Tag: ಲೈವ್

  • ಪ್ಲೀಸ್.. ನಮ್ಮಿಬ್ಬರನ್ನು ದೂರ ಮಾಡ್ಬೇಡಿ- ಎರಡನೇ ಮದ್ವೆಯಾಗಿ ಹುಚ್ಚ ವೆಂಕಟ್ ಮನವಿ

    ಪ್ಲೀಸ್.. ನಮ್ಮಿಬ್ಬರನ್ನು ದೂರ ಮಾಡ್ಬೇಡಿ- ಎರಡನೇ ಮದ್ವೆಯಾಗಿ ಹುಚ್ಚ ವೆಂಕಟ್ ಮನವಿ

    ಬೆಂಗಳೂರು: ಸ್ಯಾಂಡಲ್‍ವುಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮತ್ತೊಂದು ಮದುವೆಯಾಗಿದ್ದಾರೆ. ಈ ಕುರಿತು ಫೇಸ್‍ಬುಕ್ ಲೈವ್‍ನಲ್ಲಿ ಸ್ವತಃ ಹುಚ್ಚ ವೆಂಕಟ್ ತಿಳಿಸಿದ್ದಾರೆ.

    ನಾನು ಮತ್ತೊಂದು ಮದುವೆ ಆಗಿರುವುದಾಗಿ ಸ್ವತಃ ಹುಚ್ಚ ವೆಂಕಟ್ ಫೇಸ್‍ಬುಕ್ ಲೈವ್ ಬಂದು ತಮ್ಮ ಮದುವೆ ಬಗ್ಗೆ ಎಲ್ಲರಿಗೂ ತಿಳಿಸಿದ್ದಾರೆ. ಹುಚ್ಚ ವೆಂಕಟ್ ಅವರು ಐಶ್ವರ್ಯ ಎಂಬ ಯುವತಿ ಜೊತೆ ಮದುವೆಯಾಗಿದ್ದಾರೆ. ವೆಂಕಟ್ ನಟಿಸಿ ನಿರ್ದೇಶನ ಮಾಡುತ್ತಿರುವ `ಡಿಕ್ಟೇಟರ್ ಹುಚ್ಚ ವೆಂಕಟ್’ ಚಿತ್ರದಲ್ಲಿ ನಾಯಕಿಯಾಗಿ ಐಶ್ವರ್ಯ ಕಾಣಿಸಿಕೊಂಡಿದ್ದಾರೆ.

    ಕಳೆದ ವಾರ ತಲಕಾವೇರಿಯಲ್ಲಿ ನಾನು ಐಶ್ವರ್ಯರನ್ನು ಮದುವೆ ಆದೆ. ಮದುವೆ ಆದ ನಂತರ ಐಶ್ವರ್ಯ ಅವರ ದೊಡ್ಡಮ್ಮ ತೀರಿಕೊಂಡರು. ಹಾಗಾಗಿ ಮದುವೆ ಆದ ವಿಷಯವನ್ನು ನಾವು ಮನೆಯವರಿಂದ ಹಾಗೂ ಎಲ್ಲರಿಂದ ಮುಚ್ಚಿಟ್ಟಿದ್ದೀವಿ ಎಂದು ಹುಚ್ಚ ವೆಂಕಟ್ ತಮ್ಮ ಫೇಸ್‍ಬುಕ್ ಲೈವ್ ನಲ್ಲಿ ತಿಳಿಸಿದ್ದಾರೆ.

    ನಾನು ಐಶ್ವರ್ಯ ಒಬ್ಬರಿಗೊಬ್ಬರು ಪ್ರೀತಿಸಿ ಮದುವೆ ಆಗಿರೋದು. ಪ್ರೀತಿಸಿ ಮದುವೆಯಾಗಿರುವುದರಿಂದ ಮನೆಯಲ್ಲಿ ವಿರೋಧವಿದೆ. ಐಶ್ವರ್ಯ ಬೇರೆ ಯಾರೂ ಅಲ್ಲ. ಆಕೆ ಡಿಕ್ಟೇಟರ್ ಹುಚ್ಚ ವೆಂಕಟ್ ಚಿತ್ರದ ನಾಯಕಿ. ನಮ್ಮ ಮದುವೆ ಆದ ಮೇಲೆ ಮನೆಯವರ ಆರ್ಶೀವಾದ ತೆಗೆದುಕೊಳ್ಳಲು ಫೋನ್ ಮಾಡಿದೆ. ಆಗ ದೊಡ್ಡಮ್ಮ ತೀರಿಕೊಂಡ ವಿಚಾರ ತಿಳಿಯಿತು. ಹಾಗಾಗಿ ಮದುವೆ ವಿಷಯ ಹೇಳುವುದು ಬೇಡವೆಂದು ಸುಮ್ಮನಿದ್ದೆ ಎಂದು ಹುಚ್ಚ ವೆಂಕಟ್ ಹೇಳಿದರು.

