Tag: ಲೈವ್ ಸ್ಟ್ರೀಮ್

  • ಕಲಾಪದ ವೇಳೆ ಫೇಸ್‌ಬುಕ್ ಲೈವ್ ಮಾಡಿದ ಶಾಸಕ ವಿಧಾನ ಸಭೆಯಿಂದ ಅಮಾನತು

    ಕಲಾಪದ ವೇಳೆ ಫೇಸ್‌ಬುಕ್ ಲೈವ್ ಮಾಡಿದ ಶಾಸಕ ವಿಧಾನ ಸಭೆಯಿಂದ ಅಮಾನತು

    ಲಕ್ನೋ: ವಿಧಾನ ಸಭೆಯ (Vidhan Sabha) ಕಲಾಪದ ವೇಳೆ ಸಮಾಜವಾದಿ ಪಕ್ಷದ (SP) ಶಾಸಕರೊಬ್ಬರು (MLA) ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮ್ (Facebook Live Stream) ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಫೇಸ್‌ಬುಕ್‌ನಲ್ಲಿ ಲೈವ್ ನಡೆಸಿದಕ್ಕಾಗಿ ಶಾಸಕನನ್ನು ವಿಧಾನಸಭಾ ಸ್ಪೀಕರ್ ತಕ್ಷಣವೇ ಅಮಾನತುಗೊಳಿಸಿದ್ದಾರೆ.

    ಮಂಗಳವಾರ ಬೆಳಗ್ಗೆ ಸರ್ಧಾನ್‌ನ (ಮೀರತ್) ಎಸ್‌ಪಿ ಶಾಸಕ ಅತುಲ್ ಪ್ರಧಾನ್ (Atul Pradhan) ತಮ್ಮ ಫೇಸ್‌ಬುಕ್ ಖಾತೆಯಿಂದ ಲೈವ್ ನಡೆಸಿದ್ದಾರೆ. ವಿಧಾನಸೌಧದ ಒಳಗಡೆ ಸುಮಾರು 2.22 ನಿಮಿಷದ ವರೆಗೆ ವೀಡಿಯೋ ಲೈವ್ ನಡೆಸಿದ್ದು, ಅವರು ಲೈವ್ ನಡೆಸುತ್ತಿದ್ದ ಫೋನ್ ಯಾರಿಗೂ ಕಾಣಿಸದಂತೆ ಸೊಂಟದ ಮಟ್ಟದಲ್ಲಿ ಹಿಡಿದುಕೊಂಡಿರುವುದು ಕಂಡುಬಂದಿದೆ.

    ವರದಿಗಳ ಪ್ರಕಾರ ಕಲಾಪ ನಡೆಯುತ್ತಿದ್ದ ವೇಳೆ ಸಮಾಜವಾದಿ ಪಕ್ಷದ ಸದಸ್ಯರು ರಾಮ್‌ಪುರ ಉಪಚುನಾಣೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷದ ನಡವಳಿಕೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಪ್ರಧಾನ್ ಫೇಸ್‌ಬುಕ್ ಲೈವ್ ನಡೆಸಿದ್ದಾರೆ. ಈ ವೀಡಿಯೋವನ್ನು 1,400ಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಈ ವಿಚಾರ ಸ್ಪೀಕರ್ ಗಮನಕ್ಕೆ ಬರುತ್ತಿದ್ದಂತೆಯೇ ಪ್ರಧಾನ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: 9,125 ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

    ವಿಧಾನಸಭೆಯ ನಿಯಮಗಳಿಗೆ ವಿರುದ್ಧವಾಗಿ ಫೇಸ್‌ಬುಕ್ ಲೈವ್ ಮಾಡಿದ ಅತುಲ್ ಪ್ರಧಾನ್ ಅವರನ್ನು ತಕ್ಷಣವೇ ಸ್ಪೀಕರ್ ಸತೀಶ್ ಮಹಾನ್ ವಿಧಾನಸೌಧದಿಂದ ಹೊರನಡೆಯುವಂತೆ ಆದೇಶಿಸಿದ್ದಾರೆ. ಸ್ಪೀಕರ್ ಆದೇಶದಂತೆ ಅತುಲ್ ಅಲ್ಲಿಂದ ಹೊರನಡೆದಿದ್ದಾರೆ.

