Tag: ಲೋನ್ ಆ್ಯಪ್

  • ಸಾಲ ನೀಡುವುದಾಗಿ ಹೇಳಿ ವ್ಯಕ್ತಿಯ ಖಾತೆಯಲ್ಲಿದ್ದ ಹಣ ಲಪಟಾಯಿಸಿದ ವಂಚಕರು

    ಸಾಲ ನೀಡುವುದಾಗಿ ಹೇಳಿ ವ್ಯಕ್ತಿಯ ಖಾತೆಯಲ್ಲಿದ್ದ ಹಣ ಲಪಟಾಯಿಸಿದ ವಂಚಕರು

    ದಾವಣಗೆರೆ: ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೂ ಮೋಸ ಹೋಗುವವರು ಇದ್ದೇ ಇರುತ್ತಾರೆ. ಲೋನ್ ಆ್ಯಪ್‌ಗಳಿಂದ ಮೋಸ ಹೋಗದಿರಿ ಎಂದು ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಮಾತ್ರ ಜಾಗೃತರಾಗದೇ, ವಂಚಕರ ಮಾತುಗಳನ್ನು ಕೇಳಿ ತಮ್ಮ ಹಣವನ್ನು (Money) ಕಳೆದುಕೊಳ್ಳುತ್ತಾರೆ.

    ಹೀಗೆ 10 ಲಕ್ಷ ರೂ. ಹಣ ಲೋನ್ ನೀಡುವುದಾಗಿ ಹೇಳಿ ನಂಬಿಸಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 34 ಸಾವಿರ ರೂ. ವಂಚನೆ (Fraud) ಮಾಡಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರದ ಹಾಲಿವಾಣ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮೌನೇಶ್ವರಪ್ಪ ಎನ್ನುವವರಿಗೆ ಖಾಸಗಿ ಹಣಕಾಸು ಸಂಸ್ಥೆ ಹೆಸರಿನಲ್ಲಿ ಕರೆ ಮಾಡಿ ವಂಚಿಸಿದ್ದಾರೆ.

    ಕರೆ ಮಾಡಿದ ವಂಚಕರು ಸಾಲ ನೀಡುವುದಾಗಿ ಹೇಳಿ ಲಿಂಕ್ ಕಳುಹಿಸಿದ್ದಾರೆ. ನಿಮಗೆ 10 ಲಕ್ಷ ರೂ. ಸಾಲ ಮಂಜೂರಾಗಿದೆ ಎಂದು ನಂಬಿಸಿದ ವಂಚಕರು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸಂಖ್ಯೆ ಹಾಗೂ ಬ್ಯಾಂಕ್ ಪಾಸ್‌ಬುಕ್ ವಿವರ ಪಡೆದಿದ್ದಾರೆ. ಸಾಲದ ನಿರ್ವಹಣಾ ಶುಲ್ಕವಾಗಿ 34,800 ರೂ. ಹಣವನ್ನು ಫೋನ್‌ಪೇ ಮೂಲಕ ಹಾಕಲು ಹೇಳಿದ್ದಾರೆ. ಇದನ್ನೂ ಓದಿ: BBMP ಬೆಂಕಿ ಪ್ರಕರಣದ ತನಿಖೆ ಚುರುಕು- ಚೀಫ್ ಎಂಜಿನಿಯರ್‌ಗೆ  ನೋಟಿಸ್

