Tag: ಲೋಕೋಪಯೋಗಿ

  • ನಂದು ಲೋಕೋಪಯೋಗಿ, ನೀರಾವರಿ ನನ್ನ ಇಲಾಖೆಗೆ ಬರಲ್ಲ: ರೇವಣ್ಣ

    ನಂದು ಲೋಕೋಪಯೋಗಿ, ನೀರಾವರಿ ನನ್ನ ಇಲಾಖೆಗೆ ಬರಲ್ಲ: ರೇವಣ್ಣ

    ಮಂಡ್ಯ: ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ನೀರಾವರಿ ನನ್ನ ಇಲಾಖೆಗೆ ಬರಲ್ಲ. ನನ್ನದು ಲೋಕೋಪಯೋಗಿ ಇಲಾಖೆ ಎಂದು ರೇವಣ್ಣ ಉತ್ತರ ನೀಡಿದ್ದಾರೆ.

    ಇಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯನ್ನು ಮುಖ್ಯಮಂತ್ರಿಗಳು ಕಡೆಗಣಿಸುತ್ತಿದ್ದಾರೆ ಎಂಬ ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕೆಲವರು ಆಪಾದನೆ ಮಾಡುತ್ತಾರೆ ಬಿಡಿ ಎಂದು ಹೇಳಿದ್ದಾರೆ.

    ಚಲುವರಾಯಸ್ವಾಮಿ ಪೊಳ್ಳು ಆಪಾದನೆಗಳಿಗೆ ಉತ್ತರ ಕೊಡುತ್ತಾ ಹೋದರೆ ಪೊಳ್ಳೆದ್ದು ಹೋಗುತ್ತೇವೆ. ಮಂಡ್ಯ ಜಿಲ್ಲೆಗೆ ಕಾವೇರಿ ನೀರಿನ ಅವಶ್ಯಕತೆ ಇರೋ ಬಗ್ಗೆ ಸಂಸತ್‍ನಲ್ಲಿ ಪ್ರಜ್ವಲ್ ರೇವಣ್ಣ ಮಾತನಾಡಿದ್ದಾರೆ. ಹೇಮಾವತಿ ನದಿಯಲ್ಲಿರುವ ನೀರು ಸಹ ಇನ್ನು ಕೇವಲ ಹತ್ತು ದಿನ ಮಾತ್ರ ಕುಡಿಯಲು ಸಿಗುತ್ತದೆ ಎಂದು ತಿಳಿಸಿದರು.

    ಇನ್ನು ಮಧ್ಯಂತರ ಚುನಾವಣೆ ಬರುವ ಬಗ್ಗೆ ಕೇಳಿದಾಗ, ನನಗೆ ಆದರ ಬಗ್ಗೆ ಗೊತ್ತಿಲ್ಲ. ನಾನು ಕೇವಲ ರೋಡ್ ಮಂತ್ರಿ ನೀವು ಅದನ್ನು ರಾಷ್ಟ್ರೀಯ ಅಧ್ಯಕ್ಷರನ್ನೇ ಕೇಳಿ ಎಂದು ಹೇಳಿದ್ದಾರೆ.

  • ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

    ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ 5ನೇ ಬಜೆಟ್ ಇಂದು ಮಂಡನೆಯಾಗಿದೆ. ಬಜೆಟ್‍ನಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ

    ಒಟ್ಟು ಅನುದಾನ- 8559 ಕೋಟಿ

    – ಬೆಂಗಳೂರಿನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಬೆಂಗಳೂರು ಸುತ್ತಮುತ್ತಲಿನ ಕೆಳಕಂಡ 150 ಕಿ.ಮೀ ರಸ್ತೆಗಳ ಅಭಿವೃದ್ಧಿ – 1455 ಕೋಟಿ ರೂ. ವೆಚ್ಚ.
    * ಹೊಸಕೋಟೆ – ಬೂದಿಗೆರೆ – ಮೈಲೇನಹಳ್ಳಿ – ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ.
    * ನೆಲಮಂಗಲ – ಮಧುರೆ – ಬ್ಯಾತ ರಸ್ತೆ.
    * ಆನೇಕಲ್ – ಅತ್ತಿಬೆಲೆ – ಸರ್ಜಾಪುರ – ವರ್ತೂರ್ – ವೈಟ್‍ಫೀಲ್ಡ್ – ಹೊಸಕೋಟೆ ರಸ್ತೆ.
    * ಹಾರೋಹಳ್ಳಿ – ಉರುಗನದೊಡ್ಡಿ – ಕೆಐಎಡಿಬಿ ಕೈಗಾರಿಕಾ ಪ್ರದೇಶ – ಜಿಗಣಿ – ಆನೇಕಲ್ ರಸ್ತೆ

    – ಕೊಡಗು ಜಿಲ್ಲೆಗೆ 50 ಕೋಟಿ ರೂ. ವಿಶೇಷ ರಸ್ತೆ ಪ್ಯಾಕೇಜ್
    – ಮೈಸೂರು ನಗರದ ಸುತ್ತಲಿನ 22 ಕಿ.ಮೀ ಉದ್ದದ ರಸ್ತೆಗಳ ಅಭಿವೃದ್ಧಿ – 117 ಕೋಟಿ ರೂ. ವೆಚ್ಚ.
    – ಮಂಗಳೂರು – ಅತ್ರಾಡಿ ರಾಜ್ಯ ಹೆದ್ದಾರಿ 67ರ 2.50 ಕಿಮೀ ಉದ್ದದ ರಸ್ತೆ ಅಭಿವೃದ್ಧಿ – 50 ಕೋಟಿ ರೂ. ವೆಚ್ಚ.