ ಬಿಗ್ ಬಾಸ್ ಮಂದಿ ಮಂಜುವಿಗೆ ಜೈಕಾರ ಹಾಕಿ ಅಪ್ಪಿ ಮುದ್ದಾಡುತ್ತಾರೆ. ಅದರಲ್ಲೂ ಬೆಡ್ ರೂಮ್ ಇಲ್ಲದೆ ಕಂಗೆಟ್ಟಿದ್ದ ಶುಭ ಪೂಂಜಾ ಮಂಜು ಮೇಲೆ ಹಾರಿ, ಮನೆ ಪೂರ್ತಿ ಕುಣಿದಾಡುತ್ತಾ ಮಂಜುವಿಗೆ ಧನ್ಯವಾದ ತಿಳಿಸಿ ಸಂತಸ ವ್ಯಕ್ತಪಡಿಸಿದರು. ಉಳಿದವರು ಜೋರಾದ ಚಪ್ಪಾಳೆ ಹಾಗೂ ಶಿಳ್ಳೆ ಹೊಡೆಯುವ ಮೂಲಕ ಕೃತಜ್ಞತೆ ಸಲ್ಲಿಸಿದರು.

    ಒಟ್ಟಾರೆ ಬೆಡ್‍ರೂಮ್ ಇರದೇ ಪರದಾಡುತ್ತಾ ದಿಕ್ಕಾಪಾಲಾಗಿದ್ದ ದೊಡ್ಮನೆ ಮಂದಿಗೆ ಮತ್ತೆ ಬೆಡ್ ರೂಮ್ ದೊರಕಿಸಿ ಕೊಡುವ ಮೂಲಕ ಮಂಜು ಎಲ್ಲರಿಗೂ ಹೀರೋ ಆಗಿದ್ದಾರೆ.

  • ಲ್ಯಾಗ್ ಮಂಜುಗೆ ಸಾಂಗ್ ಡೆಡಿಕೇಟ್ ಮಾಡಿ ನಿಧಿ ಕಕ್ಕಾಬಿಕ್ಕಿ!

    ಲ್ಯಾಗ್ ಮಂಜುಗೆ ಸಾಂಗ್ ಡೆಡಿಕೇಟ್ ಮಾಡಿ ನಿಧಿ ಕಕ್ಕಾಬಿಕ್ಕಿ!

    ಬಿಗ್‍ಬಾಸ್ ಕಾರ್ಯಕ್ರಮ ಪ್ರಾರಂಭವಾದಾಗಿನಿಂದಲೂ ದೊಡ್ಮನೆಯಲ್ಲಿ ಲ್ಯಾಂಗ್ ಮಂಜುದೇ ಭಾರೀ ಸದ್ದು. ಬಿಗ್‍ಬಾಸ್ ಮನೆ ಮಂದಿಗೆಲ್ಲಾ ಮೋಡಿ ಮಾಡಿರುವ ಮಂಜುಗೆ ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ನಿಧಿ ಸುಬ್ಬಯ್ಯ ಹಾಡೊಂದನ್ನು ಡೆಡಿಕೇಟ್ ಮಾಡಿದ್ದಾರೆ.

    ಹೌದು. ನಿನ್ನೆ ಕಿಚ್ಚ ಸುದೀಪ್, ನಿಧಿ ಸುಬ್ಬಯ್ಯರವರಿಗೆ ಯಾವುದಾದರೂ ಒಂದು ಕನ್ನಡದ ಹಾಡನ್ನು ಹೇಳಲು ಸೂಚಿಸುತ್ತಾರೆ. ಈ ವೇಳೆ ರವಿಚಂದ್ರನ್ ಅಭಿನಯದ ರಾಮಾಚಾರಿ ಸಿನಿಮಾದ ‘ಆಕಾಶದಾಗೆ ಯಾರೋ ಮಾಯಾಗಾರನು..’ ಎಂಬ ಹಾಡನ್ನು ಹಾಡುತ್ತಾರೆ. ಇದನ್ನು ಮನೆಯ ಯರಾದರೂ ಒಬ್ಬ ಸದಸ್ಯರಿಗೆ ಡೆಡೆಕೇಟ್ ಮಾಡಿ ಎಂದರೆ ಯಾರಿಗೆ ಮಾಡುತ್ತೀರಾ ಎಂದು ಪ್ರಶ್ನಿಸಿದಾಗ ನಿಧಿ ಲ್ಯಾಂಗ್ ಮಂಜು ಹೆಸರನ್ನು ತೆಗೆದುಕೊಳ್ಳುತ್ತಾರೆ.

    ಆಗ ಸುದೀಪ್ ಯಾಕೆ ಎಲ್ಲರೂ ಮಂಜು ಹೆಸರನ್ನೆ ಸೂಚಿಸುತ್ತೀರಾ? ನನಗೆಲ್ಲೋ ಮಂಜುಗೆ ಮದುವೆಯಾಗಿದೆ. ಹಾಗಾಗಿ ಅವರ ಹೆಸರನ್ನು ಸೂಚಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸೂಚಿಸುತ್ತೀರಾ ಎಂದು ಕೇಳುತ್ತಾರೆ. ಆಗ ನಿಧಿ ಮಂಜುಗೆ ಮದುವೆಯಾಗಿದ್ದೀಯಾ ಎಂದು ಗೊಂದಲಕ್ಕೊಳಗಾಗುತ್ತಾರೆ. ಈ ವೇಳೆ ಕಿಚ್ಚ ಹಾ.. ಅವರಿಗೆ ಮದುವೆಯಾಗಿರುವುದು ನಿಮಗೆ ಗೊತ್ತಿಲ್ಲವಾ.. ಎಂದು ಪ್ರಶ್ನಿಸುತ್ತಾರೆ. ಬಳಿಕ ಮನೆಯ ಸದಸ್ಯರೆಲ್ಲರೂ ಮಂಜು ಹಾಗೂ ದಿವ್ಯಾ ಸುರೇಶ್‍ರ ಮುಖವನ್ನು ನೋಡಿ ನಗುತ್ತಾರೆ. ಏಕೆಂದರೆ ಈ ಹಿಂದೆ ಮಂಜು ಮತ್ತು ದಿವ್ಯಾ ಕತ್ತಿಗೆ ಹಾಕಿಕೊಂಡಿದ್ದ ಮೈಕ್‍ನನ್ನು ಬದಲಾಯಿಸಿಕೊಂಡಿದ್ದರು. ಆಗ ಮಂಜು ನಮ್ಮಿಬ್ಬರಿಗೂ ಮದುವೆಯಾಯಿತು ಎಂದು ಹೇಳಿದ್ದರು.

    ಈ ವೇಳೆ ಒಂದು ಸೆಕೆಂಡ್ ಮಂಜು ಕೂಡ ಮೊದಲಿಗೆ ಕಕ್ಕಾಬಿಕ್ಕಿಯಾಗಿದ್ದರು. ಬಳಿಕ ನೆನಪಿಸಿಕೊಂಡು ಮಂಜು ಅರ್ಥವಾಯಿತು ಒಕೆ ಒಕೆ ಎಂದು ಹೇಳುತ್ತಾರೆ. ನಂತರ ಕಿಚ್ಚ ನಾನು ಹೇಳಿದ್ದು ಕೇಳಿ ನಿಮ್ಮ ಫ್ಯೂಚರ್‍ರೆ ಹಾಳಾಗುತ್ತಿದೆ ಎಂದು ಅನಿಸಿರಬಹುದಲ್ಲವಾ? ಮಾಡ್ಲಾ ಎಂದು ಪ್ರಶ್ನಿಸುತ್ತಾರೆ ಆಗ ಮಂಜು ಬೇಡ ಸರ್ ನಾನೇ ಮಾಡಿಕೊಳ್ಳುತ್ತೇನೆ ಎಂದು ಹಾಸ್ಯಮಯವಾಗಿ ನುಡಿದರು.

    ನಂತರ ಕಿಚ್ಚ ನಿಮ್ಮ ಮದುವೆಯಾಗದೇ ಇರಬಹುದು ಆದರೆ ಒಂದೆರಡು ಒಳ್ಳೆಯ ವಿಚಾರ ನನಗೆ ತಿಳಿದಿದೆ. ಬಹಿರಂಗವಾಗಿ ಹೇಳಲೇ ಎಂದಾಗ ಮಂಜು ಬೇಡ ಸರ್.. ನಾನು ಮಾಡಿದ್ದು ಕೇವಲ ತಮಾಷೆಗಾಗಿ ಅಷ್ಟೇ ಬೇರೆ ಏನೂ ಇಲ್ಲ ಎಂದು ಹೇಳಿತ್ತಾರೆ. ಮಂಜು ಮುಖಭಾವದಲ್ಲಿ ಆದ ಬದಲಾವಣೆ ನೋಡಿ ಕಿಚ್ಚ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ.

    ನೀವು ಮಾಡಿದ ತಮಾಷೆಗಳಲ್ಲಿ ಒಂದೆರಡು ಬಿಗ್‍ಬಾಸ್ ಮನೆಯತ್ತ ಹುಡುಕಿಕೊಂಡು ಓಡಾಡುತ್ತಿದ್ದಾರೆ. ಒಳಗೆ ಕಳುಹಿಸುವುದೇ ಎನ್ನುತ್ತಾರೆ. ಬೇಡ ಸರ್ ನಾನು ಇಲ್ಲಿ ಇರುತ್ತೇನೆ ಅವರು ಅಲ್ಲೇ ಇರಲಿ. ನಾನು ಖುಷಿಯಾಗಿ ಇಲ್ಲೆ ಚೆನ್ನಾಗಿ ಇದ್ದೇನೆ ಎಂದು ಹೇಳುವ ಮೂಲಕ ನಗೆ ಚಟಾಕಿ ಹರಿಸಿದರು.

    ಒಟ್ಟಾರೆ ಮಂಜು ಹಾಗೂ ಕಿಚ್ಚನ ನಡುವಿನ ಸಂಭಾಷಣೆ ಮನೆಮಂದಿಯನೆಲ್ಲಾ ನಗೆಯ ಅಲೆಯಲ್ಲಿ ತೇಲಿಸಿತು.

  • ದೊಡ್ಮನೆಯಲ್ಲಿ ಗಳಗಳನೇ ಅತ್ತ ದಿವ್ಯಾ ಸುರೇಶ್

    ದೊಡ್ಮನೆಯಲ್ಲಿ ಗಳಗಳನೇ ಅತ್ತ ದಿವ್ಯಾ ಸುರೇಶ್

    ದೊಡ್ಮನೆಯಲ್ಲಿ ಬುಧವಾರ ನಡೆದ ಮನುಷ್ಯರು ಮತ್ತು ವೈರಸ್ ಟಾಸ್ಕ್ ಬಗ್ಗೆ ಮನೆಯ ಸದಸ್ಯರು ಶ್ರದ್ಧೆ, ಗಮನ ವಹಿಸದೇ ನಿಯಮ ಉಲ್ಲಂಘಿಸಿದ್ದಾರೆ ಎಂದು ಬಿಗ್ ಟಾಸ್ಕ್ ನನ್ನು ರದ್ದು ಗೊಳಿಸಿದ್ದರು.

