Tag: ಲೋಕಸಭೆ ಚುನಾವಣೆ

  • ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ – ಮೋದಿ, ನಡ್ಡಾ ನೇತೃತ್ವದಲ್ಲಿ 2 ದಿನ ಹೈವೋಲ್ಟೇಜ್ ಸಭೆ

    ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ – ಮೋದಿ, ನಡ್ಡಾ ನೇತೃತ್ವದಲ್ಲಿ 2 ದಿನ ಹೈವೋಲ್ಟೇಜ್ ಸಭೆ

    ನವದೆಹಲಿ: ಲೋಕಸಭೆ ಚುನಾವಣೆ (Lok Sabha Polls) ತಯಾರಿ ಭಾಗವಾಗಿ ಇಂದಿನಿಂದ ಎರಡು ದಿನಗಳ ಕಾಲ ದೆಹಲಿಯಲ್ಲಿ ಬಿಜೆಪಿ ತನ್ನ ರಾಷ್ಟ್ರೀಯ ಮಂಡಳಿ ಹೈವೋಲ್ಟೇಜ್ ಸಭೆ ನಡೆಸಲಿದೆ.

    ದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ಸಭೆಯಲ್ಲಿ ದೇಶದ್ಯಾಂತ 11,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ರಾಮ ಕಾಲ್ಪನಿಕ ಎಂದಿದ್ದ ಕಾಂಗ್ರೆಸ್‌ ಈಗ ಜೈ ಶ್ರೀರಾಮ್‌ ಜಪಿಸ್ತಿದೆ: ಮೋದಿ ವಾಗ್ದಾಳಿ

    2014 ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಆಯೋಜಿಸಲಾದ ಸಭೆಗಳಂತೆಯೇ ರಾಷ್ಟ್ರೀಯ ಮಂಡಳಿಯನ್ನು ಈ ಬಾರಿಯೂ ನಿಗದಿಪಡಿಸಲಾಗಿದೆ. ಸಭೆಯು ಸಮಗ್ರ ಸಾಂಸ್ಥಿಕ ಕಾರ್ಯಸೂಚಿಯನ್ನು ಹೊಂದಿರಲಿದೆ. ಮುಂಬರುವ ಲೋಕಸಭೆ ಚುನಾವಣೆ ತಯಾರಿ, 10 ವರ್ಷಗಳ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಚರ್ಚೆ ನಡೆಯಲಿದೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಲಿದ್ದು, ಮರುದಿನ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಈ ನಡುವೆ ಗೃಹ ಸಚಿವ ಅಮಿತ್ ಶಾ ಒಳಗೊಂಡಂತೆ ಹಲವು ಪ್ರಮುಖ ಸಚಿವರು ಸರ್ಕಾರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ.

    ಇದೇ ವೇಳೆ `ವಿಕಸಿತ್ ಭಾರತ್’ ಅಭಿಯಾನದ ಕುರಿತು ಪ್ರದರ್ಶನ ಇರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಬಿಜೆಪಿ ಹಿರಿಯ ನಾಯಕರು, ಶಾಸಕರು, ಮಾಜಿ ಶಾಸಕರು, ಬಿಜೆಪಿ ಆಡಳಿತದ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಎಲ್ಲ ಹಂತದ ನಾಯಕರಿಗೆ ಆಹ್ವಾನ ನೀಡಲಾಗಿದೆ. ಒಟ್ಟು 530 ರಾಜ್ಯ ನಾಯಕರಿಗೆ ಆಹ್ವಾನ ನೀಡಿದ್ದು, ಕನಿಷ್ಠ 400 ಮಂದಿ ನಾಯಕರು ಭಾಗಿಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್‌ – 108 ಆರೋಪಿಗಳಿಗೆ ಜಾಮೀನು, ದರ್ಗಾದಲ್ಲಿ ಸಂಭ್ರಮಾಚರಣೆ

  • ಮೋದಿ 3ನೇ ಬಾರಿ ಪ್ರಧಾನಿಯಾಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ – ಹೆಚ್‌ಡಿಕೆ

    ಮೋದಿ 3ನೇ ಬಾರಿ ಪ್ರಧಾನಿಯಾಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ – ಹೆಚ್‌ಡಿಕೆ

    ಹಾಸನ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 3ನೇ ಬಾರಿ ಈ ದೇಶದ ಪ್ರಧಾನಿಯಾಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ರಾಜ್ಯ ಬಜೆಟ್ ಅಧಿವೇಶನಕ್ಕೂ (Budget Session) ಮುನ್ನ ಮಾಜಿ ಸಿಎಂ ಹೆಚ್‌ಡಿಕೆ ತವರು ಜಿಲ್ಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಾಸನ ತಾಲೂಕಿನ ಚನ್ನಂಗಿಹಳ್ಳಿ ಗ್ರಾಮದ ಕೆರೆಕೋಡಿಯಮ್ಮ ಹಾಗೂ ಈಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಸುಮಲತಾಗೆ ಟಿಕೆಟ್ ನೀಡಿದ್ರೆ ಮಂಡ್ಯ ಗೆಲುವು ಸುಲಭ – ಅಮಿತ್ ಶಾ ಎದುರು ಬಿಜೆಪಿ ನಾಯಕರ ಬ್ಯಾಟಿಂಗ್

    ನಿಖಿಲ್‌ನ ರಾಜಕೀಯವಾಗಿ ಮುಗಿಸಲು ಪ್ಲ್ಯಾನ್‌: 
    ಮಂಡ್ಯ ಕ್ಷೇತ್ರದ್ದು ಪ್ರತಿ ದಿನ ಒಂದು ಧಾರಾವಾಹಿ ಇರಲೇಬೇಕು. ನಿಖಿಲ್ ಕುಮಾರಸ್ವಾಮಿ ಅವರನ್ನ ರಾಜಕೀಯವಾಗಿ ಮುಗಿಸಲೇಬೇಕು ಎಂದು ಯಾವ ರೀತಿ ರಾಜಕೀಯ ಮಾಡಿದ್ರು. ಪಾಪ ಅವನು ಅಮಾಯಕ, ಒಂದು ತಿಂಗಳಿನಿಂದ ಧಾರಾವಾಹಿ ನಡೆಯುತ್ತಿದೆ. ಈ ಜಿಲ್ಲೆಯಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ಸಣ್ಣಪುಟ್ಟ ಸಮಸ್ಯೆಗಳಿವೆ, ಸರಿಪಡಿಸಿಕೊಳ್ಳುತ್ತೇವೆ. ಒಟ್ಟಿನಲ್ಲಿ ನರೇಂದ್ರ ಮೋದಿ ಅವರು 3ನೇ ಬಾರಿ ಪ್ರಧಾನಿ ಆಗೋದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಬೀಗಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ದೊಡ್ಡ ಗೆಲುವು – ಕತಾರ್‌ನಲ್ಲಿ ಅರೆಸ್ಟ್‌ ಆಗಿದ್ದ ನೌಕಾ ಅಧಿಕಾರಿಗಳು ಬಿಡುಗಡೆ, ಸ್ವದೇಶಕ್ಕೆ ವಾಪಸ್‌

    ಬಜೆಟ್‌ ಅಧಿವೇಶನದಲ್ಲಿ ದಾಖಲೆಯಿಟ್ಟು ಮಾತನಾಡ್ತೀನಿ:
    ಇತ್ತೀಚಿಗೆ ರಾಜಕೀಯ ಸಂಘರ್ಷ ನಡೆಯುತ್ತಿದ್ದು, ಕೇಂದ್ರ-ರಾಜ್ಯ ಸರ್ಕಾರದ ನಡುವೆ ವಾಗ್ದಾಳಿ ನಡೆಯುತ್ತಿದೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಫೆ.16 ಬಜೆಟ್ ಮಂಡನೆಗೆ ಸಮಯ ನಿಗದಿ ಮಾಡಿದ್ದು, ವಿಧಾನಸಭೆ ಕಲಾಪದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಲು ತೀರ್ಮಾನ ಮಾಡಿದ್ದೇನೆ. ಅಂಕಿ-ಅಂಶಗಳನ್ನಿಟ್ಟುಕೊಂಡು ಚರ್ಚೆ ಮಾಡ್ತೀನಿ. ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಹಣ ಕೊಡುವ ವ್ಯವಸ್ಥೆ ಆರಂಭವಾಗಿದ್ದು ಯಾವಾಗ? ಈಗ ದೊಡ್ಡಮಟ್ಟದಲ್ಲಿ ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಈ ರಾಜ್ಯದಲ್ಲಿ ದಾಖಲೆಯ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿಗಳು ನೀವೆ, ಈಗ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗಿದೆ ಎಂದು ಹೇಳಿತ್ತಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    1952 ಸಂವಿಧಾನದಲ್ಲಿ ಸಂಸ್ಥೆಯನ್ನ ಪ್ರಾರಂಭ ಮಾಡಿದ್ರು. ಅಲ್ಲಿಂದ ಚರ್ಚೆ ಮಾಡಲು ಹೋದ್ರೆ ದೊಡ್ಡ ಕಥೆಯಿದೆ. ಎನ್‌ಡಿಆರ್‌ಎಫ್‌ನಿಂದ ಬಿಡಿಗಾಸು ಕೊಟ್ಟಿಲ್ಲ ಅಂತಾರೆ. ಇವರಿಗೆ ರಾಜಕೀಯ ಗೊತ್ತಿಲ್ಲದೆ ಇದೆಯಾ? ವಿಶೇಷ ಅನುದಾನ ಕೆಲವು ಬಾರಿ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕರೆಮ್ಮ ನಾಯಕ್ ಪಿ.ಎಗಳ ಮೇಲೆ ಜಾತಿ ನಿಂದನೆ ಕೇಸ್ – ರೊಚ್ಚಿಗೆದ್ದ ಶಾಸಕಿಯಿಂದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

    ಭ್ರಷ್ಟ ಸರ್ಕಾರ ಕಿತ್ತೊಗೆಯಬೇಕು: ಕೆಂಪಣ್ಣ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ಅದಕ್ಕೆ ಸಾಕ್ಷಿ ಕೊಡಲಿ ಎನ್ನುತ್ತಾರೆ. ಇದೇ ಕೆಂಪಣ್ಣನವರ ಹೇಳಿಕೆ ಇಟ್ಟುಕೊಂಡೇ `ಪೇ ಸಿಎಂ’ ಎಂದ ಡಂಗೂರ ಹೊಡೆದರು. ಈಗ ಇವರು ಮಾಡ್ತಿರೋದೇನು? ಇಂತಹ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು. ಹಾಗಾಗಿ ನಮಗೆ ಸೀಟು ಹಂಚಿಕೆ ಮುಖ್ಯವಲ್ಲ. ಮೈತ್ರಿ ಪಕ್ಷಗಳು 28ಕ್ಕೆ 28 ಕ್ಷೇತ್ರವನ್ನೂ ಗೆಲ್ಲಬೇಕು ಅನ್ನೋದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.

  • ಸುಮಲತಾಗೆ ಟಿಕೆಟ್ ನೀಡಿದ್ರೆ ಮಂಡ್ಯ ಗೆಲುವು ಸುಲಭ – ಅಮಿತ್ ಶಾ ಎದುರು ಬಿಜೆಪಿ ನಾಯಕರ ಬ್ಯಾಟಿಂಗ್

    ಸುಮಲತಾಗೆ ಟಿಕೆಟ್ ನೀಡಿದ್ರೆ ಮಂಡ್ಯ ಗೆಲುವು ಸುಲಭ – ಅಮಿತ್ ಶಾ ಎದುರು ಬಿಜೆಪಿ ನಾಯಕರ ಬ್ಯಾಟಿಂಗ್

    – ಮೈತ್ರಿ ಧರ್ಮ ಪಾಲಿಸಿ, ಸಂಘಟನೆಗೆ ಒತ್ತು ನೀಡುವಂತೆ ಶಾ ವಾರ್ನಿಂಗ್

    ಮಂಡ್ಯ: ಈಗಾಗಲೇ 2024ರ ಲೋಕಸಭಾ ಚುನಾವಣೆಗೆ (Lok Sabha Elections) ಸಿದ್ಧತೆ ನಡೆಸಿರುವ ಬಿಜೆಪಿ ಸತತ 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಭರ್ಜರಿ ತಾಲೀಮು ನಡೆಸಿದೆ.

    ಅದರಲ್ಲೂ ಕಾಂಗ್ರೆಸ್ (Congress) ಆಡಳಿತದಲ್ಲಿರುವ ಕರ್ನಾಟಕವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ ಗೆಲುವಿನೊಂದಿಗೆ ಅತಿಹೆಚ್ಚು ಲೀಡ್ ಗಳಿಸುವತ್ತ ನಿಗಾ ವಹಿಸಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮೈಸೂರಿಗೆ ಆಗಮಿಸಿದ್ದ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹೈವೋಲ್ಟೇಜ್ ಸಭೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಹೆಚ್ಚಿನ ಲೀಡ್‌ನೊಂದಿಗೆ ಗೆಲುವು ಸಾಧಿಸುವತ್ತ ಗಮನ ಹರಿಸುವಂತೆ ಪಕ್ಷದ ವರಿಷ್ಠರಿಗೆ ಸೂಚನೆ ನೀಡಿದ್ದಾರೆ.