    ಹತ್ತು ಲಕ್ಷ ರೂ. ಕಡಿಮೆ ಬಡ್ಡಿಗೆ ಸಿಗುತ್ತದೆ ಎಂದು ನಂಬಿದ ಮೌನೇಶ್ವರಪ್ಪ ವಂಚಕರ ಖಾತೆಗೆ ಹಣ ಹಾಕಿದ್ದಾರೆ. ಬಹಳ ದಿನವಾದರೂ ಹಣ ಬಾರದ ಕಾರಣ ವಂಚಕರಿಕೆ ಕರೆ ಮಾಡಿದಾಗ ಮತ್ತೆ 15,200 ರೂ. ಹಣ ಕಳುಹಿಸುವಂತೆ ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ಮೌನೇಶ್ವರಪ್ಪ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೌನೇಶ್ವರಪ್ಪ ಕಷ್ಟ ಪಟ್ಟು ದುಡಿದ ದುಡ್ಡನ್ನು ವಂಚಕರ ಖಾತೆಗೆ ಹಾಕಿ ಬರಿಗೈ ಮಾಡಿಕೊಂಡಿದ್ದಾರೆ. ಅಲ್ಲದೆ ಕಳೆದುಕೊಂಡ ಹಣವನ್ನು ಹಿಂದಿರುಗಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಸರ್ಕಾರ ಇದ್ದಾಗಲೆಲ್ಲಾ ಭ್ರಷ್ಟಾಚಾರ ಇತ್ತು: ಡಾ.ಶರಣ ಪ್ರಕಾಶ್ ಪಾಟೀಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ್ಯಪ್‌ಗಳಲ್ಲಿ ಸಾಲ ಪಡೆವ ಮುನ್ನ ಹುಷಾರ್ – ಸಾಲ ತೀರಿಸಿದ್ರೂ ಕಿರುಕುಳ, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

    ಆ್ಯಪ್‌ಗಳಲ್ಲಿ ಸಾಲ ಪಡೆವ ಮುನ್ನ ಹುಷಾರ್ – ಸಾಲ ತೀರಿಸಿದ್ರೂ ಕಿರುಕುಳ, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

    ಚಿಕ್ಕಬಳ್ಳಾಪುರ: ಆನ್‌ಲೈನ್ ಆ್ಯಪ್‌ಗಳಲ್ಲಿ (Online App) ಸಾಲ ಪಡೆದ ವ್ಯಕ್ತಿಯೊಬ್ಬ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ (Suicide) ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ನಗರದ ನಿವಾಸಿ ಕಾರ್ ಮೆಕ್ಯಾನಿಕ್ ಬಾಬಾಜಾನ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಈತ ಲೈವ್ ಇನ್ ಕ್ರೆಡಿಟ್, ಎಂಪೈರ್ ಕ್ರೆಡಿಟ್, ಹ್ಯೂಗೋ ಲೋನ್, ಪೇವಿ ಇಂಡಿಯಾ, ಕಾಯಿನ್ ಪಾರ್ಕ್, ಕ್ಯಾಷ್ ಲೆಂಟ್ ಆಪ್ ಗಳಲ್ಲಿ ತಲಾ 5 ಸಾವಿರದಂತೆ 30 ಸಾವಿರ ಲೋನ್ (Loan) ಪಡೆದಿದ್ದ. ಇದನ್ನೂ ಓದಿ: ಶಬರಿಮಲೆ ಹಾದಿಯಲ್ಲಿ ಈ ಬಾರಿ 23 ಮಂದಿ ಹೃದಯಾಘಾತದಿಂದ ಸಾವು

    ಲೋನ್ ಪಡೆದು ಮರು ಪಾವತಿ ಮಾಡಿದ್ರೂ ಮರಳಿ ಖಾತೆಗೆ ಹಣ ಹಾಕಿ, ಬಡ್ಡಿ ಕಟ್ಟುವಂತೆ ಪೀಡಿಸುತ್ತಿದ್ದರು. ಅಲ್ಲದೇ ಬಡ್ಡಿ ಕಟ್ಟಿಲ್ಲ ಅಂತಾ ಬಾಬಾಜಾನ್ ಫೋಟೋವನ್ನ ಅಶ್ಲೀಲವಾಗಿ ಎಡಿಟ್ ಮಾಡಿದ್ದು, ಅಶ್ಲೀಲ ಬರಹಗಳನ್ನ ಬರೆದು ಬಾಬಾಜಾನ್ ಸಂಬಂಧಿಕರು, ಸ್ನೇಹಿತರಿಗೆ ಕಳುಹಿಸಿದ್ದಾರೆ.

    ಇಷ್ಟು ಸಾಲದು ಅಂತಾ ಫೋನ್ ಮಾಡಿ ಹಣ ಕಟ್ಟುವಂತೆ ಪದೇ-ಪದೇ ಟಾರ್ಚರ್ ಕೊಟ್ಟಿದ್ದಾರೆ. ಇದರಿಂದ ಮನನೊಂದ ಬಾಬಾಜಾನ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಶ್ರುತಿ ಹಾಸನ್

    ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಾಬಾಜಾನ್ ಚೇತರಿಸಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ.