    ಮೊದಲ ಭಾಗದಲ್ಲಿ ಹಲವು ಬಾರಿ ಗೆದ್ದ ವೈರಸ್ ತಂಡ, ಎರಡನೇ ಭಾಗದಲ್ಲಿ ಗೆಲ್ಲಲು ಪ್ರಯತ್ನವನ್ನು ಮಾಡದೇ ಪಂದ್ಯವನ್ನು ಸುಲಭವಾಗಿ ಕೈಚೆಲ್ಲಿ ಸೋಲನ್ನು ಅನುಭವಿಸಿತು. ಈ ವಿಚಾರವಾಗಿ ವೈರಸ್ ತಂಡ ಸೋಲಲು ಪ್ರಮುಖ ಕಾರಣ ದಿವ್ಯಾ ಸುರೇಶ್ ಹಾಗೂ ನಿಧಿ ಸುಬ್ಬಯ್ಯ ಎಂದು ಮನೆಯ ಎಲ್ಲ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ನಡುವೆ ಲ್ಯಾಗ್ ಮಂಜು ಬೆಳಗ್ಗೆ ಆಟದ ಬಗ್ಗೆ ದಿವ್ಯಾ ಸುರೇಶ್ ಜೊತೆ ಚರ್ಚೆ ನಡೆಸಿದರು. ನೀನು ಪಂದ್ಯವನ್ನು ಕೈ ಚೆಲ್ಲಿದ್ದು ಏಕೆ? ಅಷ್ಟೇಲ್ಲಾ ಕಷ್ಟಪಟ್ಟು, ಅಷ್ಟು ಮಂದಿ ಹುಡುಗರ ಮದ್ಯೆ ಸಮವಾಗಿ ಆಟ ಆಡಿದ್ದೀಯಾ. ಏಕಾಂಗಿಯಾಗಿ ಆಟವಾಡಲು ಆರಂಭಿಸಿದಾಗ ನೀನು ನಿನ್ನ ಬಲವನ್ನು ತೋರಿಸಬೇಕಿತ್ತು. ಸೋತರೂ ಪರವಾಗಿಲ್ಲ ಕೇವಲ ಪಂದ್ಯದಲ್ಲಿ ಭಾಗವಹಿಸಬೇಕಾಗಿತ್ತು. ನೀನು ಒಬ್ಬಳು ಕ್ರೀಡಾಪಟುವಾಗಿ ನೀನು ನಿನ್ನ ಬಲವನ್ನು ಪ್ರದರ್ಶಿಸಬೇಕಿತ್ತು. ನೀನು ಮಾಡಿದ್ದು ತಪ್ಪಲ್ಲವೇ? ಈ ವಿಚಾರವಾಗಿ ನನಗೆ ನಿನ್ನ ಮೇಲೆ ಬಹಳ ಸಿಟ್ಟಿತ್ತು. ಹಾಗಾಗಿ ಆತ್ಮೀಯವಾಗಿದ್ದೇನೆ, ಏನಾದರೂ ತಪ್ಪಾಗಿ ಮಾತನಾಡಿಬಿಡುತ್ತೇನೆ ಎಂದು ನಾನು ನಿನ್ನೆ ನಿನ್ನೊಂದಿಗೆ ಮಾತನಾಡಿಲ್ಲ. ನಾವು ಇಲ್ಲಿಗೆ ಬರಲು ಬೇರೆಯವರ ಮಾತನ್ನು ಕೇಳಿಕೊಂಡು ಬಂದಿದ್ದೇವಾ? ಇಲ್ಲ ಅಲ್ಲವೇ? ಬೇರೆಯವರು ಹೀಗೋ ಆಟ ಆಡುತ್ತಾರೆ ಎಂದು ನಾವು ಅವರ ರೀತಿಯಲ್ಲಿಯೇ ಆಟವಾಡುವುದಕ್ಕೆ ಆಗುತ್ತಾ? ಬೇರೆ ಯಾರು ಹೇಗಾದರೂ ಆಡಿಕೊಳ್ಳಲಿ ಅದು ನಮಗೆ ಸಂಬಂಧವಿಲ್ಲದ ವಿಚಾರ. ನಾವು ಏಕಾಂಗಿಯಾಗಿ ನಿಂತ ಮೇಲೆ ನಾವು ಏಕಾಂಗಿಯಾಗಿ ಹೋರಾಟ ಮಾಡಬೇಕು. ನೀನು ಯಾವ ಕಾರಣಕ್ಕೆ ಇಲ್ಲಿಗೆ ಬಂದಿದ್ದೀಯಾ ಎಂಬುವುದರ ಬಗ್ಗೆ ಆಲೋಚಿಸು. ಒಟ್ಟಾರೆ ನೀನು ನಿನ್ನೆ ಮಾಡಿದ್ದು ನೂರಕ್ಕೆ ನೂರರಷ್ಟು ತಪ್ಪು ಎಂದು ತಿಳಿ ಹೇಳಿದರು.

    ಈ ವೇಳೆ ಪಂದ್ಯ ಸೋಲುವುದಕ್ಕೆ ದಿವ್ಯಾ ಸುರೇಶ್ ಕಾರಣರೆಂದು ನೀವು ಹೇಳಿದ್ದೀರಿ ಎಂಬ ಮಾತನ್ನು ರಾಜೀವ್‍ರವರು ಹೇಳುತ್ತಿದ್ದರು ಎಂದು ದಿವ್ಯಾ ಸುರೇಶ್ ಲ್ಯಾಗ್ ಮಂಜುಗೆ ಪ್ರತಿಕ್ರಿಯಿಸಿದರು. ಇದಕ್ಕೆ ಪ್ರತಿಯಾಗಿ ಲ್ಯಾಗ್ ಮಂಜು ಬೇರೆಯವರು ಹೇಳುವ ಮಾತನ್ನು ನೀನು ನಂಬಿ ಬಿಡುತ್ತೀಯಾ? ನಿನ್ನ ಬುದ್ದಿಗೆ ಏನಾಗಿದೆ? ನಾವೇನು ಪಂದ್ಯದ ವೇಳೆ ಡಂಬಲ್ಸ್ ಹಾಕಲು ಬಂದಿದ್ದೇವಾ ಕೇವಲ ನೀರನ್ನಷ್ಟೇ ತಾನೇ ಹಾಕಲು ಮುಂದಾದೇವು ಎಂದು ಕಿಡಿಕಾರಿದರು.

