Tag: ಲೋಕಸಭೆ ಚುನಾವಣೆ

  • ವಿಧಾನಸಭೆ ಚುನಾವಣೆ ಹೇಗೆ ಗೆದ್ದಿರಿ ಉತ್ತರಿಸಿ – ರಾಹುಲ್ ಗಾಂಧಿಗೆ ಜೋಶಿ ಸವಾಲು

    ವಿಧಾನಸಭೆ ಚುನಾವಣೆ ಹೇಗೆ ಗೆದ್ದಿರಿ ಉತ್ತರಿಸಿ – ರಾಹುಲ್ ಗಾಂಧಿಗೆ ಜೋಶಿ ಸವಾಲು

    – ಚುನಾವಣೆ ಲೋಪವಾಗಿದ್ದರೆ ಪ್ರಕರಣ ಏಕೆ ದಾಖಲಿಸಲಿಲ್ಲ?
    – ಚುನಾವಣಾ ಆಯೋಗವನ್ನು ದೂರುವ ಮೊದಲು ಸ್ಪಷ್ಟಪಡಿಸಿ ಎಂದ ಕೇಂದ್ರ ಸಚಿವ

    ನವದೆಹಲಿ: ಕಾಂಗ್ರೆಸ್ (Congress) ಚುನಾವಣಾ ಆಯೋಗದ (Election Commission) ಮೇಲೆ ಆರೋಪ ಹೊರಿಸುವ ಮೊದಲು ಕರ್ನಾಟಕ ವಿಧಾನಸಭೆ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಹೇಗೆ ಗೆದ್ದಿತು ಎಂಬುದಕ್ಕೆ ರಾಹುಲ್ ಗಾಂಧಿ ಉತ್ತರಿಸಲಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸವಾಲು ಹಾಕಿದರು.

    ದೆಹಲಿಯಲ್ಲಿ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆಯಲ್ಲಿ ಇವಿಎಂ ಮತ್ತು ಚುನಾವಣಾ ಆಯೋಗದ ಲೋಪವಿದೆ’ ಎನ್ನುವುದಾದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಅದೇ ಇವಿಎಂಗಳು ಮತ್ತು ಚುನಾವಣಾ ಆಯೋಗ ಕಾರ್ಯ ನಿರ್ವಹಿಸಿದೆ. ಹಾಗಾದರೆ ಕಾಂಗ್ರೆಸ್‌ನವರು ಹೇಗೆ ಆಯ್ಕೆಯಾದರು ಎಂದು ಪ್ರಶ್ನಿಸಿದರು.

    ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿಗರ ವಾದ ತರ್ಕಬದ್ಧವಲ್ಲ. 2020ರಲ್ಲಿಯೂ ಆಯ್ಕೆಯಾಗಿದ್ದರು. ಆಗದೇ ಚುನಾವಣಾ ಆಯೋಗ ಕಾರ್ಯ ನಿರ್ವಹಿಸುತ್ತಿತ್ತು. ಲೋಪವಾಗಿದ್ದರೆ ಈವರೆಗೂ ಏಕೆ ಪ್ರಕರಣ ದಾಖಲಿಸಲಿಲ್ಲ ಮತ್ತು ದಾಖಲೆ ಸಲ್ಲಿಸಲಿಲ್ಲ? ಈಗ ಒಂದು ವರ್ಗವನ್ನು ಸಮಾಧಾನಪಡಿಸಲು ಈ ನಡೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಸಂಸತ್‌ನಲ್ಲಿ ಚರ್ಚೆ ಅಸಾಧ್ಯವೆಂದ ಮಾಜಿ ಸ್ಪೀಕರ್:
    ಚುನಾವಣಾ ಆಯೋಗದ ಕಾರ್ಯ ನಿರ್ವಹಣೆ ಬಗ್ಗೆ ಸಂಸತ್ತು ಚರ್ಚಿಸಲು ಸಾಧ್ಯವಿಲ್ಲ ಎಂಬುದನ್ನು ಲೋಕಸಭೆ ಮಾಜಿ ಸ್ಪೀಕರ್ ಬಲರಾಮ್ ಜಾಖರ್ ತೀರ್ಪಿತ್ತಿದ್ದಾರೆ. ಇನ್ನು, ಸುಪ್ರೀಂ ಕೋರ್ಟ್‌ನಲ್ಲಿ ಸಹ ವಿಚಾರಣೆ ನಡೆಯುತ್ತಿದ್ದು, ಇದು ಕಾನೂನು ವ್ಯಾಪ್ತಿಗೊಳಪಟ್ಟಿದೆ. ಹಿಂದೆಯೂ ಎಸ್‌ಐಆರ್ ನಡೆಸಲಾಗಿದೆ. ಆದರೆ ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

    2023ರಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಸಹ ಬಿಜೆಪಿಯೇ ಅಧಿಕಾರದಲ್ಲಿತ್ತು. ಹಾಗಿದ್ದರೂ ಕಾಂಗ್ರೆಸ್ ಬಹುಮತದಿಂದ ಗೆದ್ದಿತು. ಆಗ ಚುನಾವಣಾ ಆಯೋಗ ಮತ್ತು ಇವಿಎಂ ಎಲ್ಲಾ ಚೆನ್ನಾಗಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಾಕ್ಷಣ ನಿಮಗೆ ಚುನಾವಣಾ ಆಯೋಗ ಚೆನ್ನಾಗಿಲ್ಲ, ಇವಿಎಂಗಳು ವಿಶ್ವಾಸಾರ್ಹವಲ್ಲ ಅಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

    ಜಗತ್ತಿಗೇನು ಹೇಳಲು ಹೊರಟಿದ್ದೀರಿ?
    ಕರ್ನಾಟಕದಲ್ಲಿ ವಿಧಾನಸಭೆ ಫಲಿತಾಂಶ ನಿಮ್ಮ ಪರವಾಗಿತ್ತು. ಆದರೆ ಲೋಕಸಭೆ ಇರಲಿಲ್ಲ. ಮಹಾರಾಷ್ಟ್ರದಲ್ಲಿ ಲೋಕಸಭೆ-ವಿಧಾನಸಭೆ ನಿಮ್ಮಂತೆ ಆಗಲಿಲ್ಲ. ದೇಶ ಮತ್ತು ಜಗತ್ತಿಗೆ ಏನನ್ನು ಪ್ರಸ್ತುತಪಡಿಸಲು ಪ್ರಯತ್ನಿಸುತ್ತಿದ್ದೀರಿ? ಭಾರತದಲ್ಲಿ ಚುನಾವಣೆಗಳು ಸರಿಯಾಗಿ ನಡೆಯುವುದಿಲ್ಲ ಎಂದು ಸಾರಲು ಪ್ರಯತ್ನಿಸುತ್ತಿದ್ದೀರಾ ಎಂದು ಪ್ರಶ್ನಿಸಿದರು.