    Live Tv
    [brid partner=56869869 player=32851 video=960834 autoplay=true]

  • 100 ಲೋನ್ ಆ್ಯಪ್‍ಗಳಿಂದ 500 ಕೋಟಿ ರೂ. ವ್ಯವಹಾರ – ಗ್ರಾಹಕರ ಮಾಹಿತಿ ಚೀನಾಗೆ ರವಾನಿಸಿದ ಗ್ಯಾಂಗ್ ಅರೆಸ್ಟ್

    100 ಲೋನ್ ಆ್ಯಪ್‍ಗಳಿಂದ 500 ಕೋಟಿ ರೂ. ವ್ಯವಹಾರ – ಗ್ರಾಹಕರ ಮಾಹಿತಿ ಚೀನಾಗೆ ರವಾನಿಸಿದ ಗ್ಯಾಂಗ್ ಅರೆಸ್ಟ್

    ನವದೆಹಲಿ: ಚೀನಾ ಮೂಲದ 100ಕ್ಕೂ ಹೆಚ್ಚು ಆ್ಯಪ್‍ಗಳ ಮೂಲಕ 500 ಕೋಟಿ ರೂ.ಗೂ ಹೆಚ್ಚು ಲೋನ್ ನೀಡಿ ಗ್ರಾಹಕರ ಮಾಹಿತಿಯನ್ನು ಚೀನಾಗೆ ಕಳುಹಿಸುತ್ತಿದ್ದ ಉತ್ತರಪ್ರದೇಶ ಮೂಲದ ಗ್ಯಾಂಗ್‍ನ 22 ಜನರನ್ನು ಬಂಧಿಸಲಾಗಿದೆ.

    ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಗ್ಯಾಂಗ್ 100ಕ್ಕೂ ಹೆಚ್ಚು ಆ್ಯಪ್‍ಗಳನ್ನು ಬಳಕ್ಕೆ ಮಾಡಿಕೊಂಡು ಗ್ರಾಹಕರಿಗೆ ಲೋನ್ ನೀಡಿತ್ತು. ಬಳಿಕ ಲೋನ್ ವೇಳೆ ಗ್ರಾಹಕರ ಮಾಹಿತಿಯನ್ನು ಪಡೆದುಕೊಂಡು ಆ ಮಾಹಿತಿಯನ್ನು ಚೀನಾ ಮತ್ತು ಹಾಕಾಂಗ್‍ಗೆ ಕಳುಹಿಸುವ ವ್ಯವಸ್ಥಿತ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಇದನ್ನೂ ಓದಿ: ಇಂಧನಕ್ಕಾಗಿ ತಿರುವನಂತಪುರಂನಲ್ಲಿ ಶ್ರೀಲಂಕಾದ 4 ವಿಮಾನಗಳು ಲ್ಯಾಂಡಿಂಗ್

    ಉತ್ತರಪ್ರದೇಶ ಮೂಲದ ಈ ಗ್ಯಾಂಗ್ ಕಳೆದ ಎರಡು ತಿಂಗಳಿನಿಂದ ಲಕ್ನೋದಲ್ಲಿ ಕಾಲ್ ಸೆಂಟರ್ ತೆರೆದು ಕಾರ್ಯಚರಣೆಗೆ ನಡೆಸುತ್ತಿತ್ತು. ಗ್ರಾಹಕರಿಗೆ ಫೋನ್ ಮಾಡಿ ಲೋನ್ ಕೊಡುವುದಾಗಿ ತಿಳಿಸಿ ಆ್ಯಪ್‍ಗಳನ್ನು ಇನ್‍ಸ್ಟಾಲ್ ಮಾಡಿದ ಬಳಿಕ ಕ್ಷಣ ಮಾತ್ರದಲ್ಲಿ ಬ್ಯಾಂಕ್ ಅಕೌಂಟ್‍ಗೆ ಹಣ ಬರುತ್ತಿತ್ತು. ಬಳಿಕ ಆ್ಯಪ್‍ಗಳ ಮೂಲಕ ಗ್ರಾಹಕರ ಮೊಬೈಲ್‍ನಲ್ಲಿದ್ದಂತ ದಾಖಲೆ, ಫೋಟೋಗಳನ್ನು ಬಳಸಿಕೊಂಡು ಸುಲಿಗೆ ಮತ್ತು ಗ್ರಾಹಕರಿಗೆ ಬೆದರಿಕೆ ಹಾಕುತ್ತಿತ್ತು ಮತ್ತು ಗ್ರಾಹಕರ ಮಾಹಿತಿಯನ್ನು ಚೀನಾ ಮತ್ತು ಹಾಂಕಾಂಗ್‍ಗೆ ಕಳುಹಿಸುತ್ತಿತ್ತು ಎಂಬ ಮಾಹಿತಿ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ- ಶಿರಚ್ಛೇದನ ಮಾಡುವುದಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್

