Tag: ಲೋಡ್ ಟೆಸ್ಟಿಂಗ್

  • ಇಂದಿನಿಂದ 3 ದಿನ ಪೀಣ್ಯ ಫ್ಲೈಓವರ್ ಬಂದ್

    ಇಂದಿನಿಂದ 3 ದಿನ ಪೀಣ್ಯ ಫ್ಲೈಓವರ್ ಬಂದ್

    ಬೆಂಗಳೂರು: ಬರೋಬ್ಬರಿ 22 ಜಿಲ್ಲೆಗಳ ಸಂಚಾರ ರಹದಾರಿ ಪೀಣ್ಯ ಫ್ಲೈಓವರ್ (Peenya Flyover) ಇಂದಿನಿಂದ ಮತ್ತೆ ಮೂರು ದಿನಗಳ ಕಾಲ ಬಂದ್ ಆಗಲಿದೆ. ಲೋಡ್ ಟೆಸ್ಟಿಂಗ್‌ಗಾಗಿ (Load Testing) ಎನ್‌ಹೆಚ್‌ಎ (NHA) ಮನವಿ ಮೇರೆಗೆ ಸಂಚಾರಿ ಪೊಲೀಸರು ಇಂದಿನಿಂದ ಫ್ಲೈಓವರ್ ಕ್ಲೋಸ್ ಮಾಡಲಿದ್ದಾರೆ.

    ಸುಮಾರು ಮೂರು ವರ್ಷದಿಂದ ಪೀಣ್ಯ ಫ್ಲೈಓವರ್ ಭಾರಿ ವಾಹನಗಳಿಗೆ ಬಂದ್ ಆಗಿದೆ. 2021ರಲ್ಲಿ ಪೀಣ್ಯ ಫ್ಲೈಓವರ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಭಾರಿ ಪ್ರಮಾಣದ ವಾಹನಗಳ ಸಂಚಾರ ನಿಷೇಧ ಮಾಡಲಾಗಿತ್ತು. ಪೀಣ್ಯ ಫ್ಲೈಓವರ್‌ನ ಗುಣಮಟ್ಟ ಸರಿಯಿಲ್ಲ, ಕಳಪೆ ಕಾಮಾಗಾರಿ, ಇಡೀ ಫ್ಲೈಓವರ್ ಅನ್ನು ಕೆಡವಬೇಕು ಎಂಬ ಚರ್ಚೆ ಆರಂಭವಾಗಿತ್ತು. ಆದರೆ ಕೆಲ ದಿನಗಳ ನಂತರ ಸಣ್ಣಪುಟ್ಟ ಕಾಮಾಗಾರಿ ಮಾಡಿ ಕೆಲ ಕೇಬಲ್‌ಗಳನ್ನು ಅಳವಡಿಸಿ ಸಣ್ಣ ಪ್ರಮಾಣದ ವೆಹಿಕಲ್ ಓಡಾಟಕ್ಕೆ ಅವಕಾಶ ಮಾಡಲಾಗಿತ್ತು. ಫ್ಲೈಓವರ್ ಮೇಲೆ ಸಂಪೂರ್ಣವಾಗಿ ಹೆವಿ ವೆಹಿಕಲ್‌ಗಳ ಓಡಾಟ ನಿರ್ಬಂಧಿಸಲಾಗಿತ್ತು. ಇದೀಗ ಮತ್ತೆ ಮೂರು ದಿನಗಳ ಕಾಲ ಪೀಣ್ಯ ಫ್ಲೈಓವರ್ ಬಂದ್ ಮಾಡಲಾಗುತ್ತದೆ. ಇದನ್ನೂ ಓದಿ: ನನಗೆ ತುಂಬಾ ಖುಷಿಯಾಗಿದೆ: ಅಯೋಧ್ಯೆ ರಾಮಮಂದಿರಕ್ಕೆ ಮಗ ಕೆತ್ತಿರುವ ರಾಮಲಲ್ಲಾ ಮೂರ್ತಿ ಆಯ್ಕೆಯಾಗಿದ್ದಕ್ಕೆ ತಾಯಿ ಸಂತಸ

