Tag: ಲೈವ್

  • ಸೆ.27 ರಿಂದ ಸುಪ್ರೀಂ ಸಾಂವಿಧಾನಿಕ ಪೀಠದ ಕಲಾಪಗಳನ್ನು ಲೈವ್‌ ನೋಡಿ

    ಸೆ.27 ರಿಂದ ಸುಪ್ರೀಂ ಸಾಂವಿಧಾನಿಕ ಪೀಠದ ಕಲಾಪಗಳನ್ನು ಲೈವ್‌ ನೋಡಿ

    ನವದೆಹಲಿ: ಮುಂದಿನ ವಾರದಿಂದ ಸುಪ್ರೀಂ ಕೋರ್ಟ್‌(Supreme Court) ಸಾಂವಿಧಾನಿಕ ಪೀಠದಲ್ಲಿ(Constitution Bench) ನಡೆಯುವ ವಿಚಾರಣೆಯನ್ನು ಲೈವ್‌ ಆಗಿ ನೋಡಬಹುದು.

    ಸೆ.27ರಿಂದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠದ ಕಲಾಪಗಳು ಲೈವ್‌ ಸ್ಟ್ರೀಮ್‌(Live Stream) ಆಗಲಿದೆ. ಆರಂಭದಲ್ಲಿ ಯೂಟ್ಯೂಬ್‌ನಲ್ಲಿ ಪ್ರಸಾರವಾದರೆ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲೇ ಲೈವ್‌ ಸ್ಟ್ರೀಮ್‌ ಪ್ರಸಾರವಾಗುವ ಸಾಧ್ಯತೆಯಿದೆ.

    ಮಂಗಳವಾರ ಮುಖ್ಯ ನ್ಯಾಯಮೂರ್ತಿ ಉದಯ್‌ ಲಲಿತ್‌ (CJI Uday Lalit) ಅವರು ಜಡ್ಜ್‌ಗಳ ಜೊತೆ ಸಭೆ ನಡೆಸಿದ್ದರು. ಈ ವೇಳೆ ಎಲ್ಲ ಜಡ್ಜ್‌ಗಳು ಲೈವ್‌ ಪ್ರಸಾರ ಅಗತ್ಯ ಎಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಭೆಯ ಬಳಿಕ ಲೈವ್‌ ಸ್ಟ್ರೀಮ್‌ ನಿರ್ಧಾರ ಪ್ರಕಟವಾಗಿದೆ.

    ಈ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ ಕಲಾಪ ಲೈವ್‌ ಆಗಿತ್ತು. ಸಿಜೆಐ ಆಗಿದ್ದ ಎನ್‌ವಿ ರಮಣ ಅವರ ನಿವೃತ್ತಿ ದಿನದ ಕಲಾಪವನ್ನು ಲೈವ್‌ ಮಾಡಲಾಗಿತ್ತು.

    ಸೆಪ್ಟೆಂಬರ್ 2018 ರಲ್ಲಿ ಸ್ವಪ್ನಿಲ್ ತ್ರಿಪಾಠಿ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ನ್ಯಾಯವನ್ನು ಪಡೆಯುವ ಹಕ್ಕಿನ ಭಾಗವಾಗಿ ನ್ಯಾಯಾಲಯದ ಪ್ರಕ್ರಿಯೆಗಳ ನೇರ ಪ್ರಸಾರಕ್ಕೆ ಅನುಮತಿ ನೀಡಿತ್ತು. ಬಳಿಕ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಇ-ಸಮಿತಿ, ನ್ಯಾಯಾಲಯದ ಪ್ರಕ್ರಿಯೆಗಳ ನೇರ ಪ್ರಸಾರವನ್ನು ನಿಯಂತ್ರಿಸಲು ಮಾದರಿ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಇದನ್ನೂ ಓದಿ: ಸ್ನಾನದ ವೀಡಿಯೋ ಲೀಕ್‌ ಕೇಸ್‌ ಬೆನ್ನಲ್ಲೇ ಪಂಜಾಬ್‌ನ ಮತ್ತೊಂದು ವಿವಿ ವಿವಾದ – ವಿದ್ಯಾರ್ಥಿ ಆತ್ಮಹತ್ಯೆ, ಭಾರಿ ಪ್ರತಿಭಟನೆ

    ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಕಳೆದ ವಾರ ಸಿಜೆಐ ಮತ್ತು ಇತರ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಸಾರ್ವಜನಿಕ ಮತ್ತು ಸಾಂವಿಧಾನಿಕ ಪ್ರಾಮುಖ್ಯತೆಯ ವಿಷಯಗಳ ವಿಚಾರಣೆಯನ್ನು ಲೈವ್ ಸ್ಟ್ರೀಮಿಂಗ್ ಮಾಡುವಂತೆ ಮನವಿ ಮಾಡಿದ್ದರು.

    court order law

    ಗುಜರಾತ್, ಒಡಿಶಾ, ಕರ್ನಾಟಕ, ಜಾರ್ಖಂಡ್, ಪಾಟ್ನಾ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳು ತಮ್ಮ ಯೂಟ್ಯೂಬ್ ಚಾನೆಲ್‌ಗಳ ಮೂಲಕ ತಮ್ಮ ವಿಚಾರಣೆಗಳನ್ನು ಈಗಾಗಲೇ ಲೈವ್-ಸ್ಟ್ರೀಮ್ ಮಾಡಿ ವಿಚಾರಣೆ ನಡೆಸಿವೆ.

    ಲೈವ್‌ಸ್ಟ್ರೀಮ್‌ ಮಾಡುವುದರಿಂದ ವಕೀಲರಿಗೆ, ಪತ್ರಕರ್ತರಿಗೆ ಮತ್ತು ಆ ವಿಷಯದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವ ಮಂದಿಗೆ ತುಂಬಾ ಸಹಾಯವಾಗಲಿದೆ.

