Tag: ಲೋಕಸಭಾ ಉಪಚುನಾವಣೆ

  • Wayanad By Eelections| ಪ್ರಿಯಾಂಕಾ ವಿರುದ್ಧ ಸ್ಪರ್ಧಿಸುತ್ತಿರುವ ನವ್ಯಾ ಹರಿದಾಸ್‌ ಯಾರು?

    Wayanad By Eelections| ಪ್ರಿಯಾಂಕಾ ವಿರುದ್ಧ ಸ್ಪರ್ಧಿಸುತ್ತಿರುವ ನವ್ಯಾ ಹರಿದಾಸ್‌ ಯಾರು?

    ನವದೆಹಲಿ: ಕೇರಳದ ವಯನಾಡ್‌ (Wayanad) ಲೋಕಸಭಾ ಉಪಚುನಾವಣೆಗೆ (Lok Sabha Election) ಕಾಂಗ್ರೆಸ್‌ನ ಪ್ರಿಯಾಂಕಾ ವಾದ್ರಾ (Priyanka Gandhi Vadra) ವಿರುದ್ಧ ಬಿಜೆಪಿ ನವ್ಯಾ ಹರಿದಾಸ್‌ (Navya Haridas) ಅವರನ್ನು ಕಣಕ್ಕೆ ಇಳಿಸಿದೆ.

    36 ವರ್ಷದ ನವ್ಯಾ ಹರಿದಾಸ್ ಅವರು ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಓದಿದ್ದು ,ಕ್ಯಾಲಿಕಟ್ ವಿಶ್ವವಿದ್ಯಾಲಯದ ಕೆಎಂಸಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಸದ್ಯ ಅವರು ಕೋಝಿಕ್ಕೋಡ್ ಕಾರ್ಪೊರೇಷನ್‌ನಲ್ಲಿ ಕೌನ್ಸಿಲರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಟ್ವಿಟ್ಟರ್ ಪ್ರೊಫೈಲ್ ಪ್ರಕಾರ ಅವರು ಬಿಜೆಪಿಯಲ್ಲಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದಾರೆ.

    ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರಕಾರ ನವ್ಯಾ ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿಲ್ಲ ಮತ್ತು 1,29,56,264 ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದನ್ನೂ ಓದಿ: ಶಿಗ್ಗಾವಿ ಉಪಚುನಾವಣೆ| ಭರತ್‌ ಬೊಮ್ಮಾಯಿಗೆ ಬಿಜೆಪಿ ಟಿಕೆಟ್‌ ನೀಡಿದ್ದು ಯಾಕೆ?

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ (Rahul Gandhi) ವಯನಾಡ್‌ ಮತ್ತು ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಈ ಹಿನ್ನೆಲೆಯಲ್ಲಿ ವಯನಾಡ್‌ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯೇ ಅಂತಿಮ: ಸುರೇಶ್ ಬಾಬು

    ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಹಿರಿಯ ನಾಯಕ ಸತ್ಯನ್ ಮೊಕೇರಿ ಅವರನ್ನು ವಯನಾಡ್ ಲೋಕಸಭಾ ಉಪಚುನಾವಣೆಗೆ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಅಭ್ಯರ್ಥಿಯಾಗಿ ಹೆಸರಿಸಿದೆ.

    2009 ರಿಂದ ನಡೆದ ಸತತ 4 ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಜಯಗಳಿಸಿದ್ದಾರೆ. ಇದನ್ನೂ ಓದಿ: ಸಂಡೂರು ಉಪಚುನಾವಣೆ| ಬಿಜೆಪಿ ಟೆಕೆಟ್‌ ಪಡೆದ ಬಂಗಾರು ಹನುಮಂತು ಯಾರು?

    2019ರ ಚುನಾವಣೆಯಲ್ಲಿ ರಾಹುಲ್‌ ಗಾಂಧಿ 7,06,367 ಮತಗಳನ್ನು ಪಡೆದು 4,31,770 ಮತಗಳಿಂದ ಜಯಗಳಿಸಿದ್ದರು. ಸಮೀಪದ ಸಿಪಿಐ ಅಭ್ಯರ್ಥಿ 2,74,597 ಮತಗಳನ್ನು ಪಡೆದಿದ್ದರು.

    2024ರ ಚುನಾವಣೆಯಲ್ಲಿ ರಾಹುಲ್‌ ಗಾಂಧಿ 6,47,445 ಮತಗಳನ್ನು ಪಡೆದು 3,64,445 ಮತಗಳ ಅಂತರದಿಂದ ಜಯಗಳಿಸಿದ್ದರು. ಸಮೀಪದ ಸಿಪಿಐ ಅಭ್ಯರ್ಥಿ ಅನ್ನಿ ರಾಜಾ 2,83,023 ಮತಗಳನ್ನು ಪಡೆದರೆ ಬಿಜೆಪಿಯ ಸುರೇಂದ್ರನ್‌ 1,41,045 ಮತಗಳನ್ನು ಗಳಿಸಿದ್ದರು.