    ಜಾರ್ಖಂಡ್, ಜಮ್ಮು-ಕಾಶ್ಮೀರ ಹೇಗೆ ಗೆದ್ದಿರಿ?
    ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ಭಾರತದ ಸಾಂಸ್ಥಿಕ ಸಂಸ್ಥೆಗಳ ವಿರುದ್ಧ ಮಾತನಾಡುತ್ತಾರೆ. ಚುನಾವಣೆಗಳಲ್ಲಿ ಅಕ್ರಮ ನಡೆದರೆ ನಿಮ್ಮ ಅಭ್ಯರ್ಥಿಗಳು ಜಾರ್ಖಂಡ್‌ನಲ್ಲಿ ಹೇಗೆ ಗೆದ್ದರು? ಜಮ್ಮು ಮತ್ತು ಕಾಶ್ಮೀರದಲ್ಲಿ ಹೇಗೆ ಗೆದ್ದಿದ್ದೀರಿ? ಸ್ವಲ್ಪ ತಾರ್ಕಿಕವಾಗಿ ಕೆಲಸ ಮಾಡಿ, ಜನರು ಬುದ್ಧಿವಂತರಿದ್ದಾರೆ. ಹಾಗಾಗಿಯೇ ತಮ್ಮ ಪಕ್ಷವನ್ನು ವಿಪಕ್ಷದಲ್ಲಿ ಸ್ಥಾನದಲ್ಲಿರಿಸಿದ್ದಾರೆ ಮತ್ತು ಮೂರೇ ಮೂರು ರಾಜ್ಯಗಳಲ್ಲಿ ಆಡಳಿತ ನೀಡಿದ್ದಾರೆ ಎಂದು ರಾಹುಲ್ ಗಾಂಧಿಗೆ ಚಾಟಿ ಬೀಸಿದರು.

    ಸುಂಕದಿಂದ ರಾಜತಾಂತ್ರಿಕ ಸಂಬಂಧಕ್ಕಿಲ್ಲ ಧಕ್ಕೆ:
    ಕೇವಲ ಸುಂಕ ಏರಿಕೆ, ಬದಲಾವಣೆಯಿಂದ ಭಾರತದ ರಾಜತಾಂತ್ರಿಕ ಸಂಬಂಧ ದುರ್ಬಲವಾಗುವುದಿಲ್ಲ. ಭಾರತದ ಸ್ಥಾನಮಾನವನ್ನು ಜಗತ್ತು ಗುರುತಿಸುತ್ತಿದೆ. 190ಕ್ಕೂ ಹೆಚ್ಚು ದೇಶಗಳ ಬೆಂಬಲವನ್ನು ಭಾರತ ಗಳಿಸಿದೆ ಎಂದು ಸ್ಪಷ್ಟಪಡಿಸಿದರು.

    ಅಮೆರಿಕ ಅಧ್ಯಕ್ಷ ಟ್ರಂಪ್ ಸುಂಕ ಯೋಜನೆ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಸುಂಕ ನೀತಿಗಳ ಆಧಾರದ ಮೇಲೆ ಅಂತರಾಷ್ಟ್ರೀಯ ಸಂಬಂಧಗಳನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಭಾರತ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಜಾಗತಿಕವಾಗಿ ಗೌರವಿಸಲ್ಪಟ್ಟಿದೆ ಎಂದು ಪ್ರತಿಪಾದಿಸಿದರು.

  • ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಅಕ್ರಮವಾಗಿದೆ – ರಾಹುಲ್ ಗಾಂಧಿ ದಾಖಲೆ ಬಿಡುಗಡೆ ಮಾಡ್ತಾರೆ: ಸಚಿವ ಸುಧಾಕರ್

    ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಅಕ್ರಮವಾಗಿದೆ – ರಾಹುಲ್ ಗಾಂಧಿ ದಾಖಲೆ ಬಿಡುಗಡೆ ಮಾಡ್ತಾರೆ: ಸಚಿವ ಸುಧಾಕರ್

    – 8-10 ತಿಂಗಳಿಂದ ರಿಸರ್ಚ್ ಮಾಡಿದ್ದಾರೆ ಎಂದ ಸಚಿವ

    ಬೆಂಗಳೂರು: ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ (Karnataka LokSabha Election) ಅಕ್ರಮ ಆಗಿರೋದು, ಮತಗಳ್ಳತನ ಆಗಿರೋದರ ಬಗ್ಗೆ ರಾಹುಲ್ ಗಾಂಧಿ ಬಳಿ ದಾಖಲಾತಿ ಇದೆ. ಆಗಸ್ಟ್ 8ರ ಪ್ರತಿಭಟನೆ ದಿನ ಅದನ್ನ ಬಿಡುಗಡೆ ಮಾಡ್ತಾರೆ ಅಂತ ಉನ್ನತ ಶಿಕ್ಷಣ ‌ಸಚಿವ ಸುಧಾಕರ್ (MC Sudhakar) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಪ್ರತಿಭಟನೆ (Rahul Gandhi Protest) ವಿಚಾರ ಮತ್ತು ಮೈಸೂರಿನಲ್ಲಿ ಮತಗಳ್ಳತನ ಆಗಿದೆ ಎಂಬ ಕಾಂಗ್ರೆಸ್ ಅಭ್ಯರ್ಥಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಇನ್ಮುಂದೆ ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ 50 ಸಾವಿರ ರೂ. ಗಿಫ್ಟ್‌ – ಜಮೀರ್ ಅಹ್ಮದ್

    ದೆಹಲಿ ಚುನಾವಣೆ (Delhi Election) ಸಮಯದಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ನಾನು ಪ್ರಚಾರಕ್ಕೆ ಹೋಗಿದ್ದೆ. ಆಗ ನಮ್ಮ ಅಭ್ಯರ್ಥಿಯೇ ನಮಗೆ ತೋರಿಸಿದ್ರು. ಒಂದೇ ಅಡ್ರೆಸ್ ನಲ್ಲಿ ಎಷ್ಟು ಜನ ಇರೋಕೆ ಸಾಧ್ಯ? ಅಲ್ಲಿ ಅಂತಹ ಅಕ್ರಮವಾಗಿದೆ. ರಾಹುಲ್ ಗಾಂಧಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಅವರು ಶ್ಯಾಡೋ ಪ್ರಧಾನ ಮಂತ್ರಿ ಆಗಿದ್ದಾರೆ. 8-10 ತಿಂಗಳಿಂದ ಈ ಬಗ್ಗೆ ರಿಸರ್ಚ್ ಮಾಡಿದ್ದಾರೆ. ಮಹಾರಾಷ್ಟ್ರ ಚುನಾವಣೆ ಆದ ಮೇಲೆ ರಾಹುಲ್ ಗಾಂಧಿಗೂ ಹೆಚ್ಚು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈಗಾಗಿ ಅವರು ಎಲ್ಲಾ ದಾಖಲಾತಿ ಬಿಡುಗಡೆ ಮಾಡ್ತಾರೆ‌ ಅಂತ ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಶ್ರಮ, ಹೋರಾಟಕ್ಕೆ ಪ್ರತಿಫಲ ಸಿಗಬೇಕು: ಇಕ್ಬಾಲ್ ಹುಸೇನ್

