Tag: ಲೋಕಸಭಾ ಚುನಾವಣೆ 2019

  • ತೋಳ ಬಂತು ತೋಳ ಕಥೆ ಹೇಳ್ತಿದ್ದಾರೆ ರಮೇಶ್ ಜಾರಕಿಹೊಳಿ: ಲಕ್ಷ್ಮಿ ಹೆಬ್ಬಾಳ್ಕರ್

    ತೋಳ ಬಂತು ತೋಳ ಕಥೆ ಹೇಳ್ತಿದ್ದಾರೆ ರಮೇಶ್ ಜಾರಕಿಹೊಳಿ: ಲಕ್ಷ್ಮಿ ಹೆಬ್ಬಾಳ್ಕರ್

    – ನಾಯಕರನ್ನು ಹುಟ್ಟು ಹಾಕುವ ಪಕ್ಷಕ್ಕೆ ಯಾರು ಅನಿವಾರ್ಯವಲ್ಲ
    – ಇಂತಹ ನಾಯಕರು ಹೋದರೆ ಸೆಕೆಂಡ್ ಲೈನ್ ನಾಯಕರು ಮುಂದೆ ಬರ್ತಾರೆ

    ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ತೋಳ ಬಂತು ತೋಳದ ಕಥೆಯನ್ನು ಹೇಳಿಕೊಂಡು ಬರುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವ್ಯಂಗ್ಯವಾಡಿದ್ದಾರೆ.

    ರಮೇಶ್ ಜಾರಕಿಹೊಳಿ ಪಕ್ಷ ತೊರೆಯುವ ವಿಚಾರದ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ತೋಳ ಬಂತು ತೋಳ ಬಂತು ಎಂಬಂತೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಿದ್ದಾರೆ. ನಾನು ಸೇರಿದಂತೆ ಪಕ್ಷಕ್ಕೆ ಯಾರು ಅನಿವಾರ್ಯ ಇಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಯಾರು ಅನಿವಾರ್ಯ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

    ಮತದಾನ ದಿನ ಅತ್ಯಂತ ಮಹತ್ವದ ದಿನವಾಗಿದ್ದು, ಇಂದು ಇಂತಹ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಪಕ್ಷದಲ್ಲಿ ಬಹಳಷ್ಟು ಜನ ಬರ್ತಾರೆ, ಹೋಗುತ್ತಿರುತ್ತಾರೆ. ರಮೇಶ್ ಜಾರಕಿಹೊಳಿ ಒಬ್ಬರು ಪಕ್ಷದಿಂದ ಹೊರ ಹೋದರೆ ಕಾಂಗ್ರೆಸ್‍ಗೆ ಯಾವುದೇ ನಷ್ಟವಿಲ್ಲ. ಪಕ್ಷ ನಾಯಕರನ್ನು ಹುಟ್ಟಿಸುತ್ತದೆ. ಹೊಸ ನಾಯಕ, ನಾಯಕತ್ವವನ್ನು ಹುಟ್ಟಿಸುವ ಸಾಮಾರ್ಥ್ಯ ಕಾಂಗ್ರೆಸ್ ಹೊಂದಿದೆ. ಇಂತಹ ನಾಯಕರು ಹೋದರೆ ಸೆಕೆಂಡ್ ಲೈನ್ ನಾಯಕರು ಮುಂದೆ ಬರಲು ಸಾಧ್ಯವಾಗುತ್ತದೆ. ಪಕ್ಷದಲ್ಲಿ ಇರಬೇಕೋ ಅಥವಾ ಬಿಡಬೇಕೋ ಎಂಬುವುದು ರಮೇಶ್ ಜಾರಕಿಹೊಳಿ ಅವರ ವೈಯಕ್ತಿಕ ವಿಚಾರ ಎಂದರು.

    ಮತದಾನ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ರಾಜಕೀಯಕ್ಕೆ ಬಂದಾಗಿನಿಂದ ಸಂಸದೆ ಅಗಬೇಕೆಂಬ ಆಸೆ ನನಗಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಸಂಸದ ಚುನಾವಣೆಗೆ ನಾನೇ ಸ್ಪರ್ಧೆ ಮಾಡಿದ್ದೇನೆ ಎಂದು ತಿಳಿದುಕೊಂಡು ನನಗೆ ನೀಡಲಾಗಿದ್ದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ವಿರೂಪಾಕ್ಷಿ ಸಾಧುನವರ್ ಒಳ್ಳೆಯ ಕುಟುಂಬದಿಂದ ಬಂದ ನಾಯಕರಾಗಿದ್ದು, ಹೆಚ್ಚು ಮತಗಳಿಂದ ಗೆಲ್ಲಲಿ ಎಂದು ಶುಭ ಹಾರೈಸಿದರು.

    ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಕ್ಷದಿಂದ ಹೊರ ಹೋದ ಮೇಲೆ ಮಾತನಾಡುತ್ತೇನೆ. ಕಳೆದ 30 ರಿಂದ 35 ದಿನ ನನ್ನ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದರಿಂದ ಹೆಚ್ಚಿನ ಮಾಹಿತಿ ನನಗಿಲ್ಲ. ಇಲ್ಲಿ ನಾನೇ ಅಭ್ಯರ್ಥಿ ಎಂದು ತಿಳಿದು ಪ್ರಚಾರ ಮಾಡಿದ್ದೇನೆ ಎಂದು ಹೆಬ್ಬಾಳ್ಕರ್ ತಿಳಿಸಿದರು.

    ಸಮುದ್ರ ಮಥನವಾದಾಗ ಅಮೃತ ಮತ್ತು ವಿಷ ಎರಡೂ ಬರುತ್ತದೆ. ಎರಡನ್ನೂ ಸೇವಿಸಲು ಸಿದ್ಧವಾಗಬೇಕು. ಇಂತಹ ಸೂಕ್ಷ್ಮ ವಿಚಾರಗಳನ್ನು ಹೈಕಮಾಂಡ್ ಮತ್ತು ರಾಜ್ಯದ ನಾಯಕರು ನೋಡಿಕೊಳ್ಳುತ್ತಾರೆ. ನಮ್ಮ ಒಂದು ಹೇಳಿಕೆಯಿಂದ ಯಾವುದೇ ಬದಲಾವಣೆಗಳು ಆಗಲ್ಲ. ಹೈಕಮಾಂಡ್ ಎಲ್ಲರೂ ಗಣನೆಗೆ ತೆಗದುಕೊಂಡು ಸಾಧಕ-ಬಾಧಕಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಅಷ್ಟು ಸುಲಭವಾಗಿ ಕಾಂಗ್ರೆಸ್ ಪಕ್ಷದ ಮೇಲೆ ದಾಳಿ (ರೇಡ್) ಮಾಡೋದಕ್ಕೆ ಸಾಧ್ಯವಿಲ್ಲ. ಪಕ್ಷವನ್ನೇ ಹಿಡಿತಕ್ಕೆ ತೆಗೆದುಕೊಳ್ಳುತ್ತೇನೆ ಅನ್ನೋದು ಮೂರ್ಖತನದ ಪರಮಾವಧಿ. ರಮೇಶ್ ಜಾರಕಿಹೊಳಿ ಅವರ ಬಗ್ಗೆ ಮಾಹಿತಿ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.

  • ಮತದಾರರು ಸರತಿ ಸಾಲಲ್ಲಿ ನಿಲ್ಲಂಗಿಲ್ಲ-ಮತದಾರನಿಗೆ ಸಿಗ್ತಿದೆ ಪರಿಪೂರ್ಣ ಗೌರವ!

    ಮತದಾರರು ಸರತಿ ಸಾಲಲ್ಲಿ ನಿಲ್ಲಂಗಿಲ್ಲ-ಮತದಾರನಿಗೆ ಸಿಗ್ತಿದೆ ಪರಿಪೂರ್ಣ ಗೌರವ!

    ವಯನಾಡು: ಮತದಾನಕ್ಕೆ ಬಂದ ಮತದಾರರು ಸಾಲಲ್ಲಿ ನಿಲ್ಲಬಾರದು, ಬಿಸಿಲಿನ ತಾಪ ಅವರಿಗೆ ತಟ್ಟಬಾರದು. ಮತದಾರರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎನ್ನುವ ಉದ್ದೇಶದಲ್ಲಿ ಮಾದರಿ ಮತಗಟ್ಟೆಯನ್ನು ಕೇರಳದ ವಯನಾಡ್ ನಲ್ಲಿ ಸ್ಥಾಪಿಸಲಾಗಿದೆ.

    ವಯನಾಡ್ ಕಲ್ಪೇಟಾ ನಗರದಲ್ಲಿ ಇಂತಹದೊಂದು ಮಾದರಿ ಮತಗಟ್ಟೆ ಸ್ಥಾಪಿಸಲಾಗಿದೆ. ಕಲ್ಪೇಟಾದಲ್ಲಿ ಮತದಾನ ಮಾಡಲು ಬರುವ ಮತದಾರರಿಗೆ ಮೊದಲ ಒಂದು ಟೋಕನ್ ನೀಡಲಾಗುತ್ತದೆ. ಟೋಕನ್ ಪಡೆದವರು ಮತಗಟ್ಟೆಯ ಮುಂಭಾಗದಲ್ಲಿ ಹಾಕಲಾಗಿರುವ ಕುರ್ಚಿಗಳಲ್ಲಿ ಕುಳಿತುಕೊಳ್ಳಬೇಕು. ಮತದಾರರು ಕುಳಿತು ಕೊಳ್ಳುವ ಸ್ಥಳದಲ್ಲಿ ಫ್ಯಾನ್ ವ್ಯವಸ್ಥೆ ಇದೆ. ಅಲ್ಲದೆ ಅವರು ಕಾಫಿ ಕೇಳಿದರೆ ಕಾಫಿ, ಟೀ ಕೇಳಿದರೆ ಟೀ ಕೂಡ ಕೊಡಲಾಗುತ್ತದೆ. ಅವರ ಟೋಕನ್ ನಂಬರ್ ಕೂಗಿದಾಗ  ಅವರು ಹೋಗಿ ಮತ ಹಾಕಬಹುದು.

    ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದಾರೆ. ಇಂದು ಬೆಳಗ್ಗೆಯಿಂದಲೇ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

  • ಬೆಳಗ್ಗೆ 11 ಗಂಟೆ- ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಗಿದೆ?

    ಬೆಳಗ್ಗೆ 11 ಗಂಟೆ- ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಗಿದೆ?

    ಬೆಂಗಳೂರು: ಕರ್ನಾಟಕದಲ್ಲಿ ಎರಡನೇ ಹಂತದ ಚುನವಣೆ ನಡೆಯುತ್ತಿದ್ದು, 14 ಕ್ಷೇತ್ರಗಳಲ್ಲಿ ಉತ್ತಮ ಮತದಾನವಾಗುತ್ತಿದೆ. ಬೆಳಗ್ಗೆ 11 ಗಂಟೆಯ ವೇಳೆಗೆ ಒಟ್ಟು 11.75% ಮತದಾನ ನಡೆದಿದೆ. ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಪ್ರಮಾಣದ 22.22% ಮತದಾನ ನಡೆದಿದ್ದರೆ, ರಾಯಚೂರಿನಲ್ಲಿ ಅತಿ ಕಡಿಮೆ 6.49% ಮತದಾನ ನಡೆದಿದೆ.

    ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಗಿದೆ?:
    ಬಾಗಲಕೋಟೆ: 8.77%
    ಬೆಳಗಾವಿ: 10.22%
    ಬಳ್ಳಾರಿ: 11.46%
    ಬೀದರ್: 9.55%

    ಬಿಜಾಪುರ: 6.89%
    ಚಿಕ್ಕೋಡಿ: 10.45%
    ದಾವಣಗೆರೆ: 11.96%
    ಧಾರವಾಡ: 16.26 %
    ಕಲಬುರಗಿ: 9.40%

    ಹಾವೇರಿ: 8.56%
    ಕೊಪ್ಪಳ: 15.3%
    ರಾಯಚೂರು: 6.49%
    ಶಿವಮೊಗ್ಗ: 11.08%
    ಉತ್ತರ ಕನ್ನಡ: 22.22%

     

  • ಈ ಬಾರಿಯೂ ಮತದಾನದ ಅವಕಾಶ ಕಳೆದುಕೊಂಡ್ರು ಜನಾರ್ದನ ರೆಡ್ಡಿ!

    ಈ ಬಾರಿಯೂ ಮತದಾನದ ಅವಕಾಶ ಕಳೆದುಕೊಂಡ್ರು ಜನಾರ್ದನ ರೆಡ್ಡಿ!

    ಬಳ್ಳಾರಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಅವರು ಮತದಾನ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

    ಬಳ್ಳಾರಿಯಲ್ಲಿ ಮತಚಲಾಯಿಸುವ ಹಕ್ಕು ಈ ಬಾರಿಯೂ ಜನಾರ್ದನ ರೆಡ್ಡಿಗೆ ಇಲ್ಲ. ಈ ಮೂಲಕ ಲೋಕಸಭಾ  ಚುನಾವಣೆಯಲ್ಲಿ  ಕೂಡ ಮತದಾನ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಬಳ್ಳಾರಿಗೆ ಎಂಟ್ರಿ ಮಾಡದಂತೆ ಕೋರ್ಟ್ ಷರತ್ತು ವಿಧಿಸಿತ್ತು. ಈ ಮಧ್ಯೆ ರೆಡ್ಡಿ ಮತದಾನ ಮಾಡಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಆದ್ರೆ ಕೋರ್ಟ್ ರೆಡ್ಡಿ ಮನವಿಯನ್ನು ಅಂಗೀಕರಿಸಲಿಲ್ಲ. ಹೀಗಾಗಿ ಅವರು ಬಳ್ಳಾರಿಯಲ್ಲಿ ಈ ಬಾರಿಯೂ ಮತದಾನ ಮಾಡಲ್ಲ ಎನ್ನಲಾಗಿದೆ.

    ಜನಾರ್ದನ ರೆಡ್ಡಿ ಮಗನಿಗೆ ಇದು ಮೊದಲ ಮತದಾನವಾಗಿದೆ. ಹೀಗಾಗಿ ಪತ್ನಿ, ಮಗ ಹಾಗೂ ಕುಟುಂಬಸ್ಥರು ಇಂದು ಬಳ್ಳಾರಿಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಜನಾರ್ದನರೆಡ್ಡಿ ಗದಗ್‍ನಲ್ಲಿ ಮತದಾನಕ್ಕೆ ನೋಂದಣಿ ಮಾಡಿಸಿರುವುದು ಕೂಡ ರದ್ದಾಗಿದೆ. ಈ ಎಲ್ಲಾ ಕಾರಣಗಳಿಂದ ರೆಡ್ಡಿಗೆ ಸದ್ಯ ಎಲ್ಲೂ ಮತದಾನ ಮಾಡುವ ಹಕ್ಕಿಲ್ಲ ಎಂಬುದಾಗಿ ತಿಳಿದುಬಂದಿದೆ. ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಜನಾರ್ದನ ರೆಡ್ಡಿ ಮತಚಲಾಯಿಸಿರಲಿಲ್ಲ.

  • ಮೊದಲ ಬಾರಿ ಮತದಾನ ಮಾಡಿ ಸಂದೇಶ ರವಾನಿಸಿದ್ರು ಹನುಮಂತ!

    ಮೊದಲ ಬಾರಿ ಮತದಾನ ಮಾಡಿ ಸಂದೇಶ ರವಾನಿಸಿದ್ರು ಹನುಮಂತ!

    ಹಾವೇರಿ: ಸರಿಗಮಪ ಮೂಲಕ ಮನೆಮತಾದ ಕುರಿಗಾಹಿ ಹನುಮಂತ ಸದೃಢ ದೇಶದ ನಿರ್ಮಾಣಕ್ಕಾಗಿ ತಮ್ಮ ಮೊದಲ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

    ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಮೊದಲ ಬಾರಿಗೆ ಮತದಾನ ಮಾಡಿದ್ದೇನೆ. ನೀವು ಕೂಡ ತಪ್ಪದೇ ಮತದಾನ ಮಾಡಿ. ಮತದಾನ ನಿಮ್ಮ ಹಕ್ಕಾಗಿದ್ದು, ನೀವೇ ಮತ ಚಲಾಯಿಸಿ. ಅಲ್ಲದೆ ಸೂಕ್ತವಾದ ಜನಪ್ರತಿನಿಧಿ ಆಯ್ಕೆ ಮಾಡಿ ಎಂದು ಇದೇ ವೇಳೆ ಜನರಿಗೆ ಸಂದೇಶ ರವಾನಿಸಿದ್ರು.


    ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಾವೇರಿಯ ಸವಣೂರು ತಾಲೂಕಿನ ಚಿಲ್ಲೂರುಬಡ್ನಿ ಗ್ರಾಮದ ಮತಗಟ್ಟೆ ನಂ.116 ರಲ್ಲಿ ಸಿಂಗರ್ ಹನುಮಂತ ಲಮಾಣಿ ತಮ್ಮ ಮತ ಚಲಾಯಿಸಿದ್ದಾರೆ. ಹನುಮಂತ ಹಾವೇರಿ ಎಲೆಕ್ಷನ್ ಐಕಾನ್ ಆಗಿದ್ದಾರೆ.

    ಕರ್ನಾಟಕ ಸೇರಿದಂತೆ 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 116 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಈಗಾಗಲೇ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತದಾನ ಮಾಡುವುದು ನಮ್ಮ ಜವಾಬ್ದಾರಿ. ತಪ್ಪದೇ ಮತ ಹಾಕಿ. ದೇಶದ ಭವಿಷ್ಯಕ್ಕಾಗಿ ನಿಮ್ಮ ಹಕ್ಕು ಚಲಾಯಿಸಿ.

  • ಇಂದು ಮೂರನೇ ಹಂತದ ಚುನಾವಣೆ – ಕಣದಲ್ಲಿರುವ ಪ್ರಮುಖರ ಪಟ್ಟಿ ಇಲ್ಲಿದೆ

    ಇಂದು ಮೂರನೇ ಹಂತದ ಚುನಾವಣೆ – ಕಣದಲ್ಲಿರುವ ಪ್ರಮುಖರ ಪಟ್ಟಿ ಇಲ್ಲಿದೆ

    -ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ

    ಬೆಂಗಳೂರು: ಇಂದು 2019ರ ಸಾರ್ವತ್ರಿಕ ಚುನಾವಣೆಯ ಮೂರನೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಒಟ್ಟು ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳಿಗೆ  ಚುನಾವಣೆ ನಡೆಯಲಿದೆ.

    ಎಲ್ಲೆಲ್ಲಿ ಚುನಾವಣೆ?
    ಕರ್ನಾಟಕ (14), ಗುಜರಾತ್ (26), ಕೇರಳ (20), ಗೋವಾ (2), ದಾದ್ರಾ ಮತ್ತು ನಗರ ಹವೇಲಿ (1), ದಮನ್ ಮತ್ತು ದಿಯು (1), ಅಸ್ಸಾಂ (4), ಬಿಹಾರ (5), ಛತ್ತೀಸ್‍ಗಢ (7), ಜಮ್ಮು ಮತ್ತು ಕಾಶ್ಮೀರ (1), ಮಹಾರಾಷ್ಟ್ರ (14), ಓರಿಸ್ಸಾ (6), ಉತ್ತರ ಪ್ರದೇಶ (10) ಮತ್ತು ಪಶ್ಚಿಮ ಬಂಗಾಳದ (5) ಕ್ಷೇತ್ರಗಳಲ್ಲಿ  ಇಂದು ಚುನಾವಣೆ ನಡೆಯಲಿದೆ.

    ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
    1. ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ (ಕಾಂಗ್ರೆಸ್) ವರ್ಸಸ್ ಉಮೇಶ್ ಜಾಧವ್ (ಬಿಜೆಪಿ)
    2. ರಾಂಪುರ: ಅಜಂ ಖಾನ್ (ಸಮಾಜವಾದಿ ಪಾರ್ಟಿ) ವರ್ಸಸ್ ಜಯಪ್ರದಾ (ಬಿಜೆಪಿ)
    3. ತಿರುವನಂತಪುರ: ಶಶಿ ತರೂರ್ (ಕಾಂಗ್ರೆಸ್) ವರ್ಸಸ್ ರಾಜಶೇಖರನ್ (ಬಿಜೆಪಿ)
    4. ಬಾರಮತಿ: ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ (ಎನ್‍ಸಿಪಿ) ವರ್ಸಸ್ ಕಾಂಚನಾ ಕುಲು (ಬಿಜೆಪಿ)
    5. ಮೈನ್‍ಪುರಿ: ಮುಲಾಯಂ ಸಿಂಗ್ ಯಾದವ್ (ಎಸ್‍ಪಿ) ವರ್ಸಸ್ ಪ್ರೇಮ್ ಸಿಂಗ್ ಶಾಕ್ಯ (ಬಿಜೆಪಿ)
    6. ಪಿಲಿಭಿಟ್: ವರುಣ್ ಗಾಂಧಿ (ಬಿಜೆಪಿ) ವರ್ಸಸ್ ಹೇಮ್‍ರಾಜ್ ವರ್ಮಾ (ಎಸ್‍ಪಿ)

    ಕರ್ನಾಟಕದ ಲೋಕ ಕ್ಷೇತ್ರಗಳು:
    ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ದಾವಣಗೆರೆ, ಹಾವೇರಿ, ಕೊಪ್ಪಳ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಬಳ್ಳಾರಿ ಮತ್ತು ರಾಯಚೂರು.

  • ಮಂಗಳವಾರ ಮೂರನೇ ಹಂತದ ಚುನಾವಣೆ – ಕಣದಲ್ಲಿರುವ ಪ್ರಮುಖರ ಪಟ್ಟಿ ಇಲ್ಲಿದೆ

    ಮಂಗಳವಾರ ಮೂರನೇ ಹಂತದ ಚುನಾವಣೆ – ಕಣದಲ್ಲಿರುವ ಪ್ರಮುಖರ ಪಟ್ಟಿ ಇಲ್ಲಿದೆ

    -ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ

    ಬೆಂಗಳೂರು: ಮಂಗಳವಾರ 2019ರ ಸಾರ್ವತ್ರಿಕ ಚುನಾವಣೆಯ ಮೂರನೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಒಟ್ಟು ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಚುನಾವಣೆ ನಡೆಯಲಿದೆ. ಈಗಾಗಲೇ ಮೂರನೇ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತ್ತಿದ್ದಾರೆ.

    ಎಲ್ಲೆಲ್ಲಿ ಚುನಾವಣೆ?
    ಕರ್ನಾಟಕ (14), ಗುಜರಾತ್ (26), ಕೇರಳ (20), ಗೋವಾ (2), ದಾದ್ರಾ ಮತ್ತು ನಗರ ಹವೇಲಿ (1), ದಮನ್ ಮತ್ತು ದಿಯು (1), ಅಸ್ಸಾಂ (4), ಬಿಹಾರ (5), ಛತ್ತೀಸ್‍ಗಢ (7), ಜಮ್ಮು ಮತ್ತು ಕಾಶ್ಮೀರ (1), ಮಹಾರಾಷ್ಟ್ರ (14), ಓರಿಸ್ಸಾ (6), ಉತ್ತರ ಪ್ರದೇಶ (10) ಮತ್ತು ಪಶ್ಚಿಮ ಬಂಗಾಳದ (5) ಕ್ಷೇತ್ರಗಳಲ್ಲಿ ಮಂಗಳವಾರ ಚುನಾವಣೆ ನಡೆಯಲಿದೆ.

    ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:
    1. ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ (ಕಾಂಗ್ರೆಸ್) ವರ್ಸಸ್ ಉಮೇಶ್ ಜಾಧವ್ (ಬಿಜೆಪಿ)
    2. ರಾಂಪುರ: ಅಜಂ ಖಾನ್ (ಸಮಾಜವಾದಿ ಪಾರ್ಟಿ) ವರ್ಸಸ್ ಜಯಪ್ರದಾ (ಬಿಜೆಪಿ)
    3. ತಿರುವನಂತಪುರ: ಶಶಿ ತರೂರ್ (ಕಾಂಗ್ರೆಸ್) ವರ್ಸಸ್ ರಾಜಶೇಖರನ್ (ಬಿಜೆಪಿ)
    4. ಬಾರಮತಿ: ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ (ಎನ್‍ಸಿಪಿ) ವರ್ಸಸ್ ಕಾಂಚನಾ ಕುಲು (ಬಿಜೆಪಿ)
    5. ಮೈನ್‍ಪುರಿ: ಮುಲಾಯಂ ಸಿಂಗ್ ಯಾದವ್ (ಎಸ್‍ಪಿ) ವರ್ಸಸ್ ಪ್ರೇಮ್ ಸಿಂಗ್ ಶಾಕ್ಯ (ಬಿಜೆಪಿ)
    6. ಪಿಲಿಭಿಟ್: ವರುಣ್ ಗಾಂಧಿ (ಬಿಜೆಪಿ) ವರ್ಸಸ್ ಹೇಮ್‍ರಾಜ್ ವರ್ಮಾ (ಎಸ್‍ಪಿ)

    ಕರ್ನಾಟಕದ ಲೋಕ ಕ್ಷೇತ್ರಗಳು:
    ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ದಾವಣಗೆರೆ, ಹಾವೇರಿ, ಕೊಪ್ಪಳ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಬಳ್ಳಾರಿ ಮತ್ತು ರಾಯಚೂರು

  • ಚುನಾವಣೆ ನಡೆದ ಮರುದಿನವೇ ಕಾಲ್ಕಿತ್ತ ಬಿಜೆಪಿ ಅಭ್ಯರ್ಥಿ!

    ಚುನಾವಣೆ ನಡೆದ ಮರುದಿನವೇ ಕಾಲ್ಕಿತ್ತ ಬಿಜೆಪಿ ಅಭ್ಯರ್ಥಿ!

    ಚಿತ್ರದುರ್ಗ: ಸಾಮಾನ್ಯವಾಗಿ ಚುನಾವಣೆಗೂ ಮುನ್ನ ಅಭ್ಯರ್ಥಿಗಳ ಪರ ವಿರೋಧ ಚರ್ಚೆಗಳು ಸರ್ವೆ ಸಾಮಾನ್ಯ. ಆದ್ರೆ ಚುನಾವಣೆ ಮುಗಿದ ಬಳಿಕವೂ ಸಾಮಾಜಿಕ ಜಾಲತಾಣಗಳಲ್ಲಿ ಕೈ ಹಾಗೂ ಬಿಜೆಪಿ ಕಾರ್ಯಕರ್ತರ ಸಮರ ಮುಂದುವರಿದಿದೆ.

    ಹೌದು. ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 18 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರೋ ಬಿಜೆಪಿ ಅಭ್ಯರ್ಥಿ ಆನೇಕಲ್ ನಾರಾಯಣಸ್ವಾಮಿ ಹಾಗೂ ಇಬ್ಬರು ಕೂಡ ವಲಸಿಗರು. ಹೀಗಾಗಿ ಅವರಿಗೆ ಟಿಕೆಟ್ ಸಿಕ್ಕ ಮರುದಿನವೇ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

                        ಮೈತ್ರಿ ಅಭ್ಯರ್ಥಿ ಚಂದ್ರಪ್ಪ

    ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಕೂಗು ಕೂಡ ಕೇಳಿಬಂದಿತ್ತು. ಆದರೂ ಯಾರ ಮಾತಿಗೂ ಸೊಪ್ಪು ಹಾಕದ ರಾಷ್ಟ್ರೀಯ ಪಕ್ಷಗಳು ಈ ಅಭ್ಯರ್ಥಿಗಳನ್ನೇ ಅಂತಿಮ ಅಖಾಡಕ್ಕೆ ಇಳಿಸಿದ್ದವು. ಹೀಗಾಗಿ ಚುನಾವಣೆಯೂ ಕೂಡ ಶಾಂತಿಯುತವಾಗಿ ನಡೆದು ಕಳೆದ ಬಾರಿಗಿಂತ ಅಧಿಕ ಪ್ರಮಾಣದಲ್ಲಿ ಶೇ 70.79 ರಷ್ಟು ಮತದಾನವಾಗಿದೆ. ಆದ್ರೆ ಚುನಾವಣೆ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಚಿತ್ರದುರ್ಗದಿಂದ ಕಾಲ್ಕಿತ್ತಿದ್ದಾರೆ.

    ಅಲ್ಲದೆ ಕೋಟೆನಾಡಿನಿಂದ ಆನೇಕಲ್‍ಗೆ ತೆರಳಿದ್ದು, ಫಲಿತಾಂಶಕ್ಕೂ ಮುನ್ನವೇ ನಾಪತ್ತೆಯಾಗಿರೋ ನಾರಾಯಣಸ್ವಾಮಿ ಮತ್ತೆ ವಾಪಾಸ್ ಬರೋದು ಬೇಡ. ಯಾಕಂದ್ರೆ ಇಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ ಎಂದು ಕೈ ಕಾರ್ಯಕರ್ತರು ಉದ್ವಿಗ್ನ ಹೇಳಿಕೆಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದನ್ನು ಕೈ ನಾಯಕರು ಕೂಡ ಸಮರ್ಥಿಸಿಕೊಂಡಿದ್ದಾರೆ.

    ಕೈ ನಾಯಕರ ಈ ಹೇಳಿಕೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೈ ನಾಯಕರು ಹೀಗೆ ಸಕ್ರಿಯರಾಗಿರುವಷ್ಟು ಈ ಜಿಲ್ಲೆಯ ಅಭಿವೃದ್ಧಿಯತ್ತ ಕಾಳಜಿ ವಹಿಸುತ್ತಿದ್ದರೆ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕೊನೆ ಪಕ್ಷ ತೀವ್ರ ತರಹದ ಸ್ಪರ್ಧೆಯನ್ನಾದರೂ ಒಡ್ಡಬಹುದಿತ್ತು. ಆದ್ರೆ ಇಂತಹ ಸಮಯ ವ್ಯರ್ಥ ಮಾಡುವ ಕೈ ನಾಯಕರ ಕಾಯಕಗಳಿಂದಲೇ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಮಲ ಅರಳಿದೆ. ಇನ್ನು ಈ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಪ್ರಚಂಡ ಬಹುಮತಗಳಿಂದ ಜಯಗಳಿಸಲಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಒಟ್ಟಾರೆ ಬೆಂಕಿ ಆರಿದರೂ ಹೊಗೆ ಮಾತ್ರ ನಿಲ್ಲಲಿಲ್ಲ ಎಂಬಂತೆ ಚುನಾವಣೆ ಮುಗಿದರೂ ಕೂಡ ಚಿತ್ರದುರ್ಗ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ವಾಕ್ ಸಮರ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ನಿಂತಿಲ್ಲ.

  • ವ್ಯಕ್ತಿ ಪೂಜೆ ಒಳ್ಳೆಯದಲ್ಲವೆಂದ್ರು ಕಲ್ಲಡ್ಕ ಭಟ್- ಮೋದಿ ವಿರುದ್ಧ ತಿರುಗಿಬಿತ್ತಾ ಆರ್‌ಎಸ್‌ಎಸ್?

    ವ್ಯಕ್ತಿ ಪೂಜೆ ಒಳ್ಳೆಯದಲ್ಲವೆಂದ್ರು ಕಲ್ಲಡ್ಕ ಭಟ್- ಮೋದಿ ವಿರುದ್ಧ ತಿರುಗಿಬಿತ್ತಾ ಆರ್‌ಎಸ್‌ಎಸ್?

