Tag: ಲೈಫ್‌ಸ್ಟೈಲ್‌

  • ಈ ಟ್ರಿಕ್ಸ್‌ ಗೊತ್ತಿದ್ರೆ ಅವಳು ನಿಮ್ಮನ್ನ ನಿಜವಾಗ್ಲೂ ಪ್ರೀತಿಸ್ತಿದ್ದಾಳಾ ಅನ್ನೋದು ಗೊತ್ತಾಗುತ್ತೆ

    ಈ ಟ್ರಿಕ್ಸ್‌ ಗೊತ್ತಿದ್ರೆ ಅವಳು ನಿಮ್ಮನ್ನ ನಿಜವಾಗ್ಲೂ ಪ್ರೀತಿಸ್ತಿದ್ದಾಳಾ ಅನ್ನೋದು ಗೊತ್ತಾಗುತ್ತೆ

    ಪ್ರೀತಿಯೊಂದು (Love) ಸುಂದರ ಅನುಭವ. ಅದನ್ನು ಅನುಭವಿಸಬೇಕೇ ಹೊರತು ಹೇಳಿಕೊಳ್ಳಲಾಗುವುದಿಲ್ಲ. ಅದಕ್ಕಾಗಿ ಕೆಲವರು ಪ್ರೀತಿಯೆಂಬುದೇ ಮಾಯೆ ಎನ್ನುತ್ತಾರೆ. ಕೆಲವರಿಗೆ ಹೇಳಿಕೊಳ್ಳಲು ಸಂಕೋಚ, ಹೇಳಿಕೊಂಡರೇ ಇದ್ದ ಸಂಬಂಧವೂ ಬಿಟ್ಟುಹೋಗುತ್ತದೆ ಅನ್ನೋ ಆತಂಕ. ಹಾಗಾಗಿಯೇ ಅನೇಕ ಮಂದಿ ಪ್ರೀತಿಯ ಭಾವನೆ ಹೊಂದಿದ್ದರೂ, ಹೃದಯದಲ್ಲಿ ಬಚ್ಚಿಟ್ಟುಕೊಳ್ಳುತ್ತಾರೆ.

    ಕೆಲವರಿಗೆ ಮನಸ್ಸಿನ ಮಾತು ಅರ್ಥವಾದರೆ, ಇನ್ನೂ ಕೆಲವರು ತಮ್ಮ ಬಾಡಿ ಲಾಂಗ್ವೇಜ್‌ನಿಂದಲೇ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಾರೆ. ಇದರ ಸಹಾಯದಿಂದ ಅವರು ನಿಮ್ಮನ್ನು ಪ್ರೀತಿಸುತ್ತಿದ್ದಾರಾ ಎಂದು ತಿಳಿದುಕೊಳ್ಳಬಹುದು ಆದರೆ ಸಂಪೂರ್ಣವಾಗಿ ಅದೇ ನಿಜ ಎಂದು ಹೇಳಲಾಗುವುದಿಲ್ಲ. ಆದರೀಗ ಅದಕ್ಕೂ ಆನ್‌ಲೈನ್ ದಾರಿ ಮಾಡಿಕೊಟ್ಟಿದೆ. ಅದು ಹೇಗೆ ಅನ್ನೋದನ್ನ ನೋಡಿ..

    1. ಕಣ್ಸನ್ನೆಯ ಮಾತು:
    ಇನ್ನೂ ಆನ್‌ಲೈನ್ ಹೊರತಾಗಿ ನೋಡುವುದಾದರೆ, ಪ್ರೇಮಿಗಳು ಇಷ್ಟಪಡೋದು ಕಣ್ಸನ್ನೆ ಮಾತು. ಉದಾಹರಣೆಗೆ ಅನೇಕ ಸ್ನೇಹಿತರು ಒಟ್ಟಿಗೆ ಎಲ್ಲೋ ಹೋಗಿದ್ದಾರೆ ಎಂದು ಭಾವಿಸೋಣ. ಈ ವೇಳೆ ನಿಮ್ಮ ಸ್ನೇಹಿತ ನೀವು ಅವರತ್ತ ನೋಡಲೆಂದೇ ಪ್ರಯತ್ನಿಸುತ್ತಿದ್ದರೆ ಮತ್ತು ವಿವಿಧ ಕಾರಣಗಳಿಗಾಗಿ ನಿಮ್ಮನ್ನು ನೋಡುತ್ತಿದೆ. ಅವರು ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಅರ್ಥಮಾಡಿಕೊಳ್ಳಬಹುದು. ಇದನ್ನೂ ಓದಿ: ಬಿದಿರಿನ ಉಡುಪಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟ ಉರ್ಫಿ ಜಾವೇದ್

    2. ಡೇಟಿಂಗ್ ಆ್ಯಪ್:
    ದೇಶಾದ್ಯಂತ ಡೇಟಿಂಗ್ ಆ್ಯಪ್‌ಗಳು (Dating App) ಹೆಚ್ಚು ಬಳಕೆಯಲ್ಲಿವೆ. ಹೆಚ್ಚಿನ ಯುವಕ ಯುವತಿಯರು ಸ್ವಲ್ಪ ಡಿಫರೆಂಟ್ ಆಗಿ ಇರಬೇಕು ಅಂತಾ ನೆಚ್ಚಿನ ಸಂಗಾತಿ ಆಯ್ಕೆಗಾಗಿ ಈ ಆ್ಯಪ್‌ಗಳ ಮೊರೆಹೋಗುತ್ತಾರೆ. ಸಾವಿರಾರು ಕಿಮೀ ಗಳ ದೂರದಲ್ಲಿರುವ ಗೆಳೆಯ ಗೆಳತಿಯರನ್ನ ಹುಡುಗಿ ಲೈಫ್ ಪಾರ್ಟ್ನರ್ ಮಾಡಿಕೊಳ್ಳುತ್ತಾರೆ. ಆದರೆ ಬಹುತೇಕ ಮಂದಿ ಇಂತಹ ಡೇಟಿಂಗ್ ಆ್ಯಪ್‌ಗಳ ಬಳಕೆಯಿಂದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವುದೂ ಉಂಟು. ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಪ್ರದಾನಕ್ಕೆ ಕ್ಷಣಗಣನೆ : ಭಾರತದ ಯಾವ ಚಿತ್ರಕ್ಕೆ ಸಿಗತ್ತೆ ಆಸ್ಕರ್?

    3. ಇಷ್ಟ ಆಗಿದ್ರೆ ಹೀಗೆ ತಿಳಿಯುತ್ತೆ:
    ನೀವು ಆನ್‌ಲೈನ್‌ನಲ್ಲಿ ಸಂದೇಶ ಕಳುಹಿಸಿದಾಗ ಅವನು/ಅವಳು ಯಾವಾಗ ಉತ್ತರಿಸುತ್ತಾನೆ ಎಂಬುದು ಗಮನಿಸಬೇಕಾದ ಸಂಗತಿ. ನಿಮ್ಮ ಸಂದೇಶಗಳಿಗೆ ತ್ವರಿತವಾಗಿ ಪ್ರತ್ಯುತ್ತರಿಸಿದರೆ, ಅವರು ನಿಮ್ಮತ್ತ ಸ್ವಲ್ಪವಾದರೂ ಆಕರ್ಷಿತರಾಗಿರುತ್ತಾರೆ ಎಂದರ್ಥ. ಸಂಬಂಧಕ್ಕೆ ಪ್ರಾಮುಖ್ಯತೆ ನೀಡುವುದು. ಸಮಯವನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳುವುದರಲ್ಲಿಯೇ ನಿಮಗೆ ತಿಳಿಯುತ್ತದೆ.

  • ಹುಡುಗಿಯರೇ.. ಮದುವೆಗೂ ಮುನ್ನ ಭಾವಿ ಪತಿಗೆ ಈ ಪ್ರಶ್ನೆ ಕೇಳೋದನ್ನ ಮರಿಬೇಡಿ

    ಹುಡುಗಿಯರೇ.. ಮದುವೆಗೂ ಮುನ್ನ ಭಾವಿ ಪತಿಗೆ ಈ ಪ್ರಶ್ನೆ ಕೇಳೋದನ್ನ ಮರಿಬೇಡಿ

    ದಾಂಪತ್ಯ ಜೀವನ ಅನ್ನೋದು ಒಂದು ಸುಂದರವಾದ ಬಂಧ. ಲವ್‌ ಮಾಡುವವರು ಮದುವೆಗೂ ಮುನ್ನ ಒಬ್ಬರನ್ನೊಬ್ಬರು ಅರಿತುಕೊಂಡಿರುತ್ತಾರೆ. ಆದರೆ ಮನೆಯವರ ಮಾತು ಕೇಳುವವರು ಅರೆಂಜ್‌ ಮ್ಯಾರೇಜ್‌ ಆದ ಮೇಲೆ ತನ್ನ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತೆ. ಅರೆಂಜ್‌ ಮ್ಯಾರೇಜ್‌ ಆಗಲು ಇಷ್ಟ ಪಡುವ ಹೆಣ್ಣು ಮಕ್ಕಳಿಗೆ ಒಂದಷ್ಟು ಟಿಪ್ಸ್‌ ಇದೆ.

    ಮದುವೆಯಾಗುವ ಮೊದಲು ತಮ್ಮ ಭಾವಿ ಪತಿಯೊಂದಿಗೆ ಹುಡುಗಿಯರು ಈ ವಿಷಯಗಳು ಬಗ್ಗೆ ಚರ್ಚಿಸಲೇಬೇಕು. ಮದುವೆ ನಂತರ, ಎಷ್ಟೋ ಹೆಣ್ಣುಮಕ್ಕಳು ತಮ್ಮ ಜೀವನ ಸಂಗಾತಿಯಾಗಿ ತಪ್ಪು ವ್ಯಕ್ತಿಯನ್ನು ಆರಿಸಿಕೊಂಡಿದ್ದೇವೆ ಎಂದು ಅರಿತುಕೊಳ್ಳುತ್ತಾರೆ. ಹೀಗಾಗಿ ಮದುವೆಗೂ ಮುನ್ನವೇ ಸಂಗಾತಿ ಆಗುವವರ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳುವುದು ಮುಖ್ಯ. ಮದುವೆಗೂ ಮುನ್ನ ಬಾಳ ಸಂಗಾತಿ ಆಗುವವರೊಂದಿಗೆ ಈ ಪ್ರಶ್ನೆಗಳನ್ನು ಮುಂದಿಟ್ಟು ಇತ್ಯರ್ಥ ಮಾಡಿಕೊಳ್ಳುವುದು ಉತ್ತಮ. ಇದನ್ನೂ ಓದಿ: ಸೊಸೆ ಸ್ನೇಹ ಬಯಸೋ ಅತ್ತೆಗೆ ಈ ಗುಣ ಇರುತ್ತಂತೆ..

    ಈ ಸಂಬಂಧಕ್ಕೆ ಬದ್ಧರಾಗಲು ನೀವು ಸಿದ್ಧರೇ?
    ದಾಂಪತ್ಯ ಜೀವನ ಅನ್ನೋದು ಸುಲಭದ ಮಾತಲ್ಲ. ನಿಮ್ಮ ಭಾವಿ ಪತಿ ಮದುವೆ ನಂತರ ಸಂಬಂಧವನ್ನು ಉಳಿಸಿಕೊಳ್ಳಲು ಸಮರ್ಥರೇ ಎಂಬುದನ್ನು ಹುಡುಗಿಯರು ತಿಳಿದುಕೊಳ್ಳಬೇಕು. ವಿವಾಹದ ನಂತರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಅದನ್ನು ನಿಭಾಯಿಸಬಲ್ಲನೇ? ನನ್ನನ್ನು ಸಂತೋಷವಾಗಿ ಇಡಬಲ್ಲನೇ ಎಂಬುದನ್ನು ಯೋಚಿಸಬೇಕು. ಹೀಗಾಗಿ ಜೀವನದ ಬಗ್ಗೆ ನಿಮ್ಮ ಮುಂದಿನ ನಡೆ ಏನು ಎಂದು ಕೇಳಿ. ಅವರಿಂದ ಸಕಾರಾತ್ಮಕ ಉತ್ತರ ಸಿಕ್ಕರೆ, ಜೀವನದ ಕಡೆಗೆ ಅವರ ವಿಧಾನ ತುಂಬಾ ಸರಳವಾಗಿದೆ ಎಂದು ಅರ್ಥ ಮಾಡಿಕೊಳ್ಳಿ.

    ಕೆಲಸ ಮಾಡಲು ಬಿಡುತ್ತಾರೆಯೇ?
    ಭಾವಿ ಪತಿ ನಿಮ್ಮ ಕೆಲಸದ ಜೀವನದೊಂದಿಗೆ ಹೊಂದಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ವಿವಾಹಕ್ಕೂ ಮುನ್ನವೇ ಕೇಳಿ ಸ್ಪಷ್ಟನೆ ಪಡೆದುಕೊಳ್ಳಿ. ಏಕೆಂದರೆ ಮದುವೆ ನಂತರ ನಿಮ್ಮ ಜೀವನ ಸಂಪೂರ್ಣ ಬದಲಾಗಬಹುದು. ಅಂತಹ ಸನ್ನಿವೇಶದಲ್ಲಿ ಪತಿಯ ಸಪೋರ್ಟ್‌ ಸಿಗದಿದ್ದರೆ ನೀವು ಸಂಬಂಧದಲ್ಲಿ ಕಿರಿಕಿರಿ ಅನುಭವಿಸಬಹುದು. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    ಮಕ್ಕಳನ್ನು ಇಷ್ಟಪಡ್ತೀರಾ?
    ಸಾಮಾನ್ಯವಾಗಿ ಮದುವೆಯಾದ ನಂತರ ಎಲ್ಲರೂ ಕುಟುಂಬ ಯೋಜನೆ ಬಗ್ಗೆ ಚರ್ಚಿಸುತ್ತಾರೆ. ಮದುವೆಗೂ ಮುನ್ನ ಈ ವಿಷಯದ ಬಗ್ಗೆ ನಿಮಗೆ ಸ್ಪಷ್ಟತೆ ಬೇಕೆನಿಸಿದರೆ ಕೇಳಬಹುದು. ನೀವು ಮದುವೆಯಾಗುವ ಹುಡುಗನೊಂದಿಗೆ ಮಕ್ಕಳ ಬಗ್ಗೆ ನೇರವಾಗಿಯೇ ಪ್ರಶ್ನಿಸಬಹುದು. ಮದುವೆಯ ನಂತರ ಕುಟುಂಬ ಯೋಜನೆಯ ಬಗ್ಗೆ ಅವರು ಯಾವಾಗ ಯೋಚಿಸುತ್ತಾರೆ ಎಂಬುದನ್ನು ಕೇಳಿಕೊಳ್ಳಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರತಿ ಹೆಣ್ಣು ತನ್ನ ಸಂಗಾತಿಯಿಂದ ಬಯಸೋದು ಏನು ಗೊತ್ತಾ?

    ಪ್ರತಿ ಹೆಣ್ಣು ತನ್ನ ಸಂಗಾತಿಯಿಂದ ಬಯಸೋದು ಏನು ಗೊತ್ತಾ?

    ಪುರುಷರು ನಮ್ಮನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ” ಎಂಬುದು ಬಹುಪಾಲು ಮಹಿಳೆಯರ ಆರೋಪ. ಹೆಣ್ಣು ನಿಜವಾಗಿಯೂ ಏನು ಬಯಸುತ್ತಾಳೆ ಎಂಬುದನ್ನು ಅರಿತುಕೊಳ್ಳುವಲ್ಲಿ ಗಂಡು ಸೋಲುತ್ತಾನೆ. ಕೆಲವರು ತನ್ನವಳ ಬಗ್ಗೆ ಎಲ್ಲವನ್ನೂ ತಿಳಿದಿದ್ದೇನೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಾರೆ. ಆದರೆ ತಿಳಿದಿರುವಿಕೆಯಲ್ಲಿ ಹೆಚ್ಚಿನವು ತಪ್ಪು ಎಂದು ಸಾಬೀತಾಗಿವೆ. ಪುರುಷರು ತಮ್ಮನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಲ್ಲಾ ಮಹಿಳೆಯರು ಬಯಸುತ್ತಾರಂತೆ.

    ಸಪೋರ್ಟ್‌
    ಸ್ವಲ್ಪ ವಿನೋದ ಮತ್ತು ಜಗಳ, ಮುನಿಸು ಜೀವನದಲ್ಲಿ ಚೆನ್ನಾಗಿರುತ್ತೆ. ಆದರೆ ನಿಮ್ಮಾಕೆಯನ್ನು ಯಾರಾದರು ಗೇಲಿ ಮಾಡಿದಾಗ, ನೀವು ಆಕೆ ಪರವಾಗಿ ನಿಲ್ಲಿರಿ. ಏನೇ ಆಗಲಿ.. ನೀವು ಅವಳ ಪರವಾಗಿ ನಿಲ್ಲಬೇಕೆಂದು ಅವಳು ಮನಸ್ಸಿನೊಳಗೆ ಬಯಸುತ್ತಾಳೆ. ಆಕೆ ಗಟ್ಟಿತನದ ಮಹಿಳೆಯಾಗಬೇಕೆಂದರೆ ಕೆಲವೊಮ್ಮೆ ನಿಮ್ಮ ಬೆಂಬಲ ತುಂಬಾ ಮುಖ್ಯ. ಇದನ್ನೂ ಓದಿ: ವಿವಾಹಿತರೊಂದಿಗೆ ಅಫೇರ್‌ ಇಟ್ಕೊಂಡಿರೋರಿಗೆ ಒಂದಷ್ಟು ಸಲಹೆ…

    ಪ್ರೀತಿ ನಿರೀಕ್ಷೆ
    ಹೆಣ್ಣು ತನ್ನ ಸಂಗಾತಿ ಸ್ವಲ್ಪಮಟ್ಟಿನ ಪ್ರೀತಿಯನ್ನಾದರೂ ತೋರಿಸಲಿ ಎಂದು ಅಪೇಕ್ಷಿಸುತ್ತಾಳೆ. ನಾನು ನಿನ್ನೊಂದಿಗಿದ್ದೇನೆ ಎನ್ನುವಂತೆ ಕೈಗಳು ಅಥವಾ ಸೊಂಟವನ್ನು ಹಿಡಿದುಕೊಳ್ಳುವುದು ಆಕೆ ನಿಮ್ಮವಳೆಂದು ಜಗತ್ತಿಗೆ ತೋರಿಸಲು ಒಂದು ಚಿಕ್ಕ ಮಾರ್ಗವಾಗಿದೆ.

    ಜೊತೆಗೆ ಸಮಯ ಕಳೆಯಲು ಬಯಕೆ
    ನೀವು ಮನೆಯಲ್ಲಿದ್ದಾಗ ಹೆಚ್ಚಿನ ಸಮಯ ಸಂಗಾತಿಯೊಂದಿಗೆ ಕಳೆಯಿರಿ. ಅವನು ನನ್ನ ಕಡೆ ಗಮನ ಕೊಡಲಿ, ತುಂಬಾ ಕೇರ್‌ ಮಾಡಿ ಎಂದು ಮಹಿಳೆಯರು ಬಯಸುವುದು ಹೆಚ್ಚು. ಆದ್ದರಿಂದ ನಿಮ್ಮ ಫೋನ್ ಅಥವಾ ಕೆಲಸವನ್ನು ಪಕ್ಕಕ್ಕೆ ಇರಿಸಿ. ನಿಮ್ಮಾಕೆಯೊಂದಿಗೆ ಸಮಯ ಕಳೆಯಿರಿ. ಒಟ್ಟಿಗೆ ಸಿನಿಮಾ ವೀಕ್ಷಿಸಿ. ಮನೆಯ ಕೆಲಸವನ್ನು ಒಟ್ಟಿಗೆ ಮಾಡಿ. ಇದು ನಿಮ್ಮ ಸಂಗಾತಿಗೆ ತುಂಬಾ ಮುಖ್ಯವಾಗಿರುತ್ತದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    ಭಾವನೆ ಹಂಚಿಕೊಳ್ಳುವುದು, ಪ್ರಾಮಾಣಿಕತೆ
    ಸತ್ಯವು ಎಷ್ಟೇ ಕಹಿ ಆಗಿರಲಿ, ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಿ. ಆಕೆಗೆ ಸುಳ್ಳು ಹೇಳುವುದು ಮತ್ತು ದ್ರೋಹ ಮಾಡುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಸಂಗಾತಿಗೆ ಸತ್ಯವೇ ಮುಖ್ಯವಾಗಿರುತ್ತದೆ. ಸಂಗಾತಿಯೊಂದಿಗೆ ನೀವು ಪ್ರಾಮಾಣಿಕರಾಗಿದ್ದಷ್ಟೂ ಸಂಬಂಧ ಗಟ್ಟಿಗೊಳ್ಳುತ್ತದೆ.

    ಹೇಳುವುದನ್ನು ಆಲಿಸುವುದು
    ನಿಮ್ಮವಳು ಏನು ಹೇಳುತ್ತಿದ್ದಾಳೆಂಬುದನ್ನು ಮೊದಲು ಆಲಿಸಿ. ಆಕೆ ಮಾತನಾಡುವಾಗಿ ಅಡ್ಡಿಪಡಿಸಬೇಡಿ. ಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸಿ. ಈ ನಡವಳಿಕೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    ವಿಶೇಷವಾಗಿ ಟ್ರೀಟ್‌ ಮಾಡುವುದು
    ನಿಮ್ಮ ಸಂಗಾತಿಯನ್ನು ಸ್ನೇಹಿತೆಯಂತೆ ಪರಿಗಣಿಸಿ. ಇದರಿಂದ ನಿಮ್ಮಾಕೆಗೆ ನೀವು ಇನ್ನಷ್ಟು ಇಷ್ಟವಾಗಬಹುದು. ಆಕೆ ನಿಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯಾಗಿರಬೇಕು. ನನ್ನನ್ನು ವಿಶೇಷವಾಗಿ ಟ್ರೀಟ್‌ ಮಾಡಲಿ ಅಂತಾ ಬಯಸುವ ಮಹಿಳೆಯರೇ ಹೆಚ್ಚು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೆಡ್‌ಫೋನ್‌ನಿಂದ ಕಿವಿ ಸಮಸ್ಯೆ ಗ್ಯಾರಂಟಿ – ತೊಂದರೆ ಆಗಬಾರದು ಅಂದ್ರೆ ಹೀಗೆ ಮಾಡಿ..

    ಹೆಡ್‌ಫೋನ್‌ನಿಂದ ಕಿವಿ ಸಮಸ್ಯೆ ಗ್ಯಾರಂಟಿ – ತೊಂದರೆ ಆಗಬಾರದು ಅಂದ್ರೆ ಹೀಗೆ ಮಾಡಿ..

    ಮೊದಲೆಲ್ಲಾ ಹೆಡ್‌ಫೋನ್‌ (Headphone) ಬಳಕೆ ಟ್ರೆಂಡ್‌ ಆಗಿತ್ತು. ಈಗಲೂ ಆ ಟ್ರೆಂಡ್‌ ಇದೆ. ಟ್ರೆಂಡ್‌ ವಿಚಾರ ಹಾಗಿರಲಿ.. ಈ ಕೋವಿಡ್‌ ಬಂದ್ಮೇಲೆ ಹೆಡ್‌ಫೋನ್‌ ಬಳಕೆ ಮತ್ತಷ್ಟು ಹೆಚ್ಚಾಗಿದೆ. ಕೋವಿಡ್‌ (Covid-19) ಸಾಂಕ್ರಾಮಿಕದ ಕಾರಣ, ಉದ್ಯೋಗಿಗಳಿಗೆ ವರ್ಕ್‌ ಫ್ರಮ್‌ ಹೋಮ್‌ ಪದ್ಧತಿ ರೂಢಿಗತವಾಯ್ತು. ಇದ್ರಿಂದ ಆನ್‌ಲೈನ್‌ ಮೀಟಿಂಗ್‌, ವೀಡಿಯೋ ಕಾಲ್‌ಗಾಗಿ ಹೆಡ್‌ಫೋನ್‌ ಬಳಕೆಯೂ ಜಾಸ್ತಿಯಾಯ್ತು.

    ಅಷ್ಟೇ ಅಲ್ಲ, ಸ್ನೇಹಿತರು, ಮನೆಯವರೊಂದಿಗೆ ಮಾತನಾಡುವುದಕ್ಕೂ ಹೆಡ್‌ಫೋನ್‌ ಬಳಸುವವರೇ ಹೆಚ್ಚು. ನಮ್ಮಲ್ಲಿ ಅನೇಕರು ಗಂಟೆಗಳ ಕಾಲ ಹೆಡ್‌ಫೋನ್‌ಗೆ ಅಂಟಿಕೊಂಡೇ ಇರುತ್ತಾರೆ. ಒಂದರ್ಥದಲ್ಲಿ ಇದು ಉತ್ತಮ ಎನಿಸಬಹುದು. ಫೋನ್‌ನಲ್ಲಿ ನೀವು ಕೇಳುವ ಆಡಿಯೋ ಹೊರಗಿನವರಿಗೆ ಗೊತ್ತಾಗಲ್ಲ. ಮತ್ತೆ ನಿಮ್ಮಿಂದ ಹೊರಗಿನವರಿಗೆ ಡಿಸ್ಟರ್ಬ್‌ ಕೂಡ ಆಗಲ್ಲ. ಆದರೆ ಹೆಡ್‌ಫೋನ್‌ಗೆ ಅತಿಯಾಗಿ ಅಂಟಿಕೊಳ್ಳೋದ್ರಿಂದ ನಮಗೆ ಹಾನಿಯೇ ಹೆಚ್ಚು. ಇದನ್ನೂ ಓದಿ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್‌ ಅಂತಾ ನಿರ್ಲಕ್ಷಿಸಬೇಡಿ – ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವೈದ್ಯರು ಹೇಳೋದೇನು?

    ಹೆಡ್‌ಫೋನ್‌ ಹೆಚ್ಚಾಗಿ ಬಳಸುವವರಿಗೆ ಆತಂಕಕಾರಿ ಸುದ್ದಿಯೊಂದನ್ನು BMJ ಗ್ಲೋಬಲ್ ಹೆಲ್ತ್ ಜರ್ನಲ್‌ ಪ್ರಕಟಿಸಿದೆ. 100 ಕೋಟಿ ಯುವಜನರು ಹೆಡ್‌ಫೋನ್‌ ಬಳಕೆಯಿಂದ ಶ್ರವಣ ದೋಷ (Hearing Loss) ಸಮಸ್ಯೆಯನ್ನು ಹೆದರಿಸುತ್ತಿದ್ದಾರೆ ಎಂಬ ವಿಚಾರವನ್ನು ಜರ್ನಲ್‌ ತನ್ನ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.

    ವೈದ್ಯರು ಹೇಳೋದೇನು?
    ಇತ್ತೀಚಿನ ದಿನಗಳಲ್ಲಿ ಶ್ರವಣ ಸಮಸ್ಯೆಯಿದೆ ಅಂತಾ ಬರುವ ರೋಗಿಗಳ ಸಂಖ್ಯೆಯೇ ಹೆಚ್ಚಿದೆ. ಹೆಡ್‌ಫೋನ್‌ಗಳ ಅತಿಯಾದ ಬಳಕೆಯಿಂದಾಗಿ ಇವರಿಗೆ ಶ್ರವಣ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದು ತಪಾಸಣೆಯಿಂದ ಗೊತ್ತಾಗಿದೆ. ಹೆಡ್‌ಫೋನ್‌ ಅತಿಯಾದ ಬಳಕೆ ಅವರ ನರಗಳಿಗೆ ತೀವ್ರತರ ಹಾನಿಯನ್ನುಂಟು ಮಾಡುತ್ತೆ ಎಂದು ಡಾ. ಕೆ.ಕೆ.ಹಂಡಾ ಹೇಳುತ್ತಾರೆ. ಇದನ್ನೂ ಓದಿ: ಹಾಲಿಡೇ ಹಾರ್ಟ್‌ ಸಿಂಡ್ರೋಮ್‌ ಅಂದ್ರೇನು ಗೊತ್ತಾ?

    ಎಷ್ಟು ನಿಮಿಷ ಹೆಡ್‌ಫೋನ್‌ ಬಳಸಿದ್ರೆ ಉತ್ತಮ?
    ದೀರ್ಘಕಾಲದವರೆಗೆ ಹೆಡ್‌ಫೋನ್‌ಗಳನ್ನು ಬಳಸಬಾರದು. ಹೆಡ್‌ಫೋನ್‌ ಬಳಕೆಯಿಂದ ದೂರ ಇರುವುದೇ ಉತ್ತಮ. ಬಳಸುವ ಅನಿವಾರ್ಯತೆ ಇದ್ದರೆ, ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಂಬುದು ವೈದ್ಯರ ಸಲಹೆ.