    ರಾಹುಲ್ ಗಾಂಧಿ ಅವರು ಚುನಾವಣೆ ಆಯೋಗಕ್ಕೆ ಡಿಜಿಟಲ್ ಓಟರ್ ಲೀಸ್ಟ್ ಕೊಡಿ ಅಂದರು ಆಯೋಗ ಯಾಕೆ ಕೊಡ್ತಿಲ್ಲ. ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲಾತಿ ಇವೆ. ದೆಹಲಿಯಲ್ಲಿ ಸುದ್ದಿಗೋಷ್ಟಿ ‌ಮಾಡಿ ರಿಲೀಸ್ ಮಾಡ್ತಾರೆ. ಕರ್ನಾಟಕಕ್ಕೆ ಬಂದಾಗ ದಾಖಲಾತಿ ಕೊಡ್ತಾರೆ. ಕರ್ನಾಟಕದಲ್ಲಿ ಅಕ್ರಮ ಆಗಿದೆ ಅಂತ ದಾಖಲಾತಿ ಸಮೇತ ಕೊಡೋದಾಗಿ ರಾಹುಲ್ ಹೇಳಿದ್ದಾರೆ. ಅವರ ಬಳಿ ಖಂಡಿತ ದಾಖಲಾತಿ ಇದೆ ಅನ್ನೋದು ನಮ್ಮ ನಂಬಿಕೆ. ರಾಹುಲ್ ಗಾಂಧಿ ದಾಖಲಾತಿ ಕೊಡ್ತಾರೆ ಅಂತ ತಿಳಿಸಿದರು. ಇದನ್ನೂ ಓದಿ: ಗುರುವಾರದಿಂದ ಲಾಲ್‌ಬಾಗ್‌ನಲ್ಲಿ 218ನೇ ಫಲಪುಷ್ಪ ಪ್ರದರ್ಶನ – ಹೂವಲ್ಲೇ ಕಿತ್ತೂರಿನ ಕೋಟೆ ಸೃಷ್ಟಿ

  • 2024ರ ಲೋಕಸಭೆ ಚುನಾವಣೆ ವೇಳೆ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಕಳ್ಳಾಟ: ರಾಹುಲ್ ಗಾಂಧಿ

    2024ರ ಲೋಕಸಭೆ ಚುನಾವಣೆ ವೇಳೆ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಕಳ್ಳಾಟ: ರಾಹುಲ್ ಗಾಂಧಿ

    – ಎಲ್ಲವೂ ಶೀಘ್ರದಲ್ಲೇ ಬಹಿರಂಗ: ರಾಗಾ
    – ಸಂಸತ್‌ನಲ್ಲಿ 3ನೇ ದಿನವೂ ಕೋಲಾಹಲ

    ನವದೆಹಲಿ: ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ವಿಪಕ್ಷಗಳು ಮಾಡುತ್ತಿರುವ ಹೋರಾಟ ಹೊಸ ತಿರುವು ಪಡೆದುಕೊಂಡಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಗಂಭೀರ ಆರೋಪ ಮಾಡಿದ್ದಾರೆ. 2024ರ ಲೋಕಸಭೆ ಚುನಾವಣೆ (Lok Sabha Election) ವೇಳೆ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ (Karnataka) ಕಳ್ಳಾಟವಾಗಿದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಚುನಾವಣಾ ಪ್ರಕ್ರಿಯೆ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದೆವು. ಬೋಗಸ್ ವೋಟಿಂಗ್ ಬಗ್ಗೆ ಇಂಚಿಂಚು ಮಾಹಿತಿ ನಮಗೆ ಲಭ್ಯವಾಗಿದೆ. ಎಲ್ಲಾ ವಿಚಾರಗಳನ್ನು ಸದ್ಯದಲ್ಲೇ ಜನರ ಮುಂದೆ ಇಡಲಿದ್ದೇವೆ. ಎಲ್ಲಾ ಕಳ್ಳಾಟ ಸದ್ಯದಲ್ಲೇ ಹೊರಬರಲಿದೆ ಎಂದರು. ಇದನ್ನೂ ಓದಿ: ಕರ್ನಾಟಕದಲ್ಲಿ ಹೊಸ ಜಾತಿಗಣತಿ| ಸೆ. 22ರಿಂದ ಅ. 7 ರವರೆಗೆ ಮೊಬೈಲ್ ಆಪ್ ಮೂಲಕ ಮನೆ ಮನೆ ಸಮೀಕ್ಷೆ

    ಇನ್ನೂ, ಮತದಾರರ ಪಟ್ಟಿಯಿಂದ 52 ಲಕ್ಷ ಮಂದಿಯನ್ನು ಕೈಬಿಟ್ಟಿರೋದನ್ನು ವಿಪಕ್ಷಗಳು ಪ್ರಶ್ನಿಸಿ, ಇವತ್ತು ಕೂಡ ಸಂಸತ್‌ನಲ್ಲಿ ಕೋಲಾಹಲ ಎಬ್ಬಿಸಿವೆ. ಸದನದ ಹೊರಗೂ, ಒಳಗೂ ಇಂಡಿ ಒಕ್ಕೂಟ ಪ್ರತಿಭಟನೆ ನಡೆಸಿದೆ. ಸದನದಲ್ಲಿ ಕಪ್ಪು ಬಟ್ಟೆ ಕೂಡ ಪ್ರದರ್ಶನ ಮಾಡಲಾಯಿತು. ವಿಪಕ್ಷಗಳ ಗದ್ದಲದಿಂದ ಸ್ಪೀಕರ್ ಬಿರ್ಲಾ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ವಿವಿಧ ವಿಷಯಗಳ ಚರ್ಚೆ ಮಾಡಲು ಅಧಿವೇಶನಕ್ಕೆ ಆಗಮಿಸಿದ್ದೀರಿ. ಆದ್ರೆ ನೀವು ರಸ್ತೆ ಮೇಲೆ ಪ್ರತಿಭಟಿಸಿದಂತೆ ಸಂಸತ್‌ನಲ್ಲಿ ನಡೆದುಕೊಳ್ಳುತ್ತಿದ್ದೀರಿ. ಇಡೀ ದೇಶ ನಿಮ್ಮನ್ನ ಗಮನಿಸುತ್ತಿದೆ. ನಿಮ್ಮ ವರ್ತನೆ ಸರಿಯಲ್ಲ ಎಂದು ಗರಂ ಆದರು. ಇದನ್ನೂ ಓದಿ: ಕೆಜಿ ಹಳ್ಳಿಯಲ್ಲಿ ಬೆಂಕಿ ಇಟ್ಟ ಮೂವರಿಗೆ 7 ವರ್ಷ ಜೈಲು ಶಿಕ್ಷೆ

