Tag: ಲೈವ್ ಮರ್ಡರ್

  • ಕಲಬುರಗಿಯಲ್ಲಿ ಬೆಳ್ಳಂಬೆಳ್ಳಗೆ ಲೈವ್ ಮರ್ಡರ್ ಆರೋಪಿ ಮೇಲೆ ಫೈರಿಂಗ್

    ಕಲಬುರಗಿಯಲ್ಲಿ ಬೆಳ್ಳಂಬೆಳ್ಳಗೆ ಲೈವ್ ಮರ್ಡರ್ ಆರೋಪಿ ಮೇಲೆ ಫೈರಿಂಗ್

    ಕಲಬುರಗಿ: ಬೆಳ್ಳಂಬೆಳ್ಳಗೆ ಲೈವ್ ಮರ್ಡರ್ ಆರೋಪಿ ಮೇಲೆ ಫೈರಿಂಗ್ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಶಹಾಬಾದ್ ಪಟ್ಟಣದ ಹೊರವಲಯದ ವಾಡಿ ರಸ್ತೆಯಲ್ಲಿ ನಡೆದಿದೆ.

    ಲೈವ್ ಮರ್ಡರ್ ಆರೋಪಿ ಸಂತೋಷ್ ಸ್ವಾಮಿ ಮೇಲೆ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿ ಬಂದಿಸಿದ್ದಾರೆ. ಈ ಘಟನೆಯಲ್ಲಿ ಹಾಜಿ ಮಲಂಗ ಮತ್ತು ಪ್ರಮೋದ್ ಎಂಬ ಪೇದೆಗಳಿಗೆ ಗಾಯವಾಗಿದೆ. ಗಾಯಾಳು ಪೊಲೀಸರನ್ನು ಖಾಸಗಿ ಆಸ್ಪತ್ರೆಗೆ ಹಾಗೂ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಏನಿದು ಪ್ರಕರಣ?
    ಜನವರಿ 10ರಂದು ಸಂತೋಷ್ ಲಾಡ್ಜ್ ಮ್ಯಾನೇಜರ್ ಮಲ್ಲಿಕಾರ್ಜುನ ಅವರನ್ನು ಹಾಡಹಗಲೇ ಬಸ್ ಸ್ಟ್ಯಾಂಡ್ ಬಳಿ ಹತ್ಯೆ ಮಾಡಿದ್ದ. ಲಾಡ್ಜ್ ಮ್ಯಾನೇಜರ್ ಹುದ್ದೆಗಾಗಿ ಈ ಕೊಲೆ ನಡೆದಿದ್ದು, ಆರೋಪಿ ಸಂತೋಷ್ ಸಹ ಈ ಹಿಂದೆ ಕಾವೇರಿ ಲಾಡ್ಜ್ ಮ್ಯಾನೇಜರ್ ಆಗಿದ್ದ. ಅವನ ಸ್ಥಳಕ್ಕೆ ಮಲ್ಲಿಕಾರ್ಜುನ ಬಂದ ಹಿನ್ನೆಲೆಯಲ್ಲಿ ಆತನನ್ನು ಹಾಡಹಾಗಲೇ ಕೊಲೆ ಮಾಡಿದ್ದನು.

    ಮ್ಯಾನೇಜರ್ ಹತ್ಯೆ ಮಾಡಿ ಪರಾರಿಯಾಗಿದ್ದ ಸಂತೋಷ್‍ನನ್ನು ಪೊಲೀಸರು ಬಂಧಿಸಲು ತೆರಳಿದ್ದಾಗ ಮಾರಕಾಸ್ತ್ರಗಳಿಂದ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಆರ್‍ಜೆ ನಗರ ಠಾಣೆ ಪಿಎಸ್‍ಐ ಮಹಾಂತೇಶ್ ಆರೋಪಿ ಸಂತೋಷ್ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಲಿಕಾನ್ ಸಿಟಿಯಲ್ಲಿ ನೋಡನೋಡುತ್ತಿದ್ದಂತೆ ಬ್ಯಾಟ್, ಚಾಕುವಿನಿಂದ ಕೊಂದೇಬಿಟ್ರು!

    ಸಿಲಿಕಾನ್ ಸಿಟಿಯಲ್ಲಿ ನೋಡನೋಡುತ್ತಿದ್ದಂತೆ ಬ್ಯಾಟ್, ಚಾಕುವಿನಿಂದ ಕೊಂದೇಬಿಟ್ರು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದು, ಹವಾ ಮೆಂಟೇನ್ ಮಾಡಲು ಬ್ಯಾಟ್ ಹಾಗೂ ಚಾಕು ಹಿಡಿದು ಓರ್ವನನ್ನು ಕೊಲೆ, ಮತ್ತೊಬ್ಬನ ಮೇಲೆ ಮಾರಣಾಂತಿವಾಗಿ ಹಲ್ಲೆ ಮಾಡಿದ ಘಟನೆ ವಿಜಯನರದಲ್ಲಿ ನಡೆದಿದೆ.

    ಮಹದೇವಯ್ಯ ಮೃತ ದುರ್ದೈವಿ. ರಾಜ್‍ದೀಪ್ ಗಂಭೀರವಾಗಿ ಗಾಯಗೊಂಡಿದ್ದಾನೆ. ವಿನಯ್ ಕುಮಾರ್ ಮತ್ತು ಆತನ ಇಬ್ಬರು ಸಹಚರರು ಕೊಲೆಗೈದ ಆರೋಪಿಗಳು.

    ಈ ಘಟನೆಯು ಅಕ್ಟೋಬರ್ 4ರಂದು ನಡೆದಿದ್ದು, ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳೀಯರು ಆರೋಪಿ ವಿನಯ್ ಕುಮಾರ್ ನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು. ಲೈವ್ ಮರ್ಡರ್ ದೃಶ್ಯದ ಆಧಾರದ ಮೇಲೆ ಉಳಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?:
    ಕ್ರಿಕೆಟ್ ಆಡುತ್ತಿದ್ದ ಮಹದೇವಯ್ಯ ಸಿಗರೇಟ್ ತರುವಂತೆ ವಿನಯ್‍ಗೆ ಹೇಳಿದ್ದ. ಆದರೆ ಇದಕ್ಕೆ ವಿನಯ್ ಕುಮಾರ್ ನಿರಾಕರಿಸಿದ್ದ ಕೋಪಗೊಂಡ ಮಹದೇವಯ್ಯ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನು ನೋಡಿದ ವಿನಯ್ ಕುಮಾರ್ ಇಬ್ಬರು ಸ್ನೇಹಿತ ಮಹಾದೇವಯ್ಯ ಹಾಗೂ ಅವನ ಗೆಳೆಯ ರಾಜ್‍ದೀಪ್ ಮೇಲೆ ಬ್ಯಾಟ್‍ನಿಂದ ಹಲ್ಲೆ ಮಾಡಿದ್ದಾರೆ.

    ಘಟನಾ ಸ್ಥಳದಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಯುವಕರ ಹೊಡೆದಾಟ ನೋಡಿ ಅಲ್ಲಿಂದ ಅನೇಕರು ಕಾಲ್ಕಿತ್ತಿದ್ದರು. ಕೋಪಗೊಂಡಿದ್ದ ವಿನಯ್ ಕುಮಾರ್ ಮಹದೇವಯ್ಯನಿಗೆ ಚಾಕುನಿಂದ ಇರಿದಿದ್ದಾನೆ. ಇದೇ ವೇಳೆ ಮೂವರು ಆರೋಪಿಗಳು ಸೇರಿ, ಮಹದೇವಯ್ಯ ಹಾಗೂ ರಾಜ್‍ದೀಪ್ ತಲೆಗೆ, ಕಾಲುಗಳಿಗೆ ಬ್ಯಾಟ್‍ನಿಂದ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ಮಹದೇವಯ್ಯ ಅಸ್ವಸ್ಥಗೊಂಡು ಸ್ಥಳದಲ್ಲಿಯೇ ಬಿದ್ದಿದ್ದ.

    ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ರಾಜ್‍ದೀಪ್‍ಗೆ ಮೂವರು ಸೇರಿ ಥಳಿಸಿದ್ದಾರೆ. ಬೆನ್ನು, ಕಾಲಿಗೆ ಬಲವಾಗಿ ಹೊಡೆದಿದ್ದಾರೆ. ನೋವಿನಲ್ಲಿಯೇ ಅವರೊಂದಿಗೆ ಹೋರಾಡಿದ ರಾಜ್‍ದೀಪ್ ಅಲ್ಲಿಂದ ಪರಾರಿಯಾಗಿ ಜೀವ ಉಳಿಸಿಕೊಂಡಿದ್ದಾನೆ.

    ಕೆಲ ಸ್ಥಳೀಯರು ಆರೋಪಿ ವಿನಯ್ ಕುಮಾರ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇತ್ತ ಚಾಕು ಇರಿತ ಹಾಗೂ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಮಹಾದೇವಯ್ಯನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹದೇವಯ್ಯ ಮೃತಪಟ್ಟಿದ್ದಾನೆ. ತನಿಖೆ ಚುರುಕುಗೊಳಿಸಿದ್ದ ಪೊಲೀಸರಿಗೆ ವಿಡಿಯೋ ಸಿಗುತ್ತಿದ್ದಂತೆ ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews