Tag: ಲೋಕಸಬಾ ಚುನಾವಣೆ

  • ಹಿಂದಿನ ಚುನಾವಣೆಯಲ್ಲಿ ಪುಲ್ವಾಮಾ, ಈಗ ರಾಮನ ಫೋಟೋ ಹಿಡಿದಿದ್ದಾರೆ- ಕೇಂದ್ರದ ವಿರುದ್ಧ ಸುಧಾಕರ್‌ ಕಿಡಿ

    ಹಿಂದಿನ ಚುನಾವಣೆಯಲ್ಲಿ ಪುಲ್ವಾಮಾ, ಈಗ ರಾಮನ ಫೋಟೋ ಹಿಡಿದಿದ್ದಾರೆ- ಕೇಂದ್ರದ ವಿರುದ್ಧ ಸುಧಾಕರ್‌ ಕಿಡಿ

    ಚಿತ್ರದುರ್ಗ: ಈ ಹಿಂದಿನ ಚುನಾವಣೆ ವೇಳೆ ಪುಲ್ವಾಮಾ (Pulwama) ಘಟನೆ ತೋರಿಸಿದ್ದರು. ಈಗ ರಾಮನ (Rama) ಫೋಟೋ ಹಿಡಿದಿದ್ದಾರೆ ಎಂದು ಸಾಂಖಿಕ ಸಚಿವ ಡಿ.ಸುಧಾಕರ್ (D Sudhakar) ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ಚಿತ್ರದುರ್ಗದ ಡಿಸಿಸಿ ಬ್ಯಾಂಕ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ (Ayodhya Ram Mandir) ಉದ್ಘಾಟನೆ ಒಂದು ಸ್ಟಂಟ್. ಜನರು ದಡ್ಡರಿಲ್ಲ, ಎರಡು ಸಲ ಮೂರ್ಖರಾಗಿದ್ದೀವಿ. ಮತ್ತೆ ಮೂರನೇ ಸಲ ಮೂರ್ಖರಾಗಲ್ಲ ಆಗಲ್ಲ ಎಂಬ ಭರವಸೆಯಿದೆ ಎಂದರು.

    ಲೋಕಸಭಾ ಚುನಾವಣೆಯ (Loksabha Election) ಹಿನ್ನೆಲೆಯಲ್ಲಿ ರಾಮಮಂದಿರ ಉದ್ಘಾಟನೆ ಎಂಬುದು ಸತ್ಯ. ರಾಮಮಂದಿರಕ್ಕೆ ನಾನು, ಶಾಸಕ ರಘುಮೂರ್ತಿ ದುಡ್ಡು ಕೊಟ್ಟಿದ್ದೇವೆ. ಹಿಂದೆಲ್ಲಾ ಇಟ್ಟಿಗೆ ಸಹ ನಾವೆಲ್ಲಾ ನೀಡಿದ್ದೇವೆ. ರಾಮ ಎಲ್ಲರಿಗೂ ದೇವರು, ಚುನಾವಣೆ ವೇಳೆ ದೇಗುಲ ಉದ್ಘಾಟನೆ ಗಿಮಿಕ್ ಎಂದು ವಾಗ್ದಾಳಿ ನಡೆಸಿದರು.

    ಭಾರತ ದೇಶದ ಧಾರ್ಮಿಕ ನಂಬಿಕೆ ಬಳಸಿ ಬಿಜೆಪಿಯಿಂದ (BJP) ಮತ ಗಾಳ ಹಾಕಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಎಲ್ಲಿತ್ತು ರಾಮ ಮಂದಿರ?, ಸುಮ್ಮ ಸುಮ್ಮನೆ ಯಾವುದೋ ಫ್ಲೈಟ್ ತೋರಿಸಿದ್ದರು. ಪಾಪ ಜನ ದೇಶ ಕಾಪಾಡುತ್ತಾರೆಂದು ನಂಬಿದರು. ಪುಲ್ವಾಮಾ ಘಟನೆಯಲ್ಲಿ ಎಷ್ಟು ಜನರು ಸತ್ತರು?, ಪುಲ್ವಾಮಾ ಘಟನೆ ಕ್ರಿಯೇಟೆಡ್ ಎಂದು ಪೈಲೆಟ್ ಹೇಳಿಲ್ವಾ?, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಆಗಿದೆ, ಸೆಕ್ಯುಲರ್ ತತ್ವ ಎಲ್ಲಿ ಹೋಯಿತು ಎಂದು ಪ್ರಶ್ನಿಸುವ ಮೂಲಕ ಹೆಚ್‌ಡಿಕೆಗೆ ಸುಧಾಕರ್‌ ಟಾಂಗ್‌ ನೀಡಿದರು.

    ಇದೇ ವೇಳೆ ಬಿಜೆಪಿ ಆಡಳಿತಲ್ಲಿ ಭ್ರಷ್ಟಾಚಾರ ಎಂದು ಶಾಸಕ ಯತ್ನಾಳ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಶಾಸಕ ಯತ್ನಾಳ್ ಎಲ್ಲಿವರೆಗೆ ನೋಡಿಕೊಂಡಿರುತ್ತಾರೆ. 40% ಸರ್ಕಾರ ಎಂದೇ ಕುಖ್ಯಾತಿ ಗಳಿಸಿದ್ದು ಸತ್ಯ. ಬೆಲೆ ಏರಿಕೆ, ಭ್ರಷ್ಟಾಚಾರ ನೋಡಿಯೇ ಜನ ಕಾಂಗ್ರೆಸ್‌ ಕೈ ಹಿಡಿದಿದ್ದಾರೆ ಎಂದರು. ಇದನ್ನೂ ಓದಿ: ಅಯೋಧ್ಯೆಯನ್ನು ಮತ್ತೆ ಬೆಳಕಿಗೆ ತರಲು ಮೋದಿಯಿಂದ ಮಾತ್ರ ಸಾಧ್ಯವಾಯ್ತು: ಮಾರಿಷಸ್‌ ಸಂಸದ

    ಶಾಲೆಯಲ್ಲಿ ಮಕ್ಕಳಿಂದ ಶೌಚಗುಂಡಿ ಕ್ಲೀನ್ ವಿಚಾರ ಸರ್ಕಾರದ ಬೇಜವಬ್ದಾರಿಯಿಂದ ಪ್ರಕರಣ ಎಂದ ಮಾಜಿ ಸಿಎಂ ಹೆಚ್‌ಡಿಕೆಗೆ ತಿರುಗೇಟು ನೀಡಿದರು. ನಾವು ಸಹ ಶಾಲಾ ವಿದ್ಯಾರ್ಥಿ ಆಗಿದ್ದಾಗ ಕಸ ಗುಡಿಸಿದ್ದೇವೆ. ಆದರೆ ಮಕ್ಕಳಿಂದ ಶೌಚಗುಂಡಿ ಕ್ಲೀನ್ ಮಾಡಿಸುವುದು ಸರಿಯಲ್ಲ. ಮಕ್ಕಳಿಂದ ಶೌಚಗುಂಡಿ ಕ್ಲೀನ್ ವಿಚಾರ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

  • ಅಂಚೆ ಮತ ಎಣಿಕೆ – ಯಾವ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ?

    ಅಂಚೆ ಮತ ಎಣಿಕೆ – ಯಾವ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ?

    ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಶುರುವಾಗಿದ್ದು, ಈಗಾಗಲೇ ಅಂಚೆ ಮತದಾನದ ಎಣಿಕೆ ಬಿರುಸಿನಿಂದ ಶುರುವಾಗಿದೆ.

    ಮೊದಲಿಗೆ ಹಾಸನ ಜಿಲ್ಲೆಯಲ್ಲಿ ಅಂಚೆ ಮತದಾನದಲ್ಲಿ ಎ.ಮಂಜು ಮುನ್ನಡೆ ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ಅಭ್ಯರ್ಥಿ ಮಂಜು ಅವರು 350 ಮತ ಹಾಗೂ ಜೆಡಿಎಸ್ ಪ್ರಜ್ವಲ್ 200 ಅಂಚೆ ಮತಗಳನ್ನು ಪಡೆದುಕೊಂಡಿದ್ದಾರೆ.

    ಮಂಡ್ಯದಲ್ಲಿ ಅಂಚೆ ಮತ ಎಣಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಥುನ್ ರೈ, ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಮತ್ತು ತುಮಕೂರಿನಲ್ಲಿ ದೇವೇಗೌಡ ಅವರು ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

    ಚಿಕ್ಕೋಡಿ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಉತ್ತರ ಕನ್ನಡ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ರಾಯಚೂರಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಇನ್ನೂ ಕಲಬುರಗಿಯಲ್ಲಿ ಖರ್ಗೆ ಹಿನ್ನಡೆ ಸಾಧಿಸಿದ್ದಾರೆ. ಉಮೇಶ್ ಜಾಧವ್ 2 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

    ಹಾಸನದಲ್ಲಿ ಈಗ ಪ್ರಜ್ವಲ್ ಮುನ್ನಡೆ ಸಾಧಿಸಿದ್ದು, ಮಂಡ್ಯದಲ್ಲಿ ಮತ್ತೆ ನಿಖಿಲ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇತ್ತ ಚಾಮರಾಜನಗರದಲ್ಲಿ ಕಾಂಗ್ರೆಸ್ ಹಿನ್ನಡೆ ಸಾಧಿಸಿದ್ದು, ಮೈಸೂರಿನಲ್ಲಿ ಪ್ರತಾಪ್ ಸಿಂಹ ಮುನ್ನಡೆ ಸಾಧಿಸಿದ್ದಾರೆ. ಉತ್ತರ ಭಾರತದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಅಂತಹ ದುರ್ಗತಿ ನಮ್ಗೆ ಬಂದಿಲ್ಲ: ಸುಮಲತಾ ವಿರುದ್ಧ ಸಿಡಿದ ಪುಟ್ಟರಾಜು

    ಅಂತಹ ದುರ್ಗತಿ ನಮ್ಗೆ ಬಂದಿಲ್ಲ: ಸುಮಲತಾ ವಿರುದ್ಧ ಸಿಡಿದ ಪುಟ್ಟರಾಜು

    ಮಂಡ್ಯ: ಸುಮಲತಾ ಅವರು ನಮ್ಮ ಸಾಮಾಜಿಕ ಜಾಲತಾಣದ ಹುಡುಗರಿಗೆ ಜೆಡಿಎಸ್ ಹಣದ ಆಮಿಷವೊಡ್ಡಿದೆ ಎನ್ನುವ ಆರೋಪಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಅಂತಹ ದುರ್ಗತಿ ನಮಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಿ.ಎಸ್.ಪುಟ್ಟರಾಜು, ಅಂತಹ ದುರ್ಗತಿ ನಮಗೆ ಬಂದಿಲ್ಲ. ಅವರ ತಪ್ಪಿಲ್ಲ ಎಂದರೆ ಏಕೆ ಆತಂಕ ಪಡಬೇಕು. ಸುಳ್ಳು ಹೇಳುವುದನ್ನು ಸುಮಲತಾ ಅಕ್ಕ ಅವರು ಕಡಿಮೆ ಮಾಡಿ ಮತಯಾಚನೆ ಮಾಡಲಿ. ಏಪ್ರಿಲ್ 18ರಂದು ಜನರು ತೀರ್ಮಾನ ಮಾಡುತ್ತಾರೆ. ಅವರು ಯಾಕಿಷ್ಟು ಡಿಪ್ರೆಸ್ ಆಗುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ:1 ಸೈಟ್, 15 ಲಕ್ಷ ಆಫರ್ – ಜೆಡಿಎಸ್ ವಿರುದ್ಧ ಸುಮಲತಾ ಸ್ಫೋಟಕ ಆರೋಪ

    ಸುಮಲತಾ ಅವರಿಗೆ ಮುಂಚಿತವಾಗಿಯೇ ಐಟಿ ರೇಡ್ ಆಗುವುದು ಗೊತ್ತಾಗುತ್ತದೆ. ನಾಳೆ ಯಾರ ಯಾರ ಬಂಡವಾಳ ಹೊರಗೆ ಬರುತ್ತದೆ ಎಂದು ಗೊತ್ತಾಗುತ್ತೆ ಎಂದು ವ್ಯಂಗ್ಯವಾಡಿದರು. ಸೈಟು, ಆಸ್ತಿ ತೆಗೆದುಕೊಡುತ್ತೇವೆ ಎಂದು ಹೇಳಿಲ್ವಾ? ಮಂಡ್ಯ ಜನರು ಮುಟ್ಟಾಳರಲ್ಲ. ಇಂತಹ ಮಾತಿಗೆ ಬೆಲೆ ಕೊಡದೇ ದಿನಾಂಕ 18 ರಂದು ಮತದಾನ ಮಾಡಿ ಮತ್ತೊಮ್ಮೆ ನಾವು ಮುಟ್ಟಾಳರಲ್ಲ ಎಂದು ತೋರಿಸಿ ಕೊಡಬೇಕು ಎಂದು ಮನವಿ ಮಾಡಿದರು. ಜೊತೆಗೆ ಇವೆಲ್ಲ ಬಿಟ್ಟು ಉಳಿದಿರುವ ದಿನ ಪ್ರಚಾರ ಮಾಡುವಂತೆ ಸುಮಲತಾ ಅವರಿಗೆ ಸಲಹೆ ನೀಡಿದರು.

    ಯಶ್ ಅವರು ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಬಹುದೇ? ಅದು ಸುಮಲತಾ ಅವರಿಗೆ ಸರಿ ಅನ್ನಿಸುತ್ತದಾ? ಅವರ ಮಗ ಮೈತ್ರಿ ಸರ್ಕಾರ ಅಭ್ಯರ್ಥಿ ನಿಖಿಲ್ ಮಾತನಾಡಿದರೆ ತಪ್ಪಾಗುತ್ತದ ಎಂದು ಪುಟ್ಟರಾಜು ಪ್ರಶ್ನೆ ಮಾಡುವ ಮೂಲಕ ಸುಮಲತಾ ಅವರು ನಿಖಿಲ್ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿಕ್ರಿಯಿಸಿದರು.

  • ಮಂಡ್ಯದಲ್ಲಿ ಮೂವರು ಸುಮಲತಾ – ಕಲಬುರಗಿಯಲ್ಲಿ ಇಬ್ಬರು ಜಾಧವ್

    ಮಂಡ್ಯದಲ್ಲಿ ಮೂವರು ಸುಮಲತಾ – ಕಲಬುರಗಿಯಲ್ಲಿ ಇಬ್ಬರು ಜಾಧವ್

    ಕಲಬುರಗಿ: ಮಂಡ್ಯ ಜಿಲ್ಲೆಯಂತೆ ಕಲಬರಗಿಯಲ್ಲೂ ಒಂದೇ ಹೆಸರಿನ ಇಬ್ಬರು ಅಭ್ಯರ್ಥಿಗಳು ಲೋಕಸಬಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.

    ಉಮೇಶ್ ಜಾಧವ್ ಮತ್ತು ಶಂಕರ್ ಜಾಧವ್ ಇಬ್ಬರು ಸ್ಪರ್ಧೆ ಮಾಡುತ್ತಿದ್ದು, ಈ ಮೂಲಕ ಲೋಕಸಭಾ ರಣಕಣದಲ್ಲಿ ಹೆಸರಿನ ಕಮಾಲ್ ಜೋರಾಗಿ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿ ಉಮೇಶ್ ಜಾಧವ್ ಸ್ಪರ್ಧೆ ಮಾಡಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಶಂಕರ್ ಜಾಧವ್ ಅಖಾಡಕ್ಕಿಳಿಯುತ್ತಿದ್ದಾರೆ.

    ಶುಕ್ರವಾರ ಶಂಕರ್ ಜಾಧವ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್ 3 ರಂದು ಉಮೇಶ್ ಜಾಧವ್ ನಾಮಪತ್ರ ಸಲ್ಲಿಸಲಿದ್ದಾರೆ. ಜೊತೆಗೆ ಎಪ್ರಿಲ್ 4 ರಂದು ಕೈ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಕೂಡ ನಾಮಿನೇಷನ್ ಮಾಡಲಿದ್ದಾರೆ. ಉಮೇಶ್ ಜಾಧವ್ ಅವರು ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿ ಬಿಜೆಪಿ ಪಕ್ಷಕ್ಕೆ ಸೇರಿದ್ದು, 11 ಬಾರಿ ಗೆಲುವು ಕಂಡಿರುವ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೊಡೆತಟ್ಟಿದ್ದಾರೆ.

    ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್, ಬಿಜೆಪಿ ಬೆಂಬಲದೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಅಚ್ಚರಿ ಎಂಬಂತೆ ಮಂಡ್ಯದಲ್ಲಿ ಸುಮಲತಾ ಹೆಸರಿನ ಮೂವರು ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. ಈಗ ಅದೇ ರೀತಿ ಕಲಬುರಗಿಯಲ್ಲಿ ಜಾಧವ್ ಹೆಸರಿನ ಇಬ್ಬರು ಲೋಕಸಭಾ ಚುನಾವಣೆ ಕಣಕ್ಕಿಳಿದಿದ್ದಾರೆ.