    ಈಗಾಗಲೇ ಆ್ಯಪ್‍ಗಳ ಮೂಲಕ ಲೋನ್ ನೀಡಿ ಕಿರುಕುಳ ನೀಡಿ ಸುಲಿಗೆ ಮಾಡುತ್ತಿರುವ ಬಗ್ಗೆ 100ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದಾಗ ಉತ್ತರಪ್ರದೇಶದ ಗ್ಯಾಂಗ್ ದಿನಕ್ಕೆ 1 ಕೋಟಿ ರೂ.ಗೂ ಹೆಚ್ಚು ವ್ಯವಹಾರವನ್ನು ನಡೆಸುತ್ತಿತ್ತು. ಗ್ರಾಹಕರಿಗೆ ಕ್ಯಾಶ್ ಪೋರ್ಟ್, ರೂಪಾಯಿ ವೇ, ಲೋನ್ ಕ್ಯೂಬ್, ವಾವ್ ರೂಪಾಯಿ, ಸ್ಮಾರ್ಟ್ ವಾಲೆಟ್, ಜೈಂಟ್ ವಾಲೆಟ್, ಹಾಯ್ ರೂಪಾಯಿ, ಸ್ವಿಫ್ಟ್ ರುಪೀ, ವಾಲೆಟ್‍ವಿನ್, ಫಿಶ್‍ಕ್ಲಬ್, ಯೆಹ್‍ಕ್ಯಾಶ್, ಐಮ್ ಲೋನ್, ಗ್ರೋಟ್ರೀ, ಮ್ಯಾಜಿಕ್ ಬ್ಯಾಲೆನ್ಸ್, ಯೋಕಾಶ್, ಫಾರ್ಚೂನ್ ಟ್ರೀ, ಸೂಪರ್‍ಕಾಯಿನ್, ರೆಡ್ ಮ್ಯಾಜಿಕ್ ಈ ಎಲ್ಲಾ ಆ್ಯಪ್‍ಗಳ ಮೂಲಕ ಲೋನ್ ನೀಡಿ ಬಳಿಕ ಗ್ರಾಹಕರ ಮಾಹಿತಿಯನ್ನು ಕದಿಯುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

    Live Tv
    [brid partner=56869869 player=32851 video=960834 autoplay=true]

  • 8 ಸಾವಿರ ಸಾಲ ಮಾಡಿ ಲಕ್ಷ ಲಕ್ಷ ಮರುಪಾವತಿ ಮಾಡಿದ ಖಾಸಗಿ ಬ್ಯಾಂಕ್ ನೌಕರ

    8 ಸಾವಿರ ಸಾಲ ಮಾಡಿ ಲಕ್ಷ ಲಕ್ಷ ಮರುಪಾವತಿ ಮಾಡಿದ ಖಾಸಗಿ ಬ್ಯಾಂಕ್ ನೌಕರ

    ಹುಬ್ಬಳ್ಳಿ: ಲೋನ್ ಆ್ಯಪ್‌ನಲ್ಲಿ ಕೇವಲ 8 ಸಾವಿರ ರೂ. ಸಾಲ ಮಾಡಿದ ವ್ಯಕ್ತಿ ಲಕ್ಷ ಲಕ್ಷ ಹಣ ಮರುಪಾವತಿ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ರೋಹನ್ ಲೋನ್ ಆ್ಯಪ್‌ನಲ್ಲಿ ಹಣ ಪಡೆದು ಮೋಸಹೋದ ವ್ಯಕ್ತಿ. ರೋಹನ್ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಿದ್ದರೂ ಲೋನ್ ಕ್ಯೂಬ್ ಮೊಬೈಲ್ ಆ್ಯಪ್‌ನಲ್ಲಿ 8 ಸಾವಿರ ರೂ. ಸಾಲ ಪಡೆಯಲು ಮುಂದಾಗಿದ್ದರು.

