Tag: ಲೊಕೊ ಪೈಲಟ್

  • ನಿಲ್ದಾಣದಲ್ಲಿ ಎಮರ್ಜೆನ್ಸಿ ಬ್ರೇಕ್ ಹಾಕಿದ ಲೊಕೊ ಪೈಲಟ್- ಕೆಲವೇ ಸೆಕೆಂಡ್‍ಗಳಲ್ಲಿ ವ್ಯಕ್ತಿ ಬಚಾವ್

    ನಿಲ್ದಾಣದಲ್ಲಿ ಎಮರ್ಜೆನ್ಸಿ ಬ್ರೇಕ್ ಹಾಕಿದ ಲೊಕೊ ಪೈಲಟ್- ಕೆಲವೇ ಸೆಕೆಂಡ್‍ಗಳಲ್ಲಿ ವ್ಯಕ್ತಿ ಬಚಾವ್

    ಮುಂಬೈ: ಎಚ್ಚೆತ್ತ ರೈಲು ಚಾಲಕ ಸಮಯಕ್ಕೆ ಸರಿಯಾಗಿ ತುರ್ತು ಬ್ರೇಕ್‍ಗಳನ್ನು ಎಳೆದಿದ್ದು, ವ್ಯಕ್ತಿಯೊಬ್ಬ ಅದೃಷ್ಟವಶಾತ್ ಕೆಲವೇ ಸೆಕೆಂಡಿನಲ್ಲಿ ಸಾವಿನಿಂದ ಪಾರಾದ ಘಟನೆಯು ಮುಂಬೈನ ಶಿವಡೀ ಸ್ಟೇಷನ್‍ನಲ್ಲಿ ನಡೆದಿದೆ.

    ಶಾಕಿಂಗ್ ವೀಡಿಯೋವೊಂದನ್ನು ರೈಲ್ವೆ ಸಚಿವಾಲಯ ಟ್ವಿಟ್ಟರ್‍ನಲ್ಲಿ ಹರಿಬಿಟ್ಟಿದೆ. ವ್ಯಕ್ತಿಯೊಬ್ಬ ರೈಲ್ವೇ ಹಳಿಗಳ ಮೇಲೆ ಆಕಸ್ಮಿಕವಾಗಿ ಅಡ್ಡಾಡುತ್ತಿದ್ದು. ರೈಲು ಸಮೀಪಿಸುತ್ತಿದ್ದಂತೆ, ವ್ಯಕ್ತಿ ಇದ್ದಕ್ಕಿದ್ದಂತೆ ಹಳಿಗಳ ಮೇಲೆ ಮಲಗಿದ್ದಾನೆ. ಇದನ್ನೂ ಕಂಡ ಲೊಕೊ ಪೈಲಟ್ ತುರ್ತು ಬ್ರೇಕ್‍ಗಳನ್ನು ಎಳೆದಿದ್ದು, ರೈಲು ತಕ್ಷಣವೇ ನಿಂತಿದೆ. ಕೆಲವು ಆರ್‍ಪಿಎಫ್ ಸಿಬ್ಬಂದಿ ಆ ವ್ಯಕ್ತಿಯನ್ನು ಸುರಕ್ಷಿತವಾಗಿ ಕರೆದೊಯ್ಯಲು ಅವನ ಕಡೆಗೆ ಧಾವಿಸುತ್ತಿರುವುದನ್ನು ವೀಡಿಯೋದಲ್ಲಿ ನೀವು ಕಾಣಬಹುದಾಗಿದೆ. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಲೊಕೊ ಪೈಲಟ್ ಮಾಡಿದ ಶ್ಲಾಘನೀಯ ಕೆಲಸ:
    ಮುಂಬೈನ ಶಿವಡಿ ನಿಲ್ದಾಣದಲ್ಲಿ, ಅವರು ಟ್ರ್ಯಾಕ್‍ನಲ್ಲಿ ಒಬ್ಬ ವ್ಯಕ್ತಿ ಬಿದ್ದಿರುವುದನ್ನು ನೋಡಿದ್ದಾರೆ. ಅವರು ತುರ್ತು ಬ್ರೇಕ್ ಅನ್ನು ತ್ವರಿತವಾಗಿ ಮತ್ತು ತಿಳುವಳಿಕೆಯಿಂದ ಹಾಕಿದ್ದು, ಒಬ್ಬ ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ. ಇದನ್ನೂ ಓದಿ:  ‘ಫಿಟ್ ಇಂಡಿಯಾ’ ಬಗ್ಗೆ ಅರಿವು ಮೂಡಿಸಲು ಜಿಮ್‌ನಲ್ಲಿ ವರ್ಕೌಟ್ ಮಾಡಿದ ಮೋದಿ

    ವೀಡಿಯೋಗೆ ರೈಲ್ವೇ ಸಚಿವಾಲಯವು, ನಿಮ್ಮ ಜೀವವು ಅಮೂಲ್ಯವಾಗಿದೆ, ನಿಮ್ಮ ಮನೆಯಲ್ಲಿ ನಿಮಗಾಗಿ ಕಾಯುತ್ತಿದ್ದಾರೆ ಎಂದು ಶೀರ್ಷಿಕೆ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವೀಡಿಯೋವು 83,000 ವೀಕ್ಷಣೆಗಳನ್ನು ಪಡೆದಿದ್ದು, ಸಾಕಷ್ಟು ನೆಟ್ಟಿಗರಿಂದ ಲೊಕೊ ಪೈಲಟ್‍ಗೆ ಶ್ಲಾಘನೆಯ ಮಹಾಪುರವೆ ಹರಿದು ಬಂದಿದೆ.

     

  • ಚಾಲಕನಿಲ್ಲದೇ 13 ಕಿಮೀ ಸಂಚರಿಸಿದ ರೈಲ್ವೆ ಎಂಜಿನ್-ತಪ್ಪಿದ ಭಾರೀ ದುರಂತ

    ಚಾಲಕನಿಲ್ಲದೇ 13 ಕಿಮೀ ಸಂಚರಿಸಿದ ರೈಲ್ವೆ ಎಂಜಿನ್-ತಪ್ಪಿದ ಭಾರೀ ದುರಂತ

    ಕಲಬುರಗಿ: ರೈಲ್ವೇ ಎಂಜಿನ್‍ ವೊಂದು ಚಾಲಕನಿಲ್ಲದೇ ಸುಮಾರು 13 ಕಿಮೀ ಸಂಚರಿಸಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್‍ನಲ್ಲಿ ನಡೆದಿದೆ.

    ಚಿತ್ತಾಪುರದ ವಾಡಿ ಜಂಕ್ಷನ್‍ನ ಪ್ಲಾಟ್‍ ಫಾರಂ 4 ರಲ್ಲಿ ಚೆನ್ನೈ-ಮುಂಬೈ ರೈಲಿಗೆ ಜೋಡಣೆಯಾಗಬೇಕಿದ್ದ ಎಂಜಿನ್ ನಿಲ್ಲಿಸಲಾಗಿತ್ತು. ಆದರೆ ಚಾಲಕ ಎಂಜಿನ್ ಆಫ್ ಮಾಡದೇ ಕೆಳಗಿಳಿದಿದ್ದ ಕಾರಣ ವಾಡಿ ಜಂಕ್ಷನ್ ನಿಂದ ನಾಲವಾರ ವರೆಗೆ ಸಂಚರಿಸಿದೆ.

    ರೈಲ್ವೆ ಎಂಜಿನ್ ಪ್ಲ್ಯಾಟ್‍ ಫಾರಂನಲ್ಲಿ ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ರೈಲ್ವೆ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ನಂತರ ಎಂಜಿನ್ ಅನ್ನು ಸುಮಾರು 13 ಕಿ.ಮೀ ದೂರ ಬೈಕ್‍ನಲ್ಲಿ ಹಿಂಬಾಲಿಸಿ ನಾಲವಾರ ಪ್ರದೇಶದಲ್ಲಿ ತಡೆದಿದ್ದಾರೆ. ಅದೃಷ್ಟವಶತ್ ಈ ಸಂದರ್ಭದಲ್ಲಿ ರೈಲ್ವೇ ಎಂಜಿನ್ ಸಂಚರಿಸಿದ ಮಾರ್ಗದಲ್ಲಿ ಯಾವುದೇ ರೈಲು ಎದುರುಬಾರದ ಕಾರಣ ಭಾರೀ ಅನಾಹುತ ತಪ್ಪಿದೆ.

    ಇದನ್ನೂ ಓದಿ: ರೈಲು ನಿಲ್ಲಿಸಿ ಗಾರ್ಡ್ ನನ್ನು ಹುಡುಕಾಡಿದ ಲೋಕೋಪೈಲಟ್ : ವಿಡಿಯೋ ವೈರಲ್

    ರೈಲ್ವೆ ಸಿಬ್ಬಂದಿಗಳ ನಿರ್ಲಕ್ಷ್ಯ ಕುರಿತು ತನಿಖೆ ನಡೆಸುವುದಾಗಿ ಪ್ರಭಾರಿ ಸ್ಟೇಷನ್ ಮಾಸ್ಟರ್ ಜೆ.ಎನ್ ಪರಿಡಾ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.