Tag: ಲೈವ್ ವಿಡಿಯೋ

  • ‘ತಪ್ಪದೆ ಬಿಸಿ ನೀರು ಕುಡಿಯಿರಿ’ – ಆಸ್ಪತ್ರೆಯಿಂದ ಬಂದು ಅಭಿಮಾನಿಗಳಿಗೆ ಧ್ರುವ ಕಿವಿಮಾತು

    ‘ತಪ್ಪದೆ ಬಿಸಿ ನೀರು ಕುಡಿಯಿರಿ’ – ಆಸ್ಪತ್ರೆಯಿಂದ ಬಂದು ಅಭಿಮಾನಿಗಳಿಗೆ ಧ್ರುವ ಕಿವಿಮಾತು

    ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ಇದೀಗ ಆಸ್ಪತ್ರೆಯಿಂದ ಮನೆಗೆ ಬಂದ ಧ್ರುವ ಸರ್ಜಾ ಲೈವ್‍ಗೆ ಬಂದು ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.

    ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಜುಲೈ 15 ರಂದು ಗೊತ್ತಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದ ಅವರು ಎರಡು ದಿನಗಳಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರಿಗೂ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಇದೀಗ ಮನೆಯಲ್ಲಿ ವರ್ಕೌಟ್ ಮಾಡುತ್ತಿರುವಾಗ ಇನ್‍ಸ್ಟಾಗ್ರಾಂ ಮೂಲಕ ಲೈವ್ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ.

    ಮನೆಯಲ್ಲಿ ಟ್ರೆಡ್‍ಮೀಲ್ ಮೇಲೆ ನಡೆಯುತ್ತಾ ಲೈವ್‍ನಲ್ಲಿ ಮಾತನಾಡಿದ ಧ್ರುವ ಸರ್ಜಾ, ನಾನು ಮತ್ತು ಪ್ರೇರಣಾ ಆರೋಗ್ಯವಾಗಿದ್ದೇವೆ. ಕ್ಯಾಲರಿ ಕರಗಿಸಬೇಕಾಗಿದೆ ಎಂದ ಧ್ರುವ ಸರ್ಜಾ ಮನೆಯಲ್ಲಿಯೇ ಟ್ರೆಡ್‍ಮಿಲ್ ಇತ್ತು ಹಾಗಾಗಿ ವರ್ಕೌಟ್ ಮಾಡುತ್ತಿದ್ದೀನಿ. ಆರಂಭದಲ್ಲಿ ಸ್ವಲ್ಪ ಸುಸ್ತಾಗುತ್ತೆ ಅಷ್ಟೆ. ಪ್ರೇರಣಾ ಅವರಿಗೂ ವರ್ಕೌಟ್ ಮಾಡಿಸಬೇಕು ಎಂದು ಹೇಳಿದ್ದಾರೆ.

    ಇದೇ ವೇಳೆ ಅತ್ತಿಗೆ ಮೇಘನಾ ಬಗ್ಗೆಯೂ ಮಾತನಾಡಿ, ಮೇಘನಾ ಕೂಡ ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡಬೇಡಿ. ನಾವು ಬೇಗ ಗುಣಮುಖರಾಗಿ ಮನೆಯಿಂದ ಹೊರಗೆ ಬರುತ್ತೇವೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

    ಈ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಾಗೃತರಾಗಿರಿ ಎಂದು ಅಭಿಮಾನಿಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. “ತಪ್ಪದೆ ಪ್ರತಿದಿನ ಬಿಸಿ ನೀರು ಕುಡಿಯಿರಿ. ಸಾಧ್ಯವಾದಷ್ಟು ವರ್ಕೌಟ್ ಮಾಡಿ. ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಎಲ್ಲರೂ ಖುಷಿಯಾಗಿ ಇರಬೇಕು ಅಷ್ಟೇ. ಈ ಕೊರೊನಾವನ್ನು ಒಟ್ಟಾಗಿ ಸೇರಿ ಓಡಿಸೋಣ” ಎಂದು ಧ್ರುವ ಸರ್ಜಾ ಹೇಳಿದರು.

  • ಯುವತಿಯ ನಗ್ನ ವಿಡಿಯೋ ರೆಕಾರ್ಡ್ ಮಾಡಿ ಆಕೆಯ ಸ್ನೇಹಿತರಿಗೆ ಮಾರಾಟಕ್ಕಿಟ್ಟ

    ಯುವತಿಯ ನಗ್ನ ವಿಡಿಯೋ ರೆಕಾರ್ಡ್ ಮಾಡಿ ಆಕೆಯ ಸ್ನೇಹಿತರಿಗೆ ಮಾರಾಟಕ್ಕಿಟ್ಟ

    ಮುಂಬೈ: 19 ವರ್ಷದ ಯುವಕನೊಬ್ಬ ಯುವತಿಯ ನಗ್ನ ವಿಡಿಯೋ ರೆಕಾರ್ಡ್ ಮಾಡಿ, ಅದನ್ನು ಆಕೆಯ ಸ್ನೇಹಿತರಿಗೆ ಮಾರಾಟ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ಮುಂಬೈನ ಪೊವಾಯಿಯಲ್ಲಿ ನಡೆದಿದೆ.

    ಬಂಧಿತ ಯುವಕನನ್ನು 19 ವರ್ಷದ ಜಿತಿನ್ ಎಂದು ಗುರುತಿಸಲಾಗಿದ್ದು, ತನ್ನ ಕಾಲೇಜಿನಲ್ಲೇ ಓದುತ್ತಿದ್ದ 24 ವರ್ಷದ ಯುವತಿಯೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಗೆಳೆತನ ಆರಂಭಿಸಿದ್ದ.

    ಯುವತಿಯೊಂದಿಗೆ ಕೆಲ ದಿನಗಳ ಕಾಲ ಮಾತುಕತೆ ನಡೆಸಿದ್ದ ಜಿತಿನ್ ಆಗಸ್ಟ್ 24 ರಂದು ಯುವತಿಗೆ ಲೈವ್ ವಿಡಿಯೋ ಚಾಟ್‍ನಲ್ಲಿ ಆಕೆ ಧರಿಸಿದ್ದ ಬಟ್ಟೆ ತೆಗೆಯುವಂತೆ ಹೇಳಿದ್ದ. ಇದರಂತೆ ಯುವತಿ ತನ್ನ ಬಟ್ಟೆಯನ್ನು ತೆಗೆದಿದ್ದಳು. ಈ ದೃಶ್ಯಗಳನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಆರೋಪಿ ಜಿತಿನ್ ವಿಡಿಯೋವನ್ನು ಯುವತಿಯ ಸ್ನೇಹಿತರಿಗೆ 5 ಸಾವಿರ ರೂ. ಹಣ ನೀಡಿದರೆ ನೀಡುವುದಾಗಿ ಹೇಳಿದ್ದ. ಆದರೆ ಯುವತಿಯ ಗೆಳೆಯರು ಆರೋಪಿಯ ಕೃತ್ಯವನ್ನು ಆಕೆಗೆ ತಿಳಿಸಿದ್ದರು.

    ಸ್ನೇಹಿತರಿಂದ ಮಾಹಿತಿ ಪಡೆದ ಆಕೆ ಜಿತಿನ್ ನನ್ನು ಪ್ರಶ್ನಿಸಿದಾಗ ತನ್ನ ಬಳಿ ವಿಡಿಯೋ ಇರುವ ಸಂಗತಿಯನ್ನು ಒಪ್ಪಿಕೊಂಡು 70 ಸಾವಿರ ರೂ. ನೀಡಿದರೆ ವಿಡಿಯೋ ಡಿಲೀಟ್ ಮಾಡುವುದಾಗಿ ಹೇಳಿದ್ದ. ಇದರಿಂದ ಪೊಲೀಸರ ನೆರವು ಪಡೆದ ಯುವತಿ ಜಿತಿನ್ ವಿರುದ್ಧ ದೂರು ದಾಖಲಿಸಿದ್ದರು. ಯುವತಿ ನೀಡಿದ ದೂರಿನ ಅನ್ವಯ ಜಿತಿನ್ ನನ್ನು ಸೆ.13 ರಂದು ಪೊಲೀಸರು ಬಂಧಿಸಿದ್ದರು. ಅಲ್ಲದೇ ಐಪಿಸಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿದ್ದರು. ಗುರುವಾರದ ತನಕ ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

  • ವಿಡಿಯೋ ಮಾಡಿ ಆಟೋ ಡ್ರೈವರ್ ಆತ್ಮಹತ್ಯೆ

    ವಿಡಿಯೋ ಮಾಡಿ ಆಟೋ ಡ್ರೈವರ್ ಆತ್ಮಹತ್ಯೆ

    ಬೆಂಗಳೂರು: ಆಟೋ ಡ್ರೈವರೊಬ್ಬರು ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ.

    ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೆಂಕಟೇಶ್ ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸುಬೇದಾರ ಪಾಳ್ಯದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

    ತನ್ನ ಪತಿಗೆ ಡಿವೋರ್ಸ್ ಕೊಟ್ಟ ಬಳಿಕ ಯಶೋದ ಎಂಬ ಮಹಿಳೆ ಹಲವು ವರ್ಷಗಳಿಂದ ವೆಂಕಟೇಶ್ ಇರೋ ಏರಿಯಾದಲ್ಲೇ ವಾಸವಾಗಿದ್ದರು. ಇತ್ತ ಸಾಲದಿಂದ ಮನೆ ಮಠ ತೊರೆದಿದ್ದ ವೆಂಕಟೇಶ್ ಗೆ ಯಶೋದಾರ ಪರಿಚಯವಾಗಿತ್ತು. ವೆಂಕಟೇಶ್, ಯಶೋದ ಬಳಿಯೂ ಕೂಡ ಸಾಲ ಮಾಡಿದ್ದರು. ಜೊತೆಗೆ ದಿನವಿಡೀ ಮದ್ಯ ಸೇವಿಸಿ ವೆಂಕಟೇಶ್, ಯಶೋದ ಮನೆಗೆ ಹೋಗುತ್ತಿದ್ದರು. ಇದೇ ವಿಚಾರವಾಗಿ ಯಶೋದ ಗುರುವಾರ ರಾತ್ರಿ ವೆಂಕಟೇಶ್‍ಗೆ ಕ್ಲಾಸ್ ತೆಗೆದುಕೊಂಡಿದ್ದರು. ಶುಕ್ರವಾರ ಬೆಳಗ್ಗೆ ವೆಂಕಟೇಶ್, ವಿಡಿಯೋ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ನನ್ನ ಸಾವಿಗೆ ಯಶೋದ ಆಗಲಿ ಆಕೆಯ ಮಗಳಾಗಲಿ ಕಾರಣ ಅಲ್ಲ. ನನ್ನ ಸಾವಿಗೆ ನಾನೇ ಕಾರಣ. ನಾನು ಯಶೋದ ಬಳಿಯೂ ಸಾಲ ಮಾಡಿಕೊಂಡಿದ್ದೇನೆ. ನನ್ನ ಆಟೋ ಮಾರಿ ಬಂದ ಹಣವನ್ನು ಯಶೋದಾಗೆ ನೀಡಿ. ಮುಂದಿನ ಜನ್ಮ ಇದ್ರೆ ಯಶೋದ ಅವರೇ ನನ್ನ ಹೆಂಡತಿಯಾಗಿ ಬರಲಿ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಸಾಲಬಾಧೆಗೆ ಹೆದರಿ ಆಟೋಡ್ರೈವರ್ ವೆಂಕಟೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ ನೇಣು ಹಾಕಿಕೊಳ್ಳುವಾಗ ಲೈವ್ ವಿಡಿಯೋ ಮಾಡಿದ ಪತಿ!

