Tag: ಲೋಕಸಭೆ ಚುನಾವಣೆ

  • ವಿಜಯೇಂದ್ರ ಆಯ್ಕೆ ಹಿಂದಿನ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಏನು?

    ವಿಜಯೇಂದ್ರ ಆಯ್ಕೆ ಹಿಂದಿನ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ ಏನು?

    ಬೆಂಗಳೂರು: ಅಸೆಂಬ್ಲಿ ಚುನಾವಣೆಯಲ್ಲಿ ಎದುರಾದ ಆಘಾತಕಾರಿ ಸೋಲಿನಿಂದ ನಿರಾಸೆಯ ಮಡುವಿನಲ್ಲಿ ಮುಳುಗಿದ್ದ ರಾಜ್ಯ ಬಿಜೆಪಿಗೆ ಬರೋಬ್ಬರಿ ಅರು ತಿಂಗಳ ಬಳಿಕ ಹೈಕಮಾಂಡ್ ಜೋಶ್ ತುಂಬುವ ರೀತಿಯ ಟಾನಿಕ್ ನೀಡಿದೆ. ಇದನ್ನು ಬೇಕಿದ್ರೆ ರಾಜ್ಯ ಬಿಜೆಪಿಗೆ (BJP) ದೀಪಾವಳಿ ಗಿಫ್ಟ್ ಎಂದರೂ ತಪ್ಪಾಗಲಿಕ್ಕಿಲ್ಲ.

    ಲೋಕಸಭಾ ಚುನಾವಣೆ (Loksabha Election) ದೃಷ್ಟಿಯಿಂದ ಇನ್ನು ತಡ ಮಾಡಿದ್ರೆ ಸರಿ ಹೋಗಲ್ಲ ಎಂಬ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಸಾಕಷ್ಟು ಅಳೆದುತೂಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಪುತ್ರ, ಶಿಕಾರಿಪುರದ ಶಾಸಕ ಬಿವೈ ವಿಜಯೇಂದ್ರರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಕಟೀಲ್ ಸ್ಥಾನಕ್ಕೆ ಯಾರು ಎಂಬ ಕುತೂಹಲಕ್ಕೆ ಹೈಕಮಾಂಡ್ ತೆರೆ ಎಳೆದಿದೆ.

    ಬಿಜೆಪಿ ಹೈಕಮಾಂಡ್ (BJP HighCommand) ಈ ಆದೇಶ ಹೊರಡಿಸಿದ ಸಂದರ್ಭದಲ್ಲಿ ಧವಳಗಿರಿ ನಿವಾಸದಲ್ಲಿ ತಂದೆ ಯಡಿಯೂರಪ್ಪ ಜೊತೆಗೆ ವಿಜಯೇಂದ್ರ ಇದ್ದರು. ಹೈಕಮಾಂಡ್ ಆದೇಶ ನೋಡಿ ಇಬ್ಬರು ಫುಲ್ ಖುಷಿಯಾದ್ರು. ಒಳ್ಳೆಯದಾಗಲಿ ಎಂದು ಪುತ್ರನಿಗೆ ಯಡಿಯೂರಪ್ಪ ಹರಸಿದ್ರು. ಈ ಬೆನ್ನಲ್ಲೇ ವಿಜಯೇಂದ್ರಗೆ ಅಭಿನಂದನೆಗಳ ಮಹಾಪೂರವೇ ಹರಿದುಬರಲು ಶುರುವಾಯ್ತು.

    ಮುಂದಿನ ಶುಕ್ರವಾರ ವಿಪಕ್ಷ ನಾಯಕನ ಆಯ್ಕೆ: ವಿಜಯೇಂದ್ರ

    ಹಲವು ನಾಯಕರು ಮತ್ತೆ ಬಿಎಸ್‍ವೈ ಮನೆಯನ್ನು ಎಡತಾಕಿದ್ರು. ಶಿಕಾರಿಪುರದಲ್ಲಿ, ಯಾದಗಿರಿಯಲ್ಲಿ ವಿಜಯೇಂದ್ರ ಬೆಂಬಲಿಗರು ಸಂಭ್ರಮಾಚರಣೆ ಮಾಡಿದರು. ತಮ್ಮ ಮೇಲೆ ವಿಶ್ವಾಸವಿಟ್ಟು ಅತಿದೊಡ್ಡ ಜವಾಬ್ದಾರಿ ನೀಡಿದ ಹೈಕಮಾಂಡ್ ನಾಯಕರಿಗೆ ವಿಜಯೇಂದ್ರ ಧನ್ಯವಾದ ಹೇಳಿದ್ರು. ಸದ್ಯದಲ್ಲೇ ಎದುರಾಗಲಿರುವ ಲೋಕಸಭೆ ಚುನಾವಣೆ ಸವಾಲನ್ನು ಸಮರ್ಥವಾಗಿ ಎದುರಿಸಿ, ಪಕ್ಷಕ್ಕೆ ಹೆಚ್ಚಿನ ಸ್ಥಾನ ಗೆಲ್ಲಿಸಲು ಕೆಲಸ ಮಾಡೋದಾಗಿ ವಿಜಯೇಂದ್ರ ಪ್ರಕಟಿಸಿದ್ರು. ಮಾಜಿ ಮಂತ್ರಿ ಸೋಮಣ್ಣ ಆದಿಯಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದಾಗಿ ವಿಜಯೇಂದ್ರ ಘೋಷಿಸಿದರು.

    ಹೈಕಮಾಂಡ್ ಲೆಕ್ಕಾಚಾರ ಏನು?: ರಾಜ್ಯದಲ್ಲಿ ಬಿಜೆಪಿಗೆ ಬಿಎಸ್‍ವೈ ಅನಿವಾರ್ಯವಾಗಿದ್ದಾರೆ. ಮುಂಬರುವ ಲೋಕಸಮರಕ್ಕೆ ಈ ಮೂಲಕ ಬಿಎಸ್‍ವೈ ಶಕ್ತಿ ಬಳಕೆ ತಂತ್ರ ರೂಪಿಸಲಾಗಿದೆ. ಜೊತೆಗೆ ಲಿಂಗಾಯತರನ್ನು ಕೈಬಿಟ್ಟಿಲ್ಲ ಎನ್ನುವ ಸಂದೇಶ ರವಾನಿಲಾಗಿದೆ.

    ಲಿಂಗಾಯತ ಸಮುದಾಯದ ಮತಬ್ಯಾಂಕ್ ರಕ್ಷಣೆಯ ಪ್ಲಾನ್ ಇದಾಗಿದ್ದು, ಸಮುದಾಯದ ನಾಯಕರ ವಲಸೆಗೂ ತಡೆಯೊಡ್ಡುವ ತಂತ್ರವಾಗಿದೆ. ಆಪರೇಷನ್ ಹಸ್ತ ತಡೆಯಲು ವಿಜಯೇಂದ್ರ `ಶಕ್ತಿ’ ಬಳಕೆ ಮಾಡಲಾಗುತ್ತಿದೆ. ಯಾಕೆಂದರೆ ವಿಜಯೇಂದ್ರ ಅವರು ಯುವ ಮುಖ, ಮಾಸ್ ಫೇಸ್ ಆಗಿದ್ದಾರೆ. ಪಕ್ಷ ಸಂಘಟನೆಗೆ ದೀರ್ಘಾವಧಿ ನಾಯಕತ್ವದ ದೃಷ್ಟಿಯಿಂದಲೂ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ ಲಿಂಗಾಯತ ಹಾಗೂ ಒಕ್ಕಲಿಗ ನಾಯಕತ್ವ ಕಾಂಬಿನೇಶನ್‍ಗೆ ಪ್ಲಾನ್ ಮಾಡಲಾಗಿದೆ.

  • ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ – ದೆಹಲಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಹೈಕಮಾಂಡ್ ಉತ್ಸುಕ

    ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ – ದೆಹಲಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಹೈಕಮಾಂಡ್ ಉತ್ಸುಕ

    ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯು (Women’s Reservation Bill) ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ಬೆನ್ನಲ್ಲೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ದೆಹಲಿಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.

