Tag: ಲೋಕಸಭಾ ಕಲಾಪ

  • ಆನೆ ದಾಳಿ ತಡೆಗೆ ಕಾಂಪಾ ಅನುದಾನ – ಡಾ. ಸಿ.ಎನ್.ಮಂಜುನಾಥ್ ಮನವಿ

    ಆನೆ ದಾಳಿ ತಡೆಗೆ ಕಾಂಪಾ ಅನುದಾನ – ಡಾ. ಸಿ.ಎನ್.ಮಂಜುನಾಥ್ ಮನವಿ

    ನವದೆಹಲಿ: ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರದಲ್ಲಿ ಆನೆಗಳ ಹಾವಳಿ ವ್ಯಾಪಕವಾಗಿದ್ದು, ಬ್ಯಾರಿಕೇಡ್ ಅಳವಡಿಕೆಗೆ ಕಾಂಪಾ (CAMPA) ನಿಧಿಯಿಂದ ವಿಶೇಷ ಅನುದಾನ ನೀಡಬೇಕು ಎಂದು ಸಂಸದ ಡಾ. ಸಿ.ಎನ್.ಮಂಜುನಾಥ್ (CN Manjunath) ಮನವಿ ಮಾಡಿಕೊಂಡರು.ಇದನ್ನೂ ಓದಿ: ಕಾಮನ್‌ ಮ್ಯಾನ್‌ಗೆ ಎದ್ದೇಳು ಅಂತ ಚಿವುಟುವ ಸಿನಿಮಾವಿದು- UI ಬಗ್ಗೆ ಡಾಲಿ ಮಾತು

    ಬನ್ನೇರುಘಟ್ಟ, ಸಾತನೂರು ಮತ್ತಿತರ ಕಡೆಗಳಲ್ಲಿ ಆನೆ ದಾಳಿಗಳಿಂದ ಮನುಷ್ಯರು ಮೃತಪಟ್ಟಿದ್ದಾರೆ. ಕೃಷಿಗೆ ಅಪಾರವಾದ ನಷ್ಟವಾಗಿದೆ. ಇದರಿಂದ ಬ್ಯಾರಿಕೇಡ್ ಅಳವಡಿಕೆಗೆ ಕಾಂಪಾ ನಿಧಿಯಿಂದ ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

    ಕಾಡು ಪ್ರಾಣಿಗಳ ದಾಳಿಯಿಂದ ಅರಣ್ಯ ಇಲಾಖೆಯವರು ಮೃತಪಟ್ಟರೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ರೈತರಿಗೆ 15 ಲಕ್ಷ ರೂ.ಯಷ್ಟೇ ಪರಿಹಾರ ಒದಗಿಸಲಾಗುತ್ತದೆ. ಈ ತಾರತಮ್ಯ ಸರಿಯಲ್ಲ. ಪರಿಹಾರವನ್ನು 25 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

    ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಭರವಸೆ ನೀಡಿದರು.ಇದನ್ನೂ ಓದಿ: ನಬಾರ್ಡ್ ನೆರವು ಕಡಿತದಿಂದ ರೈತರಿಗೆ ಸಂಕಷ್ಟ – ಜಿ.ಕುಮಾರ್ ನಾಯಕ್ ಕಳವಳ

  • ನಬಾರ್ಡ್ ನೆರವು ಕಡಿತದಿಂದ ರೈತರಿಗೆ ಸಂಕಷ್ಟ – ಜಿ.ಕುಮಾರ್ ನಾಯಕ್ ಕಳವಳ

    ನಬಾರ್ಡ್ ನೆರವು ಕಡಿತದಿಂದ ರೈತರಿಗೆ ಸಂಕಷ್ಟ – ಜಿ.ಕುಮಾರ್ ನಾಯಕ್ ಕಳವಳ

    ನವದೆಹಲಿ: ಅಲ್ಪಾವಧಿ ಬೆಳೆ ಸಾಲ ವಿತರಣೆಗೆ ಸಾಧ್ಯವಾಗುವಂತೆ ಪ್ರಸಕ್ತ ಸಾಲಿನಲ್ಲಿ ಕರ್ನಾಟಕಕ್ಕೆ ಒದಗಿಸಿರುವ ನಬಾರ್ಡ್ (NABARD) ನೆರವು ಕಡಿತಗೊಳಿಸಿರುವುದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ತುರ್ತು ಗಮನ ಹರಿಸಬೇಕು ಎಂದು ರಾಯಚೂರು (Raichuru) ಸಂಸದ ಜಿ.ಕುಮಾರ್ ನಾಯಕ್ (G Kumar Naik) ಕಳವಳ ವ್ಯಕ್ತಪಡಿಸಿದರು.

    ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಹಣಕಾಸು ಸಚಿವರಿಗೆ ಸೋಮವಾರ ಪ್ರಶ್ನೆ ಕೇಳಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳು ನಗರ ಪ್ರದೇಶದ ಜನರಿಗೆ ಹೆಚ್ಚು ಸಾಲ ಕೊಡುತ್ತವೆ. ಅವುಗಳ ಬಡ್ಡಿ ದರ ಹೆಚ್ಚು ಇರುತ್ತವೆ. ಆದರೆ, ಕೃಷಿಕರಿಗೆ ಸಾಲ ನೀಡಲು ಹಿಂದೇಟು ಹಾಕುತ್ತವೆ. ನಬಾರ್ಡ್ ನೆರವು ಕಡಿತದಿಂದ ಕಲ್ಯಾಣ ಕರ್ನಾಟಕ, ಅಭಿವೃದ್ಧಿ ಆಕಾಂಕ್ಷಿ ಹಾಗೂ ಹಿಂದುಳಿದ ಜಿಲ್ಲೆಗಳ ರೈತರಿಗೆ ಭಾರಿ ತೊಂದರೆ ಆಗಿದೆ ಎಂದು ಗಮನಸೆಳೆದರು.ಇದನ್ನೂ ಓದಿ: PUBLiC TV Impact | ಬಾಣಂತಿಯರ ಸಾವಿನ ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ – ಆಸ್ಪತ್ರೆಗೆ ಅಧಿಕಾರಿಗಳು ಭೇಟಿ