    ಮಡಿಕೇರಿ: ಮಂಗಳೂರಲ್ಲಿ ಏ.18ರಂದು ಮತದಾನ ನಡೆದಿದೆ. ಈ ಸಲ ಮಂಗಳೂರಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಅಲೆ ಇದ್ದಿದ್ರಿಂದ ಮೋದಿಯವರೇ ಬಿಜೆಪಿ ಪ್ರಚಾರದ ಟಾಪಿಕ್ ಆಗಿದ್ದರು. ಅವರನ್ನೇ ಮುಂದಿಟ್ಟುಕೊಂಡು ಬಿಜೆಪಿ ಪ್ರಚಾರ ಮಾಡಿ ಮತ ಕೇಳಿತ್ತು.

    ಆದ್ರೆ ಈ ಬಗ್ಗೆ ಶನಿವಾರ ಮಡಿಕೇರಿಯಲ್ಲಿ ಮತನಾಡಿರುವ ಆರ್‍ಎಸ್‍ಎಸ್ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್, ಬಿಜೆಪಿ ಅಭ್ಯರ್ಥಿಗಳು ಬರೀ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಚುನಾವಣಾ ಯಾಚನೆ ನಡೆಸುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅಷ್ಟೇನೂ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮೋದಿ ಅವರ ಸಾಧನೆ ಹೆಸರಿನಲ್ಲಿ ಮತ ಕೇಳುವುದಕ್ಕಿಂತ ಆಯಾ ಕ್ಷೇತ್ರದ ಅಭ್ಯರ್ಥಿ ತಾನು ಮಾಡಿದ ಹಾಗೂ ಮಾಡಲಿರುವ ಸಾಧನೆಯನ್ನು ಹೇಳಿಕೊಂಡು ಮತ ಕೇಳುವುದು ಸೂಕ್ತ. ಮೋದಿ ಅವರ ಸಹಕಾರದಿಂದ ತಾನು ಕ್ಷೇತ್ರದ ಜನತೆಗಾಗಿ ಮಾಡಿರುವ ಸಾಧನೆ ಏನು ಎನ್ನುವುದನ್ನು ಅಭ್ಯರ್ಥಿಗಳು ಬಿಂಬಿಸಿಕೊಳ್ಳುವ ಮೂಲಕ ಮತ ಯಾಚಿಸಬೇಕು ಎಂದರು.

    ಓರ್ವ ವ್ಯಕ್ತಿಯ ಸಾಧನೆಗಳನ್ನು ಬಿಂಬಿಸಿಕೊಂಡು ಮತ ಕೇಳುವುದು ದೇಶದ ಭವಿಷ್ಯದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆಯಲ್ಲ. ವ್ಯಕ್ತಿ ಪೂಜೆ ನಮ್ಮ ಸಂಸ್ಕೃತಿಯಲ್ಲ ಎಂದೂ ಹೇಳಿದರು.

    ಬಿಜೆಪಿಯಲ್ಲಿ ಮೋದಿ ಅವರನ್ನೇ ಮುಂದಿನ ಪ್ರಧಾನಿಯಾಗಿ ಎಲ್ಲರೂ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಆದರೆ ಮಹಾಘಟಬಂಧನ್ ನಲ್ಲಿ ರಾಹುಲ್ ಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ, ದೇವೇಗೌಡ ಸೇರಿದಂತೆ ಯಾರು ಪ್ರಧಾನಿ ಎಂದೇ ಬಿಂಬಿಸುತ್ತಿಲ್ಲ. ಇದು ಮಹಾಘಟಬಂಧನ್ ನಾಯಕರ ಹತಾಶೆಯನ್ನು ಪ್ರದರ್ಶಿಸುತ್ತದೆ ಎಂದು ಅವರು ಟೀಕಿಸಿದರು.

    ಒಟ್ಟಿನಲ್ಲಿ ಪ್ರಭಾಕರ್ ಭಟ್ ಹೇಳಿಕೆಯಿಂದ ಲೋಕ ಸಮರದ ಹೊತ್ತಲ್ಲಿಯೇ ಆರ್‍ಎಸ್‍ಎಸ್ ಮೋದಿ ವಿರುದ್ಧ ತಿರುಗಿಬಿತ್ತಾ ಅನ್ನೋ ಪ್ರಶ್ನೆ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

  • ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿರುವ ಶಿವಮೊಗ್ಗ ಕ್ಷೇತ್ರ

    ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿರುವ ಶಿವಮೊಗ್ಗ ಕ್ಷೇತ್ರ

    – ಹಾಲಸ್ವಾಮಿ ಆರ್.ಎಸ್.

    ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಸದಾ ಮೊದಲ ಸಾಲಿನಲ್ಲೇ ಇರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಬರೀ ಸೋಲು-ಗೆಲುವಿಗಷ್ಟೇ ಸೀಮಿತವಾಗದೆ ರಾಜಕೀಯ ಭವಿಷ್ಯವನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ.

    ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸೀತಾರಾಮ ಕೇಸರಿ ಅವರು 1992ರಲ್ಲಿ ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪ ಅವರನ್ನು ಕೆಳಗಿಳಿಸಿ ವೀರಪ್ಪ ಮೂಯ್ಲಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿದ್ದರು. ಇದರಿಂದ ಕುದ್ದು ಹೋದ ಬಂಗಾರಪ್ಪ ಕಾಂಗ್ರೆಸ್ ತೊರೆದು ಕರ್ನಾಟಕ ಕಾಂಗ್ರೆಸ್ ಪಾರ್ಟಿ ಸ್ಥಾಪಿಸಿದರು. ಈ ಕೆಸಿಪಿ ಹೊಡೆತಕ್ಕೆ 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತತ್ತರಿಸಿ ಹೋಯಿತು. ಮತ್ತೆ ಕಾಂಗ್ರೆಸ್ ಸೇರಿದ ಬಂಗಾರಪ್ಪ 1997ರಲ್ಲಿ ಮತ್ತೆ ಕರ್ನಾಟಕ ವಿಕಾಸ ಪಾರ್ಟಿ ಸ್ಥಾಪಿಸಿದರು. ನಂತರ ಇದನ್ನೂ ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದರು. 2004ರಲ್ಲಿ ಮತ್ತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಹೀಗೆ ಬಂಗಾರಪ್ಪ ಅವರು ನಿರಂತರವಾಗಿ ಕಾಂಗ್ರೆಸ್ ಪಕ್ಷದ ಜೊತೆ ಹಾವು ಏಣಿ ಆಟ ಆಡಿದ ಪರಿಣಾಮವಾಗಿ, ನಂತರ ನಾಯಕತ್ವದ ಕೊರತೆ, ಒಳಸುಳಿಗಳ ಪರಿಣಾಮವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕೆಪಿಸಿಸಿಯ ಡಜನ್ ಗಟ್ಟಲೆ ನಾಯಕರು ಇಂದು ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಪರವಾಗಿ ಕಣದಲ್ಲಿ ಟೊಂಕಕಟ್ಟಿ ನಿಂತಿದ್ದಾರೆ.

    ಇದುವರೆಗೂ ನಾಲ್ಕು ಚುನಾವಣೆ ಎದುರಿಸಿರುವ ಮಧು ಬಂಗಾರಪ್ಪ ಮೂರರಲ್ಲಿ ಸೋತಿದ್ದಾರೆ. ಇದು ಇವರ ಐದನೇ ಚುನಾವಣೆ. ಕಳೆದ ವಿಧಾನಸಭಾ ಚುನಾವಣೆ, ಲೋಕಸಭೆಗೆ ನಡೆದ ಉಪ ಚುನಾವಣೆಯಲ್ಲಿ ಸೋತಿದ್ದಾರೆ. ಸೋಲಿನ ಹ್ಯಾಟ್ರಿಕ್ ಆಗುವುದಿಲ್ಲ ಎಂಬುದು ಅವರ ವಿಶ್ವಾಸ.

    ಮೈತ್ರಿ ಉಳಿಯಲು ಮಧು ಗೆಲುವು ಅನಿವಾರ್ಯ ಎಂಬ ಮಾತನ್ನು ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದ್ದಾರೆ. ರಾಜಕೀಯದಲ್ಲಿ ಯಾವುದೇ ಮೈತ್ರಿ ಕ್ಷಣಿಕವೂ ಅಲ್ಲ- ಶಾಶ್ವತವೂ ಅಲ್ಲ ಎನ್ನುವಂತೆ ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ನ ಮಧು ಬಂಗಾರಪ್ಪ ಅವರಿಗಾಗಿ ವೀರಾವೇಶದಿಂದ ಹೋರಾಡುವ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಸಿಲುಕಿದೆ. ಮೈತ್ರಿ ಪಕ್ಷಗಳ ನಡುವಿನ ಭಿನ್ನಮತ ಢಾಳಾಗಿ ಬಹಿರಂಗ ಆಗದಿದ್ದರೂ ಒಳಗಿನ ಕಿಚ್ಚು ಹಾಗೇ ಇದೆ. ಮುಖ್ಯವಾಗಿ ಭದ್ರಾವತಿ, ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಇಂಥ ಭಿನ್ನತೆಯ ನಡುವೆಯೇ ಅಭ್ಯರ್ಥಿ ಗೆಲುವಿಗಾಗಿ ಕೆಲಸ ನಡೆಯುತ್ತಿದೆ.

    ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳೇ ಸಿಗದ ಪರಿಸ್ಥಿತಿಯಲ್ಲಿ ಮಧು ಕೊರಳಿಗೆ ಹಾರ ಹಾಕಲಾಗಿದೆ. ಒಂದು ಲೆಕ್ಕದಲ್ಲಿ ಮಧು ಬಂಗಾರಪ್ಪ ಮೈತ್ರಿ ಕೂಟದ ಸಾಂದರ್ಭಿಕ ಶಿಶು ಎಂದರೆ ತಪ್ಪಾಗದು. ಈ ಶಿಶುವಿನ ಗೆಲವು ಮೈತ್ರಿಯ ಗೆಲವು- ಜಿಲ್ಲೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಗೆಲವು. ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಮಧು ಬಂಗಾರಪ್ಪ ಅವರ ರಾಜಕೀಯ ಭವಿಷ್ಯವನ್ನು ಈ ಚುನಾವಣೆ ನಿರ್ಣಯ ಮಾಡಲಿದೆ. ಈ ಎಲ್ಲಾ ಕಾರಣಗಳಿಂದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಗೆಲ್ಲಬೇಕಿದೆ. ಗೆಲ್ಲುವ ವಿಶ್ವಾಸ ಮೂಡಿಸಲು ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಸೇರಿಂದತೆ ರಣಧೀರರ ಪಡೆಯೇ ಶಿವಮೊಗ್ಗದಲ್ಲಿ ನೆಲೆಯೂರಿದೆ. ಈ ಪಡೆ ರಣತಂತ್ರಗಳು ಮತಗಳಾಗಿ ಪರಿವರ್ತನೆ ಆಗಬೇಕಷ್ಟೇ.

    ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಗೆಲುವು- ಸೋಲು ಅವರ ತಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಭವಿಷ್ಯ ನಿರ್ಧರಿಸಲಿದೆ. ಬಿಜೆಪಿಗಿಂತ ಈ ಗೆಲುವು ಯಡಿಯೂರಪ್ಪ ಅವರಿಗೆ ಅನಿವಾರ್ಯವಾಗಿದೆ. ಸರ್ಕಾರ ರಚನೆ ಮಾಡಲು ಹೋಗಿ ಕೈ ಸುಟ್ಟುಕೊಂಡ ಯಡಿಯೂರಪ್ಪ ಪಕ್ಷದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷ ಎಡವಿದರೆ ಅದರ ಹೊಣೆ ಯಡಿಯೂರಪ್ಪ ಒಬ್ಬರ ತಲೆಗೆ ಕಟ್ಟಲು ವೇದಿಕೆ ಸಜ್ಜಾಗಿದೆ. ಗೆದ್ದರೆ ಸಾಮೂಹಿಕ ನಾಯಕತ್ವ- ಸೋತರೆ ಪಕ್ಷದ ರಾಜ್ಯಾಧ್ಯಕ್ಷರೇ ಹೊಣೆ ಎನ್ನುವುದು ಬಿಜೆಪಿಯ ಸಾಂಪ್ರದಾಯಿಕ ಪದ್ಧತಿ. ಪಕ್ಷದ ದೆಹಲಿ ನಾಯಕರ ಇತ್ತೀಚಿನ ವರ್ತನೆಯಿಂದ ಇದನ್ನು ಯಡಿಯೂರಪ್ಪ ಮನದಟ್ಟು ಮಾಡಿಕೊಂಡಿದ್ದಾರೆ. ರಾಜ್ಯಾದ್ಯಂತ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕು ಹಾಗೇ ತಮ್ಮ ಮಗ ಬಿ.ವೈ.ರಾಘವೇಂದ್ರ ಕೂಡ ಶಿವಮೊಗ್ಗದಲ್ಲಿ ಗೆಲ್ಲಬೇಕು ಎಂಬ ಅನಿವಾರ್ಯತೆಯಲ್ಲಿ ಯಡಿಯೂರಪ್ಪ ಇದ್ದಾರೆ.

    ಈ ಬಾರಿ ಮಗನೂ ಗೆಲ್ಲುತ್ತಾನೆ, ರಾಜ್ಯದಲ್ಲೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತೆ, ಮೈತ್ರಿ ಖತಂಗೊಂಡು ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಸುವರ್ಣ ಅವಕಾಶ ಕಣ್ಮುಂದೆ ಇದೆ ಎಂಬ ಆಶಾವಾದದಲ್ಲಿ 76 ವರ್ಷದ ಬಿ.ಎಸ್.ಯಡಿಯೂರಪ್ಪ ಇದ್ದಾರೆ. ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ ಬಿಜೆಪಿಯ ಒಂದು ವರ್ಗದ ಅಸಹನೆಗೆ ಕಾರಣವಾಗಿದೆ. ಮತ್ತೆ ಸಿಎಂ ಆಗುವ ಬಯಕೆ, ಮಗನ ರಾಜಕೀಯ ಭವಿಷ್ಯ ರೂಪಿಸುವ ಕನಸು- ಈ ಎಲ್ಲಾ ಕಾರಣಗಳಿಂದ ಯಡಿಯೂರಪ್ಪ ಈ ಚುನಾವಣೆಯಲ್ಲಿ ತಮ್ಮ ಎಲ್ಲಾ ರೀತಿಯ ತಂತ್ರ-ಮಂತ್ರಗಳನ್ನು ಪ್ರಯೋಗಿಸಲು ಸಜ್ಜಾಗಿದ್ದಾರೆ.

    ಇನ್ನು ಕ್ಷೇತ್ರದ ಸಮಸ್ಯೆಗಳ ವಿಷಯಕ್ಕೆ ಬಂದರೆ ಬಗರ್ ಹುಕುಂ, ಅರಣ್ಯ ಹಕ್ಕು, ವಿಐಎಸ್ ಎಲ್, ಎಂಪಿಎಂ, ನೀರಾವರಿ ಯೋಜನೆಗಳು, ಮಂಗನಕಾಯಿಲೆ ಇತ್ಯಾದಿ ವಿಷಯಗಳ ಬಗ್ಗೆ ಎರಡೂ ಪಕ್ಷಗಳು ತಮಗೆ ಬೇಕಾದಂತೆ ವ್ಯಾಖ್ಯಾನ ಮಾಡುತ್ತಿವೆ. ಇಂಥ ಇನ್ನೂ ಹತ್ತಾರು ವಿಷಯಗಳಿಗೆ ಕೇಂದ್ರ- ರಾಜ್ಯ ಸರ್ಕಾರಗಳೆರಡೂ ಹೊಣೆಯಾಗಿವೆ. ಈ ಸಮಸ್ಯೆಗಳು ತಾರಕಕ್ಕೇರಲು ಎಲ್ಲಾ ಪಕ್ಷಗಳ ಕೊಡುಗೆಯೂ ಇದೆ.

    ಸ್ವಾತಂತ್ರ್ಯಾ ನಂತರ ಇದೂವರೆಗೂ ಕ್ಷೇತ್ರದಲ್ಲಿ 18 ಚುನಾವಣೆಗಳು ನಡೆದಿವೆ. 1991ರ ಚುನಾವಣೆಯವರೆಗೂ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ಇಲ್ಲಿ ಹತ್ತು ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಅಂದರೆ 1998ರಿಂದ ಈಚೆಗೆ ನಡೆದ ಏಳು ಚುನಾವಣೆಗಳಲ್ಲಿ ಬಿಜೆಪಿ ಆರು ಚುನಾವಣೆಗಳನ್ನು ಗೆದ್ದಿದೆ. ಕೊನೆ ಮೂರು ಚುನಾವಣೆಗಳಲ್ಲೂ ಬಿಜೆಪಿ ನಿರಂತರವಾಗಿ ಗೆಲ್ಲುತ್ತಲೇ ಬಂದಿದೆ. ಆದರೆ, ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಗೆಲುವಿನ ಅಂತರ 50 ಸಾವಿರಕ್ಕೆ ಇಳಿದದ್ದು, ಬಿಜೆಪಿಯನ್ನು ಚಿಂತೆಗೀಡು ಮಾಡಿದೆ. ಈ ಗೆಲುವನ್ನೂ ಸೋಲೆಂದೇ ಸ್ವೀಕರಿಸಿ ಬಿಜೆಪಿ ಕೆಲಸ ಮಾಡಿದೆ. ಚುನಾವಣೆ ಗೆಲುವನ್ನೇ ಗುರಿ ಮಾಡಿಕೊಂಡು ಈ ಮಟ್ಟಿಗಿನ ಬದ್ಧತೆಯ ಕೆಲಸ ಮೈತ್ರಿಕೂಟದಲ್ಲಿ ಆಗಿಲ್ಲ. ಈಗ ಮತ್ತೊಮ್ಮೆ ಮೈತ್ರಿ- ಬಿಜೆಪಿ ಅಭ್ಯರ್ಥಿಗಳು ಮುಖಾಮುಖಿಯಾಗಿದ್ದಾರೆ.

    ಹೀಗೆ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಫ್ಯಾಮಿಲಿಯ ಹಣಾಹಣಿಗೆ ವೇದಿಕೆಯಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ದೇಶದ ಗಮನ ಸೆಳೆದಿದೆ. ಕೊನೆಯ ಗಳಿಗೆಯ ಆಟಕ್ಕೆ ಎರಡೂ ಬಣಗಳು ಸಜ್ಜಾಗಿವೆ. ಇನ್ನು ಮತದಾನ- ಫಲಿತಾಂಶದತ್ತ ಕುತೂಹಲ ಮೂಡಿದೆ.