    ಸುಮಲತಾ ಪರ ಬ್ಯಾಟಿಂಗ್:
    ಭಾನುವಾರ ಅಮಿತ್ ಶಾ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಹೈವೋಲ್ಟೇಜ್ ಕಣವಾಗಿರುವ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ಕೆಲ ಬಿಜೆಪಿ ನಾಯಕರು ಪಟ್ಟು ಹಿಡಿದಿರುವ ಪ್ರಸಂಗವೂ ಕೇಳಿಬಂದಿದೆ. ಹಾಲಿ ಸಂಸದೆ ಸುಮಲತಾ (umalatha Ambareesh) ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂಬ ಸಲಹೆಗಳೂ ಕೇಳಿಬಂದಿವೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ; ರಾಜ್ಯದ ನಾರಾಯಣ ಕೃಷ್ಣನಾಸ ಭಾಂಡಗೆಗೆ ಬಿಜೆಪಿ ಟಿಕೆಟ್‌

    ಸುಮಲತಾ ಅಂಬರೀಶ್ ಅವರಿಗೆ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಇದೆ. ಅವರಿಗೆ ಮೈತ್ರಿ (BJP-JDS Alliance) ಟಿಕೆಟ್ ನೀಡಿದ್ರೆ ಗೆಲುವು ಸುಲಭ. ಹಾಗಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡದಂತೆ ಪಟ್ಟು ಹಿಡಿದಿದ್ದಾರೆ. ಇದೆಲ್ಲವನ್ನು ಸಮಾಧಾನವಾಗಿಯೇ ಕೇಳಿಸಿಕೊಂಡ ಅಮಿತ್ ಶಾ ಅವರು ನೀವು ಕೂತಲ್ಲಿ ನಿಂತಲ್ಲಿ ನಿಮ್ಮ ಅಭಿಪ್ರಾಯ ಹೇಳಬೇಡಿ. ನಿಮ್ಮ ಮಾತಿನಿಂದ ಮೈತ್ರಿ ಧರ್ಮಕ್ಕೆ ಚೂರು ಧಕ್ಕೆಯಾದರೂ ನಾವು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮೈತ್ರಿ ಧರ್ಮ ಪಾಲಿಸಿ: ಬಿಜೆಪಿ ನಾಯಕರಿಗೆ ಅಮಿತ್‌ ಶಾ ಸೂಚನೆ

    ನಿಮ್ಮ ಅಭಿಪ್ರಾಯ ಹೇಳೋದನ್ನು ಬಿಟ್ಟು ಕೊಟ್ಟಿರುವ ಟಾಸ್ಕ್ ಮಾಡಿ, ಇನ್ನೂ 15 ದಿನಗಳಲ್ಲಿ ಅಭ್ಯರ್ಥಿ ಘೋಷಣೆಯಾಗುತ್ತೆ. ಮೈತ್ರಿ ಸಂಘಟನೆಗೆ ಒತ್ತು ನೀಡಿ ಎಂದು ಮಂಡ್ಯದ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಪತ್ತೆಯಾದ ವಿಷ್ಣು ವಿಗ್ರಹ ಪ್ರಾಚ್ಯ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರ

  • ರಾಹುಲ್ ಗಾಂಧಿ ಬಾಯಿ ಬಿಟ್ಟರೆ ಬರೀ ಸುಳ್ಳು – ಸಚಿವ ಪ್ರಹ್ಲಾದ್‌ ಜೋಶಿ ಕಿಡಿ

    ರಾಹುಲ್ ಗಾಂಧಿ ಬಾಯಿ ಬಿಟ್ಟರೆ ಬರೀ ಸುಳ್ಳು – ಸಚಿವ ಪ್ರಹ್ಲಾದ್‌ ಜೋಶಿ ಕಿಡಿ

    ­- 1999ರಲ್ಲೇ ಮೋದಿ ಜೀಗೆ OBC ಸ್ಥಾನಮಾನ ನೀಡಲಾಗಿದೆ

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ನಾಚಿಕೆಯೇ ಆಗುವುದಿಲ್ಲವೇ? ಬರೀ ಸುಳ್ಳು ಸುಳ್ಳು ಸುದ್ದಿಗಳನ್ನು ಹರಿ ಬಿಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು OBC ಜಾತಿಯಲ್ಲಿ ಹುಟ್ಟಿಲ್ಲ ಮತ್ತು ಅವರು ಗುಜರಾತ್‌ ಸಿಎಂ ಆದ ಮೇಲೆ OBC ಜಾತಿಯನ್ನು ಸೂಚಿಸಿದ್ದಾರೆ ಎಂದಿರುವ ರಾಹುಲ್ ಗಾಂಧಿ ಆರೋಪಕ್ಕೆ ಸಚಿವ ಜೋಶಿ ಅವರು ತಿರುಗೇಟು ನೀಡಿದ್ದು, ತಮ್ಮ X ಖಾತೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿಗೆ ಮಸಿ ಬಳಿದ ಕಾಂಗ್ರೆಸ್ ಕಾರ್ಯಕರ್ತರು

    ಕಾಂಗ್ರೆಸ್‌ನ (Congress) ಸುಳ್ಳಿನ ಬುತ್ತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ಸಮಯ ಬಂದಿದೆ. ವಾಸ್ತವ ಬೇರೆಯೇ ಇರುವಾಗ ಕಾಂಗ್ರೆಸ್ ಬರೀ ಸುಳ್ಳುಗಳನ್ನೇ ಹೆಣೆದು ಜನರ ಕಿವಿಗೆ ಹೂವಿನ ಗೊಂಚಲೇ ಇಡುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮಂಗಳ ಗ್ರಹಕ್ಕೆ ಸೋಲಾರ್‌ ಚಾಲಿತ ವಿಮಾನ ಕಳಿಸಲು ನಾಸಾ ಚಿಂತನೆ – ಏನಿದರ ವಿಶೇಷ?

    ಇಲ್ಲಿದೆ ಸತ್ಯ:
    ಮೋದಿಯವರು ಗುಜರಾತ್ (Gujarat) ಮುಖ್ಯಮಂತ್ರಿಯಾಗುವ ಎರಡು ವರ್ಷಗಳ ಮೊದಲು 1999ರ ಅಕ್ಟೋಬರ್ 27ರಂದು ಅವರ OBC ಸ್ಥಾನಮಾನವನ್ನು ಗುರುತಿಸಲಾಗಿದೆ ಎಂದು ಜೋಶಿ ದಾಖಲೆ ಸಮೇತ ಸ್ಪಷ್ಟಪಡಿಸಿದ್ದಾರೆ.

    ಪ್ರಧಾನಿ ಮೋದಿ ಅವರನ್ನು OBC ಅಲ್ಲ ಎನ್ನುವ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ಇಡೀ OBC ಸಮುದಾಯವನ್ನೇ ಅವಮಾನಿಸಿದೆ. ಒಬಿಸಿ ವರ್ಗದವರೆಲ್ಲ ಲೋಕಸಭೆ ಚುನಾವಣೆಯಲ್ಲಿ ಪ್ರತಿಧ್ವನಿಸುವ ಮೂಲಕ ರಾಹುಲ್ ಗಾಂಧಿ ಆರೋಪಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೋಶಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಸಮಯ ಸಿಕ್ಕಾಗ ವಿದ್ಯಾರ್ಥಿ ಮನೆಗೇ ಹೋಗಿ ಸೆಕ್ಸ್‌ ಮಾಡ್ತಿದ್ದೆ – ತಪ್ಪೊಪ್ಪಿಕೊಂಡ ಶಿಕ್ಷಕಿಗೆ 50 ವರ್ಷ ಜೈಲು

    ರಾಹುಲ್‌ ಗಾಂಧಿ ಹೇಳಿದ್ದೇನು?
    ಒಡಿಶಾದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ಮಾತನಾಡಿದ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಮೂಲತಃ ಹಿಂದುಳಿದ ವರ್ಗದಲ್ಲಿ ಜನಿಸಿಲ್ಲ, ಆದ್ರೆ ತಮ್ಮನ್ನು ಒಬಿಸಿ ಎಂದು ಹೇಳಿಕೊಳ್ಳುವ ಮೂಲಕ ಇತರೇ ವರ್ಗದ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಮೋದಿ ಜೀ ಅವರು `ತೇಲಿ’ ಜಾತಿಯ ಕುಟುಂಬದಲ್ಲಿ ಜನಿಸಿದ್ದಾರೆ. 2000ನೇ ಇಸವಿಯಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದರು. ಆದ್ದರಿಂದ ಮೋದಿ ಜಿ ಹುಟ್ಟಿನಿಂದ ಒಬಿಸಿ ಅಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರತಿಪಾದಿಸಿದ್ದರು.

  • ಲೋಕಸಭೆ ಚುನಾವಣೆಯಲ್ಲಿ ಮತ ನೀಡದಿದ್ರೆ ಗ್ಯಾರಂಟಿ ಯೋಜನೆ ರದ್ದು: ಚರ್ಚೆಗೆ ಗ್ರಾಸವಾಯ್ತು ಬಾಲಕೃಷ್ಣ ಹೇಳಿಕೆ

    ಲೋಕಸಭೆ ಚುನಾವಣೆಯಲ್ಲಿ ಮತ ನೀಡದಿದ್ರೆ ಗ್ಯಾರಂಟಿ ಯೋಜನೆ ರದ್ದು: ಚರ್ಚೆಗೆ ಗ್ರಾಸವಾಯ್ತು ಬಾಲಕೃಷ್ಣ ಹೇಳಿಕೆ

    ರಾಮನಗರ : ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Loksabha Election) ಮತ ನೀಡದಿದ್ದರೆ ಗ್ಯಾರಂಟಿ ಯೋಜನೆ ರದ್ದು ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (HC Balakrishna) ಹೇಳಿದ್ದಾರೆ.

    ಸದ್ಯ ಶಾಸಕರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮತದಾರರಿಗೆ ಮತ್ತೆ ಬ್ಲ್ಯಾಕ್ ಮೇಲ್ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಮಾಗಡಿ ತಾಲೂಕಿನ ಶ್ರೀಗಿರಿಪುರದ ಜನಸಂಪರ್ಕ ಸಭೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ ಸುರೇಶ್ ಪರ ಮತ ನೀಡುವಂತೆ ಶಾಸಕರು ತಾಕೀತು ಮಾಡಿದ್ದಾರೆ.

    ಶಾಸಕರು ಹೇಳಿದ್ದೇನು..?: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ರದ್ದು ಮಾಡಲಾಗುವುದು. ಬಿಜೆಪಿಯವರು ಅಕ್ಷತೆ ಕಾಳು ನೀಡಿ ಮತ ಕೇಳುತ್ತಿದ್ದಾರೆ. ನಾವು ಐದು ಗ್ಯಾರಂಟಿಗಳನ್ನ ನೀಡಿ ಮತ ಕೇಳುತ್ತಿದ್ದೇವೆ. ಕಾಂಗ್ರೆಸ್ (Congress) ಹೆಚ್ಚು ಸ್ಥಾನ ಗೆಲ್ಲದಿದ್ರೆ ಜನರಿಗೆ ಐದು ಗ್ಯಾರಂಟಿಗಳು ಇಷ್ಟ ಇಲ್ಲ ಅಂತ ಅರ್ಥ. ಹಾಗಾಗಿ ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಜೊತೆಯೂ ಚರ್ಚೆ ಮಾಡಿದ್ದೇನೆ ಎಂದರು.

    ನಿಮ್ಮ ಮತ ಅಕ್ಷತೆ ಕಾಳಿಗಾ ಅಥವಾ ಐದು ಗ್ಯಾರಂಟಿಗಾ (Congress Guarantee) ಯೋಚನೆ ಮಾಡಿ. ಈ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿದ್ರೆ ಗ್ಯಾರಂಟಿ ಯೋಜನೆ ಮುಂದುವರಿಸುತ್ತೇವೆ. ಒಂದು ವೇಳೆ ಗೆಲ್ಲಿಸದೇ ಇದ್ದರೆ ಗ್ಯಾರಂಟಿ ಯೋಜನೆ ತಿರಸ್ಕಾರ ಮಾಡಿದ್ದೀರಿ ಅಂತ ಅಲ್ವಾ ಎಂದು ಬಾಲಕೃಷ್ಣ ಪ್ರಶ್ನಿಸುವ ಮೂಲಕ ಮತದಾರರಿಗೆ ಮತ ನೀಡುವಂತೆ ಒತ್ತಾಯಿಸಿದ್ದಾರೆ.

  • ಕಾಂಗ್ರೆಸ್‌ ಮುಖಂಡರ ಸಭೆಯಲ್ಲಿ ಸಿಎಂ, ಡಿಸಿಎಂ ಮಧ್ಯೆ ಭಿನ್ನಾಭಿಪ್ರಾಯ ಸ್ಫೋಟ!

    ಕಾಂಗ್ರೆಸ್‌ ಮುಖಂಡರ ಸಭೆಯಲ್ಲಿ ಸಿಎಂ, ಡಿಸಿಎಂ ಮಧ್ಯೆ ಭಿನ್ನಾಭಿಪ್ರಾಯ ಸ್ಫೋಟ!

    ಬೆಂಗಳೂರು: ಲೋಕಸಭೆ ಚುನಾವಣೆಗೆ (Lok Saba Election) ಕಾಂಗ್ರೆಸ್ (Congress) ಭರ್ಜರಿ ಸಿದ್ಧತೆ ನಡೆಸುತ್ತಿದ್ದು ಬುಧವಾರ ಬೆಂಗಳೂರಿನ ಕ್ವಿನ್ಸ್ ರಸ್ತೆಯ ಇಂದಿರಾ ಗಾಂಧಿ ಭವನದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಸಿಎಂ-ಡಿಸಿಎಂ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. ನಿಗಮ ಮಂಡಳಿ ವಿಚಾರದಲ್ಲಿ ಇಬ್ಬರ ಭಿನ್ನಾಭಿಪ್ರಾಯ ಸ್ಫೋಟಗೊಂಡಿರುವ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದುಬಂದಿದೆ.

    ಶೀಘ್ರವಾಗಿ ನಿಗಮ ಮಂಡಳಿ ನೇಮಕ ನಡೆಯುತ್ತದೆ. ಶಾಸಕರಿಗೆ ಅವಕಾಶ ಸಿಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್‌(DK Shivakumar) ಶಾಸಕರು ಹಾಗೂ ಕಾರ್ಯಕರ್ತರು ಇಬ್ಬರಿಗೂ ಅವಕಾಶ ಸಿಗಲಿದೆ ಎಂದಿದ್ದಾರೆ. ಆಗ ಸಭೆಯಲ್ಲಿ ಇದ್ದ ಕಾರ್ಯಕರ್ತರು ಹೋ.. ಎಂದು ಕೂಗಿ ಮೌನವಾಗಿ ಕುಳಿತ ಪ್ರಸಂಗ ನಡೆದಿದೆ. ಇದನ್ನೂ ಓದಿ: ಇನ್ಮುಂದೆ ದೇಗುಲಗಳಲ್ಲಿ ಡ್ರೆಸ್ ಕೋಡ್ ಕಡ್ಡಾಯ- ನಿಯಮ ಮೀರಿದ್ರೆ ಸಿಗಲ್ಲ ಮಂಗಳಾರತಿ, ಪ್ರಸಾದ!

    ಡಿಕೆಶಿ ಹೇಳಿಕೆ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಇನ್ನೊಂದು ರೀತಿಯಲ್ಲಿಸಮಜಾಯಿಷಿ ಕೊಡಲು ಮುಂದಾಗಿದ್ದಾರೆ. ಆಗ ಮತ್ತೆ ಮಾತನಾಡಿದ ಡಿಸಿಎಂ ಡಿಕೆಶಿ ನಿಗಮ ಮಂಡಳಿಯಲ್ಲಿ ಶಾಸಕರು ಹಾಗೂ ಕಾರ್ಯಕರ್ತರಿಗೆ ಸಮಾನ ಅವಕಾಶ ಸಿಗಲಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ.

    ಡಿಕೆಶಿ ಹೇಳಿದ ಬೆನ್ನಲ್ಲೇ ಕಾರ್ಯಕ್ರಮದಲ್ಲಿದ್ದ ಕಾರ್ಯಕರ್ತರಲ್ಲಿ ಕೆಲವರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಇರುಸುಮುರುಸಿಗೆ ಒಳಗಾದ ಸಿಎಂ ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿ ಜಾರಿಕೊಂಡರು ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಜೈಲಿಂದ ಹೊರ ಬಂದ ತಕ್ಷಣ ಕ್ಷಮೆ ಕೇಳಿದ ಕರವೇ ನಾರಾಯಣಗೌಡ

     

    ಈ ಸಭೆಯಲ್ಲಿ ಮಾತನಾಡಿದ ಡಿಕೆಶಿ, ಇದೊಂದು ಮಹತ್ವಪೂರ್ಣ ಸಭೆಯಾಗಿದೆ. ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಹಿರಿಯ ನಾಯಕರು ಲೋಕಾಸಭಾ ಚುನಾವಣೆಯ ಸಂಬಂಧ ತೆಗೆದುಕೊಳ್ಳಬೇಕಾದ ಕೆಲವು ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದೆಹಲಿಯಲ್ಲಿ ಈ ಕುರಿತು ಸಭೆ ನಡೆಯಲಿದ್ದು, ರಾಜ್ಯದ 28 ಕ್ಷೇತ್ರಗಳಿಗೆ ಸಂಯೋಜಕರಾಗಿ ನೇಮಕಗೊಂಡಿರುವ ಸಚಿವರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ನಮ್ಮ ಅಜೆಂಡಾವಾಗಿದ್ದು, ಇದಕ್ಕಾಗಿ ಎಲ್ಲರೂ ಸೇರಿ ಕೆಲಸಮಾಡೋಣ ಎಂದು ತಿಳಿಸಿದ್ದಾರೆ.

     

  • ಲೋಕಸಭೆ ಚುನಾವಣೆಗೆ ಸಚಿವರ ಸ್ಪರ್ಧೆ ಬಗ್ಗೆ ಸೂಚನೆ ಇನ್ನೂ ಬಂದಿಲ್ಲ: ಪರಮೇಶ್ವರ್

    ಲೋಕಸಭೆ ಚುನಾವಣೆಗೆ ಸಚಿವರ ಸ್ಪರ್ಧೆ ಬಗ್ಗೆ ಸೂಚನೆ ಇನ್ನೂ ಬಂದಿಲ್ಲ: ಪರಮೇಶ್ವರ್

    ಬೆಂಗಳೂರು: ಲೋಕಸಭೆ ಚುನಾವಣೆಗೆ (Lok Sabha Election) ಸಚಿವರ ಸ್ಪರ್ಧೆ ಬಗ್ಗೆ ಸೂಚನೆ ಇನ್ನೂ ಬಂದಿಲ್ಲ. ಲೋಕಸಭಾ ಚುನಾವಣೆಗೆ ಪಕ್ಷದಲ್ಲಿ ಸಿದ್ಧತೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಅವರು ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.

    ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣಾ ದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪ್ರಮುಖ ನಾಯಕರ ಜೊತೆ ಸುರ್ಜೇವಾಲ ಅವರು ಚರ್ಚೆ ನಡೆಸುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು. ರಾಜ್ಯದ ಎಲ್ಲಾ ನಾಯಕರ ಮೇಲೆ ಜವಾಬ್ದಾರಿ ಹೆಚ್ಚಿದೆ. ಕಳೆದ ಚುನಾವಣೆಗಿಂತ ಈ ಬಾರಿ ನಮ್ಮ ಪಕ್ಷ ಉತ್ತಮ ಸ್ಥಿತಿಯಲ್ಲಿದೆ. ಬಡ ಜನರ ಹಾಗೂ ಮಹಿಳೆಯರ ಆರ್ಥಿಕ ಮಟ್ಟ ಹೆಚ್ಚಿಸುವ ಉದ್ದೇಶದಿಂದ ನಮ್ಮ ಸರ್ಕಾರ ಅನುಷ್ಠಾನಗೊಳಿಸಿದ ಗ್ಯಾರಂಟಿ ಯೋಜನೆಗಳು ಹೆಚ್ಚು ಇಂಪ್ಯಾಕ್ಟ್ ಆಗಲಿದೆ. ಲೋಕಸಭಾ ಚುನಾವಣೆಯಲ್ಲಿ ಸಚಿವರು ಸ್ಪರ್ಧಿಸುವ ಬಗ್ಗೆ ಈವರೆಗೂ ಚರ್ಚೆಯಾಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ನನ್ನ ಹೆಸರು ಕೇಳಿಬಂದಿತ್ತು. ಈ ಸಲ ಕೋಲಾರ ಕ್ಷೇತ್ರಕ್ಕೆ ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುವ ಪ್ರಶ್ನೆ ಉದ್ಭವಿಸುವುದಿಲ್ಲ. ಸಚಿವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಕೆಪಿಸಿಸಿ ಅಧ್ಯಕ್ಷರು ಹೇಳಿದರೆ ಅಧಿಕೃತ ಎಂದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ: ಹಿ. ಪ್ರದೇಶದ ಕೈ ಸಚಿವ