    ಸಾಂವಿಧಾನಿಕ ಪೀಠ
    ಐದು ಅಥವಾ ಅದಕ್ಕಿಂತ ಹೆಚ್ಚು ನ್ಯಾಯಾಧೀಶರು ಇರುವ ಪೀಠವನ್ನು ಸಾಂವಿಧಾನಿಕ ಪೀಠ ಎಂದು ಕರೆಯಲಾಗುತ್ತದೆ. ಸುಪ್ರೀಂ ಕೋರ್ಟ್‌ನ ಬಹುತೇಕ ಪ್ರಕರಣಗಳು ಇಬ್ಬರು ನ್ಯಾಯಾಧೀಶರು ಇರುವ ಪೀಠದಲ್ಲಿ ನಡೆಯುತ್ತದೆ. ಸಾಂವಿಧಾನಿಕ ಸಿಂಧುತ್ವ ಅಥವಾ ಯಾವುದಾದರು ಗಂಭೀರ ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ಸಾಂವಿಧಾನಿಕ ಪೀಠ ರಚನೆಯಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಲೈವ್‌ನಲ್ಲಿ ಬಾಲಕನಿಗೆ ಕಪಾಳ ಮೋಕ್ಷ ಮಾಡಿದ ಪಾಕ್ ಪತ್ರಕರ್ತೆ

    ಲೈವ್‌ನಲ್ಲಿ ಬಾಲಕನಿಗೆ ಕಪಾಳ ಮೋಕ್ಷ ಮಾಡಿದ ಪಾಕ್ ಪತ್ರಕರ್ತೆ

    ಇಸ್ಲಾಮಾಬಾದ್: ಲೈವ್‍ನಲ್ಲಿ ಮಾತನಾಡುತ್ತಿದ್ದ ವೇಳೆ ಅನುಚಿತವಾಗಿ ವರ್ತಿಸಿದ ಬಾಲಕನಿಗೆ ಮಹಿಳಾ ಪತ್ರಕರ್ತೆಯೊಬ್ಬರು ಕಪಾಳಮೋಕ್ಷ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ಭಾನುವಾರ (ಜುಲೈ 9)ರಂದು ರಂಜಾನ್ ಹಬ್ಬ ಆಚರಣೆಯ ಬಗ್ಗೆ ಪತ್ರಕರ್ತೆ ವರದಿ ಮಾಡುತ್ತಿದ್ದರು. ಈ ವೇಳೆ ಚೇಷ್ಟೆ ಮಾಡಿದ ಬಾಲಕನಿಗೆ ಪ್ರತಕರ್ತೆ ಕೆನ್ನೆಗೆ ಬಾರಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್- ಯುವಕನ ಹತ್ಯೆ

    ವೀಡಿಯೋದಲ್ಲಿ ಪತ್ರಕರ್ತೆಯ ಸುತ್ತಾಮುತ್ತಾ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕೆಲವು ಮಂದಿ ನಿಂತಿದ್ದರು. ಈ ವೇಳೆ ಬಿಳಿ ಶರ್ಟ್ ಧರಿಸಿದ್ದ ಬಾಲಕ ಪತ್ರಕರ್ತೆಯ ಸಮೀಪವೇ ನಿಂತಿರುತ್ತಾನೆ. ಕ್ಯಾಮೆರಾ ಮುಂದೆ ನಿಂತು ಪತ್ರಕರ್ತೆ ವರದಿ ಮಾಡುತ್ತಿದ್ದಾಗ ಬಾಲಕ ತನ್ನ ಕೈಯನ್ನು ಎತ್ತಿ ಇನ್ನೊಬ್ಬ ಹುಡುಗನನ್ನು ಕರೆಯುತ್ತಾನೆ. ಲೈವ್ ವೇಳೆ ಕ್ಯಾಮೆರಾ ಮುಂದೆ ಸನ್ನೆ ಮಾಡಿದ್ದರಿಂದ ಕೋಪಗೊಂಡ ಪತ್ರಕರ್ತೆ ಬಾಲಕನ ಕಪಾಳಕ್ಕೆ ಹೊಡೆದಿದ್ದಾರೆ.

    ಟ್ವಿಟ್ಟರ್ ಬಳಕೆದಾರರೊಬ್ಬರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಲ್ಲಿಯವರೆಗೂ ಈ ವೀಡಿಯೋವನ್ನು ಸುಮಾರು 4,00,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೊಸ ಲಾಂಛನಕ್ಕೆ ವಿಪಕ್ಷಗಳ ಆಕ್ರೋಶ – ಆಕ್ರಮಣಕಾರಿ ಲಾಂಛನ ಅಂತ ಕಟು ಟೀಕೆ

    Live Tv
    [brid partner=56869869 player=32851 video=960834 autoplay=true]

  • ನಿಮ್ಮ ಪ್ರತಿ ಮಾತು ನನ್ನನ್ನು ಪ್ರತಿನಿಧಿಸುತ್ತದೆ – ಅಭಿಮಾನಿಗಳಲ್ಲಿ ಅರವಿಂದ್ ಮನವಿ

    ನಿಮ್ಮ ಪ್ರತಿ ಮಾತು ನನ್ನನ್ನು ಪ್ರತಿನಿಧಿಸುತ್ತದೆ – ಅಭಿಮಾನಿಗಳಲ್ಲಿ ಅರವಿಂದ್ ಮನವಿ

    ಬಿಗ್‍ಬಾಸ್ ಸೀಸನ್-8 ಕಾರ್ಯಕ್ರಮ ಮುಗಿದ ನಂತರ ಮೊದಲ ಬಾರಿಗೆ ಕೆ.ಪಿ ಅರವಿಂದ್ ಲೈವ್ ಬಂದಿದ್ದು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ನೆಗೆಟಿವಿಟಿಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪ್ರತಿ ಮಾತು ನನ್ನನ್ನು ಪ್ರತಿನಿಧಿಸುತ್ತದೆ. ಪಾಸಿಟಿವ್ ಆಗಿ ಯೋಚನೆ ಮಾಡೋಣ ಎಂದು ಹೇಳಿದ್ದಾರೆ.

    ಮೊದಲನೇಯದಾಗಿ 75ನೇ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಎಲ್ಲರಿಗೂ ತಿಳಿಸಿದ ಅವರು, ನಂತರ ಪ್ರತಿದಿನ ನನಗಾಗಿ ಟೈಮ್ ಕೊಟ್ಟು, ಹಗಲು ರಾತ್ರಿ ವೋಟ್ ಮಾಡಿ ಫಿನಾಲೆ ತನಕ ಬರಲು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾನು ಬಿಗ್‍ಬಾಸ್ ಮನೆಯಲ್ಲಿ ಕೇವಲ 2 ವಾರ ಇರುತ್ತೇನೆ ಎಂದು ಕೊಂಡಿದ್ದೆ. ಆದರೆ ನನ್ನ ನಿರೀಕ್ಷೆಗೂ ಮೀರಿ ನನ್ನನ್ನು ಫಿನಾಲೆ ತನಕ ಕರೆದುಕೊಂಡು ಹೋಗಿದ ನಿಮ್ಮೆಲ್ಲರಿಗೂ ನಾನು ಸದಾ ಚಿರಋಣಿ ಎಂದಿದ್ದಾರೆ.

