Tag: ಲೋಕಸಭಾ ಚುನಾವಣೆ2019

  • ಅಯೋಧ್ಯೆ ರಾಮಮಂದಿರ ವಿಚಾರಣೆ – ನ್ಯಾಯಾಧೀಶರಿಗೆ ಕಾಂಗ್ರೆಸ್ ಬೆದರಿಕೆ ಹಾಕಿತ್ತು : ಪ್ರಧಾನಿ ಮೋದಿ

    ಅಯೋಧ್ಯೆ ರಾಮಮಂದಿರ ವಿಚಾರಣೆ – ನ್ಯಾಯಾಧೀಶರಿಗೆ ಕಾಂಗ್ರೆಸ್ ಬೆದರಿಕೆ ಹಾಕಿತ್ತು : ಪ್ರಧಾನಿ ಮೋದಿ

    ಜೈಪುರ: 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಮಮಂದಿರ ವಿವಾದ ಪ್ರಕರಣದ ವಿಚಾರಣೆಯನ್ನು ತಡಮಾಡುವಂತೆ ಕಾಂಗ್ರೆಸ್ ಹೇಳಿತ್ತು. ಅಲ್ಲದೇ ಇದನ್ನು ನಿರಾಕರಿಸಿದ ನ್ಯಾಯಮೂರ್ತಿಗಳಿಗೆ ಮಹಾಭಿಯೋಗ ಮಾಡುವುದಾಗಿ ಬೆದರಿಕೆ ಹಾಕಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.

    ಮಧ್ಯಪ್ರದೇಶದ ಅಲ್ವಾರ್ ಚುನಾವಣಾ ಪ್ರಚಾರ ಯಾತ್ರೆಯ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷ ರಾಜಕೀಯದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಎಳೆದು ತರಲು ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.

    ಕಾಂಗ್ರೆಸ್ ಪಕ್ಷ ದೇಶದ ನ್ಯಾಯಾಂಗ ವ್ಯವಸ್ಥೆ ಭಯದ ವಾತಾವರಣದಲ್ಲಿ ಉಂಟಾಗುವಂತೆ ಮಾಡುತ್ತಿದೆ. ಅಲ್ಲದೇ ಕಾಂಗ್ರೆಸ್ ನಾಯಕರೊಬ್ಬರು 2019ರ ಚುನಾವಣೆ ಕಾರಣ ನೀಡಿ ಅಯೋಧ್ಯೆ ವಿವಾದದ ವಿಚಾರಣೆಯನ್ನು ಮುಂದೂಡುವಂತೆ ಕೇಳಿದ್ದರು. ಅಲ್ಲದೇ ಇದಕ್ಕೆ ಒಪ್ಪದ ನ್ಯಾಯಮೂರ್ತಿಗಳ ವಿರುದ್ಧ ಮಹಾಭಿಯೋಗದ ಬೆದರಿಕೆ ಹಾಕಿದ್ದರು. ಇಂತಹ ವಿಚಾರಗಳನ್ನು ದೇಶದ ಜನ ಹೇಗೆ ಸ್ವೀಕರಿಸುತ್ತಾರೆ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ:ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗಕ್ಕೆ ಮನಮೋಹನ್ ಸಿಂಗ್ ಸಹಿ ಮಾಡಿಲ್ಲ ಏಕೆ?

    ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅಯೋಧ್ಯೆ ವಿವಾದ ಪ್ರಕರಣವನ್ನು 2019ರ ಚುನಾವಣೆಯ ಕಾರಣ ತ್ವರಿತ ವಿಚಾರಣೆ ನಡೆಸದಂತೆ ಹೇಳಿದ್ದರು. ಅಲ್ಲದೇ ಸುನ್ನಿ ವಕ್ಫ್ ಬೋರ್ಡ್ ಸಲಹೆಯಂತೆ ಈ ಕುರಿತು ನ್ಯಾಯಾಲಯಕ್ಕೆ ತಿಳಿಸಿದ್ದರು ಎಂದು ಆರೋಪಿಸಿದರು. ಇದನ್ನೂ ಓದಿ:ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗ ನಡೆಯುವುದು ಹೇಗೆ?

    ಹಿಂದೂ ಸಂಘಟನೆಗಳು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸುಗ್ರೀವಾಜ್ಞೆ ಕೋರಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಶಿವಸೇನೆ ಕೂಡ ಈ ಕುರಿತು ಬೃಹತ್ ಯಾತ್ರೆಯನ್ನು ಕೈಗೊಂಡಿದೆ. ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೋದಿ ನೇತೃತ್ವದ ಸರ್ಕಾರ ಮಂದಿರ ನಿರ್ಮಾಣ ಮಾಡಿಲ್ಲ ಎಂದಾದರೆ, ಅದು ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv