Tag: ಲೋಕಲ್ ಎಲೆಕ್ಷನ್

  • ಕುಮಾರಸ್ವಾಮಿಯವರು ಯಡಿಯೂರಪ್ಪನವರ ಬಳಿ ಹೋಗಿದ್ದರು: ಹೆಚ್.ಸಿ ಬಾಲಕೃಷ್ಣ

    ಕುಮಾರಸ್ವಾಮಿಯವರು ಯಡಿಯೂರಪ್ಪನವರ ಬಳಿ ಹೋಗಿದ್ದರು: ಹೆಚ್.ಸಿ ಬಾಲಕೃಷ್ಣ

    ರಾಮನಗರ: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿಯವರು ಬಿಜೆಪಿಯ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪನವರ ಬಳಿ ಹೋಗಿದ್ದರು ಎಂದು ಮಾಗಡಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿದರು.

    ಬಿಡದಿ ಪುರಸಭೆ ಚುನಾವಣೆ ಫಲಿತಾಂಶ ಜೆಡಿಎಸ್ ಪಾಲಾದ ಹಿನ್ನೆಲೆ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಯಡಿಯೂರಪ್ಪನವರ ಬಳಿ ಹೋಗಿದ್ದರು. ಶಾಸಕ ಎ. ಮಂಜು ಜೊತೆಗೆ ಹೋಗಿ ಬೇಕಾದ ಕ್ಯಾಟಗರಿ ಮಾಡಿಸಿಕೊಂಡರು. 18 ವಾರ್ಡ್ ಗಳಲ್ಲಿ ಅವರು ಮೊದಲೇ ತಯಾರಿ ನಡೆಸಿದ್ದರು. ಹಾಗಾಗಿ ಜೆಡಿಎಸ್ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆದ್ದರು. ಜೊತೆಗೆ ಕುಮಾರಸ್ವಾಮಿಯವರು ಎರಡು ದಿನ ಪ್ರಚಾರ ಕೂಡಾ ನಡೆಸಿದ್ದರು ಎಂದರು. ಇದನ್ನೂ ಓದಿ: ಸರ್ಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಸ್ವಾತಂತ್ರ್ಯ: ಸಿಎಂ ನಿಲುವು ಸ್ವಾಗತಿಸಿದ ಮಂತ್ರಾಲಯ ಶ್ರೀ

    ಲೋಕಲ್ ಎಲೆಕ್ಷನ್ ಪ್ರಚಾರಕ್ಕಾಗಿ ನಾನು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರಿಗೆ ಕರೆದಿದ್ದೆ. ಆದರೆ ನಮ್ಮ ನಾಯಕರು ಪ್ರಚಾರಕ್ಕೆ ಬರುವುದಿಲ್ಲ ಎಂದಿದ್ದರು. ಈ ಹಿನ್ನೆಲೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದು, ಆಡಳಿತವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ ಎಂದು ನುಡಿದರು.

    ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಇಲ್ಲ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಇದ್ದಾರೆ ಅಷ್ಟೇ. ಆದರೆ ಈ ಪುರಸಭೆ ಚುನಾವಣೆಯಲ್ಲಿ ಫೇಲ್ ಆಗಿದ್ದಾರೆ. ಸರ್ಕಾರ ಇದ್ದಾಗ ಒಂದೆರಡು ಸ್ಥಾನವನ್ನಾದರೂ ಗೆಲ್ಲಬೇಕಿತ್ತು. ಆದರೆ ಅವರು ಯಾವ ಸ್ಥಾನಗಳನ್ನೂ ಗೆದ್ದಿಲ್ಲ. ಇನ್ನು ಯೋಗೇಶ್ವರ್ ನ ನಾವು ಕಾಂಗ್ರೆಸ್‍ಗೆ ಕರೆಯಲ್ಲ. ನಾನು ಅಷ್ಟು ದೊಡ್ಡ ನಾಯಕ ಅಲ್ಲ, ಕೆಪಿಸಿಸಿ ಅಧ್ಯಕ್ಷ ಅಲ್ಲ. ಅವರು ಸಹ ನಮ್ಮನ್ನ ಕೇಳಿ ನಿರ್ಧಾರ ತೆಗೆದುಕೊಳ್ಳಲ್ಲ ಎಂದು ಹೇಳಿದರು. ಇದನ್ನೂ ಓದಿ:  ನೆಲಮಂಗಲದಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅಪಘಾತ

    ಅವರದ್ದೇ ಆದ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದು ಯಾರೆಂದು ಅವರೇ ಹೇಳಿದ್ದಾರೆ. ವಿಧಾನಸಭೆಯಲ್ಲೇ ಅವರು ಹೇಳಿದ್ದಾರೆ. ಚೆಲುವನಾರಾಯಣಸ್ವಾಮಿ, ಮಾಗಡಿ ಬಾಲಕೃಷ್ಣ, ಜಮೀರ್ ನನ್ನನ್ನ ಸಿಎಂ ಮಾಡಿದ್ದು ಎಂದಿದ್ದಾರೆ. ಆದರೆ ಅವರು ಅದನ್ನ ಉಳಿಸಿಕೊಳ್ಳಲಿಲ್ಲ. ಉಳಿಸಿಕೊಂಡಿದ್ದರೆ ಅವರ ಮತ್ತು ರಾಜ್ಯದ ಪರಿಸ್ಥಿತಿ ಬೇರೆ ಇರುತ್ತಿತ್ತು ಎಂದರು.

  • ಕಾಲೇಜು ವಿದ್ಯಾರ್ಥಿನಿ ಈಗ ಪುರಸಭೆ ಸದಸ್ಯೆ

    ಕಾಲೇಜು ವಿದ್ಯಾರ್ಥಿನಿ ಈಗ ಪುರಸಭೆ ಸದಸ್ಯೆ

    ಕೋಲಾರ: ರಾಜ್ಯದಲ್ಲಿ ನಗರಸಭೆ, ಪರಸಭೆ ಹಾಗೂ ಪಟ್ಟಣ ಪಂಚಾಯ್ತಿ ಮತ ಎಣಿಕೆ ನಡೆದಿದ್ದು, ಕೋಲಾರದ ಮಾಲೂರು ಪುರಸಭೆ ಚುನಾವಣೆಯಲ್ಲಿ  ಯುವತಿ ಗೆಲುವು ಸಾಧಿಸಿದ್ದಾರೆ.

    ಸುಮಿತ್ರ ಬಿಜೆಪಿ ಅಭ್ಯರ್ಥಿಯಾಗಿದ್ದು, ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಸುಮಿತ್ರ ಅವರು ಜೆಡಿಎಸ್ ಅಭ್ಯರ್ಥಿ ವಿರುದ್ಧ 373 ಮತಗಳನ್ನ ಪಡೆದು ಜಯಶಾಲಿಯಾಗಿದ್ದಾರೆ. ಈಕೆ ಮಾಲೂರು ಪಟ್ಟಣದ ವಾರ್ಡ್ ನಂಬರ್ 27 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.

     

    ಲೋಕ ಸಮರ ನಂತರ ಕೋಲಾರ ಜಿಲ್ಲೆಯ ಮಾಲೂರು, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ಪುರಸಭೆಯಲ್ಲಿ ಲೋಕಲ್ ಫೈಟ್ ನಡೆದಿದೆ. ಮಾಲೂರಿನಲ್ಲಿ ಒಟ್ಟು 27 ವಾರ್ಡ್ ಗಳಲ್ಲಿ 79 ಜನ ಕಣದಲ್ಲಿದ್ದರು. ಬಂಗಾರಪೇಟೆಯಲ್ಲಿ ಒಟ್ಟು 27 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, 80 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಇತ್ತ ಶ್ರೀನಿವಾಸಪುರದಲ್ಲಿ ಒಟ್ಟು 23 ವಾರ್ಡ್‍ಗಳಿಗೆ ಚುನಾವಣೆ ನಡೆದಿದ್ದು, 87 ಜನ ಅಭ್ಯರ್ಥಿಗಳು ಕಣದಲ್ಲಿದ್ದರು.

    ಕಳೆದ ಬಾರಿ ಮಾಲೂರಿನಲ್ಲಿ ಬಿಜೆಪಿ, ಬಂಗಾರಪೇಟೆಯಲ್ಲಿ ಕಾಂಗ್ರೆಸ್, ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಮಾಲೂರು 27 ವಾರ್ಡ್ ಗಳಲ್ಲಿ 30,125 ಮತದಾರರು ಮತದಾನ ಮಾಡಿದ್ದು, ಬಂಗಾರಪೇಟೆ 27 ವಾರ್ಡ್‍ಗಳಲ್ಲಿ ಒಟ್ಟು-80 ಅಭ್ಯರ್ಥಿಗಳು ಕಣದಲ್ಲಿದ್ದರು. ಇಲ್ಲಿ 36,773 ಮತದಾರರು ಮತದಾನ ಮಾಡಿದ್ದಾರೆ. ಶ್ರೀನಿವಾಸಪುರ 23 ವಾರ್ಡ್ ಗಳಲ್ಲಿ ಒಟ್ಟು – 87 ಅಭ್ಯರ್ಥಿಗಳು ಕಣದಲ್ಲಿದ್ದು, 20,164 ಮತದಾರರು ಮತ ಚಲಾಯಿಸಿದ್ದಾರೆ.