    ಇಷ್ಟು ದಿನ ನನ್ನ ರೇಸ್‍ಗೆ ಸಂಬಂಧಿಸಿದಂತೆ ಕೆಲವು ಕೆಲಸ ಇತ್ತು, ನನಗಾಗಿ ನನಗೆ ಕೊಂಚ ಸಮಯ ಬೇಕಾಗಿತ್ತು. ಹಾಗಾಗಿ ಲೈವ್ ಬರಲು ಸಾಧ್ಯವಾಗಲಿಲ್ಲ. ಯಾರು ಸಹ ಬೇಸರಗೊಳ್ಳಬೇಡಿ. ಆದರೆ ದಾಖಲೆಯಷ್ಟು ಬಂದಂತಹ ವೋಟ್ ನೋಡಿ ನನಗೆ ಬಹಳ ಸಂತಸವಾಗಿದೆ, ನೀವು ನೀಡಿದ ಸಪೋರ್ಟ್‍ನನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ಪ್ರೀತಿ ಸದಾ ಇರಲಿ. ಬಿಗ್‍ಬಾಸ್ ನನ್ನ ಜೀವನದಲ್ಲಿ ಬೆಸ್ಟ್ ಚಾಪ್ಟರ್ ಎಂದು ಹೇಳಿದ್ದಾರೆ.

    ಇದೇ ವೇಳೆ ನಾನು ಇನ್ನೊಂದು ವಿಚಾರ ಹೇಳಲು ಬಯಸುತ್ತೇನೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ನೆಗೆಟಿವಿಟಿ ಸುದ್ದಿಗಳು ಹರಿದಾಡುತ್ತಿದೆ. ಅದಕ್ಕೆ ಯಾರು ಕೂಡ ತಲೆ ಕೆಡಿಸಿಕೊಳ್ಳಬೇಡಿ. ನನಗೆ ನಿಮ್ಮೆಲ್ಲರ ಸಪೋರ್ಟ್ ಅಪಾರವಾದದ್ದು ಹಾಗೂ ನಿಮ್ಮೆಲ್ಲರ ಮೇಲೆ ನನಗೆ ನಂಬಿಕೆ ಇದೆ. ನೆಗೆಟಿವಿಟಿಗೆ ಒಳಗಾಗಬೇಡಿ, ಆದಷ್ಟು ಪಾಸಿಟಿವ್ ವಿಚಾರಗಳನ್ನು ಹರಡಿ. ಪಾಸಿಟಿವಿಯಲ್ಲಿ ಶಕ್ತಿ ಇದೆ ಹಾಗೂ ಖುಷಿ ಇದೆ. ನಾನು ಒಬ್ಬ ಪಾಸಿಟಿವ್ ಮನುಷ್ಯ. ಪಾಸಿಟಿವಿಟಿಯನ್ನು ಪಾಲಿಸುತ್ತೇನೆ. ಅದೇ ರೀತಿ ನಿಮ್ಮ ಲೈಫ್‍ನಲ್ಲಿ ಕೂಡ ಪಾಸಿಟಿವಿಯನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ.

    ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದರೆ ಖಂಡಿತ ಮಾಡುತ್ತೇನೆ. ಬಿಗ್‍ಬಾಸ್ ಮುಗಿದು ಒಂದು ವಾರ ಆದರೂ ಎಲ್ಲೆಡೆ ನನ್ನ ಫೋಟೋ, ವೀಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದೀರಿ. ಇದನ್ನು ನಾನು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ಬಹಳ ಖುಷಿಯಾಗುತ್ತಿದೆ. ನಿಮ್ಮ ಸಪೋರ್ಟ್ ಮುಂದೆ ಕೂಡ ಹೀಗೆ ಇರಲಿ. ನಿಮ್ಮ ಪ್ರತಿ ಮಾತು ನನ್ನನ್ನು ಪ್ರತಿನಿಧಿಸುತ್ತದೆ. ಇದು ಸದಾ ನೆನಪಿರಲಿ. ಎಲ್ಲರಿಗೂ ಶುಭವಾಗಲಿ ಎನ್ನುತ್ತಾ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ವೈಷ್ಣವಿಗೆ ದೆವ್ವದ ಕಥೆ ಹೇಳಿದ ಅಕುಲ್ ಬಾಲಾಜಿ

  • ಇಬ್ಬರೂ ಪತ್ನಿಯರೊಂದಿಗಿನ ಕಾಮದಾಟ ಲೈವ್ ಮಾಡುತ್ತಿದ್ದವನ ಬಂಧನ

    ಇಬ್ಬರೂ ಪತ್ನಿಯರೊಂದಿಗಿನ ಕಾಮದಾಟ ಲೈವ್ ಮಾಡುತ್ತಿದ್ದವನ ಬಂಧನ

    – ಲೈವ್ ಮಾಡಿ ಹಣಗಳಿಸುತ್ತಿದ್ದ ಆರೋಪಿ
    – 2ನೇ ಪತ್ನಿಯಿಂದ ಪೊಲೀಸರಿಗೆ ದೂರು

    ಭೋಪಾಲ್: ಹಣದ ಆಸೆಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಪತ್ನಿಯರೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ಲೈವ್ ಮಾಡಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಪಟ್ಟಣದಲ್ಲಿ ನಡೆದಿದೆ.

    24 ವರ್ಷದ ಚರಣ್‍ಜೀತ್ ಬಂಧಿತ ಆರೋಪಿ. ವಿವಿಧ ಆ್ಯಪ್‍ಗಳ ಮೂಲಕ ಲೈವ್ ಶೋ ನಡೆಸುತ್ತಿದ್ದ. ಅಲ್ಲದೇ ಜನರಿಂದ ಲೈವ್ ವೀಕ್ಷಣೆ ಮಾಡಲು 100 ರೂ. ನಿಂದ 1 ಸಾವಿರದ ವರೆಗೂ ದರ ನಿಗದಿ ಮಾಡಿದ್ದ. ಆ ಮೂಲಕ ಲಕ್ಷ ಲಕ್ಷ ರೂ. ಹಣ ಗಳಿಸುವ ಉದ್ದೇಶವನ್ನು ಆರೋಪಿ ಹೊಂದಿದ್ದ ಎಂಬ ಮಾಹಿತಿ ಲಭಿಸಿದೆ.