    ಈ ಮಧ್ಯೆ, ಕಲಾಪಕ್ಕೆ ಅಡ್ಡಿಯಿಂದ ಸರ್ಕಾರಕ್ಕೆ ಹೆಚ್ಚು ಅನುಕೂಲವಾಗಲಿದೆ ಅಂತ ಟಿಎಂಸಿ ಸಂಸದ ಡೆರೆಕ್ ಒ ಬ್ರಿಯಾನ್ ಹೇಳಿದ್ದಾರೆ. ಇನ್ನು ಆಪರೇಷನ್ ಸಿಂಧೂರ ಬಗ್ಗೆ ಚರ್ಚಿಸಲು ಲೋಕಸಭೆಯಲ್ಲಿ ಸೋಮವಾರ 16 ಗಂಟೆ, ರಾಜ್ಯಸಭೆಯಲ್ಲಿ ಮಂಗಳವಾರ 16 ಗಂಟೆ ಸಮಯ ನಿಗದಿಪಡಿಸಲಾಗಿದೆ. ಚರ್ಚೆ ವೇಳೆ ಪ್ರಧಾನಿ ಉಪಸ್ಥಿತರಿರೋ ಸಾಧ್ಯತೆ ಇದೆ. ಇದನ್ನೂ ಓದಿ: Gujarat | ಅಲ್-ಖೈದಾ ಸಂಘಟನೆಯೊಂದಿಗೆ ನಂಟು ಹೊಂದಿದ್ದ ನಾಲ್ವರು ಉಗ್ರರ ಬಂಧನ

  • ಸಚಿವರ ತಲೆದಂಡದ ಬಗ್ಗೆ ಎಲ್ಲೂ ಚರ್ಚೆ ಆಗಿಲ್ಲ, ಸೂಚನೆಯೂ ಇಲ್ಲ: ಸತೀಶ್ ಜಾರಕಿಹೊಳಿ

    ಸಚಿವರ ತಲೆದಂಡದ ಬಗ್ಗೆ ಎಲ್ಲೂ ಚರ್ಚೆ ಆಗಿಲ್ಲ, ಸೂಚನೆಯೂ ಇಲ್ಲ: ಸತೀಶ್ ಜಾರಕಿಹೊಳಿ

    ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶದ (Lok Sabha Election Result) ಮೇಲೆ ಸಚಿವರ ತಲೆದಂಡದ ವಿಚಾರ ಚರ್ಚೆ ಆಗಿಲ್ಲ, ಸೂಚನೆಯೂ ಇಲ್ಲಾ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಚಿವರ ಕ್ಷೇತ್ರದ ಲೀಡ್ ವಿಚಾರದಲ್ಲಿ ಕೆಲವು ಕಡೆ ಲೀಡ್ ಕಡಿಮೆ ಆಗಿದೆ ಹೌದು. ಕೆಲವರು ಅವರೇ ಉತ್ತರ ಕೊಡುತ್ತಾರೆ. ಲಕ್ಷ್ಮಣ್ ಸವದಿ ಕ್ಷೇತ್ರದಲ್ಲಿ ಅವರ ಚುನಾವಣೆಯಲ್ಲಿ 76,000 ಲೀಡ್ ಆಗಿದೆ. ಈ ಬಾರಿ 8,000 ಮೈನಸ್ ಆಗಿದೆ. ಯಾಕೆ ಅಂತ ಅವರೇ ಹೇಳಬೇಕು. ಸಹಜವಾಗಿಯೇ ಒಳ ಏಟು ಅನ್ನೋ ಥರಾನೆ ಚರ್ಚೆ ಆಗುತ್ತೆ ಅಲ್ವಾ. ಕುಡಚಿ ಶಾಸಕರು 2 ದಿನ ಮೊಬೈಲ್ ಸ್ವಿಚ್‌ಆಫ್ ಮಾಡಿ ನಾಪತ್ತೆಯಾಗಿದ್ದರು. ಚುನಾವಣೆ ದಿನ ಶಾಸಕರು ತಿರುಗಾಡಬೇಕು, ಅದು ಇಲ್ಲ. ಯಾರು ಯಾವ ಕಡೆ ಮಾಡಿದರು ಅದು ಎಲ್ಲರಿಗೂ ಗೊತ್ತು. ನಮಗಿರುವ ಮಾಹಿತಿ ನಾವು ಮಾತನಾಡಿದ್ದೇವೆ ಎಂದರು. ಇದನ್ನೂ ಓದಿ:‌ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ – ಮೂವರು ಬ್ಯಾಂಕ್ ಸಿಬ್ಬಂದಿಗೆ ಎಸ್‌ಐಟಿ ನೋಟಿಸ್

    ಲಕ್ಷ್ಮಣ್ ಸವದಿಯವರಿಗೆ ರಾಜಕೀಯವಾಗಿ ಗಟ್ಟಿಯಾಗುವ ಅವಕಾಶ ಇತ್ತು. ಈಗ ಅದು ಅಲ್ಲಿಗೆ ನಿಂತಿದೆ. ಯಾಕೆ ಹೀಗಾಯಿತು ಎಂದು ಅವರೇ ಹೇಳಬೇಕು. ಅವರೇ ಸ್ಪಷ್ಟೀಕರಣ ಕೊಟ್ಟರೆ ಗೊತ್ತಾಗುತ್ತದೆ. ನಾವು ಲೀಡ್ ಕಡಿಮೆ ಆಗಿದೆ ಅಷ್ಟೆ ಹೇಳೋದು. ಸಚಿವರ ಕ್ಷೇತ್ರದ ಲೀಡ್ ಕಡಿಮೆ ಬಗ್ಗೆ ರಾಹುಲ್ ಗಾಂಧಿ ಕೇಳಿದ್ದು ಸ್ವಾಭಾವಿಕ. ರಿಪೋರ್ಟ್ ಕಾರ್ಡ್ ಅನ್ನೋಕೆ ನಾವು ಸರ್ಕಾರಿ ನೌಕರರಲ್ಲ. ಎಲ್ಲಾ ಚುನಾವಣೆಯಲ್ಲು ಎಲ್ಲಾ ಅಧ್ಯಕ್ಷರು ಸಿಎಂಗೆ ವರದಿ ಕೊಡುತ್ತಾರೆ. ಸಚಿವರ ತಲೆದಂಡದ ಬಗ್ಗೆ ಎಲ್ಲೂ ಚರ್ಚೆ ಆಗಿಲ್ಲ. ಸೂಚನೆಯೂ ಇಲ್ಲಾ ಎಂದು ಹೇಳಿದರು. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣ – ಸಿಎಂ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ: ಎನ್.ರವಿಕುಮಾರ್ ಆಗ್ರಹ

