Tag: ಲೋಕಸಭಾ ಚುನಾವಣೇ 2019

  • ಬೆಂಗ್ಳೂರಿಗರ ಮೇಲಿನ ಅಪವಾದ ಅಳಿಸಿ ಹಾಕಲು ಮತದಾನ ಮಾಡಿ-ಡಿವಿಎಸ್ ಮನವಿ

    ಬೆಂಗ್ಳೂರಿಗರ ಮೇಲಿನ ಅಪವಾದ ಅಳಿಸಿ ಹಾಕಲು ಮತದಾನ ಮಾಡಿ-ಡಿವಿಎಸ್ ಮನವಿ

    ಬೆಂಗಳೂರು: ಇಂದು ರಾಜ್ಯಾದ್ಯಂತ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಬೆಂಗಳೂರಿಗೆ ಒಂದು ಅಪವಾದವಿದೆ. ಈ ಅಪವಾದವನ್ನು ಅಳಿಸಿಹಾಕಲು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು ಎಂದು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ. ವಿ ಸದಾನಂದ ಗೌಡ ಮನವಿ ಮಾಡಿದ್ದಾರೆ.

    ಕುಟುಂಬ ಸಮೇತರಾಗಿ ಹೆಬ್ಬಾಳದ ಭೂಪಸಂದ್ರದ ಮತಗಟ್ಟೆಗೆ ಬಂದಿರುವ ಡಿ.ವಿ ಸದಾನಂದಗೌಡರು ಮೊದಲು ಮತದಾನ ಮಾಡಿದರು.

    ಮತದಾನ ಪ್ರಕ್ರಿಯೆಗೂ ಮುಂಚೆಯೇ ಮತಗಟ್ಟೆಗೆ ಬಂದ ಡಿವಿಎಸ್, ಪ್ರತಿಬಾರಿ ಕ್ಯೂ ನಲ್ಲಿ ನಿಂತು ಮತದಾನ ಪ್ರಾರಂಭವಾಗುವ ವೇಳೆಗೆ ಕುಟುಂಬ ಸಮೇತ ಮತದಾನ ಮಾಡುತ್ತೇವೆ. ಇಡೀ ಕ್ಷೇತ್ರ ವ್ಯಾಪ್ತಿ ಸಂಚಾರ ನಡೆಸಬೇಕಾಗುತ್ತೆ ಈ ಹಿನ್ನೆಲೆಯಲ್ಲಿ ಬೆಳಗ್ಗೆ ಮತದಾನ ಮಾಡಿ ತೆರಳುತ್ತೇನೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ದೇಶದ ಹಿತದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ಬೆಂಗಳೂರಿನಲ್ಲಿ ವಿದ್ಯಾವಂತರು ಮತದಾನ ಮಾಡುವುದಿಲ್ಲವೆಂದು ಅಪವಾದವಿದೆ. ಈ ಹಿನ್ನಲೆ ಬೆಂಗಳೂರಿನ ಜನರು ಈ ಅಪವಾದ ಅಳಿಸಿಹಾಕಲು ಹೆಚ್ವಿನ ಪ್ರಮಾಣದಲ್ಲಿ ಮತದಾನ ಮಾಡಬೇಕು. ಈ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಗೌರವ ನೀಡಬೇಕು ಎಂದು ಮನವಿ ಮಾಡಿದರು.

  • ಮತಗಟ್ಟೆ ಬಾಗಿಲಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

    ಮತಗಟ್ಟೆ ಬಾಗಿಲಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

    ಕೋಲಾರ: ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಮತಗಟ್ಟೆಯ ಬಾಗಿಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಕೋಲಾರದಲ್ಲಿ ನಡೆದಿದೆ.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲೊಚರುವಪಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 94 ರಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗಿನ ಜಾವ ದುಷ್ಕರ್ಮಿಗಳು ಬಾಗಿಲಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಜ್ಯದಲ್ಲಿ ಲೋಕಸಭೆಯ ಮೊದಲ ಹಂತದ ಮತದಾನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು ಒಟ್ಟು 14 ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಉಡುಪಿ- ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

    ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕೆ. ಎಚ್ ಮುನಿಯಪ್ಪ ಸ್ಪರ್ಧಿಸಿದ್ರೆ, ಬಿಜೆಪಿಯಿಂದ ಎಸ್. ಮುನಿಸ್ವಾಮಿ ಚುನಾವಣಾ ಕಣದಲ್ಲಿದ್ದಾರೆ.

  • ಲೋಕ ಸಮರ ಸೋತ್ರೆ ಸರ್ಕಾರ ಉಳಿಯಲ್ಲ – ಸಿದ್ದರಾಮಯ್ಯ ಹೇಳಿಕೆಯಿಂದ ಸಂಚಲನ

    ಲೋಕ ಸಮರ ಸೋತ್ರೆ ಸರ್ಕಾರ ಉಳಿಯಲ್ಲ – ಸಿದ್ದರಾಮಯ್ಯ ಹೇಳಿಕೆಯಿಂದ ಸಂಚಲನ

    ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಸೋತ್ರೆ ಸಮ್ಮಿಶ್ರ ಸರ್ಕಾರ ಉಳಿಯಲ್ವಾ ಎನ್ನುವ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಮಾತು ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ.

    ಸಮ್ಮಿಶ್ರ ಸರ್ಕಾರ 5 ವರ್ಷ ಇರಬೇಕು. ಆದ್ರೆ ನವು ಸೋತ್ರೆ ಸರ್ಕಾರ ಇರುತ್ತದೆಯಾ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ನಾನು ಮಂತ್ರಿಯಾಗಿಲ್ಲ. ಮುಖ್ಯಮಂತ್ರಿ ಆಗಿನೂ ಆಯ್ತು. ಮುಗೀತು ನನ್ನದು. ಸರ್ಕಾರ ಇದೆಯಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾರೆ. ಜಿ.ಟಿ ದೇವೇಗೌಡ ಹಾಗೂ ಸಾರಾ ಮಹೇಶ್, ತಮ್ಮಣ್ಣ, ಪುಟ್ಟರಾಜು ಇವೆಲ್ಲರೂ ಮಂತ್ರಿಗಳಾಗಿದ್ದಾರೆ. ನಾನೇನೂ ಇಲ್ಲ. ನಮ್ಮವರು 27 ಮಂದಿ ಇದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬರದಂಗೆ ನೋಡಿಕೊಳ್ಳಬೇಕಲ್ವ. ಅದಕ್ಕೆ ತಾನೇ ನಾವು ಒಂದಾಗಿರೋದು ಎಂದು ಹೇಳಿದ್ದಾರೆ.

    ಕಳೆದ ಚುನಾವಣೆಯಲ್ಲಿ ಕೆಲವರು ನಾನು ಗೆಲ್ಲಬಾರದು, ಸಿಎಂ ಆಗಬಾರದು, ನಾನು ಗೆದ್ರೆ ಖರ್ಗೆ, ಪರಮೇಶ್ವರ್ ಸಿಎಂ ಆಗಲ್ಲ ಎಂದು ಚೀಟಿ ಹಂಚಿದ್ರು. ಆದ್ರೀಗ ಸಿಎಂ ಆಗಿರೋದು ಯಾರು ಎಂದು ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ನೆನಪು ಮಾಡಿಕೊಂಡ್ರು. ಚುನಾವಣೆಯ ಮೇಲೆ ಆಸಕ್ತಿ ಕಡಿಮೆ ಆಗಿದ್ದು ಇನ್ಮುಂದೆ ಎಲೆಕ್ಷನ್‍ಗೆ ನಿಲ್ಲಲ್ಲ. ರಾಹುಲ್ ಗಾಂಧಿ ಪ್ರಧಾನಿ ಆದ್ರೆ ಸಾಕು ಎಂದು ಓಡಾಡ್ತಿದ್ದೇನೆ. ಬಿಜೆಪಿ ವಿರುದ್ಧದ ಹೋರಾಟ ನಿಲ್ಲಿಸಲ್ಲ ಎಂದು ಹೇಳಿದ್ರು. ಇಲ್ಲಿ ಬಿಜೆಪಿ ಗೆಲ್ಲಬಾರದು ನಾವು ಸೋತ್ರೆ ಸರ್ಕಾರ ಇರುತ್ತಾ, ಮೈತ್ರಿ ಅಭ್ಯರ್ಥಿ ಗೆಲ್ಬೇಕು ಎಂದು ಹೇಳಿದ್ರು.

    ಮೈಸೂರಲ್ಲಿ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯ್‍ಶಂಕರ್ ಪರ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಜಿ.ಟಿ ದೇವೇಗೌಡ ಜೊತೆಯಾಗಿ ಪ್ರಚಾರ ನಡೆಸಿದ್ರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಚುನಾವಣೆಯಲ್ಲಿ ನಂಗೆ ಯಾವಾಗ್ಲೂ ಇಲವಾ ಕ್ಷೇತ್ರದಲ್ಲಿ ಲೀಡ್ ಬರುತ್ತೆ. ಆದ್ರೆ ಅದೇನಾಯ್ತೋ ಕಳೆದ ಚುನಾವಣೆಯಲ್ಲಿ ನಂಗೆ ನೀವು ಲೀಡ್ ಕೊಟ್ಟಿಲ್ಲ ಎಂದು ಜಿಟಿ ದೇವೇಗೌಡರ ಎದುರೇ ಮತದಾರರನ್ನು ಪ್ರಶ್ನಿಸಿದ್ರು.