    ಆರೋಪಿಯ 2ನೇ ಪತ್ನಿ ಅಕ್ಟೋಬರ್ 21ರಂದು ನೀಡಿದ ದೂರಿನ ಮೇರೆಗೆ ಶನಿವಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವೀಕ್ಷಕರಿಗೆ ಖಾಸಗಿ ಕ್ಷಣಗಳನ್ನು ಡಿಜಿಟಲ್ ರೂಪದಲ್ಲಿ ತೋರಿಸುವ ಮೂಲಕ ಲೈಂಗಿಕ ಹಿಂಸೆ ಹಾಗೂ ಬೆದರಿಕೆ, ಅತ್ಯಾಚಾರ ಮತ್ತು ಗೌಪ್ಯತೆಯ ಉಲ್ಲಂಘನೆ ಆರೋಪಗಳನ್ನು ಬಂಧಿತ ಎದುರಿಸುತ್ತಿದ್ದಾನೆ.

    10ನೇ ತರಗತಿ ವರೆಗೂ ಶಿಕ್ಷಣ ಪಡೆದಿರುವ ಆರೋಪಿ ಸೈಬರ್ ವರ್ಲ್ಡ್ ಮತ್ತು ಟೆಕ್ ಮಾಹಿತಿಯನ್ನು ಹೊಂದಿದ್ದು, ಕೆಲ ಡೇಟಿಂಗ್ ಆ್ಯಪ್‍ಗಳಲ್ಲಿಯೂ ಈತ ಸಕ್ರಿಯನಾಗಿದ್ದ. ಅಲ್ಲದೇ ಅಂತಹ ಆ್ಯಪ್‍ಗಳಿಂದ ಗಿಫ್ಟ್ ಪಡೆಯವುದು ಹೇಗೆ ಎಂಬ ಬಗ್ಗೆಯೂ ಮಾಹಿತಿ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಆ್ಯಪ್‍ಗಳಲ್ಲಿ ಡಿಪಿ ಸೆಟ್ ಮಾಡುತ್ತಿದ್ದ. ಅದನ್ನು ಕ್ಲಿಕ್ ಮಾಡಿದ ತಕ್ಷಣ ವೀಕ್ಷಕರ ಮೊಬೈಲ್‍ಗೆ ಪ್ರತ್ಯೇಕ ಸಂದೇಶ ರವಾನೆಯಾಗುತ್ತಿತ್ತು. ಅಲ್ಲಿ 100 ರೂ. ಗಳಿಗೆ ಡೆಮೋ ನೋಡಬಹುದಿತ್ತು. ಬಳಿಕ ಲೈವ್ ನೋಡಲು 500 ರಿಂದ ಒಂದು ಸಾವಿರ ರೂ.ಗಳ ವರೆಗೂ ಪಾವತಿ ಮಾಡಬೇಕಿತ್ತು. ಮುಖ ಕಾಣಿಸದೆ ಹಾಗೂ ಕಾಣಿಸುವಂತೆ ವೀಡಿಯೋ ನೋಡಲು ಅವಕಾಶವಿತ್ತು. ಇದಕ್ಕೆ ಪ್ರತ್ಯೇಕ ಹಣ ಗಳಿಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

    ಇದುವರೆಗೂ ಆರೋಪಿ 6 ಲಕ್ಷ ರೂ. ವರೆಗೂ ಹಣ ವರ್ಗಾವಣೆ ಪಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಆರೋಪಿ ಪ್ರತಿ ದಿನ 3 ರಿಂದ 4 ಸಾವಿರ ರೂ. ಗಳಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಆ್ಯಪ್‍ನಲ್ಲಿ ಆತನಿಗೆ ಹಣ ಪಾವತಿ ಮಾಡಿರುವವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

    ವಿದಿಶಾ ಜಿಲ್ಲೆಯೂ ಭೋಪಾಲ್‍ನಿಂದ ಸುಮಾರು 50 ಕಿಮೀ ದೂರದಲ್ಲಿದ್ದು, ಮೂಲತಃ ಕೃಷಿ ಮಾಡುವ ಜನರೇ ಹೆಚ್ಚಾಗಿದ್ದಾರೆ. ಆರೋಪಿಯ ಮೊದಲ ಪತ್ನಿ ಬೆಂಗಳೂರು ಮೂಲದವರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. 2ನೇ ಪತ್ನಿ ಉತ್ತರ ಪ್ರದೇಶದ ನಿವಾಸಿದ್ದು, ಆಕೆಗೆ ತಾನು ಅಪಾರ ದೈವ ಭಕ್ತ ಎಂದು ಹೇಳಿ ಮೋಸ ಮಾಡಿ ಮದುವೆಯಾಗಿದ್ದ. ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಮದುವೆಯಾಗಿದ್ರು. ಆಕೆ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಪತಿಯ ಕೃತ್ಯದಿಂದ ಬೇಸತ್ತ ಮಹಿಳೆ ಅಕ್ಟೋಬರ್ 21ರಂದು ವಿಧಿಶಾ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಳು. ಆದ್ರೆ ಈ ಮೊದಲೇ ಆಗಿರುವ ಮದುವೆ ವಿಷಯ ಹೇಳಿರಲಿಲ್ಲ. ಮದುವೆ ಬಳಿಕ ತನ್ನ ಕೆಲ ಖಾಸಗಿ ವೀಡಿಯೋ ಸೆರೆ ಹಿಡಿದ ಚರಣ್ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದ. ಫೋಟೋ ಮತ್ತು ವೀಡಿಯೋಗಳನ್ನ ತೋರಿಸಿ ಆ್ಯಪ್ ನಲ್ಲಿ ಲೈಂಗಿಕ ಕ್ರಿಯೆ ನೀಡುವಂತೆ ತನಗೆ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಆರೋಪಿಯ ಕೃತ್ಯದ ಬಗ್ಗೆ ಮೊದಲ ಪತ್ನಿ ಇದುವರೆಗೂ ಪೊಲೀಸರಿಗೆ ಯಾವುದೇ ದೂರು ನೀಡಲ್ಲ. ಆಕೆಯನ್ನು ಆರೋಪಿ ಮನವೊಲಿಸಿ ಮುಂದಿನ ಭವಿಷ್ಯದಲ್ಲಿ ಐಶಾರಾಮಿ ಜೀವನದ ಆಸೆ ತೋರಿಸಿದ್ದ ಎಂದು ವಿಎಸ್‍ಪಿ ವಿಕಾಸ್ ಪಾಂಡೆ ತಿಳಿಸಿದ್ದಾರೆ. ಸದ್ಯ ಬಂಧಿತ ಆರೋಪಿ ತನ್ನ ಕೃತ್ಯದ ಬಗ್ಗೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದು, ಆತನ ಮೊಬೈಲ್, ಬ್ಯಾಕ್ ವಿವರ ಸೇರಿದಂತೆ 12 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಇಂದು ಸಂಜೆ ಸಿಎಂ ಯಡಿಯೂರಪ್ಪ ಭಾಷಣ

    ಇಂದು ಸಂಜೆ ಸಿಎಂ ಯಡಿಯೂರಪ್ಪ ಭಾಷಣ

    ಬೆಂಗಳೂರು: ಒಂದು ವಾರದ ಲಾಕ್‍ಡೌನ್ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

    ಸಿಎಂ ಯಡಿಯೂರಪ್ಪ ಅವರು ಇಂದು ಸಂಜೆ 4 ಗಂಟೆಗೆ ಫೇಸ್‍ಬುಕ್ ಮತ್ತು ಯುಟ್ಯೂಬ್ ಮೂಲಕ ಲೈವ್ ಬರಲಿದ್ದಾರೆ. ಸಿಎಂ ಸುಮಾರು 15 ನಿಮಿಷ ಕಾಲ ಲೈವ್‍ನಲ್ಲಿ ಭಾಷಣ ಮಾಡಲಿದ್ದಾರೆ. ಲೈವ್ ಬರುವ ಮೂಲಕ ರಾಜ್ಯದ ಜನತೆಗೆ ಕೊರೊನಾ ಕುರಿತು ಮಹತ್ತರ ಸಂದೇಶ ನೀಡಲಿದ್ದಾರೆ.

    ಲಾಕ್‍ಡೌನ್ ಮುಗಿಯುತ್ತಿದ್ದಂತೆ ಲೈವ್ ಮೂಲಕ ಜನರಿಗೆ ಏನು ಸಂದೇಶ ಕೊಡಬಹುದು ಎಂಬ ಭಾರೀ ಕುತೂಹಲವನ್ನು ಸಿಎಂ ಯಡಿಯೂರಪ್ಪ ಹುಟ್ಟಿಸಿದ್ದಾರೆ. ಬೆಂಗಳೂರು ಅನ್‍ಲಾಕ್ ಬಗ್ಗೆಯೂ ಲೈವ್‍ನಲ್ಲಿ ಮಾತನಾಡುವ ಸಾಧ್ಯತೆ ಇದೆ.

  • ಲಾಕ್‍ಡೌನ್ ಎಫೆಕ್ಟ್ – ಮೇಷ್ಟ್ರಾದ ಮಾಜಿ ಶಾಸಕ ವೈ.ಎಸ್.ವಿ. ದತ್ತ

    ಲಾಕ್‍ಡೌನ್ ಎಫೆಕ್ಟ್ – ಮೇಷ್ಟ್ರಾದ ಮಾಜಿ ಶಾಸಕ ವೈ.ಎಸ್.ವಿ. ದತ್ತ

    – ನನಗೆ ಶಿಕ್ಷಕ ಎಂದು ಹೇಳಿಕೊಳ್ಳಲು ಹೆಮ್ಮೆ

    ಚಿಕ್ಕಮಗಳೂರು: ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ. ದತ್ತ ಲಾಕ್‍ಡೌನ್ ಹಿನ್ನೆಲೆ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಫೇಸ್ ಬುಕ್ ಲೈವ್‍ನಲ್ಲಿ ಪ್ರತಿ ದಿನ ಸಂಜೆ 7.30 ರಿಂದ 8.30ರವೆಗೆ ಪಾಠ ಮಾಡುತ್ತಿದ್ದಾರೆ.

    ಒಂದು ವಾರ ಗಣಿತ, ಮತ್ತೊಂದು ವಾರ ಭೌತಶಾಸ್ತ್ರ ಪಾಠ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಪರೀಕ್ಷೆ ನಡೆಸಲು ಸರ್ಕಾರ ಕೂಡ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾಗಾಗಿ ಶೀಘ್ರದಲ್ಲೇ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆ ನಡೆಯುವ ಹಿನ್ನೆಲೆ, ದತ್ತ ಮೇಷ್ಟ್ರು ಫೇಸ್‍ಬುಕ್ ನಲ್ಲಿ ಈಗಾಗ್ಲೇ ಮಕ್ಕಳಿಗೆ ಗಣಿತ ಪಾಠವನ್ನು ಆರಂಭಿಸಿದ್ದಾರೆ.

    https://www.facebook.com/ysvDattaofficial/videos/1161467544194546/

    ಎರಡು ವಾರಗಳ ಕಾಲ ಮಕ್ಕಳಿಗೆ ಫೇಸ್‍ಬುಕ್ ಲೈವ್‍ನಲ್ಲಿ ಪಾಠ ಮಾಡಲಿದ್ದಾರೆ. ವೈ.ಎಸ್.ವಿ ದತ್ತ ಫೇಸ್‍ಬುಕ್ ಖಾತೆಯಿಂದ ದಿನ ಸಂಜೆ 7.30 ರಿಂದ 8.30ರವರಗೆ ಒಂದು ಗಂಟೆ ಮಕ್ಕಳಿಗೆ ಪಾಠ ಮಾಡಲಿದ್ದಾರೆ. ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ವೈ.ಎಸ್.ವಿ. ದತ್ತ ಮೂಲತಃ ಶಿಕ್ಷಕರು. ನಂತರ ಶಿಕ್ಷಕ ವೃತ್ತಿಯಿಂದ ರಾಜಕಾರಣಕ್ಕೆ ಬಂದಿದ್ದರು. ಈ ಹಿಂದೆ ಅವರು ಶಾಸಕರಾಗಿದ್ದಾಗಲೂ ಕೂಡ ಶಿಕ್ಷಕರ ದಿನಾಚರಣೆಯಂದು ಮಕ್ಕಳಿಗೆ ಪಾಠ ಮಾಡಿದ್ದರು.

    ಈಗ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದ ಮೇಲೆ 10ನೇ ತರಗತಿಯ ಪರೀಕ್ಷೆ ಕೂಡ ಮುಂದೂಡಲಾಗಿತ್ತು. ಈಗ ಜೂನ್ ತಿಂಗಳಿನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇರುವ ಕಾರಣ ಮಕ್ಕಳಿಗೆ ಪುನರ್ ಮನನ ತರಗತಿ ಅಗತ್ಯವೆಂದು ವರ್ಷಗಳ ಬಳಿಕ ಕೈಯಲ್ಲಿ ಮತ್ತೆ ಚಾಕ್‍ಪೀಸ್ ಹಿಡಿದು ಬದಲಾದ ಜಗದಲ್ಲಿ ಫೇಸ್‍ಬುಕ್ ಮೂಲಕ ಮತ್ತೆ ಶಿಕ್ಷಕ ವೃತ್ತಿಗೆ ಕಾಲಿಟ್ಟಿದ್ದಾರೆ.

  • ಅಂತರ್ಜಾತಿ ವಿವಾಹಕ್ಕೆ ಪೋಷಕರ ಅಡ್ಡಿ – ಫೇಸ್‍ಬುಕ್ ಲೈವ್ ಬಂದು ಯುವಜೋಡಿ ಆತ್ಮಹತ್ಯೆ

    ಅಂತರ್ಜಾತಿ ವಿವಾಹಕ್ಕೆ ಪೋಷಕರ ಅಡ್ಡಿ – ಫೇಸ್‍ಬುಕ್ ಲೈವ್ ಬಂದು ಯುವಜೋಡಿ ಆತ್ಮಹತ್ಯೆ

    ಬೆಂಗಳೂರು: ಅಂತರ್ಜಾತಿ ವಿವಾಹವಾದ ಯುವಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಚಿಕ್ಕಮಂಗಳೂರಿನ ಮೂಡಿಗೆರೆಯಲ್ಲಿ ನಡೆದಿದೆ.

    ಬೆಂಗಳೂರಿನ ಗೋರಿಪಾಳ್ಯ ಮೂಲದ ರಕ್ಷಿತಾ (19) ಹಾಗೂ ಶೇಷಾದ್ರಿ (20) ಪರಸ್ಪರ ಪ್ರೀತಿಸಿ ಹಿರಿಯರ ವಿರೋಧ ಲೆಕ್ಕಿಸದೇ ಇತ್ತೀಚಿಗೆ ಮದುವೆಯಾಗಿದ್ದರು. ಆದರೆ ಮೇಲ್ಜಾತಿಗೆ ಸೇರಿದ ರಕ್ಷಿತಾ ಪೋಷಕರು ಇಬ್ಬರಿಗೆ ಕಿರುಕುಳ ನೀಡಿದ್ದು, ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ಪ್ರೇಮಿಗಳು ಅವರು ಕೊಲೆ ಮಾಡುವ ಮುನ್ನ ನಾವೇ ಸಾಯುತ್ತೇವೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಆತ್ಮ ಹತ್ಯೆಗೂ ಮುನ್ನ ಮುನ್ನ ಫೇಸ್ ಬುಕ್‍ನಲ್ಲಿ ಲೈವ್ ಮಾಡಿರುವ ಇಬ್ಬರು ತಮ್ಮ ಕಷ್ಟ ತಿಳಿಸಿ ಸಾಯುತ್ತಿರುವುದಾಗಿ ಹೇಳಿದ್ದಾರೆ. ನಾವು ಪ್ರೀತಿ ಮಾಡಿರುವುದಿಂದ ನಮ್ಮ ಮನೆಯಲ್ಲಿ ತೊಂದರೆ ಆಗುತ್ತಿದ್ದು, ಇದರಲ್ಲಿ ನಮ್ಮ ತಪ್ಪೇನು ಇಲ್ಲ. ಎಲ್ಲವೂ ನಡೆದು ಹೋಯಿತು. ನಾವು ಬೇಕು ಎಂದು ಏನು ಮಾಡಿಲ್ಲ. ಯಾರಿಗೂ ಅವಮಾನ ಮಾಡಿಲ್ಲ. ನಮ್ಮಿಂದ ಕುಟುಂಬಕ್ಕೆ ತೊಂದರೆ ಆಗುವುದು ಬೇಡ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.

    ಶೇಷಾದ್ರಿ ಯುವತಿಯ ಕುಟುಂಸ್ಥರ ಮೇಲೆ ಆರೋಪ ಮಾಡಿದ್ದು, ನಮ್ಮ ಜಾತಿ ಬೇರೆ ಆಗಿದ್ದೆ ಇದಕ್ಕೆಲ್ಲಾ ಕಾರಣ. ನಮಗೇ ಬದುಕಲು ಇಷ್ಟ ಇದ್ದು, ರವಿಚನ್ನಣ್ಣನವರ್ ಸರ್ ರನ್ನು ಭೇಟಿ ಮಾಡಲು ತೀರ್ಮಾನಿಸಿದ್ದೇವು. ಆದರೆ ಅವರನ್ನು ಭೇಟಿ ಮಾಡುವ ಮುನ್ನವೇ ಇವರು ನಮ್ಮನ್ನು ಸಾಯಿಸುತ್ತಾರೆ. ಅವರ ಕೈಯಲ್ಲಿ ಸಾಯುವುದು ಬೇಡ ಎಂದು ನಾವೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಪೊಲೀಸರು ಪ್ರತಿ ದಿನ ನಮ್ಮ ತಂದೆಯವರನ್ನು ಕರೆದುಕೊಂಡು ಹೋಗಿತ್ತಿದ್ದಾರೆ. ಇದರಿಂದ ನಮ್ಮ ತಂದೆ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ನನಗೆ ತಂಗಿ, ಅಮ್ಮ ಇದ್ದು ಅವರ ಭವಿಷ್ಯ ಏನಾಗುತ್ತೆ? ಇದಕ್ಕೆಲ್ಲಾ ನೀವೇ ಕಾರಣರಾಗಿದ್ದು, ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟುಕೊಳ್ಳಿ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಫೇಸ್‍ಬುಕ್ ಲೈವ್‍ನಲ್ಲಿ ಇಲಿ ಪಾಶಾಣ ಕುಡಿದ ಗಾಯಕಿ ಕಮ್ ಡ್ಯಾನ್ಸರ್

    ಫೇಸ್‍ಬುಕ್ ಲೈವ್‍ನಲ್ಲಿ ಇಲಿ ಪಾಶಾಣ ಕುಡಿದ ಗಾಯಕಿ ಕಮ್ ಡ್ಯಾನ್ಸರ್

    ಚಂಡಿಗಢ: ಹರ್ಯಾಣದ ಗಾಯಕಿ ಮತ್ತು ಡ್ಯಾನ್ಸರ್ ಒಬ್ಬರು ಫೇಸ್‍ಬುಕ್ ಲೈವ್‍ನಲ್ಲಿ ಇಲಿ ಪಾಶಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಅನಾಮಿಕ ಬಾವಾ(30) ಆತ್ಮಹತ್ಯೆಗೆ ಯತ್ನಿಸಿದ ಗಾಯಕಿ. ಅನಾಮಿಕ ಅವರು ಆನ್ನೆ ಬಿ ಎಂದು ಖ್ಯಾತರಾಗಿದ್ದು, ಫೇಸ್‍ಬುಕ್ ಲೈವ್‍ಗೆ ಬಂದು ಇಲಿ ಪಾಶಾಣ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅನಾಮಿಕ ಈಗ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅನಾಮಿಕ ಆತ್ಮಹತ್ಯೆಗೆ ಯತ್ನಿಸಿದ್ದಾಗ ಅವರನ್ನು ಹಿಸ್ಸರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಣಪಾಯದಿಂದ ಪಾರಾದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು ತನ್ನ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಯತ್ನಿಸಿದ್ದೇನೆ ಎಂದಿದ್ದಾರೆ. ಅನಾಮಿಕ ಶನಿವಾರ ಚಿಕಿತ್ಸೆ ಪಡೆದು ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಭಾನುವಾರ ಆಸ್ಪತ್ರೆ ಸಿಬ್ಬಂದಿ ಈ ವಿಷಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಆಗ ಅನಾಮಿಕ ಅವರ ಹೇಳಿಕೆ ಪಡೆಯಲು ಒಂದು ತಂಡವನ್ನು ರಚಿಸಿ ಅವರ ಮನೆಗೆ ಕಳುಹಿಸಲಾಯಿತು ಎಂದು ಪೊಲೀಸ್ ವಕ್ತಾರ ಹರೀಶ್ ಭಾರದ್ವಾಜ್ ತಿಳಿಸಿದ್ದಾರೆ.

    ಕಳೆದ 12 ವರ್ಷದಿಂದ ಹರ್ಯಾಣದಲ್ಲಿ ನಾನು ಗಾಯಕಿ ಹಾಗೂ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ರೋಹ್ಟಕ್ ನಲ್ಲಿ ವಿಡಿಯೋ ಎಡಿಟರ್ ಶೇಖರ್ ಖನ್ನಾ ಅವರ ಪರಿಚಯವಾಯಿತು. ಬಳಿಕ ನಮ್ಮಿಬ್ಬರ ಪೋಷಕರ ಒಪ್ಪಿಗೆ ಮೇರೆಗೆ 2013ರಲ್ಲಿ ನಮ್ಮ ಮದುವೆ ನಡೆಯಿತು. ಮದುವೆ ಬಳಿಕ ನಮ್ಮಿಬ್ಬರ ಮಧ್ಯೆ ಆಗಾಗ ಜಗಳವಾಗುತಿತ್ತು. ಹಾಗಾಗಿ ನಾನು ನನ್ನ ತಾಯಿ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಅನಾಮಿಕ ಹೇಳಿದ್ದಾರೆ.

    ಶನಿವಾರ ಶೇಖರ್ ಹುಟ್ಟುಹಬ್ಬವಿತ್ತು. ಈ ದಿನ ದೆಹಲಿ ಮೂಲದ ಮಹಿಳೆ ಜೊತೆ ಶೇಖರ್ ಗೆ ಅನೈತಿಕ ಸಂಬಂಧವಿದೆ ಎಂಬ ವಿಷಯ ನನಗೆ ತಿಳಿಯಿತು. ಆ ಮಹಿಳೆ ಹಲವು ಬಾರಿ ನನಗೆ ಕರೆ ಮಾಡಿ ನಿನ್ನ ಪತಿಗೆ ವಿಚ್ಛೇದನ ನೀಡು ಎಂದು ಹೇಳುತ್ತಿದ್ದಳು. ಅಲ್ಲದೇ ನನ್ನ ಪತಿ ಜೊತೆ ಕೇಕ್ ಕಟ್ ಮಾಡುತ್ತಿರುವ ವಿಡಿಯೋವನ್ನು ಆಕೆ ನನಗೆ ಅಂದು ಕಳುಹಿಸಿದ್ದಳು. ಈ ಕಾರಣಕ್ಕೆ ನಾನು ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನಾನು ವಿಷ ಸೇವಿಸಲು ನನ್ನ ಪತಿ ಹಾಗೂ ಆ ಮಹಿಳೆ ಕಾರಣ ಎಂದು ಅನಾಮಿಕ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೆಡಿಎಸ್ ಕಾರ್ಯಕರ್ತರಿಗೆ ಸಂಸದ ಪ್ರತಾಪ್ ಸಿಂಹ ಕ್ಲಾಸ್!

    ಜೆಡಿಎಸ್ ಕಾರ್ಯಕರ್ತರಿಗೆ ಸಂಸದ ಪ್ರತಾಪ್ ಸಿಂಹ ಕ್ಲಾಸ್!

    ಮೈಸೂರು: ಜೆಡಿಎಸ್ ಕಾರ್ಯಕರ್ತರಿಗೆ ಸಂಸದ ಪ್ರತಪ್ ಸಿಂಹ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಗೌಡ ಎಂದು ಹೆಸರಿಟ್ಟುಕೊಂಡು ಇಡೀ ಜಾತಿಗೆ ಅವಮಾನ ಮಾಡುತ್ತಾ ಇದ್ದೀರಿ. ಅದರಲ್ಲೂ ಈ ಜೆಡಿಎಸ್ ಬೆಂಬಲಿಗರು ಹೊಲಸು ಪದಗಳನ್ನು ಬಳಕೆ ಮಾಡುತ್ತಾರೆ. ಇಂತಹ ಪದಗಳನ್ನು ಮುಂದೆ ಬಳಕೆ ಮಾಡಬೇಡಿ ಅಂತ ಸಲಹೆ ನಿಡಿದ್ದಾರೆ.

    ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದೇನು?:
    ಹೆಸರಿನ ಮುಂದೆ ಆ ಗೌಡ, ಈ ಗೌಡ ಎಂದು ಹೆಸರು ಇಟ್ಟುಕೊಳ್ಳುತ್ತೀರಾ. ಬಾಯಿ ತೆಗೆದ್ರೆ ಅಕ್ಕ-ಅಮ್ಮ ಎಂದು ಹೊಲಸು ಶಬ್ದಗಳನ್ನು ಫೇಸ್ ಬುಕ್ ಅಲ್ಲಿ ಬೈಯ್ಯ ಬೇಡಿ. ಆ ರೀತಿ ಬೈಯಲೂ ನಮಗೂ ಬರುತ್ತೆ. ಗೌಡ ಎಂದು ಹೆಸರಿಟ್ಟುಕೊಂಡು ಇಡೀ ಜಾತಿಗೆ ಅವಮಾನ ಮಾಡುತ್ತಾ ಇದ್ದೀರಿ. ಅದರಲ್ಲೂ ಈ ಜೆಡಿಎಸ್ ಬೆಂಬಲಿಗರು ಈ ರೀತಿ ಪದಗಳನ್ನು ಮಾಡುತ್ತಾರೆ. ಬೇರೆ ಅವರ ಬಗ್ಗೆ ಈ ರೀತಿಯ ಕೆಟ್ಟ ಪದಗಳನ್ನು ಬಳಕೆ ಮಾಡೋದನ್ನ ನಿಲ್ಲಿಸಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಫೇಸ್‍ಬುಕ್‍ ಲೈವ್‍ನಲ್ಲಿ ಸಂಸದ ಪ್ರತಾಪ್ ಸಿಂಹ ಖಡಕ್ ಎಚ್ಚರಿಕೆ

    ಜೆಡಿಎಸ್ ಬೆಂಬಲಿಗರು ಫೇಸ್ ಬುಕ್ ಅಲ್ಲಿ ನಡೆಸುಕೊಳ್ಳುತ್ತಿರೋದು ಇಡೀ ಒಕ್ಕಲಿಗ ಸಮಾಜ ತಲೆ ತಗ್ಗಿಸುವಂತದ್ದಾಗಿದೆ. ನಿಮಗೆ ಬೇರೆ ಭಾಷೆ ಬರಲ್ವಾ. ಮನೆಯಲ್ಲಿ ಅಪ್ಪ-ಅಮ್ಮ ಇದೇ ಕಲಿಸಿರೋದಾ? ಸೆಂಟ್ರಲ್ ಮಿನಿಸ್ಟರ್ ಏನೋ ವ್ಯತ್ಯಾಸ ಆಗಿರಬಹುದು. ಸಾತನೂರಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಯಾಕೆ ಕರೆದುಕೊಂಡು ಬಂದಿದ್ರು ಅನ್ನೋದು ಮರೆತು ಹೋಯ್ತಾ? ಬೋಧನೆ ಕೊಡೋದು ಬಿಟ್ಟು, ಕೊಡಗು ಸಂಕಷ್ಟದಲ್ಲಿ ಇದೆ. ಅವರಿಗೆ ಸಹಾಯ ಮಾಡುವ ಕೆಲಸ ಮಾಡಿ. ಅಧಿಕಾರ ನಡೆಸುವವರ ಹತ್ತಿರ ಡಿಸೇನ್ಸಿ ಇದೆ. ಬೆಂಬಲಿಗರ ಹತ್ತಿರ ಮಾತ್ರ ಡಿಸೇನ್ಸಿ ಇಲ್ಲ. ಸಾ.ರಾ.ಮಹೇಶ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘನೆ ಮಾಡಿದ್ದೇನೆ. ಒಳ್ಳೆಯ ಕೆಲಸ ಮಾಡುವ ಬಗ್ಗೆ ಗಮನ ಹರಿಸಿ ಅಂತ ಸಲಹೆ ನಿಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.facebook.com/MPPratapSimha/videos/2663458447212865/

  • ಇನ್ ಸ್ಟಾಗ್ರಾಂನಲ್ಲಿ ಲೈವ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವತಿ

    ಇನ್ ಸ್ಟಾಗ್ರಾಂನಲ್ಲಿ ಲೈವ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವತಿ

    ಚಂಡೀಘಡ: ಪ್ರೇಮಿಯಿಂದ ಮೋಸ ಹೋದ ಬಳಿಕ 18 ವರ್ಷದ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ.

    ಪಂಜಾಬ್‍ನ ಸತ್ನಂಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಾಶಿಯಾರ್ಪುರ್ ಜಿಲ್ಲೆಯ ನಿವಾಸಿ ಮನಿಷಾ(18) ಮೃತ ಯುವತಿ. ಈಕೆ ಫಾಗ್ವಾರಾದಲ್ಲಿ ಮಾನ್ಸಾ ದೇವಿ ನಗರ್ ಮೋಹಲ್ಲಾದಲ್ಲಿ ವಸತಿಯಲ್ಲಿ ಬಾಡಿಗೆ ಇದ್ದಳು. ಮನಿಷಾ ಕೆಲಸ ಹುಡುಕಿಕೊಂಡು ಪಂಜಾಬಿಗೆ ಬಂದಿದ್ದಳು. ಎಂದು ಸತ್ನಾಂಪುರಾ ಪೊಲೀಸ್ ಠಾಣೆಯ ಎಸ್.ಎಸ್. ಪಟ್ಟಾರ್ ತಿಳಿಸಿದ್ದಾರೆ.

    ಗುರುವಾರ ರಾತ್ರಿ ಮನಿಷಾ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅದನ್ನು ಇನ್ ಸ್ಟಾಗ್ರಾಂನಲ್ಲಿ ಲೈವ್ ಮಾಡಿದ್ದಾಳೆ ಎಂದು ಪಟ್ಟಾರ್ ಹೇಳಿದ್ದಾರೆ.

    ಆತ್ಮಹತ್ಯೆ ಮಾಡಿಕೊಂಡ ರೂಮಿನಲ್ಲಿ ಒಂದು ಪತ್ರ ಸಿಕ್ಕಿದ್ದು, ಅದರಲ್ಲಿ ಪ್ರಿಯಕರನ ಹೆಸರು ಮತ್ತು ಪ್ರೀತಿಯಿಂದ ಮೋಸ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾಳೆ. ಆತನ ಹೆಸರು ಇಂದರ್ ಎಂದು ಉಲ್ಲೇಖಿಸಿದ್ದಾಳೆ. ಅಷ್ಟು ಬಿಟ್ಟು ಆತನ ವಿಳಾಸವನ್ನು ತಿಳಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಮೃತ ಮನಿಷಾ ತಂದೆ ಫ್ರಾನ್ಸ್ ನಲ್ಲಿದ್ದು, ತಾಯಿ ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ತಂದೆಗೆ ತಿಳಿಸಲಾಗಿದೆ. ಸದ್ಯಕ್ಕೆ ಮನಿಷಾ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮನಿಷಾ ಪ್ರಿಯಕರ ಇಂದರ್ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆಕೆಯ ಮೊಬೈಲ್ ಕರೆಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬರುತ್ತದೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಟ್ಟಾರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv