Tag: ಲೋಕಲ್ ಟ್ರೈನ್

  • ಸೀಟಿಗಾಗಿ ರೈಲಿನಲ್ಲಿ ಜುಟ್ಟು ಹಿಡಿದು ಮಹಿಳೆಯರ ಫೈಟ್ – ಜಗಳ ಬಿಡಿಸಲು ಬಂದ ಪೇದೆಗೆ ಕಪಾಳಮೋಕ್ಷ

    ಸೀಟಿಗಾಗಿ ರೈಲಿನಲ್ಲಿ ಜುಟ್ಟು ಹಿಡಿದು ಮಹಿಳೆಯರ ಫೈಟ್ – ಜಗಳ ಬಿಡಿಸಲು ಬಂದ ಪೇದೆಗೆ ಕಪಾಳಮೋಕ್ಷ

    ಮುಂಬೈ: ಕೇಂದ್ರ ರೈಲ್ವೆ (Central Railway) ವ್ಯಾಪ್ತಿಯ ಥಾಣೆ (Thane) ಮತ್ತು ಪನ್ವೇಲ್ (Panvel) ನಡುವಿನ ಲೋಕಲ್ ಟ್ರೈನ್‍ನಲ್ಲಿ ಕೆಲ ಮಹಿಳೆಯರ ನಡುವೆ ಮಾರಾಮಾರಿ ನಡೆದಿದೆ.

    ಮುಂಬೈ ಲೋಕಲ್ ಟ್ರೈನ್‍ಗಳಲ್ಲಿ (Local train) ಸಂಜೆ ಹೊತ್ತು ಒಂದು ಕೆಡೆಯಿಂದ ಮತ್ತೊಂದು ಕಡೆಗೆ ಹೋಗಲು ರೈಲಿನಲ್ಲಿ ವಿಪರೀತ ನೂಕುನುಗ್ಗಲು ಇರುತ್ತದೆ. ಈ ವೇಳೆ ಸೀಟ್ ಹಿಡಿದುಕೊಳ್ಳಲು ಜನ ಸಾಕಷ್ಟು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಈ ವಿಚಾರವಾಗಿ ಅನೇಕ ಜನ ಜಗಳ ಆಡಿರುವುದು ಕೂಡ ಇದೆ. ಸದ್ಯ ಗುರುವಾರ ಸಂಜೆ 7:45ಕ್ಕೆ ಇದೇ ವಿಚಾರವಾಗಿ ಗಲಾಟೆ ನಡೆದಿದೆ. ಇದನ್ನೂ ಓದಿ: ಎಸ್‌.ಎಂ ಕೃಷ್ಣ ಸರ್ಕಾರದ ಸಂಪುಟದಲ್ಲಿ ಸಚಿವರಾಗಿದ್ದ ಜಬ್ಬಾರ್ ಖಾನ್ ಹೊನ್ನಳ್ಳಿ ನಿಧನ

    ಹೌದು, ಸೆಂಟ್ರಲ್ ರೈಲ್ವೇ ವ್ಯಾಪ್ತಿಯ ಥಾಣೆ ಮತ್ತು ಪನ್ವೇಲ್ ನಡುವಿನ ಲೋಕಲ್ ರೈಲಿನಲ್ಲಿ ಕೆಲ ಮಹಿಳೆಯರ ನಡುವೆ ತೀವ್ರ ಜಗಳ ನಡೆದಿದೆ. ಮಹಿಳಾ ಕಂಪಾರ್ಟ್‍ಮೆಂಟ್‍ನಲ್ಲಿ ಸೀಟ್ ವಿಚಾರವಾಗಿ ಮೂವರು ಮಹಿಳೆಯರ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಮಹಿಳೆಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿದ್ದಾರೆ. ವಿಷಯ ದೊಡ್ಡದಾಗುತ್ತಿದ್ದಂತೆ ಉಳಿದ ಇತರ ಕೆಲವು ಮಹಿಳೆಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಗಂಡನನ್ನು ಕೊಲೆ ಮಾಡುವುದಾಗಿ ಹೆದರಿಸಿ ವೃದ್ಧೆ ಮೇಲೆ 1 ವರ್ಷ ನಿರಂತರ ಅತ್ಯಾಚಾರ

    ನಂತರ ನೆರೂಲ್‍ನಿಂದ ಜಗಳ ಬಿಡಿಸಲು ಬಂದ ಮಹಿಳಾ ಪೊಲೀಸ್ ಪೇದೆಯೊಬ್ಬರ ಮೇಲೆ ಆರೋಪಿ ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಇದರಿಂದ ಗಾಯಗೊಂಡ ಮಹಿಳಾ ಪೊಲೀಸ್ ಪೇದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಸಂಬಂಧ ವಾಶಿಯ ಗ್ರಾ.ಪಂ ಪೊಲೀಸರು ಇಬ್ಬರು ಮಹಿಳೆಯರ ವಿರುದ್ಧ ಐಪಿಸಿ 353, 332, 504 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಂಬೈನಲ್ಲಿ ಅನ್‍ಲಾಕ್ – ಲೋಕಲ್ ರೈಲುಗಳಲ್ಲಿ ಮಹಿಳೆಯರ ಪ್ರಯಾಣಕ್ಕೆ ನಿರ್ಬಂಧ

    ಮುಂಬೈನಲ್ಲಿ ಅನ್‍ಲಾಕ್ – ಲೋಕಲ್ ರೈಲುಗಳಲ್ಲಿ ಮಹಿಳೆಯರ ಪ್ರಯಾಣಕ್ಕೆ ನಿರ್ಬಂಧ

    ಮುಂಬೈ: ಕೊರೊನಾ ಪ್ರಕರಣಗಳ ಇಳಿಕೆ ಹಿನ್ನೆಲೆ ಮಹಾರಾಷ್ಟ್ರ ಹಂತ ಹಂತವಾಗಿ ಅನ್‍ಲಾಕ್ ಆಗುತ್ತಿದೆ. ಆದ್ರೆ ಲೋಕಲ್ ರೈಲುಗಳಲ್ಲಿ ಮಹಿಳೆಯರ ಸಂಚಾರಕ್ಕೆ ನಿರ್ಬಂಧ ಹಾಕಿರುವ ನಿಯಮ ವಿವಾದಕ್ಕೆ ಕಾರಣವಾಗಿದೆ. ಅನ್‍ಲಾಕ್ ಮೂರನೇ ಹಂತದಲ್ಲಿ ಲೋಕಲ್ ರೈಲುಗಳಿಗೆ ಹಸಿರು ನಿಶಾನೆ ಸಿಗಲಿದೆ ಎನ್ನಲಾಗಿತ್ತು. ಆದ್ರೆ ಇದೀಗ ಕೇವಲ ಆರೋಗ್ಯ ಕಾರ್ಯಕರ್ತರು ಸೇರಿದಂತೆ ನಿಯಮಿತ ವರ್ಗಕ್ಕೆ ಮಾತ್ರ ರೈಲುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

    ಲಾಕ್‍ಡೌನ್ ವೇಳೆಯಲ್ಲಿಯೂ ಲೋಕಲ್ ಟ್ರೈನ್ ಗಳಲ್ಲಿ ಕೇವಲ ತುರ್ತುಸೇವೆಗೆ ಮೀಸಲಿರಿಸಲಾಗಿತ್ತು. ಸದ್ಯ ಮುಂಬೈ ಮಹಾನಗರ ಪಾಲಿಕೆಯ ಮಾರ್ಗಸೂಚಿ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ. ಆದ್ರೆ ಈ ಸಂಬಂಧ ಪಾಲಿಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತ ಜೂನ್ 7ರಿಂದ ಈ ನಿಯಮ ಜಾರಿಗೆ ಬರಲಿದೆ.

    ಮಧ್ಯಾಹ್ನ 4 ಗಂಟೆವರೆಗೆ ಅಂಗಡಿಗಳಿಗೆ ತೆರೆಯಲು ಅನುಮತಿ ನೀಡಲಾಗಿದೆ. ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಸೆಕ್ಷನ್ 144 ಜಾರಿಯಲ್ಲಿರಲಿದ್ದು, ಯಾವುದೇ ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡಿಲ್ಲ. ಮಾಲ್ ಮತ್ತು ಚಿತ್ರಮಂದಿರಗಗಳು ಮೊದಲಿನಂತೆಯೇ ಬಂದ್ ಇರಲಿವೆ. ಜಿಮ್, ಸ್ಪಾಗಳಿಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ.

  • ಮುಂಬೈ ನಗರದಲ್ಲಿ ವಿದ್ಯುತ್ ವ್ಯತ್ಯಯ- ಅರ್ಧದಲ್ಲೇ ನಿಂತ ಲೋಕಲ್ ಟ್ರೈನ್‍ಗಳು

    ಮುಂಬೈ ನಗರದಲ್ಲಿ ವಿದ್ಯುತ್ ವ್ಯತ್ಯಯ- ಅರ್ಧದಲ್ಲೇ ನಿಂತ ಲೋಕಲ್ ಟ್ರೈನ್‍ಗಳು

    ಮುಂಬೈ: ಮಹಾರಾಷ್ಟ್ರ ರಾಜಧಾನಿ, ವಾಣಿಜ್ಯ ನಗರಿ ಮುಂಬೈನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಲೋಕಲ್ ಟ್ರೈನ್ ಗಳು ಸ್ಥಗಿತಗೊಂಡಿವೆ. ಜನರು ರೈಲಿನಿಂದ ಹೊರ ಬಂದು ಟ್ರ್ಯಾಕ್ ನಲ್ಲಿ ನಡೆದುಕೊಂಡು ಹೋಗಿ ಮುಂದಿನ ನಿಲ್ದಾಣ ತಲುಪಿದ್ದಾರೆ.

    ನಗರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗ್ರಿಡ್ ಫೇಲ್ ಆಗಿದ್ದರಿಂದ ಈ ಸಮಸ್ಯೆಯುಂಟಾಗಿದೆ. ದಕ್ಷಿಣ, ಕೇಂದ್ರ ಮತ್ತು ಉತ್ತರ ಮುಂಬೈನಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಂಡಿರುವ ಬಗ್ಗೆ ಜನರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಬಿಎಂಸಿ(ಬೃಹನ್ ಮುಂಬೈ ಕಾರ್ಪೋರೇಷನ್) ಮತ್ತು ಬೆಸ್ಟ್ (ಬೃಹನ್ ಮುಂಬೈ ಎಲೆಕ್ಟ್ರಾನಿಕ್ ಸಪ್ಲೈ ಆ್ಯಂಡ್ ಟ್ರಾನ್ಸಪೋರ್ಟ್)ಗೆ ಟ್ಯಾಗ್ ಮಾಡುವ ಮೂಲಕ ದೂರು ಸಲ್ಲಿಸುತ್ತಿದ್ದಾರೆ. ಮುಂಬೈ ಹೊರವಲಯ ಥಾಣೆಯವರೆಗೂ ವಿದ್ಯುತ್ ಸಮಸ್ಯೆಯುಂಟಾಗಿರುವ ಬಗ್ಗೆ ವರದಿಯಾಗಿದೆ.

    ವಿದ್ಯುತ್ ಸಂಪರ್ಕ ಕಡಿತ ಹಿನ್ನೆಲೆ ಪ್ರತಿಕ್ರಿಯಿಸಿರುವ ಬೆಸ್ಟ್, ಟಾಟಾ ಇನ್‍ಕಮ್ಮಿಂಗ್ ಎಲೆಕ್ಟ್ರಿಕ್ ಸರಬರಾಜಿನಲ್ಲಿ ಅಡಚಣೆಯುಂಟಾಗಿದೆ. ಈ ಹಿನ್ನೆಲೆ ನಗರದ ಬಹುತೇಕ ಭಾಗದಲ್ಲಿ ವಿದ್ಯುತ್ ಕಡಿತಗೊಂಡಿದೆ. ಸೇವೆಯಲ್ಲಿ ಉಂಟಾದ ತೊಂದರೆಗೆ ವಿಷಾದಿಸುತ್ತೇವೆ ಎಂದು ಟ್ವೀಟ್ ಮಾಡಿದೆ. ಆದ್ರೆ ಕಡಿತಗೊಂಡಿರುವ ವಿದ್ಯುತ್ ಸಂಪರ್ಕ ಯಾವಾಗ ಸರಿಯಾಗುತ್ತೆ ಎಂಬುದರ ಬಗ್ಗೆ ಬೆಸ್ಟ್ ಸ್ಪಷ್ಟನೆ ನೀಡಿಲ್ಲ.

    ಪವರ್ ಗ್ರಿಡ್ ಫೇಲ್ ಹಿನ್ನೆಲೆ ಪಶ್ಚಿಮ ಭಾಗದ ಲೋಕಲ್ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಚರ್ಚ್ ಗೇಟ್ ನಿಂದ ವಸೈವರೆಗೂ ರೈಲು ಸೇವೆ ಸ್ಥಗಿತವಾಗಿದೆ. ಇತ್ತ ವಸೈನಿಂದ ಬೋರಿವಲಿ ನಡುವೆ ರೈಲು ಸಂಚಾರವಿದೆ.