Tag: ಲೌಡ್ ಸ್ಪೀಕರ್

  • ಕಲ್ಯಾಣ ಕರ್ನಾಟಕ KSRTC ಬಸ್‍ಗಳಲ್ಲಿ ಮೊಬೈಲ್ ಲೌಡ್ ಸ್ಪೀಕರ್ ಇಟ್ಟು ಸಾಂಗ್, ಸಿನಿಮಾ ನೋಡೋದಕ್ಕೆ ನಿರ್ಬಂಧ

    ಕಲ್ಯಾಣ ಕರ್ನಾಟಕ KSRTC ಬಸ್‍ಗಳಲ್ಲಿ ಮೊಬೈಲ್ ಲೌಡ್ ಸ್ಪೀಕರ್ ಇಟ್ಟು ಸಾಂಗ್, ಸಿನಿಮಾ ನೋಡೋದಕ್ಕೆ ನಿರ್ಬಂಧ

    -ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಆದೇಶ ಪ್ರಕಟ

    ಬೆಂಗಳೂರು: ಇನ್ಮುಂದೆ ಕಲ್ಯಾಣ ಕರ್ನಾಟಕ KSRTC ಬಸ್‍ಗಳಲ್ಲಿ ಮೊಬೈಲ್‍ನಲ್ಲಿ ಲೌಡ್ ಸ್ಪೀಕರ್ ಇಟ್ಟು ಸಾಂಗ್ ಕೇಳೋದು ಸಿನಿಮಾ ನೋಡೋದನ್ನು ನಿರ್ಬಂಧಿಸಿದೆ.

    ಈ ಬಗ್ಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಆದೇಶ ಹೊರಡಿಸಿದೆ. ಒಂದ್ವೇಳೆ ಹಾಡು, ಸಿನಿಮಾ ಹಾಕಿಕೊಳ್ಳಬೇಕಿದ್ರೆ ಮೊದಲು ಬಸ್ ನಿರ್ವಾಹಕ, ಪ್ರಯಾಣಿಕರ ಅನುಮತಿ ಪಡೆದಕೊಳ್ಳಬೇಕಿದೆ. ಈ ಆದೇಶ ಉಲ್ಲಂಘಿಸಿದರೆ ಬಸ್‍ನ್ನು ಅರ್ಧದಾರಿಯಲ್ಲೇ ನಿಲ್ಲಿಸಿ ಆ ಪ್ರಯಾಣಿಕನನ್ನು ಕೆಳಗೆ ಇಳಿಸಬೇಕು ಎಂದು ತಿಳಿಸಿದೆ. ಸಮಸ್ಯೆ ಎದುರಾದರೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ನಿರ್ವಾಹಕರಿಗೆ ಸೂಚಿಸಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಮುಚ್ಚಿಹಾಕಲು ಬಿಜೆಪಿ, ಕಾಂಗ್ರೆಸ್ ಯತ್ನ: ಎಚ್‍ಡಿಕೆ

    ಕೆಎಸ್‌ಆರ್‌ಟಿಸಿ ಸಾರಿಗೆ ರಾಜ್ಯದೊಳಗೆ ಮತ್ತು ನೆರೆ-ಹೊರೆಯ ಅಂತರ ರಾಜ್ಯ ಪ್ರದೇಶಗಳಲ್ಲಿ ವಿವಿಧ ಮಾದರಿಯ ಸೇವೆಗಳನ್ನು ಕಲ್ಪಿಸಿಕೊಡುತ್ತಿದೆ. ಈ ನಡುವೆ ಪ್ರಯಾಣಿಕರು ಬಸ್‍ನಲ್ಲಿ ಮೊಬೈಲ್ ದೂರವಾಣಿಯ ಮೂಲಕ ಹಾಡು, ಸಿನಿಮಾಗಳನ್ನು ಜೋರಾಗಿ ಹಾಕುವುದರಿಂದ ಶಬ್ದ ಮಾಲಿನ್ಯ ಮತ್ತು ಇತರ ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ಮನಗಂಡು ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ. ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989, ನಿಯಮ 94(1)(V)ರ ಪ್ರಕಾರ ಬಸ್‍ನಲ್ಲಿ ಜೋರಾಗಿ ಹಾಡು, ಸಿನಿಮಾಗಳನ್ನು ಹಾಕುವುದನ್ನು ನಿರ್ಬಂಧಿಸಿದೆ. ಇದನ್ನೂ ಓದಿ: ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೈಲಿನಿಂದ ಬಿಡುಗಡೆ

     

  • ಆಂಧ್ರ, ತಮಿಳುನಾಡಲ್ಲೂ ಆನ್ ಆಗಲಿದೆ ಲೌಡ್ ಸ್ಪೀಕರ್!