    ಎಂಎಲ್‌ಎ ಚುನಾವಣೆ ನೋಡೋ ದೃಷ್ಟಿ ಬೇರೆ ಲೋಕಸಭೆ ನೋಡೋ ದೃಷ್ಟಿ ಬೇರೆ. ಮೊನ್ನೆ ಕೆಲವರು ನಮಗೆ ಮತ ಹಾಕಿಲ್ಲ. ಎಂಎಲ್‌ಎ ಚುನಾವಣೆ ಬಂದರೆ ನಮಗೆ ಹಾಕುತ್ತಾರೆ. ಗ್ಯಾರಂಟಿ ನಮ್ಮ ಕೈ ಹಿಡಿದಿದೆ. ಸಾಕಷ್ಟು ಬಿಜೆಪಿ ಯವರು 1 ಲಕ್ಷದ ಒಳಗೆ ಸೋತಿದ್ದಾರೆ. 7 ಸ್ಥಾನ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಹಳೆ ಮೈಸೂರಿಗಿಂತ ಉತ್ತರ ಕರ್ನಾಟಕದಲ್ಲಿ ಹೆಚ್ಚು ಗ್ಯಾರಂಟಿ ವರ್ಕ್ ಆಗಿದೆ. ಗ್ಯಾರಂಟಿ ನಿಲ್ಲಿಸಲ್ಲ ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಹೋದ ಬಾರಿ 1 ಸ್ಥಾನ ಗೆದ್ದಿದ್ದೆವು. ಈ ಬಾರಿ 9 ಗೆದ್ದಿದ್ದೇವೆ, ಸಮಾಧಾನ ಇದೆ. 7 ಸ್ಥಾನ ಕಡಿಮೆ ಅಂತರದಲ್ಲಿ ಸೋತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ವಿಪಕ್ಷ ನಾಯಕ ಆಗಲಿ ಅನ್ನೋದು ನಮ್ಮೆಲ್ಲರ ಆಸೆ: ಜಿ.ಪರಮೇಶ್ವರ್

  • ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಸೋಲು

    ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಸೋಲು

    ದೊಡ್ಮನೆ ಸೊಸೆ, ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shivaraj Kumar) ಸೋಲು ಕಂಡಿದ್ದಾರೆ. ಶಿವಮೊಗ್ಗ (Shimoga) ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗೀತಾ, ಪ್ರತಿ ಸ್ಪರ್ಧಿ ಬಿ.ವೈ ರಾಘವೇಂದ್ರ ಎದುರು ಸೋಲು ಒಪ್ಪಿಕೊಂಡಿದ್ದಾರೆ. ಈ ಬಾರಿ ಗೀತಾ ಗೆಲುವಿಗಾಗಿ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಯರು ಪ್ರಚಾರ ಮಾಡಿದ್ದರು. ಆದರೆ, ಯಾವ ಪ್ರಚಾರವೂ ಅವರನ್ನು ಕೈ ಹಿಡಿಯಲಿಲ್ಲ.

    ಬಾಲಿವುಡ್ ನಟಿ ಕಂಗನಾಗೆ ಗೆಲುವು

    ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ (Loksabha Election 2024) ಬಿಜೆಪಿ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಕಂಗನಾ ರಣಾವತ್ (Kangana Ranaut) ಮೊದಲ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾರೆ. 70000 ಮತಗಳಿಂದ ನಟಿ ಗೆದ್ದಿದ್ದಾರೆ. ಮೂಲಕ ನಟಿ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಮುಂದೆ ಕಂಗನಾ ಅವರು ಪಣ ತೊಟ್ಟಂತೆ ಸ್ಪರ್ಧೆ ಮಾಡಿ ಗೆದ್ದು ತೋರಿಸಿದ್ದಾರೆ. ಟಫ್ ಫೈಟ್ ಕೊಟ್ಟು ನಟಿ ಗೆದ್ದಿರೋದಕ್ಕೆ ನಟಿಯ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.‌

     

    ಕಂಗನಾ ಮುತ್ತಜ್ಜ, ಸರ್ಜು ಸಿಂಗ್ ರಣಾವತ್ ಅವರು ಅಂದು ಶಾಸಕರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದರು. ಆದರೆ ಕಂಗನಾ, ಇದೀಗ ಬಿಜೆಪಿ ಪಕ್ಷದಿಂದ ಕಣಕ್ಕೆ ನಿಂತು ಗೆದ್ದಿದ್ದಾರೆ. ಅಂದಹಾಗೆ, ಲೋಕಸಭಾ ಚುನಾವಣೆ ಗೆದ್ದರೆ ಬಾಲಿವುಡ್ಗೆ ವಿದಾಯ ಹೇಳುತ್ತೇನೆ ಎಂದು ನಟಿ ಹೇಳಿದ್ದರು. ಹಾಗಾದ್ರೆ ನಟಿ ಬಾಲಿವುಡ್ಗೆ ಗುಡ್ ಬೈ ಹೇಳ್ತಾರಾ ಎಂದು ನೆಟ್ಟಿಗರಲ್ಲಿ ಇದೀಗ ಚರ್ಚೆ ಶುರುವಾಗಿದೆ.

  • ರಾಜ್ಯದ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಬಾಕಿ

    ರಾಜ್ಯದ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಬಾಕಿ

    ಬೆಂಗಳೂರು: 2024ರ ಲೋಕಸಭೆ ಚುನಾವಣೆ (Lok Sabha Election) ಎದುರಿಸಲು ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಬಹುತೇಕ ಸಜ್ಜಾಗಿದೆ. ಈಗಾಗಲೇ ಕಾಂಗ್ರೆಸ್ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಇನ್ನು ಕೇವಲ 4 ಕ್ಷೇತ್ರಗಳಲ್ಲಿ ಮಾತ್ರ ಟಿಕೆಟ್ ಘೋಷಣೆ ಬಾಕಿ ಉಳಿಸಿಕೊಂಡಿದೆ.

    ರಾಜ್ಯದ ಬಳ್ಳಾರಿ, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಈ 4 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಿದರೆ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದಂತಾಗುತ್ತದೆ.

    ಬಳ್ಳಾರಿ, ಕೋಲಾರ, ಚಾಮರಾಜನಗರ 3 ಕ್ಷೇತ್ರದಲ್ಲಿ ಸಚಿವರ ಸ್ಪರ್ಧೆಗೆ ತಂತ್ರಗಾರಿಕೆ ರೂಪಿಸಿತ್ತು. ಆದರೆ ಮೂವರು ಸಚಿವರು ತಮ್ಮ ಸಂಬಂಧಿಕರಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದರು. ತಮ್ಮ ಕುಟುಂಬಕ್ಕೆ ಟಿಕೆಟ್ ನೀಡಲು ಬಳ್ಳಾರಿಯ ಸಚಿವ ನಾಗೇಂದ್ರ, ಕೋಲಾರದಲ್ಲಿ ಸಚಿವ ಮುನಿಯಪ್ಪ, ಚಾಮರಾಜನಗರದಲ್ಲಿ ಹೆಚ್.ಸಿ.ಮಹದೇವಪ್ಪ ಪುತ್ರ ಸುನಿಲ್ ಬೋಸ್‌ಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ನಿಮ್ಮ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳದೆ ಟಿಕೆಟ್‌ಗೆ ಡಿಮ್ಯಾಂಡ್ ಮಾಡಿದರೆ ಒಪ್ಪಲ್ಲ ಎಂದು 3 ಕ್ಷೇತ್ರದ 3 ಸಚಿವರ ವಿರುದ್ಧ ಹೈಕಮಾಂಡ್ ಗರಂ ಆಗಿದೆ ಎನ್ನಲಾಗಿದೆ.

    ಇನ್ನು ಚಿಕ್ಕಬಳ್ಳಾಪುರದಿಂದ ಅಭ್ಯರ್ಥಿಯಾಗಲು ರಕ್ಷಾ ರಾಮಯ್ಯ ಹಾಗೂ ಶಿವಶಂಕರ ರೆಡ್ಡಿ ನಡುವೆ ಪೈಪೋಟಿ ಇದ್ದು, ಇದರಿಂದಾಗಿಯೇ ಟಿಕೆಟ್ ಅಂತಿಮಗೊಳಿಸುವುದು ವಿಳಂಬವಾಗುತ್ತಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.

    ಇಂದು ಕಾಂಗ್ರೆಸ್ ಒಟ್ಟು 57 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 17 ಕರ್ನಾಟಕದ ಲೋಕಸಭಾ ಕ್ಷೇತ್ರಗಳು. ಆರಂಭದ ಪಟ್ಟಿಯಲ್ಲಿಯೇ ಕಾಂಗ್ರೆಸ್ ಹೈಕಮಾಂಡ್ 7 ಕ್ಷೇತ್ರಗಳ ಅಭ್ಯರ್ಥಿಯನ್ನು ಪ್ರಕಟಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಕರ್ನಾಟಕದ ಒಟ್ಟು 24 ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.

  • ದೊಡ್ಮನೆ ಸೊಸೆ ಭೇಟಿ ಮಾಡಿ ಸಹಕಾರ ಕೇಳಿದ ಸಂಸದೆ ಶೋಭಾ ಕರಂದ್ಲಾಜೆ

    ದೊಡ್ಮನೆ ಸೊಸೆ ಭೇಟಿ ಮಾಡಿ ಸಹಕಾರ ಕೇಳಿದ ಸಂಸದೆ ಶೋಭಾ ಕರಂದ್ಲಾಜೆ

    ಲೋಕಸಭೆ ಚುನಾವಣೆ (Lok Sabha Elections) ಘೋಷಿತ ಅಭ್ಯರ್ಥಿಗಳ ಮತಬೇಟೆ ಚಟುವಟಿಕೆಗಳು ಜೋರಾಗಿಯ ನಡೆಯುತ್ತಿವೆ. ತಮ್ಮ ಕ್ಷೇತ್ರದ ಪ್ರಭಾವಿತರ ಮನೆ ಮನೆಗೆ ತೆರಳುತ್ತಿರುವ ಅಭ್ಯರ್ಥಿಗಳು ಚುನಾವಣೆಗೆ ಅವರ ಸಹಕಾರವನ್ನು ಕೇಳುತ್ತಿದ್ದಾರೆ. ಹಾಗೆಯೇ ಸಂಸದೆ ಶೋಭಾ ಕರಂದ್ಲಾಜೆ ಕೂಡ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ  (Ashwini Puneet Rajkumar) ಅವರನ್ನು ಭೇಟಿ ಮಾಡಿದ್ದಾರೆ.

    ದೊಡ್ಮನೆ ಸೊಸೆಯನ್ನು ಭೇಟಿ ಮಾಡಿದ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಶೋಭಾ (Shobha Karandlaje), ನಮ್ಮ ಪಕ್ಷಕ್ಕೆ ಅವರ ಸಹಕಾರ ಕೇಳಿದ್ದೇವೆ. ಅಶ್ವಿನಿ ಅವರಿಗೆ ರಾಜಕೀಯ ಪಾರ್ಟಿ ಇಲ್ಲ. ಹಾಗಾಗಿ ನಿಮ್ಮ ಸಹಕಾರ, ಬೆಂಬಲ ಬೇಕು ಅಂತ ಕೇಳಿದ್ದೇವೆ. ಅವ್ರು ನಮ್ಮದೇ ಕ್ಷೇತ್ರದಲ್ಲಿದ್ದಾರೆ. ಪ್ರಚಾರದ ಬಗ್ಗೆ ಕೇಳಿಲ್ಲ’ ಎಂದಿದ್ದಾರೆ.

    ರಾಜಕಾರಣದ ವಿಚಾರದಲ್ಲಿ ಪುನೀತ್ ಯಾವತ್ತಿಗೂ ಹಿಂದೇಟು ಹಾಕುತ್ತಲೇ ಇದ್ದರು. ಸ್ವತಃ ಶಿವರಾಜ್ ಕುಮಾರ್ ಪತ್ನಿ ಚುನಾವಣೆಗೆ ನಿಂತಾಗಲೂ ಅವರು ಸಪೋರ್ಟ್ ಮಾಡಲಿಲ್ಲ. ರಾಜಕಾರಣದಿಂದ ಅಂತರ ಕಾಪಾಡಿಕೊಂಡೇ ಬಂದರು. ಅಶ್ವಿನಿ ಅವರು ಕೂಡ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಮನೆಗೆ ಬಂದವರನ್ನು ಸೌಜನ್ಯವಾಗಿ ಮಾತನಾಡಿಸಿದ್ದಾರೆ.

     

    ಈ ಕಡೆ ಶಿವರಾಜ್ ಕುಮಾರ್ ಪತ್ನಿ ಗೀತಾ ಕೂಡ ಈ ಬಾರಿ ಲೋಕಸಭೆಯ ಕಣದಲ್ಲಿ ಇದ್ದಾರೆ. ಶಿವಮೊಗ್ಗದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ದೊಡ್ಮನೆಯಲ್ಲೇ ರಾಜಕಾರಣದ ಬಗ್ಗೆ ಭಿನ್ನ ನಿಲುವುಗಳಿವೆ.

