Tag: ಲೋಕಸಭಾ ಎಲೆಕ್ಷನ್

  • ವೋಟ್ ಮಾಡದ ನಟಿ ರಮ್ಯಾ

    ವೋಟ್ ಮಾಡದ ನಟಿ ರಮ್ಯಾ

    ಲೋಕಸಭಾ ಚುನಾವಣೆಯ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದ 14 ಕ್ಷೇತ್ರದಲ್ಲಿ ಮೊದಲ ಹಂತದ ಚುನಾವಣೆ ರಂಗೇರಿದೆ. ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಬಂದು ಮತದಾನ ಮಾಡಿ ಮಾದರಿಯಾಗಿದ್ದಾರೆ. ಇದೀಗ ನಟಿ ರಮ್ಯಾ (Actress Ramya) ಮತದಾನ (Vote) ಮಾಡದೇ ಇರುವುದು ನೆಟ್ಟಿಗರಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ನಟಿ ರಮ್ಯಾ ಈ ಬಾರಿಯಾದ್ರೂ ವೋಟ್ ಮಾಡ್ತಾರೆ ಎಂದು ಮಂಡ್ಯದಲ್ಲಿ ಅಭಿಮಾನಿಗಳು ಕಾಯುತ್ತಾ ಇದ್ದರು. ಆದರೆ ಅಭಿಮಾನಿಗಳ ನಿರೀಕ್ಷೆಯನ್ನು ನಟಿ ಸುಳ್ಳು ಮಾಡಿದ್ದಾರೆ. ಮತದಾನದಲ್ಲಿ ನಟಿ ಭಾಗವಹಿಸಿಲ್ಲ. ವೋಟ್ ಮಾಡಿಲ್ಲ ಯಾಕೆ ಎಂಬ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಮೂಡಿದೆ.

    2019ರ ಲೋಕಸಭೆ ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ನಟಿ ರಮ್ಯಾ ತಮ್ಮ ಹಕ್ಕು ಚಲಾಯಿಸಿಲ್ಲ. ಈ ಬಾರಿಯೂ ಕೂಡ ನಟಿ ಮತದಾನದಲ್ಲಿ ಭಾಗವಹಿಸಿಲ್ಲ. ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಬಗ್ಗೆ ಯಶ್‌ ಹೇಳಿದ್ದೇನು?

    ಈ ಬಾರಿ ಸ್ಯಾಂಡಲ್‌ವುಡ್‌ನಲ್ಲಿ ಬಹುತೇಕ ನಟ-ನಟಿಯರು ವೋಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮತದಾನ ಮಾಡುವಂತೆ ಸಂದೇಶ ನೀಡಿದ್ದರು.

