Tag: ಲೋಕಾಯುಕ್ತ ದಾಳಿ

  • ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ‘ಲೋಕಾ’ ದಾಳಿ – ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ನಗದು, ಆಸ್ತಿ ಪತ್ತೆ

    ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ‘ಲೋಕಾ’ ದಾಳಿ – ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ನಗದು, ಆಸ್ತಿ ಪತ್ತೆ

    – ಬೆಂಗಳೂರಿನ ಮೂವರು ಸೇರಿ ರಾಜ್ಯಾದ್ಯಂತ 12 ಅಧಿಕಾರಿಗಳಿಗೆ ಶಾಕ್‌

    ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳ ಮೇಲಿನ ದಾಳಿಯನ್ನು ಲೋಕಾಯುಕ್ತ ಮುಕ್ತಾಯಗೊಳಿಸಿದೆ. ದಾಳಿಯಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ನಗದು, ಆಸ್ತಿ ಪತ್ತೆಯಾಗಿದೆ.

    ಬೆಂಗಳೂರು ಸೇರಿ 48 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ಮಾಡಿದೆ. ಆ ಮೂಲಕ ಒಟ್ಟು 12 ಅಧಿಕಾರಿಗಳಿಗೆ ಶಾಕ್‌ ನೀಡಿದೆ.

    1. ಮಂಜುನಾಥ. ಜಿ. ವೈದ್ಯಾಧಿಕಾರಿಗಳು, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು
    – ಮಂಜುನಾಥ್ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ರೇಡ್
    – ದಾಳಿ ವೇಳೆ 3,24,13,240 ರೂ. ಸ್ಥಿರ ಹಾಗೂ ಚರ ಆಸ್ತಿ ಪತ್ತೆ
    – 1 ಸೈಟ್, 1 ವಾಸದ ಮನೆ, 1 ಪ್ಲಾಟ್ ಸೇರಿ 1.85 ಕೋಟಿ ಸ್ಥಿರ ಆಸ್ತಿ ಪತ್ತೆ
    – 10 ಲಕ್ಷ ನಗದು, ವಾಹನ, ಗೃಹೋಪಯೋಗಿ ವಸ್ತು ಸೇರಿ 1.39 ಕೋಟಿ ಚರ ಆಸ್ತಿ ಪತ್ತೆ

    2. ವಿ.ಸುಮಂಗಳ, ನಿರ್ದೇಶಕರು, ರಾಜ್ಯ ಶಾಲಾ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ, ಬೆಂಗಳೂರು
    – ಸುಮಂಗಳಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ
    – ಸುಮಂಗಳ ಬಳಿ 7,32,50,000 ರೂ. ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಪತ್ತೆ
    – 4 ಸೈಟ್, 5 ಮನೆಗಳು, 19 ಎಕರೆ ಕೃಷಿ ಜಮೀನು ಸೇರಿ 5,08,42,000 ರೂ. ಮೌಲ್ಯದ ಸ್ಥಿರ ಆಸ್ತಿ ಪತ್ತೆ
    – 1 ಕೋಟಿ ಮೌಲ್ಯದ ಚಿನ್ನಾಭರಣಗಳು, ವಾಹನ ಸೇರಿ 2,24,08,000 ರೂ. ಚರ ಆಸ್ತಿ ಪತ್ತೆ

    3. ಎನ್. ಕೆ. ಗಂಗಮರಿಗೌಡ, ಸರ್ವೆಯರ್, ಕೆ.ಐ.ಎ.ಡಿ.ಬಿ. ಬೆಂಗಳೂರು
    – ಗಂಗಮರಿಗೌಡಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
    – ಗಂಗಮರಿಗೌಡ ಬಳಿ 4,66,55,512 ರೂ. ಮೌಲ್ಯದ ಆಸ್ತಿ ಪತ್ತೆ
    – 2 ನಿವೇಶನಗಳು, 2 ಮನೆ, 2 ಎಕರೆ ಕೃಷಿ ಜಮೀನು ಸೇರಿ 3.58 ಕೋಟಿ ಸ್ಥಿರ ಆಸ್ತಿ ಪತ್ತೆ
    – 1,08,40,000 ರೂ. ಮೌಲ್ಯದ ಚರ ಆಸ್ತಿ ಪತ್ತೆ

    4. ಎನ್. ಚಂದ್ರಶೇಖರ್, ಕೃಷಿ ಸಹಾಯಕ ನಿರ್ದೇಶಕರು, ಹೊಳಲಕೆರೆ, ಚಿತ್ರದುರ್ಗ
    – ಚಂದ್ರಶೇಖರ್ ಗೆ ಸೇರಿದ ಒಟ್ಟು 3 ಸ್ಥಳಗಳಲ್ಲಿ ಲೋಕಾಯುಕ್ತ ರೇಡ್
    – ದಾಳಿ ವೇಳೆ 5,14,15,742 ರೂ. ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಪತ್ತೆ
    – 4.02 ಕೋಟಿ ಮೌಲ್ಯದ ಸ್ಥಿರ ಆಸ್ತಿಯ ಪತ್ತೆ
    – 1,12,15,742 ರೂ. ಮೌಲ್ಯದ ಚರ ಆಸ್ತಿ ಪತ್ತೆ

    5. ಜಗದೀಶ್ ನಾಯ್ಕ. ಕೆ. ಹೆಚ್. ಸಹಾಯಕ ಅಭಿಯಂತರರು. ಕೆ.ಆರ್.ಐ.ಡಿ.ಎಲ್. ದಾವಣಗೆರೆ
    – ಜಗದೀಶ್‌ಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಲೋಕಾಯುಕ್ತ ರೇಡ್
    – ಚರ ಹಾಗೂ ಸ್ಥಿರ ಆಸ್ತಿ ಒಟ್ಟು ಮೌಲ್ಯ 2,04,54,125 ರೂ.
    – ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1,55,71,500 ರೂ.
    – ಚರ ಆಸ್ತಿಯ ಒಟ್ಟು ಮೌಲ್ಯ 48,82,625 ರೂ.

