ಗೆಳೆಯನ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿ, ನನಗೆ ಅವರ ಸಾವಿನ ಬಗ್ಗೆ ಬೆಳಗ್ಗೆ 4 ಗಂಟೆಗೆ ನಟಿ ದಿವ್ಯಾಶ್ರೀ ಕಡೆಯಿಂದ ತಿಳಿಯಿತು. ದಿವ್ಯಾ ಮತ್ತು ರಾಕೇಶ್ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅವರು ಫೋನ್ ಮಾಡಿ ಹೇಳಿದಾಗ ನನಗೆ ನಂಬೋಕೆ ಆಗಲಿಲ್ಲ. ‘ಕಾಮಿಡಿ ಕಿಲಾಡಿಗಳು’ ಚಾಂಪಿಯನ್‌ಶಿಪ್‌ನಲ್ಲಿ ನಾವು ಒಟ್ಟಿಗೆ ಕೆಲಸ ಮಾಡಿದ್ವಿ. ಅವರು ಅದ್ಭುತವಾಗಿ ನಟಿಸುತ್ತಿದ್ದರು. ಈಗ ಅವರ ಸಾವಿನ ಸುದ್ದಿ ಕೇಳಿ ಆಶ್ವರ್ಯ ಆಯ್ತು, ನನಗೆ ನಂಬಲು ಆಗ್ತಿಲ್ಲ. ಈಗಲೂ ಇದನ್ನು ಅರಗಿಸಿಕೊಳ್ಳೋಕೆ ಆಗ್ತಿಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ:ರಾಕೇಶ್ ಗುಣ ಮಗುವಿನಂತೆ – ಬಿಕ್ಕಿ ಬಿಕ್ಕಿ ಅತ್ತ ದಿವ್ಯಾಶ್ರೀ
ಅವರಿಗಿನ್ನು ಚಿಕ್ಕ ವಯಸ್ಸು, ಚಿತ್ರರಂಗದಲ್ಲಿ ಬೆಳೆಯೋದಿತ್ತು, ಹೀಗೆ ಆಗಿದ್ದು ನ್ಯಾಯನಾ ಅನಿಸುತ್ತದೆ. ‘ಕಾಮಿಡಿ ಕಿಲಾಡಿಗಳು’ ಟೀಮ್ ಅವರ ಊರಿನ ಕಡೆ ಹೊರಟಿದೆ. ಇತ್ತೀಚೆಗೆ ನಾವು ಭೇಟಿಯಾಗಿರಲಿಲ್ಲ. ಆದರೆ ಸಮಯ ಸಿಕ್ಕಾಗ ಫೋನ್‌ನಲ್ಲಿ ಮಾತನಾಡುತ್ತಿದ್ದೇವು. ನಾನು ರಾಕಿ ಅಂತ ಕರೆದ್ರೆ ಅಣ್ಣ ಎಂದು ಬಂದು ತಬ್ಬಿಕೊಳ್ತಿದ್ದರು. ಈಗ ಅವರ ಸಾವಿನ ಸುದ್ದಿ ಕೇಳಿದ್ರೆ ಹೊಟ್ಟೆ ಉರಿಯುತ್ತದೆ ಅಂತ ಕಣ್ಣೀರಿಟ್ಟರು.
‘ಕಾಂತಾರ ಚಾಪ್ಟರ್ 1’ರಲ್ಲಿ ಕೆಲಸ ಮಾಡುತ್ತಿದ್ದ ವಿಷಯ ಗೊತ್ತಿತ್ತು. ಬೆಳೆಯುವ ಟೈಮ್‌ನಲ್ಲಿ ಒಂದೊಳ್ಳೆಯ ಬ್ಯಾನರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಹೀಗೆ ಆಯ್ತಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಕೇಶ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಸಮಾಧಾನ ಸಿಗಲಿ ಎಂದು ಮಾತನಾಡಿದ್ದಾರೆ.
ಇಂದು ಬೆಳಗ್ಗಿನ ಜಾವ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಸಂಜೆ ಹುಟ್ಟೂರು ಉಡುಪಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಸ್ಯಾಂಡಲ್ವುಡ್ನಲ್ಲಿ ಈಗ ಹೊಸಬರಿಗೆ ವಿಫುಲ ಅವಕಾಶವಿದೆ. ಹೊಸಬರ ಚಿತ್ರಗಳು ಸಿನಿಪ್ರಿಯರ ಮೆಚ್ಚುಗೆ ಗಳಿಸುತ್ತಿವೆ. ಇದೀಗ ಮತ್ತೊಂದು ಪ್ರತಿಭಾನ್ವಿತ ಹಾಗೂ ಯುವ ಸಿನಿಮೋತ್ಸಾಹಿಗಳ ತಂಡವೊಂದು ಸೇರಿ ‘ಕರ್ನಾಟಕ Love’s ಕೇರಳ’ ಎಂಬ ವೆಬ್ ಸಿರೀಸ್ ರೂಪಿಸುತ್ತಿದೆ. ಅದರ ಮೊದಲ ಭಾಗವಾಗಿ ಇತ್ತೀಚೆಷ್ಟೇ ಬೆಂಗಳೂರಿನ ವೆಂಕಟೇಶ್ವರ ದೇಗುಲದಲ್ಲಿ ಚಿತ್ರ ಸೆಟ್ಟೇರಿದೆ. ‘ಕರ್ನಾಟಕ Love’s ಕೇರಳ’ (Karnataka Loves Kerala) ಸಿರೀಸ್ ಗೆ ಗರುಡ ರಾಮ್ ಕ್ಲಾಪ್ ಮಾಡಿದ್ದು, ವೀರಕಪುತ್ರ ಶ್ರೀನಿವಾಸ್ ಕ್ಯಾಮೆರಾ ಚಾಲನೆ ನೀಡಿದ್ದಾರೆ
‘ಕರ್ನಾಟಕ Love’s ಕೇರಳ’ ವೆಬ್ ಸರಣಿಗೆ ಯುವ ಪ್ರತಿಭೆ ಲೋಕೇಶ್ (Lokesh) ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಅದೃಷ್ಟ ಪರೀಕ್ಷೆಗಿಳಿದ್ದಾರೆ. ಬಸ್ ಮೆಕಾನಿಕಲ್ ಆಗಿರುವ ಲೋಕೇಶ್ ಒಂದಷ್ಟು ಕಿರುಚಿತ್ರಗಳಿಗೆ ನಿರ್ದೇಶಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿಯಿಸಿದ್ದು , ಪೂರ್ಣ ಪ್ರಮಾಣದ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಜ್ಯೋತಿ, ಸಹನ ಸಾಥ್ ಕೊಟ್ಟಿದ್ದಾರೆ.