    7 ಲೋಕಸಭೆ ಕ್ಷೇತ್ರಗಳ ಪೈಕಿ ಮೀನಾಕ್ಷಿ ಲೇಖಿ ಅವರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇದನ್ನು 2ಕ್ಕೆ ಏರಿಸಲು ಚರ್ಚೆಗಳು ಆರಂಭಗೊಂಡಿವೆ. ಕಳೆದ ವರ್ಷ ನಡೆದ ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿಯು 137 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆಮ್ ಆದ್ಮಿ ಪಕ್ಷ 140 ಮಹಿಳೆಯರಿಗೆ ಟಿಕೆಟ್‌ ನೀಡಿ ಕೌಂಟರ್ ಕೊಟ್ಟಿತ್ತು. ಇದನ್ನೂ ಓದಿ: Ind vs Pak ರೋಚಕ ಸಮರಕ್ಕೆ ಕ್ಷಣಗಣನೆ – ಮೋದಿ ಕ್ರೀಡಾಂಗಣದಲ್ಲಿ ಜನಸಾಗರ, ಭಾರತದ ಗೆಲುವಿಗೆ ಹೋಮ ಹವನ

    ದೆಹಲಿಗೆ ಸಂಬಂಧಿಸಿದಂತೆ ಈಗಾಗಲೇ ಲೋಕಸಭೆ ಚುನಾವಣೆಗೆ ಕೆಲಸ ಆರಂಭವಾಗಿದೆ. ರಾಷ್ಟ್ರ ರಾಜಧಾನಿಯಿಂದ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಪಕ್ಷದ ನಾಯಕತ್ವ ಉತ್ಸುಕವಾಗಿದೆ. ಆದರೆ ಎಲ್ಲವೂ ಗೆಲುವಿನ ಮಾನದಂಡದ ಮೇಲೆ ಅವಲಂಬಿತವಾಗಿದೆ ಎಂದು ಬಿಜೆಪಿ (BJP) ಕಾರ್ಯಕಾರಿ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಹಂತದಲ್ಲಿ ನಾವು ಗಮನಾರ್ಹವಾದ ಅನುಯಾಯಿಗಳನ್ನು ಹೊಂದಿರುವ ದೆಹಲಿಯ ಸಕ್ರೀಯ ಪಕ್ಷದ ಕಾರ್ಯಕರ್ತರನ್ನು ಶಾರ್ಟ್‌ಲಿಸ್ಟ್ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೋಟಿ ಕೋಟಿ ಹಣ ಎಣಿಸುತ್ತಾ ಇರೋ ಅಧಿಕಾರಿಗಳು- ಅಂಬಿಕಾಪತಿ ಮನೆಯ Exclusive ಫೋಟೋ

    ದೆಹಲಿಯಲ್ಲಿ 7 ಲೋಕಸಭೆ ಕ್ಷೇತ್ರಗಳಿದ್ದು, 7 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ನವದೆಹಲಿ ಕ್ಷೇತ್ರವನ್ನು ನಾಕ್ಷಿ ಲೇಖಿ, ಚಾಂದಿನಿ ಚೌಕ್ ಕ್ಷೇತ್ರವನ್ನು ಹರ್ಷವರ್ಧನ್, ಈಶಾನ್ಯ ದೆಹಲಿಯನ್ನು ನಟ-ರಾಜಕಾರಣಿ ಮನೋಜ್ ತಿವಾರಿ, ಪೂರ್ವದಿಂದ ಕ್ರಿಕೆಟಿಗ-ರಾಜಕಾರಣಿ ಗೌತಮ್ ಗಂಭೀರ್, ವಾಯುವ್ಯ ದೆಹಲಿಯಿಂದ ಗಾಯಕ-ರಾಜಕಾರಣಿ ಹನ್ಸ್ ರಾಜ್ ಹನ್ಸ್, ಪಶ್ಚಿಮ ದೆಹಲಿಯಿಂದ ಜಾಟ್ ನಾಯಕ ಪರ್ವೆಸ್ ವರ್ಮಾ ಮತ್ತು ಗುಜ್ಜರ್ ನಾಯಕ ರಮೇಶ್ ಬಿಧುರಿ ದಕ್ಷಿಣ ದೆಹಲಿವನ್ನು ಪ್ರತಿನಿಧಿಸುತ್ತಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ – ಪ್ರೊ. ಭಗವಾನ್ ಮನೆಗೆ ಮುತ್ತಿಗೆಗೆ ಯತ್ನ

    ಮಹಿಳೆಯರಿಗೆ 2 ಸ್ಥಾನಗಳನ್ನು ಬಿಟ್ಟು ಕೊಡುವುದಾದರೆ ಓರ್ವ ಸಂಸದ ಕ್ಷೇತ್ರ ಬಿಟ್ಟುಕೋಡಬೇಕಾಗುತ್ತಿದೆ. ಕಳೆದ ಕ್ಯಾಬಿನೆಟ್ ಪುನರ್ ರಚನೆಯಲ್ಲಿ ಕೊವೀಡ್ ಸಂದರ್ಭದಲ್ಲಿ ಕೆಲಸ‌ ಮಾಡಿದ್ದ ಆರೋಗ್ಯ ಸಚಿವ ಹರ್ಷವರ್ಧನ ರಾಜೀನಾಮೆ‌ ನೀಡಿದ್ದರು. ಲೋಕಸಭೆಯಲ್ಲಿ ಬಿಎಸ್‌ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ರಮೇಶ್ ಬಿಧುರಿ ಅವರ ನಿರಂತರ ವಿವಾದಗಳು ಬಿಜೆಪಿಯನ್ನು ಮುಜುಗರಕ್ಕೀಡು ಮಾಡುತ್ತಿವೆ. ಹನ್ಸ್ ರಾಜ್ ಹನ್ಸ್ ಕೂಡ ತಮ್ಮ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ ಎಂಬ ದೂರು ಬಿಜೆಪಿ ನಾಯಕತ್ವದ ಕಿವಿಗೆ ತಲುಪಿದೆ ಎಂದು ವರದಿಯಾಗಿದೆ. ಯಾರ ಕ್ಷೇತ್ರ ಖಾಲಿಯಾಗಲಿದೆ ಎನ್ನುವ ಕುತೂಹಲ ಮೂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಸದೆ ಸುಮಲತಾ ಕಾಂಗ್ರೆಸ್‌ಗೆ ಬರಬಹುದು – ಸಚಿವ ಬೋಸರಾಜು ಹೊಸ ಬಾಂಬ್‌

    ಸಂಸದೆ ಸುಮಲತಾ ಕಾಂಗ್ರೆಸ್‌ಗೆ ಬರಬಹುದು – ಸಚಿವ ಬೋಸರಾಜು ಹೊಸ ಬಾಂಬ್‌

    ರಾಯಚೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ (BJP-JDS Alliance) ಚುನಾವಣಾ ಪೂರ್ವ ಮೈತ್ರಿ ಹಿನ್ನೆಲೆ ಸಂಸದೆ ಸುಮಲತಾ ಕಾಂಗ್ರೆಸ್ ಸೇರ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಈ ಬೆನ್ನಲ್ಲೇ ಸಣ್ಣ ನೀರಾವರಿ ಸಚಿವ ಎನ್.ಎಸ್ ಬೋಸರಾಜು ಸುಮಲತಾ (Sumalatha Ambareesh) ಕಾಂಗ್ರೆಸ್‌ ಪಕ್ಷಕ್ಕೆ ಬರಬಹುದು, ಈಗಲೇ ಏನೂ ಹೇಳೋದಕ್ಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

    ರಾಯಚೂರಿನಲ್ಲಿ (Raichur) ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ರಮ್ಯಾ (ನಟಿ/ಮಾಜಿ ಸಂಸದೆ) (Ramya) ಬೇಕಂತಿಲ್ಲ, ಇಬ್ಬರು ಮೂವರು ಅಭ್ಯರ್ಥಿ ರೆಡಿ ಇದ್ದಾರೆ. ಸರ್ವೆ ನಡೆಯುತ್ತಿದೆ, ಜನರ ಅಭಿಪ್ರಾಯದ ಮೇಲೆ ಅಭ್ಯರ್ಥಿ ಅಂತಿಮವಾಗುತ್ತೆ. ಸುಮಲತಾ ಪಕ್ಷಕ್ಕೆ ಬಂದರೂ ಬರಬಹುದು. ತುಂಬಾ ಪವರಫುಲ್ ಕ್ಯಾಂಡಿಡೇಟ್ಸ್ ಪೈಪೋಟಿಯಲ್ಲಿದ್ದಾರೆ. 100% ಗೆಲ್ಲುವಂತ ಅಭ್ಯರ್ಥಿ ಮಂಡ್ಯದಲ್ಲಿ ಇದ್ದಾರೆ. ಯಾರು ಸೂಕ್ತ ಅನ್ನೋದನ್ನ ಮುಂದೆ ಹೈಕಮಾಂಡ್‌ ತೀರ್ಮಾನ ಮಾಡುತ್ತೆ ಎಂದು ತಿಳಿಸಿದ್ದಾರೆ.