    ಏನದು ಮುನ್ನೆಚ್ಚರಿಕೆ ಕ್ರಮ?
    ಬಳಕೆ ಸಮಯ ಮಿತಿಗೊಳಿಸಿ: ಹೆಡ್‌ಫೋನ್‌ಗಳ ಬಳಕೆ ಸಮಯವನ್ನು ಮಿತಿಗೊಳಿಸಬೇಕು. ನೀವು ಪ್ರತಿ 45 ನಿಮಿಷ ಹೆಡ್‌ಫೋನ್‌ ಬಳಸಿದ ನಂತರ 1 ಗಂಟೆ ಅಥವಾ 10-15 ನಿಮಿಷಗಳ ಕಾಲ ವಿರಾಮವನ್ನು ತೆಗೆದುಕೊಳ್ಳುವುದು ಉತ್ತಮ. ಇದನ್ನೂ ಓದಿ: ಈ ಕ್ರಮ ಅನುಸರಿಸಿದ್ರೆ ʼಆಲ್‌ಝೈಮರ್‌ʼ ರೋಗ ತಡೆಗಟ್ಟಬಹುದು

    ವಾಲ್ಯೂಮ್‌ ಕಡಿಮೆ ಮಾಡಿ: ಕೆಲವರಿಗೆ ಹೆಚ್ಚಿನ ಸಮಯ ಹೆಡ್‌ಫೋನ್‌ ಬಳಸುವುದು ಅನಿವಾರ್ಯವಾಗಿರುತ್ತೆ. 4-5 ಗಂಟೆಗಳ ಕಾಲ ಹೆಡ್‌ಫೋನ್‌ ಬಳಸಲೇಬೇಕು ಎನ್ನುವವರು, ವಾಲ್ಯೂಮ್‌ ಕಡಿಮೆ ಮಾಡಿಕೊಳ್ಳುವುದು ಸೂಕ್ತ. ಇದರಿಂದ ಶ್ರವಣಕ್ಕೆ ಆಗಬಹುದಾದ ಹೆಚ್ಚಿನ ಅಪಾಯವನ್ನು ತಡೆಗಟ್ಟಬಹುದು.

    Live Tv
    [brid partner=56869869 player=32851 video=960834 autoplay=true]

  • ವಿವಾಹಿತರೊಂದಿಗೆ ಅಫೇರ್‌ ಇಟ್ಕೊಂಡಿರೋರಿಗೆ ಒಂದಷ್ಟು ಸಲಹೆ…

    ವಿವಾಹಿತರೊಂದಿಗೆ ಅಫೇರ್‌ ಇಟ್ಕೊಂಡಿರೋರಿಗೆ ಒಂದಷ್ಟು ಸಲಹೆ…

    ಫೇರ್ (Affair) ಅನ್ನೋದು ಲೈಂಗಿಕ ಸಂಬಂಧ, ಪ್ರಣಯ ಸ್ನೇಹ ಅಥವಾ ಭಾವೋದ್ರಿಕ್ತ ಬಾಂಧವ್ಯ. ವಿವಾಹಿತರು ಮತ್ತೊಬ್ಬರೊಂದಿಗೆ ಇಂತಹ ಸಂಬಂಧ ಹೊಂದಿದ್ರೆ ಅದು ಅಫೇರ್.‌ ಇದು ಎಷ್ಟು ನೈತಿಕ ಎಂದು ಪ್ರಶ್ನಿಸೋಕೆ ಸಾಧ್ಯವಿಲ್ಲ. ಆದರೆ ಇಂತಹ ಸಂಬಂಧದಿಂದ ಏನೆಲ್ಲ ಅವಾಂತರು ಆಗಬಹುದು ಎಂಬುದನ್ನು ಹಲವು ಸುದ್ದಿಗಳನ್ನು ಓದಿ ತಿಳಿದಿದ್ದೇವೆ.

    ವಿವಾಹಿತರೊಡಗಿನ ಅಫೇರ್‌ ನೈತಿಕತೆಯ ಹಾದಿಯನ್ನು ಮುರಿಯುತ್ತೆ. ವಿವಾಹಿತರು ಇಂತಹ ಸಂಬಂಧ ಹೊಂದಿದ್ರೆ, ಅದು ದಾಂಪತ್ಯಕ್ಕೆ ಮಾಡಿದ ದ್ರೋಹವೇ ಆಗುತ್ತೆ. ಕೆಲವರು ಮೋಜಿಗಾಗಿ ಇಂತಹ ಆಯ್ಕೆ ಮಾಡಿಕೊಳ್ಳಬಹುದು. ಆದ್ರೆ ಇದು ಪರಿಹರಿಸಲಾಗದ ಸಮಸ್ಯೆ. ಮುಂದೆ ಇದರಿಂದ ಎದುರಾಗುವ ಪರಿಣಾಮಗಳು ಅಷ್ಟೇ ಕಠಿಣವಾಗಿರುತ್ತೆ. ವಿವಾಹಿತರೊಂದಿಗೆ ಅಫೇರ್‌ ಇಟ್ಟುಕೊಂಡಿದ್ರೆ ಅಂಥವರಿಗೆ ಇಲ್ಲಿ ಒಂದಷ್ಟು ಸಲಹೆ ಇದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    ಜವಾಬ್ದಾರಿ ಹೊತ್ತುಕೊಳ್ಳಿ
    ವಿವಾಹಿತರೊಂದಿಗೆ ಅಫೇರ್‌ ಇಟ್ಟುಕೊಂಡಿರೋರು ಜವಾಬ್ದಾರಿಗಳಿಂದ ಎಸ್ಕೇಪ್‌ ಆಗ್ತಾರೆ. ವಾಸ್ತವ ಪ್ರಪಂಚದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸ್ತಾರೆ. ಆದರೆ ಎಲ್ಲಿವರೆಗೆ ಹೀಗೆ ತಪ್ಪಿಸಿಕೊಳ್ಳಲು ಸಾಧ್ಯ? ಅದಕ್ಕೊಂದು ಕೊನೆ ಇದ್ದೇ ಇರುತ್ತೆ. ಅಫೇರ್‌ ಇಟ್ಟುಕೊಂಡಿದ್ರೆ ಮುಂದೆ ಅದರಿಂದಾಗುವ ಪರಿಣಾಮದ ಜವಾಬ್ದಾರಿಯನ್ನೂ ಹೊರಬೇಕಾಗುತ್ತೆ.

    ವೃತ್ತಿಪರ ಮತ್ತು ವೈಯಕ್ತಿಕ ಜೀವನಕ್ಕೆ ತೊಂದರೆ
    ವಿವಾಹಿತರೊಂದಿಗೆ ಅಫೇರ್‌ ಇದ್ದವರು ವೈಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ತುಂಬಾ ತೊಂದರೆ ಎದುರಿಸುತ್ತಾರೆ. ನಿಮ್ಮ ಸಂಗಾತಿಯು ಅವರ ಸಂಗಾತಿಯೊಂದಿಗೆ ಹೋಗುವ ಸ್ಥಳಗಳಿಗೆ ಭೇಟಿ ನೀಡಲು ನಿಮಗೆ ಸಾಧ್ಯವಾಗಲ್ಲ. ಫೋನ್ ಸಂಖ್ಯೆಗಳನ್ನು ಸಹ ಬದಲಿಸಬೇಕಾಗುತ್ತೆ. ಸಂಗಾತಿಯೊಂದಿಗೆ ಸುತ್ತಲು ಅವರ ಬಿಡುವಿನ ಸಮಯಕ್ಕಾಗಿ ಕಾಯಬೇಕಾಗುತ್ತೆ. ಇದು ನಿಮ್ಮ ಕೆಲಸ ಮತ್ತು ವೈಯಕ್ತಿಕ ಬದುಕಿಗೆ ತೊಂದರೆ ಉಂಟುಮಾಡುತ್ತೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    ಈ ಬಗ್ಗೆ ಯೋಚಿಸಿ
    ನಿಮ್ಮ ಅಗತ್ಯತೆ ಪೂರೈಸಿಕೊಳ್ಳಲು ಕುಟುಂಬವೊಂದನ್ನು ಒಡೆಯುವ ಹಕ್ಕು ನಿಮಗಿದೆಯೇ? ನೀವು ವಿವಾಹಿತರೊಂದಿಗೆ ಇರಲು ಇಚ್ಛಿಸಿದಾಗ, ನಿಮ್ಮ ಉದ್ದೇಶ ಅದಾಗದಿದ್ದರೂ ಕುಟುಂಬವೊಂದನ್ನು ಒಡೆಯುತ್ತೀರಿ. ಈ ಬಗ್ಗೆ ಎಚ್ಚರಿಕೆಯಿಂದ ಯೋಚಿಸಬೇಕು.

    ಹೊರೆಗಳು ಹೆಚ್ಚಾಗುತ್ತೆ
    ವಿವಾಹಿತರೊಂದಿಗೆ ಅಫೇರ್‌ ಇದ್ರೆ ಹೊರೆ ಕೂಡ ಹೆಚ್ಚಾಗಿರುತ್ತೆ. ಅಪರಾಧ, ಅವಮಾನ ಮತ್ತು ಮುಜುಗರದ ಅಲೆಗಳ ಹೊಡೆತವನ್ನು ಎದುರಿಸಬೇಕಾಗುತ್ತೆ. ನೀವು ಕೆಲವೊಮ್ಮೆ ಪ್ರೀತಿಗೆ ಅರ್ಹರಲ್ಲ ಎಂಬ ಭಾವನೆಯೂ ಬರಬಹುದು. ಭವಿಷ್ಯದ ಹಾದಿ ನಿರ್ಧರಿಸುವುದು ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ನಿಮ್ಮ ಮೇಲಿದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    Live Tv
    [brid partner=56869869 player=32851 video=960834 autoplay=true]

  • ಕೆಲವರ ಸಂಬಂಧ ಹೆಚ್ಚು ಕಾಲ ಉಳಿಯಲ್ಲ ಯಾಕೆ ಗೊತ್ತಾ? ಇಲ್ಲಿದೆ ಕಾರಣಗಳು..

    ಕೆಲವರ ಸಂಬಂಧ ಹೆಚ್ಚು ಕಾಲ ಉಳಿಯಲ್ಲ ಯಾಕೆ ಗೊತ್ತಾ? ಇಲ್ಲಿದೆ ಕಾರಣಗಳು..

    ನುಷ್ಯ ಜೀವನದಲ್ಲಿ ಸಂಬಂಧಗಳಿಗೆ (Relationship) ಅದರದ್ದೇ ಆದ ಮೌಲ್ಯವಿದೆ. ಸಂಬಂಧ ಬೆಳೆಸುವುದು ಸುಲಭ. ಆದರೆ ಆ ಸಂಬಂಧ ಮುರಿದು ಹೋಗದಂತೆ ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗಲೂ ನಾವು ಮುರಿದುಹೋದ ನಮ್ಮ ಹಿಂದಿನ ಸಂಬಂಧದಲ್ಲಿ ಏನು ತಪ್ಪಾಗಿದೆ ಎಂದು ಆಗಾಗ್ಗೆ ಯೋಚಿಸುತ್ತೇವೆ, ಆ ಬಗ್ಗೆ ಆಶ್ಚರ್ಯ ಪಡುತ್ತೇವೆ.

    ಇದು ಸಣ್ಣ ವಿಚಾರ, ಅನವಶ್ಯಕ ಎಂದು ನಾವು ಭಾವಿಸುವ ಎಷ್ಟೋ ವಿಷಯಗಳೇ ಸಂಬಂಧ ಮುರಿಯಲು ಪ್ರಮುಖ ಕಾರಣಗಳಾಗಿರುತ್ತವೆ ಎಂಬುದು ಕೆಲವೊಮ್ಮೆ ನಮಗೆ ತಿಳಿದಿರುವುದಿಲ್ಲ. ಕೆಲವು ಸಂಬಂಧಗಳು ಯಾಕೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದಕ್ಕೆ 5 ಕಾರಣಗಳು ಹೀಗಿವೆ ನೋಡಿ. ಇದನ್ನೂ ಓದಿ: ಹೃದಯಾಘಾತ – ಒಂದು ತಿಂಗಳ ಮುಂಚೆ ಈ 12 ರೋಗಲಕ್ಷಣಗಳು ಕಂಡುಬಂದ್ರೆ ಇರಲಿ ಎಚ್ಚರ!

    ನಿಮಗೆ ಬೇಕಾದುದ್ದನ್ನು ನೀವು ಕೇಳುವುದಿಲ್ಲ
    ಅನೇಕರು ತಾವು ಮಾಡಬಹುದು ಎಂದುಕೊಳ್ಳುವ ಕೆಲವು ವಿಷಯಗಳ ಬಗ್ಗೆ ಯೋಚಿಸುತ್ತಾರೆ. ಆದರೆ ಅದನ್ನು ತಮ್ಮ ಸಂಗಾತಿ ಜೊತೆ ಹೇಳಿಕೊಳ್ಳುವುದಿಲ್ಲ. ಈ ವಿಷಯ ಹೇಳಿಕೊಂಡರೆ ಸಂಗಾತಿಯಿಂದ ಏನು ಪ್ರತಿಕ್ರಿಯೆ ಬರಬಹುದು ಎಂಬ ಬಗ್ಗೆ ಭಯ, ಮುಜುಗರ ಪಡುತ್ತಾರೆ. ನೀವು ಸುಮ್ಮನೇ ಇದ್ದು, ಯೋಚನೆಯನ್ನಷ್ಟೇ ಮಾಡಿದರೆ ಹತಾಶೆ ದಿನಗಳು ಬರುತ್ತವೆ. ಆಗ ಸಂಗಾತಿಯಿಂದ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಹೀಗಾದಾಗ ಸಂಬಂಧ ಹೇಗೆ ಉಳಿಯುತ್ತದೆ?

    ʼನೋʼ ಎಂದು ಹೇಳದಿರುವುದು
    ʻNOʼ ಎಂದು ಹೇಳುವುದು ಎಷ್ಟು ಮುಖ್ಯ ಎಂಬುದನ್ನು ನೀವು ಅರಿಯಬೇಕು. ಇದು ದೈಹಿಕ ಸುರಕ್ಷತೆಗೆ ಮಾತ್ರವಲ್ಲದೆ ನಿಮ್ಮ ಮಾನಸಿಕ ಆರೋಗ್ಯಕ್ಕೂ ಒಳಿತು. ಜನರನ್ನು ಮೆಚ್ಚಿಸಲು ʼಹೌದುʼ ಎಂದು ಹೇಳುವ ಸಂದರ್ಭಗಳುಂಟು. ನಿಮಗೆ ಇಷ್ಟವಿಲ್ಲದ್ದನ್ನು ಮಾಡಲು ಇಲ್ಲ ಎಂದು ಹೇಳಲು ಸಾಧ್ಯವಾಗದಿದ್ದರೆ, ಅದು ನಿಮ್ಮನ್ನು ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ. ಅನಾವಶ್ಯಕವಾದ ಆಹಾರ ಸೇವನೆ, ನಿಮಗೆ ಬೇಡದ ಲೈಂಗಿಕತೆಗಾಗಿ ನಿಮ್ಮ ಸಂಗಾತಿಗೆ ಬೇಡ ಎಂದು ಹೇಳುವುದು, ನಿಮ್ಮ ಸಂಗಾತಿ ಅತಿಯಾದ ಕೆಲಸ ಮಾಡಲು ಬಯಸಿದಾಗ ಬೇಡ ಎಂದು ಹೇಳುವುದು ಬಹಳ ಮುಖ್ಯ. ಸಂಬಂಧದಲ್ಲಿ ಇದನ್ನು ಹೇಳಲು ನಿಮಗೆ ಸಾಧ್ಯವಾಗದಿದ್ದರೆ, ನೀವು ತುಂಬಾ ಟೊಳ್ಳಾದ ಬಂಧವನ್ನು ಹೊಂದಿದ್ದೀರಿ. ಅದು ಸಂಬಂಧ ಮುರಿಯುವ ಹಂತಕ್ಕೆ ಕೊಂಡೊಯ್ಯುತ್ತದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    ಸಂಗಾತಿಯ ಸುತ್ತವೇ ನಿಮ್ಮ ಪ್ರಪಂಚ
    ಈ ಮನೋಭಾವ ನಿಮ್ಮ ವ್ಯಕ್ತಿತ್ವದ ಅಭದ್ರತೆ ಮತ್ತು ಅವಿಶ್ವಾಸವಲ್ಲದೇ ಬೇರೇನೂ ಅಲ್ಲ. ಎಲ್ಲದಕ್ಕೂ ಸಂಗಾತಿಯ ಉಪಸ್ಥಿತಿಯನ್ನು ಬಯಸುವುದು, ಅವಲಂಬಿಸುವುದು ಸರಿಯಾದ ಕ್ರಮವಲ್ಲ. ಹೀಗೆ ಮಾಡುವುದರಿಂದ ಅವರ ಮೇಲೂ ಭಾರ ಎತ್ತಿಹಾಕಿ ಉಸಿರುಗಟ್ಟಿಸಿದಂತಾಗುತ್ತದೆ. ಕೆಲವೊಮ್ಮೆ ನಿಮ್ಮ ಭಾವನೆ, ಕಾರ್ಯಗಳ ಜವಾಬ್ದಾರಿಯನ್ನು ನೀವೇ ಹೊರಬೇಕು. ಸಂಗಾತಿ ಮೇಲೆ ಹೇರುವುದಲ್ಲ.

    ಭಾವನೆ ಇಲ್ಲದಿದ್ರೆ
    ಸಂಬಂಧ ಗಟ್ಟಿಯಾಗಿ ಉಳಿಯಬೇಕಾದರೆ ಭಾವನೆಗಳಿರಬೇಕು. ಕಾರ್ಯ ಕ್ಷೇತ್ರಗಳಲ್ಲಿ ಎಷ್ಟೇ ಯಶಸ್ಸು ಗಳಿಸಿದ್ದರೂ, ಭಾವನಾತ್ಮಕವಾಗಿ ಅಪಕ್ವವಾಗಿದ್ದರೆ ಅವರ ಸಂಬಂಧವು ಯಾವಾಗಲೂ ಅತೃಪ್ತಿಕರವಾಗಿರುತ್ತದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • ಜೀವನಶೈಲಿ ಹೇಗಿದ್ದರೆ ಸ್ತನ ಕ್ಯಾನ್ಸರ್‌ ಬರುತ್ತೆ ಗೊತ್ತಾ?

    ಜೀವನಶೈಲಿ ಹೇಗಿದ್ದರೆ ಸ್ತನ ಕ್ಯಾನ್ಸರ್‌ ಬರುತ್ತೆ ಗೊತ್ತಾ?

    ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟುವ ಅಥವಾ ಉಂಟುಮಾಡುವ ಯಾವುದೇ ನಿರ್ದಿಷ್ಟ ಆಹಾರವಿಲ್ಲ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಆದರೆ ಅತಿಯಾದ ಆಹಾರ ಸೇವನೆ, ಅಡುಗೆ ವಿಧಾನ, ಕುಡಿತವೂ ಸ್ತನ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗುತ್ತವೆ.

    ಸರಿಯಾದ ಆಹಾರ ಕ್ರಮದ ಬಗ್ಗೆ ಜ್ಞಾನ ಇದ್ದು, ಅದನ್ನು ಅನುಸರಿಸಿದರೆ ಸ್ತನ ಕ್ಯಾನ್ಸರ್‌ ಅಪಾಯವನ್ನು ನಿಯಂತ್ರಿಸಬಹುದು. ವೈದ್ಯಕೀಯ ಚಿಕಿತ್ಸೆಗಿಂತಲೂ ಈ ಕ್ರಮ ಉತ್ತಮವಾಗಿದೆ. ಕೇವಲ ಆಹಾರ ಕ್ರಮವಷ್ಟೇ ಅಲ್ಲ, ಉತ್ತಮ ಜೀವನಶೈಲಿ ಕೂಡ ಸ್ತನ ಕ್ಯಾನ್ಸರ್‌ ತಡೆಗಟ್ಟುವಿಕೆಗೆ ಸಹಕಾರಿಯಾಗುತ್ತದೆ. ಇದನ್ನೂ ಓದಿ: ಎಕ್ಕದ ಗಿಡದಿಂದ ಆರೋಗ್ಯಕ್ಕೆ ಸಿಗುತ್ತೆ ಹಲವಾರು ಪ್ರಯೋಜನ

    1) ಆರೋಗ್ಯಕರ ಆಹಾರ
    ವೈದ್ಯರು ಹಣ್ಣುಗಳು, ತರಕಾರಿ ಮತ್ತು ಪ್ರೊಟೀನ್‌ಯುಕ್ತ ಆಹಾರವನ್ನು ಶಿಫಾರಸು ಮಾಡುತ್ತಾರೆ. ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವಿರುವ ಆಹಾರ ಪದಾರ್ಥಗಳ ಸೇವನೆಯಿಂದ ದೂರ ಇರುವಂತೆ ಸಲಹೆ ನೀಡುತ್ತಾರೆ.

    ಸೊಪ್ಪು ಮತ್ತು ಮೆಡಿಟರೇನಿಯನ್ ಆಹಾರಗಳು ಉರಿಯೂತದ ಮತ್ತು ದೇಹದಲ್ಲಿ ಮಾರಣಾಂತಿಕ ಕೋಶಗಳ ಬೆಳವಣಿಗೆಯನ್ನು ನಿಗ್ರಹಿಸುವ ಗುಣಲಕ್ಷಣಗಳ ಮೂಲಕ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಫೈಬರ್ ಆಹಾರಗಳು ಮತ್ತು ಹಣ್ಣುಗಳು, ತರಕಾರಿಗಳು, ಆಲಿವ್ ಅಥವಾ ಮೀನಿನ ಎಣ್ಣೆಯಂತಹ ಕೊಬ್ಬಿನಾಮ್ಲಗಳನ್ನು ಹೊಂದಿರುವ ಆಹಾರಗಳು, ಈಸ್ಟ್ರೊಜೆನ್ ಮತ್ತು ಇನ್ಸುಲಿನ್ ಹಾಗೂ ದೀರ್ಘಕಾಲದ ಉರಿಯೂತ ಉಂಟುಮಾಡುವ ಇತರ ಅಂಶಗಳಂತಹ ಹಾರ್ಮೋನುಗಳನ್ನು ಕಡಿಮೆ ಮಾಡುವ ಮೂಲಕ ರಕ್ಷಣಾತ್ಮಕ ಪಾತ್ರ ನಿರ್ವಹಿಸುತ್ತವೆ.

    2) ಆಲ್ಕೋಹಾಲ್‌ ಸೇವನೆಯಿಂದ ಸ್ತನ ಕ್ಯಾನ್ಸರ್‌ ಹೆಚ್ಚಳ
    ಹೆಚ್ಚು ಆಲ್ಕೋಹಾಲ್ ಸೇವನೆಯಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಮದ್ಯವು ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸಬಹುದು. ಇದು ಸ್ತನ ಅಂಗಾಂಶದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಅಮೆರಿಕದ ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ ಅಧ್ಯಯನದ ಪ್ರಕಾರ, ಆಲ್ಕೋಹಾಲ್‌ ಸೇವಿಸುವವರ ಪೈಕಿ ಹೆಚ್ಚಿನ ಮಂದಿ ಸ್ತನ ಕ್ಯಾನ್ಸರ್‌ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಗೋಡಂಬಿ ತಿನ್ನಲು ಎಷ್ಟು ರುಚಿಕರವೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು

    3) ಈ ಅಡುಗೆ ವಿಧಾನವೂ ಅಪಾಯಕಾರಿ
    ಆಹಾರವನ್ನು ಬೇಯಿಸುವ ವಿಧಾನವು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ. ಅಮೆರಿಕನ್ ಇನ್‌ಸ್ಟಿಟ್ಯೂಟ್ ಫಾರ್ ಕ್ಯಾನ್ಸರ್ ರಿಸರ್ಚ್ ಪ್ರಕಾರ, ಮಾಂಸ, ಕೋಳಿ ಅಥವಾ ಮೀನುಗಳನ್ನು ಸುಡುವುದು ಹೆಟೆರೋಸೈಕ್ಲಿಕ್ ಅಮೈನ್‌ಗಳು ಅಥವಾ ಎಚ್‌ಸಿಎಗಳ ರಚನೆಗೆ ಕಾರಣವಾಗಬಹುದು. ಇದರಿಂದ ಕ್ಯಾನ್ಸರ್‌ ಸಮಸ್ಯೆ ಎದುರಾಗಬಹುದು ಎಂದಿದೆ. ಆಹಾರವನ್ನು ಸುಡುವ ಬದಲು, ಬೇಯಿಸಿ ತಿನ್ನುವುದು ಉತ್ತಮ.

    4) ತೂಕ ಹೆಚ್ಚಳದಿಂದ ಸಮಸ್ಯೆ
    ಅಧಿಕ ತೂಕವು ನಿಮ್ಮ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನು ಹಲವಾರು ವೈದ್ಯಕೀಯ ಅಧ್ಯಯನಗಳು ದೃಢಪಡಿಸಿವೆ. ವಯಸ್ಕರಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯ. ದೇಹ ತೂಕ ಹೆಚ್ಚಳದಿಂದ ಕ್ಯಾನ್ಸರ್‌ ಸಮಸ್ಯೆ ಎದುರಾಗಬಹುದು.

    5) ವ್ಯಾಯಾಮದಿಂದ ಸ್ತನ ಕ್ಯಾನ್ಸರ್‌ ನಿಯಂತ್ರಣ ಸಾಧ್ಯ
    ಸ್ತನ ಕ್ಯಾನ್ಸರ್ ನಿಯಂತ್ರಣದಲ್ಲಿಡಲು ವ್ಯಾಯಾಮ ಉತ್ತಮ ಮಾರ್ಗವಾಗಿದೆ. ಹೆಚ್ಚಿನ ತೂಕ ಇರುವವರು ವ್ಯಾಯಾಮದ ಮೂಲಕ ತೂಕ ಇಳಿಸಿಕೊಳ್ಳಬಹುದು. ಅಧಿಕ ತೂಕದಿಂದ ಬರುವ ಸ್ತನ ಕ್ಯಾನ್ಸರ್ ಅಪಾಯವನ್ನು ವ್ಯಾಯಾಮದ ಮೂಲಕ ನಿಯಂತ್ರಿಸಬಹುದು. ವ್ಯಾಯಾಮದಲ್ಲಿ ಸಕ್ರಿಯರಾಗಿದ್ದರೆ ರಕ್ತದ ಈಸ್ಟ್ರೊಜೆನ್ ಮಟ್ಟ ಕಡಿಮೆಯಾಗಲು ಸಹಾಯವಾಗುತ್ತದೆ. ಅದು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸಂಶೋಧನೆಯ ಪ್ರಕಾರ, ನಿಯಮಿತ ವ್ಯಾಯಾಮವನ್ನು ಮಾಡುವ ಮಹಿಳೆಯರು ಸಕ್ರಿಯವಾಗಿರದ ಮಹಿಳೆಯರಿಗಿಂತ 10-20 ಪ್ರತಿಶತದಷ್ಟು ಕಡಿಮೆ ಸ್ತನ ಕ್ಯಾನ್ಸರ್ ಅಪಾಯವನ್ನು ಹೊಂದಿರುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    ಜೀವನದಲ್ಲಿ ಖುಷಿಯನ್ನು ಯಾರು ಬಯಸಲ್ಲ ಹೇಳಿ? ಹ್ಯಾಪಿ ಜೀವನ ನಡೆಸುವುದೆಂದರೆ ಎಲ್ಲರಿಗೂ ಇಷ್ಟ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ನೋವು, ಕಹಿ ನೆನಪುಗಳು, ಒತ್ತಡ ಇರಬಾರದು ಅಂತಾ ಬಯಸುತ್ತಾರೆ. ಸದಾ ಖುಷಿಯಾಗಿರಬೇಕು ಅಂತಾ ಆಶಿಸುತ್ತಾರೆ.

    ಕೆಲವರಂತೂ ಸದಾ ಸಂತೋಷವಾಗಿ ಇರುತ್ತಾರೆ. ತಮ್ಮ ಹ್ಯಾಪಿ ಲೈಫ್‌ ಮೂಲಕ ಇತರರಿಗೂ ಇಷ್ಟ ಆಗುತ್ತಾರೆ. ಈ ರೀತಿ ಇರುವವರಲ್ಲಿ ಕೆಲವು ವಿಶೇಷ ಗುಣಗಳಿರುತ್ತವೆ. ಆ ರಹಸ್ಯ ಗುಣಗಳೇನು ಗೊತ್ತಾ? ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    1) ಖುಷಿ ಹುಡುಕುವಂಥದ್ದಲ್ಲ
    ನೀವು ಖುಷಿಯನ್ನು ಹುಡುಕಲು ಹೊರಟರೆ, ಖಂಡಿತ ಅದು ನಿಮಗೆ ಸಿಗುವುದಿಲ್ಲ. ಖುಷಿಗಾಗಿ ಹುಡಕಾಟ ನಡೆಸುವ ನೀವು ಎಷ್ಟು ಅತೃಪ್ತ ಭಾವನೆ ಹೊಂದಿದ್ದೀರಿ ಎಂಬುದು ಗೊತ್ತಾಗುತ್ತದೆ. ಸದಾ ಹ್ಯಾಪಿಯಾಗಿ ಇರುವವರು ಎಂದಿಗೂ ಖುಷಿಯಾಗಿ ಹುಡುಕಾಟ ನಡೆಸುವುದಿಲ್ಲ.

    2) ಸದಾ ಇತರರೊಂದಿಗೆ ಬೆರೆಯುವುದು
    ಖುಷಿಯಾಗಿರುವವರು ಎಂದಿಗೂ ಒಬ್ಬಂಟಿಯಾಗಿರಲು ಬಯಸುವುದಿಲ್ಲ. ಇತರರೊಂದಿಗೆ ಸದಾ ಬೆರೆಯುತ್ತಾರೆ. ಜನರ ಸಂಪರ್ಕದಲ್ಲಿರಲು ಇಷ್ಟ ಪಡುತ್ತಾರೆ. ಮನುಷ್ಯ ಒಂಟಿಯಾಗಿದ್ದರೆ ಮನಸ್ಸಿನಲ್ಲಿ ನಾನಾ ಯೋಚನೆ, ಚಿಂತೆ ಮೂಡುತ್ತದೆ ಎನ್ನುತ್ತಾರೆ ಮನೋವೈದ್ಯರು. ಇತರರೊಂದಿಗೆ ಬೆರೆತಾಗ ಚಿಂತೆಗೆ ಅವಕಾಶ ಇರಲ್ಲ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    3) ಸಮಸ್ಯೆಗಳತ್ತ ಗಮನ ಹರಿಸದಿರುವುದು
    ಹಸನ್ಮುಖಿಗಳು ಸಮಸ್ಯೆಗಳನ್ನು ಪರಿಹರಿಸುವತ್ತ ಯಾವಾಗಲೂ ಗಮನಹರಿಸುವುದಿಲ್ಲ. ಅವರು ಚಲನಶೀಲ ಮನೋಭಾವ ಹೊಂದಿರುತ್ತಾರೆ. ತಮ್ಮ ತಪ್ಪುಗಳಿಗಾಗಿ ಪೂರ್ಣ ಹೃದಯದಿಂದ ಕ್ಷಮೆಯಾಚಿಸುತ್ತಾರೆ. ಯಾವ ವಿಷಯವನ್ನೂ ದೊಡ್ಡದು ಮಾಡಿಕೊಳ್ಳಲು ಹೋಗುವುದಿಲ್ಲ.

    4) ಎಲ್ಲಾ ವಿಷಯಗಳನ್ನೂ ಲಘುವಾಗಿಯೇ ಪರಿಗಣಿಸುವುದು
    ಯಾವಾಗಲೂ ಖುಷಿಯಾಗಿರಬೇಕು, ಚಿಂತೆಯಿರಬಾರದು ಎಂದು ಬಯಸುವವರು ಯಾವ ವಿಷಯವನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಎಲ್ಲವನ್ನೂ ಲಘುವಾಗಿಯೇ ಸ್ವೀಕರಿಸುತ್ತಾರೆ. ಜೀವನದಲ್ಲಿ ಕಷ್ಟಕರ ಸಂದರ್ಭಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಯಾವಾಗಲೂ ಸಕಾರಾತ್ಮಕ ಹಾದಿಯಲ್ಲೇ ನಡೆಯಲು ಪ್ರಯತ್ನಿಸುತ್ತಾರೆ.

    5) ತಮ್ಮ ನ್ಯೂನತೆ, ಅಪೂರ್ಣತೆ ಬಗ್ಗೆ ಚಿಂತಿಸದಿರುವುದು
    ಜೀವನದಲ್ಲಿ ಸಂತೋಷವಾಗಿರಬೇಕು ಎನ್ನುವವರು ತಮ್ಮ ಸ್ವಂತ ನ್ಯೂನತೆ ಮತ್ತು ಅಪೂರ್ಣತೆಗಳ ಬಗ್ಗೆ ಎಂದಿಗೂ ಚಿಂತಿಸುವುದಿಲ್ಲ. ಗೇಲಿ ಮನೋಭಾವದವರಾಗಿರುತ್ತಾರೆ. ಎಲ್ಲಾ ನಕಾರಾತ್ಮಕತೆಯನ್ನು ಜೀವನದ ಭಾಗವಾಗಿ ಸ್ವೀಕರಿಸುತ್ತಾರೆ.

    Live Tv
    [brid partner=56869869 player=32851 video=960834 autoplay=true]

  • ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    ಕ್ಕಳದ್ದು ಯಾವಾಗಲೂ ಹುಡುಗಾಟಿಕೆಯ ಸ್ವಭಾವ. ಇದು ಪೋಷಕರು, ನೆರೆಹೊರೆಯವರಿಗೆ ಒಮ್ಮೊಮ್ಮೆ ಕಿರಿಕಿರಿ ಅನಿಸಬಹುದು. ಮಕ್ಕಳು ಪೋಷಕರಿಗೆ ಪ್ರೀತಿಪಾತ್ರರಾಗಿರುತ್ತಾರೆ. ಅಷ್ಟೇ ತಲೆನೋವಾಗಿಯೂ ಪರಿಣಮಿಸುತ್ತಾರೆ. ಆಗ ಮಕ್ಕಳಿಗೆ ಹೊಡೆಯುವುದು, ಗದರಿಸುವುದು ಇದ್ದೇ ಇರುತ್ತದೆ. ಆದರೆ ಮಕ್ಕಳೊಂದಿಗೆ ಜಗಳವಾಡುವ ಮುನ್ನ ಹೆತ್ತವರು ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

    1) ಮಕ್ಕಳ ವ್ಯಕ್ತಿತ್ವವನ್ನು ದೂಷಿಸಬೇಡಿ
    ಪೋಷಕರಾಗಿ ನೀವು ತಿಳಿದಿರಬೇಕಾದ ಪ್ರಮುಖ ವಿಷಯವೆಂದರೆ, ನಿಮ್ಮ ಮಕ್ಕಳನ್ನು ಅರ್ಥಮಾಡಿಕೊಳ್ಳುವುದು. ನಿಮ್ಮ ಮಕ್ಕಳು ಬೆಳೆದು ಪ್ರಬುದ್ಧರಾದಾಗ ಅವರ ಪರಿಣಾಮಕಾರಿ ಮಾರ್ಗದರ್ಶಿ ಮತ್ತು ಪೋಷಕರಾಗಲು ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ಅವರಲ್ಲಿ ವಿಶಿಷ್ಟ ವ್ಯಕ್ತಿತ್ವದ ಲಕ್ಷಣವಿದೆ ಎಂಬುದನ್ನು ನೆನಪಿನಲ್ಲಿಡಿ. ಆ ವ್ಯಕ್ತಿತ್ವ ಮಕ್ಕಳ ಜೀವನದುದ್ದಕ್ಕೂ ಇರುತ್ತದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    2) ಮಕ್ಕಳ ಭಾವನೆ ಅರಿಯಿರಿ
    ಕೆಲವೊಮ್ಮೆ ಭಾವನೆಗಳನ್ನು ಗುರುತಿಸಲು ಕಷ್ಟವಾಗಬಹುದು. ನಿಮ್ಮ ಮಕ್ಕಳ ಆಂಗಿಕ ಭಾಷೆಯನ್ನು ನೋಡಿ. ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಆಲಿಸಿ. ಅವರು ಹೇಗೆ ಭಾವಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರ ನಡವಳಿಕೆಯನ್ನು ಗಮನಿಸಿ. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಿ. ಅವರ ಭಾವನೆಗಳನ್ನು ಒಪ್ಪಿಕೊಳ್ಳಿ.

    3) ಮಕ್ಕಳೊಂದಿಗೆ ವಾದಕ್ಕಿಳಿಯುವುದು ಸರಿಯಲ್ಲ
    ಮಕ್ಕಳು ಕೆಲವೊಮ್ಮೆ ತಿಳಿಯದೇ ತಪ್ಪು ಮಾಡುವುದು ಸಹಜ. ಇದನ್ನು ಹೆತ್ತವರು ಅರಿಯಬೇಕು. ಮಕ್ಕಳೊಂದಿಗೆ ಎಲ್ಲಾ ಸಂದರ್ಭದಲ್ಲೂ ವಾದಕ್ಕಿಳಿಯುವುದು ಸರಿಯಲ್ಲ. ವಾದ, ಪ್ರತಿವಾದ ಮನಸ್ಸುಗಳ ಮೇಲೆ ದುಷ್ಪರಿಣಾಮ ಬೀರಬಹುದು.

    4) ಮಕ್ಕಳನ್ನು ಸಹಿಸಿಕೊಳ್ಳುವ ಗುಣ ಬೇಕು
    ಕೆಲವೊಂದು ಸಂದರ್ಭದಲ್ಲಿ ಮಕ್ಕಳನ್ನೂ ಸಹಿಸಿಕೊಳ್ಳುವ ಗುಣವನ್ನು ಹೆತ್ತವರು ಪ್ರದರ್ಶಿಸಬೇಕು. ಸಣ್ಣ ಪುಟ್ಟ ತಪ್ಪುಗಳಿಗೆ ತಾಳ್ಮೆ ಕಳೆಕೊಳ್ಳದೇ ಮಕ್ಕಳನ್ನು ಮನ್ನಿಸಬೇಕು. ತಾಳ್ಮೆ, ಸಹನೆಯಿಂದ ಅವರಿಗೆ ಬುದ್ದಿಮಾತು ಹೇಳಿದರೆ ಖಂಡಿತಾ ದಾರಿಗೆ ಬರುತ್ತಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಪೈಲ್ವಾನ್‌ಗಳು: ಎನು ಇದು ಹೊಸ ಟ್ವಿಸ್ಟ್

    5) ಮಕ್ಕಳ ಬಾಯಿ ಮುಚ್ಚಿಸಲು ಪ್ರಯತ್ನಿಸಬೇಡಿ
    ಮಕ್ಕಳು ವಾದ ಮಾಡುವುದು ಸರಿಯಲ್ಲ. ಅವರಿಂದ ನಾವು ಕಲಿಯುವುದೇನೂ ಇಲ್ಲ ಎಂದು ಪೋಷಕರು ಭಾವಿಸಬಾರದು. ಮಕ್ಕಳು ನಿರಂತರವಾಗಿ ಕಲಿಯುತ್ತಾ, ವಿಕಾಸಗೊಳ್ಳುತ್ತಿರುತ್ತಾರೆ. ನಿಮ್ಮ ಮಕ್ಕಳಲ್ಲಿ ಬದಲಾವಣೆ ಬಯಸುವ ಮೊದಲು ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ. ಸಂವಹನ ಮಾಡಲು ಉತ್ತಮ ಮಾರ್ಗವನ್ನು ಕಂಡುಹಿಡಿಯಲು, ನಿಮ್ಮ ದೃಷ್ಟಿಕೋನ ಬದಲಾಯಿಸಲು ನೀವು ಸಿದ್ಧರಾಗಿರಬೇಕು. ಅದನ್ನು ಸಾಧಿಸುವ ಪ್ರಯತ್ನಿಸದ ಹೊರತು ಏನೂ ಆಗುವುದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಮೂಡ್‌ ಸರಿಯಾಗಿಲ್ವಾ.. ಖಿನ್ನತೆ ಹೋಗಲಾಡಿಸಲು ಆಹಾರದಲ್ಲೂ ಇದೆ ಮದ್ದು

    ಮೂಡ್‌ ಸರಿಯಾಗಿಲ್ವಾ.. ಖಿನ್ನತೆ ಹೋಗಲಾಡಿಸಲು ಆಹಾರದಲ್ಲೂ ಇದೆ ಮದ್ದು

    ನುಷ್ಯ ಯಾವಾಗಲೂ ಖುಷಿಯಾಗಿರಲು ಸಾಧ್ಯವಿಲ್ಲ. ಪರಿಸ್ಥಿತಿಗಳು ಒಮ್ಮೊಮ್ಮೆ ಮನಸ್ಸಿಗೆ ಖಿನ್ನತೆಯನ್ನುಂಟು ಮಾಡುವುದು ಸಹಜ. ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ, ಅಂದುಕೊಂಡಿದ್ದು ಆಗದೇ ಇದ್ದಾಗ ಮಾನಸಿಕವಾಗಿ ಕುಗ್ಗುತ್ತೇವೆ. ನಮ್ಮ ಮೂಡ್‌ ಸರಿಯಾಗಿಲ್ಲ ಎಂದರೆ, ಯಾವ ಕೆಲಸ ಕಾರ್ಯದಲ್ಲೂ ಆಸಕ್ತಿ ಇರುವುದಿಲ್ಲ. ಮಾನಸಿಕ ಖಿನ್ನತೆಯು ದೇಹದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

    ಖಿನ್ನತೆಯ ಸಂದರ್ಭದಲ್ಲಿ ಮನಸ್ಸನ್ನು ಸಹಜ ಸ್ಥಿತಿಗೆ ತಂದು ಉಲ್ಲಾಸಭರಿತವಾಗಿರಲು ಕೆಲವು ದೈಹಿಕ ಚಟುವಟಿಕೆಗಳು ಇವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮಾನಸಿಕ ಖಿನ್ನತೆಯಿಂದ ಹೊರಬರಲು ಆಹಾರ ಕ್ರಮವೂ ಸಹಕಾರಿಯಾಗುತ್ತೆ ಎಂಬುದು ಎಷ್ಟೋ ಮಂದಿಗೆ ಗೊತ್ತೇ ಇರಲ್ಲ. ನೀವು ಖುಷಿಯಾಗಿರಬೇಕೆ? ನಿತ್ಯ ಒಳ್ಳೆ ಮೂಡ್‌ನಲ್ಲಿರಬೇಕೆ? ಹಾಗಾದರೆ ಈ ಆಹಾರ ಕ್ರಮವನ್ನು ರೂಢಿಸಿಕೊಳ್ಳಿ. ಇದನ್ನೂ ಓದಿ: ಹೊಟ್ಟೆನೋವಿಗೆ ಈ ಮನೆ ಮದ್ದು ರಾಮಬಾಣ

    ವಾಲ್‌ನಟ್‌ (Walnuts)
    ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ದೇಹಕ್ಕೆ ಪೋಷಕಾಂಶಗಳು ಅಗತ್ಯ.‌ ಅದಕ್ಕಾಗಿ ವಾಲ್‌ನಟ್ ಸೇವನೆ ತುಂಬಾ ಸಹಕಾರಿ. ಒಮೆಗಾ -3 ಕೊಬ್ಬಿನಾಮ್ಲವನ್ನು ಇದು ಒಳಗೊಂಡಿದೆ. ಬ್ರಿಟಿಷ್ ಜರ್ನಲ್ ಆಫ್ ಸೈಕಿಯಾಟ್ರಿಯಲ್ಲಿ ಪ್ರಕಟವಾದ ಅಧ್ಯಯನವು ಇದನ್ನು ಉಲ್ಲೇಖಿಸಿದೆ. ಮಾನಸಿಕ ಅಸ್ವಸ್ಥತೆಯನ್ನು ನಿಯಂತ್ರಿಸಲು ವಾಲ್‌ನಟ್‌ ಸೇವನೆ ಉತ್ತಮ.

    ​ಚಿಯಾ ಬೀಜಗಳು (Chia Seeds)
    ಮಾನಸಿಕ ಆರೋಗ್ಯವನ್ನು ಸುಧಾರಿಸಲು, ನೀವು ಚಿಯಾ ಬೀಜಗಳನ್ನು ಸೇವಿಸಬೇಕು. ಇದು ಒಮೆಗಾ-3 ಕೊಬ್ಬಿನಾಮ್ಲಗಳು, ಅಮೈನೋ ಆಮ್ಲಗಳು, ಕಬ್ಬಿಣ ಮತ್ತು ವಿಟಮಿನ್ ಬಿ ನಂತಹ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಮೆದುಳಿನಲ್ಲಿ ರಾಸಾಯನಿಕಗಳ ಉತ್ಪಾದನೆಯನ್ನು ಸರಿಯಾಗಿ ಮಾಡುತ್ತದೆ. ಇದರಿಂದಾಗಿ ಮನಸ್ಥಿತಿಯು ಉತ್ತಮವಾಗುತ್ತದೆ.

    ​ಡಾರ್ಕ್‌ ಚಾಕೊಲೇಟ್‌ (Dark Chocolate)
    ಈಗಿನ ಕಾಲದಲ್ಲಿ ಚಾಕೊಲೇಟ್‌ ಯಾರಿಗೆ ಇಷ್ಟವಿಲ್ಲ ಹೇಳಿ? ಮನಸ್ಸನ್ನು ರಿಫ್ರೆಶ್‌ ಮಾಡಲು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಚಾಕೊಲೇಟ್‌ ತಿನ್ನಿ ಎಂದು ಮನೋವೈದ್ಯರು ಶಿಫಾರಸು ಮಾಡುತ್ತಾರೆ. ಮಧುಮೇಹ ಇಲ್ಲದವರು ಮಾನಸಿಕ ಖಿನ್ನತೆಯಿಂದ ದೂರ ಉಳಿಯಲು ಡಾರ್ಕ್‌ ಚಾಕೊಲೇಟ್‌ ಸೇವಿಸಬಹುದು. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    ಅಣಬೆ (Mushrooms)
    ಅಣಬೆಗಳು ನಿಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಎಂಬುದಕ್ಕೆ ಎರಡು ಉತ್ತಮ ಕಾರಣಗಳು ಇವೆ. ಒಂದು, ಅಣಬೆಯಲ್ಲಿರುವ ಪೋಷಕಾಂಶ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಮಾನಸಿಕ ಆರೋಗ್ಯ ಸುಧಾರಿಸಬಹುದು.

    ​ಸಿಹಿ ಗೆಣಸು (Sweet Potato)
    ಸಿಹಿ ಗೆಣಸಿನಲ್ಲಿ ಕಾರ್ಬೋಹೈಡ್ರೇಟ್‌ಗಳಂತಹ ಪೋಷಕಾಂಶಗಳಿಂದ ತುಂಬಿದೆ. ಒತ್ತಡವನ್ನು ನಿವಾರಿಸಲು ನೀವು ಸಿಹಿ ಗೆಣಸು ತಿನ್ನಬಹುದು. ಸಿಹಿ ಗೆಣಸು ಖಿನ್ನತೆಯನ್ನು ತಡೆಯುವುದಲ್ಲದೆ, ಆತಂಕವನ್ನು ಹೋಗಲಾಡಿಸುವ ಪೋಷಕಾಂಶಗಳನ್ನು ಹೊಂದಿದೆ.

    Live Tv
    [brid partner=56869869 player=32851 video=960834 autoplay=true]