    ನಾನು ಕೊನೆಯವರೆಗೂ ಸರಿಯಾದ ರೀತಿಯಲ್ಲಿ ಆಟವಾಡಿದೆ. ಆದರೆ ಪ್ರಶಾಂತ್‍ರವರು ಕನ್ಫೆಷನ್ ರೂಮ್‍ಗೆ ಹೋಗಿ ಹಿಂದಿರುಗಿ ಬಂದ ನಂತರ ನನ್ನ ಮೇಲೆ ನಾನು ನಾನು ಮಾಡದೇ ಇರುವ ಆರೋಪಗಳನ್ನು ಹೊರಿಸಿದರು ಎಂದು ಲ್ಯಾಗ್ ಮಂಜುಗೆ ದಿವ್ಯಾ ಸುರೇಶ್ ಆರೋಪಿಸಿದರು. ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿದರು.

    ಬಳಿಕ ಮನೆಯ ಸದಸ್ಯರಿಗೆ ದಿವ್ಯಾ ನಾನು ಮಾಡಿದ್ದು ತಪ್ಪು ಎಂದು ಕ್ಷಮೆ ಯಾಚಿಸಿದರು. ಈ ವೇಳೆ ಶುಭಾ ಪೂಂಜಾ ಬೇರೆಯವರ ಆಲೋಚನೆಗೆ ಪ್ರೇರಿತವಾಗಿ ಯಾವ ಕೆಲಸವನ್ನು ಮಾಡಬೇಡ. ನಾವು ಇಲ್ಲಿ ಆಟವಾಡಲು ಏಕಾಂಗಿಯಾಗಿ ಬಂದಿದ್ದೇವೆ. ನಮಗೆ ನಮ್ಮದೇಯಾದಂತಹ ವೈಯಕ್ತಿಕ ಅಭಿಪ್ರಾಯಗಳಿರುತ್ತದೆ. ಒಂದು ಟೀಂ ಎಂದು ಬಂದಾಗ ಟೀಂನಲ್ಲಿರುವವರೆಲ್ಲ ಸರಿ ಎಂದು ಹೇಳಲು ಸಾಧ್ಯವಾಗುವುದಿಲ್ಲ. ನಮಗೆ ಹಾನಿಯಾಗುತ್ತದೆ, ಬೇಸರವಾಗುತ್ತದೆ ಎಂದು ನಾವು ಪಂದ್ಯವನ್ನು ಅರ್ಧದಲ್ಲಿಯೇ ಕೈಚೆಲ್ಲಿ ಬಂದೆವಾ ಆಟ ಪೂರ್ಣಗೊಳಿಸಲಿಲ್ಲವೇ? ನಾವು ಆಟ ಆಡಿದಾಗ ನೀವು ಆಟದ ಬಗ್ಗೆ ಅಸಡ್ಡೆ ತೋರಿದ್ದೀರಾ ಎಂಬುವುದು ನಮಗಿಂತ ಜನರಿಗೆ ತಿಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆದ ದಿವ್ಯಾ ಸುರೇಶ್ ರಾಜೀವ್ ಅವರ ಭುಜದ ಮೇಲೆ ಒರಗಿಕೊಂಡು ಗಳಗಳನೇ ಅಳಲು ಆರಂಭಿಸಿದರು. ನಂತರ ರಾಜೀವ್ ಹಾಗೂ ಸಮರ್ಥ್, ಮಂಜು ಸಮಾಧಾನ ಪಡಿಸುವ ಮೂಲಕ ದಿವ್ಯಾ ಸುರೇಶ್ ಮುಖದಲ್ಲಿ ನಗು ತರಿಸಿದರು.

  • ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳ ಈಜು-ಮೋಜು ಮಸ್ತಿ!

    ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳ ಈಜು-ಮೋಜು ಮಸ್ತಿ!

    ಬೆಂಗಳೂರು: ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಧನುಶ್ರೀ ಗೌಡ ಮನೆಯಿಂದ ಹೊರಗೆ ಹೋದ ಬಳಿಕ ಬಿಗ್‍ಬಾಸ್ ಸ್ಪರ್ಧಿಗಳ ಮೋಜು-ಮಸ್ತಿ ಹಾಗೆಯೇ ಮುಂದುವರೆದಿದೆ.