  • ಮೂಲ ಕಾಂಗ್ರೆಸ್ ಮತ ಕೂಡ ಬಿಜೆಪಿಗೆ ಬೀಳುತ್ತೆ- ಶಾಸಕ ರಘುಪತಿ ಭಟ್

    ಮೂಲ ಕಾಂಗ್ರೆಸ್ ಮತ ಕೂಡ ಬಿಜೆಪಿಗೆ ಬೀಳುತ್ತೆ- ಶಾಸಕ ರಘುಪತಿ ಭಟ್

    ಉಡುಪಿ: ಉಡುಪಿ-ಚಿಕ್ಕಮಗಳೂರು ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸ್ವಾರ್ಥದ ರಾಜಕಾರಣಿ. ಅವರಿಗೆ ಅಧಿಕಾರದ ದಾಹ ಜಾಸ್ತಿಯಾಗಿರುವುದರಿಂದ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದಾರೆ. ಕೈ ಚಿಹ್ನೆ ಇಲ್ಲದಿರುವುದರಿಂದ ಎರಡು ಜಿಲ್ಲೆಯ ನೈಜ ಕಾಂಗ್ರೆಸಿಗರು ಈ ಬಾರಿ ಬಿಜೆಪಿಗೆ ಮತ ಹಾಕುತ್ತಾರೆ ಅಂತ ಶಾಸಕ ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವುದು ಕಾಂಗ್ರೆಸ್ಸಿನ ನೈಜ ಕಾರ್ಯಕರ್ತರಿಗೆ ಬೇಸರವಾಗಿದೆ. ಉಡುಪಿಯಲ್ಲಿ ಜೆಡಿಎಸ್‍ನ ಪಂಚಾಯತ್ ಸದಸ್ಯರೂ ಕೂಡ ಇಲ್ಲ. ಹೀಗಾಗಿ ಕೈ ಚಿಹ್ನೆ ಬಿಟ್ಟು ಇಲ್ಲಿನ ಜನಕ್ಕೆ ತಾವರೆ ಮಾತ್ರ ಗೊತ್ತಿರುವುದು. ಎಲ್ಲಾ ನೈಜ ಕಾಂಗ್ರೆಸ್ ಓಟು ಬಿಜೆಪಿಗೆ ಬರುವುದು ಖಚಿತ ಎಂದು ಭಟ್ ಹೇಳಿದರು. ಮಧ್ವರಾಜ್ ಮತದಾರರನ್ನು ಗೊಂದಲಕ್ಕೆ ತಳ್ಳಿದ್ದಾರೆ. ಚುನಾವಣೆ ನಂತರ ಪ್ರಮೋದ್ ಏನು ಮಾಡ್ತಾರೆ? ಅದೇ ಎರಡು ಚಿಹ್ನೆಯ ಶಾಲು ಹಾಕಿಕೊಂಡು ಓಡಾಡುತ್ತಾರಾ? ಈ ಬಗ್ಗೆ ಸ್ಪಷ್ಟಪಡಿಸಲಿ ಎಂದು ಸಾವಲು ಹಾಕಿದರು. ಬಳಿಕ ಫಲಿತಾಂಶ ಬಂದು 24 ಗಂಟೆಯೂ ರಾಜ್ಯ ಸರ್ಕಾರ ಉಳಿಯುವುದಿಲ್ಲ ಎಂದು ಶಾಸಕ ರಘುಪತಿ ಭಟ್ ಭವಿಷ್ಯ ನುಡಿದರು.

    ಬಳಿಕ ಕರಾವಳಿ ಮತದಾರರಿಗೆ ತಿಳುವಳಿಕೆ ಇಲ್ಲ ಎಂದಿರುವ ಸಿಎಂ ಕ್ಷಮೆ ಕೇಳಬೇಕು. ಕರಾವಳಿಗೆ ಅತ್ಯಂತ ಅನ್ಯಾಯ ಮಾಡಿದ್ದು ಜೆಡಿಎಸ್- ಕಾಂಗ್ರೆಸ್ ಸರ್ಕಾರ. ಸಿಎಂ ಕೂಡಲೇ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕರಾವಳಿ ಜನ ಈ ಬಾರಿ ಸರಿಯಾದ ಬುದ್ಧಿ ಕಲಿಸುತ್ತಾರೆ ಎಂದರು. ಅಷ್ಟೇ ಅಲ್ಲದೆ ಸಿಎಂಯಿಂದ ಕ್ಷಮೆ ಕೇಳಿಸುವ ಜವಾಬ್ದಾರಿ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮೇಲಿದೆ ಎಂದರು.

    ಉಡುಪಿಯಲ್ಲಿ 40 ಸಾವಿರ ಬಿಜೆಪಿಗೆ ಲೀಡ್:
    ಬಿಜೆಪಿಗೆ ಉಡುಪಿಯಲ್ಲಿ 40 ಸಾವಿರ ಮತಗಳ ಮುನ್ನಡೆ ಕೊಡುವ ಟಾರ್ಗೆಟ್ ಇದೆ. ನನಗೆ ನಾನೇ ಟಾರ್ಗೆಟ್ ಕೊಟ್ಟುಕೊಂಡಿದ್ದೇನೆ ಎಂದು ಶಾಸಕ ರಘುಪತಿ ಭಟ್ ಹೇಳಿದರು. ನನಗೂ ಶೋಭಾ ಕರಂದ್ಲಾಜೆಗೂ ಅಸಮಾಧಾನ ಇಲ್ಲ. ಸಣ್ಣಪುಟ್ಟ ಅಸಮಾಧಾನ ಇದ್ದಾಗ ಮಾತಾಡಿ ಸರಿ ಮಾಡಿಕೊಂಡಿದ್ದೇವೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತೇನೆ ಎಂದರು. ಉಡುಪಿ ಚಿಕ್ಕಮಗಳೂರಿನ 8 ಕ್ಷೇತ್ರದಲ್ಲಿ ಅತೀ ಹೆಚ್ಚು ಲೀಡ್ ಉಡುಪಿಯಲ್ಲಿ ಕೊಡುತ್ತೇವೆ ಎಂದು ತಿಳಿಸಿದರು.