    ಇಂದು ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11 ಗಂಟೆವರೆಗೆ ಪೀಣ್ಯ ಫ್ಲೈಓವರ್ ಬಂದ್ ಮಾಡಲಾಗುತ್ತದೆ. ಎನ್‌ಹೆಚ್‌ಎಐ ಅಧಿಕಾರಿಗಳು ಕೇಬಲ್ ಅಳವಡಿಕೆ ಕಾರ್ಯ ಪೂರ್ಣಗೊಳಿಸಿದ್ದು, ಹೆವಿ ವೆಹಿಕಲ್‌ಗಳ ಓಡಾಟ ನಡೆಸಿ ಪರೀಕ್ಷೆ ನಡೆಸಲಿದ್ದಾರೆ. ಹೆವಿ ವೆಹಿಕಲ್‌ಗಳ ಓಡಾಟಕ್ಕೆ ತಂತ್ರಜ್ಞರು ಯೆಸ್ ಅಂದರೆ ಇನ್ಮುಂದೆ ಬಸ್ಸು, ಲಾರಿಗಳು ಫ್ಲೈಓವರ್ ಮೇಲೆಯೇ ಸಾಗಬಹುದು. ಹೀಗಾಗಿ ಎನ್‌ಹೆಚ್‌ಎಐ ಅಧಿಕಾರಿಗಳ ಮನವಿ ಮೇರೆಗೆ ಮೂರು ದಿನಗಳ ಕಾಲ ಸಂಚಾರಿ ಪೊಲೀಸರು ಫ್ಲೈಓವರ್ ಬಂದ್ ಮಾಡಲಿದ್ದಾರೆ. ಮೂರು ದಿನಗಳ ಕಾಲ ಎನ್‌ಹೆಚ್ 48ರಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಲಿದ್ದು, ವಾಹನ ಸವಾರರು ಪರ್ಯಾಯ ರಸ್ತೆ ಬಳಸುವುದು ಒಳಿತು. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ಗೆ ಫುಡ್‌ ಡೆಲಿವರಿ ಬಾಯ್‌ ಬಲಿ

  • ಜ.16ರಿಂದ 3 ದಿನಗಳ ಕಾಲ ಪೀಣ್ಯ ಫ್ಲೈಓವರ್ ಬಂದ್ – ಕಾರಣ ಏನು?

    ಜ.16ರಿಂದ 3 ದಿನಗಳ ಕಾಲ ಪೀಣ್ಯ ಫ್ಲೈಓವರ್ ಬಂದ್ – ಕಾರಣ ಏನು?

    ಬೆಂಗಳೂರು: ಲೋಡ್ ಟೆಸ್ಟಿಂಗ್ (Load Testing) ಮಾಡುವ ಸಲುವಾಗಿ ಜನವರಿ 16ರಿಂದ ಮೂರು ದಿನಗಳ ಕಾಲ ಪೀಣ್ಯ ಫ್ಲೈಓವರ್ (Peenya Flyover) ಬಂದ್ ಆಗಲಿದೆ.

    ಜನವರಿ 16ರ ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11 ಗಂಟೆಯವರೆಗೆ ಈ ಫ್ಲೈಓವರ್ ಕ್ಲೋಸ್ ಆಗಲಿದೆ. ಈ ಹಿನ್ನೆಲೆ ಎಲ್ಲಾ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದರಿಂದಾಗಿ ಮುಂದಿನ ವಾರ ತುಮಕೂರು ರಸ್ತೆಯಲ್ಲಿ ಬೃಹತ್ ವಾಹನ ದಟ್ಟಣೆ ಉಂಟಾಗಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮೂರು ಡಿಸಿಎಂ ಚರ್ಚೆ ಹೈಕಮಾಂಡ್ ಅಂಗಳಕ್ಕೆ ಬಂದಿಲ್ಲ: ಖರ್ಗೆ ಸ್ಪಷ್ಟನೆ

    15 ಮೀಟರ್ ಅಗಲದ, 4.2 ಕಿಮೀ ಉದ್ದದ ಮೇಲ್ಸೇತುವೆ ಪೀಣ್ಯದಲ್ಲಿ ಪ್ರಾರಂಭವಾಗಿ ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಕೊನೆಗೊಳ್ಳುತ್ತದೆ. 2022ರಲ್ಲಿ ಪೀಣ್ಯ ಫ್ಲೈಓವರ್‌ನ ಎರಡು ಪಿಲ್ಲರ್‌ನ ಕೇಬಲ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಹೆವಿ ವೆಹಿಕಲ್‌ಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಇದನ್ನೂ ಓದಿ: ವಿಜಯಪುರ ಪಾಲಿಕೆ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ – ಚುನಾವಣೆ ಬಹಿಷ್ಕರಿಸಿದ ಯತ್ನಾಳ್‌, ಬಿಜೆಪಿ ಸದಸ್ಯರು

    ಈ ಕುರಿತು ಎನ್‌ಹೆಚ್‌ಎಐ ಯೋಜನಾ ನಿರ್ದೇಶಕ ಜಯಕುಮಾರ್ ಮಾತನಾಡಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಪ್ರಿಸ್ಟ್ರೆಸ್ಡ್ ಕೇಬಲ್‌ಗಳ ಸಾಮರ್ಥ್ಯವನ್ನು ನಿರ್ಣಯಿಸಲು ನಾವು ಲೋಡ್ ಪರೀಕ್ಷೆಗಳನ್ನು ನಡೆಸಬೇಕಾಗಿದೆ. ಲೋಡ್ ಪರೀಕ್ಷೆಯ ಸಮಯದಲ್ಲಿ ತಲಾ 32 ಟನ್‌ಗಳನ್ನು ಹೊತ್ತ 8 ಟ್ರಕ್‌ಗಳನ್ನು 48 ಗಂಟೆಗಳಿಗೂ ಹೆಚ್ಚು ಕಾಲ ಫ್ಲೈಓವರ್ ಮೇಲೆ ಓಡಿಸಲಾಗುತ್ತದೆ. ನಾವು ಎರಡು ಸ್ಪ್ಯಾನ್‌ಗಳನ್ನು ಮಾತ್ರ ಪರಿಶೀಲಿಸುತ್ತೇವೆ. ಇದಕ್ಕಾಗಿ 105-106 ಮತ್ತು 117-118 ಕಂಬಗಳನ್ನು ಸಂಪರ್ಕಿಸುವ ವ್ಯಾಪ್ತಿಯನ್ನು ಎನ್‌ಹೆಚ್‌ಎಐ ಗುರುತಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಮರ ಜನಸಂಖ್ಯೆ ಹೆಚ್ಚಾದ್ರೆ ಹಿಂದೂಗಳ ಪರಿಸ್ಥಿತಿ ಹೇಗಿರತ್ತೆ ಯೋಚ್ನೆ ಮಾಡಿ: ಹರೀಶ್ ಪೂಂಜಾ ಭಾಷಣ ವೈರಲ್

    ಈ ಫ್ಲೈಓವರ್ 23 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವುದಲ್ಲದೇ ಬೆಂಗಳೂರು ಮತ್ತು ರಾಜ್ಯದ ಇತರೆ ಜಿಲ್ಲೆಗಳಿಗೆ ಒಂದು ರೀತಿಯ ಆರ್ಥಿಕ ಚೇತರಿಕೆಯ ಕೊಂಡಿ ಆಗಿದೆ. ಪೀಣ್ಯ ಮೇಲ್ಸೇತುವೆ ಒಟ್ಟು 120 ಪಿಲ್ಲರ್‌ಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಭಾರತದಿಂದ ಬಾಂಬ್‌ ದಾಳಿ!