  • ಮಂಡ್ಯದಿಂದ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ?

    ಮಂಡ್ಯದಿಂದ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ?

    ಮಂಡ್ಯ: ಲೋಕಸಭೆ ಚುನಾವಣೆಗೆ (Lok Sabha Election) ಮಂಡ್ಯದಿಂದ (Mandya) ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಸ್ಪರ್ಧಿಸುವುದು ಬಹುತೇಕ ಫಿಕ್ಸ್‌ ಆಗಿದೆ.

    ಸೋಮವಾರ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ (JDS) ಕೋರ್ ಕಮಿಟಿ ಸಭೆಯಲ್ಲೂ ಕುಮಾರಸ್ವಾಮಿ ಸ್ಪರ್ಧೆಯ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಲು ಎಲ್ಲಾ ನಾಯಕರು ಒಪ್ಪಿಗೆ ನೀಡಿದ್ದಾರೆ. ಇದನ್ನೂ ಓದಿ: 2 ಸೀಟಿಗೆ ಮೈತ್ರಿ ಬೇಕಿತ್ತಾ? – ಜೆಡಿಎಸ್‌ ಅಸಮಾಧಾನಕ್ಕೆ ಕಾರಣ ಏನು?

     

    ಬಿಜೆಪಿ ಹೈಕಮಾಂಡ್‌ನಿಂದಲೂ (BJP High Command) ಕುಮಾರಸ್ವಾಮಿ ಸ್ಪರ್ಧೆಗೆ ಸಮ್ಮತಿ ಸಿಕ್ಕಿದೆ. ಹೀಗಾಗಿ ಮಾರ್ಚ್‌ 25ಕ್ಕೆ ಕುಮಾರಸ್ವಾಮಿ ಅಧಿಕೃತ ಅಭ್ಯರ್ಥಿ ಎಂದು ಘೋಷಣೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮೇಘನಾ ಫುಡ್ಸ್ ಗ್ರೂಪ್ ಮೇಲೆ ಐಟಿ ದಾಳಿ

    ಇಂದು ಕುಮಾರಸ್ವಾಮಿ ಚೆನ್ನೈಗೆ (Chennai) ತೆರಳಲಿದ್ದು ಮಾರ್ಚ್‌ 21 ರಂದು ಆಪರೇಷನ್‌ ನಡೆಯಲಿದೆ. ಆಪರೇಷನ್‌ ಮುಗಿಸಿದ ಬಳಿಕ ಮಂಡ್ಯದಲ್ಲಿ ಬೃಹತ್ ಸಭೆ ಆಯೋಜನೆಯಾಗಲಿದೆ. ಈ ಸಭೆಯ ಮೂಲಕ ಅಧಿಕೃತ ಚುನಾವಣಾ ಅಖಾಡಕ್ಕೆ ಹೆಚ್‌ಡಿಕೆ ಧುಮುಕಲಿದ್ದಾರೆ.

     

    ಮಂಡ್ಯ ಲೋಕಸಭಾ ಚುನಾವಣೆ ಸಂಬಂಧ ಕಳೆದ ವಾರ ಮಂಡ್ಯದಲ್ಲಿ ನಡೆದ ಸಭೆಯಲ್ಲಿ ನೀವೇ ಕಣಕ್ಕೆ ಇಳಿಯಬೇಕು ಇಲ್ಲದಿದ್ದರೆ ನಿಖಿಲ್‌ ಕುಮಾರಸ್ವಾಮಿ ಕಣಕ್ಕೆ ಇಳಿಯಬೇಕು ಎಂದು ಕುಮಾರಸ್ವಾಮಿ ಅವರಿಗೆ ಒತ್ತಡ ಹಾಕಿದ್ದರು.

  • ಚುನಾವಣಾ ಬಾಂಡ್‌ ವಿವರವನ್ನು ಬಹಿರಂಗಪಡಿಸಿದ ಚುನಾವಣಾ ಆಯೋಗ

    ಚುನಾವಣಾ ಬಾಂಡ್‌ ವಿವರವನ್ನು ಬಹಿರಂಗಪಡಿಸಿದ ಚುನಾವಣಾ ಆಯೋಗ

    ನವದೆಹಲಿ: ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರ ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಂಚಿಕೊಂಡಿರುವ ಚುನಾವಣಾ ಬಾಂಡ್‌ಗಳ ಡೇಟಾವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

    ಸುಪ್ರೀಂ ಕೋರ್ಟ್‌ ಮಾರ್ಚ್‌ 15ರ ಒಳಗಡೆ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕೆಂದು ಚುನಾವಣಾ ಆಯೋಗಕ್ಕೆ (Election Commission) ಸೂಚಿಸಿತ್ತು. ಆದರೆ ಚುನಾವಣಾ ಆಯೋಗ ಒಂದು ದಿನದ ಮೊದಲೇ ಎಸ್‌ಬಿಐ (SBI) ನೀಡಿದ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

     

    ಚುನಾವಣಾ ಆಯೋಗ 2019ರ ಏಪ್ರಿಲ್‌ 12 ರಿಂದ 1 ಸಾವಿರ ರೂ. ನಿಂದ ಹಿಡಿದು 1 ಕೋಟಿ ರೂ. ಮೌಲ್ಯದ ಮುಖಬೆಲೆಯ ಚುನಾವಣಾ ಬಾಂಡ್‌ಗಳನ್ನು (Election Bond) ಯಾರು ಖರೀದಿಸಿದ್ದಾರೋ ಅವರ ವಿವರವನ್ನು ಪ್ರಕಟಿಸಿದೆ.

    ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಸ್ವೀಕರಿಸುವವರಲ್ಲಿ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳು ಸೇರಿವೆ ಎಂದು ಡೇಟಾ ಬಹಿರಂಗಪಡಿಸಿದೆ. ಇದನ್ನೂ ಓದಿ: ಈಶ್ವರಪ್ಪ ಮಗನನ್ನು ಎಂಎಲ್‍ಸಿ ಮಾಡುವ ಚರ್ಚೆಯಾಗ್ತಿದೆ: ಬಿಎಸ್‍ವೈ

     

  • ಚುನಾವಣಾ ಆಯೋಗದ ಆಯುಕ್ತರಾಗಿ ಇಬ್ಬರ ನೇಮಕ

    ಚುನಾವಣಾ ಆಯೋಗದ ಆಯುಕ್ತರಾಗಿ ಇಬ್ಬರ ನೇಮಕ

    – ಮೋದಿ ನೇತೃತ್ವದ ಸಭೆಯಲ್ಲಿ ನಿರ್ಧಾರ

    ನವದೆಹಲಿ: ಚುನಾವಣಾ ಆಯೋಗದಲ್ಲಿ (Election Commissioners) ಖಾಲಿ ಇರುವ ಎರಡು ಆಯುಕ್ತರ (Commissioners) ಹುದ್ದೆಗೆ ನಿವೃತ್ತ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

    ಸುಖಬೀರ್ ಸಿಂಗ್ ಸಂಧು (Sukhbir Sing Sandhu) ಮತ್ತು ಜ್ಞಾನೇಶ್ ಕುಮಾರ್ (Gyanesh Kumar) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಇಂದು ಮಧ್ಯಾಹ್ನ ಮಾಧ್ಯಮಗಳಿಗೆ ತಿಳಿಸಿದರು.