     

  • ಲೋಕಸಭಾ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಬಯಸಿದ್ದೇನೆ: ಮುತಾಲಿಕ್

    ಲೋಕಸಭಾ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಬಯಸಿದ್ದೇನೆ: ಮುತಾಲಿಕ್

    ವಿಜಯಪುರ: ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಬಯಸಿದ್ದೇನೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಬಯಸಿದ್ದೇನೆ. ಈ ಸಂಬಂಧ ನಾನು ಈಗಾಗಲೇ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೇನೆ ಎಂದರು.

    ಮೂರು ವರ್ಷ ಅವಧಿಯಲ್ಲಿ ನಾನು ಸೇವೆ ಸಲ್ಲಿಸಲು ಬಯಸಿದ್ದೇನೆ. ಬಿಜೆಪಿ ಹೈಕಮಾಂಡ್ ನಂಗೆ ಅವಕಾಶ ಕಲ್ಪಿಸಿ ಕೊಡಬೇಕು. ಒಂದು ವೇಳೆ ನಂಗೆ ಅವಕಾಶ ಕೊಡದಿದ್ದರೂ ನಾನು ಬಿಜೆಪಿ ಗೆಲುವಿಗೆ ಶ್ರಮಿಸ್ತೀನಿ. ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡ್ತೀನಿ ಎಂದು ಹೇಳಿದರು.

  • ಶಿವಮೊಗ್ಗದಲ್ಲಿ ಗೆಲುವಿನ ಅಂತರ ಕಡಿಮೆಯಾಗಿದ್ದಕ್ಕೆ ಕಾರಣ ಕೊಟ್ಟ ಈಶ್ವರಪ್ಪ

    ಶಿವಮೊಗ್ಗದಲ್ಲಿ ಗೆಲುವಿನ ಅಂತರ ಕಡಿಮೆಯಾಗಿದ್ದಕ್ಕೆ ಕಾರಣ ಕೊಟ್ಟ ಈಶ್ವರಪ್ಪ

    ಶಿವಮೊಗ್ಗ: ಲೋಕಸಭಾ ಉಪಚುನಾವಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದಿದ್ದರಿಂದ ಬಿವೈ ರಾಘವೇಂದ್ರ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಧಿಕಾರ ಅವರದ್ದೇ ಇದ್ದ ಕಾರಣ ಭಾರೀ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡಲಾಗಿದೆ. ಈ ಗೆಲುವು ಕಾರ್ಯಕರ್ತರ ಗೆಲುವು, ಮತದಾರರ ಗೆಲುವು, ಈ ಗೆಲುವಿನ ಮುಖಾಂತರ ನರೇಂದ್ರ ಮೋದಿ ಮುಂದೆ ಗೆಲುವು ಸಾಧಿಸಬೇಕು ಎಂದು ಬಹಳ ಅಪೇಕ್ಷೆಯಿಂದ ಶಿವಮೊಗ್ಗದ ಜನ ಬೆಂಬಲ ಕೊಟ್ಟಿದ್ದಾರೆ ಎನ್ನುವ ನಂಬಿಕೆ ಇದೆ ಎಂದು ತಿಳಿಸಿದರು.

    ಈ ಐದು ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ವಿಶೇಷವಾಗಿ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಎಲ್ಲಾ ಸಚಿವರ, ಮುಖಂಡರ ದಂಡೇ ಇಲ್ಲಿಗೆ ಬಂದಿತ್ತು. ಇಲ್ಲಿಗೆ ಬಂದು ಬಿಜೆಪಿಯನ್ನು ಸೋಲಿಸಲೇಬೇಕು ಎಂಬ ಎಲ್ಲಾ ಪ್ರಯತ್ನಗಳನ್ನು ನಡೆಸಿದರು. ಹಣ ಬಲ, ಜಾತಿ, ಅಧಿಕಾರ ದುರುಪಯೋಗ ಮಾಡಿಕೊಂಡರು. ಈ ಯಾವುದೇ ಪ್ರಭಾವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿಲ್ಲ ಎಂದರು.

    ಕಾರ್ಯಕರ್ತರ ಪರಿಶ್ರಮ, ಮನೆಗೆ ಮನೆಗೆ ಹೋಗಿ ಅವರು ಮಾಡಿದಂತಹ ಪ್ರಯತ್ನಗಳು ಇದಕ್ಕೆ ಸಿಕ್ಕಂತಹ ಜಯವಿದು. ನರೇಂದ್ರ ಮೋದಿ ಅವರ ವಿಚಾರಕ್ಕೆ ಶಿವಮೊಗ್ಗದಲ್ಲಿ ಮೊದಲಿನಿಂದಲೂ ಬೆಂಬಲ ಕೊಡುತ್ತಿದ್ದೇವೆ. ಬಿಜೆಪಿ ವಿಧಾನ ಸಭೆ ಚುನಾವಣೆಯಲ್ಲೂ ಕೂಡಾ 8 ಕ್ಷೇತ್ರದಲ್ಲಿ 7 ಕ್ಷೇತ್ರವನ್ನು ಗೆಲ್ಲಿಸಿಕೊಟ್ಟಿದೆ. ಮುಂದೆ ಲೋಕಸಭೆಗೂ ಬೆಂಬಲವನ್ನು ನೀಡುತ್ತೇವೆ ಎನ್ನುವುದನ್ನು ಅಂದೇ ತೋರಿಸಿದ್ದಾರೆ. ಶಿವಮೊಗ್ಗದಲ್ಲಿ ಅತಿ ಹೆಚ್ಚು ಯಶಸ್ವಿಯಾಗಿ ಬಿಜೆಪಿ ಗೆಲುವು ಪಡೆದುಕೊಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಜೆಡಿಎಸ್ ಮತ್ತು ಕಾಂಗ್ರೆಸ್‍ನ ವ್ಯಕ್ತಿಗಳು ಹಾವು ಮುಂಗುಸಿಗಳು ಅವರು ಒಟ್ಟಿಗೆ ಸೇರುವುದೇ ಅಪರೂಪ. ಈ ಒಂದು ಚುನಾವಣೆಯಲ್ಲಿ ಸರ್ಕಾರವನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂದು ಬಂದಿದ್ದರು. ಇನ್ನೂ ಮುಂದೆಯಾದರೂ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಸರ್ಕಾರ ಇದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಕೆಲಸಗಳನ್ನು ಮಾಡಬೇಕೆಂದು ಮನವಿ ಮಾಡಿಕೊಂಡರು.

    ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಹಿಂದೆದೂ ಕೂಡಾ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿ ಇರಲಿಲ್ಲ ಮತ್ತು ಇಷ್ಟು ಹಣವನ್ನು ಖರ್ಚು ಮಾಡಿರಲಿಲ್ಲ. ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ, ಶಿವಕುಮಾರ್ ಅವರು ಒಟ್ಟಿಗೆ ಎಂದೂ ಒಂದಾಗಿರಲಿಲ್ಲ. ದೇಶಕ್ಕೆ ಒಳ್ಳೆಯದು ಮಾಡಬೇಕು ಎನ್ನುವ ಉದ್ದೇಶ ಏನು ಇಲ್ಲ. ತಮ್ಮ ಅಸ್ಥಿತ್ವವನ್ನು ಉಳಿಸಲು ಒಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 52,148 ಮತಗಳ ಅಂತರದಿಂದ ರಾಘವೇಂದ್ರಗೆ ಗೆಲುವು- ಶಿವಮೊಗ್ಗದಲ್ಲಿ ಯಾರಿಗೆ ಎಷ್ಟು ಮತ?

    52,148 ಮತಗಳ ಅಂತರದಿಂದ ರಾಘವೇಂದ್ರಗೆ ಗೆಲುವು- ಶಿವಮೊಗ್ಗದಲ್ಲಿ ಯಾರಿಗೆ ಎಷ್ಟು ಮತ?

    ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು 52,148 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರು 5,43,306 ಮತಗಳನ್ನು ಪಡೆದಿದ್ದರೆ, ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ 4,91,158 ಮತಗಳನ್ನು ಗಳಿಸಿದ್ದರು. ಈ ಪ್ರಬಲ ಸ್ಪರ್ಧಿಯ ನಡುವೆಯೂ ಕಣಕ್ಕೆ ಇಳಿದ್ದ ಜೆಡಿಯು ಮಹಿಮಾ ಪಟೇಲ್ 8,713 ಹಾಗೂ ಪಕ್ಷೇತರ ಶಶಿಕುಮಾರ್ ಗೌಡ 17,189 ವೋಟ್‍ಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 10,687 ಮತದಾರರು ನೋಟಾ ಒತ್ತಿದ್ದಾರೆ.

    ಇತ್ತ ಮತ ಎಣಿಕೆ ಪ್ರಾರಂಭ ಹಂತವಾದ ಅಂಚೆ ಮತಗಳಲ್ಲಿಯೂ ಬಿ.ವೈ.ರಾಘವೇಂದ್ರ ಮುನ್ನಡೆ ಸಾಧಿಸಿದ್ದರು. ಒಟ್ಟು 86 ಅಂಚೆ ಮತಗಳಲ್ಲಿ, ರಾಘವೇಂದ್ರ 23, ಮಧು ಬಂಗಾರಪ್ಪ 17 ಪಡೆದಿದ್ದರು. ಉಳಿದಂತೆ 46 ಮತಗಳು ತಿರಸ್ಕೃತಗೊಂಡಿವೆ.

    2014ರ ಚುನಾವಣೆಯಲ್ಲಿ ಯಡಿಯೂರಪ್ಪ 3,63,305 ಮತಗಳ ಅಂತರದಿಂದ ಜಯಗಳಿಸಿದ್ದರು. ಯಡಿಯೂರಪ್ಪ 6,06,216 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ಸಿನ ಮಂಜುನಾಥ ಭಂಡಾರಿ 2,42,911 ಮತಗಳನ್ನು ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಮಾರಣ್ಣನಿಗಾಗಿ ಫ್ಲೈಟ್ ಹಿಡಿದುಕೊಂಡು ಶಿವಮೊಗ್ಗಕ್ಕೆ ಬಂದೆ: ಮಧು ಬಂಗಾರಪ್ಪ

    ಕುಮಾರಣ್ಣನಿಗಾಗಿ ಫ್ಲೈಟ್ ಹಿಡಿದುಕೊಂಡು ಶಿವಮೊಗ್ಗಕ್ಕೆ ಬಂದೆ: ಮಧು ಬಂಗಾರಪ್ಪ

    ಶಿವಮೊಗ್ಗ: ನಾಲ್ಕು ತಿಂಗಳಿಗೆ ಉಪಚುನಾವಣೆ ಅವಶ್ಯಕತೆ ಇರಲಿಲ್ಲ. ಸುಮ್ಮನೆ ಹಣ ಪೋಲಾಗುತ್ತದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಫೋನ್ ಕರೆ ಮಾಡಿ, ನೀವೇ ಕಣಕ್ಕೆ ಇಳಿಯಬೇಕು ಅಂತಾ ತಿಳಿಸಿದರು. ಈ ಹಿನ್ನೆಲೆಯಲ್ಲಿ ಕುಮಾರಣ್ಣನಿಗಾಗಿ ಫ್ಲೈಟ್ ಹತ್ತಿಕೊಂಡು ಶಿವಮೊಗ್ಗಕ್ಕೆ ಬಂದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದ್ದಾರೆ.

    ಜಿಲ್ಲೆಯ ಶಿರಾಳಕೊಪ್ಪದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಗೆ ಬೇರೆ ಯಾರೇ ಸ್ಪರ್ಧಿಸಿದರೂ ಅವರಿಗೆ ಬೆಂಬಲ ನೀಡುತ್ತೇನೆ ಅಂತಾ ವಿದೇಶದಲ್ಲಿದ್ದಾಗ ಕಾಂಗ್ರೆಸ್‍ನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೇರಿದಂತೆ ಅನೇಕ ನಾಯಕರು ಒತ್ತಾಯ ಮಾಡಿದರು. ಹೀಗಾಗಿ ನಾನು ಉಪಚುನಾವಣೆ ಎದುರಿಸುತ್ತಿರುವೆ ಎಂದರು.

    ನಾನು ಯಾರ ಬಗ್ಗೆಯೂ ಮಾತನಾಡಲ್ಲ. ಒಂಬತ್ತೂವರೆ ವರ್ಷ ಏನು ಮಾಡಿದರು ಎನ್ನುವುದನ್ನು ಯೋಚನೆ ಮಾಡಿ. ನಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸೋಲಿಗೆ ಕಾರಣರಾಗಿದ್ದು ನ್ಯಾಯಾನಾ? ಈ ಬಾರಿ ಎಸ್.ಬಂಗಾರಪ್ಪ ಅವರ ಪುತ್ರನಾದ ನನ್ನನ್ನು ಗೆಲ್ಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಭಾವನಾತ್ಮಕವಾಗಿ ಮತದಾರರನ್ನು ತಲುಪುವ ಪ್ರಯತ್ನ ಮಧು ಬಂಗಾರಪ್ಪ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವೆಂಬರ್ 3ರವರೆಗೆ ವಿಧಾನಸೌಧಕ್ಕೆ ಬಾಗಿಲು ಹಾಕಿ- ಮೈತ್ರಿ ಸರ್ಕಾರದ ವಿರುದ್ಧ ಬಿಎಸ್‍ವೈ ಕಿಡಿ

    ನವೆಂಬರ್ 3ರವರೆಗೆ ವಿಧಾನಸೌಧಕ್ಕೆ ಬಾಗಿಲು ಹಾಕಿ- ಮೈತ್ರಿ ಸರ್ಕಾರದ ವಿರುದ್ಧ ಬಿಎಸ್‍ವೈ ಕಿಡಿ

    ಮೈಸೂರು: ಬಳ್ಳಾರಿ ಹಾಗೂ ಶಿವಮೊಗ್ಗ ಕ್ಷೇತ್ರದಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ಹರಸಾಹಸ ಪಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ರಣತಂತ್ರ ಹೂಡಿದ್ದು, ಸಚಿವರು, ಶಾಸಕರು ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಮಂಡ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆ.ಆರ್.ನಗರದಲ್ಲಿ ಇಂದು ಪ್ರಚಾರ ಸಭೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇಡೀ ಸರ್ಕಾರದ ದಂಡೇ ಶಿವಮೊಗ್ಗ – ಬಳ್ಳಾರಿಗೆ ಬಂದಿದೆ. ಇನ್ನೂ ಯಾಕೆ ವಿಧಾನಸೌಧದ ಬಾಗಿಲು ತೆಗೆದಿದ್ದೀರಾ. ನವೆಂಬರ್ 3ರವರೆಗೆ ವಿಧಾನಸೌಧದ ಬಾಗಿಲು ಹಾಕಿ ಬಿಡಿ. ಸರ್ಕಾರವೇ ಎರಡೂ ಕ್ಷೇತ್ರಗಳಿಗೆ ಬಂದಿದ್ದು, ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ ಎಂದು ಆರೋಪಿಸಿದ್ದಾರೆ.

    ಸರ್ಕಾರಕ್ಕೆ ಬಡವರ ಕಷ್ಟ ಪರಿಹರಿಸುವುದು ಬೇಕಾಗಿಲ್ಲ. ಕೆಲಸ ಮರೆತು ಎಲ್ಲರೂ ದಂಡು ಕಟ್ಟಿಕೊಂಡು ಶಿವಮೊಗ್ಗ-ಬಳ್ಳಾರಿಗೆ ಬಂದು ಕೂತಿದ್ದಾರೆ. ಸರ್ಕಾರದ ಖಜಾನೆ ದಿವಾಳಿಯಾಗಿದೆ. ನನ್ನ ಆಡಳಿತದ ಅವಧಿಯಲ್ಲಿ ಬಡವರ ಅಂತ್ಯಸಂಸ್ಕಾರಕ್ಕೆ ಇಟ್ಟಿದ್ದ ಸಹಾಯಧನದ ಹಣವನ್ನು ಸರ್ಕಾರ ರೈತರ ಸಾಲ ಮನ್ನಕ್ಕೆ ಬಳಸುತ್ತಿದೆ. ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ನಾವು ಸೂಕ್ತ ಅಭ್ಯರ್ಥಿ ಹಾಕದೆ ತಪ್ಪು ಮಾಡಿದ್ದೇವೆ. ನಮ್ಮನ್ನು ಕ್ಷಮಿಸಿ. ನಾವು ಒಳ್ಳೆ ಅಭ್ಯರ್ಥಿ ಹಾಕಿದ್ದರೆ ಇವತ್ತು ನಮ್ಮ ಶಾಸಕರು ಇಲ್ಲಿ ಇರುತ್ತಿದ್ದರು ಎಂದು ಕ್ಷೇತ್ರದ ಜನರ ಕ್ಷಮೆ ಕೇಳಿದರು.

    ಬಳ್ಳಾರಿ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ವಹಿಸಿಕೊಂಡಿದ್ದಾರೆ. ಹೀಗಾಗಿ ಅವರ ಬೆನ್ನಿಗೆ ಅನೇಕ ಶಾಸಕರು, ಸಚಿವರು ನಿಂತಿದ್ದಾರೆ. ಇತ್ತ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಕಣಕ್ಕೆ ಇಳಿದಿದ್ದು, ಜೆಡಿಎಸ್ ಸಚಿವರು ಹಾಗೂ ಸಚಿವರು ಅವರ ಬೆಂಬಲಕ್ಕೆ ನಿಂತಿದ್ದಾರೆ.

    ಶಿವಮೊಗ್ಗ ಕ್ಷೇತ್ರದಿಂದ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಸೋಲುತ್ತಾರೆ ಎನ್ನುವ ಭೀತಿ ಎದುರಾಗಿದೆ ಅಂತಾ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದಕ್ಕೆ ತಂತ್ರವನ್ನು ಹೂಡಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಕಸರತ್ತು!

    ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ಕಸರತ್ತು!

    – ಅಂಬಿ ಭೇಟಿಯಾದ ಬಿಜೆಪಿ ಅಭ್ಯರ್ಥಿ

    ಮಂಡ್ಯ: ಇಲ್ಲಿನ ಲೋಕಸಭಾ ಉಪಚುನಾವಣೆಯ ಕಾವು ಜೋರಾಗಿದ್ದು, ಈ ಬಾರಿಯಾದ್ರೂ ಕಮಲ ಅರಳಿಸಲೇ ಬೇಕು ಅಂತ ಬಿಜೆಪಿ ಇನ್ನಿಲ್ಲದ ಕಸರತ್ತು ಮಾಡ್ತಿದೆ.

    ಮೈತ್ರಿ ಒಪ್ಪಂದದಂತೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್, ಜೆಡಿಎಸ್‍ಗೆ ಬಿಟ್ಟುಕೊಟ್ಟಿದೆ. ಆದ್ರೆ ಇಲ್ಲಿ ಮೊದಲಿನಿಂದ್ಲೂ ಜೆಡಿಎಸ್- ಕಾಂಗ್ರೆಸ್ ಬದ್ಧವೈರಿಗಾಳಾಗಿ ಚುನಾವಣೆ ಎದುರಿಸಿದ್ದವು. ಹೀಗಾಗಿ ದೋಸ್ತಿ ಅಭ್ಯರ್ಥಿ ಶಿವರಾಮೇಗೌಡಗೆ ನಮ್ಮ ಬೆಂಬಲವಿಲ್ಲ ಅಂತ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಹೇಳ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಅಭ್ಯರ್ಥಿ ಸಿದ್ದರಾಮಯ್ಯ ಮಂಡ್ಯದಲ್ಲಿ ಕಮಲ ಅರಳಿಸಲು ಕಸರತ್ತು ಆರಂಭಿಸಿದ್ದಾರೆ. ಇದನ್ನು ಓದಿ: ಶಿವರಾಮೇಗೌಡ್ರಿಗೆ ಯಾವುದೇ ಕಾರಣಕ್ಕೂ ವೋಟ್ ಹಾಕಲ್ಲ: ರಮ್ಯಾ ಅಭಿಮಾನಿಗಳು

    ಪ್ರತಿದಿನ ಕಾಂಗ್ರೆಸ್ ನಾಯಕರ ಮನೆಗೆ ತೆರಳಿ ಸಹಕಾರ ಯಾಚಿಸ್ತಿದ್ದಾರೆ. ಜೊತೆ ಮಂಡ್ಯದ ಗಂಡು ಅಂಬರೀಶ್ ಅವರನ್ನೂ ಭೇಟಿಯಾಗಿ ಬೆಂಬಲ ಕೋರೋದಾಗಿ ಹೇಳ್ತಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿಗೆ ಬಹುತೇಕ ಕಾಂಗ್ರೆಸ್ ಮುಖಂಡರು ಖುಷಿಯಿಂದಲೇ ಸಹಕಾರ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಆದ್ರೆ ಜೆಡಿಎಸ್ ಮುಖಂಡರು ಮಾತ್ರ, ಚುನಾವಣೆ ಸಮಯದಲ್ಲಿ ಎಲ್ಲ ಪಕ್ಷದ ಅಭ್ಯರ್ಥಿಗಳು ಬೇರೆ ಪಕ್ಷದ ಮುಖಂಡರನ್ನು ಭೇಟಿ ಮಾಡುವುದು ಸಹಜ. ಸಿದ್ದರಾಮಯ್ಯ ಕೇಳಿದ್ರು ಅಂತ ಕಾಂಗ್ರೆಸ್ ನಾಯಕರು ಜೆಡಿಎಸ್ ಅಭ್ಯರ್ಥಿಯನ್ನು ಕೈ ಬಿಡಲ್ಲ ಅಂತ ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಹು, ಕೇತು ಶನಿಗಳು ನಾಮಪತ್ರ ಸಲ್ಲಿಕೆಗೆ ಬರ್ತಾರೆ- ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್

    ರಾಹು, ಕೇತು ಶನಿಗಳು ನಾಮಪತ್ರ ಸಲ್ಲಿಕೆಗೆ ಬರ್ತಾರೆ- ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್

    -ನಾವು ಪ್ರಧಾನಿ ಮೋದಿ, ಸಂಘಟನೆ, ಹಿಂದುತ್ವದ ಆಧಾರ ಮೇಲೆ ಚುನಾವಣೆ ಗೆಲ್ಲುತ್ತೇವೆ

    ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶೈಲಿಯಲ್ಲಿಯೇ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪನವರು ಜೆಡಿಎಸ್‍ಗೆ ಟಾಂಗ್ ಕೊಟ್ಟಿದಾರೆ. ನಾಳೆ ನಾಮಪತ್ರ ಸಲ್ಲಿಸಲು ಸಿದ್ದರಾಮಯ್ಯ ಅವರನ್ನು ಸೋಲಿಸಿದ ರಾಹು, ಕೇತು, ಶನಿಗಳು ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಶಿವಮೊಗ್ಗ ಲೋಕಸಭಾ ಉಪಚುನಾವಣೆಗೆ ಇಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ನಾಮಪತ್ರ ಸಲ್ಲಿಸಿದರು. ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, ಸಿದ್ದರಾಮಯ್ಯ ಅವರು ಹುಚ್ಚುಹುಚ್ಚಾಗಿ ಮಾತನಾಡುತ್ತಿದ್ದಾರೆ. ಅವರನ್ನು ನಂಬಿ ಮಧು ಬಂಗಾರಪ್ಪ ಅವರು ಚುನಾವಣೆಗೆ ನಿಲ್ಲುತ್ತಿದ್ದಾರೆ. ದಂಗೆ ಏಳಲು ಕರೆ ನೀಡುತ್ತೇನೆ ಅಂತಾ ಹೇಳಿದ್ದ ಸರ್ವಾಧಿಕಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷಮೆ ಕೇಳುವಂತೆ ಜಿಲ್ಲೆಯ ಜನತೆಗೆ ಒತ್ತಾಯಿಸುತ್ತೇನೆ ಎಂದರು.

    ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ ಎನ್ನುವುದಕ್ಕೆ ಶಿವಮೊಗ್ಗ ಕ್ಷೇತ್ರವೇ ಉದಾಹರಣೆ. ಇಲ್ಲಿ ಕಾಂಗ್ರೆಸ್‍ನ ಒಬ್ಬ ಅಭ್ಯರ್ಥಿ ಕೂಡ ಇಲ್ಲದಂತಾಗಿದೆ. ಮಧು ಬಂಗಾರಪ್ಪ ಅವರು ಆರಾಮಾಗಿ ವಿದೇಶದಲ್ಲಿ ಇದ್ದರು. ಅವರನ್ನು ಬಾ.. ಬಾ.. ಅಂತಾ ಕರೆತಂದು ಮಾರಮ್ಮನ ಜಾತ್ರೆಗೆ ಕುರಿ ಕರೆದುಕೊಂಡು ಬಂದಂತೆ ಕರೆಸಿದ್ದಾರೆ. ಹಣ ಇಲ್ಲ, ನಾನು ಉಪಚುನಾವಣೆ ಕಣಕ್ಕೆ ಇಳಿಯುವುದಿಲ್ಲ ಅಂತಾ ಕಿಮ್ಮನೆ ರತ್ನಾಕರ್ ಅವರು ಹೇಳಿದ್ದಾರೆ. ಈಗ ಮಧು ಬಂಗಾರಪ್ಪ ಅವರಿಗೆ ಯಾರು ಹಣ ಕೊಡುತ್ತಾರೆ ಎಂದು ಪ್ರಶ್ನಿಸಿದರು.

    ಇದಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಸಂಘಟನೆ, ಹಿಂದುತ್ವದ ಆಧಾರ ಮೇಲೆ ಉಪಚುನಾವಣೆ ಗೆಲ್ಲುತ್ತೇವೆ ಎಂದು ಹೇಳಿದರು. ಬಿಜೆಪಿ ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಗೋವಿಂದ ಕಾರಜೋಳ ಸೇರಿದಂತೆ ಅನೇಕ ಶಾಸಕರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಪಚುನಾವಣೆಗೆ ಭರ್ಜರಿ ತಯಾರಿ ನಡೆಸ್ತಿದ್ದಾರೆ ರಮ್ಯಾ ತಾಯಿ!

    ಉಪಚುನಾವಣೆಗೆ ಭರ್ಜರಿ ತಯಾರಿ ನಡೆಸ್ತಿದ್ದಾರೆ ರಮ್ಯಾ ತಾಯಿ!

    ಮಂಡ್ಯ: ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಲು ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ತಯಾರಿ ನಡೆಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ರಂಜಿತಾ ಅವರು ಈಗಾಗಲೇ ಅಫಿಡವಿಡ್ ರೆಡಿ ಮಾಡುತ್ತಿದ್ದಾರೆ.

    ದಾಖಲೆಯಲ್ಲಿ ಯಾವುದೇ ರೀತಿ ತಪ್ಪಾಗದಂತೆ ತಮ್ಮ ಆಪ್ತ ವಕೀಲರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ. ಸಡನ್ ಆಗಿ ಹೆಸರು ಅನೌನ್ಸ್ ಮಾಡಿದ್ರೆ ಸಿದ್ಧವಿರೋಣ ಅಂತಾ ಅಫಿಡವಿಡ್ ರೆಡಿ ಮಾಡ್ತಿದ್ದೇವೆ ಅಂತ ಸುದ್ದಿಗಾರರಿಗೆ ಹೇಳಿದ್ದಾರೆ.

    ಜೆಡಿಎಸ್‍ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡುವುದು ಸಮಂಜಸವಲ್ಲ. ಈಗಲೂ ಅಭ್ಯರ್ಥಿ ಹಾಕದಿದ್ರೆ 2019ರ ಚುನಾವಣೆಯಲ್ಲಿ ಕಷ್ಟ ಆಗುತ್ತೆ. ಮಂಡ್ಯದಲ್ಲಿ ರಮ್ಯಾಗೆ ಮತ್ತೆ ಅವಕಾಶ ಕೊಡಿ. ಅವರು ವಾಪಸ್ ಬರ್ತಾರೆ. ಇಲ್ಲ ನನಗೆ ಅವಕಾಶ ಕೊಡಿ. ನಾನು ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧಿಸಲ್ಲ. ಪಕ್ಷದ ವರಿಷ್ಠರು ಹೇಳಿದಂತೆ ಕೇಳುತ್ತೇವೆ ಅಂತ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುನಾವಣೆಯಲ್ಲಿ ಬೆನ್ನು ತೋರಿಸಿ ಹೋಗುವ ಜಾಯಮಾನ ನನ್ನದಲ್ಲ: ಶಾಸಕ ಶ್ರೀರಾಮುಲು

    ಚುನಾವಣೆಯಲ್ಲಿ ಬೆನ್ನು ತೋರಿಸಿ ಹೋಗುವ ಜಾಯಮಾನ ನನ್ನದಲ್ಲ: ಶಾಸಕ ಶ್ರೀರಾಮುಲು

    ಬಳ್ಳಾರಿ: ಚುನಾವಣೆಯಲ್ಲಿ ಬೆನ್ನು ತೋರಿಸಿ ಹೋಗುವ ಜಾಯಮಾನ ನನ್ನದಲ್ಲ. ಬಳ್ಳಾರಿ ಲೋಕಸಭಾ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಸಿದ್ದೇನೆ. ಜೊತೆಗೆ ಕೇಂದ್ರ ಸರ್ಕಾರವೇ ಬಳ್ಳಾರಿಗೆ ಬರಲಿ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.

    ನಗರದಲ್ಲಿ ಇಂದು ನಡೆದ ಸಹೋದರಿ, ಮಾಜಿ ಸಂಸದೆ ಜೆ.ಶಾಂತಾ ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗವಿಹಿಸಿ, ವಧುವರರಿಗೆ ಶುಭ ಕೋರಿದರು. ಬಳಿಕ ಮಾತನಾಡಿದ ಶಾಸಕರು, ಬಳ್ಳಾರಿ ಉಪಚುನಾವಣೆಗೆ ರಾಜ್ಯ ಸರ್ಕಾರವೇ ಬರಲಿ, ಅದೇಷ್ಟೇ ಪ್ರಭಾವಿ ಸಚಿವರು ಬಂದರೂ ನಾವೇ ಗೆಲ್ಲುವುದು ಎಂದು ಟಾಂಗ್ ಕೊಟ್ಟಿದ್ದಾರೆ.

    ಲೋಕಸಭಾ ಉಪಚುನಾವಣೆ ಬಳ್ಳಾರಿ ಕ್ಷೇತ್ರವು ಮಹಾಭಾರತ ಯುದ್ಧದ ಕಣದಂತಾಗಿದೆ. ಈ ಯುದ್ಧದಲ್ಲಿ ಬಿಜೆಪಿ ಗೆಲವು ಸಾಧಿಸುವ ಮೂಲಕ ಇತಿಹಾಸವನ್ನು ಮರಕಳಿಸುತ್ತದೆ ಎಂದ ಅವರು, ಬಿಜೆಪಿ ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ. ಈಗಾಗಲೇ 5 ಜನರ ಪಟ್ಟಿಯನ್ನು ಹೈಕಮಾಂಡ್‍ಗೆ ಕಳುಹಿಸಲಾಗಿದೆ. ಶುಕ್ರವಾರ ಅಭ್ಯರ್ಥಿ ಹೆಸರು ಘೋಷಣೆ ಅಂತಿಮವಾಗಲಿದೆ ಎಂದು ತಿಳಿಸಿದರು.

    ಟಿಕೆಟ್ ಆಕ್ಷಾಂಕಿ ಹಾಗೂ ಮಾಜಿ ಸಂಸದೆ ಶಾಂತಾ ಮಾತನಾಡಿ, ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧಳಾಗಿದ್ದೇನೆ. ನಾವು ಸೈನಿಕರಿದ್ದಂತೆ ಪಕ್ಷ ಸೂಚಿಸಿದಂತೆ ನಡೆಯುತ್ತೇವೆ. ಚುನಾವಣೆ ಹೋರಾಟಕ್ಕೆ ಸಜ್ಜಾಗುತ್ತೇವೆ. ಯಾರೇ ಅಭ್ಯರ್ಥಿಯಾದರೂ ಸರಿ, ಪ್ರತಿಸ್ಪರ್ಧೆ ನೀಡುತ್ತೇವೆ. ಟಿಕೆಟ್ ಸಿಕ್ಕರೆ ಬಳ್ಳಾರಿಯ ಮಗಳಾಗಿ ಕೆಲಸ ಮಾಡುತ್ತೇನೆ. ಒಂದು ವೇಳೆ ಕೈ ತಪ್ಪಿದರೆ, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv