Tag: ಲೋಕಸಭಾ ಕ್ಷೇತ್ರ

  • ಮೋದಿ ಅಖಾಡಕ್ಕಿಳಿದಿರುವ ವಾರಣಾಸಿಯ ಇತಿಹಾಸ ಮಾತ್ರವಲ್ಲದೆ ರಾಜಕೀಯವೂ ಕುತೂಹಲಕಾರಿ!

    ಮೋದಿ ಅಖಾಡಕ್ಕಿಳಿದಿರುವ ವಾರಣಾಸಿಯ ಇತಿಹಾಸ ಮಾತ್ರವಲ್ಲದೆ ರಾಜಕೀಯವೂ ಕುತೂಹಲಕಾರಿ!

    ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿಯವರು ಮೇ 14 ರಂದು ನಾಮಪತ್ರ ಸಲ್ಲಿಸಿದ್ದಾರೆ. ಬನಾರಸಿ ಸೀರೆ, ಪಾನ್, ಅಸ್ಸಿ ಘಾಟ್, ಮೋಕ್ಷದಾಯಿನಿ ಗಂಗಾ ಮತ್ತು ಬಾಬಾ ವಿಶ್ವನಾಥ್ ಜೊತೆಗೆ ರಾಜಕೀಯವೂ ಕುತೂಹಲಕಾರಿಯಾಗಿದೆ.

    ಹೌದು. ಭಗವಾನ್ ಶಿವನ ನಗರವಾದ ಕಾಶಿಯನ್ನು ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ನಾವು ಕಾಶಿ, ಬನಾರಸ್ ಅಥವಾ ವಾರಣಾಸಿ ಎಂದು ಏನೇ ಕರೆದರೂ, ಈ ನಗರವು ಇತಿಹಾಸಕ್ಕಿಂತ ಪುರಾತನವಾದುದು ಎಂದು ಹೇಳಲಾಗುತ್ತದೆ. ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕ ಸನ್ನಿವೇಶದ ಬಗ್ಗೆ ಮಾತನಾಡುತ್ತಾ ಹೋದರೆ, ಈ ನಗರವು ಯಾವಾಗಲೂ ಶಿವ-ಶಕ್ತಿಯ ದಮ್-ಡಮ್ ಮತ್ತು ಬಾಬಾ ಭೋಲೆಯ ಬಾಮ್-ಬಾಮ್ ಶಬ್ದಗಳೊಂದಿಗೆ ಅನುರಣಿಸುತ್ತದೆ. ಇಲ್ಲಿ ಪವಿತ್ರ ಗಂಗಾ ನದಿ ಇದ್ದು, ಬಾಬಾ ವಿಶ್ವನಾಥ್ ಭೋಲೆ ಶಂಕರನ ರೂಪದಲ್ಲಿಯೂ ಇದ್ದಾರೆ. ಮೋಕ್ಷದಾಯಿನಿ ಗಂಗೆಯ ದಡದಲ್ಲಿ ನಿರ್ಮಿಸಿರುವ ಮಣಿಕರ್ಣಿಕಾ ಘಾಟ್, ದಶಾಶ್ವಮೇಧ ಘಾಟ್ ಸೇರಿದಂತೆ 80 ಘಾಟ್‍ಗಳಿಗೆ ಕಾಶಿ ವಿಶ್ವವಿಖ್ಯಾತವಾಗಿದೆ. ಒಂದೆಡೆ ಗಂಗಾ ಮತ್ತು ಅದರ ಪವಿತ್ರ ಘಾಟ್‍ಗಳಿಂದಾಗಿ ಈ ನಗರವು ಹಿಂದೂಗಳಿಗೆ ಯಾತ್ರಾಸ್ಥಳವಾಗಿದ್ದರೆ, ಮತ್ತೊಂದೆಡೆ ಈ ನಗರವು ಮುಸ್ಲಿಂ ಕುಶಲಕರ್ಮಿಗಳ ಕೌಶಲ್ಯಕ್ಕಾಗಿ ವಿಶ್ವಪ್ರಸಿದ್ಧವಾಗಿದೆ. ಗಂಗಾ-ಜಮುನಿ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಕಾಶಿಯನ್ನು ದೀಪಗಳ ನಗರ ಮತ್ತು ಜ್ಞಾನದ ನಗರ ಎಂದೂ ಕರೆಯುತ್ತಾರೆ.

    ಈ ನಗರವು ಶ್ರೀಮಂತ ಇತಿಹಾಸವನ್ನು ಹೊಂದಿದೆ. ಅದಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹೊಂದಿದೆ. ಆದರೆ ಗಂಗಾನದಿಯ ವಿವಿಧ ಘಾಟ್‍ಗಳು ತಮ್ಮದೇ ಆದ ಕಥೆಗಳನ್ನು ಹೊಂದಿವೆ. ಕಾಶಿ ಅಥವಾ ವಾರಣಾಸಿ ಸುಮಾರು 3000 ವರ್ಷಗಳಷ್ಟು ಹಳೆಯದಾದ ನಗರ ಎಂದು ನಂಬಲಾಗಿದೆ. ಆದಾಗ್ಯೂ ಕೆಲವು ಇತಿಹಾಸಕಾರರು ಈ ನಗರವು 4000-5000 ವರ್ಷಗಳಿಗಿಂತ ಹೆಚ್ಚು ಹಳೆಯದು ಎಂದು ನಂಬುತ್ತಾರೆ. ಕಾಶಿ ಅನೇಕ ಶತಮಾನಗಳಿಂದ ಪ್ರಪಂಚದಾದ್ಯಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಜೊತೆಗೆ ನಗರವು ಶಿಕ್ಷಣ ಮತ್ತು ಆಹಾರಕ್ಕೂ ಹೆಸರುವಾಸಿಯಾಗಿದೆ.