    ಸದ್ಯ ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಸೋಮವಾರಕ್ಕೆ 9ನೇ ದಿನವಾಗಿದ್ದು, ಎಲಿಮಿನೆಷನ್‍ನಿಂದ ಟೆನ್ಷನ್‍ನಿಂದ ಬಿಡುಗಡೆಗೊಂಡಿದ್ದ ದೊಡ್ಮನೆ ಮಂದಿಗೆ ನಿನ್ನೆ ಬಿಗ್‍ಬಾಸ್ ಟಾಸ್ಕ್‍ವೊಂದನ್ನು ನೀಡಿದ್ದರು. ಅದುವೇ ಈಜು ಮೋಜು. ಇದರ ಅನುಸಾರ ಚಟುವಟಿಕೆ ಆರಂಭದಲ್ಲಿ ಒಂದು ಹಾಡು ಪ್ಲೇ ಆಗುತ್ತದೆ. ಆ ಹಾಡು ಮುಗಿದ ತಕ್ಷಣವೇ ಶಮಂತ್(ಬ್ರೋ ಗೌಡ) ಸ್ವಿಮ್ಮಿಂಗ್ ಪೂಲ್‍ಗೆ ಹಾರಬೇಕು. ಮತ್ತೊಮ್ಮೆ ಹಾಡು ಶುರುವಾದಾಗ ಪೂಲ್‍ಗೆ ಬೀಳಿಸಲು ಒಬ್ಬ ಸದಸ್ಯನನ್ನು ಹಿಡಿಯಬೇಕು ಹಾಗೂ ಹಾಡು ನಿಂತ ತಕ್ಷಣ ತನ್ನೊಡನೆ ಪೂಲ್‍ಗೆ ಬೀಳಿಸಬೇಕು. ಮುಂದಿನ ಹಾಡಿಗೆ ಇಬ್ಬರು ಸೇರಿ ಮೂರನೇ ಅವರನ್ನು ಬೀಳಿಸಬೇಕು. ಹೀಗೆ ಒಂದೊಂದು ಹಾಡು ಮುಗಿಯುತ್ತಿದ್ದಂತೆ, ಒಬ್ಬೊಬ್ಬ ಸದಸ್ಯರನ್ನು ಪೂಲ್‍ಗೆ ಬೀಳಿಸುತ್ತಾ ಸಾಗಬೇಕು ಎಂದು ಸೂಚಿಸಿದರು.

    ಅದರಂತೆ ಮೊದಲನೆಯದಾಗಿ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ನೆನೆಪಿರಲಿ ಸಿನಿಮಾದ ಕುರಕ್ಕು ಕಳ್ಳಿಕೆರೆ ಸಾಂಗ್ ಪ್ಲೇ ಆಗುತ್ತದೆ. ಆಗ ಬ್ರೋ ಗೌಡ ಸ್ವಿಮಿಂಗ್ ಪೂಲ್‍ಗೆ ಹಾರಿದರು. ಬಳಿಕ ಬ್ರೋ ಗೌಡ ಓಡುತ್ತಾ ಬಂದು ಲ್ಯಾಗ್ ಮಂಜುರನ್ನು ಔಟ್ ಮಾಡುತ್ತಾರೆ. ನಂತರ ಇಬ್ಬರು ಪೂಲ್‍ಗೆ ಹಾರಿ ವಾಪಸ್ಸ್ ಬಂದು ಲ್ಯಾಂಗ್ ಮಂಜು, ಯಶ್ ಅಭಿನಯದ ಅಣ್ತಮ್ಮ ಸಾಂಗ್ ಪ್ಲೇ ಮಾಡಿದಾಗ ಓಡಿ ಹೋಗಿ ದಿವ್ಯಾ ಸುರೇಶ್‍ರನ್ನು ಔಟ್ ಮಾಡುತ್ತಾರೆ. ಬಳಿಕ ದಿವ್ಯಾರನ್ನು ಎತ್ತಿಕೊಂಡು ಇಬ್ಬರು ಈಜು ಕೊಳಕ್ಕೆ ಹಾರುತ್ತಾರೆ.

    ನಂತರ ಔಟಾಗಿದ್ದ ರಾಜೀವ್ ಹಾಗೂ ಅರವಿಂದ್ ಕಿಚ್ಚ ಸುದೀಪ್ ಅಭಿನಯದ ರನ್ನ ಸಿನಿಮಾದ ಥಿತಲಿ ಥಿತಲಿ ಸಾಂಗ್ ಪ್ಲೇ ಆದಾಗ ದಿವ್ಯಾ ಉರುಡುಗರನ್ನು ಟಾರ್ಗೆಟ್ ಮಾಡಿ ಔಟ್ ಮಾಡಿ ಸ್ವಿಮ್ಮಿಂಗ್ ಪೂಲ್‍ಗೆ ಎಸೆಯುತ್ತಾರೆ.

    ಇದೇ ವೇಳೆ ಸ್ವಿಮಿಂಗ್ ಪೂಲ್‍ನಲ್ಲಿ ಲ್ಯಾಗ್ ಮಂಜು ದಿವ್ಯಾ ಉರುಡುಗಗೊಂದು ಸಿಕ್ರೇಟ್ ಹೇಳುತ್ತೇನೆ. ಅವರಿಗೆ ಧಮ್ ಇದ್ದರೆ ಎಲ್ಲರ ಮುಂದೆ ಹೇಳಲಿ ಎಂದು ಚಾಲೆಂಜ್ ಮಾಡುತ್ತಾರೆ ಬಳಿಕ ಮಂಜು ಹೇಳಿದ ಸಿಕ್ರೆಟ್ ಕೇಳಿ ದಿವ್ಯಾ ನಾಚುತ್ತಾ ನಸುನಗೆ ಬೀರುತ್ತಾರೆ. ನನ್ನ ಮೀಟರ್ ಬಗ್ಗೆ ಮಾತನಾಡಬೇಡಿ ಐ ಲವ್ ಯು ಎಂದು ಲ್ಯಾಗ್ ಮಂಜುಗೆ ಎಲ್ಲರ ಸಮ್ಮುಖದಲ್ಲಿ ದಿವ್ಯಾ ಉರುಡುಗ ಹೇಳುತ್ತಾರೆ. ಅದಕ್ಕೆ ಮಂಜು ಥ್ಯಾಂಕ್ಯು ಐ ಲವ್ ಯು ಟೂ ಎಂದು ಹಾಸ್ಯಮಯವಾಗಿ ಅಣುಗಿಸುತ್ತಾ ಮುಗುಳು ನಗೆ ಬೀರುತ್ತಾರೆ.

    ಒಟ್ಟಾರೆ ಟಾಸ್ಕ್ ಮೂಲಕ ಮನೆಮಂದಿಯೆಲ್ಲಾ ಒಬ್ಬೊಬ್ಬರಾಗಿ ಈಜು ಕೊಳಕ್ಕೆ ಹಾರುವ ಮೂಲಕ ಸಖತ್ ಎಂಜಾಯ್ ಮಾಡಿದರು.

  • ಆ ಯಮ್ಮನ ಸಹವಾಸಕ್ಕೆ ಹೋಗೋದನ್ನೇ ಬಿಟ್ಟು ಬಿಟ್ಟಿದ್ದೇನೆ ಅಂದಿದ್ಯಾಕೆ ಲ್ಯಾಗ್ ಮಂಜು?

    ಆ ಯಮ್ಮನ ಸಹವಾಸಕ್ಕೆ ಹೋಗೋದನ್ನೇ ಬಿಟ್ಟು ಬಿಟ್ಟಿದ್ದೇನೆ ಅಂದಿದ್ಯಾಕೆ ಲ್ಯಾಗ್ ಮಂಜು?

    ಬೆಂಗಳೂರು: ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಒಂದು ವಾರ ಕಳೆದಿದೆ. ಶನಿವಾರ ಕಿಚ್ಚನ ಜೊತೆ ಮೊದಲ ವಾರದ ಪಂಚಾಯತಿ ನಡೆದಿದ್ದು, ಈ ವೇಳೆ ಸ್ಪರ್ಧಿಗಳ ಕುರಿತಂತೆ ಕೊಂಚ ಸಿರಿಯಸ್, ಸ್ವಲ್ಪ ಕಾಮಿಡಿ ವಿಚಾರಗಳ ಚರ್ಚೆಯಾಗಿದೆ. ಅದರಲ್ಲೂ ಲ್ಯಾಗ್ ಮಂಜು ವಾರದ ಕಥೆ ಕಿಚ್ಚನ ಜೊತೆ ಮೊದಲ ಸಂಚಿಕೆಯಲ್ಲಿ ಮನೆಯ ಎಲ್ಲಾ ಸದಸ್ಯರಿಗಿಂತಲೂ ಸೆಂಟರ್ ಆಫ್ ದಿ ಆ್ಯಟ್ರಕ್ಷನ್ ಆಗಿದ್ದರು.

    ಈ ವೇಳೆ ಕಿಚ್ಚ ಮನೆಯಲ್ಲಿರುವ ಪ್ರತಿ ಸದಸ್ಯರ ಹೆಸರುಗಳನ್ನು ಹೇಳಿಕೊಂಡು ಹೋಗುತ್ತೇನೆ. ಅವರಲ್ಲಿರುವ ಒಳ್ಳೆಯ ಗುಣ ಹಾಗೂ ಈ ಒಂದು ವಿಚಾರದಲ್ಲಿ ಇವರೊಂದಿಗೆ ಎಚ್ಚರಿಕೆ ಇರಬೇಕು ಎಂದು ನಿಮಗೆ ಅನಿಸುವ ಕೆಲವು ವಿಚಾರಗಳನ್ನು ತಿಳಿಸುತ್ತಾ ಹೋಗುವಂತೆ ಲ್ಯಾಗ್ ಮಂಜುಗೆ ಸೂಚಿಸಿದ್ದಾರೆ.

    ಅದರಂತೆ ಎಲ್ಲ ಸದಸ್ಯರ ವಿಚಾರವಾಗಿ ಅಭಿಪ್ರಾಯ ತಿಳಿಸುತ್ತಾ ಬಂದ ಲ್ಯಾಗ್ ಮಂಜು ವೈಷ್ಣವಿ ಗೌಡ ಸರದಿ ಬಂದಾಗ, ವೈಷ್ಣವಿ ಗೌಡರೊಂದಿಗೆ ಎಚ್ಚರಿಕೆಯಿಂದ ಇರಬೇಕಾದಂತಹ ವಿಚಾರವೇನಿಲ್ಲ. ಆದರೆ ಯೋಗ ಮಾಡುವಾಗ ಮಾತ್ರ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಬೆಳಗ್ಗೆ ಎದ್ದು ಹೊರಗಡೆ ಹೋದಾಗ ಬನ್ನಿ ನೀವು ಕೂಡ ಯೋಗ ಮಾಡಿ ಎಂದು ಕರೆಯುತ್ತಾರೆ. ನಾನು ಕೂಡ ಒಂದೇ ಒಂದು ಬಾರಿ ಟ್ರೈ ಮಾಡೋಣ ಎಂದು ಹೋಗಿದ್ದೆ. ಈ ವೇಳೆ ಇದು ಬಹಳ ಸಿಂಪಲ್ ಯೋಗಾಸನ ಎಂದು ಹಿಂದೆ ತಿರುಗಿ ಮುಂದೆ ನೋಡುವಷ್ಟರಲ್ಲಿ ಒಂದು ಕಾಲನ್ನು ಮೇಲಕ್ಕೆ ಎತ್ತಿ ಕೈನಲ್ಲಿ ಹಿಡಿದುಕೊಂಡರು. ಬಳಿಕ ಇದು ಕೇವಲ ಬೇಸಿಕ್ ಯೋಗಾಸನ ನಿಮಗೆ ಇಷ್ಟವಿದ್ದರೆ ಮಾತ್ರ ಮಾಡಿ ಎಂದು ಹೇಳುತ್ತಾರೆ. ಹಾಗಾಗಿ ಈ ಯೋಗದ ವಿಚಾರದಲ್ಲಿ ಮಾತ್ರ ಅವರೊಂದಿಗೆ ಬಹಳ ಹುಷಾರಾಗಿರಬೇಕು. ಅಂದಿನಿಂದ ಆ ಯಮ್ಮನ ಸಹವಾಸಕ್ಕೆ ಹೋಗುವುದನ್ನು ಬಿಟ್ಟುಬಿಟ್ಟಿದ್ದೇನೆ. ಯೋಗದ ವಿಚಾರಕ್ಕೆ ಹೋಗುತ್ತಿಲ್ಲ ಎಂದರು.

    ಒಳ್ಳೆಯ ವಿಚಾರಕ್ಕೆ ಬಂದರೆ ವೈಷ್ಣವಿ ಸದಾ ನಗುತ್ತಾ ಇರುತ್ತಾರೆ. ಅದನ್ನು ನೋಡುವುದೇ ಒಂದು ರೀತಿಯ ಆನಂದ ಎಂದು ಹೇಳಿದರು. ಒಟ್ಟಾರೆ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಲಿಂದ ಲ್ಯಾಗ್ ಮಂಜು ಮನೆಯ ಎಲ್ಲಾ ಸದಸ್ಯರನ್ನು ನಗುವಿನ ಅಲೆಯಲ್ಲಿ ತೇಲಿಸುತ್ತಿದ್ದಾರೆ. ಇದೀಗ ಶನಿವಾರದ ಎಪಿಸೋಡ್‍ನಲ್ಲಿ ಕಿಚ್ಚ ಸುದೀಪ್ ಮುಖದಲ್ಲಿ ಕೂಡ ನಗು ಮೂಡಿಸಿದ್ದಾರೆ.