    ನಮ್ಮಿಬ್ಬರನ್ನು ದೂರ ಮಾಡ್ಬೇಡಿ: ನಾವಿಬ್ಬರೂ ಮದುವೆಯಾಗಿ ಜೊತೆಯಲ್ಲಿ ಇದ್ದೇವೆ. ನಾನು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಹಾಗೂ ಆಕೆಯನ್ನು ತುಂಬ ಪ್ರೀತಿಸ್ತೀನಿ. ಅವಳು ಕೂಡ ನನ್ನನ್ನು ತುಂಬಾನೇ ಪ್ರೀತಿಸುತ್ತಾಳೆ. ನಾವು ಯಾವುದೇ ತಪ್ಪು ಮಾಡಿಲ್ಲ. ಇಬ್ಬರು ಪ್ರೀತಿಸಿ ಮದುವೆ ಆಗಿದ್ದೀವಿ ಹಾಗೂ ನಾವಿಬ್ಬರು ಮೇಜರ್. ಬಲವಂತವಾಗಿ ನಾವು ಮದುವೆಯಾಗಿಲ್ಲ. ನಮ್ಮಿಬ್ಬರನ್ನು ದೂರ ಮಾಡಬೇಡಿ ಎಂದು ಹುಚ್ಚ ವೆಂಕಟ್ ಮನವಿ ಮಾಡಿಕೊಂಡಿದ್ದಾರೆ.

    ಜನವರಿ 3, 2007ರಲ್ಲಿ ಹುಚ್ಚ ವೆಂಕಟ್ ಅವರು ಲಾವಣ್ಯ(ಹೆಸರು ಬದಲಾಯಿಸಲಾಗಿದೆ)ಎಂಬವರ ಜೊತೆ ಸಂಪಂಗಿರಾಮನಗರ ಗಣಪತಿ ದೇವಸ್ಥಾನದಲ್ಲಿ ಮದುವೆ ಆಗಿದ್ದರು.

    https://www.youtube.com/watch?v=BYtOx0DvZqU

  • ಆರ್‌ಸಿಬಿ ಅಭಿಮಾನಿಗಳಿಗೆ ಕಾಗೆ ಹಾರಿಸಿದ ಕೊಹ್ಲಿ!

    ಆರ್‌ಸಿಬಿ ಅಭಿಮಾನಿಗಳಿಗೆ ಕಾಗೆ ಹಾರಿಸಿದ ಕೊಹ್ಲಿ!

    ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಮೋಸ ಮಾಡಿದ್ರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಗುರುವಾರ ವಿರಾಟ್ ಕೊಹ್ಲಿ ನಾಳೆ ನಿಮ್ಮ ಜೊತೆ ನಾನು ಮಾತನಾಡುತ್ತೇನೆ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ನೋಡಿ ಆರ್‌ಸಿಬಿ ಅಭಿಮಾನಿಗಳು ಬೆಂಗಳೂರು ತಂಡದ ಬಗ್ಗೆ ಮಾತನಾಡಲಿದ್ದಾರೆ ಎಂದು ನಿರೀಕ್ಷೆ ಮಾಡಿದ್ದರು. ಆದರೆ ಕೊಹ್ಲಿ ಇಂದು ಖಾಸಗಿ ಕಂಪೆನಿಯ ಉತ್ಪನ್ನವನ್ನು ಪ್ರಚಾರ ಮಾಡಿದ್ದು ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ ಎನ್ನುವ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಇಂದು ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ಕೊಹ್ಲಿ ಪ್ರತಿಷ್ಟಿತ ಶೂ ಕಂಪನಿಯೊಂದರ ಪ್ರಮೋಷನ್ ಮಾಡಿದ್ದಾರೆ. ವಿರಾಟ್ ಶೂ ಕಂಪನಿಯ ರಾಯಭಾರಿ ಆಗಿದ್ದು, ಅದರ ಪ್ರಮೋಶನ್‍ಗಾಗಿ ಲೈವ್ ಬಂದಿದ್ದರು.

    ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಜೊತೆ ಮುಖ್ಯವಾಗಿ ಮಾತನಾಡಬೇಕು. ನಾಳೆ ನಾನು 1.30ಕ್ಕೆ ಲೈವ್ ಬರುತ್ತಿದ್ದೇನೆ. ಯಾರೂ ಈ ಲೈವ್ ಮರೆಯಬೇಡಿ. ಏಕೆಂದರೆ ಇದು ಬಹಳ ಮುಖ್ಯವಾದದ್ದು ಎಂದು ವಿಡಿಯೋದಲ್ಲಿ ಗುರುವಾರ ಕೊಹ್ಲಿ ಹೇಳಿಕೊಂಡಿದ್ದರು.

    ಕೊಹ್ಲಿ ಈ ಹಿಂದೆ ಯಾವುದೇ ಈ ರೀತಿಯ ಹೇಳಿಕೆಯನ್ನು ಕೊಟ್ಟಿರಲಿಲ್ಲ. ಆದರೆ ಈಗ ಆರ್‌ಸಿಬಿ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ತಂಡದ ಬಗ್ಗೆಯೇ ಹೆಚ್ಚಿನ ಮಾಹಿತಿ ನೀಡಬಹುದು ಎನ್ನುವ ನಿರೀಕ್ಷೆಯನ್ನ ಅಭಿಮಾನಿಗಳು ಹೊಂದಿದ್ದರು.

    ಲೈವ್‍ನಲ್ಲಿ ವಿರಾಟ್ ಐಪಿಎಲ್‍ನಲ್ಲಿ ಆರ್‌ಸಿಬಿ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಲಿದ್ದಾರಾ ಅಥವಾ ವಿರಾಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯುತ್ತಾರಾ? ಈ ಕಾರಣಕ್ಕೆ ದಿನಾಂಕ ಫಿಕ್ಸ್ ಮಾಡಿದ್ದಾರಾ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿದ್ದರು. ಇದನ್ನೂ ಓದಿ: ನಾಳೆ ಮಧ್ಯಾಹ್ನ ವಿಶೇಷ ಪ್ರಕಟಣೆಯನ್ನು ಪ್ರಕಟಿಸಲಿದ್ದಾರೆ ಕೊಹ್ಲಿ!

  • ನಾಳೆ ಮಧ್ಯಾಹ್ನ ವಿಶೇಷ ಪ್ರಕಟಣೆಯನ್ನು ಪ್ರಕಟಿಸಲಿದ್ದಾರೆ ಕೊಹ್ಲಿ!

    ನಾಳೆ ಮಧ್ಯಾಹ್ನ ವಿಶೇಷ ಪ್ರಕಟಣೆಯನ್ನು ಪ್ರಕಟಿಸಲಿದ್ದಾರೆ ಕೊಹ್ಲಿ!

    ಬೆಂಗಳೂರು: ಶುಕ್ರವಾರ ಮಧ್ಯಾಹ್ನ 1.30ಕ್ಕೆ ನಾನು ವಿಶೇಷ ಪ್ರಕಟಣೆಯನ್ನು ಪ್ರಕಟಿಸುವುದಾಗಿ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಈ ಕುರಿತು ವಿರಾಟ್ ಸ್ವತಃ ತಮ್ಮ ಟ್ವಿಟ್ಟರ್ ಹಾಗೂ ಇನ್‍ ಸ್ಟಾಗ್ರಾಂನಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಜೊತೆ ಮುಖ್ಯವಾಗಿ ಮಾತನಾಡಬೇಕು. ನಾಳೆ ನಾನು 1.30ಕ್ಕೆ ಲೈವ್ ಬರುತ್ತಿದ್ದೇನೆ. ಯಾರೂ ಈ ಲೈವ್ ಮರೆಯಬೇಡಿ. ಏಕೆಂದರೆ ಇದು ಬಹಳ ಮುಖ್ಯವಾದದ್ದು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ವಿರಾಟ್ ನಾಳೆ ಲೈವ್ ಬರುತ್ತಿರುವುದರಿಂದ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿದೆ. ಐಪಿಎಲ್‍ನಲ್ಲಿ ಆರ್‌ಸಿಬಿ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಲಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