    ಪತ್ನಿ ನೇಣು ಹಾಕಿಕೊಳ್ಳುವಾಗ ಲೈವ್ ವಿಡಿಯೋ ಮಾಡಿದ ಪತಿ!

    ಲಕ್ನೋ: ಗಂಡನ ಮನೆಯವರ ಕಿರುಕುಳ ತಾಳಲಾರದೇ ಪತ್ನಿ ನೇಣಿಗೆ ಶರಣಾಗುತ್ತಿದ್ದಾಗ ಪತಿ ವಿಡಿಯೋ ಮಾಡಿದ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ.

    ಗೀತಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಗೀತಾ 2015ರ ಏಪ್ರಿಲ್ 22ರಂದು ರಾಜ್‍ಕುಮಾರ್ ಜೊತೆ ಮದುವೆಯಾಗಿದ್ದಳು. ಮದುವೆ ಆಗಿ ಕೆಲವು ದಿನಗಳಲ್ಲಿ ಗೀತಾಗೆ ಆಕೆಯ ಪತಿ ಹಾಗೂ ಆತನ ಮನೆಯವರು ಒಂದು ಕಾರನ್ನು ವರದಕ್ಷಿಣೆ ಆಗಿ ನೀಡಬೇಕೆಂದು ಕಿರುಕುಳ ನೀಡುತ್ತಿದ್ದರು. ಅಲ್ಲದೇ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಗೀತಾ ಹಾಗೂ ಪತಿ ಮನೆಯವರ ನಡುವೆ ಜಗಳ ಕೂಡ ನಡೆಯುತ್ತಿತ್ತು.

    ಪತಿ ಹಾಗೂ ಆತನ ಮನೆಯವರ ವರದಕ್ಷಿಣೆಯ ಕಿರುಕುಳ ತಾಳಲಾರದೇ ಗೀತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗೀತಾ ಆತ್ಮಹತ್ಯೆಗೆ ಶರಣಾಗುವಾಗ ರಾಜ್‍ಕುಮಾರ್ ಆಕೆಯ ರೂಂ ಹೊರಗೆ ನಿಂತು ಕಿಟಕಿಯಿಂದ ಲೈವ್ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಗೀತಾ ಆತ್ಮಹತ್ಯೆ ಮಾಡಿಕೊಳ್ಳುವಾಗ ಆಕೆಯ ಗಂಡನ ಮನೆಯವರು ಹೊರಗೆ ನಿಂತು ಕಿರುಚಾಡುತ್ತಿದ್ದರೇ ಹೊರತು ಬಾಗಿಲು ಒಡೆಯಲು ಪ್ರಯತ್ನಿಸಲಿಲ್ಲ ಎಂದು ವರದಿಯಾಗಿದೆ.

    ಗೀತಾ ನೇಣಿಗೆ ಶರಣಾಗಿರುವ ವಿಡಿಯೋ 12 ನಿಮಿಷ 14 ಸೆಕೆಂಡ್‍ಗಳಿದೆ. ಈ ವಿಡಿಯೋದಲ್ಲಿ ಆಕೆಯ ಅತ್ತೆ ಹಾಗೂ ನಾದಿನಿ ಪ್ರಮಾಣ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಲು ಪ್ರಯತ್ನಿಸಿದ್ದರು. ಆದರೆ ಬಾಗಿಲು ಒಡೆದು ಆಕೆಯನ್ನು ರಕ್ಷಿಸಲು ಯಾರೂ ಮುಂದಾಗಲಿಲ್ಲ. ಪತಿ ವಿಡಿಯೋ ಮಾಡುತ್ತಿರುವುದು ಗಮನಿಸಿದ ಗೀತಾಗೆ ಆತ್ಮಹತ್ಯೆ ಮಾಡಿಕೊಳ್ಳುವುದ್ದಕ್ಕೆ ಪ್ರೇರೆಪಿಸುತ್ತಿತ್ತು.

    ಈ ಘಟನೆ ನಡೆದ ಮೇಲೆ ಪೊಲೀಸರು ಹಾಗೂ ಗೀತಾ ಪೋಷಕರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಗೀತಾ ಪೋಷಕರು ಆಕೆಯ ಪತಿ ಹಾಗೂ ಆತನ ಮನೆಯವರ ಮೇಲೆ ವರದಕ್ಷಿಣೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಕೇಸ್ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪತಿ ರಾಜ್‍ಕುಮಾರ್ ಹಾಗೂ ಅತ್ತೆ ವಿಮಲಾರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ವಿಡಿಯೋ ವೈರಲ್ ಆದ ಮೇಲೆ ಪೊಲೀಸರು ಮತ್ತೊಮ್ಮೆ ಈ ಕೇಸ್ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.

  • ಲೈವ್ ರೇಪ್: ವಿಡಿಯೋ ತೋರಿಸಿ ಯುವತಿಗೆ ಲೈಂಗಿಕ ಕಿರುಕುಳ

    ಲೈವ್ ರೇಪ್: ವಿಡಿಯೋ ತೋರಿಸಿ ಯುವತಿಗೆ ಲೈಂಗಿಕ ಕಿರುಕುಳ

    ಕೋಲಾರ: ಯುವತಿಯ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿ ಮೊಬೈಲ್ ನಲ್ಲಿ ಸೆರೆ ಹಿಡಿದು ಬೆದರಿಕೆ ನೀಡುತ್ತಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಶ್ರೀನಿವಾಸಪುರ ಪಟ್ಟಣದ ನಿವಾಸಿಯಾಗಿರೋ ಯುವತಿಯ ಮೇಲೆ ಅತ್ಯಾಚಾರವೆಸಗಿದ ಯುವಕರು ಬಳಿಕ ಕಿರುಕುಳ ನೀಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಯುವತಿಗೆ ಜ್ಯೂಸ್ ನಲ್ಲಿ ಮತ್ತು ಬರುವ ಅಂಶ ಸೇರಿಸಿ ಅತ್ಯಾಚಾರವೆಸಗಿದ್ದರು. ಯುವಕರು ಅತ್ಯಾಚಾರದ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಯುವತಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು.

    ಯುವಕರು ನಾಲ್ಕು ವರ್ಷಗಳ ಹಿಂದೆಯೇ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯತಿ ಮಾಡಿ ಸಮಾಧಾನ ಮಾಡಿದ್ದರು. ನಂತರ ಪೋಷಕರು ತನ್ನ ಮಗಳನ್ನು ಮದುವೆ ಮಾಡಿಸಿ ಹೈದರಾಬಾದ್ ಗೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಕಾಮುಕರು, ಯುವತಿಯ ಮೇಲೆ ಅತ್ಯಾಚಾರವೆಸಗಿದ ವಿಡಿಯೋವನ್ನು ಆಕೆಯ ಗಂಡನಿಗೆ ವಾಟ್ಸಪ್ ನಲ್ಲಿ ಕಳುಹಿಸಿ ಕಿರುಕುಳ ನೀಡುತ್ತಿದ್ದರು. ಈ ವಿಡಿಯೋವನ್ನು ನೋಡಿದ ಯುವತಿ ಗಂಡ ಆಕೆಗೆ ವಿಚ್ಛೇದನ ಕೂಡ ನೀಡಿದ್ದನು.

    ತನ್ನ ಗಂಡ ವಿಚ್ಛೇದನ ನೀಡಿದ್ದರೂ ಯುವಕರು ಬಿಡದೆ ಯುವತಿಗೆ ಹಿಂಸೆ ನೀಡುತ್ತಿದ್ದಾರೆ. ವಿಡಿಯೋ ತೋರಿಸಿ ವಾಟ್ಸಪ್, ಫೇಸ್ ಬುಕ್ ಗಳಲ್ಲಿ ಹರಿ ಬಿಡುವ ಮೂಲಕ ಬೆದರಿಕೆ ಹಾಕುತ್ತಿದ್ದಾರೆ.