    ವಾರಣಾಸಿ ಎಂಬ ಹೆಸರು ಹೇಗೆ ಬಂತು?: ಈ ನಗರಕ್ಕೆ ವಾರಣಾಸಿ ಎಂಬ ಹೆಸರೂ ಇದೆ. ಇದು ಇಲ್ಲಿ ಇರುವ ಎರಡು ಸ್ಥಳೀಯ ನದಿಗಳಾದ ವರುಣಾ ನದಿ ಮತ್ತು ಅಸಿ ನದಿಯಿಂದ ರೂಪುಗೊಂಡಿದೆ. ಈ ಎರಡು ನದಿಗಳು ಕ್ರಮವಾಗಿ ಉತ್ತರ ಮತ್ತು ದಕ್ಷಿಣದಿಂದ ಬಂದು ಗಂಗಾ ನದಿಯನ್ನು ಸೇರುತ್ತವೆ. ಆದ್ದರಿಂದ ಇದಕ್ಕೆ ವಾರಣಾಸಿ ಎಂಬ ಹೆಸರು ಬಂದಿದೆ. ಕಾಶಿಯ ಮೂಲದ ಬಗ್ಗೆ ಹೇಳುವುದಾದರೆ ಧಾರ್ಮಿಕ ನಂಬಿಕೆಗಳು ಮತ್ತು ಪುರಾಣಗಳ ಪ್ರಕಾರ, ಶಿವನು ಸ್ವತಃ ಕಾಶಿ ನಗರವನ್ನು ಸ್ಥಾಪಿಸಿದನು. ಕಾಶಿಯು ಶಿವನ ತ್ರಿಶೂಲದ ಮೇಲೆ ನಿಂತಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಭೋಲೆನಾಥನು ಕಾಶಿ ವಿಶ್ವನಾಥನ ರೂಪದಲ್ಲಿ ಕುಳಿತಿದ್ದಾನೆ. ಇದು 12 ಜ್ಯೋತಿಲಿರ್ಂಗಗಳಲ್ಲಿ ಒಂದಾಗಿದೆ.

    ರಾಜಕೀಯ ಪ್ರಾಮುಖ್ಯತೆ: ಈ ನಗರವು ಕಳೆದ 10 ವರ್ಷಗಳಿಂದ ಭಾರತದ ರಾಜಕೀಯದ ಕೇಂದ್ರಬಿಂದುವಾಗಿ ಉಳಿದಿದೆ. ಯಾಕೆಂದರೆ ಇದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರವಾಗಿದೆ. ವಾರಣಾಸಿ ಲೋಕಸಭಾ ಕ್ಷೇತ್ರದಿಂದ 2 ಬಾರಿ ಅನಿರೀಕ್ಷಿತ ಗೆಲುವು ಸಾಧಿಸಿದ ಬಳಿಕ ಇದೀಗ ಮೂರನೇ ಬಾರಿಗೆ ಪ್ರಧಾನಿ ಮೋದಿ ಅವರು ಮೇ 14 ರಂದು ಮಂಗಳವಾರ ಅದೇ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಇದು ಈ ಕ್ಷೇತ್ರದಿಂದ ಅವರ ಮೂರನೇ ಇನ್ನಿಂಗ್ಸ್ ಆಗಿದೆ. 2014 ರಲ್ಲಿ ಮೊದಲ ಬಾರಿಗೆ ಜಯಗಳಿಸಿದ ಬಳಿಕ ಕಾಶಿ ತಲುಪಿದ ಪ್ರಧಾನಿ ಮೋದಿ, ಗಂಗಾನದಿಯ ಮೆಟ್ಟಿಲುಗಳ ಮೇಲೆ ತಲೆಬಾಗಿದ್ದರು. ನರೇಂದ್ರ ಮೋದಿಯವರು ಕಾಶಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅವರು ಈ ನಗರವನ್ನು ತಮ್ಮ ತಾಯಿಯಂತೆ ಪರಿಗಣಿಸುತ್ತಾರೆ. ಅಲ್ಲದೆ ಪದೇ ಪದೇ ಗಂಗಾಮಾತೆಯೇ ನನ್ನನ್ನು ಇಲ್ಲಿಗೆ ಕರೆದಿದ್ದಾಳೆ ಎಂದು ಹೇಳುತ್ತಾರೆ.

    ಭರ್ಜರಿ ಜಯಗಳಿಸಿದ್ದ ಮೋದಿ: 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿಯಿಂದ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರನ್ನು 371,784 ಮತಗಳ ಅಂತರದಿಂದ ಸೋಲಿಸಿದ್ದರು. ಆಗ ನರೇಂದ್ರ ಮೋದಿ 581,022 ಮತಗಳನ್ನು ಪಡೆದರೆ, ಅರವಿಂದ್ ಕೇಜ್ರಿವಾಲ್ 209,238 ಮತಗಳನ್ನು ಗಳಿಸಿದ್ದರು. ಈ ಚುನಾವಣೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಕೇವಲ 75,614 ಮತಗಳನ್ನು ತನ್ನದಾಗಿಸಿಕೊಂಡಿದ್ದರು. ಅಜಯ್ ರೈ ಮತ್ತೆ ಕಾಂಗ್ರೆಸ್ ನಿಂದ ಕಾಶಿ ಅಭ್ಯರ್ಥಿಯಾಗಿದ್ದಾರೆ.

    2019ರಲ್ಲಿ ಎರಡನೇ ಬಾರಿಗೆ ನರೇಂದ್ರ ಮೋದಿ ಕಾಶಿಯಿಂದ ಗೆದ್ದು ಮತ್ತೆ ಈ ಕ್ಷೇತ್ರದಿಂದ ಸಂಸದರಾದರು. ಈ ಬಾರಿ ನರೇಂದ್ರ ಮೋದಿ ಅವರು 2014 ಕ್ಕಿಂತ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ್ದರು. ಸಮಾಜವಾದಿ ಪಕ್ಷದ ಅಭ್ಯರ್ಥಿ ಶಾಲಿನಿ ಯಾದವ್ ಅವರನ್ನು 479,505 ಮತಗಳಿಂದ ಸೋಲಿಸಿದ್ದರು. ನರೇಂದ್ರ ಮೋದಿ 674,664 ಮತಗಳನ್ನು ಪಡೆದರೆ, ಎಸ್‍ಪಿ ಅಭ್ಯರ್ಥಿ ಶಾಲಿನಿ ಯಾದವ್ 195,159 ಮತಗಳನ್ನು ಗಳಿಸಿದ್ದರು. ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ 152,548 ಮತಗಳನ್ನು ಪಡೆಸಿದ್ದರು.

    ರಾಜಕೀಯ ಇತಿಹಾಸ: ಠಾಕೂರ್ ರಘುನಾಥ್ ಸಿಂಗ್ ಕಾಶಿ ಕ್ಷೇತ್ರದಿಂದ ಮೊದಲ ಸಂಸದರಾಗಿದ್ದರು. ರಘುನಾಥ್ ಸಿಂಗ್ ಅವರು 1952 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಇಲ್ಲಿಂದ ಗೆದ್ದಿದ್ದರು ಮತ್ತು ನಂತರ ಅವರು 1957 ಮತ್ತು 1962 ರಲ್ಲಿ ಇಲ್ಲಿಂದ ಲೋಕಸಭೆಗೆ ಆಯ್ಕೆಯಾದರು. ಅವರು ಸತತ ಮೂರು ಅವಧಿಗೆ ಇಲ್ಲಿಂದ ಸಂಸದರಾಗಿದ್ದರು. ನಂತರ 1967 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸತ್ಯನಾರಾಯಣ ಸಿಂಗ್ ಈ ಸ್ಥಾನವನ್ನು ಗೆದ್ದರು. 1971ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ರಾಜಾರಾಮ್ ಶಾಸ್ತ್ರಿ, 1977ರಲ್ಲಿ ಜನತಾ ಪಕ್ಷದ ಚಂದ್ರಶೇಖರ್, 1980 ಮತ್ತು 1984ರಲ್ಲಿ ಕಾಂಗ್ರೆಸ್ ಪಕ್ಷದ ಕಮಲಾಪತಿ ತ್ರಿಪಾಠಿ ಮತ್ತು 1989ರಲ್ಲಿ ಜನತಾದಳದ ಅನಿಲ್ ಶಾಸ್ತ್ರಿ ಈ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದರು.

    ಬಿಜೆಪಿಯು 1991, 1996, 1998 ಮತ್ತು 1999 ರಲ್ಲಿ ಸತತ 4 ಬಾರಿ ಗೆದ್ದಿದೆ. 2004ರಲ್ಲಿ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆದ್ದು, ಬಳಿಕ 2009ರಿಂದ 2019ರವರೆಗೆ ಇಲ್ಲಿ ಬಿಜೆಪಿ ನಿರಂತರವಾಗಿ ಗೆಲುವು ಸಾಧಿಸುತ್ತಿದೆ. 2009ರಲ್ಲಿ ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅವರು ಸಂಸದರಾದರು. ಇದಾದ ನಂತರ 2014 ಮತ್ತು 2019ರಲ್ಲಿ ನರೇಂದ್ರ ಮೋದಿ ಐತಿಹಾಸಿಕ ಗೆಲುವು ದಾಖಲಿಸಿ ಸಂಸದರಾದರು.

    ಗಂಗೆಯ 88 ಘಾಟ್‍ಗಳ ನಗರ ಕಾಶಿ: ಕಾಶಿ ನಗರದ ಗಂಗೆಯ ದಡದಲ್ಲಿ ಒಟ್ಟು 88 ಘಾಟ್‍ಗಳಿವೆ. ಅವುಗಳಲ್ಲಿ ಸ್ನಾನ ಮತ್ತು ಪೂಜೆ ಸಮಾರಂಭಗಳು ಹೆಚ್ಚಿನ ಘಾಟ್‍ಗಳಲ್ಲಿ ನಡೆಯುತ್ತವೆ. ಆದರೆ ಎರಡು ಘಾಟ್‍ಗಳನ್ನು ಪ್ರತ್ಯೇಕವಾಗಿ ದಹನ ಸ್ಥಳಗಳಾಗಿ ಬಳಸಲಾಗುತ್ತದೆ. ಒಟ್ಟು 12 ಪ್ರಸಿದ್ಧ ಘಾಟ್‍ಗಳಿವೆ. ಈ ನಗರವು ಕಬೀರ್, ರವಿದಾಸ್, ಮುನ್ಷಿ ಪ್ರೇಮಚಂದ್, ಆಚಾರ್ಯ ರಾಮಚಂದ್ರ ಶುಕ್ಲಾ, ಜೈಶಂಕರ್ ಪ್ರಸಾದ್, ಪಂಡಿತ್ ರವಿಶಂಕರ್, ಗಿರಿಜಾ ದೇವಿ, ಪಂಡಿತ್ ಹರಿ ಪ್ರಸಾದ್ ಚೌರಾಸಿಯಾ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರಂತಹ ಕಲಾವಿದರ ನಗರವಾಗಿದೆ. ಅಷ್ಟೇ ಅಲ್ಲ ಈ ನಗರವು ಗಂಗೆಯ ಭವ್ಯವಾದ ಆರತಿ ಮತ್ತು ಭಾರತ ಮತ್ತು ವಿದೇಶಗಳ ಪ್ರವಾಸಿಗರಿಂದ ಪ್ರಕಾಶಿಸಲ್ಪಟ್ಟಿದೆ.

  • ಬೆಂಗಳೂರು ನಗರ ಜಿಲ್ಲೆಯ 3 ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರ ಹೀಗಿದೆ..

    ಬೆಂಗಳೂರು ನಗರ ಜಿಲ್ಲೆಯ 3 ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರ ಹೀಗಿದೆ..

    – 14 ಕ್ಷೇತ್ರಗಳ ಮೊದಲ ಹಂತದ ಮತದಾನ ಮುಕ್ತಾಯ

    ಬೆಂಗಳೂರು: ರಾಜ್ಯದ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ. 14 ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿದ್ದು, ಜನ ಉತ್ಸಾಹದಿಂದಲೇ ಮತ ಚಲಾಯಿಸಿದ್ದಾರೆ.

    ಸಂಜೆ 6 ಗಂಟೆ ವೇಳೆಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಬೂತ್‌ಗಳಲ್ಲಿ ಇವಿಎಂ ಯಂತ್ರಗಳ ಪವರ್ ಬಟನ್ ಆಫ್ ಮಾಡಿದ ಮತಗಟ್ಟೆ ಅಧಿಕಾರಿಗಳು ಅವುಗಳನ್ನು ಸ್ಟ್ರಾಂಕ್‌ ರೂಮಿನಲ್ಲಿರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 38.23% ಮತದಾನ-ಬೆಂಗಳೂರು ನಗರದಲ್ಲಿ ಅತಿ ಕಡಿಮೆ, ದಕ್ಷಿಣ ಕನ್ನಡದಲ್ಲಿ ಗರಿಷ್ಠ

    ಈ ಬೆನ್ನಲ್ಲೇ ಚುನಾವಣಾ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲೆಯ 3 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರವನ್ನು ಹಂಚಿಕೊಂಡಿದ್ದಾರೆ. ಅವುಗಳ ಮಾಹಿತಿ ಹೀಗಿದೆ.. ಇದನ್ನೂ ಓದಿ: 2nd Phase Voting: ಹೇಮ ಮಾಲಿನಿಗಿಂತಲೂ ಸ್ಟಾರ್‌ ಚಂದ್ರು ಅತ್ಯಂತ ಶ್ರೀಮಂತ ಅಭ್ಯರ್ಥಿ!

    3 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರ:
    1. ಬೆಂಗಳೂರು ಕೇಂದ್ರ :- ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ವಸಂತನಗರ, ಬೆಂಗಳೂರು.
    2. ಬೆಂಗಳೂರು ಉತ್ತರ :- ಸೆಂಟ್ ಜೋಸೆಫ್ ಕಾಲೇಜು, ಮಲ್ಯ ರಸ್ತೆ, ಬೆಂಗಳೂರು.
    3. ಬೆಂಗಳೂರು ದಕ್ಷಿಣ :- ಎಸ್.ಎಸ್.ಎಂ.ಆರ್.ವಿ ಕಾಲೇಜು, 9ನೇ ಬ್ಲಾಕ್, ಜಯನಗರ, ಬೆಂಗಳೂರು.

    ಬೆಂಗ್ಳೂರಿನಲ್ಲಿ ಮತದಾನ ನೀರಸ:
    ಕರ್ನಾಟಕದಲ್ಲಿ ಸಂಜೆ 5 ಗಂಟೆ ಹೊತ್ತಿಗೆ 63.90% ರಷ್ಟು ಮತದಾನವಾಗಿದೆ. ಬೆಂಗಳೂರು ನಗರ ಜಿಲ್ಲೆಯ ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಶೇಕಡವಾರು ಮತದಾನ 50% ದಾಟಿದೆ. ಬೆಂಗಳೂರು ಗ್ರಾಮಾಂತರದಲ್ಲಿ 61.78%, ಬೆಂಗಳೂರು ಉತ್ತರ 50.04%, ಬೆಂಗಳೂರು ಕೇಂದ್ರ 48.61%, ಬೆಂಗಳೂರು ದಕ್ಷಿಣ 49.37% ಮತ ಚಲಾವಣೆಯಾಗಿದೆ.

    ಉಡುಪಿ-ಚಿಕ್ಕಮಗಳೂರು 72.13%, ದಕ್ಷಿಣ ಕನ್ನಡ 71.83%, ಹಾಸನ 71.13%, ಚಿತ್ರದುರ್ಗ 67% ಬಿರುಸಿನ ಮತದಾನವಾಗಿದೆ. ತುಮಕೂರು 72.10%, ಮಂಡ್ಯ 74.87%, ಮೈಸೂರು 65.85%, ಚಾಮರಾಜನಗರ 69.60%, ಚಿತ್ರದುರ್ಗ 70.97%, ಕೋಲಾರ 71.26% ಮತ ಚಲಾವಣೆಯಾಗಿದೆ.

  • ಉರಿಬಿಸಿಲಿನಲ್ಲಿ ಗೋಧಿ ಕಟಾವು ಮಾಡಿ ಮತಯಾಚಿಸಿದ ಹೇಮಾ ಮಾಲಿನಿ

    ಉರಿಬಿಸಿಲಿನಲ್ಲಿ ಗೋಧಿ ಕಟಾವು ಮಾಡಿ ಮತಯಾಚಿಸಿದ ಹೇಮಾ ಮಾಲಿನಿ

    ಲಕ್ನೋ: ಉತ್ತರಪ್ರದೇಶದಲ್ಲಿ ಲೋಕಸಭಾ ಚುನಾವಣಾ (Loksabha Election 2024) ಪ್ರಚಾರದ ಭರಾಟೆ ಜೋರಾಗಿದೆ. ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದೆ ಹೇಮಾ ಮಾಲಿನಿಯವರು (Hema Malini) ಮತಯಾಚನೆ ಮಾಡಿರುವ ವೀಡಿಯೋವೊಂದು ವೈರಲ್‌ ಆಗುತ್ತಿದೆ.

    ಬಲದೇವ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಹೇಮಾಮಾಲಿನಿ ಅವರು ಉರಿಬಿಸಿಲಿನಲ್ಲಿಯೂ ಕೆಲ ಮಹಿಳೆಯರ ಜೊತೆ  ಗದ್ದೆಯಲ್ಲಿ ಗೋಧಿ ಕೊಯ್ಲು ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

    ವೀಡಿಯೋದಲ್ಲೇನಿದೆ..?: ಚುನಾವಣಾ ಪ್ರಚಾರದ ವೇಳೆ ಬಲದೇವ್ ಪ್ರದೇಶದ ಹಯಾತ್‌ಪುರ ಗ್ರಾಮದಲ್ಲಿ ಕೆಲ ಮಹಿಳೆಯರು ಬಿಸಿಲಲ್ಲಿ ಗದ್ದೆಯಲ್ಲಿ ಗೋಧಿ ಕೊಯ್ಲು ಮಾಡುತ್ತಿದ್ದರು. ಗೋಧಿ ಕೊಯ್ಲು ಮಾಡುತ್ತಿರುವ ಮಹಿಳೆಯರನ್ನು ನೋಡಿದ ಹೇಮಾ ಮಾಲಿನಿ, ತನ್ನ ಕಾರನ್ನು ನಿಲ್ಲಿಸಿ ಹೊಲಕ್ಕೆ ಇಳಿದಿದ್ದಾರೆ. ಬಳಿಕ ಮಹಿಳೆಯೊಬ್ಬರ ಕೈಯಿಂದ ಕುಡುಗೋಲು ತೆಗೆದುಕೊಂಡು ಗೋಧಿ ಕೊಯ್ಲು ಮಾಡಿದರು. ಇದನ್ನೂ ಓದಿ: ವಿಭಿನ್ನವಾಗಿ ಚುನಾವಣಾ ಪ್ರಚಾರಕ್ಕಿಳಿದ ಪದ್ಮಶ್ರೀ ಪುರಸ್ಕೃತ ಸ್ವತಂತ್ರ ಅಭ್ಯರ್ಥಿ!

    ಮಹಿಳೆಯರೊಂದಿಗೆ ಫೋಟೋ: ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಶೇಕ್‌ಹ್ಯಾಂಡ್ ಕೊಡುವುದರಿಂದ ಹಿಡಿದು ಅವರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಅಲ್ಲದೆ ಕಳೆದ 10 ವರ್ಷಗಳಿಂದ ನಾನು ನಿಯಮಿತವಾಗಿ ಭೇಟಿಯಾಗುತ್ತಿರುವ ರೈತರೊಂದಿಗೆ ಮಾತನಾಡಲು ಇಂದು ನಾನು ಹೊಲಗಳಿಗೆ ಹೋಗಿದ್ದೇನೆ. ಅವರೊಂದಿಗೆ ಕಳೆದ ಸಮಯ ಅತ್ಯಂತ ಖುಷಿ ಕೊಟ್ಟಿತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಹಿಳೆಯರನ್ನು ಹೇಗೆ ಗೌರವಿಸಬೇಕೆಂಬುದನ್ನು ಮೋದಿ ನೋಡಿ ಕಲಿಯಿರಿ: ಹೇಮಾ ಮಾಲಿನಿ

    ಮಥುರಾ ಲೋಕಸಭಾ ಕ್ಷೇತ್ರದಿಂದ ಹೇಮಾ ಮಾಲಿನಿ ಅವರನ್ನು ಬಿಜೆಪಿ ಸತತ ಮೂರನೇ ಬಾರಿಗೆ ಕಣಕ್ಕಿಳಿಸಿದೆ. 1991 ರಿಂದ 1999 ರವರೆಗೆ ನಾಲ್ಕು ಬಾರಿ ಬಿಜೆಪಿ ಮಥುರಾದಿಂದ ಗೆದ್ದಿದೆ. 2004ರಲ್ಲಿ ಮಥುರಾ ಕ್ಷೇತ್ರ ಕಾಂಗ್ರೆಸ್ ಪಾಲಾಯಿತು. 2009 ರಲ್ಲಿ, ಆರ್‌ಎಲ್‌ಡಿಯ ಜಯಂತ್ ಚೌಧರಿ ಮಥುರಾದಿಂದ ಸಂಸದರಾದರು. 2014ರಲ್ಲಿ ಬಿಜೆಪಿ ಹೇಮಾ ಮಾಲಿನಿ ಅವರನ್ನು ಕಣಕ್ಕಿಳಿಸಿ ಗೆದ್ದಿತ್ತು. 2019 ರ ಚುನಾವಣೆಯಲ್ಲಿ, ಹೇಮಾ ಅವರ ಪತಿ ನಟ ಧರ್ಮೇಂದ್ರ ಕೂಡ ಅವರ ಪರವಾಗಿ ಪ್ರಚಾರ ಮಾಡಿದರು.

  • ಹೆಚ್‌ಡಿಕೆಯಿಂದ ಅಮಿತ್‌ ಶಾ ಭೇಟಿ – ಡಾ. ಮಂಜುನಾಥ್‌ ಬೆಂಗಳೂರು ಗ್ರಾಮಾಂತರದ ಮೈತ್ರಿ ಅಭ್ಯರ್ಥಿ?

    ಹೆಚ್‌ಡಿಕೆಯಿಂದ ಅಮಿತ್‌ ಶಾ ಭೇಟಿ – ಡಾ. ಮಂಜುನಾಥ್‌ ಬೆಂಗಳೂರು ಗ್ರಾಮಾಂತರದ ಮೈತ್ರಿ ಅಭ್ಯರ್ಥಿ?

    ಬೆಂಗಳೂರು:  ಡಾ.ಮಂಜುನಾಥ್ ಅವರು  ಬೆಂಗಳೂರು ಗ್ರಾಮಾಂತರ (Bengaluru Rural) ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆಗುತ್ತಾರಾ ಹೀಗೊಂದು ಪ್ರಶ್ನೆ ಎದ್ದಿದೆ.

    ಕಳೆದ ಕೆಲ ದಿನಗಳಿಂದ ಡಾ. ಮಂಜುನಾಥ್‌ (Dr.Manjunath) ಲೋಕಸಭೆಗೆ (Lok Sabha) ಇಳಿಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಇಲ್ಲಿಯವರೆಗೂ ಡಾ. ಮಂಜುನಾಥ್‌ ಅವರು ರಾಜಕೀಯಕ್ಕೆ ಇಳಿಯುವ ಬಗ್ಗೆ ಯಾವುದೇ ಖಚಿತ ಹೇಳಿಕೆ ನೀಡಿಲ್ಲ. ಆದರೆ ಈಗ ಮಂಜುನಾಥ್‌ ಅವರನ್ನೇ ಕಣಕ್ಕೆ ಇಳಿಸುವ ಬಗ್ಗೆ ಜೆಡಿಎಸ್‌ ಮುಂದಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರಷ್ಯಾದ ಡೇಂಜರ್‌ ಸೇನೆಯಲ್ಲಿದ್ದಾರೆ ಕಲಬುರಗಿಯ ಮೂವರು – ನಮ್ಮನ್ನು ರಕ್ಷಿಸಿ ಎಂದ ಯುವಕರು

    ಇಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಪುತ್ರ ನಿಖಿಲ್‌ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ ಮಂಜುನಾಥ್ ಅವರ ಸ್ಪರ್ಧೆ ಬಗ್ಗೆ ಪ್ರಸ್ತಾಪ ಇಟ್ಟಿದ್ದಾರೆ ಎಂಬ ವಿಚಾರ ಮೂಲಗಳಿಂದ ಬಂದಿದೆ.

    ನಗರ, ಗ್ರಾಮೀಣ ಕ್ಷೇತ್ರಗಳನ್ನೊಳಗೊಂಡಿರುವ ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್, ಬಿಜೆಪಿ ಮತಗಳಿಕೆಯ ಲೆಕ್ಕಾಚಾರವನ್ನು ಮುಂದಿಟ್ಟ ಹೆಚ್‌ಡಿಕೆ ಮಂಜುನಾಥ್ ಸ್ಪರ್ಧೆ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮದ್ಯಪಾನ ಮಾಡದಂತೆ ಪೋಷಕರಿಂದ ಬುದ್ದಿವಾದ – ಆತ್ಮಹತ್ಯೆಗೆ ಶರಣಾದ ಪುತ್ರ

    ಮಾಜಿ ಪ್ರಧಾನಿ ದೇವೇಗೌಡರಿಂದಲೂ ಈ ಸಂಬಂಧ ಅಭಿಪ್ರಾಯ ಸಂಗ್ರಹ ನಡೆದಿತ್ತು. ಬಿಜೆಪಿ‌ ಅಭ್ಯರ್ಥಿ ಆಕಾಂಕ್ಷಿ ಯೋಗೇಶ್ವರ್ ಕೂಡ ದೊಡ್ಡ ಗೌಡರನ್ನು ಭೇಟಿಯಾಗಿ ಅಭಿಪ್ರಾಯ ಹೇಳಿದ್ದರು.

    ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ಮುಖ್ಯಸ್ಥರು ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಅಳಿಯ ಡಾ.ಮಂಜುನಾಥ್‌ ರಾಜ್ಯದಲ್ಲೇ ಪರಿಚಿತ ವ್ಯಕ್ತಿತ್ವ ಹೊಂದಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಮೈತ್ರಿಯ ಮತಬ್ಯಾಂಕ್‌ ಕ್ರೋಢೀಕರಣ ದೃಷ್ಟಿಯಿಂದ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ನಡೆದಿದೆ.

  • ಮತಗಟ್ಟೆ ಬಾಗಿಲಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

    ಮತಗಟ್ಟೆ ಬಾಗಿಲಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!

    ಕೋಲಾರ: ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಮತಗಟ್ಟೆಯ ಬಾಗಿಲಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಕೋಲಾರದಲ್ಲಿ ನಡೆದಿದೆ.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲೊಚರುವಪಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 94 ರಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗಿನ ಜಾವ ದುಷ್ಕರ್ಮಿಗಳು ಬಾಗಿಲಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರಾಜ್ಯದಲ್ಲಿ ಲೋಕಸಭೆಯ ಮೊದಲ ಹಂತದ ಮತದಾನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು ಒಟ್ಟು 14 ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಉಡುಪಿ- ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

    ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕೆ. ಎಚ್ ಮುನಿಯಪ್ಪ ಸ್ಪರ್ಧಿಸಿದ್ರೆ, ಬಿಜೆಪಿಯಿಂದ ಎಸ್. ಮುನಿಸ್ವಾಮಿ ಚುನಾವಣಾ ಕಣದಲ್ಲಿದ್ದಾರೆ.

  • ಒಂದು ಕ್ಷೇತ್ರಕ್ಕೆ ಬರೋಬ್ಬರಿ 200 ಕೋಟಿ ಖರ್ಚು -ರಾಷ್ಟ್ರಮಟ್ಟದ ಟಾಪ್ 10 ಕ್ಷೇತ್ರಗಳಲ್ಲಿ ಒಂದಾದ ಕಲಬುರಗಿ

    ಒಂದು ಕ್ಷೇತ್ರಕ್ಕೆ ಬರೋಬ್ಬರಿ 200 ಕೋಟಿ ಖರ್ಚು -ರಾಷ್ಟ್ರಮಟ್ಟದ ಟಾಪ್ 10 ಕ್ಷೇತ್ರಗಳಲ್ಲಿ ಒಂದಾದ ಕಲಬುರಗಿ

    ಕಲಬುರಗಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎದುರು ಡಾ.ಉಮೇಶ್ ಜಾಧವ್ ಸ್ಪರ್ಧೆಯಿಂದ ಕಲಬುರಗಿ ಲೋಕಸಭೆ ಇದೀಗ ಸ್ಟಾರ್ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಈ ಬಾರಿ ಕನಿಷ್ಟ ಅಂದ್ರು 200 ಕೋಟಿಗೂ ಅಧಿಕ ಕುರುಡು ಕಾಂಚಾಣ ಹರಿಯಲ್ಲಿದೆಯಂತೆ. ಹೀಗಾಗಿ ಚುನಾವಣಾ ಆಯೋಗ ಈ ಕ್ಷೇತ್ರದ ಮೇಲೆ ಹದ್ದಿನ ಕಣ್ಣಿಟ್ಟಿದೆ.

    ಕಲಬುರಗಿ ಲೋಕಸಭೆ ಮೀಸಲು ಕ್ಷೇತ್ರ ಇದೀಗ ರಾಷ್ಟ್ರಮಟ್ಟದ ಟಾಪ್ 10 ಕ್ಷೇತ್ರಗಳಲ್ಲಿ ಒಂದಾಗಿದೆ. ಯಾಕಂದ್ರೆ ಈ ಕ್ಷೇತ್ರದಿಂದ ಕಾಂಗ್ರೆಸ್ ಸಂಸದ ಹಾಗೂ ಸೋಲಿಲ್ಲದ ಸರ್ದಾರ ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿಯಾದ್ರೆ, ಇತ್ತ ಬಿಜೆಪಿಯಿಂದ ಕಾಂಗ್ರೆಸ್ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಬಹುತೇಕ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಇವರಿಬ್ಬರ ನಡುವಿನ ಫೈಟ್ ಜಿಲ್ಲೆಯ ರಾಜಕಾರಣದಲ್ಲಿ ಹುಬ್ಬೆರಿಸುವಂತೆ ಮಾಡಿದೆ. ಚುನಾವಣೆಯ ದಿನಾಂಕ ನಿಗದಿಯಾಗದಿದ್ರು ಈ ಇಬ್ಬರು ಅಭ್ಯರ್ಥಿಗಳು ಇದೀಗ ಜಿಲ್ಲೆಯ ಗಲ್ಲಿ ಗಲ್ಲಿಗಳಿಗೆ ತೆರಳಿ ಮತ ಬೇಟೆ ಶುರು ಮಾಡಿದ್ದಾರೆ.

    ಶತಾಯಗತಾಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿಸಬೇಕೆಂದು ಬಿಜೆಪಿ ಟೊಂಕ ಕಟ್ಟಿ ನಿಂತಿದೆ. ಇತ್ತ ಸೋಲಿಲ್ಲದ ಸರ್ದಾರ ಪಟ್ಟ ಉಳಿಸಿಕೊಳ್ಳಲು ಖರ್ಗೆ ಸಹ ಫೀಲ್ಡ್ ಗಿಳಿದಿದ್ದಾರೆ. ಈ ಮದಗಜಗಳ ಜಗಳದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲಬೇಕು ಅಂತಾ ಎರಡು ರಾಷ್ಟ್ರೀಯ ಪಕ್ಷಗಳು ಪ್ರತಿಷ್ಟೆಯಾಗಿ ತೆಗೆದುಕೊಂಡಿವೆ. ಪರಿಣಾಮ ಕಲಬುರಗಿ ಲೋಕಸಭಾ ಕ್ಷೇತ್ರವೊಂದರಲ್ಲೇ 200 ಕೋಟಿಗೂ ಹೆಚ್ಚು ಹಣದ ಹೊಳೆ ಹರಿಸಲು ಎರಡು ಪಕ್ಷಗಳ ಸಿದ್ದತೆ ನಡೆಸಿವೆಯಂತೆ. ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿ ಕ್ಷೇತ್ರಕ್ಕೆ ಕನಿಷ್ಟ ಅಂದ್ರು 12 ರಿಂದ 15 ಕೋಟಿ ರೂಪಾಯಿ ಹಂಚಲು ಎರಡು ಪಕ್ಷಗಳು ನಿರ್ಧರಿಸಿದ್ದು, ಈಗಾಗಲೇ ಹಣ ಹಂಚಿಕೆಯ ಬ್ಲೂ ಪ್ರಿಂಟ್ ಕೂಡ ರೆಡಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಕುರುಡು ಕಾಂಚಾಣಾ ಹರಿಯುವ ಹಿನ್ನೆಲೆ ಕಲಬುರಗಿ ಲೋಕಸಭೆ ಮೇಲೆ ಕೇಂದ್ರ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಬೇಟೆಯಾಡಲು ಸಜ್ಜಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿಯಾಗಿ ಮಧುಬಂಗಾರಪ್ಪ ಕಣಕ್ಕೆ- ಎಚ್‍ಡಿಡಿ

    ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿಯಾಗಿ ಮಧುಬಂಗಾರಪ್ಪ ಕಣಕ್ಕೆ- ಎಚ್‍ಡಿಡಿ

    ವಿಜಯಪುರ: ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರನ್ನು ಕಣಕ್ಕೆ ಇಳಿಸಲಾಗುತ್ತದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

    ವಿಜಯಪುರ ಜಿಲ್ಲೆಯ ತಾಂಬಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧು ಬಂಗಾರಪ್ಪ ಅಭ್ಯರ್ಥಿಯಾಗಲು ಒಪ್ಪದೇ ಇದ್ದರೆ ಕಾಂಗ್ರೆಸ್ ಜೊತೆ ಚರ್ಚೆ ಮಾಡಿ ಅಭ್ಯರ್ಥಿಯನ್ನ ಆಯ್ಕೆ ಮಾಡಲಾಗುತ್ತದೆ ಅಂದ್ರು.

    ಮಂಡ್ಯ ಉಪ ಚುನಾವಣೆಯಲ್ಲಿ ಮೊಮ್ಮಕಳ್ಳನ್ನ ಕಣಕ್ಕೆ ಇಳಿಸಲ್ಲ. ಮಂಡ್ಯದಲ್ಲಿ ಸ್ಥಳಿಯರಿಗೆ ಅವಕಾಶ ಮಾಡಿ ಕೊಡಲಾಗುತ್ತದೆ. ರಾಜ್ಯದಲ್ಲಿ ನಡೆಯುವ ಐದು ಉಪ ಚುನಾವಣೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಒಗ್ಗಟ್ಟಾಗಿ ಹೋಗಿ ಚುನಾವಣೆ ಎದುರಿಸುತ್ತೇವೆ. ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡುರಾವ್ ಜೊತೆ ಚರ್ಚಿಸಲಾಗಿದೆ ಅಂತ ಹೇಳಿದ್ರು.

    ಬಳ್ಳಾರಿಯಲ್ಲಿ ಕಾಂಗ್ರೆಸ್ ಜೊತೆ ಚರ್ಚಿಸಿ ಅಭ್ಯರ್ಥಿಯನ್ನ ಆಯ್ಕೆ ಮಾಡಲಾಗುತ್ತದೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಅಂತ ಅವರು ಸ್ಪಷ್ಟಪಡಿಸಿದ್ರು.

    ಯಡಿಯೂರಪ್ಪ, ಶ್ರೀರಾಮುಲು, ಪುಟ್ಟರಾಜು ಅವರಿಂದ ತೆರವಾಗಿರುವ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು, ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್ ಹೈಕಮಾಂಡ್ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟು!

    ಕಾಂಗ್ರೆಸ್ ಹೈಕಮಾಂಡ್ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟು!

    ಬೆಂಗಳೂರು: ತಮ್ಮ ಸ್ವ-ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತಿದ್ರೂ ಸಿದ್ದರಾಮಯ್ಯ ಇದೀಗ ಮಾಸ್ಟರ್ ಪ್ಲಾನ್ ಮಾಡಿದ್ದಾರಂತೆ. ಕಾಂಗ್ರೆಸ್ ಹೈಕಮಾಂಡ್ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ಹಠ ಹಿಡಿದಿದ್ದಾರೆ.

    ಯಾವುದೇ ಕಾರಣಕ್ಕೂ ಮೈಸೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಡಬಾರದು. ಬೇರೆ ಯಾವ ಕ್ಷೇತ್ರದಲ್ಲಾದರೂ ಮೈತ್ರಿ ಮಾಡಿಕೊಳ್ಳಿ. ಆದ್ರೆ ಮೈಸೂರನ್ನು ಮಾತ್ರ ಬಿಡಕ್ಕಾಗಲ್ಲ ಅಂತ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ ಅಂತ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಮೈಸೂರು ಲೋಕಸಭಾ ಕ್ಷೇತ್ರದಲ್ಲೇ ಕಾಂಗ್ರೆಸ್ ಅಭ್ಯರ್ಥಿಯೇ ಸ್ಪರ್ಧೆ ಮಾಡಬೇಕು. ಸಮನ್ವಯ ಸಮಿತಿ ಮುಖ್ಯಸ್ಥ ಸಿದ್ದು ಪಟ್ಟು ಕೇಳಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ಶಾಕ್ ಆಗಿದೆ ಎನ್ನಲಾಗಿದೆ.

    ಒಟ್ಟಿನಲ್ಲಿ ತವರು ಜಿಲ್ಲೆಯಲ್ಲಿ ತಮ್ಮ ಹಿಡಿತ ಬಿಗಿಗೊಳಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಂತ್ರ ಹೂಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.