    ಇನ್ನೂ ಖಾಸಗಿ ವಾಹನ ಮಾಲೀಕರ ಹೋರಾಟ ಕುರಿತು ಪ್ರತಿಕ್ರಿಯಿಸಿದ ಎನ್.ಎಸ್.ಬೋಸರಾಜು, ಖಾಸಗಿ ವಾಹನಗಳ ಮಾಲೀಕರು ಅವರ ಲಾಭಕ್ಕೆ ಹೋರಾಟ ಮಾಡುತ್ತಿದ್ದಾರೆ. ಶಕ್ತಿಯೋಜನೆ ಬಗ್ಗೆ ಅವರಿಗೆ ವಿರೋಧ, ಅಸಮಧಾನವಿಲ್ಲ. ಅವರ ಬಸ್‌ಗಳಿಗೆ ಯೋಜನೆ ಕೊಟ್ಟಿಲ್ಲ, ಅವರ ವ್ಯವಹಾರ ಕಡಿಮೆಯಾಗುತ್ತೆ ಅಂತ ಹೋರಾಟ ಮಾಡ್ತಿದ್ದಾರೆ. ಸಾಧಕ-ಬಾಧಕಗಳನ್ನ ನೋಡಿ ಸರ್ಕಾರ ತೀರ್ಮಾನ ಮಾಡುತ್ತದೆ. ಅವರಿಗೆ ತೊಂದರೆ ಕೊಡಬೇಕು ಅನ್ನೋದು ಸರ್ಕಾರದ ಉದ್ದೇಶವಲ್ಲ ಎಂದಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಹೊರಗಿನವರು ನಮ್ಮವರೂ ಮೋಸ ಮಾಡ್ತಾರೆ, ಅನುಭವವಿದೆ: ಪರಮೇಶ್ವರ್

    ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳು ಹೆಚ್ಚಾಗಿ ಓಡಾಡುತ್ತವೆ. ಅವರಿಗೆ ಯಾವ ರೀತಿ ಅನುಕೂಲ ಮಾಡಬೇಕು ಅನ್ನೋದನ್ನ ಸರ್ಕಾರ ತೀರ್ಮಾನ ಮಾಡುತ್ತೆ. ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ಶಕ್ತಿ ಯೊಜನೆ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ. ಮಧ್ಯವರ್ತಿಗಳಿಗೆ ಒಂದು ಪೈಸೆ ಸಿಗದಂತೆ 5 ಗ್ಯಾರೆಂಟಿಗಳನ್ನ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್‌ ವೇಳೆ ಕಾನೂನು ಉಲ್ಲಂಘನೆ – 13 ಕೇಸ್‌, 12 ಮಂದಿ ಅರೆಸ್ಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೊಡ್ಡಗೌಡ್ರು ಬಿಜೆಪಿ ಜೊತೆ ಮೈತ್ರಿಗೆ ಒಪ್ಪಿರೋದು ಸಂತೋಷ: ಬಿಎಸ್‌ವೈ

    ದೊಡ್ಡಗೌಡ್ರು ಬಿಜೆಪಿ ಜೊತೆ ಮೈತ್ರಿಗೆ ಒಪ್ಪಿರೋದು ಸಂತೋಷ: ಬಿಎಸ್‌ವೈ

    – 5 ಕ್ಷೇತ್ರಕ್ಕೆ ಜೆಡಿಎಸ್‌ ಬೇಡಿಕೆ ಇದೆ, 4 ಕ್ಷೇತ್ರ ಬಿಟ್ಟುಕೊಡಲು ಒಪ್ಪಿದ್ದಾರೆ

    ಬೆಂಗಳೂರು: ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು, ನರೇಂದ್ರ ಮೋದಿ (Narendra Modi) ಅವರನ್ನ ಭೇಟಿಯಾಗಿ ಲೋಕಸಭೆಯಲ್ಲಿ ಹೊಂದಾಣಿಕೆಗೆ ತೀರ್ಮಾನ ಮಾಡಿದ್ದಾರೆ. ಇದನ್ನ ಸ್ವಾಗತ ಮಾಡ್ತೇನೆ. ಆದಷ್ಟು ಬೇಗ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನ ಭೇಟಿ ಮಾಡ್ತೇನೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.

    2024ರ ಲೋಕಸಭಾ ಚುನಾವಣೆಗೆ ಬಿಜೆಪಿ-ಕಾಂಗ್ರೆಸ್ ಮೈತ್ರಿ (BJP-JDS Alliance) ವಿಚಾರವಾಗಿ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ಮೈತ್ರಿಗೆ ಸ್ವಾಗತ ಮಾಡ್ತಿನಿ. ಜೆಡಿಎಸ್ 5 ಕ್ಷೇತ್ರಗಳಿಗೆ ಬೇಡಿಕೆಯಿಟ್ಟಿದೆ. ಆದ್ರೆ ಅಮಿತ್ ಶಾ (Amit Shah) ನಾಲ್ಕು ಕ್ಷೇತ್ರಗಳನ್ನ ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ. ಯಾವ ಕ್ಷೇತ್ರಗಳನ್ನ ಬಿಟ್ಟುಕೊಡಬೇಕು ಎನ್ನುವ ಬಗ್ಗೆ ಅಮಿತ್ ಶಾ ನಿರ್ಧಾರ ಮಾಡ್ತಾರೆ. ಎಲ್ಲವೂ ಅವರಿಗೇ ಗೊತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕತ್ತು ಸೀಳಿ ಗಗನಸಖಿ ಹತ್ಯೆಗೈದಿದ್ದ ಆರೋಪಿ – ಲಾಕಪ್‌ನಲ್ಲೇ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಈ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಆರಂಭವಾಗಿದೆ. ನಾನೂ ಕೂಡ ಸೆಪ್ಟೆಂಬರ್ 16ರಿಂದ ರಾಜ್ಯ ಪ್ರವಾಸ ಮಾಡುತ್ತೇನೆ. ಕುರುಡುಮಲೈ ವಿನಾಯಕನ ಪೂಜೆ ಮಾಡಿ ಪ್ರವಾಸ ಆರಂಭಿಸ್ತೇವೆ, ಪ್ರತಿ ಜಿಲ್ಲೆಗಳಿಗೂ ಪ್ರವಾಸ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡ್ತೇವೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: HAL ಜೊತೆಗೂಡಿ ಫೈಟರ್‌ ಜೆಟ್‌ ಎಂಜಿನ್‌ ತಯಾರಿಕೆ & ನಾಗರಿಕ ಪರಮಾಣು ತಂತ್ರಜ್ಞಾನದ ಬಗ್ಗೆ ಮೋದಿ-ಬೈಡನ್ ಚರ್ಚೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನೇ ಬಿಜೆಪಿಯಿಂದ ಹೊರ ಬಂದಿದ್ದೇನೆ; ಸಂತೋಷ್ ಮೊದಲು ಪಕ್ಷದಲ್ಲಿರೋರನ್ನ ಉಳಿಸಿಕೊಳ್ಳಲಿ: ಶೆಟ್ಟರ್ ವ್ಯಂಗ್ಯ

    ನಾನೇ ಬಿಜೆಪಿಯಿಂದ ಹೊರ ಬಂದಿದ್ದೇನೆ; ಸಂತೋಷ್ ಮೊದಲು ಪಕ್ಷದಲ್ಲಿರೋರನ್ನ ಉಳಿಸಿಕೊಳ್ಳಲಿ: ಶೆಟ್ಟರ್ ವ್ಯಂಗ್ಯ

    ಹುಬ್ಬಳ್ಳಿ: ಬಿಎಲ್ ಸಂತೋಷ್ (BL Santosh) ಅವರು ಮೊದಲು ಪಕ್ಷದಲ್ಲಿದ್ದವರನ್ನು ಉಳಿಸಿಕೊಳ್ಳಲಿ. ಅವರ ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರನ್ನು ಉಳಿಸಿಕೊಂಡು, ಪಕ್ಷದ ಅಸ್ತಿತ್ವ ಉಳಿಸಿಕೊಂಡರೆ ಸಾಕಾಗಿದೆ. ಒಂದು ವೇಳೆ ಅವರ ಸಂಪರ್ಕದಲ್ಲಿ ಶಾಸಕರುಗಳು ಇದ್ದರೆ ನಾಳೆಯಿಂದಲೇ ಆಪರೇಶನ್ ಸ್ಟಾರ್ಟ್ ಮಾಡಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ವ್ಯಂಗ್ಯವಾಡಿದ್ದಾರೆ.

    ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಬಿಎಲ್ ಸಂತೋಷ್ ಹೇಳಿಕೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೇರೆ ಪಕ್ಷದವರನ್ನು ಕರೆದುಕೊಂಡು ಬಂದು ಹೊಸ ಸರ್ಕಾರ ಮಾಡೋದನ್ನು ಬಿಜೆಪಿ ನಾಯಕರು ಬಿಟ್ಟು ಬಿಡಲಿ. ಬರೀ ಆಪರೇಶನ್ ಮಾಡಿ ಸರ್ಕಾರ ರಚನೆ ಮಾಡೋದಾ? ಇಡೀ ರಾಷ್ಟ್ರದಲ್ಲಿ ಬೆಳಗ್ಗೆ ಇಂದ ಸಾಯಂಕಾಲವರೆಗೂ ಆಪರೇಶನ್ ಮಾಡೋದು, ಹಿರಿಯರನ್ನು ಕಡೆಗಣಿಸಿ ಹೊಸಬರನ್ನು ಕರೆದುಕೊಂಡು ಬರೋದು ನಿಮ್ಮ ಕೆಲಸ. ದಿನದಿಂದ ದಿನಕ್ಕೆ ಬಿಜೆಪಿ ಪಕ್ಷ ಅಧೋಗತಿಗೆ ಹೋಗ್ತಿದೆ. ಬಿಜೆಪಿ ಮುಳುಗುತ್ತಿರೋ ಹಡಗು ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಗೃಹಬಳಕೆಯ ಬೆನ್ನಲ್ಲೇ ವಾಣಿಜ್ಯ ಬಳಕೆಯ LPG ಬೆಲೆ 158 ರೂ. ಇಳಿಕೆ

    ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ತಿದೆ. ಇದಕ್ಕೆ ಕಾರಣ ಬಿಜೆಪಿ ಕೆಲವೇ ಜನರ ಕೈಯಲ್ಲಿದೆ. ಅದರಿಂದ ಹೊರಬಂದರೆ ಮಾತ್ರ ಭವಿಷ್ಯ. ಅದರಿಂದ ಹೊರಬರೋಕೆ ಆಗತ್ತೋ ಇಲ್ವೋ, ಆದರೆ ನಾನೇ ಹೊರಗೆ ಬಂದು ಬಿಟ್ಟಿದ್ದೆನೆ. ರಾಜ್ಯ ಬಿಜೆಪಿ ನಾಯಕರ ಪರಸ್ಥಿತಿ ಇಡೀ ಜಗತ್ತಿಗೆ ಗೊತ್ತಾಗಿದೆ. ದೆಹಲಿಯಲ್ಲಿ ಕೂತ ನಾಯಕರು ಈ ಬಗ್ಗೆ ಯೋಚನೆ ಮಾಡಬೇಕು. ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಸಲವೂ ಬಹುಮತ ಬರಲಿಲ್ಲ. ಆದರೆ ಕಾಂಗ್ರೆಸ್‌ಗೆ 136 ಸೀಟ್ ಬಂದಿದೆ ಎಂದರು. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‍ನ್ಯೂಸ್- ಇಂದಿನಿಂದ ಹೆಚ್ಚುವರಿ ಸರ್ವಿಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯ ಬಿಜೆಪಿಗೆ ಬಿಎಲ್ ಸಂತೋಷ್ ಟಾನಿಕ್ – ವಲಸಿಗರ ಪರ ಬ್ಯಾಟಿಂಗ್

    ರಾಜ್ಯ ಬಿಜೆಪಿಗೆ ಬಿಎಲ್ ಸಂತೋಷ್ ಟಾನಿಕ್ – ವಲಸಿಗರ ಪರ ಬ್ಯಾಟಿಂಗ್

    ಬೆಂಗಳೂರು: ವಿಧಾನಸಭೆ ಚುನಾವಣೆ ನಂತರ ಸೋಲಿನ ಹತಾಶೆಯಲ್ಲಿರುವ ರಾಜ್ಯ ಬಿಜೆಪಿಗೆ ಬೂಸ್ಟ್ ಕೊಡಲು ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ಅಖಾಡಕ್ಕಿಳಿದಿದ್ದಾರೆ. ಬೆಂಗಳೂರಿನ ಬಿಜೆಪಿ (BJP) ಕಚೇರಿಯಲ್ಲಿಂದು ಮಹತ್ವದ ಸಭೆ ನಡೆಸಿ ನಾಯಕರಲ್ಲಿ ಜೋಷ್ ತುಂಬೋ ಕೆಲಸ ಮಾಡಿದ್ದಾರೆ. ಲೋಕಸಭೆ ಚುನಾವಣಾ ತಯಾರಿಗೆ ಟಾಸ್ಕ್ ಕೊಟ್ಟಿದ್ದಾರೆ. ಇದೇ ವೇಳೆ ಆಪರೇಷನ್ ಹಸ್ತಕ್ಕೆ ಠಕ್ಕರ್ ಕೊಡಲು ರಿವರ್ಸ್ ಆಪರೇಷನ್‌ನ ಸುಳಿವನ್ನೂ ಸಭೆಯಲ್ಲಿ ಬಿಎಲ್ ಸಂತೋಷ್ ನೀಡಿದ್ದಾರೆ.

    ವಿಧಾನಸಭೆ ಚುನಾವಣೆ ಮುಗಿದು ಮೂರೂವರೆ ತಿಂಗಳಾದರೂ ರಾಜ್ಯ ಬಿಜೆಪಿಯಲ್ಲಿ ಶೂನ್ಯ ಮನಸ್ಥಿತಿ. ಯಾವ ನಾಯಕರಲ್ಲೂ ಜೋಷ್ ಉಳಿದಿಲ್ಲ. ಪರಿಣಾಮ ಪಕ್ಷ ಸಂಘಟನೆಯಲ್ಲಿ ಬಿಜೆಪಿ ಹಿಂದೆ ಬಿದ್ದಿದೆ. ಈ ಪರಿಣಾಮ ಅರಿತ ಹೈಕಮಾಂಡ್ ಈಗ ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಮೂಲಕ ರಾಜ್ಯ ಬಿಜೆಪಿಗೆ ಬೂಸ್ಟ್ ಕೊಡಿಸುವ ಕಾರ್ಯಕ್ಕೆ ಕೈ ಹಾಕಿದೆ.

    ಈ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಇಂದು ಬಿಎಲ್ ಸಂತೋಷ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಸಭೆಯಲ್ಲಿ ಹಾಲಿ/ಮಾಜಿ ಸಂಸದರು, ಶಾಸಕರು, ಜಿಲ್ಲಾ ಸಂಘಟನಾ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಬಿಜೆಪಿಯ ಪರಿಸ್ಥಿತಿ, ಪಕ್ಷ ಸಂಘಟನೆ, ಲೋಕಸಭೆ ಚುನಾವಣಾ ತಯಾರಿ, ಗ್ಯಾರಂಟಿಗಳ ಜಾರಿ, ಸರ್ಕಾರದ ನಕಾರಾತ್ಮಕ ನಡೆ, ನಿರ್ಧಾರಗಳು, ಆಪರೇಷನ್ ಹಸ್ತ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯ್ತು. ನಾಯಕರಿಗೆ ಬಿಎಲ್ ಸಂತೋಷ್ ಪಕ್ಷ ಸಂಘಟನೆ ಕುರಿತು ಟಾಸ್ಕ್‌ಗಳನ್ನು ನೀಡಿದರು.

    ಮುಖ್ಯವಾಗಿ ಚುನಾವಣಾ ಸೋಲಿಗೆ ಹೆದರದಂತೆ, ನಿರಾಶರಾಗದಂತೆ ಸಂತೋಷ್ ಧೈರ್ಯ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ. ಆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಏನಾಗುತ್ತೆ ಅಂತಾ ನೋಡಿ. ನಮ್ಮಲ್ಲಿಂದ ಯಾರೂ ಕಾಂಗ್ರೆಸ್‌ಗೆ ಹೋಗಲ್ಲ. 10 ಜನ ಹೋದರೂ ಅದಕ್ಕೆ ಸಮನಾದ ಒಬ್ಬರನ್ನು ಕರೆತರಬಹುದು. ನನ್ನ ಜೊತೆಯೇ ಸಂಪರ್ಕದಲ್ಲಿ 40-45 ಜನ ಇದ್ದಾರೆ. ದೆಹಲಿಯವರು ಒಪ್ಪಿಗೆ ಕೊಟ್ಟರೆ ನಾಳೆಯೇ ಒಂದು ದಿನದ ಕೆಲಸ. ಆದರೆ ನಮಗೆ ಈಗ ಆಪರೇಷನ್ ಅಗತ್ಯವಿಲ್ಲ. ನಾವು ಈಗ ಸರ್ಕಾರ ಮಾಡಬೇಕಾಗಿಲ್ಲ. ಮುಂದೆ ನೋಡೋಣ ಅಂತ ಸಂತೋಷ್ ರಿವರ್ಸ್ ಆಪರೇಷನ್ ಸುಳಿವು ಕೊಟ್ಟಿದ್ದಾರೆ. ಪಕ್ಷ ಬಿಟ್ಟು ಹೋಗುವವರ ಬಗ್ಗೆ ಚಿಂತೆ ಬೇಡ. ಯಾರೂ ಕೂಡಾ ಪಕ್ಷ ಬಿಟ್ಟು ಹೋಗುವುದಿಲ್ಲ ಅಂತಲೂ ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ನಿರ್ಲಕ್ಷ್ಯ – ಸಿಎಂರಿಂದ ಸಿಗುತ್ತಾ ಪರಿಹಾರ?

    ಇನ್ನು ರಾಜ್ಯಾಧ್ಯಕ್ಷ ಸ್ಥಾನ, ವಿಪಕ್ಷ ನಾಯಕನ ಆಯ್ಕೆ ವಿಳಂಬ ಬಗ್ಗೆ ಸಭೆಯಲ್ಲಿ ಮಾತಾಡಿದ ಸಂತೋಷ್, ನೇಮಕ ಆಗಿದೆ ನಿಜ. ಆದರೆ ಅದರ ಬಗ್ಗೆ ಎಲ್ಲ ನೀವು ತಲೆಕೆಡೆಸಿಕೊಳ್ಳಬೇಡಿ. ಅದರ ಬಗ್ಗೆ ವರಿಷ್ಠರು ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಮಾಡಲಿದ್ದಾರೆ. ಆದರೆ ನೀವಂತೂ ಒಟ್ಟಾಗಿ ಪಕ್ಷದ ಕೆಲಸ ಮಾಡಿ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ, ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಎಂದು ನಾಯಕರಿಗೆ ಸಂತೋಷ್ ಕಿವಿಮಾತು ಹೇಳಿದ್ದಾರೆ.

    ಆಪರೇಷನ್ ಹಸ್ತದ ಆತಂಕ ಇರೋ ಹಿನ್ನೆಲೆಯಲ್ಲಿ ವಲಸಿಗರ ವಿಶ್ವಾಸ ಗಳಿಸುವ ಕಸರತ್ತಿಗೂ ಬಿಜೆಪಿ ಮುಂದಾಗಿದೆ. ಈ ಸಭೆಯಲ್ಲಿ ಮಾತಾಡಿರುವ ಬಿಎಲ್ ಸಂತೋಷ್, ಬಾಂಬೆ ಬಾಯ್ಸ್, ವಲಸಿಗರು ಅಂತಾ ನಮ್ಮ ಜೊತೆ ಬಂದವರನ್ನು ನಾವೇ ಹೇಳುವುದು ಬೇಡ ಎಂದು ಎಲ್ಲರಿಗೂ ತಾಕೀತು ಮಾಡಿದ್ದಾರೆ. ಅವರು ನಮ್ಮ ಕಷ್ಟ ಕಾಲಕ್ಕೆ ನಮ್ಮ ಜೊತೆ ಬಂದಿದ್ದಾರೆ. ಅವರು ಹೋಗುತ್ತಾರೆ ಅಂತಾ ನಾವೇ ಹೇಳುವುದು ಸರಿಯಲ್ಲ ಎಂದು ವಲಸಿಗರ ಪರ ಸಭೆಯಲ್ಲಿ ಸಂತೋಷ್ ಬ್ಯಾಟಿಂಗ್ ಮಾಡಿದ್ದಾರೆ.

    ಈ ಸಭೆಗೆ ಶಾಸಕ ಎಸ್‌ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್, ಮಾಜಿ ಸಚಿವರಾದ ವಿ ಸೋಮಣ್ಣ, ನಾರಾಯಣ ಗೌಡ, ಶಂಕರ್ ಪಾಟೀಲ್ ಮುನೇನಕೊಪ್ಪ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ರೇಣುಕಾಚಾರ್ಯ ಮತ್ತಿತರರು ಗೈರಾಗುವ ಮೂಲಕ ಸೆಡ್ಡು ಹೊಡೆದಿದ್ದಾರೆ. ಸಭೆಗೆ ರಮೇಶ್ ಜಾರಕಿಹೊಳಿ ಅಂಡ್ ಟೀಂ, ಮಾಜಿ ಸಚಿವ ಡಾ.ಕೆ ಸುಧಾಕರ್, ಬಿಸಿ ಪಾಟೀಲ್ ಮತ್ತಿತರ ವಲಸಿಗರು ಭಾಗವಹಿಸಿದರು. ಇದನ್ನೂ ಓದಿ: ಮಾರ್ಗ ಮಧ್ಯೆ ಕೈಕೊಟ್ಟ ಅಂಬುಲೆನ್ಸ್ – ಆನೆ ದಾಳಿಯಿಂದ ಗಾಯಗೊಂಡಿದ್ದ ಶಾರ್ಪ್ ಶೂಟರ್ ಅರಣ್ಯ ಸಿಬ್ಬಂದಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗ್ಳೂರಿಗೆ ಮೋದಿ – ಬೆಳಗ್ಗಿನ ಜಾವದಿಂದಲೇ ಸಂಚಾರದಲ್ಲಿ ಏರುಪೇರು; ಹೇಗಿದೆ ರೂಟ್ ಮ್ಯಾಪ್?

    ಬೆಂಗ್ಳೂರಿಗೆ ಮೋದಿ – ಬೆಳಗ್ಗಿನ ಜಾವದಿಂದಲೇ ಸಂಚಾರದಲ್ಲಿ ಏರುಪೇರು; ಹೇಗಿದೆ ರೂಟ್ ಮ್ಯಾಪ್?

    ಬೆಂಗಳೂರು: ಚಂದ್ರಯಾನ-3 (Chandrayaan-3) ಆಪರೇಷನ್ ಯಶಸ್ವಿಯಾಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಸ್ಟ್ 26ರಂದು ಬೆಳಗ್ಗೆ ಬೆಂಗಳೂರಿಗೆ ಬರುತ್ತಿದ್ದಾರೆ.

    ಗ್ರೀಸ್‌ನ ಅಥೆನ್ಸ್ ನಗರದಿಂದ ಬೆಳಗ್ಗೆ 6 ಗಂಟೆ ಸುಮಾರಿಗೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಸುಮಾರು 1 ಗಂಟೆಗಳ ಕಾಲ ಪೀಣ್ಯ ಬಳಿಯ ನೆಲಗದರನಹಳ್ಳಿಯಲ್ಲಿರುವ ಇಸ್ರೋ ಕಮಾಂಡಿಂಗ್ ಸೆಂಟರ್‌ನಲ್ಲಿ ಇರಲಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಸಕ್ಸಸ್‌ಗೆ ಕಾರಣರಾದ ಇಸ್ರೋ ವಿಜ್ಞಾನಿಗಳಿಗೆ ಮೋದಿ ಅಭಿನಂದಿಸಲಿದ್ದಾರೆ. ವಿಜ್ಞಾನಿಗಳ ಜೊತೆ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಲಿದ್ದಾರೆ.

    ಬೆಳಗ್ಗೆ 8:05ಕ್ಕೆ ಇಸ್ರೋದಿಂದ ನಿರ್ಗಮಿಸಲಿದ್ದಾರೆ, ಬೆಳಗ್ಗೆ 8:30 ಹೆಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ಬೆಳಗ್ಗೆ 8:35 ದೆಹಲಿಗೆ ತಲುಪಲಿದ್ದಾರೆ. ಬೆಂಗಳೂರಿಗೆ ಮೋದಿ ಬರೋ ಹಿನ್ನೆಲೆಯಲ್ಲಿ ಬೆಳಗಿನ ಜಾವ 4 ಗಂಟೆಯಿಂದ ಬೆಳಗ್ಗೆ 9.00 ಗಂಟೆವರೆಗೆ ಸಂಚಾರ ಏರುಪೇರಾಗಲಿದೆ. ಇದನ್ನೂ ಓದಿ: ಸ್ನೇಹಿತರಿಂದಲೇ ಚಿನ್ನ ಕಳವು ಮಾಡಿಸಿ ನಾಟಕ – ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಸಿಕ್ಕಿಬಿದ್ದ ಪತ್ನಿ

    ಮೋದಿ ರೂಟ್ ಮ್ಯಾಪ್ ಹೇಗಿದೆ?
    ಹೆಚ್‌ಎಎಲ್‌ಗೆ ಬಂದಿಳಿಯಲಿರುವ ಪ್ರಧಾನಿ ಮೋದಿ, ದೊಮ್ಮಲೂರು, ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ರಾಜಭವನ ರಸ್ತೆ, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್ ಬ್ರಿಡ್ಜ್, ಕಾವೇರಿ ಜಂಕ್ಷನ್, ಸ್ಯಾಂಕಿ ಟ್ಯಾಂಕ್, ಟಾಟಾ ಇನ್‌ಸ್ಟಿಟ್ಯೂಟ್, ಯಶವಂತಪುರ ಮೇಲ್ಸೇತುವೆ, ಗೊರಗುಂಟೆಪಾಳ್ಯ, ಪೀಣ್ಯ, ಜಾಲಹಳ್ಳಿ ಕ್ರಾಸ್ ಎಡ ತಿರುವು, ಇಸ್ರೋ ಕಚೇರಿ ಮಾರ್ಗಗಳಲ್ಲಿ ಸಂಚರಿಸಲಿದ್ದಾರೆ. ಇದನ್ನೂ ಓದಿ: Chandrayaan-3 ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ರೋವರ್ – ವೀಡಿಯೋ ರಿಲೀಸ್ ಮಾಡಿದ ಇಸ್ರೋ

    ರೋಡ್ ಶೋ ಕ್ಯಾನ್ಸಲ್‌:
    ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸೋ ಬಿಜೆಪಿ ನಾಯಕರ ಪ್ಲ್ಯಾನ್‌ ಉಲ್ಟಾ ಆಗಿದೆ. ಇಸ್ರೋ ಕಮಾಂಡಿಂಗ್ ಸೆಂಟರ್ ಇರೋ ಕಚೇರಿ ಪೀಣ್ಯವು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತೆ. ಹೀಗಾಗಿ, ದಾಸರಹಳ್ಳಿಯಿಂದ ಇಸ್ರೋ ಕಚೇರಿವರೆಗೆ 1 ಕಿ.ಮೀ. ರೋಡ್ ಶೋ ನಡೆಸುತ್ತೇವೆ ಅಂತ ಅಶೋಕ್ ಹೇಳಿದ್ದರು. ಆದರೆ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ಕೊಟ್ಟಿದ್ದು, ಮೋದಿ ರೋಡ್ ಶೋ ಪ್ಲ್ಯಾನ್ ಆಗಿಲ್ಲ ಅಂದಿದ್ದಾರೆ.

    ಇನ್ನು, ದಾಸರಹಳ್ಳಿ ಬಿಜೆಪಿ ಶಾಸಕ ಮುನಿರಾಜು ಮಾತನಾಡಿ, ರೋಡ್ ಶೋ ಅಂತಿಮವಾಗಿಲ್ಲ. ಎಸ್‌ಪಿಜಿಯಿಂದ ಅನುಮತಿ ಕೂಡ ಸಿಕ್ಕಿಲ್ಲ. ಆದರೆ, ಸಾವಿರಾರು ಕಾರ್ಯಕರ್ತರು ಜಮಾಯಿಸ್ತಾರೆ. ಸಹಜವಾಗಿ ಕಾರ್ಯಕರ್ತರು ಕಂಡಾಗ ಮೋದಿ ಕೈ ಬೀಸ್ತಾರೆ. ಕೆಳಗೆ ಇಳಿದರೂ ಇಳಿಯಬಹುದು ಅಂದಿದ್ದಾರೆ. ಈ ಬೆನ್ನಲ್ಲೇ ಮೋದಿ ಇಸ್ರೋ ಭೇಟಿ ಹೊತ್ತಲ್ಲಿ ಜಾಲಹಳ್ಳಿ ಕ್ರಾಸ್ ಬಳಿ ಬೆಂಗಳೂರಿನ ಎಲ್ಲಾ 16 ಬಿಜೆಪಿ ಶಾಸಕರು ಹಾಜರಿದ್ದು ಸ್ವಾಗತ ಕೋರಲಿದ್ದಾರೆ. ಇನ್ನೂ ಪ್ರಧಾನಿಗಳ ಭೇಟಿಗೆ ನಮ್ಮದೇನೂ ವಿರೋಧ ಇಲ್ಲ. ರೋಡ್ ಶೋನಾದರೂ ಮಾಡಲಿ.. ಪಬ್ಲಿಕ್ ಮೀಟಿಂಗಾದರೂ ಮಾಡಲಿ ಅಭ್ಯಂತರ ಇಲ್ಲ ಅಂತ ಸಿಎಂ ಹೇಳಿದ್ದಾರೆ. ರೋಡ್ ಶೋ ಮೂಲಕ ಇಸ್ರೋ ಸಾಧನೆಯನ್ನ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳೋದು ಪ್ಲ್ಯಾನ್‌ ಅಂತ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಬಿಜೆಪಿ ಭರ್ಜರಿ ತಯಾರಿ – ಶನಿವಾರ `ಕೈ’ನಾಯಕರ ಹೈವೋಲ್ಟೇಜ್ ಮೀಟಿಂಗ್

    ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಬಿಜೆಪಿ ಭರ್ಜರಿ ತಯಾರಿ – ಶನಿವಾರ `ಕೈ’ನಾಯಕರ ಹೈವೋಲ್ಟೇಜ್ ಮೀಟಿಂಗ್

    ನವದೆಹಲಿ: ಸಾರ್ವತ್ರಿಕ ಚುನಾವಣೆ (Election) ಬಗ್ಗೆ ವಿಪರೀತವಾಗಿ ತಲೆಕೆಡಿಸಿಕೊಂಡಿರುವ ಬಿಜೆಪಿ (BJP), ಸೀಟ್ ನಿಗದಿ ಸಂಬಂಧ ಆಂತರಿಕ ಕಸರತ್ತನ್ನು ತೀವ್ರಗೊಳಿಸಿದೆ. ಪಕ್ಷದಿಂದ ಟಿಕೆಟ್ ನೀಡಿಕೆಗೆ ಅರ್ಹತೆ, ಮಾನದಂಡ, ಅನುಸರಿಸಬೇಕಾದ ವಿಧಾನಗಳನ್ನ ಅಖೈರು ಮಾಡುವ ಸಂಬಂಧ ಮಹತ್ವದ ಸಭೆ ನಡೆಸಿದೆ.

    ಹಾಲಿ ಸಂಸದರ ಕಾರ್ಯವೈಖರಿ, ರಿಪೋರ್ಟ್ ಕಾರ್ಡನ್ನ  ಪರಿಶೀಲಿಸಿದೆ. ವಿವಿಧ ಏಜೆನ್ಸಿಗಳ ಮೂಲಕ ಕ್ಷೇತ್ರ ಮಾಹಿತಿ ತರಿಸಿಕೊಂಡು ಆಂತರಿಕ ಸಮೀಕ್ಷೆಗಳ ಜೊತೆ ತಾಳೆ ಹಾಕ್ತಿದೆ. ಮುಂದಿನ ಚುನಾವಣೆಗೆ ಟಿಕೆಟ್ ನೀಡುವಾಗ ಕೇವಲ ಕಾರ್ಯವೈಖರಿಯನ್ನಷ್ಟೇ ನೋಡದೇ ಅವರ ವ್ಯಕ್ತಿತ್ವ, ಸೋಷಿಯಲ್ ಮೀಡಿಯಾದಲ್ಲಿ (Social Media) ಅವರಿಗಿರುವ ಫಾಲೋಯಿಂಗ್ ಸೇರಿ ಹಲವು ವಿಚಾರಗಳನ್ನ ಬಿಜೆಪಿ ಹೈಕಮಾಂಡ್ ಪರಿಶೀಲಿಸುತ್ತಿದೆ.

    ಕಳೆದ ಬಾರಿ ಸೋತಿದ್ದ 166 ಕ್ಷೇತ್ರಗಳಲ್ಲಿ ಪಕ್ಷದ ಬಲವರ್ಧನೆಗೆ ವಿಶೇಷ ತಂತ್ರ ರೂಪಿಸಿತ್ತು. ಈ ಬಾರಿ ದಕ್ಷಿಣ ಭಾರತದಲ್ಲಿ ಅದ್ರಲ್ಲೂ ಕರ್ನಾಟಕ, ತಮಿಳುನಾಡು (Tamilnadu) ಮತ್ತು ತೆಲಂಗಾಣದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಇಲ್ಲಿ ಹೆಚ್ಚು ಸ್ಥಾನ ಗಳಿಸಲು ಮೋದಿಯನ್ನು ಫೀಲ್ಡಿಗೆ ಇಳಿಸುವ ಬಗ್ಗೆ ಚಿಂತನೆ ನಡೆಸಿದೆ. ವಾರಣಾಸಿ ಮಾತ್ರವಲ್ಲದೇ ತಮಿಳುನಾಡಿನ ಕನ್ಯಾಕುಮಾರಿ ಅಥವಾ ಕೋಯಮತ್ತೂರು ಲೋಕಸಭಾ ಕ್ಷೇತ್ರದಿಂದ ಮೋದಿ ಸ್ಪರ್ಧೆ ಮಾಡುವ ಸಂಭವ ಇದೆ. ಇದನ್ನೂ ಓದಿ: ಫಾರಿನ್‍ನಿಂದ ಬಂದ ಹೆಚ್‍ಡಿಕೆಯಿಂದ ಮಿಡ್‍ನೈಟ್ ಬಾಂಬ್?: ಮೆಸ್‍ನಲ್ಲಿ ನಡೆದ ಸಭೆಯಲ್ಲಿ YST!

    ಕಾಂಗ್ರೆಸ್‌ನಿಂದಲೂ ಭರ್ಜರಿ ತಯಾರಿ:
    ಇನ್ನೂ 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಹ ಈಗಿನಿಂದಲೇ ಭರದ ಸಿದ್ಧತೆ ನಡೆಸ್ತಿದೆ. ಇದರ ಭಾಗವಾಗಿ ನಾಳೆ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಹೈಕಮಾಂಡ್ ಸಭೆ ನಡೆಸಲಿದೆ. ಈಗಾಗಲೇ ಡಿಸಿಎಂ ಡಿ.ಕೆ ಶಿವಕುಮಾರ್, ಬಿ.ಕೆ ಹರಿಪ್ರಸಾದ್, ಬಿ.ಆರ್ ಪಾಟೀಲ್, ಸಚಿವ ಚಲುವರಾಯಸ್ವಾಮಿ ಸೇರಿ ಹಲವರು ದೆಹಲಿಗೆ ಹೋಗಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಧಿಸಿದ್ದ ಶಿಕ್ಷೆಗೆ ತಡೆಯಾಜ್ಞೆ – ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದ ಸಿಎಂ

    ಶನಿವಾರ ಹೈವೋಲ್ಟೇಜ್ ಮೀಟಿಂಗ್:
    ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ (ಆ.5) ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎರಡು ಹಂತದಲ್ಲಿ ಸಭೆ ನಡೆಯಲಿದೆ. ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನ ಗೆಲ್ಲುವುದು ಕಾಂಗ್ರೆಸ್ ಗುರಿಯಾಗಿದ್ದು, ಇದಕ್ಕೆ ಸಂಬಂಧಿಸಿ ನಾಳೆಯ ಸಭೆಯಲ್ಲಿ ಕಾರ್ಯತಂತ್ರಗಳು ರೂಪುಗೊಳ್ಳಲಿವೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಲ್ಲಿ ಯಾವ ತಂತ್ರ ಅನುಸರಿಸಬೇಕು? ವಿಪಕ್ಷಗಳು ಮೈತ್ರಿ ಮಾಡಿಕೊಳ್ಳದೇ ಕಣಕ್ಕೆ ಇಳಿದಲ್ಲಿ ಏನು ಮಾಡಬೇಕು? ಎಂಬ ಬಗ್ಗೆ ಚರ್ಚೆಗಳು ನಡೆಯಲಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಸಭೆ ಚುನಾವಣೆ, ಪಕ್ಷ ಸಂಘಟನೆಗಾಗಿ ನಾಳೆ ದೆಹಲಿಯಲ್ಲಿ ಸಭೆ- ಜಿ. ಪರಮೇಶ್ವರ್‌

    ಲೋಕಸಭೆ ಚುನಾವಣೆ, ಪಕ್ಷ ಸಂಘಟನೆಗಾಗಿ ನಾಳೆ ದೆಹಲಿಯಲ್ಲಿ ಸಭೆ- ಜಿ. ಪರಮೇಶ್ವರ್‌

    ಬೆಂಗಳೂರು: ಲೋಕಸಭೆ ಚುನಾವಣೆ ಮತ್ತು ಪಕ್ಷ ಸಂಘಟನೆಯ ವಿಚಾರವಾಗಿ ಸಲಹೆ ಕೊಡಲು ಆಗಸ್ಟ್‌ 2ರಂದು ದೆಹಲಿಯಲ್ಲಿ ವರಿಷ್ಠರ ಸಭೆ ಇದೆ ಅಂತ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

    ದೆಹಲಿ ಸಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಸಭೆಯ ಅಜೆಂಡಾ ಏನು ಅಂತ ನನಗೆ ಗೊತ್ತಿಲ್ಲ. ಸಹಜವಾಗಿ ಇಂತಹ ಸಭೆಗಳನ್ನ ಹಿಂದೆಯೂ ಮಾಡಿದ್ದಾರೆ. ಹಿಂದೆ ಎಸ್‌.ಎಂ ಕೃಷ್ಣ ಅವರು ಸಿಎಂ ಇದ್ದಾಗ ನಾನು ಅವತ್ತು ಸಚಿವ ಆಗಿದ್ದಾಗಲೂ ಇಂತಹ ಸಭೆ ಮಾಡಿ ಜನಪರ ಆಡಳಿತ ಕೊಡೋಕೆ ಸೂಚನೆ ಕೊಡುತ್ತಿದ್ದರು. ಅದೇ ರೀತಿ ಈ ಸಭೆಗೆ ಹಿಂದೆ ನಾವು ರಿಪೋರ್ಟ್ ‌ಕೂಡಾ ಕೊಡ್ತಿದ್ದೇವು. ಲೋಕಸಭೆ, ಪಕ್ಷ ಸಂಘಟನೆ ವಿಚಾರ ಇರಬಹುದು ಅಂತಾ ತಿಳಿಸಿದರು. ಇದನ್ನೂ ಓದಿ: ಹರಿಯಾಣದಲ್ಲಿ ನಿಲ್ಲದ ಕೋಮು ಘರ್ಷಣೆ – ನಾಲ್ವರು ಸಾವು; 30 ಕ್ಕೂ ಹೆಚ್ಚು ಮಂದಿಗೆ ಗಾಯ

    ಸಚಿವರ ಮೌಲ್ಯಮಾಪನ ಏನು ಮಾಡೊಲ್ಲ. ಸರ್ಕಾರದಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು ಅಂತ ಸಲಹೆ ಕೊಡಬಹುದು. ಕೆಪಿಸಿಸಿ ಪುನರ್ ರಚನೆ ಬಗ್ಗೆಯೂ ನನಗೆ ಗೊತ್ತಿಲ್ಲ. ಸಮನ್ವಯ ಸಮಿತ ರಚನೆ ಬಗ್ಗೆಯೂ ಗೊತ್ತಿಲ್ಲ. ನನಗೇನು ಗೊತ್ತಿಲ್ಲ. ನಾಳೆ ಸಭೆಯ ಬಳಿಕವೇ ಎಲ್ಲವೂ ಗೊತ್ತಾಗಲಿದೆ ಅಂತ ತಿಳಿಸಿದರು. ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ – SITಗೆ ವಹಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸ್ಪಷ್ಟನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಪಕ್ಷಗಳ ಒಗ್ಗಟ್ಟು ಮೋದಿಯನ್ನು ಮಣಿಸಬಹುದೇ?

    ವಿಪಕ್ಷಗಳ ಒಗ್ಗಟ್ಟು ಮೋದಿಯನ್ನು ಮಣಿಸಬಹುದೇ?

    ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ (NDA) ಒಕ್ಕೂಟವನ್ನು ಮಣಿಸಲು ವಿರೋಧ ಪಕ್ಷಗಳ ನಾಯಕರು ಒಟ್ಟಾಗಿ ಇಂಡಿಯಾ (INDIA) ಹೆಸರಿನ ಹೊಸ ಬಣವೊಂದನ್ನು ಸ್ಥಾಪಿಸಿದ್ದಾರೆ. ಈ ಹೊಸ ಒಕ್ಕೂಟದ ಮೂಲಕ ಎಲ್ಲಾ ನಾಯಕರು ಒಂದಾದರೂ ಮೋದಿ ಮಣಿಸುವುದು ಕಷ್ಟ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

    ಇಂತಹದೊಂದು ವಿಶ್ಲೇಷಣೆಗೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಮತ ಪ್ರಮಾಣದ ಗಳಿಕೆಯ ಗುರಿ. ವಿಪಕ್ಷ ನಾಯಕರು ಇಂಡಿಯಾ ಹೊಸ ಒಕ್ಕೂಟವನ್ನು ಸ್ಥಾಪಿಸಿದ ದಿನದಂದೇ ಪ್ರಧಾನಿ ನರೇಂದ್ರ ಮೋದಿ 2024ರ ಚುನಾವಣೆಯಲ್ಲಿ 50% ಅಧಿಕ ಮತ ಪ್ರಮಾಣ ಪಡೆಯುವ ಗುರಿಯನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ‘ಜೀತೇಗ ಭಾರತ್’ INDIA ಒಕ್ಕೂಟಕ್ಕೆ ಹೊಸ ಟ್ಯಾಗ್‌ಲೈನ್

    ವಿರೋಧ ಪಕ್ಷಗಳು ಮೈತ್ರಿ (Alliance Meeting) ಮೂಲಕ ಚುನಾವಣೆಯಲ್ಲಿ ಸಾಮಾನ್ಯ ಅಭ್ಯರ್ಥಿಯನ್ನು ಹಾಕುವ ನಿರ್ಧಾರ ಮಾಡುತ್ತಿವೆ. ಆದರೆ ಇದಕ್ಕೂ ಮೊದಲು ಇಂಡಿಯಾ ಒಕ್ಕೂಟಕ್ಕೆ ಒಂದು ಪ್ರಬಲ ನಾಯಕತ್ವದ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಗೆ ಸಮಾನಾಗಿ ನಿಲ್ಲಬಲ್ಲ ನಾಯಕತ್ವದ ಟ್ರಂಪ್ ಕಾರ್ಡ್ ಬೇಕಿದೆ. ಸದ್ಯ ಮೋದಿ ವಿರುದ್ಧ ಯಾವುದೇ ನಾಯಕತ್ವದ ಮುಖವಿಲ್ಲ. ಭ್ರಷ್ಟಾಚಾರದ ಕಳಂಕವಿಲ್ಲದ, ವಂಶಪಾರಂಪರ್ಯವಲ್ಲದ ಮತ್ತು ಪ್ರಬಲ ಹಾಗೂ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ನಾಯಕನ ಅಗತ್ಯ ಇಂಡಿಯಾ ಒಕ್ಕೂಟಕ್ಕಿದೆ. ಮತ ಬ್ಯಾಂಕ್ ಬಲವರ್ಧಿಸುವ ಮುಖದ ಅಗತ್ಯವಿದೆ. ಆ ನಾಯಕತ್ವ ಇನ್ನೂ ಘೋಷಣೆಯಾಗಿಲ್ಲ. ಇದನ್ನೂ ಓದಿ: INDIA ಹೆಸರಿಗೆ ಮೈತ್ರಿಯಲ್ಲೇ ವಿರೋಧ – ಆಕ್ಷೇಪ ವ್ಯಕ್ತಪಡಿಸಿದ ನಿತೀಶ್ ಕುಮಾರ್

    ಹೊಸ ಮೈತ್ರಿಕೂಟವು ಪ್ರಸ್ತುತ ಲೋಕಸಭೆಯಲ್ಲಿ ಸುಮಾರು 140 ಸ್ಥಾನಗಳಲ್ಲಿದೆ. ಎನ್‌ಡಿಎ 330ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುಂದಿದೆ. 2019ರಲ್ಲಿ ಎನ್‌ಡಿಎ 50%ಕ್ಕಿಂತ ಹೆಚ್ಚು ಮತಗಳ ಹಂಚಿಕೆಯೊಂದಿಗೆ 225 ಲೋಕಸಭಾ ಸ್ಥಾನಗಳನ್ನು ಗೆದ್ದಿದೆ ಎಂದು ಪ್ರಧಾನಿ ಮೋದಿ ಮಂಗಳವಾರ ಗಮನ ಸೆಳೆದರು. ಆ ಸ್ಥಾನಗಳನ್ನು ಕಸಿದುಕೊಳ್ಳುವುದು ಪ್ರತಿಪಕ್ಷಗಳಿಗೆ ದೊಡ್ಡ ಪ್ರಶ್ನೆಯಾಗಿದೆ. ಇದಲ್ಲದೇ 2014ರಲ್ಲಿ 38%ರಿಂದ 2019ರ ಚುನಾವಣೆಯಲ್ಲಿ ಎನ್‌ಡಿಎ ಮತ ಹಂಚಿಕೆ 44%ಕ್ಕೆ ಏರಿದೆ. ಇದನ್ನೂ ಓದಿ: ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ರಾಹುಲ್, ಸೋನಿಯಾ ಗಾಂಧಿ ವಿಮಾನ ಭೋಪಾಲ್‌ನಲ್ಲಿ ತುರ್ತು ಭೂಸ್ಪರ್ಶ

    ಬಿಹಾರದಂತಹ ಕೆಲವು ರಾಜ್ಯಗಳಲ್ಲಿ ಪ್ರತಿಪಕ್ಷಗಳ ಒಗ್ಗಟ್ಟು ಯಶಸ್ವಿಯಾಗಿರಬಹುದು ಆದರೆ ಈ ಫಲಿತಾಂಶ ಎನ್‌ಡಿಎ ನೇತೃತ್ವದಲ್ಲಿ ಕಂಡುಬಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡವು. ಅದಾಗಿಯೂ ಫಲಿತಾಂಶದಲ್ಲಿ ದೊಡ್ಡ ಬದಲಾವಣೆಯಾಗಿಲ್ಲ. 2014ರಲ್ಲಿ 73ರಿಂದ 2019ರಲ್ಲಿ 64ಕ್ಕೆ ಇಳಿಯಿತು. ಬಳಿಕ ಉಪ ಚುನಾವಣೆಯಲ್ಲಿ ಮತ್ತೆರಡು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು. ಇದನ್ನೂ ಓದಿ: ದೆಹಲಿಯಲ್ಲಿ ಎನ್‍ಡಿಎ ಮೆಗಾ ಮೀಟಿಂಗ್ – ಮೋದಿ ನಾಯಕತ್ವಕ್ಕೆ ನಮೋ ಎಂದ 38 ಪಕ್ಷಗಳು

    ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ ಮತ್ತು ಪಂಜಾಬ್‌ನಂತಹ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ (Congress) ಪಕ್ಷಕ್ಕೆ ಮತ್ತೆ ಜಾಗ ನೀಡಲು ಬಯಸುವುದಿಲ್ಲ. ಹೀಗಾಗಿ ಪ್ರಧಾನಿ ಮೋದಿ ಇಂಡಿಯಾ ಒಕ್ಕೂಟಕ್ಕೆ ದೊಡ್ಡ ಸವಾಲಾಗಿ ಉಳಿದಿದ್ದಾರೆ. ಇದನ್ನೂ ಓದಿ: ISI ನಂಟಿನ ಶಂಕೆ – ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್ ತೀವ್ರ ವಿಚಾರಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]