ಎಂಎಂಕೆ ಬಾಲು ನಿರ್ಮಾಣ ಮಾಡುತ್ತಿರುವ ಕರ್ನಾಟಕದ love’s ಕೇರಳ ಸಿರೀಸ್ ಗೆ ಲೋಕೇಶ್ ಅವರದ್ದೇ ಕಥೆ ಚಿತ್ರಕಥೆ. ಟೈಟಲ್ ಹೇಳುವಂತೆ ಇದೊಂದು ಪ್ರೇಮಕಥೆ ಒಳಗೊಂಡಿದೆ. ಆನಂದ್ ಇಳಯರಾಜ ಛಾಯಾಗ್ರಹಣ, ಪ್ರವೀಣ್ ಶ್ರೀನಿವಾಸ್ ಸಂಗೀತ, ಮಹೇಶ್ ಸಂಕಲನ ಸರಣಿಗಿದೆ. ಮುಂದಿನ ವಾರದಿಂದ ಕೇರಳ ಭಾಗದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗಿದೆ.
ಸ್ಯಾಂಡಲ್‌ವುಡ್ ನಟಿ ರಚನಾ ದಶರಥ್ (Rachana Dashrath) ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ನಟಿಯ ಸೀಮಂತ ಶಾಸ್ತ್ರ (Baby Shower) ಇದೀಗ ಸರಳವಾಗಿ ನಡೆದಿದೆ. ಸೀಮಂತ ಶಾಸ್ತ್ರದ ಫೋಟೋಗಳು ಇಲ್ಲಿವೆ.
ಸಿನಿಮಾ, ಕಿರುತೆರೆ ನಟಿ ರಚನಾ ಅವರ ಮನೆಯಲ್ಲಿ ಸರಳವಾಗಿ ಇತ್ತೀಚಿಗೆ ಸೀಮಂತ ಶಾಸ್ತ್ರ ಮಾಡಲಾಯಿತು. ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿದೆ. ಇದೀಗ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ:ರಚಿತಾ ರಾಮ್ ತರ ಹುಡುಗಿ ಸಿಗಬೇಕು- ಮದುವೆ ಬಗ್ಗೆ ಹನುಮಂತ ಪ್ರತಿಕ್ರಿಯೆ
‘ಡಿಂಗ'(Dinga) ಚಿತ್ರದ ಹೀರೋ ಲೋಕೇಶ್ (Actor Lokesh) ಜೊತೆ ರಚನಾಗೆ ಪ್ರೇಮಾಂಕುರವಾಗಿತ್ತು. ತಮ್ಮ ಎರಡು ಕುಟುಂಬಕ್ಕೂ ಪ್ರೀತಿ ವಿಚಾರ ಪ್ರಸ್ತಾಪಿಸಿ, ಈ ವರ್ಷ ಗುರು ಹಿರಿಯರ ಸಮ್ಮುಖದಲ್ಲಿ ಜನವರಿ 27ರಂದು ಚಾಮರಾಜನಗರದ ಅನುಭವ ಮಂಟಪದಲ್ಲಿ ಮದುವೆಯಾದರು.
ರಚನಾ ದಶರಥ್ ಅವರು ಅಗ್ರಸೇನಾ, ಎಬಿ ಪಾಸಿಟಿವ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲ ಮಗುವಿನ ನಂತರ ಚೊಚ್ಚಲ ಮಗುವಿನ ಆರೈಕೆಯ ಜೊತೆಗೆ ನಟನೆಗೆ ಕಮ್ ಬ್ಯಾಕ್ ಆಗುವ ಬಗ್ಗೆ ನಟಿ ಅಭಿಲಾಷೆ ಹೊಂದಿದ್ದಾರೆ.
ನಟ ಕಿಚ್ಚ ಸುದೀಪ್ (Sudeep) ಬಗ್ಗೆ ಕೊಳ್ಳೇಗಾಲ (Kollegala) ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಪುತ್ರ ಲೋಕೇಶ್ (Lokesh) ಅವಹೇಳನಕಾರಿಯಾಗಿ (Contempt) ಆಡಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಿಚ್ಚನ ಬಗ್ಗೆ ಲೋಕೇಶ್ ಹಗುರವಾಗಿ ಮಾತನಾಡಿದ್ದಕ್ಕಾಗಿ ಅವರ ಅಭಿಮಾನಿಗಳು ಬೇಸರಗೊಂಡಿದ್ದರು. ತಮ್ಮ ನೆಚ್ಚಿನ ನಟನ ಕುರಿತು ಕ್ಷಮೆ ಕೇಳದೇ ಇದ್ದರೆ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಸಿದ್ದರು.
ಈ ಎಚ್ಚರಿಕೆಯ ಹಿನ್ನೆಲೆಯಲ್ಲಿ ಲೋಕೇಶ್ ಮತ್ತೊಂದು ವಿಡಿಯೋ ಮಾಡಿ, ‘ಸುದೀಪ್ ಅವರು ನನಗೆ ಕರೆ ಮಾಡಿದ್ದರು. ನಮ್ಮವರು ಅವರೆಲ್ಲ ಕ್ಷಮೆ ಕೇಳಿ ಎಂದು ಹೇಳಿದ್ದರು. ಹಾಗಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ’ ಎನ್ನುವ ವಿಡಿಯೋ ಅಪ್ ಲೋಡ್ ಮಾಡಿದ್ದರು. ಅದು ಕೂಡ ವೈರಲ್ ಆಗಿತ್ತು. ಈ ವಿಡಿಯೋ ಕುರಿತಂತೆ ಸುದೀಪ್ ಬೇಸರ ವ್ಯಕ್ತ ಪಡಿಸಿದ್ದಾರೆ. ಆ ಕುರಿತು ಅವರು ಟ್ವೀಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ
‘ನಾನು ಯಾರಿಗೂ ಕರೆ ಮಾಡಿಲ್ಲ. ಕ್ಷಮೆ ಕೇಳುವುದನ್ನು ನಾನು ಹೆಮ್ಮೆ ಪಡುವುದಿಲ್ಲ. ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇರುತ್ತದೆ ಎನ್ನುವುದು ಹಳೆಯ ಸಿದ್ಧಾಂತ. ನಾನು ಹೇಳಿಲ್ಲ’ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಲೋಕೇಶ್ ತಮ್ಮ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ಪರೋಕ್ಷವಾಗಿ ಅಭಿಮಾನಿಗಳಿಗೆ ಹೇಳಿದ್ದಾರೆ.
ಏನಿದು ವಿವಾದ?
ಬಿಜೆಪಿ ಪರವಾಗಿ ಪ್ರಚಾರ ಮಾಡಲು ಕಿಚ್ಚ ಕೊಳ್ಳೇಗಾಲಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾತನ್ನು ಶಾಸಕ ಎನ್. ಮಹೇಶ್ ಪದೇ ಪದೇ ಹೇಳುತ್ತಿದ್ದಾರಂತೆ. ಇವರಿಗೆ ಟಾಂಗ್ ಕೊಡುವುದಕ್ಕಾಗಿಯೇ ಲೋಕೇಶ್ ನಾಲಿಗೆ ಹರಿಬಿಟ್ಟಿದ್ದರು.
ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ ಮಾತನಾಡಿರುವ ಲೋಕೇಶ್, ‘ಎನ್.ಮಹೇಶ್ ಅವರು ಪದೇ ಪದೇ ಕಿಚ್ಚ ಸುದೀಪ್ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ಯಾರೇ ಬಂದರೂ ಊಟ ಮಾಡ್ಕೊಂಡು, ಜೇಬಿಗೆ ಹಾಕ್ಕೊಂಡು ಹೋಗ್ತಾ ಇರ್ತಾರೆ’ ಎಂದು ಮಾತನಾಡಿದ್ದಾರೆ. ಈ ಮಾತುಗಳು ಸುದೀಪ್ ಅಭಿಮಾನಿಗಳನ್ನು ಕೆರಳಿಸಿವೆ. ಹಾಗಾಗಿ ಲೋಕೇಶ್ ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ಪಟ್ಟ ಹಿಡಿದಿದ್ದರು.
ಈ ಕುರಿತು ಮಾತನಾಡಿರುವ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸರಗೂರು ಶಿವು, ‘ಲೋಕೇಶ್ ಕೂಡಲೇ ಸುದೀಪ್ ಅವರಿಗೆ ಕ್ಷಮೆ ಕೇಳಬೇಕು. ಕೇಳದೇ ಇದ್ದರೆ, ಪ್ರತಿಭಟನೆ ಮಾಡಲಾಗುವುದು. ಇದು ಕೇವಲ ಸುದೀಪ್ ಅವರಿಗೆ ಮಾಡಿರುವ ಅವಮಾನವಲ್ಲ, ಅಭಿಮಾನಿಗಳಿಗೂ ಮಾಡಿರುವ ಅಪಮಾನ’ ಎಂದಿದ್ದರು.
ಕನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್ (Sudeep) ಬಗ್ಗೆ ಕೊಳ್ಳೇಗಾಲ (Kollegala) ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಪುತ್ರ ಲೋಕೇಶ್ (Lokesh) ಅವಹೇಳನಕಾರಿಯಾಗಿ (Contempt) ಆಡಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಿಚ್ಚನ ಬಗ್ಗೆ ಲೋಕೇಶ್ ಹಗುರವಾಗಿ ಮಾತನಾಡಿದ್ದಾರೆ ಎಂದು ಅಭಿಮಾನಿಗಳ ಗರಂ ಆಗಿದ್ದಾರೆ.
ಜಿ.ಎನ್. ನಂಜುಂಡಸ್ವಾಮಿ (G.N. Nanjundaswamy) ಈ ಬಾರಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿ ಪರವಾಗಿ ಪ್ರಚಾರ ಮಾಡಲು ಕಿಚ್ಚ ಕೊಳ್ಳೇಗಾಲಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾತನ್ನು ಶಾಸಕ ಎನ್. ಮಹೇಶ್ ಪದೇ ಪದೇ ಹೇಳುತ್ತಿದ್ದಾರಂತೆ. ಇವರಿಗೆ ಟಾಂಗ್ ಕೊಡುವುದಕ್ಕಾಗಿಯೇ ಲೋಕೇಶ್ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ
ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ ಮಾತನಾಡಿರುವ ಲೋಕೇಶ್, ‘ಎನ್.ಮಹೇಶ್ ಅವರು ಪದೇ ಪದೇ ಕಿಚ್ಚ ಸುದೀಪ್ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ಯಾರೇ ಬಂದರೂ ಊಟ ಮಾಡ್ಕೊಂಡು, ಜೇಬಿಗೆ ಹಾಕ್ಕೊಂಡು ಹೋಗ್ತಾ ಇರ್ತಾರೆ’ ಎಂದು ಮಾತನಾಡಿದ್ದಾರೆ. ಈ ಮಾತುಗಳು ಸುದೀಪ್ ಅಭಿಮಾನಿಗಳನ್ನು ಕೆರಳಿಸಿವೆ. ಹಾಗಾಗಿ ಲೋಕೇಶ್ ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ಪಟ್ಟ ಹಿಡಿದಿದ್ದಾರೆ.
ಈ ಕುರಿತು ಮಾತನಾಡಿರುವ ವಾಲ್ಕೀಕಿ ನಾಯಕ ಮಹಾಸಭಾ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸರಗೂರು ಶಿವು, ‘ಲೋಕೇಶ್ ಕೂಡಲೇ ಸುದೀಪ್ ಅವರಿಗೆ ಕ್ಷಮೆ ಕೇಳಬೇಕು. ಕೇಳದೇ ಇದ್ದರೆ, ಪ್ರತಿಭಟನೆ ಮಾಡಲಾಗುವುದು. ಇದು ಕೇವಲ ಸುದೀಪ್ ಅವರಿಗೆ ಮಾಡಿರುವ ಅವಮಾನವಲ್ಲ, ಅಭಿಮಾನಿಗಳಿಗೂ ಮಾಡಿರುವ ಅಪಮಾನ’ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಬಿಗ್ ಬಾಸ್ ಓಟಿಟಿಗೆ(Bigg Boss Ott) ಮತ್ತೆ ನಟ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ದೊಡ್ಮನೆಯಲ್ಲಿ ಕಾಮಿಡಿ ಕಮಾಲ್ ಮಾಡಲು ಲೋಕೇಶ್(Lokesh) ಬಂದಿದ್ದಾರೆ.
ಚಂದನವನದ ಪ್ರತಿಭಾನ್ವಿತ ನಟ ಲೋಕೇಶ್ ಬಿಗ್ ಬಾಸ್ ಓಟಿಟಿಗೆ(Bigg Boss Ott) ಎಂಟ್ರಿ ಕೊಟ್ಟಿದ್ದರು. ಆದರೆ ಕಾಲಿಗೆ ಗಾಯವಾದ ಕಾರಣ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದರು. ಇದೀಗ 38 ದಿನಗಳು ಪೂರೈಸಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೆ ದೊಡ್ಮನೆಗೆ ಲೋಕೇಶ್ ಎಂಟ್ರಿ ಕೊಟ್ಟಿದ್ದಾರೆ. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಅಲ್ಲ. ಬದಲಾಗಿ ಅತಿಥಿಯಾಗಿ ಹೋಗಿದ್ದಾರೆ. ಕಾರ್ಯಕ್ರಮದ ಕೊನೆಯ ಹಂತದಲ್ಲಿರುವಾಗ ಅತಿಥಿಯಾಗಿ ಮನೆ ಮಂದಿಗೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ನಟಿ ಶ್ರೀಲೀಲಾ ತಾಯಿ ವಿರುದ್ಧ ಎಫ್ಐಆರ್: ಬಂಧನಕ್ಕಾಗಿ ಬಲೆ ಬೀಸಿದ ಪೊಲೀಸರು
ಬಿಗ್ ಬಾಸ್ ಮನೆಗೆ ಲೋಕೇಶ್ ಅವರ ಎಂಟ್ರಿ, ಮನೆ ಮಂದಿಗೆ ಖುಷಿ ಕೊಟ್ಟಿದೆ. ಮತ್ತೆ ಮನೆಯವರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದ್ದಾರೆ. ಇನ್ನು ಬಿಗ್ ಬಾಸ್ ಓಟಿಟಿ ಕೊನೆಯ ಹಂತದಲ್ಲಿದೆ. ಈ ವಾರಾಂತ್ಯದಲ್ಲಿ ಬಿಗ್ ಬಾಸ್ ಗೆಲುವಿನ ಪಟ್ಟ ಯಾರ ಪಾಲಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಬಿಗ್ ಬಾಸ್ ಮನೆಯ ವಾಸ್ತು ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಜನರ ಭವಿಷ್ಯ ಹೇಳುತ್ತಿದ್ದ ಆರ್ಯವರ್ಧನ್ ಗುರೂಜಿಯೇ ಮನೆ ಒಳಗೆ ಇದ್ದರೂ, ಮನೆಯ ವಾಸ್ತು ಯಾಕೋ ಸರಿ ಇಲ್ಲ ಅನಿಸುತ್ತಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ಕಾಮೆಂಟ್ ಬರುವುದಕ್ಕೆ ಕಾರಣ, ಸ್ಪರ್ಧಿಗಳು ಕೈ ಕಾಲು ಮುರಿದುಕೊಂಡು ಹೊರ ಬರುತ್ತಿದ್ದಾರೆ.
ಕಳೆದ ವಾರ ಕಾಮಿಡಿ ನಟ ಲೋಕೇಶ್ ಅವರು ಏಟು ಮಾಡಿಕೊಂಡ ಕಾರಣಕ್ಕಾಗಿ ಮನೆಯಿಂದ ಆಚೆ ಬಂದಿದ್ದರು. ಆಟ ಆಡುವ ಸಂದರ್ಭದಲ್ಲಿ ಅವರಿಗೆ ಬಲವಾದ ಏಟಾಗಿತ್ತು. ಹಾಗಾಗಿ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಮತ್ತೆ ಅವರು ವಾಪಸ್ಸು ಬಿಗ್ ಬಾಸ್ ಮನೆಗೆ ಹೋಗಿಲ್ಲ. ಆರೋಗ್ಯದ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಬಲ್ಲ ಮೂಲಗಳ ಪ್ರಕಾರ ಸದ್ಯ ಅವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ
ಎರಡನೇ ವಾರದಲ್ಲಿ ಮತ್ತೆ ಏಟು ಮಾಡಿಕೊಂಡಿದ್ದಾರೆ ಅರ್ಜುನ್ ರಮೇಶ್. ಈ ಹಿಂದೆ ಲೋಕೇಶ್ ಅವರಿಗೆ ಕಾಲಿಗೆ ಪೆಟ್ಟಾಗಿದ್ದರೆ, ಇವರಿಗೆ ಕೈ ಪೆಟ್ಟಾಗಿದೆ. ಅದೇ ನೋವಿನಲ್ಲೇ ಒಂದು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲೇ ಉಳಿದುಕೊಂಡಿದ್ದ ಅರ್ಜುನ್ ರಮೇಶ್ ಕೈ ನೋವು ವಾಸಿ ಆಗದೇ ಇರುವ ಕಾರಣಕ್ಕಾಗಿ ಈ ವಾರ ಮನೆಯಿಂದ ಆಚೆ ಬಂದಿದ್ದಾರೆ ಎನ್ನಲಾಗುತ್ತಿದೆ. ಮನೆಯಿಂದ ಆಚೆ ಬರುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನುವ ಮಾಹಿತಿಯೂ ಇದೆ.
ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಸೋನು ಶ್ರೀನಿವಾಸ್ ಗೌಡ, ಸಾನ್ಯ ಐಯ್ಯರ್ ಕೂಡ ಸಣ್ಣ ಪುಟ್ಟ ಗಾಯಗಳನ್ನು ಮಾಡಿಕೊಂಡು, ಆ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಬಿಗ್ ಬಾಸ್ ಮನೆಯ ವಾಸ್ತುವನ್ನು ಒಂದು ಸಲ ಚೆಕ್ ಮಾಡಿಸಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಎಲಿಮಿನೇಟ್ ಆಗಿ ಮನೆಯಿಂದ ಆಚೆ ಬರುವುದು ವಾಡಿಕೆ. ಆದರೆ, ಈ ಬಾರಿ ವಾರಕ್ಕೊಬ್ಬರು ಏಟು ಮಾಡಿಕೊಂಡು ಮನೆಯಿಂದ ಔಟ್ ಆಗುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಪ್ರೇಕ್ಷಕರ ಬಾಯಲ್ಲಿ ಸದ್ಯ ಸೌಂಡ್ ಮಾಡುತ್ತಿರುವ ಶೋ ಅಂದ್ರೆ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ. ಸಾಕಷ್ಟು ವಿಚಾರಗಳಿಂದ ಬಿಗ್ ಬಾಸ್ ಕಾರ್ಯಕ್ರಮ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದೀಗ ಬಿಗ್ ಬಾಸ್ ಮನೆ ಅಂಗಳದ ಬ್ರೇಕಿಂಗ್ ಸುದ್ದಿ ಅಂದ್ರೆ ಸ್ಪರ್ಧಿ ಲೋಕೇಶ್ ಕಾಣೆಯಾಗಿದ್ದಾರೆ.
ಬಿಗ್ ಬಾಸ್ ಓಟಿಟಿ ಶುರುವಾಗಿ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. 16 ಜನ ಸ್ಪರ್ಧಿಗಳಿರುವ ಮನೆಯಲ್ಲಿ ಈಗ ಲೋಕೇಶ್ ಕಾಣೆಯಾಗಿದ್ದಾರೆ. ಇಂದಿನ (ಆಗಸ್ಟ್ 12) ಎಪಿಸೋಡ್‌ನಲ್ಲಿ ಲೋಕೇಶ್ ಕಾಣೆಯಾಗಿರುವುದು ಯಾಕೆ ಎಂಬ ಪ್ರಶ್ನೆ ಮೂಡಿದೆ. ನಿನ್ನೆ ಎಪಿಸೋಡ್‌ನಲ್ಲಿ ಲೋಕೇಶ್ ಅವರಿಗೆ ಕಾಲಿಗೆ ಏಟಾಗಿತ್ತು. ಹಾಗೆಯೇ ಕಾಲು ಕೂಡ ಊದಿಕೊಂಡಿತ್ತು. ಈ ಬೆನ್ನಲ್ಲೇ ಲೋಕೇಶ್ ಬಿಗ್ ಬಾಸ್ ಮನೆಯಿಂದ ಸೀದಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಪುನೀತ್ ರಾಜ್‌ಕುಮಾರ್ ಮಾಡಬೇಕಿದ್ದ ಪಾತ್ರಕ್ಕೆ `ಪುಷ್ಪ’ ಸ್ಟಾರ್ ಫೈನಲ್
ಹಾಗೆಯೇ ಸೋನು ಗೌಡ ಕೂಡ ಲೋಕೇಶ್ ಅವರಿಗೆ ಕಾಲು ಊದಿಕೊಂಡಿರುವುದನ್ನ ಗಮನಿಸಿದ್ದರು. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಹೇಳಿದ್ದರು. ಇಂದಿನ ಎಪಿಸೋಡ್‌ನಲ್ಲಿ ಬೆಳಿಗ್ಗೆಯಿಂದ ಲೋಕೇಶ್ ಅವರು ಬಿಗ್ ಬಾಸ್ ಮನೆಯಿಂದ ಕಾಣೆಯಾಗಿದ್ದಾರೆ.
ಟಾಸ್ಕ್ ಮಾಡುವಾಗ ತೀವ್ರವಾಗಿ ಏಟಾಗಿರುವ ಹಿನ್ನೆಲೆ ನಟ ಲೋಕೇಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿನ ಲೋಕೇಶ್ ಅನುಪಸ್ಥಿತಿ ನೆಟ್ಟಿಗರ ಗಮನಕ್ಕೂ ಬಂದಿದೆ. ಸೂಕ್ತ ಚಿಕಿತ್ಸೆಗಾಗಿ ಲೋಕೇಶ್ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ. ಒಮ್ಮೆ ಮನೆಯೊಳಗೆ ಹೋದರೆ ಏಲಿಮೀನೇಟ್ ಆಗುವವರೆಗೂ ಬರುವ ಹಾಗಿಲ್ಲ. ಇದೀಗ ಆರೋಗ್ಯದ ದೃಷ್ಟಿಯಿಂದ ಲೋಕೇಶ್ ಹೊರಬಂದಿದ್ದರು ಕೂಡ ಗುಣಮುಖರಾದ ನಂತರ ಮತ್ತೆ ದೊಡ್ಮನೆಗೆ ಎಂಟ್ರಿ ಕೊಡುತ್ತಾರಾ ಅಂತಾ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ತಮಿಳಿನ ಖ್ಯಾತ ನಟ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಬೇಟೆಯಾಡಿದೆ. ಅದು ಯಾವ ಮಟ್ಟಿಗೆ ಯಶಸ್ಸು ತಂದುಕೊಟ್ಟಿದೆ ಎಂದರೆ, ಕಮಲ್ ಈವರೆಗೂ ಮಾಡಿದ್ದ ಅಷ್ಟೂ ಸಾಲವನ್ನು ತೀರಿಸಿದೆಯಂತೆ. ಅಲ್ಲದೇ, ಹಲವು ವರ್ಷಗಳ ನಂತರ ಕಮಲ್ ಅವರಿಗೆ ದೊಡ್ಡ ಮಟ್ಟದ ಯಶಸ್ಸೂ ತಂದುಕೊಟ್ಟಿದೆ. ಹಾಗಾಗಿ ಕಮಲ್ ಜೊತೆ ನಿರ್ದೇಶಕ ಲೋಕೇಶ್ ಕೂಡ ಇದೀಗ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ.
ವಿಕ್ರಮ್ ಭಾರೀ ಯಶಸ್ಸಿನ ಬೆನ್ನಲ್ಲೆ ಅವರಿಗೆ ಬಾಲಿವುಡ್ ನಲ್ಲಿ ಅವಕಾಶ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅದೂ ಸಲ್ಮಾನ್ ಖಾನ್ ಸಿನಿಮಾದಲ್ಲಿ ಅನ್ನುವುದು ಮತ್ತೊಂದು ವಿಶೇಷ. ಸ್ವತಃ ಸಲ್ಮಾನ್ ಖಾನ್ ಅವರೇ ಲೋಕೇಶ್ ಅವರನ್ನು ಸಂಪರ್ಕಿಸಿ, ಮುಂದಿನ ದಿನಗಳಲ್ಲಿ ಕೆಲಸ ಮಾಡುವ ಆಹ್ವಾನ ನೀಡಿದ್ದಾರಂತೆ. ಈ ವಿಷಯ ಬಿಟೌನ್ ನಲ್ಲಿ ಭಾರೀ ಸದ್ದಂತೂ ಮಾಡುತ್ತಿದೆ. ಸಲ್ಮಾನ್ ಖಾನ್ ಕೂಡ ಓಡುವ ಕುದುರೆ ಆಗಿರುವುದರಿಂದ ಈಗಿನಿಂದಲೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್ ಕೊಟ್ರು ಬ್ರೇಕಿಂಗ್ ನ್ಯೂಸ್
ವಿಕ್ರಮ್ ಸಿನಿಮಾದ ಬಹುತೇಕ ಯಶಸ್ಸನ್ನು ತನ್ನ ನಿರ್ದೇಶಕ ಮತ್ತು ಟೀಮ್ ಗೆ ಅರ್ಪಿಸಿದ್ದರು ಕಮಲ್. ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಸಹಾಯಕ ನಿರ್ದೇಶಕರಿಗೂ ಕೂಡ ಹಲವು ಉಡುಗೊರೆಯನ್ನು ನೀಡಿದ್ದರು. ಅಷ್ಟರ ಮಟ್ಟಿಗೆ ವಿಕ್ರಮ್ ಸಿನಿಮಾ ಗೆಲುವನ್ನು ದಾಖಲಿಸಿತ್ತು. ಹಾಗಾಗಿ ವಿಕ್ರಮ್ ಯಶಸ್ಸು ನಿರ್ದೇಶಕರಿಗೆ ಮತ್ತೊಂದು ಗುರುತರ ಜವಾಬ್ದಾರಿಯನ್ನು ನೀಡಿದೆ.
Live Tv
[brid partner=56869869 player=32851 video=960834 autoplay=true]
ಕೊಪ್ಪಳ: ಕ್ರೀಡೆಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಕ್ರಿಕೆಟ್ ಆಟದ ಅಂಧರ ವಿಭಾಗದಲ್ಲಿ ಭಾರತ ದೇಶದ ಬಿ3 ತಂಡಕ್ಕೆ ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಯುವಕ ಆಯ್ಕೆಯಾಗಿದ್ದಾರೆ.
ಚಿಕ್ಕಬೆಣಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡ್ಡಗಾಡು ಪ್ರದೇಶದಲ್ಲಿರುವ ಯಡಳ್ಳಿ ಗ್ರಾಮದ ಲೋಕೇಶ್ ಎನ್ನುವ ಯುವಕ ಸದ್ಯ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವ ಮೂಲಕ ಹಳ್ಳಿ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಹಾಗೇ ಮಾಡಿದ್ದಾರೆ. ಆಯ್ಕೆಯಾಗಿ ಐದಾರು ವರ್ಷಗಳು ಕಳೆದಿದ್ದು, ಇದೀಗ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವ ಮೂಲಕ ಯುವ ಪ್ರತಿಭೆ ಅಂಗವಿಕಲತೆಯನ್ನು ವರವನ್ನಾಗಿ ಮಾಡಿಕೊಂಡು ಮಿಂಚುಹರಿಸುತ್ತಿದ್ದಾರೆ. ಕಡು ಬಡತನವನ್ನು ಅನುಭವಿಸುತ್ತಿರುವ ರೇಣುಕಪ್ಪ, ಹುಲಿಗೇಮ್ಮ ದಂಪತಿಗಳ ನಾಲ್ಕನೇ ಮಗನಾದ ಲೋಕೇಶ್ ಕಣ್ಣು ಕಾಣದೆ ಹುಟ್ಟು ಅಂಧತ್ವವನ್ನು ಪಡೆದುಕೊಂಡಿದ್ದಾರೆ. ಅಂಧತ್ವವನ್ನು ವರವನ್ನಾಗಿ ಮಾಡಿಕೊಂಡಿರುವ ಲೋಕೇಶ್ ಕ್ರಿಕೆಟ್‍ನಲ್ಲಿ ಆಸಕ್ತಿಯನ್ನು ಹೊಂದಿದ್ದು, ಅದರಲ್ಲಿಯೇ ಮುಂದುವರಿದು ಸದ್ಯ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವ ಮೂಲಕ ಹೆಸರು ವಾಸಿಯಾಗಿದ್ದಾರೆ. ಇದನ್ನೂ ಓದಿ: 47ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ತಂಡಕ್ಕೆ ಸನ್ಮಾನ
ಗ್ರಾಮದಲ್ಲಿ ಕ್ರಿಕೆಟ್ ಆಡುವ ಮೂಲಕ ಆಸಕ್ತಿಯನ್ನು ರೂಡಿಸಿಕೊಂಡಿದ್ದ ಲೋಕೇಶ್ ಕಳೆದ 15 ವರ್ಷಗಳ ಹಿಂದೆ ಬೆಂಗಳೂರಿಗೆ ಹೋಗಿ, ಕೂಲಿ ಕೆಲಸವನ್ನು ಮಾಡುವ ಮೂಲಕ ಸಮರ್ಥ ಟ್ರಸ್ಟ್ ವತಿಯಿಂದ ಕ್ರಿಕೆಟ್ ಅಭ್ಯಾಸವನ್ನು ನಡೆಸಿದ್ದಾರೆ. ಬೆಂಗಳೂರಿನಲ್ಲಿ ರಣಜಿ ತಂಡಗಳಿಗೆ ಆಯ್ಕೆಯಾಗಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಅದರ ಫಲವಾಗಿ ಭಾರತ ತಂಡದ ಅಂಧರ ವಿಭಾಗಕ್ಕೆ ಆಯ್ಕೆಯಾಗಿ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಸಾರಥ್ಯ ಹಿಡಿದ ಕನ್ನಡಿಗರಿವರು
2016 ರಲ್ಲಿ ಟೀಂ ಇಂಡಿಯಾಗೆ ಆಯ್ಕೆ:
ರಣಜಿಯಲ್ಲಿ ಉತ್ತಮ ಪ್ರದರ್ಶನದಿಂದ ಭಾರತದ ಬಿ3 ವಿಭಾಗದ ಅಂಧರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಲೋಕೇಶ್, 2016 ರಲ್ಲಿ ಅಂಧರ ಏಷ್ಯಾ ಕಪ್ ಪಂದ್ಯಾವಳಿ ಆಡಿದ್ದಾರೆ. ಬಾಂಗ್ಲಾದೇಶದಲ್ಲಿ ಏಷ್ಯ ಕಪ್ ಪಂದ್ಯಗಳನ್ನು ಆಡುವ ಮೂಲಕ ಟೂರ್ನಿಯಲ್ಲಿ ಆಲ್‌ರೌಂಡರ್ ಪ್ರದರ್ಶನದ ಮೂಲಕ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ಟ್ರೋಪಿಯಲ್ಲಿ ಭಾಗವಹಿಸಿದ್ದಾರೆ. 2019ರಲ್ಲಿ ನೇಪಾಳನಲ್ಲಿ ಭಾರತ ಮತ್ತು ನೇಪಾಳ ಪಂದ್ಯಾವಳಿ ಉತ್ತಮ ಪ್ರದರ್ಶನ ವನ್ನು ತೊರಿಸಿದ್ದಾರೆ. 2021 ಡಿಸೆಂಬರ್‌ನಲ್ಲಿ ಮೂರು ದಿನಗಳ ಕಾಲ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮ್ಯಾನ್ ಆಗಿ ಆಡುವ ಮೂಲಕ ಅಬ್ಬರದ ಬ್ಯಾಟಿಂಗ್ ಮಾಡಿ, ಲೋಕೇಶ್ 142 ರನ್‍ಗಳನ್ನು ಕಲೆ ಹಾಕಿ ಮಿಂಚಿದ್ದಾರೆ. ಸರಣಿಯಲ್ಲಿ ಉತ್ತಮ ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸರಣಿಯ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಲೋಕೇಶ್ ಅವರು ಪಡೆದುಕೊಂಡಿದ್ದರು.
ಬಡವತದಲ್ಲಿ ಕುಟುಂಬ:
ಲೋಕೇಶ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದರು ಸಹ ತಾಲೂಕಿನ ಯಡಳ್ಳಿ ಗ್ರಾಮದ ಪುಟ್ಟ ಮನೆಯಲ್ಲಿ ಇರುವ ಲೋಕೇಶ್ ಅವರ ತಂದೆ, ತಾಯಿ ಈಗಲೂ ಸಹ ಬಡತನದಲ್ಲೇ ಕಾಲ ಕಳೆಯುತ್ತಿದ್ದಾರೆ. ಇರುವ ಕೊಂಚ ಜಮೀನಿನಲ್ಲಿಯೇ ಕೃಷಿ ಮಾಡಿಕೊಂಡು, ಬೆಟ್ಟದಲ್ಲಿ ಸಿಗುವ ಕಟ್ಟಿಗೆಗಳಿಂದ ಮನೆ ಬಳಕೆ ವಸ್ತುಗಳನ್ನು ಸಿದ್ಧ ಪಡಿಸಿ, ಮಾರುಕಟ್ಟೆಯಲ್ಲಿ ಅವುಗಳನ್ನು ಮಾರಾಟ ಮಾಡಿ, ಬದುಕು ಸಾಗಿಸುತ್ತಿದ್ದಾರೆ. ಮಗ ಉತ್ತಮ ಪ್ರದರ್ಶನ ತೋರಿ ಭಾರತ ದೇಶದಲ್ಲಿಯೇ ಹೆಸರು ವಾಸಿಯಾದರೂ ಸಹ ಪಾಲಕರು ಮಾತ್ರ ಬಡತನದಲ್ಲಿ ಕೈತೊಳೆಯುತ್ತಿದ್ದಾರೆ. ರಾಷ್ಟ್ರ ತಂಡಕ್ಕೆ ಆಯ್ಕೆಯಾಗಿ ನಾಲ್ಕೈದು ವರ್ಷಗಳು ಕಳೆದರೂ ಸಹ ರಾಜ್ಯ ಸರ್ಕಾರ ಗುರುತಿಸಿ ಗೌರವಿಸಲು ಮುಂದಾಗಿಲ್ಲ. ಪಂದ್ಯಗಳನ್ನು ಆಡಿದ ವೇಳೆಯಲ್ಲಿ ದೊರೆಯುವ ಕೊಂಚ ಆದಾಯದಲ್ಲಿಯೇ ಬದುಕು ಸಾಗಿಸಬೇಕಾಗಿದೆ. ಸರ್ಕಾರದಿಂದ ಯಾವುದೇ ರೀತಿಯ ಸಹಾಯ ಧನಗಳು ಸಹ ದೊರೆತಿಲ್ಲ ಎನ್ನುವುದು ಲೋಕೇಶ್ ಅವರ ಮಾತಾಗಿದ್ದು, 2022ರಲ್ಲಿ ನಡೆಯಲಿರುವ ಅಂಧರ ವಿಶ್ವಕಪ್ ಪಂದ್ಯಾವಳಿಯನ್ನು ಆಡುವ ಕನಸು ಕಟ್ಟಿಕೊಂಡು ಕ್ರಿಕೆಟ್ ಆಟದ ಮೂಲಕ ಜೀವನ ರೂಪಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.