    ಬಳಿಕ ತಾವು ಹೊಸ ಸದಸ್ಯರಾಗಿದ್ದು, ವಿಧಾನಸಭೆಯ ನಿಯಮಾವಳಿಗಳ ಬಗ್ಗೆ ಹೆಚ್ಚಿನ ಅರಿವಿಲ್ಲವೆಂದೂ ತಿಳಿಸಿದ್ದಾರೆ. ಸ್ಪೀಕರ್ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕೆಂದು ಅತುಲ್ ಕೇಳಿಕೊಂಡಿದ್ದು, ಇದಾದ 1 ಗಂಟೆಯ ಬಳಿಕ ಅತುಲ್ ಅವರಿಗೆ ಸದನಕ್ಕೆ ಹಾಜರಾಗಲು ಸ್ಪೀಕರ್ ಅನುಮತಿ ನೀಡಿದ್ದಾರೆ. ಇದನ್ನೂ ಓದಿ: ಕೊತ್ತಂಬರಿ ಸೊಪ್ಪಿನ ಹಾರ ಹಾಕಿ ಹೆಚ್‍ಡಿಕೆಯನ್ನು ಬರಮಾಡಿಕೊಂಡ ಗ್ರಾಮಸ್ಥರು

    Live Tv
    [brid partner=56869869 player=32851 video=960834 autoplay=true]

  • ಲೈವ್ ಸ್ಟ್ರೀಮ್ ನಡೆಸುತ್ತಿರುವಾಗಲೇ ಕೊರಿಯಾದ ಯುವತಿಗೆ ಮುಂಬೈನಲ್ಲಿ ಕಿರುಕುಳ – ಇಬ್ಬರು ಅರೆಸ್ಟ್

    ಲೈವ್ ಸ್ಟ್ರೀಮ್ ನಡೆಸುತ್ತಿರುವಾಗಲೇ ಕೊರಿಯಾದ ಯುವತಿಗೆ ಮುಂಬೈನಲ್ಲಿ ಕಿರುಕುಳ – ಇಬ್ಬರು ಅರೆಸ್ಟ್

    ಮುಂಬೈ: ಕೊರಿಯಾದ ಯುವತಿಯೊಬ್ಬಳು (Korean Woman) ಮುಂಬೈನಲ್ಲಿ (Mumbai) ಯೂಟ್ಯೂಬ್ ಲೈವ್ ಸ್ಟ್ರೀಮ್ (Live Stream) ನಡೆಸುತ್ತಿದ್ದ ವೇಳೆ ಇಬ್ಬರು ಪುಂಡರು ಆಕೆಗೆ ಕಿರುಕುಳ (Harassment) ನೀಡಿರುವ ಘಟನೆ ನಡೆದಿದೆ. ಯುವತಿಗೆ ಕಿರುಕುಳ ನೀಡಿದ ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಯುವತಿ ಲೈವ್ ಸ್ಟ್ರೀಮ್ ನಡೆಸುತ್ತಿದ್ದ ವೇಳೆ ಒಬ್ಬ ಆರೋಪಿ ಯುವತಿಯನ್ನು ಕೈ ಹಿಡಿದು ಎಳೆದೊಯ್ಯುವುದು ವೀಡಿಯೋದಲ್ಲಿ ಕಂಡುಬಂದಿದೆ. ಅಪರಿಚಿತ ವ್ಯಕ್ತಿಯೊಡನೆ ಆತ್ಮೀಯತೆಯಿಂದ ಮಾತನಾಡಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ.

     

    ಆರೋಪಿ ಯುವತಿಗೆ ಆತನ ಗೆಳೆಯನೊಬ್ಬನ ಬೈಕಿನಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿ, ಆತ ನಿನಗೆ ಡ್ರಾಪ್ ನೀಡುತ್ತಾನೆ ಎಂದು ಹೇಳಿದ್ದಾನೆ. ಇದನ್ನು ಯುವತಿ ನಿರಾಕರಿಸಿದ್ದಾಳೆ. ಬಳಿಕ ಆತ ಯುವತಿಗೆ ಮುತ್ತಿಕ್ಕಲೂ ಪ್ರಯತ್ನಿಸಿದ್ದಾನೆ. ಇದರಿಂದ ಕಳವಳಗೊಂಡ ಯುವತಿ ಮನೆಗೆ ಹೋಗುವುದಾಗಿ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

    ಆದರೂ ಬೆಂಬಿಡದ ಇಬ್ಬರು ಯುವಕರು ಆಕೆಯನ್ನು ಬೈಕಿನಲ್ಲಿ ಹಿಂಬಾಲಿಸಿದ್ದಾರೆ. ನನ್ನ ಮನೆ ಇಲ್ಲೇ ಹತ್ತರವಿದೆ ಎಂದು ಹೇಳಿ ಯುವತಿ ಅವರಿಬ್ಬರನ್ನು ಅಲ್ಲಿಂದ ಹೋಗುವಂತೆ ಮಾಡಿದ್ದಾಳೆ. ಇದನ್ನೂ ಓದಿ: ಬೆಂಗ್ಳೂರಿನ ಇತಿಹಾಸದಲ್ಲೇ ಫಸ್ಟ್ ಟೈಮ್ ಎಸ್‍ಪಿ ರೋಡ್ ಬಂದ್ – ಡಿ.13ಕ್ಕೆ ವಿಧಾನಸೌಧಕ್ಕೆ ವರ್ತಕರ ಮೆರವಣಿಗೆ

     

    ತನಗಾದ ಕಿರುಕುಳದ ಬಗ್ಗೆ ಯುವತಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾಳೆ. ಕಳೆದ ರಾತ್ರಿ ನನಗೆ ಒಬ್ಬ ಕಿರುಕುಳ ನೀಡಿದ್ದಾನೆ. ಆತ ತನ್ನ ಇನ್ನೊಬ್ಬ ಗೆಳೆಯನೊಂದಿಗೆ ಇದ್ದಿದ್ದರಿಂದ ನಾನು ಅಲ್ಲಿಂದ ತಪ್ಪಿಸಿಕೊಳ್ಳಲು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ. ನಾನು ಅಪರಿಚಿತರೊಂದಿಗೆ ಆತ್ಮೀಯತೆಯಿಂದ ಮಾತನಾಡಿದ್ದರಿಂದಲೇ ಹೀಗೆಲ್ಲಾ ಆಗಿದೆ ಎಂದು ಕೆಲವರು ತಿಳಿಸಿದ್ದಾರೆ. ಈ ಘಟನೆಯ ಬಳಿಕ ನಾನು ಮುಂದೆಯೂ ಸ್ಟ್ರೀಮಿಂಗ್ ಮಾಡಬೇಕೇ ಎಂಬ ಬಗ್ಗೆ ಯೋಚನೆ ಮಾಡುವಂತಾಗಿದೆ ಎಂದು ಯುವತಿ ಕಳವಳ ವ್ಯಕ್ತಪಡಿಸಿದ್ದಾಳೆ.

    ಮುಂಬೈ ಪೊಲೀಸರು ಈ ವೀಡಿಯೋವನ್ನಾಧರಿಸಿ ಸ್ವಯಂಪ್ರೇರಿತವಾಗಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್‌ ಸೇವನೆ ಆರೋಪ – NCB ಅಧಿಕಾರಿಗಳಿಂದ 3 ಯುವತಿಯರು ವಶಕ್ಕೆ

    Live Tv
    [brid partner=56869869 player=32851 video=960834 autoplay=true]

  • ಫಸ್ಟ್‌ ಟೈಂ ಸುಪ್ರೀಂ ಸಾಂವಿಧಾನಿಕ ಪೀಠದ ವಿಚಾರಣೆ ಲೈವ್‌ – ಎಲ್ಲಿ ನೋಡಬಹುದು?

    ಫಸ್ಟ್‌ ಟೈಂ ಸುಪ್ರೀಂ ಸಾಂವಿಧಾನಿಕ ಪೀಠದ ವಿಚಾರಣೆ ಲೈವ್‌ – ಎಲ್ಲಿ ನೋಡಬಹುದು?

    ನವದೆಹಲಿ: ಇಂದಿನಿಂದ ಸುಪ್ರೀಂ ಕೋರ್ಟ್‌(Supreme Court) ಸಾಂವಿಧಾನಿಕ ಪೀಠದಲ್ಲಿ(Constitution Bench) ನಡೆಯುವ ವಿಚಾರಣೆಯನ್ನು ಲೈವ್‌ ಆಗಿ ನೋಡಬಹುದು.

    ಆರಂಭದಲ್ಲಿ NIC Webcast ಯೂಟ್ಯೂಬ್‌ನಲ್ಲಿ ಪ್ರಸಾರವಾದರೆ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲೇ ಲೈವ್‌ ಸ್ಟ್ರೀಮ್‌ ಪ್ರಸಾರವಾಗುವ ಸಾಧ್ಯತೆಯಿದೆ.

    ಕಳೆದ ಮಂಗಳವಾರ ಮುಖ್ಯ ನ್ಯಾಯಮೂರ್ತಿ ಉದಯ್‌ ಲಲಿತ್‌ (CJI Uday Lalit) ಅವರು ಜಡ್ಜ್‌ಗಳ ಜೊತೆ ಸಭೆ ನಡೆಸಿದ್ದರು. ಈ ವೇಳೆ ಎಲ್ಲ ಜಡ್ಜ್‌ಗಳು ಲೈವ್‌ ಪ್ರಸಾರ ಅಗತ್ಯ ಎಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಸಭೆಯ ಬಳಿಕ ಲೈವ್‌ ಸ್ಟ್ರೀಮ್‌ ನಿರ್ಧಾರ ಪ್ರಕಟವಾಗಿತ್ತು.