    ಐಪಿಎಲ್ 2018 ರ 11ನೇ ಆವೃತ್ತಿಯಲ್ಲಿ ಸತತ ನೀರಸ ಪ್ರದರ್ಶನ ತೋರಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವ ಸ್ಥಾನದಿಂದ ಗೌತಮ್ ಗಂಭೀರ್ ಕೆಳಗಿಳಿದಿದ್ದರು. ಹಾಗೆಯೇ ವಿರಾಟ್ ಕೊಹ್ಲಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯುತ್ತಾರಾ? ಈ ಕಾರಣಕ್ಕೆ ದಿನಾಂಕ ಫಿಕ್ಸ್ ಮಾಡಿದ್ದಾರಾ ಎನ್ನುವ ಪ್ರಶ್ನೆಯನ್ನು ಈಗ ಅಭಿಮಾನಿಗಳು ಕೇಳುತ್ತಿದ್ದಾರೆ.

    ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಡೆಲ್ಲಿ ತಂಡದ ನಾಯಕ ಪಟ್ಟದಿಂದ ಗೌತಮ್ ಗಂಭೀರ್ ಇಳಿದಿದ್ದರು. ಬಳಿಕ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

    Guys, I’m going live at 1:30pm tomorrow. Join me, we’ve got a lot to chat about.

    A post shared by Virat Kohli (@virat.kohli) on

  • ನಿವೇದಿತಾ ಮನೆಗೆ ಚಂದನ್ ಸರ್ಪ್ರೈಸ್ ಭೇಟಿ- ನಿಮ್ಮಿಬ್ಬರ ಮದ್ವೆ ಯಾವಾಗ? ಎಂದು ಅಭಿಮಾನಿ ಕೇಳಿದ್ದಕ್ಕೆ ಹೀಗಂದ್ರು

    ನಿವೇದಿತಾ ಮನೆಗೆ ಚಂದನ್ ಸರ್ಪ್ರೈಸ್ ಭೇಟಿ- ನಿಮ್ಮಿಬ್ಬರ ಮದ್ವೆ ಯಾವಾಗ? ಎಂದು ಅಭಿಮಾನಿ ಕೇಳಿದ್ದಕ್ಕೆ ಹೀಗಂದ್ರು

    ಬೆಂಗಳೂರು: ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಮೈಸೂರಿನಲ್ಲಿರುವ ನಿವೇದಿತಾ ಗೌಡ ಮನೆಗೆ ಭೇಟಿ ನೀಡಿ ಸರ್ಪ್ರೈಸ್ ನೀಡಿದ್ದಾರೆ. ಈ ವೇಳೆ ಚಂದನ್ ಶೆಟ್ಟಿ ಫೇಸ್ ಬುಕ್ ಲೈವ್ ಮಾಡಿದ್ದು, ಅಭಿಮಾನಿಯೊಬ್ಬರು ನಿಮ್ಮ ಮತ್ತು ನಿವೇದಿತಾ ಮದುವೆ ಯಾವಾಗ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ.

    ನಾನು ಈಗ ನಿವೇದಿತಾ ಗೌಡ ಮನೆಯಲ್ಲಿದ್ದೇನೆ. ತುಂಬಾ ದಿನದಿಂದ ನಿವೇದಿತಾಳನ್ನು ಭೇಟಿಯಾಗಲು ಕಾಯುತ್ತಿದೆ. ಸುಮಾರು ಕಡೆ ಇಬ್ಬರೂ ಒಂದೇ ಜಾಗದಲ್ಲಿದ್ದರೂ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಚಂದನ್ ಹೇಳಿದ್ರು. ಈ ವೇಳೆ ನಿವೇದಿತಾ ಕೂಡ ಮಾತನಾಡಿ ಚಂದನ್ ನನ್ನ ಮನೆಗೆ ಬರುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ಆದರೆ ಈಗ ನನಗೆ ಖುಷಿಯಾಗಿದೆ. ಚಂದನ್ ನಮ್ಮ ಮನೆಗೆ ಬರುತ್ತಿರುವುದು ಮೊದಲೇ ಗೊತ್ತಿದ್ದರೆ ನಾನು ಕಾಲೇಜಿನಿಂದ ಬೇಗ ಬರುತ್ತಿದೆ ಎಂದು ಹೇಳಿದ್ರು.