    6. ಬಿ. ಎಸ್. ನಡುವಿನ ಮನೆ, ಕಿರಿಯ ಸಹಾಯಕ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ದಾವಣಗೆರೆ
    – ಒಟ್ಟು 7 ಸ್ಥಳಗಳಲ್ಲಿ ಶೋಧನಾ ಕಾರ್ಯ ಮಾಡಿದ್ದ ಲೋಕಾಯುಕ್ತ
    – ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಒಟ್ಟು ಮೌಲ್ಯ 2,30,54,684 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1,70,79,000 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ 59,75,684 ರೂ.

    7. ಬಸವೇಶ ಶಿವಪ್ಪ ಶಿಡೆನೂರ, ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ, ಸವಣೂರು ತಾಲ್ಲೂಕು ಪಂಚಾಯಿತಿ, ಹಾವೇರಿ
    – ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿದೆ.
    – ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಅಂದಾಜು ಮೌಲ್ಯ 1,67,18,729 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 65,07,000 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1,02,11,729 ರೂ.

    8. ಅಶೋಕ್ ಶಂಕರಪ್ಪ ಅರಳೇಶ್ವರ್, ರಾಜಸ್ವ ನಿರೀಕ್ಷಕರು, ರಾಣಿಬೆನ್ನೂರು ತಾಲ್ಲೂಕು, ಹಾವೇರಿ
    – ಒಟ್ಟು 3 ಸ್ಥಳಗಳಲ್ಲಿ ಶೋಧನಾ ಕಾರ್ಯ
    – ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಅಂದಾಜು ಮೌಲ್ಯ- 2,25,96,462 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1,26,06,000 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 99,90,462 ರೂ.

    9. ಧೂಳಪ್ಪ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಔರದ್, ಬೀದರ್ ಜಿಲ್ಲೆ
    – ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ
    – ಚರ ಆಸ್ತಿ ಹಾಗೂ ಸ್ಥಿರ ಆಸ್ತಿಯ ಒಟ್ಟು ಮೌಲ್ಯ 3,39,35,500 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 1,82,87,000 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1,56,48,500 ರೂ.

    10. ಲಕ್ಷ್ಮಿನಾರಾಯಣ.ಪಿ. ನಾಯಕ್, ಆರ್.ಟಿ.ಓ ಉಡುಪಿ
    – ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ
    – ಒಟ್ಟು ಚರ ಆಸ್ತಿ ಹಾಗೂ ಸ್ಥಿರ ಆಸ್ತಿಯ ಅಂದಾಜು ಮೌಲ್ಯ 2,21,14,234 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 47,50,000 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1,73,64,234 ರೂ.

    11. ಚೇತನ್, ಕಿರಿಯ ಅಭಿಯಂತರರು ಕೆ.ಬಿ.ಜೆ.ಎನ್.ಎಲ್, ಎ.ಆರ್.ಬಿ.ಸಿ, ವಿಭಾಗ-2, ಕಮಟಗಿ, ಬಾಗಲಕೋಟೆ
    – ಒಟ್ಟು 2 ಸ್ಥಳಗಳಲ್ಲಿ ಶೋಧನಾ ಕಾರ್ಯ
    – ಚರ ಆಸ್ತಿ ಹಾಗೂ ಸ್ಥಿರ ಆಸ್ತಿಯ ಅಂದಾಜು ಮೌಲ್ಯ 1,67,28,741 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 1,20,000 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 47,28,774 ರೂ.

    12. ಜ್ಯೋತಿ ಮೇರಿ, ಪ್ರಥಮ ದರ್ಜೆ ಸಹಾಯಕರು, ಅಕೌಂಟ್ ಶಾಖೆ, ಆರೋಗ್ಯ ಇಲಾಖೆ, ಹಾಸನ
    – ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ
    – ಚರ ಆಸ್ತಿ ಹಾಗೂ ಸ್ಥಿರ ಆಸ್ತಿ ಮೌಲ್ಯ 2,17,47,763 ರೂ.
    – ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 1,12,53,425 ರೂ.
    – ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 1,04,94,338 ರೂ.

  • ಬೆಂಗಳೂರು, ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ʻಲೋಕಾʼ ದಾಳಿ; ಭ್ರಷ್ಟ ಅಧಿಕಾರಿಗಳಿಗೆ ನಡುಕ

    ಬೆಂಗಳೂರು, ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ʻಲೋಕಾʼ ದಾಳಿ; ಭ್ರಷ್ಟ ಅಧಿಕಾರಿಗಳಿಗೆ ನಡುಕ

    ಬೆಂಗಳೂರು/ಶಿವಮೊಗ್ಗ/ದಾವಣಗೆರೆ: ಬೆಂಗಳೂರು, ಶಿವಮೊಗ್ಗ, ಬಾಗಲಕೋಟೆ ಸೇರಿದಂತೆ ರಾಜ್ಯದ‌ ವಿವಿಧೆಡೆ 12 ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಮೇಲೆ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. ದಾವಣಗೆರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರ ಶಿವಮೊಗ್ಗದ ಮನೆ ಮೇಲೂ ದಾಳಿಯಾಗಿದೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಭ್ರಷ್ಟ ಅಧಿಕಾರಿಗೆ ಬೆಳ್ಳಂಬೆಳಗ್ಗೆ ಶಾಕ್; ಕೃಷಿ ಇಲಾಖೆ ಎಡಿ ಮನೆ ಮೇಲೆ ಲೋಕಾಯುಕ್ತ ದಾಳಿ