    ಈ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ ಕಲಾಪ ಲೈವ್‌ ಆಗಿತ್ತು. ಸಿಜೆಐ ಆಗಿದ್ದ ಎನ್‌ವಿ ರಮಣ ಅವರ ನಿವೃತ್ತಿ ದಿನದ ಕಲಾಪವನ್ನು ಲೈವ್‌ ಮಾಡಲಾಗಿತ್ತು.

    ಸೆಪ್ಟೆಂಬರ್ 2018 ರಲ್ಲಿ ಸ್ವಪ್ನಿಲ್ ತ್ರಿಪಾಠಿ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ನ್ಯಾಯವನ್ನು ಪಡೆಯುವ ಹಕ್ಕಿನ ಭಾಗವಾಗಿ ನ್ಯಾಯಾಲಯದ ಪ್ರಕ್ರಿಯೆಗಳ ನೇರ ಪ್ರಸಾರಕ್ಕೆ ಅನುಮತಿ ನೀಡಿತ್ತು. ಬಳಿಕ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಇ-ಸಮಿತಿ, ನ್ಯಾಯಾಲಯದ ಪ್ರಕ್ರಿಯೆಗಳ ನೇರ ಪ್ರಸಾರವನ್ನು ನಿಯಂತ್ರಿಸಲು ಮಾದರಿ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು.

    ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಎರಡು ವಾರದ ಹಿಂದೆ ಸಿಜೆಐ ಮತ್ತು ಇತರ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಸಾರ್ವಜನಿಕ ಮತ್ತು ಸಾಂವಿಧಾನಿಕ ಪ್ರಾಮುಖ್ಯತೆಯ ವಿಷಯಗಳ ವಿಚಾರಣೆಯನ್ನು ಲೈವ್ ಸ್ಟ್ರೀಮಿಂಗ್ ಮಾಡುವಂತೆ ಮನವಿ ಮಾಡಿದ್ದರು. ಇದನ್ನೂ ಓದಿ: ನಯನತಾರಾ ಮದುವೆ ವಿಡಿಯೋ ನೋಡ್ಬೇಕಾ, ಹಾಗಾದರೆ ದುಡ್ಡು ಕೊಡಲೇಬೇಕು

    ಗುಜರಾತ್, ಒಡಿಶಾ, ಕರ್ನಾಟಕ, ಜಾರ್ಖಂಡ್, ಪಾಟ್ನಾ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳು ತಮ್ಮ ಯೂಟ್ಯೂಬ್ ಚಾನೆಲ್‌ಗಳ ಮೂಲಕ ತಮ್ಮ ವಿಚಾರಣೆಗಳನ್ನು ಈಗಾಗಲೇ ಲೈವ್-ಸ್ಟ್ರೀಮ್ ಮಾಡಿ ವಿಚಾರಣೆ ನಡೆಸಿವೆ.

    ಲೈವ್‌ಸ್ಟ್ರೀಮ್‌ ಮಾಡುವುದರಿಂದ ವಕೀಲರಿಗೆ, ಪತ್ರಕರ್ತರಿಗೆ ಮತ್ತು ಆ ವಿಷಯದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವ ಮಂದಿಗೆ ತುಂಬಾ ಸಹಾಯವಾಗಲಿದೆ.

    ಸಾಂವಿಧಾನಿಕ ಪೀಠ
    ಐದು ಅಥವಾ ಅದಕ್ಕಿಂತ ಹೆಚ್ಚು ನ್ಯಾಯಾಧೀಶರು ಇರುವ ಪೀಠವನ್ನು ಸಾಂವಿಧಾನಿಕ ಪೀಠ ಎಂದು ಕರೆಯಲಾಗುತ್ತದೆ. ಸುಪ್ರೀಂ ಕೋರ್ಟ್‌ನ ಬಹುತೇಕ ಪ್ರಕರಣಗಳು ಇಬ್ಬರು ನ್ಯಾಯಾಧೀಶರು ಇರುವ ಪೀಠದಲ್ಲಿ ನಡೆಯುತ್ತದೆ. ಸಾಂವಿಧಾನಿಕ ಸಿಂಧುತ್ವ ಅಥವಾ ಯಾವುದಾದರು ಗಂಭೀರ ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ಸಾಂವಿಧಾನಿಕ ಪೀಠ ರಚನೆಯಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಬಾಂಬ್ ಶೆಲ್ಟರ್‌ನಿಂದ ಲೈವ್ ಸ್ಟ್ರೀಮ್ ಮಾಡಿದ ಉಕ್ರೇನ್ ರಾಕ್ ಬ್ಯಾಂಡ್!

    ಕೀವ್: ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಎಲ್ಲರೂ ನೋಡಿಯೇ ಇರುತ್ತಾರೆ. ಜನರ ಗಮನ ಸೆಳೆಯಲು ಯೂಟ್ಯೂಬರ್ಸ್‌ಗಳು ಹೊಸ ಹೊಸ ರೀತಿಯಲ್ಲಿ ವ್ಲಾಗ್, ಲೈವ್ ಸ್ಟ್ರೀಮ್ ಮಾಡುತ್ತಲೇ ಇರುತ್ತಾರೆ. ಇಲ್ಲೊಂದು ಉಕ್ರೇನ್‌ನ ರಾಕ್ ಬ್ಯಾಂಡ್ ಭೀಕರ ಯುದ್ಧದ ನಡುವೆಯೂ ಬಾಂಬ್ ಶೆಲ್ಟರ್‌ನಿಂದ ಲೈವ್ ಸ್ಟ್ರೀಮ್ ಮಾಡಿ ಜನರ ಹುಬ್ಬೇರಿಸುವಂತೆ ಮಾಡಿದ್ದಾರೆ.

    ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿ ಇಂದಿಗೆ 16 ನೇ ದಿನ. ಇಂತಹ ಪರಿಸ್ಥಿತಿಯಲ್ಲಿ ಮನೆ, ನೆಲೆ ಕಳೆದುಕೊಂಡವರು ಸಾವಿರಾರು. ಉಕ್ರೇನ್‌ನ ಸೆಲೋ ಐ ಲುಡಿ ಎಂಬ ರಾಕ್ ಬ್ಯಾಂಡ್ ಯುದ್ಧದ ಪರಿಸ್ಥಿತಿಯಲ್ಲಿ ಬಾಂಬ್ ಶೆಲ್ಟರ್‌ನಿಂದ ಯೂಟ್ಯೂಬ್‌ನಲ್ಲಿ ತಮ್ಮ ಗಾಯನದ ಲೈವ್ ಸ್ಟ್ರೀಮ್ ಮಾಡಿದ್ದಾರೆ. ಇದನ್ನೂ ಓದಿ: ರಷ್ಯಾ ಉಕ್ರೇನ್ ಮೇಲೆ ವ್ಯಾಕ್ಯೂಮ್ ಬಾಂಬ್ ಹಾಕುವುದು ಖಚಿತ ಎಂದ ಬ್ರಿಟನ್

    ಈ ಬ್ಯಾಂಡ್ ಹಿಂದೆ ತಮ್ಮ ಸ್ಟುಡಿಯೋದಿಂದ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡುತ್ತಿದ್ದು, ಯುದ್ಧದಿಂದಾಗಿ ತಮ್ಮ ಮನೆ, ಸ್ಟುಡಿಯೋ ಎಲ್ಲವನ್ನೂ ಕಳೆದುಕೊಂಡಿದೆ. ಇದೀಗ ಬಾಂಬ್ ಶೆಲ್ಟರ್‌ನಲ್ಲಿ ಆಶ್ರಯ ಪಡೆದುಕೊಂಡಿರುವ ರಾಕ್ ಬ್ಯಾಂಡ್ ತಂಡ ಅಲ್ಲಿಂದಲೇ ತಮ್ಮ ಲೈವ್ ಸ್ಟ್ರೀಮ್ ನಡೆಸುತ್ತಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದಿಗೆ ಮಾತ್ರ ಅಮೆರಿಕ ನಿರ್ಬಂಧ – ಯುರೇನಿಯಂಗೆ ಇಲ್ಲ ನಿಷೇಧ

    ವಿಶ್ವಸಂಸ್ಥೆ ನೀಡಿರುವ ವರದಿಯ ಪ್ರಕಾರ ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಸುಮಾರು ೨೦ ಲಕ್ಷ ಉಕ್ರೇನಿಯನ್ನರು ದೇಶವನ್ನು ತೊರೆದಿದ್ದಾರೆ. ಉಕ್ರೇನ್‌ನ ಹೆಚ್ಚಿನ ಪ್ರಜೆಗಳು ಹತ್ತಿರದ ದೇಶಗಳಾದ ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ, ರಷ್ಯಾ ಹಾಗೂ ಮಾಲ್ಡಿವ್ಸ್‌ಗೆ ಪಲಾಯನ ಮಾಡಿದ್ದಾರೆ.