    2024-25ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು 35 ಲಕ್ಷ ರೈತರಿಗೆ 25 ಸಾವಿರ ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿ ಹೊಂದಿದೆ. 2023-24ರಲ್ಲಿ ರಾಜ್ಯಕ್ಕೆ ನಬಾರ್ಡ್ 5,600 ಕೋಟಿ ರೂ. ಸಾಲ ಕೊಟ್ಟಿತ್ತು. ಈ ವರ್ಷ ಅದನ್ನು 2400 ಕೋಟಿ ರೂ.ಗೆ ಇಳಿಸಲಾಗಿದೆ. ಸಣ್ಣ ರೈತರಿಗೆ ಸಾಲ ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.

    ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಉತ್ತರಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಈ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. ಸಣ್ಣ ರೈತರ ಉನ್ನತಿಗೆ ಸರ್ಕಾರ ಗಮನ ಹರಿಸಿದೆ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ‘ಯುಐ’ ಚಿತ್ರದ ಭಾಗವಾಗಿರೋದು ನನ್ನ ಅದೃಷ್ಟ: ನಿಧಿ ಸುಬ್ಬಯ್ಯ

  • ಲೋಕಸಭಾ ಕಲಾಪದಲ್ಲಿ ಭಾಗಿಯಾಗಿದ್ದ ಸಂಸದನಿಗೆ ಸೋಂಕು ದೃಢ

    ಲೋಕಸಭಾ ಕಲಾಪದಲ್ಲಿ ಭಾಗಿಯಾಗಿದ್ದ ಸಂಸದನಿಗೆ ಸೋಂಕು ದೃಢ

    ನವದೆಹಲಿ: ಲೋಕಸಭಾ ಕಲಾಪದಲ್ಲಿ ಭಾಗಿಯಾಗಿದ್ದ ಬಿಎಸ್‍ಪಿ ಸಂಸದ ಡ್ಯಾನಿಶ್ ಅಲಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಡ್ಯಾನಿಶ್ ಅಲಿ ಸೋಮವಾರ ಸಂಸತ್ತಿನ ಕಲಾಪದಲ್ಲಿ ಭಾಗಿಯಾಗಿದ್ದರು. ಮಂಗಳವಾರ ಟ್ವೀಟ್‌ ಮೂಲಕ ಮಾಹಿತಿ ತಿಳಿಸಿದ್ದಾರೆ. ಡಿಸೆಂಬರ್ 23ಕ್ಕೆ ಸಂಸತ್ತಿನ ಚಳಿಗಾಲ ಅಧಿವೇಶನ ಅಂತ್ಯವಾಗುತ್ತಿದೆ. ಕಲಾಪಕ್ಕೆ ಹಾಜರಾಗಿದ್ದ ಸಂಸದರಿಗೆ  ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ. ದನ್ನೂ ಓದಿ: ನಕಲಿ ದಾಖಲೆಯಿಂದ ರೈಲು ಇಂಜಿನ್ ಮಾರಾಟ ಮಾಡಿದ ಎಂಜಿನಿಯರ್

    ಟ್ವೀಟ್‍ನಲ್ಲಿ ಏನಿದೆ?: ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದ ಹೊರತಾಗಿ ಸೋಂಕು ದೃಢಪಟ್ಟಿದೆ.  ಸೋಮವಾರ ಕಲಾಪದಲ್ಲಿ ಭಾಗಿಯಾಗಿದ್ದೆ. ಹೀಗಾಗಿ ನನ್ನ ಸಂಪರ್ಕಕ್ಕೆ ಬಂದವರು ಎಲ್ಲರೂ ಕ್ವಾರಂಟೈನ್‍ಗೆ ಒಳಗಾಗಿ ಮತ್ತು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ. ದನ್ನೂ ಓದಿ: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಹೈಕೋರ್ಟ್ ಆದೇಶ

    ಭಾರತದಲ್ಲಿ ಓಮಿಕ್ರಾನ್ ರೂಪಾಂತರದ ಕನಿಷ್ಠ 200 ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಹೊಸ ರೂಪಾಂತರದ ವಿರುದ್ಧ ದೇಶದಲ್ಲಿ ಲಭ್ಯವಿರುವ ಕೋವಿಡ್ ಲಸಿಕೆಗಳ ಪರಿಣಾಮ ಒಂದು ವಾರದೊಳಗೆ ತಿಳಿಯುತ್ತದೆ. ಈ ಸಂಬಂಧಿತ ಅಧ್ಯಯನದ ಫಲಿತಾಂಶಗಳು ಪ್ರಕಟವಾದ ತಕ್ಷಣ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಸಂಸತ್ತಿಗೆ ತಿಳಿಸಿದರು. ದನ್ನೂ ಓದಿ: ಪಾಕ್‍ನ 20 ಯೂಟ್ಯೂಬ್ ಚಾನೆಲ್, 2 ವೆಬ್‍ಸೈಟ್‍ಗಳಿಗೆ ನಿರ್ಬಂಧ