    ದಾವಣಗೆರೆಯ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದ ಎಇಇ ಜಗದೀಶ್‌ ನಾಯ್ಕ್‌ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗದ ಸವಳಂಗ ರಸ್ತೆಯ ಶಿವಬಸವ ನಗರದ ಇಂದಿರಾ ಗಾಂಧಿ ಬಡಾವಣೆಯಲ್ಲಿರುವ ಅವರ ಮನೆ ಮೇಲು ದಾಳಿಯಾಗಿದೆ. ದಾವಣಗೆರೆಯಿಂದ ಎರಡು ಜೀಪುಗಳಲ್ಲಿ ಆಗಮಿಸಿರುವ ಲೋಕಾಯುಕ್ತ ಅಧಿಕಾರಿಗಳ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಕಿರುತೆರೆ ನಟ, ನಟಿಯರು ಸೇರಿ 139 ಜನಕ್ಕೆ ಸೈಟ್‌ ಕೊಡಿಸೋದಾಗಿ ವಂಚನೆ

    ಬೆಂಗಳೂರಲ್ಲಿ ಮೂವರ ಮನೆ ಮೇಲೆ ದಾಳಿ:
    ಬೆಂಗಳೂರಿನಲ್ಲಿ ಮೂವರು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ. ವೈದ್ಯಕೀಯ ಅಧಿಕಾರಿ ಮಂಜುನಾಥ್‌, ಪಿಯು ಬೋರ್ಡ್‌ ನಿರ್ದೇಶಕಿ ಸುಮಂಗಳ, ಸರ್ವೇಯರ್ ಅಧಿಕಾರಿ ಗಂಗಾ ಮರೀಗೌಡ ಅವರ ಮನೆಗಳ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದ ತಂಡ ಸುಮಂಗಳ ಅವರ ಕೆಂಗೇರಿಯ ಸ್ಯಾಟಲೈಟ್ ಟೌನ್‌ನಲ್ಲಿರೋ ಮನೆ ಮೇಲೆ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನ ಪರಿಶೀಲಿಸುತ್ತಿದೆ.

    ಬಾಗಲಕೋಟೆಯಲ್ಲೂ ದಾಳಿ:
    ಬಾಗಲಕೋಟೆಯಲ್ಲಿ ಕೆಬಿಜೆಎನ್‌ಎಲ್‌ AEE (ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜನಿಯರ್) ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಆಲಮಟ್ಟಿ ಬಲದಂಡೆ ಕಾಲುವೆಯ ಸಹಾಯಕ ಮುಖ್ಯ ಇಂಜಿನಿಯರ್ ಚೇತನ್. ನವನಗರದ ಸೆಕ್ಟರ್ 16ರಲ್ಲಿರುವ ಚೇತನ್‌ ಅವರ ಮನೆ ಹಾಗೂ ಕಮತಗಿಯಲ್ಲಿರುವ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ.

  • ಬೀದರ್‌ನಲ್ಲಿ ಏಕಕಾಲಕ್ಕೆ 4 ಕಡೆ ಲೋಕಾಯುಕ್ತ ದಾಳಿ – ಭ್ರಷ್ಟ ಅಧಿಕಾರಿಗೆ ಶಾಕ್ ಶಾಕ್‌

    ಬೀದರ್‌ನಲ್ಲಿ ಏಕಕಾಲಕ್ಕೆ 4 ಕಡೆ ಲೋಕಾಯುಕ್ತ ದಾಳಿ – ಭ್ರಷ್ಟ ಅಧಿಕಾರಿಗೆ ಶಾಕ್ ಶಾಕ್‌

    ಬೀದರ್: ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನಲೆಯಲ್ಲಿ ಬೆಳ್ಳಂಬೆಳಗ್ಗೆ ಬೀದರ್‌ನಲ್ಲಿ‌ (Bidar) ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಭ್ರಷ್ಟ ಅಧಿಕಾರಿಗೆ ಶಾಕ್ ನೀಡಿದ್ದಾರೆ. ಔರಾದ್ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ದೂಳಪ್ಪ ಎಂಬ ಅಧಿಕಾರಿಯ ನಿವಾಸ ಸೇರಿದಂತೆ ಏಕಕಾಲಕ್ಕೆ ಜಿಲ್ಲೆಯಾದ್ಯಂತ ಒಟ್ಟು 4 ಕಡೆ ದಾಳಿ ಮಾಡಲಾಗಿದೆ.

    ಬೀದರ್ ನಗರದ ಗುರುನಾನಕ್ ಕಾಲೋನಿಯ ನಿವಾಸ, ಭಾಲ್ಕಿಯ ಕಡ್ಯಾಳ ಗ್ರಾಮದ ನಿವಾಸ, ಔರಾದ್‌ನ ಎಡಿ ಆಫೀಸ್ ಮತ್ತು ಔರಾದ್‌ನ ಮುದೋಳ ಕಚೇರಿ ಮೇಲೆ ದಾಳಿ‌‌ (Lokayukta Raid) ಮಾಡಲಾಗಿದೆ‌. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಭ್ರಷ್ಟ ಅಧಿಕಾರಿಗೆ ಬೆಳ್ಳಂಬೆಳಗ್ಗೆ ಶಾಕ್; ಕೃಷಿ ಇಲಾಖೆ ಎಡಿ ಮನೆ ಮೇಲೆ ಲೋಕಾಯುಕ್ತ ದಾಳಿ

    ಅಕ್ರಮ ಆಸ್ತಿಗಳಿಗೆ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ಮಾಡಿ ಲೋಕಾಯುಕ್ತ ಅಧಿಕಾರಿಗಳು ನಿವಾಸದಲ್ಲಿ ದಾಖಲೆಗಳನ್ನ ತೀವ್ರ ಪರಿಶೀಲನೆ ಮಾಡುತ್ತಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದಲ್ಲಿ 4 ಕಡೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಇದನ್ನೂ ಓದಿ: ಹಬ್ಬಕ್ಕೆ ಸಾಲು ಸಾಲು ರಜೆ – ಖಾಸಗಿ ಬಸ್ ಪ್ರಯಾಣ ದರ ಏರಿಕೆ, ನಿಮ್ಮೂರಿಗೆ ಎಷ್ಟು ನೋಡಿ!