    8 ಸಾವಿರ ರೂ. ಸಾಲದ ಮುಂಗಡ ಬಡ್ಡಿ ಕಡಿತಗೊಳಿಸಿ ಕೇವಲ 4,960 ರೂ. ಹಣವನ್ನು ಲೋನ್ ಆ್ಯಪ್ ನೀಡಿತ್ತು ಅಲ್ಲದೇ 8 ಸಾವಿರ ರೂ. ಹಣವನ್ನು 7 ದಿನಗಳಲ್ಲಿ ತೀರಿಸಬೇಕೆಂದು ಷರತ್ತು ಸಹ ವಿಧಿಸಿತ್ತು. ಈ ಬಗ್ಗೆ ರೋಹನ್‌ಗೆ ನಿತ್ಯ ಕರೆಗಳು ಬರುತ್ತಿದ್ದು, ಹಣ ಬೇಗ ಹಿಂತಿರುಗಿಸುವಂತೆ ಒತ್ತಡ ಹಾಕಲಾಗುತ್ತಿತ್ತು. ಇದನ್ನೂ ಓದಿ: ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

    ಈ ಕಿರಿಕಿರಿಗೆ ಬೇಸತ್ತ ರೋಹನ್ ಅದೇ ಆ್ಯಪ್‌ನಲ್ಲಿ ಪದೇ ಪದೇ ಲೋನ್ ಪಡೆದಿದ್ದಾರೆ. ಒಟ್ಟು 4,26,654 ರೂ. ಹಣ ಪಡೆದುಕೊಂಡಿದ್ದ ರೋಹನ್ ವಿಪರ್ಯಾಸವೆಂದರೆ ಅದೇ ಆ್ಯಪ್‌ಗೆ ಮತ್ತೆ ಹಿಂದಿರುಗಿಸಿದ್ದಾರೆ. ಹೀಗಿದ್ದರೂ ಆ್ಯಪ್‌ನಿಂದ ಮತ್ತೆ ಕರೆಗಳು ಬರುತ್ತಿದ್ದು, ಎಲ್ಲಾ ಸಾಲವನ್ನು ಮರಳಿ ತುಂಬುವಂತೆ ನಿರಂತರ ಒತ್ತಡ ಹಾಕಲಾಗಿದೆ.

    ಈ ಹಿನ್ನೆಲೆ ಆ್ಯಪ್‌ನಲ್ಲಿ ಮಾಡಿದ ಸಾಲವಲ್ಲದೇ, ವೈಯಕ್ತಿಕವಾಗಿ ಲಕ್ಷಾಂತರ ರೂ. ಹಣವನ್ನು ಮರುಪಾವತಿ ಮಾಡಿದ್ದಾರೆ. ಇಷ್ಟಾದರೂ ಆ್ಯಪ್ ರೋಹನ್‌ಗೆ, ವಿವಿಧ ನಂಬರ್‌ಗಳ ಮೂಲಕ ಕರೆ ಮಾಡಿ ಮತ್ತೆ ಹಣ ತುಂಬುವಂತೆ ಹೇಳಲಾಗುತ್ತಿದೆ. ಕೇಳಿದಷ್ಟು ಹಣ ನೀಡದಿದ್ದರೆ, ಎಲ್ಲಾ ಪರಿಚಯದವರಿಗೆ, ವೈಯಕ್ತಿಕ ಡೇಟಾ ಹಾಗೂ ಮೆಸೇಜ್‌ಗಳನ್ನು ಹಂಚುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ -ಬಜೆಟ್‍ನಲ್ಲಿ ರಾಜ್ಯಕ್ಕೆ 832 ಕೋಟಿ ಮೀಸಲು

    ಇದರಿಂದ ಮಾನಸಿಕವಾಗಿ ಕುಗ್ಗಿರುವ ರೋಹನ್, ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.