Tag: ಲೋಸಭಾ ಚುನಾವಣೆ

  • ಮಂಡ್ಯ ಟೆನ್ಶನ್ – ರೆಸಾರ್ಟಿಗೆ ಪುತ್ರನನ್ನ ಕರೆಸಿಕೊಂಡ ಸಿಎಂ ಹೆಚ್‍ಡಿಕೆ

    ಮಂಡ್ಯ ಟೆನ್ಶನ್ – ರೆಸಾರ್ಟಿಗೆ ಪುತ್ರನನ್ನ ಕರೆಸಿಕೊಂಡ ಸಿಎಂ ಹೆಚ್‍ಡಿಕೆ

    ಉಡುಪಿ: ಲೋಕಸಭಾ ಚುನಾವಣೆಯ ಬಳಿಕ ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಹೊಗೆ ಕಾಣಿಸಿಕೊಂಡಿದ್ದು, ಮಂಡ್ಯದಲ್ಲಿ ಬಂಡಾಯ ಎದ್ದ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಎಚ್‍ಡಿಕೆ ವಿಶ್ರಾಂತಿ ಪಡೆಯುತ್ತಿರುವ ರೆಸಾರ್ಟಿಗೆ ನಿಖಿಲ್ ಆಗಮಿಸಿದ್ದಾರೆ.

    ಇಂದು ಉಡುಪಿಯ ಕಾಪುವಿನಲ್ಲೇ ನಿಖಿಲ್ ಅವರು ಸಿಎಂ ಅವರೊಂದಿಗೆ ಉಳಿಯಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇತ್ತ ಮಂಡ್ಯ ಫಲಿತಾಂಶದ ವಿಚಾರವಾಗಿ ಬಹುಮುಖ್ಯ ಚರ್ಚೆ ನಡೆಯಲಿದೆ ಎಂಬ ಮಾಹಿತಿ ಲಭಿಸಿದ್ದು, ಕ್ಷೇತ್ರದ ಫಲಿತಾಂಶದ ಬಗ್ಗೆ ನಿಖಿಲ್ ಚಿಂತಿತರಾಗಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಪುತ್ರನಿಗೆ ಸಿಎಂ ಕುಮಾರಸ್ವಾಮಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

    ಮಂಡ್ಯ ರೆಬೆಲ್ ಕಾಂಗ್ರೆಸ್ ನಾಯಕರೆಲ್ಲರೂ ಕೂಡ ಸುಮಲತಾ ಅವರೊಂದಿಗೆ ಡಿನ್ನರ್ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಎಲ್ಲಾ ನಾಯಕರು ಕೂಡ ಸುಮಲತಾ ಅಂಬರೀಶ್ ಅವರ ಪರ ಕೆಲಸ ಮಾಡಿದ್ದಾರೆ ಎಂಬ ಮಾತು ಕೇಳಿಬಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇತ್ತ ಕಾಂಗ್ರೆಸ್ ಪಕ್ಷದ ನಾಯಕರು ಮಂಡ್ಯ ಮುಖಂಡರ ಪರ ಪರೋಕ್ಷವಾಗಿ ಹೇಳಿಕೆ ನೀಡಿ ಸಮರ್ಥಿಸಿಕೊಂಡಿದ್ದಾರೆ.

  • ಪ್ರಜಾಪ್ರಭುತ್ವದ ಹಬ್ಬಕ್ಕೆ ಗೂಗಲ್ ಡೂಡಲ್ ಗೌರವ

    ಪ್ರಜಾಪ್ರಭುತ್ವದ ಹಬ್ಬಕ್ಕೆ ಗೂಗಲ್ ಡೂಡಲ್ ಗೌರವ

    ಬೆಂಗಳೂರು: ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ 2019 ಲೋಕಸಭಾ ಚುನಾವಣೆ ಇಂದಿನಿಂದ ಆರಂಭಗೊಂಡ ಹಿನ್ನೆಲೆಯಲ್ಲಿ ಸರ್ಚ್ ಇಂಜಿನ್ ಗೂಗಲ್ ಡೂಡಲ್ ಗೌರವ ನೀಡಿದೆ. ಮತದಾನದ ಚಿಹ್ನೆಯ ಡೂಡಲ್ ತಯಾರಿಸಿ ಜಾಗೃತಿ ಮಾಡಿಸಿದೆ.

    ತೋರು ಬೆರಳಿಗೆ ಮತದಾನ ಮಾಡಿರುವ ಚಿಹ್ನೆಯ ಶಾಯಿ ಇರುವ ಚಿತ್ರವಿರುವ ಡೂಡಲ್ ಅನ್ನು ಗೂಗಲ್ ಭಾರತದ ಹೋಮ್ ಪೇಜ್‍ನಲ್ಲಿ ಹಾಕಿದೆ. ಈ ಡೂಡಲ್ ಮೇಲೆ ಕ್ಲಿಕ್ ಮಾಡಿದರೆ ಮತದಾನ ಪ್ರಕ್ರಿಯೆಯ ವಿವರಗಳು ಹಾಗೂ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದವರಿಗೆ ಬೇಕಾದ ಸಂರ್ಪೂಣ ಮಾಹಿತಿಯನ್ನು ಪಡೆಯಬಹುದಾಗಿದೆ.

    ಹೇಗೆ ಮತದಾನ ಪ್ರಕ್ರಿಯೆ ನಡೆಯುತ್ತದೆ? ತಮ್ಮ ಮತ ಇರುವ ಬೂತ್ ಪತ್ತೆ ಹಚ್ಚುವುದು ಹೇಗೆ? ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆ? ಇವಿಎಂ (ವಿವಿಪ್ಯಾಟ್) ಬಳಕೆ ಮಾಡುವುದು ಹೇಗೆ? ಸೇರಿದಂತೆ ಚುನಾವಣಾ ದಿನಾಂಕಗಳ ಮಾಹಿತಿಯನ್ನು ಪಡೆಯಬಹುದು.

    2019 ರ ಚುನಾವಣೆ ಏಳು ಹಂತಗಳಲ್ಲಿ 543 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರ ಬರಲಿದೆ. ಕರ್ನಾಟಕದಲ್ಲಿ ಏ.18 ಮತ್ತು ಏ.23 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.