    ಹೆಚ್.ಡಿ.ಕುಮಾರಸ್ವಾಮಿ ಅವರು ದೊಡ್ಡವರು. ಅವರು ಸರ್ಕಾರದ ಅಭಿವೃದ್ಧಿ, ಜವಾಬ್ದಾರಿ ಕುರಿತು ಹೇಳಿಕೆ ನೀಡಿದರೆ ಪ್ರತಿಕ್ರಿಯಿಸಬಹುದು. ಅವರು ಬಳಸುವ ಅನಗತ್ಯ ಪದಗಳ ಬಗ್ಗೆ ಹೇಗೆ ಪ್ರ‍್ರತಿಕ್ರಿಯಿಸಬೇಕು. ನಾನು ಅವರೊಂದಿಗೆ 14 ತಿಂಗಳು ಕೆಲಸ ಮಾಡಿದ್ದೇನೆ. ಈ ರೀತಿ ಏಕೆ ಮಾತನಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಅವರ ರೀತಿ ನನಗೆ ಮಾತನಾಡಲು ಬರುವುದಿಲ್ಲ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದರಿಂದ ಸರ್ಕಾರಕ್ಕೆ ಕಷ್ಟವಾಗಿಲ್ಲ. ಅನುದಾನ ಹೊಂದಿಕೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1.50 ಲಕ್ಷ ಕೋಟಿ ರೂ. ಬರಬೇಕು. ಈವರೆಗೂ ಬಂದಿಲ್ಲ. ಕೇಂದ್ರದಿಂದ ಅನುದಾನ ಬಂದಿದ್ದರೆ ಮತ್ತಷ್ಟು ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂದು ಹೇಳಿದರು. ಇದನ್ನೂ ಓದಿ: ದೇಶಕ್ಕೆ ಕ್ಯಾ. ಅಬ್ದುಲ್ ಹಮೀದ್ ಅವರಂಥವರು ಬೇಕು, ಜಿನ್ನಾ ಅಲ್ಲ: ನಿತ್ಯಾನಂದ್ ರೈ

    ನಾರಾಯಣಗೌಡ ಅವರು ಬಿಡುಗಡೆ ನಂತರ ಮತ್ತೆ ಪ್ರತಿಭಟನೆ ನಡೆಸುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ನಡೆಸುವುದು ಹಕ್ಕು. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು, ಸಾರ್ವಜನಿಕ ಆಸ್ತಿ ಹಾನಿ ಮಾಡುವುದು ತಪ್ಪು. ಕಾನೂನು ಕೈಗೆತ್ತಿಗೊಳ್ಳದೆ ಶಾಂತಿಯುವಾಗಿ ಪ್ರತಿಭಟನೆ ನಡೆಸಲಿ ಎಂದು ಹೇಳಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಮಹತ್ವದ ಸಭೆ- ಕಾಂಗ್ರೆಸ್ ವೈಫಲ್ಯಗಳೇ ಕಮಲಕ್ಕೆ ಅಸ್ತ್ರ

    ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಾನು ಸಹ ದೇಣಿಗೆ ಕೊಟ್ಟಿದ್ದೇನೆ. ಇದು ನನ್ನ ವೈಯಕ್ತಿಕ ವಿಚಾರ. ಎಷ್ಟು ದೇಣಿಗೆ ನೀಡಿದ್ದೇನೆ ಎಂದು ಹೇಳಿಕೊಳ್ಳಬಾರದು. ಅಯೋದ್ಯೆ ಪೂಜೆಯಲ್ಲಿ ಭಾಗಿಯಾಗುವ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ಪ್ರತ್ಯೇಕ ದಿನ ಹೋಗಿ ಪೂಜೆ ಸಲ್ಲಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಿದರೆ ಅದಕ್ಕು ಸಿದ್ಧ. ವಿಶೇಷ ಪೂಜೆ ಸಲ್ಲಿಸುತ್ತೇವೆ. ನಾವು ಹಿಂದುಗಳಲ್ವಾ? ನಮ್ಮ ಪಕ್ಷದಲ್ಲಿಯೂ ಹಿಂದುಗಳಿಲ್ಲವೇ? ಅದರಲ್ಲೇನು ತಪ್ಪಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ: ಡಾ.ಎಂ.ಸಿ ಸುಧಾಕರ್

  • ನನ್ನ ಮಗನಿಗೆ ಟಿಕೆಟ್ ಪಡೆಯೋಕೆ ಪ್ರಯತ್ನಿಸುತ್ತಿದ್ದೇನೆ – ಈಶ್ವರಪ್ಪ

    ನನ್ನ ಮಗನಿಗೆ ಟಿಕೆಟ್ ಪಡೆಯೋಕೆ ಪ್ರಯತ್ನಿಸುತ್ತಿದ್ದೇನೆ – ಈಶ್ವರಪ್ಪ

    ಬೆಳಗಾವಿ: ಮುಂದಿನ ಚುನಾವಣೆಗೆ ನನ್ನ ಮಗನಿಗೆ ಟಿಕೆಟ್ ಪಡೆಯೋಕೆ ಪ್ರಯತ್ನಿಸುತ್ತಿದ್ದೇನೆ. ಟಿಕೆಟ್ ಕೊಟ್ಟರೇ ಹಾವೇರಿಯಿಂದ ಸ್ಪರ್ಧಿಸುತ್ತಾನೆ ಎಂದು ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ.

    ಬೆಳಗಾವಿ (Belagavi) ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಮುಂದಿನ ಚುನಾವಣೆಗೆ ನನ್ನ ಮಗ ಕಾಂತೇಶ್‌ಗೆ ಟಿಕೆಟ್ ಪಡೆಯಬೇಕು ಅಂತ ಪ್ರಯತ್ನಿಸುತ್ತಿದ್ದೇನೆ. ಟಿಕೆಟ್ ಕೊಟ್ಟರೆ ಚುನಾವಣೆಗೆ ನಿಲ್ಲಿಸುತ್ತೇನೆ. ಹಾವೇರಿಯಿಂದ ಕಾಂತೇಶ್ ಸ್ಪರ್ಧೆ ಮಾಡ್ತಾನೆ ಎಂದು ಹೇಳಿದ್ದಾರೆ.

    ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ (Siddaramaiah) ಅವರು ಅಹಿಂದ ಅಂತ ಹೋಗುತ್ತಿದ್ದರು. ಆದ್ರೆ ಹಿಂದುಳಿದವರು, ದಲಿತರು ಕೈಬಿಟ್ಟರು, ಇನ್ನು ಉಳಿದಿರೋದು ಅಲ್ಪಸಂಖ್ಯಾತರು (Muslims) ಮಾತ್ರ. ಅವರನ್ನೇ ಬಳಸಿಕೊಂಡು ರಾಜಕೀಯ ಮಾಡಬೇಕು ಅನ್ನೋದು ಸಿದ್ದರಾಮಯ್ಯರ ಲೆಕ್ಕ. ದೇಶದ್ರೋಹಿಗಳಿಗೆ ತೃಪ್ತಿ ಆಗುವ ರೀತಿಯಲ್ಲಿ ಸಿದ್ದರಾಮಯ್ಯ ಮಾತಾಡ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಹೊಸವರ್ಷಾಚರಣೆಗೆ ಕ್ಷಣಗಣನೆ – ಇಂದು ರಾತ್ರಿಯಿಂದಲೇ ಬೆಂಗ್ಳೂರಿನ ಪ್ರಮುಖ ಫ್ಲೈಓವರ್‌ಗಳು ಬಂದ್‌!

    ರಾಮಮಂದಿರ ಆಗಬಾರದು ಅಂತಾ ಕೋರ್ಟಿಗೆ ಹೋದವರು ಮೋದಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪಾಕಿಸ್ತಾನದವರು ಮೋದಿಯಂತಹ ಪ್ರಧಾನಿ ನಮಗೆ ಇರಬೇಕಿತ್ತು ಅಂತಾರೆ. ಆದ್ರೆ ಹಿಂದೂ ಮುಸ್ಲಿಂ ಒಟ್ಟಾಗಬಾರದು ಅನ್ನೋದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ಉದ್ದೇಶ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪತ್ನಿ ಮಾಡ್ರನ್‌ ಡ್ರೆಸ್‌ ಧರಿಸುತ್ತಿದ್ದಕ್ಕೆ ಕೆಂಡವಾದ ಪತಿ – ಕತ್ತು ಕೊಯ್ದು ಬರ್ಬರವಾಗಿ ಹತ್ಯೆ

    ರಾಮಮಂದಿರ ಉದ್ಘಾಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಒಂದೊಂದೇ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ದೇಶದ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೂ ಸಾರ್ಥಕವಾಯಿತು. ಭಾರತೀಯ ಸಂಸ್ಕೃತಿ ಉಳಿಸಬೇಕು ಎಂದು ಸಾವಿರಾರು ಜನ ಬಲಿದಾನ ಮಾಡಿದ್ರು, ಇದೀಗ ಅದೆಲ್ಲವೂ ಸಾರ್ಥಕವಾಗುತ್ತಿದೆ ಎಂದು ತಿಳಿಸಿದ್ದಾರೆ.

    ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಸ್ಟಂಟ್ ಮಾಡ್ತಿದೆ. ಮೊದಲು ಬಿಜೆಪಿಯವರು ರಾಮಮಂದಿರ ಕಟ್ಟಿಲ್ಲ ಅನ್ನುತ್ತಿದ್ದರು. ಈಗ ಪ್ರಿಯಾಂಕ್ ಖರ್ಗೆಯವರು ರಾಮಮಂದಿರ ಕಟ್ಟಾಯಿತು, ರಾಮರಾಜ್ಯ ಯಾವಾಗ? ಅಂತಾರೆ. ಇಂತಹ ಚಿಲ್ಲರೆಗಳಿಗೆ ಉತ್ತರ ಕೊಡಬೇಕಿಲ್ಲ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

  • ಲೋಕ ಸಮರ ಗೆಲ್ಲಲು ದಳಪತಿ-ಕಮಲ ಸಾರಥಿ ಇನ್‌ಸೈಡ್‌ ಮೀಟಿಂಗ್!

    ಲೋಕ ಸಮರ ಗೆಲ್ಲಲು ದಳಪತಿ-ಕಮಲ ಸಾರಥಿ ಇನ್‌ಸೈಡ್‌ ಮೀಟಿಂಗ್!

    ಬೆಂಗಳೂರು: 2024ರ ಲೋಕಸಭಾ ಚುನಾವಣೆ (Lok Sabha Elections) ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು, ಈಗಾಗಲೇ ರಣತಂತ್ರ ಎಣೆಯುತ್ತಿವೆ. ಬಿಡದಿ ತೋಟದ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಅವರು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (H.D.Kumaraswamy) ಅವರನ್ನು ಭೇಟಿಯಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ.

    ಬಿಡದಿ ಮನೆಯಲ್ಲಿ ಕುಮಾರಸ್ವಾಮಿ-ವಿಜಯೇಂದ್ರ ದೋಸ್ತಿ ಮಾತುಕತೆ ನಡೆಸಿದ್ದಾರೆ, ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಪ್ಲ್ಯಾನ್ ಸಿದ್ಧವಾಗಿದೆ. ಅಲ್ಲದೇ ದೋಸ್ತಿ ಕ್ಷೇತ್ರಗಳ ಸೀಟು ಹಂಚಿಕೆಗಳ ಬಗ್ಗೆಯೂ ಪ್ರಾಥಮಿಕ ಸಭೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗಳೂರು ಕಂಬಳದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು ಜಯ

    ಕುಮಾರ-ವಿಜಯ ಮೀಟಿಂಗ್ ಇನ್ ಸೈಡ್ ಸ್ಟೋರಿ ಏನು?
    ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಸೀಟು ಹಂಚಿಕೆ ಬಗ್ಗೆ ಪ್ರಾಥಮಿಕ ಚರ್ಚೆ, ಗೋವಾ ಸಿಎಂ ಪ್ರಮೋದ್ ಸಾವಂತ್ ಬಳಿ ಇಟ್ಟಿರೋ ಸೀಟು ಹಂಚಿಕೆ, ಫಾರ್ಮುಲಾ ಬಗ್ಗೆ ಚರ್ಚೆ, ಲೋಕಸಭೆ ಚುನಾವಣೆಯಲ್ಲಿ 4-6 ಸ್ಥಾನದ ಬೇಡಿಕೆ ಬಗ್ಗೆ ಕುಮಾರಸ್ವಾಮಿರಿಂದ ವಿಷಯ ಪ್ರಸ್ತಾಪವಾಗಿದೆ ಎಂಬುದು ಸದ್ಯದ ಮಾಹಿತಿ. ಇದನ್ನೂ ಓದಿ: ಫಸಲಿಗೆ ಬಂದ 70ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಕಡಿದ ಕಿಡಿಗೇಡಿಗಳು – ಕಣ್ಣೀರಿಟ್ಟ ರೈತ

    ಅಲ್ಲದೇ ಲೋಕಸಭೆ ಚುನಾವಣೆ ಎಲ್ಲೆಲ್ಲಿ ಜಂಟಿ ಸಮಾವೇಶ ನಡೆಸಬೇಕು? ಬೆಳಗಾವಿ ಅಧಿವೇಶನದಲ್ಲಿ (Belagavi Session) ಸರ್ಕಾರದ ಯಾವ ರೀತಿ ಹೋರಾಟಗಳನ್ನ ನಡೆಸಬೇಕು? ಅದಕ್ಕೆ ರೂಪುರೇಷೆಗಳು ಹೇಗಿರಬೇಕು? ಎನ್ನುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇದರೊಂದಿಗೆ ಸಚಿವ ಜಮೀರ್ ಅಹ್ಮದ್‌ ಖಾನ್‌ ತೆಲಂಗಾಣ ಚುನಾವಣಾ ಪ್ರಚಾರದ ಬಗ್ಗೆ ನೀಡಿದ ಹೇಳಿಕೆ, ಸಿಎಂ ಪುತ್ರ ಯತೀಂದ್ರ ವಿಡಿಯೋ ವಿಚಾರ, ರೈತರಿಗೆ ಅನ್ಯಾಯ, ಗ್ಯಾರಂಟಿಗಳ ವೈಫಲ್ಯದ ಜಂಟಿ ಹೋರಾಟ ರೂಪಿಸಬೇಕು. ಡಿಕೆ ಶಿವಕುಮಾರ್ ಸಿಬಿಐ ಕೇಸ್ ವಾಪಸ್ ಪಡೆದಿರೋ ಪ್ರಕರಣದಲ್ಲಿ ಮೊದಲ ದಿನದಿಂದಲೇ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

  • ಎಂಪಿ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿ – ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್‌ ನಾಯಕರ ಒತ್ತಾಯ

    ಎಂಪಿ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿ – ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್‌ ನಾಯಕರ ಒತ್ತಾಯ

    ಮಂಡ್ಯ: ಕಳೆದ ಮಂಡ್ಯ ಲೋಕಸಭಾ ಚುನಾವಣೆ (Lok Sabha Election) ಹಾಗೂ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ನಿಖಿಲ್ ಕುಮಾರಸ್ವಾಮಿಯ (Nikhil Kumaraswamy) ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಇದೀಗ ಈ ಪ್ರಶ್ನೆಗೆ ಪೂರಕ ಉತ್ತರವನ್ನು ಮಂಡ್ಯ ಜೆಡಿಎಸ್ ನಾಯಕರು ನೀಡಿದ್ದಾರೆ‌.

    ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ಮಂಡ್ಯ ಜೆಡಿಎಸ್ (JDS) ನಾಯಕರು ಒಕ್ಕೊರಲಿನಿಂದ ಆಹ್ವಾನ ನೀಡಿದ್ದಾರೆ. ಜೆಡಿಎಸ್ ನಾಯಕರಾದ ಪುಟ್ಟರಾಜು, ಸುರೇಶ್‌ಗೌಡ, ಡಿ.ಸಿ.ತಮ್ಮಣ್ಣ ಈ ಬಗ್ಗೆ ಅಭಿಪ್ರಾಯವನ್ನು ಹೇಳಿದ್ದಾರೆ. ಇದನ್ನೂ ಓದಿ: ನೀವು ತಲೆ ತಗ್ಗಿಸುವ ರೀತಿಯ ಕೆಲಸ ಮಾಡಲಿಲ್ಲ: ಕಟೀಲ್ ಭಾವುಕ

    ಸದ್ಯ ನಾವು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಿಜೆಪಿ ಜೊತೆ ಮೈತ್ರಿಯೊಂದಿಗೆ ಎದುರಿಸುತ್ತಿದ್ದೇವೆ. ಸೀಟು ಹಂಚಿಕೆ ವಿಚಾರ ಇನ್ನೂ ಅಧಿಕೃತವಾಗಿಲ್ಲ. ಈ ಬಗ್ಗೆ ದೆಹಲಿಯಲ್ಲಿ ಸಭೆ ಸಹ ಇದೆ. ಡಿಸೆಂಬರ್ ಅಂತ್ಯಕ್ಕೆ ಇವೆಲ್ಲವೂ ಅಧಿಕೃತವಾಗುತ್ತದೆ.

    ಬಹುತೇಕ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಉಳಿದುಕೊಳ್ಳುವ ವಿಶ್ವಾಸ ನಮಗೆ ಇದೆ. ಮಂಡ್ಯ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಬರಬೇಕು ಎಂಬ ಅಭಿಲಾಷೆ ನಮಗೆ ಇದೆ. ಈ ನಿಟ್ಟಿನಲ್ಲಿ ನಾವು ಈಗಾಗಲೇ ನಮ್ಮ ನಾಯಕರ ಬಳಿ ನಿಖಿಲ್ ಬರಬೇಕು, ಇಲ್ಲವಾದಲ್ಲಿ ಕುಮಾರಸ್ವಾಮಿ ಅಥವಾ ದೇವೇಗೌಡರು ಮಂಡ್ಯದಿಂದ ಸ್ಪರ್ಧೆ ಮಾಡಬೇಕೆಂದು ಕೇಳಿಕೊಂಡಿದ್ದೇವೆ. ನಮ್ಮ ಮೊದಲ ಆದ್ಯತೆ ನಿಖಿಲ್ ಕುಮಾರಸ್ವಾಮಿ ಪರ ಇದ್ದು, ನಿಖಿಲ್ ಸ್ಪರ್ಧೆಯ ಬಗ್ಗೆ ನಮಗೆ ವಿಶ್ವಾಸ ಇದೆ ಎಂದು ಜೆಡಿಎಸ್‌ನ ಮಂಡ್ಯ ನಾಯಕರು ಒಕ್ಕೊರಲಿನಿಂದ ಹೇಳಿದ್ದಾರೆ. ಇದನ್ನೂ ಓದಿ: ಚಲುವರಾಯಸ್ವಾಮಿ ಮೊದಲೇ ಚಡ್ಡಿ ಹಾಕಲ್ಲ: ಮಾಜಿ ಶಾಸಕ ಸುರೇಶ್‌ಗೌಡ ವಾಗ್ದಾಳಿ