    ಆಂಧ್ರ, ತಮಿಳುನಾಡಲ್ಲೂ ಆನ್ ಆಗಲಿದೆ ಲೌಡ್ ಸ್ಪೀಕರ್!

    ಡಾ.ಕೆ.ರಾಜು ನಿರ್ಮಾಣದ ಲೌಡ್ ಸ್ಪೀಕರ್ ಚಿತ್ರ ಇದೇ ತಿಂಗಳ 10ನೇ ತಾರೀಕಿನಂದು ಬಿಡುಗಡೆಯಾಗಲಿದೆ. ಈ ಹಂತದಲ್ಲಿ ಚಿತ್ರತಂಡ ಮತ್ತೊಂದು ಖುಷಿಯ ವಿಚಾರವನ್ನು ಹಂಚಿಕೊಂಡಿದೆ.

    ಕರ್ನಾಟಕದಲ್ಲಿ ಹೆಚ್ಚು ಸಂಖ್ಯೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಲೌಡ್ ಸ್ಪೀಕರ್ ಹೊರರಾಜ್ಯಗಳಲ್ಲಿಯೂ ಬಿಡುಗಡೆಯಾಗಲಿದೆ. ಆಂಧ್ರ ಮತ್ತು ತಮಿಳುನಾಡುಗಳಲ್ಲಿಯೂ ಈ ಚಿತ್ರ ಬಿಡುಗಡೆಯಾಗುವುದು ಗ್ಯಾರೆಂಟಿ.

    ಇದು ಹೊಸ ಬಗೆಯ ಕಥಾ ಹಂದರ ಹೊಂದಿರುವ ಚಿತ್ರ. ಈವತ್ತಿಗೆ ಮೊಬೈಲ್ ಅಂದರೆ ಸರ್ವಂತರ್ಯಾಮಿ. ತೀರಾ ಹಳ್ಳಿಗಾಡುಗಳಲ್ಲಿಯೂ ಜನ ಮೊಬೈಲು ಬಿಟ್ಟು ಬದುಕಲಾರದಂಥಾ ವಾತಾವರಣ. ಆದರೆ, ಒಂದೇ ಒಂದು ದಿನದ ಮಟ್ಟಿಗೆ ಲೌಡ್ ಸ್ಪೀಕರ್ ಆನ್ ಮಾಡಿಕೊಂಡೇ ಮಾತಾಡುವ ಛಾಲೆಂಜನ್ನೇನಾದರೂ ಹಾಕಿದರೆ ಬಹುತೇಕರು ಎಸ್ಕೇಪಾಗುತ್ತಾರೆ. ಅದಕ್ಕೆ ಕಾರಣ ಪ್ರತೀ ಮನುಷ್ಯನೂ ಬಚ್ಚಿಟ್ಟುಕೊಂಡಿರೋ ರಹಸ್ಯಗಳು!

    ಅಂಥಾದ್ದರಲ್ಲೂ ಒಂದು ದಿನ ಪೂರ್ತಿ ಲೌಡ್ ಸ್ಪೀಕರ್ ಆನ್ ಮಾಡಿಕೊಂಡೇ ಮಾತಾಡಬೇಕಾಗಿ ಬಂದಾಗ ಅದೇನೇನು ಅವಘಡಗಳು ಸಂಭವಿಸುತ್ತವೆ ಎಂಬುದರ ಸುತ್ತ ಈ ಕಥೆ ಹೆಣೆಯಲ್ಪಟ್ಟಿದೆ. ಈ ಹಿಂದೆ ಧೈರ್ಯಂ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಡಾ.ಕೆ.ಆರ್.ರಾಜು ಅವರು ಹೊಸತನದ ಕಾರಣದಿಂದಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಧೈರ್ಯಂ ಚಿತ್ರದ ಮೂಲಕ ಅಜೇಯ್ ರಾವ್ ಅವರಿಗೆ ಮಾಸ್ ಲುಕ್ಕು ಕೊಟ್ಟಿದ್ದ ಶಿವತೇಜಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

    ಇದೀಗ ಆಂಧ್ರ ಮತ್ತು ತಮಿಳುನಾಡುಗಳಲ್ಲಿಯೂ ಬಿಡುಗಡೆಗೆ ತಯಾರಾಗಿರುವ ಈ ಚಿತ್ರ ಬೇರೆ ಬೇರೆ ಭಾಷೆಗಳಿಗೆ ರೀಮೇಕ್ ಆಗುವ ಭರವಸೆಯನ್ನೂ ಕೂಡಾ ಚಿತ್ರ ತಂಡ ಇಟ್ಟುಕೊಂಡಿದೆ. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಲೌಡ್ ಸ್ಪೀಕರ್ ಆನ್ ಆಗಲು ಕೆಲ ದಿನಗಳು ಮಾತ್ರ ಬಾಕಿ ಉಳಿದಿವೆ.