  • ಚಿತ್ರದುರ್ಗದಲ್ಲಿ ಭ್ರಷ್ಟ ಅಧಿಕಾರಿಗೆ ಬೆಳ್ಳಂಬೆಳಗ್ಗೆ ಶಾಕ್; ಕೃಷಿ ಇಲಾಖೆ ಎಡಿ ಮನೆ ಮೇಲೆ ಲೋಕಾಯುಕ್ತ ದಾಳಿ

    ಚಿತ್ರದುರ್ಗದಲ್ಲಿ ಭ್ರಷ್ಟ ಅಧಿಕಾರಿಗೆ ಬೆಳ್ಳಂಬೆಳಗ್ಗೆ ಶಾಕ್; ಕೃಷಿ ಇಲಾಖೆ ಎಡಿ ಮನೆ ಮೇಲೆ ಲೋಕಾಯುಕ್ತ ದಾಳಿ

    ಚಿತ್ರದುರ್ಗ: ಜಿಲ್ಲೆಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂಬೆಳಗ್ಗೆ ಶಾಕ್‌ ಕೊಟ್ಟಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ಇಲ್ಲಿನ ಕೃಷಿ ಇಲಾಖೆ ಎಡಿ (ಹೆಚ್ಚುವರಿ ನಿರ್ದೇಶಕ) ಮನೆ ಮೇಲೆ ಲೋಕಾಯುಕ್ತ ದಾಳಿ (Lokayukta Raid) ನಡೆಸಿದೆ.

    ಚಿತ್ರದುರ್ಗ (Chitradurga) ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ, ಪಿಐ ಮಂಜುನಾಥ್ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

    ಚಂದ್ರಕಾಂತ್‌ ಅವರಿಗೆ ಸೇರಿದ 2 ಮನೆ ಮತ್ತು ಚಿತ್ರದುರ್ಗದ ಕೃಷಿ ಇಲಾಖೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ.

    ತರಳಬಾಳು ನಗರ, ಹೊಳಲ್ಕೆರೆ ತಾಲೂಕಿನ ಟಿ ನುಲೇನೂರು ಗ್ರಾಮದ ಮನೆಗಳ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಶೋಧ ನಡೆಸಿದ್ದಾರೆ.

  • ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ

    ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ

    ಚಿಕ್ಕಮಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ (T.D.Rajegowda) ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

    ಕೋರ್ಟ್ ನಿರ್ದೇಶನದಂತೆ ರಾಜೇಗೌಡ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್ ದಾಖಲು ಬೆನ್ನಲ್ಲೇ ಲೋಕಾಯುಕ್ತ ತನಿಖೆ ಚುರುಕುಗೊಳಿಸಿದೆ. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್‌ಗಾಗಿ ಬಡವರ ಹಣಕ್ಕೆ ಕನ್ನ – 10 ಲಕ್ಷ ವಂಚಿಸಿ ಪರಾರಿಯಾದ ಪೋಸ್ಟ್ ಮಾಸ್ಟರ್

    ಶೃಂಗೇರಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಶಾಸಕ ರಾಜೇಗೌಡ, ಪತ್ನಿ‌ ಪುಷ್ಪ ಹಾಗೂ ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಟಿ.ಡಿ.ರಾಜೇಗೌಡ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಆಸ್ತಿ ಘೋಷಣೆ ಮಾಡದ ದೂರು ನೀಡಲಾಗಿತ್ತು.

    ಶಾಸಕರಾಗಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಬಗ್ಗೆ ಬಿಜೆಪಿ ಮುಖಂಡ ದಿನೇಶ್‌ ಹೊಸೂರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜನಪ್ರತಿನಿಧಿಗಳ ನ್ಯಾಯಾಲಯದ ಸೂಚನೆ ಮೇರೆಗೆ ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಪತ್ನಿ ಕೊಲೆ ಮಾಡಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಜೇಗೌಡರ ನಿವಾಸ ಬಸಾಪುರದ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  • ಕೊಪ್ಪಳ | ಬೆಳ್ಳಂಬೆಳಗ್ಗೆ ನಗರಸಭೆ ಕಚೇರಿ ಸೇರಿ ಐದು ಕಡೆ `ಲೋಕಾ’ ದಾಳಿ

    ಕೊಪ್ಪಳ | ಬೆಳ್ಳಂಬೆಳಗ್ಗೆ ನಗರಸಭೆ ಕಚೇರಿ ಸೇರಿ ಐದು ಕಡೆ `ಲೋಕಾ’ ದಾಳಿ

    ಕೊಪ್ಪಳ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ನಗರಸಭೆ ಕಚೇರಿ ಸೇರಿ ಐದು ಕಡೆ ಲೋಕಾಯುಕ್ತ ಅಧಿಕಾರಿಗಳು (Lokayuktha Officers) ದಾಳಿ ನಡೆಸಿದ್ದಾರೆ.

    ಕೊಪ್ಪಳದ ನಗರಸಭೆ ಕಚೇರಿ, ನಗರಸಭೆ ಜೆಇ ಸೋಮಲಿಂಗಪ್ಪ, ಕಂದಾಯ ನಿರೀಕ್ಷಕ ಉಜ್ವಲ್, ಗುತ್ತಿಗೆದಾರರಾದ ಶಕೀಲ್ ಪಟೇಲ್, ಪ್ರವೀಣ ಕಂದಾರಿ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ಆರೋಪ ಹಾಗೂ ವಿವಿಧ ದೂರಿನ ಹಿನ್ನೆಲೆ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.ಇದನ್ನೂ ಓದಿ: ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ ಎಚ್ಚರಿಕೆ

    ಐದು ತಂಡಗಳನ್ನು ರಚಿಸಿ ಡಿವೈಎಸ್ಪಿ ವಸಂತಕುಮಾರ್, ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಇನ್ಸ್‌ಪೆಕ್ಟರ್‌ಗಳಾದ ವಿಜಯಕುಮಾರ್, ಚಂದ್ರಪ್ಪ, ನಾಗರತ್ನ, ಶೈಲಾ, ಅಮರೇಶ ಹುಬ್ಬಳ್ಳಿ ಸೇರಿ ಹಲವು ಸಿಬ್ಬಂದಿ ಭಾಗಿಯಾಗಿದ್ದಾರೆ.

  • ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ‘ಲೋಕಾ’ ಶಾಕ್‌ – ಬೀದರ್‌, ಮೈಸೂರು ಸೇರಿ ಹಲವೆಡೆ ದಾಳಿ

    ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ‘ಲೋಕಾ’ ಶಾಕ್‌ – ಬೀದರ್‌, ಮೈಸೂರು ಸೇರಿ ಹಲವೆಡೆ ದಾಳಿ

    ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬೆಳ್ಳಂಬೆಳಗ್ಗೆ ಶಾಕ್‌ ಕೊಟ್ಟಿದೆ. ಬೀದರ್‌, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಬೀದರ್‌ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಸುನೀಲ್ ಕುಮಾರ್ ಚಂದ್ರಪ್ರಭಾ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಇವರು ಕಲಬುರ್ಗಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜನಿಯರ್ ವಿಭಾಗದಲ್ಲಿ ಕಾರ್ಯ ನಿರ್ವಾಹಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಕೆಜಿಎಫ್‌ ಬಾಬುಗೆ ಆರ್‌ಟಿಓ ಶಾಕ್‌ – ಬಿಗ್‌ ಬಿ, ಆಮೀರ್‌ ಖಾನ್‌ರಿಂದ ಖರೀದಿಸಿದ್ದ ಐಷಾರಾಮಿ ಕಾರು ಜಪ್ತಿ?

    ಬೀದರ್ ನಗರದ ಜೈಲ್ ಕಾಲೋನಿಯ ಎಸ್‌ಬಿಪಿ ನಗರದ ನಿವಾಸದ ಮೇಲೆ ದಾಳಿ ಮಾಡಿದ ಲೋಕಾಯುಕ್ತ ತಂಡ ದಾಖಲೆಗಳ ತೀವ್ರ ಪರಿಶೀಲನೆ ಮಾಡುತ್ತಿದೆ. ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಬಿ ಗ್ರಾಮದ ನಿವಾಸಿಯಾಗಿದ್ದು, ಸದ್ಯ ಕಲಬುರ್ಗಿಯಲ್ಲಿ ಕರ್ತವ್ಯ ಮಾಡುತ್ತಿದ್ದಾರೆ. ಹೀಗಾಗಿ, ಕಲಬುರ್ಗಿಯ ಆರೋಗ್ಯ ಇಲಾಖೆಯ ಕಚೇರಿ ಹಾಗೂ ನಿವಾಸದ ಮೇಲೂ ದಾಳಿ ಮಾಡಲಾಗಿದೆ.

    ತುಮಕೂರಿನಲ್ಲಿ ಕೆಐಡಿಬಿ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಇಇ ರಾಜೇಶ್ ಕಚೇರಿ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ತಿಂಗಳ ಹಿಂದಷ್ಟೇ ತುಮಕೂರಿನ ಕೆಐಎಡಿಬಿ ಕಚೇರಿಗೆ ರಾಜೇಶ್‌ ಬಂದಿದ್ದರು. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ – ಇಂದು ಮತ್ತೆ ವಿಚಾರಣೆ, FIR ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಬೈರತಿ ಬಸವರಾಜ್

    ಕೊಪ್ಪಳದಲ್ಲಿ ಎರಡು ಕಡೆ ದಾಳಿ ಲೋಕಾ ಅಧಿಕಾರಿಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಶೇಕು ಚೌಹಾಣ್‌ಗೆ ಸೇರಿದ ಎರಡು ಮನೆ, ಅಭಿಷೇಕ್ ಬಡಾವಣೆ ಹಾಗೂ ಕೀರ್ತಿ ಕಾಲೋನಿಯಲ್ಲಿರುವ ಮನೆಗಳ ಮೇಲೆ ದಾಳಿ ನಡೆದಿದೆ.

    ಬಳ್ಳಾರಿಯ ಸ್ವಗ್ರಾಮ ಕಲ್ಲುಕಂಬದ ಮನೆಯಲ್ಲಿ ಕೆಲ ದಾಖಲೆಗಳ ಪರಿಶೀಲನೆ ನಡೆದಿದೆ. ಬೆಂಗಳೂರು ಟೌನ್ ಆ್ಯಂಡ್ ರೂರಲ್ ಪ್ಲಾಬಿಂಗ್ ಆಫೀಸರ್ ಆಗಿರುವ ಮಾರುತಿ ಬಗಲಿ ಮೂಲತಃ ಬಳ್ಳಾರಿಯ ಕಲ್ಲುಕಂಬ ನಿವಾಸಿ. ಬಳ್ಳಾರಿ ಮಾತ್ರವಲ್ಲದೇ ರಾಜ್ಯದ ವಿವಿಧ ಕಡೆ ಮಾರುತಿ ಬಗಲಿ ಅಕ್ರಮ ಆಸ್ತಿ ಮಾಡಿದ್ದಾರೆಂಬ ಆರೋಪವಿದೆ.