  • ಇಂದು ಹಾಸನದಲ್ಲಿ ಪ್ರಜ್ವಲ್ ನಾಮಿನೇಷನ್ – ಬೆಳ್ಳಂಬೆಳಗ್ಗೆ ಟೆಂಪಲ್ ರನ್

    ಇಂದು ಹಾಸನದಲ್ಲಿ ಪ್ರಜ್ವಲ್ ನಾಮಿನೇಷನ್ – ಬೆಳ್ಳಂಬೆಳಗ್ಗೆ ಟೆಂಪಲ್ ರನ್

    ಹಾಸನ: ಇಂದು ಹಾಸನ ಲೋಕಸಭಾ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಲಿದ್ದು, ತಂದೆ ಎಚ್‍ಡಿ ರೇವಣ್ಣ ಇಟ್ಟಿರುವ ಮುಹೂರ್ತ ಪ್ರಕಾರವೇ ಬೆಳಗ್ಗೆಯಿಂದಲೇ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.

    ಬೆಳಗ್ಗೆಯೇ 5.30ಕ್ಕೆ ಹೊಳೆನರಸೀಪುರದಲ್ಲಿರುವ ಮನೆಯಲ್ಲಿ ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಹೊಳೆನರಸೀಪುರದಲ್ಲಿರುವ ಲಕ್ಷ್ಮೀನರಸಿಂಹ ಸ್ವಾಮಿ, ಹರದನಹಳ್ಳಿಯ ದೇವೇಶ್ವರ ದೇವಸ್ಥಾನ, ಆಂಜನೇಯ ದೇಗುಲದಲ್ಲೂ ಪೂಜೆ ಸಲ್ಲಿಸಿದ್ರು.

    ಬೆಳಗ್ಗೆ 9.30ರ ವೇಳೆಗೆ ಪೂಜೆ ಕಾರ್ಯಗಳು ಮುಗಿಯಲಿವೆ. ಬಳಿಕ ಹಾಸನಕ್ಕೆ ಬಂದು ನಗರದ ಎನ್‍ಆರ್ ಸರ್ಕಲ್‍ನಲ್ಲಿರುವ ಹೇಮಾವತಿ ಪ್ರತಿಮೆಯಿಂದ ರೋಡ್ ಶೋ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಮಧ್ಯಾಹ್ನ 12.05ರಿಂದ 12.45ರೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ. ಹಾಸನ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.


    ಪುತ್ರನ ನಾಮಪತ್ರಕ್ಕೆ `ವಾಸ್ತು’ ಮಂತ್ರ..!
    ಪ್ರಜ್ವಲ್ ನಾಮಿನೇಷನ್‍ಗೆ ಇದೇ ದಿನ ಯಾಕೆ ಆಯ್ಕೆ ಮಾಡ್ಕೊಂಡ್ರು ಎಂದು ಚರ್ಚೆ ಶುರುವಾಗಿದೆ. ರೇವಣ್ಣ ವಾಸ್ತು ಪ್ರೀತಿ ಎಲ್ಲರಿಗೂ ಗೊತ್ತಿರೋದೇ. ಅದೆಷ್ಟರ ಮಟ್ಟಿಗೆ ಅಂದ್ರೆ ಈ ಹಿಂದೆ ಕಟ್ಟಡವೊಂದರ ಶಂಕುಸ್ಥಾಪನೆ ವೇಳೆ ಪೂಜಾರಿಗೆಯೇ ಪಾಠ ಮಾಡಿದ್ದರು. ಆ ಬಳಿಕ ಬಜೆಟ್ ಇರಲಿ, ಕಾಮಗಾರಿ ಉದ್ಘಾಟನೆ ಇರಲಿ, ಖಾಸಗಿ ಕೆಲಸಗಳೇ ಇರಲಿ. ರೇವಣ್ಣ ವಾಸ್ತು, ಮುಹೂರ್ತ ಎಲ್ಲವೂ ನೋಡೇ ನೋಡ್ತಾರೆ. ಹಾಗೆಯೇ ಇದೀಗ ಪುತ್ರ ಪ್ರಜ್ವಲ್ ನಾಮಪತ್ರ ಸಲ್ಲಿಕೆಗೆ ಕೂಡ ಇವರೇ ಮುಹೂರ್ತ ಇಟ್ಟಿದ್ದಾರೆ. ಎಲ್ಲಾ ಶುಭಕಾರ್ಯಗಳನ್ನು ಶುಕ್ರವಾರವೇ ಮಾಡೋ ರೇವಣ್ಣ, ಮಗನ ನಾಮಪತ್ರ ಸಲ್ಲಿಕೆಗೂ ಶುಕ್ರವಾರವನ್ನೇ ಆಯ್ದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.