    ಈ ವೇಳೆ ಫೇಸ್ ಬುಕ್ ಲೈವ್‍ನಲ್ಲಿ ಅಭಿಮಾನಿಯೊಬ್ಬರು ನಿಮ್ಮ ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ, ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಸದ್ಯ ನಮಗೆ ಆ ತರಹ ಯಾವುದೇ ಅಲೋಚನೆಗಳಿಲ್ಲ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ನಮ್ಮ ಶಾರ್ಟ್ ವಿಡಿಯೋಗಳನ್ನು ನೋಡಿದ್ದೀವಿ. ಆ ವಿಡಿಯೋ ನೋಡಿ ನಮಗೆ ಖುಷಿಯಾಯಿತು. ಆ ವಿಡಿಯೋಗಳಲ್ಲಿ ನಮ್ಮಿಬ್ಬರ ಸಂಭಾಷಣೆ ನೋಡಿ ಖುಷಿಯಾಯಿತು ಎಂದು ಚಂದನ್ ಹಾಗೂ ನಿವೇದಿತಾ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಈ ಹಿಂದೆ ಚಂದನ್ ತಮ್ಮ ಗೆಳಯನಾದ ದಿವಾಕರ್ ಮನೆಗೆ ಸರ್ಪ್ರೈಸ್ ಭೇಟಿ ನೀಡಿದ್ದರು. ಬಿಗ್ ಬಾಸ್ ಸೀಸನ್ ರನ್ನರ್ ಅಪ್ ದಿವಾಕರ್ ಮತ್ತು ಅವರ ಪತ್ನಿ ಮಮತಾ ಅವರ ವಿವಾಹ ವಾರ್ಷಿಕೋತ್ಸವ ಸಂಭ್ರಮವಿತ್ತು. ಈ ಸಂದರ್ಭದಲ್ಲಿ ಚಂದನ್ ದಿವಾಕರ್ ಮನೆಗೆ ಸರ್ಪ್ರೈಸ್ ಭೇಟಿ ನೀಡಿದ್ದರು. ವಿದ್ಯಾರಣ್ಯಪುರದಲ್ಲಿರುವ ದಿವಾಕರ್ ಮನೆಗೆ ಚಂದನ್ ಶೆಟ್ಟಿ ಭೇಟಿ ನೀಡಿ ದಿವಾಕರ್ ದಂಪತಿಗೆ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ್ದರು. ಈ ವೇಳೆ ದಿವಾಕರ್ ದಂಪತಿ, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ಕೇಕ್ ಕತ್ತರಿಸಿ ಚಂದನ್ ಸಂಭ್ರಮಿಸಿದರು.


  • ತನ್ನ ಮದುವೆಯನ್ನು ಲೈವ್ ಆಗಿ ವರದಿ ಮಾಡಿದ ಪತ್ರಕರ್ತ!- ವಿಡಿಯೋ ಈಗ ವೈರಲ್

    ತನ್ನ ಮದುವೆಯನ್ನು ಲೈವ್ ಆಗಿ ವರದಿ ಮಾಡಿದ ಪತ್ರಕರ್ತ!- ವಿಡಿಯೋ ಈಗ ವೈರಲ್

    ಇಸ್ಲಾಮಾಬಾದ್: ಪತ್ರಕರ್ತನೊಬ್ಬ ತನ್ನ ಮದುವೆಯನ್ನು ಲೈವ್ ಆಗಿ ಟಿವಿ ಚಾನೆಲ್‍ನಲ್ಲಿ ವರದಿ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಹನಾನ್ ಬುಕಾರಿ ತನ್ನ ಮದುವೆಯನ್ನು ಲೈವ್ ವರದಿ ಮಾಡಿದ ಪತ್ರಕರ್ತ. ಬುಕಾರಿ ಟಿವಿ ಚಾನೆಲ್‍ನಲ್ಲಿ ತನ್ನ ಮದುವೆಯ ಬಗ್ಗೆ ಅಲ್ಲಿ ನಡೆಯುತ್ತಿದ್ದ ಪ್ರತಿಯೊಂದು ವಿಷಯದ ಬಗ್ಗೆ ವರದಿ ಮಾಡಿದ್ದಾರೆ. ವರನ ಉಡುಪನ್ನು ಧರಿಸಿ ಕೈಯಲ್ಲಿ ಮೈಕ್ ಹಿಡಿದು, ಕುಟುಂಬದ ಸದಸ್ಯರ ಹತ್ತಿರ ಕಾರ್ಯಕ್ರಮದ ಬಗ್ಗೆ ಅವರ ಅಭಿಪ್ರಾಯವನ್ನು ಪಡೆದಿದ್ದರು.