    ಮುಂಬರುವ ಲೋಕಸಭೆ ಚುನಾವಣೆಗೆ (Lok Sabha Election) ಚುನಾವಣಾ ಆಯೋಗವು ತಯಾರಿ ನಡೆಸುತ್ತಿದ್ದು, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ನೆರವಾಗಲು ಇಬ್ಬರು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧೀರ್‌ ರಂಜನ್‌ ಚೌಧರಿ ಭಾಗಿಯಾಗಿದ್ದರು.

    ಸಭೆ ಮುಗಿದ ಕೂಡಲೇ ತಮ್ಮ ನಿವಾಸದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅಧೀರ್ ರಂಜನ್ ಚೌಧರಿ, ಇಬ್ಬರು ಚುನಾವಣಾ ಆಯೋಗಗಳ ಆಯ್ಕೆಗೆ ಆರು ಹೆಸರುಗಳು ಸಮಿತಿಯ ಮುಂದೆ ಬಂದಿದ್ದವು. ಹೆಚ್ಚಿನ ಸದಸ್ಯರು ಸಂಧು ಮತ್ತು ಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಿದರು.  ಇದನ್ನೂ ಓದಿ: ಬಾಕಿ ಉಳಿದ ಬಿಜೆಪಿಯ 5 ಕ್ಷೇತ್ರಗಳಲ್ಲೂ ಹಾಲಿ ಸಂಸದರಿಗೆ ಟಿಕೆಟ್ ಮಿಸ್? – ಕಾರಣ ಏನು? 

    ಸಂಧು ಮತ್ತು ಜ್ಞಾನೇಶ್ ಕುಮಾರ್ 1988 ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿಗಳಾಗಿದ್ದಾರೆ. ಸಂಧು ಉತ್ತರಾಖಂಡ್ ಕೇಡರ್‌ನಿಂದ ಬಂದಿದ್ದರೆ, ಕುಮಾರ್ ಕೇರಳ ಕೇಡರ್‌ನಿಂದ ಆಯ್ಕೆ ಆಗಿದ್ದರು.

    ಸಂಧು ಅವರು ಈ ಹಿಂದೆ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಸೇರಿದಂತೆ ಪ್ರಮುಖ ಸರ್ಕಾರಿ ಹುದ್ದೆಗಳನ್ನು ನಿಭಾಯಿಸಿದ್ದಾರೆ.

    ಜ್ಞಾನೇಶ್ ಕುಮಾರ್ ಅವರು ಸಂಸದೀಯ ವ್ಯವಹಾರಗಳ ಸಚಿವಾಲಯ ಮತ್ತು ಅಮಿತ್ ಶಾ ನೇತೃತ್ವದ ಸಹಕಾರ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಗೃಹ ಸಚಿವಾಲಯದ ಕಾಶ್ಮೀರ ವಿಭಾಗದ ಮುಖ್ಯಸ್ಥರಾಗಿ ಆರ್ಟಿಕಲ್ 370 ರದ್ದತಿಯನ್ನು ಮೇಲ್ವಿಚಾರಣೆ ಮಾಡಿದ್ದರು.

     

    ನೇಮಕಾತಿ ಹೇಗೆ ನಡೆಯುತ್ತೆ?
    ಕಳೆದ ಡಿಸೆಂಬರ್‌ನಲ್ಲಿ ಚುನಾವಣಾ ಆಯೋಗದ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಕಾನೂನನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಇದರ ಅನ್ವಯ ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ.

    ಮೊದಲು ಶೋಧ ಸಮಿತಿಯನ್ನು ರಚಿಸಲಾಗುತ್ತದೆ. ಕೇಂದ್ರ ಕಾನೂನು ಸಚಿವ, ಕೇಂದ್ರ ಸರ್ಕಾರದ ಕಾರ್ಯದರ್ಶಿ ರ‍್ಯಾಂಕ್‌ನ ಇಬ್ಬರು ಅಧಿಕಾರಿಗಳು ಈ ಸಮಿತಿಯ ಸದ್ಯಸರಾಗಿರುತ್ತಾರೆ. ಇವರು ಐವರು ಹೆಸರುಗಳನ್ನು ಸೂಚಿಸಬೇಕು. ನಂತರ ಈ ಪಟ್ಟಿಯ ಆಯ್ಕೆ ಸಮಿತಿ ಮುಂದೆ ಹೋಗುತ್ತದೆ. ಈ ಸಮಿತಿಯಲ್ಲಿ ಪ್ರಧಾನಿ, ವಿರೋಧ ಪಕ್ಷದ ನಾಯಕ (ಅಧಿಕೃತ ವಿರೋಧ ಪಕ್ಷ ಇಲ್ಲದೇ ಇದ್ದರೆ, ಲೋಕಸಭೆಯ ಅತ್ಯಂತ ದೊಡ್ಡ ಪ್ರತಿ ಪಕ್ಷದ ನಾಯಕ) ಹಾಗೂ ಪ್ರಧಾನಿ ನೇಮಿಸಿದ ಸಂಪುಟ ದರ್ಜೆಯ ಸಚಿವ ಸದಸ್ಯರಾಗಿರುತ್ತಾರೆ.

    ಈ ಐವರ ಬಗ್ಗೆ ಆಯ್ಕೆ ಸಮಿತಿ ಚರ್ಚಿಸಿ ನೇಮಕ ಮಾಡಬೇಕು. ಶೋಧ ಸಮಿತಿ ಸೂಚಿಸಿದ ಹೆಸರುಗಳನ್ನೇ ಆಯ್ಕೆ ಸಮಿತಿಯು ಗಣನೆಗೆ ತೆಗೆದುಕೊಳ್ಳಬೇಕಿಲ್ಲ. ಆ ಪಟ್ಟಿಯಲ್ಲಿ ಇಲ್ಲದೇ ಇದ್ದವರನ್ನೂ ನೇಮಕ ಮಾಡಬಹುದು.