    ಕೊಪ್ಪಳದ ಡಿಸ್ಟ್ರಿಕ್ಟ್‌ ಇಂಡಸ್ಟ್ರಿಯಲ್‌ ಆ್ಯಂಡ್ ಕಮರ್ಷಿಯಲ್ ಟ್ಯಾಕ್ಸ್ ಉಪ ನಿರ್ದೇಶಕ ಶೆಕು ಚೌಹಾಣ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ. ಆದಾಯ ಮೀರಿ ಆಸ್ತಿ ಮಾಡಿದ್ದ ಆರೋಪ ಇವರ ಮೇಲಿತ್ತು. ಇದನ್ನೂ ಓದಿ: ಮಂಡ್ಯದಲ್ಲಿ ಮೊಟ್ಟೆ ವಿವಾದ – ಮೊಟ್ಟೆ ಕೊಟ್ರೆ ಮಕ್ಕಳನ್ನ ಶಾಲೆಗೆ ಕಳ್ಸಲ್ಲ ಎಂದ ಪೋಷಕರು

    ಮೈಸೂರಿನಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೂ ಲೋಕಾ ದಾಳಿಯಾಗಿದೆ. ಮೈಸೂರು ಮಹಾನಗರ ಪಾಲಿಕೆ ಉಪ ವಿಭಾಗಧಿಕಾರಿ ವೆಂಕಟರಾಮ್, ಕೌಶಲ್ಯಾಭಿವೃದ್ದಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥಸ್ವಾಮಿ ನಿವಾಸದಲ್ಲಿ ದಾಖಲೆ ಪರಿಶೀಲಿಸಲಾಗುತ್ತಿದೆ.

  • ಬಾಗಲಕೋಟೆ, ಗದಗ ಜಿಲ್ಲೆಯ ವಿವಿಧೆಡೆ ಬೆಳ್ಳಂಬೆಳಿಗ್ಗೆ ʻಲೋಕಾʼ ರೇಡ್

    ಬಾಗಲಕೋಟೆ, ಗದಗ ಜಿಲ್ಲೆಯ ವಿವಿಧೆಡೆ ಬೆಳ್ಳಂಬೆಳಿಗ್ಗೆ ʻಲೋಕಾʼ ರೇಡ್

    ಬಾಗಲಕೋಟೆ/ಗದಗ: ಇಂದು ಬೆಳಿಗ್ಗೆ ಬಾಗಲಕೋಟೆ (Bagalkote) ಹಾಗೂ ಗದಗ (Gadag) ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು (Lokayuktha Officers) ದಾಳಿ ನಡೆಸಿದ್ದಾರೆ.

    ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಯೋಜನೆಯ ಮುಖ್ಯ ಇಂಜಿನಿಯರ್ ಆಗಿರುವ ಅಶೋಕ್ ವಸಂದ್‌ ಅವರ ನಿವಾಸದ ಮೇಲೆ ದಾಳಿ ನಡೆದಿದೆ. ಜಮಖಂಡಿ ಹಾಗೂ ಖಜ್ಜಿಡೋಣಿ ಗ್ರಾಮದಲ್ಲಿರುವ ಅಶೋಕ್ ಅವರ ಎರಡು ನಿವಾಸದ ಮೇಲೆಯೂ ಲೋಕಾ ದಾಳಿ ನಡೆಸಿ, ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಪಬ್‌ನಲ್ಲಿ ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ – ಟೆಕ್ಕಿ ಅರೆಸ್ಟ್‌

    ಗದಗ ನಗರ ಠಾಣಾ ಸಿಪಿಐ ಆಗಿರುವ ಡಿ.ಬಿ.ಪಾಟೀಲ್ ಅವರ ಮನೆಯ ಗದಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಶಾಕ್ ನೀಡಿದ್ದಾರೆ. ಆದಾಯ ಮೀರಿ ಆಸ್ತಿಗಳಿಕೆ ಆರೋಪದ ಹಿನ್ನೆಲೆ ದಾಳಿ ಮಾಡಲಾಗಿದೆ. ಡಿ.ಬಿ ಪಾಟೀಲ್‌ಗೆ ಸಂಬಂಧಿಸಿದ ಏಳು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ. ಶಿವಾನಂದ ನಗರದ ಬಾಡಿಗೆ ಮನೆ, ಶಹರ ಪೊಲೀಸ್ ಠಾಣೆ ಕಚೇರಿ, ಬಾಗಲಕೋಟೆ, ಜಮಖಂಡಿ, ಕೆರೂರು ಮನೆಗಳ ಮೇಲೂ ದಾಳಿ ಮಾಡಲಾಗಿದೆ.

    ಇಂಚಿಂಚು ಪರಿಶೀಲನೆ ನಡೆಸಿದ ಅಧಿಕಾರಿಗಳು, ಶೌಚಾಲಯದೊಳಗೆ ಕುಳಿತಿದ್ದ ಸಿಪಿಐ ಮೊಬೈಲ್‌ನಲ್ಲಿ ಯಾರ ಜೊತೆಯಾದರೂ ಕದ್ದು ಮಾತಾಡುತ್ತಿದ್ದಾನಾ ಎಂದು ಬಾಗಿಲಿಗೆ ಕಿವಿಗೊಟ್ಟು ಕೇಳಿಸಿಕೊಂಡಿದ್ದಾರೆ. ಬಾಗಿಲು ತಟ್ಟಿ ಹೊರಗೆ ಬರುವಂತೆ ಸೂಚಿಸಿದ್ದ ಅಧಿಕಾರಿಗಳ ನಡೆಯನ್ನು ಕಂಡು ಡಿ.ಬಿ ಪಾಟೀಲ್ ಬೆಚ್ಚಿ ಬಿದ್ದಿದ್ದಾರೆ.

    ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿ.ಎಸ್ ಪಾಟೀಲ, ಸಿಪಿಐ ಪರಶುರಾಮ್ ಕವಟಗಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ದಾಳಿ ವೇಳೆ ಅನೇಕ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಹಣ, ಬೆಳ್ಳಿ, ಚಿನ್ನಾಭರಣಗಳ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.ಇದನ್ನೂ ಓದಿ: ದೇಶ ತೊರೆಯಿರಿ ಇಲ್ವೋ ಇಂದು ಸಾಯಲು ಸಿದ್ಧವಾಗಿರಿ – ಕರೆ ಮಾಡಿ ಇರಾನ್‌ ಕಮಾಂಡರ್‌ಗಳಿಗೆ ಮೊಸಾದ್‌ ಎಚ್ಚರಿಕೆ

  • ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ರಾಜ್ಯದ 7 ಜಿಲ್ಲೆಗಳಲ್ಲಿ ಏಕಾಏಕಿ ದಾಳಿ!

    ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ರಾಜ್ಯದ 7 ಜಿಲ್ಲೆಗಳಲ್ಲಿ ಏಕಾಏಕಿ ದಾಳಿ!

    ಬೆಳಗಾವಿ/ಬಾಗಲಕೋಟೆ/ಬಳ್ಳಾರಿ: ರಾಜ್ಯದ ಏಳು ಜಿಲ್ಲೆಗಳಲ್ಲಿಂದು ಲೋಕಾಯುಕ್ತ ಅಧಿಕಾರಿಗಳ ತಂಡ ಏಕಾಏಕಿ ದಾಳಿ (Lokayukta Raid) ನಡೆಸಿದ್ದು, ಭ್ರಷ್ಟ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದೆ.

    ಬೆಳಗಾವಿ (Belagavi), ಬಾಗಲಕೋಟೆ, ಬಳ್ಳಾರಿ ದಾವಣಗೆರೆ (Davanagere), ಉಡುಪಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. ಇದನ್ನೂ ಓದಿ: ಅಮೃತಹಳ್ಳಿ ಸ್ಪಾದಲ್ಲಿ ಲೇಡಿ ಗ್ಯಾಂಗ್‌ನಿಂದ ಅಟ್ಯಾಕ್ – ಬಂಧಿತ ಆರೋಪಿ ಕಾವ್ಯಳಿಗಿದೆ ರೌಡಿಸಂ ಲಿಂಕ್

    ಬೆಳಗಾವಿ ಸುವರ್ಣ ಸೌಧದ ದೇವರಾಜ್ ಅರಸು ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ದಲಿಂಗಪ್ಪ, ಬಾಗಲಕೋಟೆಯ ಜಿಲ್ಲಾಡಳಿತ ಕಚೇರಿ ಲೆಕ್ಕಪತ್ರ ವಿಭಾಗದ ಎಫ್‌ಡಿಎ ಶೈಲ ಸುಭಾಷ್ ತತ್ರಾಣಿ, ಬಳ್ಳಾರಿಯ ಕಾರ್ಯಪಾಲಕ ಎಂಜಿನಿಯರ್ ಅಮೀನ್ ಮುಕ್ತಾರ್ ಅಹಮದ್, ದಾವಣಗೆರೆಯ ಶಿಗ್ಗಾಂವಿ ಪಂಚಾಯಿತಿ ಪಿಡಿಓ (PDO) ರಾಮಕೃಷ್ಣ, ಉಡುಪಿ ಜಿಲ್ಲೆ ಕಾರ್ಕಳದ ಮೆಸ್ಕಾಂ ಅಕೌಂಟೆಂಟ್‌ ಗಿರೀಶ್‌ ರಾವ್‌, ಗದಗದ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಗಂಗಾಧರ, ಧಾರವಾಡದ ಪಿಡಬ್ಲುಡಿ ಮುಖ್ಯ ಇಂಜಿನಿಯರ್ ಹೆಚ್.ಸುರೇಶ್ ಅವರ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

    ಗದಗ:
    ಗದಗ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಮನೆ ಗಂಗಾಧರ ಶಿರೋಳ ಅವರ ಮನೆ, ಕಚೇರಿ ಹಾಗೂ ಅಳಿಯ, ಭಾವನ ಮನೆಗಳು ಸೇರಿ 6 ಕಡೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಗದಗ ನಗರದ ಅಳಿಯ ವಿಜಯ ಯಳಮೇಲಿ, ಭಾವ ನಾಗರಾಜ್ ಅಕ್ಕಿ ಮನೆ, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಹಾಗೂ ಹಾವೇರಿ ಜಿಲ್ಲೆಯಲ್ಲಿ ಸಂಬಧಿಕರ ಮನೆ ಮೇಲೆ ಲೋಕಾಯುಕ್ತ ಎಸ್ಪಿ ಹಣಮಂತರಾಯ, ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿ, ವಾಹನಗಳು, ಆಸ್ತಿಪತ್ರಗಳು ದೊರೆತಿದ್ದು ಶೋಧ ಕಾರ್ಯ ಮುಂದುವರಿದಿದೆ.

    ಕಲಬುರಗಿ:
    ಕಲಬುರಗಿ ನಗರದ ಹುಸೇನಿ ಗಾರ್ಡನ್ ಬಡಾವಣೆಯಲ್ಲಿರುವ ಬಳ್ಳಾರಿ ಲೋಕೋಪಯೋಗಿ ಇಲಾಖೆಯ ಸರ್ಕಲ್ ಆಫೀಸ್ ಅಧೀಕ್ಷಕ ಇಂಜಿನಿಯರ್ ಅಮೀನ್‌ ಮುಕ್ತಾರ್ ನಿವಾಸದ ಮೇಲೆ ಇಂದು ನಸುಕಿನಲ್ಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಬುರಗಿ ಮೂಲದವರೇ ಆಗಿರುವ ಅಮೀನ್ ಮುಕ್ತಾರ್ ಈ ಹಿಂದೆ ಇದೇ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿ ಸಹ ಸೇವೆ ಸಲ್ಲಿಸಿದ್ದಾರೆ. ಇಂದು ನಸುಕಿನಲ್ಲಿ ಮನೆಯ ಬಾಗಿಲು ತಟ್ಟಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮುಂದಯವರೆಸಿದ್ದು, ಅಮೀನ್ ಅವರ ಸಹೋದರ ಡಾ.ಆರೀಫ್ ಅವರಿಗೆ ಸೇರಿದ ಏಷ್ಯನ್ ಲೈಫ್ ಸ್ಟೈಲ್ ಅಪಾರ್ಟ್‌ಮೆಂಟ್ ಮೇಲೆ ಸಹ ದಾಳಿ ನಡೆಸಿದ್ದಾರೆ. ಇದರ ಜೊತೆಗೆ, ಬಳ್ಳಾರಿ ಮತ್ತು ಬಸವಕಲ್ಯಾಣದಲ್ಲೂ ದಾಳಿ ನಡೆದಿದೆ. ಆದಾಯಕ್ಕೂ ಹೆಚ್ಚು ಆಸ್ತಿ ಗಳಿಕೆ ಆರೋಪದ ಅಡಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಕೈಗೊಂಡಿದ್ದಾರೆ.  ಇದನ್ನೂ ಓದಿ: ಕೊಡಗು | ಪೊನ್ನಂಪೇಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