    ನಾನು ನನ್ನ ಮದುವೆಯಲ್ಲಿದ್ದೇನೆ ಹಾಗೂ ತುಂಬಾ ಖುಷಿಯಾಗಿದ್ದೇನೆ ಎಂದು ವೀಕ್ಷಕರಿಗೆ ಹೇಳುತ್ತಾ ಕಾರ್ಯಕ್ರಮವನ್ನು ಶುರು ಮಾಡಿದ್ದರು. ನಂತರ ನಮ್ಮದು ಲವ್ ಮ್ಯಾರೇಜ್ ನನ್ನ ಪತ್ನಿ ಇದ್ದರಿಂದ ತುಂಬಾ ಖುಷಿಯಾಗಿದ್ದಾಳೆ ಎಂದು ತಿಳಿಸಿದ್ದರು.

    ಬುಕಾರಿ ವರದಿ ಮಾಡುವಾಗ ಪಕ್ಕದಲ್ಲೇ ನಿಂತಿದ್ದ ತನ್ನ ತಂದೆಯನ್ನು ಪರಿಚಯಿಸಿದ ಬಳಿಕ ತನ್ನ ತಂದೆ ಜೊತೆಗೆ ಸಂದರ್ಶನ ನಡೆಸಿದ್ದಾರೆ. ನಿಮಗೆ ಈ ಕಾರ್ಯಕ್ರಮ ಹೇಗೆ ಅನಿಸುತ್ತಿದೆ ಎಂದು ಕೇಳಿದ್ದಾರೆ. ನನ್ನ ಮಗ ಮದುವೆಯಾಗಲೂ ಅವಕಾಶ ಕೊಟ್ಟ ದೇವರಿಗೆ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ ಎಂದು ಬುಕಾರಿ ತಂದೆ ಹೇಳಿದ್ದಾರೆ.

    ತಂದೆಯ ಜೊತೆ ಸಂದರ್ಶನ ನಡೆದ ಬಳಿಕ ಬುಕಾರಿ ತನ್ನ ಪತ್ನಿಯನ್ನು ನಿನಗಾಗಿ ಸ್ಪೋಟ್ರ್ಸ್ ಕಾರ್, ಸೂಪರ್‍ಬೈಕ್ ಖರೀದಿಸಿದ್ದೇನೆ. ಈಗ ನೀನು ನಿನ್ನ ಅಭಿಪ್ರಾಯ ತಿಳಿಸು ಎಂದು ಕೇಳುತ್ತಾನೆ. ನನ್ನ ಆಸೆಗಳನ್ನು ಪೂರೈಸಿದ್ದಕ್ಕೆ ನನಗೆ ತುಂಬಾನೇ ಖುಷಿಯಾಗುತ್ತಿದೆ. ಮುಂದೆ ನನ್ನ ಜೀವನದಲ್ಲೂ ಹೀಗೆ ನನ್ನ ಎಲ್ಲ ಆಸೆಯನ್ನು ಈಡೇರಿಸುತ್ತೀರಿ ಎನ್ನುವ ನನಗೆ ಭರವಸೆ ಇದೆ ಎಂದು ವಧು ಉತ್ತರಿಸುತ್ತಾಳೆ.

    ನಂತರ ತನ್ನ ಅತ್ತೆ ಹಾಗೂ ತಾಯಿ ಜೊತೆ ಸಂದರ್ಶನ ನಡೆಸಿ ಕಾರ್ಯಕ್ರಮದ ಬಗ್ಗೆ ಕೇಳಿದ್ದಾರೆ. ಪತ್ರಕರ್ತನ ಮದುವೆಯ ವಿಡಿಯೋ ಈಗ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದ್ದು, ಕೆಲವರು ಇದನ್ನು ನೋಡಿ ಖುಷಿಪಟ್ಟರೆ. ಇನ್ನೂ ಕೆಲವರು ಆ ವಿಡಿಯೋ ನೋಡಿ ಪತ್ರಕರ್ತನ ಕಾಲು ಎಳೆದಿದ್ದಾರೆ.

    https://www.youtube.com/watch?v=Y7jQB57_Kvs