    ಬಾಗಲಕೋಟೆ:
    ಇಲ್ಲಿನ ಜಿಲ್ಲಾಡಳಿತ ಕಚೇರಿ ಲೆಕ್ಕಪತ್ರ ವಿಭಾಗದ ಎಫ್‌ಡಿಎ ಶ್ರೀಶೈಲ್ ತತ್ರಾಣಿ ಅವರ ಅಮೀನಗಢ ಪಟ್ಟಣದಲ್ಲಿರುವ ಮನೆ ಹಾಗೂ ಆಭರಣ ಮಳಿಗೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಬಾಗಲಕೋಟೆ ಲೋಕಾಯುಕ್ತ ಡಿಎಸ್‌ಪಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೊಂಟೆಪದವು ಗುಡ್ಡಕುಸಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ – ಪಿಡಿಓ ಇತರ ಅಧಿಕಾರಿಗಳ ವಿರುದ್ಧ ದೂರು

    ಹಾವೇರಿ:
    ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮ ಪಂಚಾಯತಿ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ. ಗ್ರಾಮ ಪಂಚಾಯತಿ ಪಿಡಿಓ ರಾಮಕೃಷ್ಷಪ್ಪ ಗುಡಗೇರಿ ಎಂಬ ಪಿಡಿಓ ಸಂಬಂಧಿಸಿದ ಮನೆ ಮತ್ತು ಕಚೇರಿಯಲ್ಲಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ. ಧಾರವಾಡದ ಮನೆ ಮತ್ತು ಬಾಡ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ದಾವಣಗೆರೆ ಮತ್ತು ಹಾವೇರಿ ಲೋಕಾಯುಕ್ತರ ಪೊಲೀಸ್ ಸಿಬ್ಬಂದಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಯುದ್ಧ ಹಡಗು, ಜಲಾಂತರ್ಗಾಮಿಗಳ ಸೂಕ್ಷ್ಮ ಮಾಹಿತಿಯನ್ನ ಪಾಕ್‌ಗೆ ರವಾನಿಸ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಅರೆಸ್ಟ್‌!

    ಇದರೊಂದಿಗೆ ಬಳ್ಳಾರಿ, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲೂ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಚಿನ್ನಾಭರಣ, ಅಕ್ರಮ ಆಸ್ತಿ ಹಾಗೂ ಮಹತ್ವದ ದಾಖಲೆಗಳು ಪತ್ತೆಯಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

  • ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್‌ – ಬೆಂಗಳೂರು ಸೇರಿ ಹಲವೆಡೆ ‘ಲೋಕಾ’ ದಾಳಿ

    ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್‌ – ಬೆಂಗಳೂರು ಸೇರಿ ಹಲವೆಡೆ ‘ಲೋಕಾ’ ದಾಳಿ

    ಬೆಂಗಳೂರು: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುರುವಾರ ದಾಳಿ ನಡೆಸಿದೆ.

    ಆದಾಯಕ್ಕೂ ಹೆಚ್ಚು ಆಸ್ತಿ ಗಳಿಕೆ ಮಾಡಿರುವ ಆರೋಪದ ಹಿನ್ನೆಲೆ ಭ್ರಷ್ಟ ಏಳು ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳನ್ನು ದಾಳಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಅಧಿಕಾರಿಗಳಾದ ಟಿ.ವಿ.ಮುರಳಿ, ಹೆಚ್‌.ಆರ್‌.ನಟರಾಜ್‌ ಮತ್ತು ಗ್ರಾಮಾಂತರದಲ್ಲಿ ಅನಂತ್‌ಕುಮಾರ್‌ಗೆ ಸೇರಿದ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ದಾಖಲೆಗಳನ್ನು ಪರಿಶೀಲನೆ ನಡೆಸಿದೆ.

    ತುಮಕೂರು: ನಿರ್ಮಿತಿ ಕೇಂದ್ರ ಎಂಡಿ ರಾಜಶೇಖರ ಮನೆ ಮೇಲೆ ರೇಡ್‌ ಆಗಿದೆ. ತುಮಕೂರಿನ ಸಪ್ತಗಿರಿ ಬಡಾವಣೆ, ಎಸ್‌ಎಸ್ ಪುರಂನಲ್ಲಿ ಇರುವ ರಾಜಶೇಖರ ಸಹೋದರನ ಮನೆ ಮೇಲೂ ದಾಳಿ ಆಗಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪ ಕಾರಣಕ್ಕೆ 10 ಮಂದಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ.

    ಕಲಬುರಗಿ: ಶಹಾಪೂರ ತಹಸೀಲ್ದಾರ್‌ ಉಮಾಕಾಂತ ಹಳ್ಳೆ ಅವರ ಮನೆ ಮೇಲೂ ದಾಳಿ ಆಗಿದೆ. ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿ ತಹಸೀಲ್ದಾರ್‌ ಅವರ ಮನೆ ಮತ್ತು ಕಚೇರಿ ಇದೆ. ಮನೆ ಹಾಗೂ ಕಚೇರಿಯಲ್ಲಿ ಲೋಕಾ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.