Tag: ಲೈನ್ ಮ್ಯಾನ್

  • ಕರೆಂಟ್​ ಶಾಕ್​ನಿಂದ ಜೀವ ಕಳೆದುಕೊಂಡಿದ್ದ ಕಾರ್ಮಿಕ – ರಹಸ್ಯವಾಗಿ ಶವ ಹೂತಿಟ್ಟ ಲೈನ್​ಮ್ಯಾನ್ ಅರೆಸ್ಟ್‌!

    ಕರೆಂಟ್​ ಶಾಕ್​ನಿಂದ ಜೀವ ಕಳೆದುಕೊಂಡಿದ್ದ ಕಾರ್ಮಿಕ – ರಹಸ್ಯವಾಗಿ ಶವ ಹೂತಿಟ್ಟ ಲೈನ್​ಮ್ಯಾನ್ ಅರೆಸ್ಟ್‌!

    – ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಶಾಂಕಿಂಗ್ ಪ್ರಕರಣ

    ಚಿಕ್ಕಬಳ್ಳಾಪುರ: ಕರೆಂಟ್​ ಶಾಕ್​ನಿಂದ (Electric Shock) ಜೀವ ಕಳೆದುಕೊಂಡಿದ್ದ ಕಾರ್ಮಿಕನ ಮೃತದೇಹವನ್ನ ರಹಸ್ಯವಾಗಿ ಹೂತಿಟ್ಟು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದ ಲೈನ್​ ಮ್ಯಾನ್ (Lineman) ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ನಡೆದಿದೆ

    ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ನಿವಾಸಿ ರವಿ (33) ಮೃತ ಕಾರ್ಮಿಕ. ಇನ್ನೂ ಚಂದ್ರಕುಮಾರ್ ಎಂಬ ಲೈನ್ ಮ್ಯಾನ್ ಕೃತ್ಯ ಮಾಡಿದವ. ಇದನ್ನೂ ಓದಿ: ಹಾಸನ | ಕಂಠಪೂರ್ತಿ ಕುಡಿದು ಪತ್ನಿಗೆ ಚಾಕು ಇರಿದು ಕೊಂದ ಪತಿ

    ವಿದ್ಯುತ್ ಕೆಲಸಕ್ಕೆ ಅಂತ ಕಾರ್ಮಿಕನನ್ನ (Labour) ಕರೆದೊಯ್ದ ಲೈನ್‌ಮ್ಯಾನ್ ಆತ ಆಕಸ್ಮಿಕವಾಗಿ ವಿದ್ಯುತ್ ಹರಿದು ಕಂಬದಲ್ಲೇ ಮೃತಪಟ್ಟಿ‌ದ್ದಾನೆ. ನಂತರ ಆತನ ಮೃತದೇಹವನ್ನ ಅಲ್ಲೇ ಸಮೀಪದ ಕೆರೆಯಂಗಳದ ಕಾಲುವೆಯಲ್ಲಿ ರಹಸ್ಯವಾಗಿ ಹೂತು ಹಾಕಿ ಪ್ರಕರಣವನ್ನ ಮುಚ್ಚಿ ಹಾಕಲು ಯತ್ನಿಸಿದ್ದ. ಇದನ್ನೂ ಓದಿ: Bengaluru | ಮನೆಯ ಎರಡನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

    ಸೋಮವಾರ ಮೇಡಿಮಾಕಲಹಳ್ಳಿ ಕ್ರಾಸ್ ಬಳಿ ಇರುವ ಕೋಳಿ ಫಾರಂವೊಂದರ ಸಮೀಪ ವಿದ್ಯುತ್ ದುರಸ್ಥಿಗೆ ಕೆಲಸಕ್ಕೆ ಕಾರ್ಮಿಕ ರವಿಯನ್ನ ಕರೆದೊಯ್ದಿದ್ದಾನೆ. ಆದ್ರೆ ಆತ ಕಂಬದಲ್ಲಿ ಇರುವಾಗಲೇ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾನೆ. ಘಟನೆಯಿಂದ ಹೆದರಿದ ಚಂದ್ರಕುಮಾರ್ ಯಾರಿಗೂ ತಿಳಿಯದಂತೆ ರವಿ ಮೃತದೇಹವನ್ನ ಅಲ್ಲೇ ಬಂದಾರ್ಲಹಳ್ಳಿ ಕೆರೆಯಂಗಳದಲ್ಲಿ ಹೂತು ಹಾಕಿದ್ದಾನೆ‌.

    ಇನ್ನೂ ರವಿ ಮನೆಯವರು ರವಿ ಕಾಣೆಯಾದ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಲೈನ್ ಮ್ಯಾನ್ ಚಂದ್ರಕುಮಾರ್ ನನ್ನ ಬಂಧಿಸಿದ್ದಾರೆ. ಇನ್ನೂ ಮೃತದೇಹ ಹೂತ ಜಾಗ ತೋರಿಸಿದ್ದು ಮೃತದೇಹ ಹೊರತೆಗೆಯಲು ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ಕಾರು, ಬೈಕ್‌ ಮುಖಾಮುಖಿ ಡಿಕ್ಕಿ – ಮದುವೆ ನಿಶ್ಚಯವಾಗಿದ್ದ ಜೋಡಿ ದುರ್ಮರಣ

  • ಸೆನ್ಸಾರ್ ಪಾಸಾದ ‘ಲೈನ್ ಮ್ಯಾನ್’ಗೆ ಸಿಕ್ತು ಯು ಸರ್ಟಿಫಿಕೇಟ್

    ಸೆನ್ಸಾರ್ ಪಾಸಾದ ‘ಲೈನ್ ಮ್ಯಾನ್’ಗೆ ಸಿಕ್ತು ಯು ಸರ್ಟಿಫಿಕೇಟ್

    ಭಿನ್ನ, ಡಿಯರ್ ಸತ್ಯ (Dear Sathya Film) ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯ ಮೂರನೇ ಕೊಡುಗೆ ಲೈನ್ ಮ್ಯಾನ್ ಸಿನಿಮಾ. ಟಕ್ಕರ್ ಹಾಗೂ ರನ್ ಆಂಟೋನಿ ಚಿತ್ರ ನಿರ್ದೇಶಿಸಿದ್ದ, ರಘು ಶಾಸ್ತ್ರಿ ಈ ಚಿತ್ರದ ಸಾರಥಿ. ಈಗಾಗಲೇ ಶೂಟಿಂಗ್ ಮುಗಿಸಿರುವ ಲೈನ್ ಮ್ಯಾನ್  (Line Man) ಸೆನ್ಸಾರ್ ಪಾಸಾಗಿದ್ದು, ಯು ಸರ್ಟಿಫಿಕೇಟ್ ಸಿಕ್ಕಿದೆ.

    ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ನಿರ್ಮಿಸುತ್ತಿರುವ ಲೈನ್ ಮ್ಯಾನ್ ಸಿನಿಮಾಗೆ ತ್ರಿಗುಣ್ ನಾಯಕ. ಆರ್‌ಜಿವಿ (RGV) ನಿರ್ದೇಶನದ ತೆಲುಗಿನ ಕೊಂಡ (Konda) ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತ್ರಿಗುಣ್ (Trigun)  ಈಗ ಕನ್ನಡ ಚಿತ್ರರಂಗಕ್ಕೆನಾಯಕನಾಗಿ ಚೊಚ್ಚಲ ಹೆಜ್ಜೆ ಇಡ್ತಿದ್ದಾರೆ. ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸಿದ್ದು, ಹಿರಿಯ ನಟಿ ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದ್ದಾರೆ. ಇದನ್ನೂ ಓದಿ:‘ಕ್ಯಾಡ್ಬರಿಸ್’ ಸಿನಿಮಾದಲ್ಲಿ ಸೋನು ಗೌಡ- ಪೋಸ್ಟರ್ ಔಟ್

    ಹಳ್ಳಿ ಕಡೆ ದಿನಾ ಬೀದಿ ದೀಪ ಹಾಕುವ, ಅರಿಸುವ ಹಾಗೂ ವಿದ್ಯುತ್ ಸಂಬಂಧಿಸಿ ತೊಂದರೆ ಸರಿಪಡಿಸುವ ಲೈನ್ ಮ್ಯಾನ್ ಸುತ್ತ ಈ ಕಥೆ ನಡೆಯಲಿದೆ. ತ್ರಿಗುಣ್ ಲೈನ್ ಮ್ಯಾನ್ ಪಾತ್ರದಲ್ಲಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಘು ಶಾಸ್ತ್ರಿ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ. ಚಾಮರಾಜನಗರ ಚಂದಕವಾಡಿ ಶೂಟಿಂಗ್ ನಡೆಸಲಾಗಿದ್ದು, ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಚಿತ್ರ ತಯಾರಾಗಿದೆ. ಸೆನ್ಸಾರ್ ಪಾಸಾಗಿರುವ ಲೈನ್ ಮ್ಯಾನ್ ಸದ್ಯದಲ್ಲೇ ತೆರೆಗೆ ಬರಲಿದೆ.

    ತೆಲುಗು (Tollywood) ಸಿನಿಮಾ ಮೂಲಕ ತ್ರಿಗುಣ್ ಗುರುತಿಸಿಕೊಂಡಿದ್ದಾರೆ. ಲೈನ್ ಮ್ಯಾನ್ ಸಿನಿಮಾ ಈಗ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಕನ್ನಡ ಸಿನಿಪ್ರೇಕ್ಷಕರ ಮನ ಗೆಲುತ್ತಾರಾ ತ್ರಿಗುಣ್ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿದ್ಯುತ್ ಸ್ಪರ್ಶಿಸಿ ಬೆಸ್ಕಾಂ ಲೈನ್‍ಮ್ಯಾನ್ ಸಾವು- ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

    ವಿದ್ಯುತ್ ಸ್ಪರ್ಶಿಸಿ ಬೆಸ್ಕಾಂ ಲೈನ್‍ಮ್ಯಾನ್ ಸಾವು- ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

    ರಾಮನಗರ: ವಿದ್ಯುತ್ ಸ್ಪರ್ಶಿಸಿ ಬೆಸ್ಕಾಂ ಲೈನ್ ಮ್ಯಾನ್ (BESCOM Lineman) ಸಾವನ್ನಪ್ಪಿರುವ ಘಟನೆ ಮಾಗಡಿ ತಾಲೂಕಿನ ಕಳ್ಳಿಪಾಳ್ಯ ಗ್ರಾಮದಲ್ಲಿ ನಡೆದಿದೆ.

    ತಾಲೂಕಿನ ಮುದ್ದೆ ಬಿಹಾಳ ಗ್ರಾಮದ ನಿವಾಸಿ ಬೆಸ್ಕಾಂ ಲೈನ್ ಮ್ಯಾನ್ ಶರಣ ಬಸಪ್ಪ (30) ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಕಳ್ಳಿಪಾಳ್ಯ ಗ್ರಾಮದ ವಿದ್ಯುತ್ ಟಿಸಿಯಲ್ಲಿ ಫೀಜ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶಿಸಿದೆ.

    ಫೀಜ್ ಅಳವಡಿಸುವ ಮುನ್ನಾ ಎಲ್‍ಸಿ ತೆಗೆಯುವಂತೆ ಕುದೂರು ಬೆಸ್ಕಾಂ ಜೆಇ ನವೀನ್ ಕುಮಾರು ಗಮನಕ್ಕೆ ತಂದರೂ ಜೆಇ ನವೀನ್ ಕುಮಾರ್ ನಿರ್ಲಕ್ಷ್ಯದಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತಪಟ್ಟ ಒಂದು ಗಂಟೆ ಕಳೆದರೂ ಮೃತದೇಹವನ್ನು ಕೊಂಡೊಯ್ಯಲು ಅಂಬುಲೆನ್ಸ್ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.

    ಈ ಘಟನೆಗೆ ಜೆಇ ನವೀನ್ ಕುಮಾರ್ ನಿರ್ಲಕ್ಷ್ಯವೇ ಕಾರಣ ಎಂದು ಗಂಭೀರ ಆರೋಪ ಕೇಳಿ ಬಂದಿದ್ದು, ಸೂಕ್ತ ಕ್ರಮ ಜರಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ದೀರ್ಘಕಾಲದ ಅನಾರೋಗ್ಯ- ಆಸ್ಪತ್ರೆ ಬಿಲ್ ನೋಡಿ ಯುವಕ ಆತ್ಮಹತ್ಯೆ

  • ಬೆಸ್ಕಾಂ ನಿರ್ಲಕ್ಷ್ಯಕ್ಕೆ ಲೈನ್‌ ಮ್ಯಾನ್‌ ಸಾವು – FIR ದಾಖಲು

    ಬೆಸ್ಕಾಂ ನಿರ್ಲಕ್ಷ್ಯಕ್ಕೆ ಲೈನ್‌ ಮ್ಯಾನ್‌ ಸಾವು – FIR ದಾಖಲು

    ಬೆಂಗಳೂರು: ಟ್ರಾನ್ಸ್‌ ಫಾರ್ಮರ್‌ ರಿಪೇರಿಗೆಂದು ಲೈಟ್‌ ಕಂಬ ಹತ್ತಿದ್ದಾಗ ವಿದ್ಯುತ್‌ ಪ್ರವಹಿಸಿ ಲೈನ್‌ಮ್ಯಾನ್‌ (Lineman) ಮೃತಪಟ್ಟ ಘಟನೆ ಬೆಂಗಳೂರಿನ (Bengaluru) ರಾಜಾಜಿನಗರದ ಗೋಪಾಲಪುರದಲ್ಲಿ ನಡೆದಿದೆ.

    ಗೌತಮ್‌ ಮೃತ ದುರ್ದೈವಿ. ಕಳೆದ 6 ವರ್ಷಗಳಿಂದ ಗೌತಮ್‌ ಬೆಸ್ಕಾಂನಲ್ಲಿ ಲೈನ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಭಾನುವಾರ ರಾತ್ರಿ ನೈಟ್‌ ಡ್ಯೂಟ್‌ಗೆ ಎಂದು ಹೋಗಿದ್ದ ಗೌತಮ್‌ ಸೋಮವಾರ ಬೆಳಗ್ಗೆ ರಾಜಾಜಿನಗರದ ಗೋಪಾಲಪುರದಲ್ಲಿ ಟ್ರಾನ್ಸ್‌ ಫಾರ್ಮರ್‌ (Transformer) ರಿಪೇರಿಗೆಂದು ಲೈಟ್‌ ಕಂಬ ಹತ್ತಿದ್ದಾಗ ವಿದ್ಯುತ್‌ ಪ್ರವಹಿಸಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಾಗಡಿ ಮೂಲದವರಾದ ಗೌತಮ್‌ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ಮದುವೆ ದಿನಾಂಕವನ್ನು ಫಿಕ್ಸ್‌ ಮಾಡುವುದಿನ್ನು ಬಾಕಿಯಿತ್ತು. ಆದರೆ ಅಷ್ಟರಲ್ಲಿ ಇಂಥ ದುರ್ಘಟನೆ ನಡೆದು ಹೋಗಿದೆ.

    ಘಟನೆಯ ವೇಳೆ ಬೆಸ್ಕಾಂ ಇಲಾಖೆಯು ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೇ ಗೌತಮ್‌ನನ್ನು ಲೈಟ್‌ ಕಂಬದ ಮೇಲೆ ಹತ್ತಿಸಿದ್ದಾರೆ. ಅಷ್ಟೇ ಅಲ್ಲದೇ ಈ ವೇಳೆ ಎರಡರಲ್ಲಿ ಒಂದು ಲೈನ್‌ನ ಕರೆಂಟ್‌ ಅನ್ನು ಮಾತ್ರ ಆಫ್‌ ಮಾಡಿದ್ದಾರೆ. ಇದರಿಂದಾಗಿ ಗೌತಮ್‌ ಸಾವು ಬೆಸ್ಕಾಂನಿಂದ ನಡೆದಿರುವ ಕೊಲೆಯಾಗಿದೆ. ಇದಕ್ಕೆ ಎಇ, ಇಇನೇ ನೇರ ಕಾರಣ ಎಂದು ಮೃತ ಗೌತಮ್‌ ತಂದೆ ಆರೋಪಿಸಿದ್ದಾರೆ. ಇದನ್ನೂ ಓದಿ:  ಬಿಜೆಪಿ ಬಿ ಟೀಂ ಯಾರು ಅಂತ ಬಹಿರಂಗ ಚರ್ಚೆಗೆ ಸಿದ್ಧ- ಸುರ್ಜೇವಾಲಾಗೆ HDK ಸವಾಲ್

    ಪ್ರಕರಣ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಿರ್ಲಕ್ಷತೆ ವಹಿಸಿ ಬೆಂಗಳೂರು, ಟ್ರಾನ್ಸ್‌ಫಾರ್ಮರ್‌, ಎಫ್‌ಐಆರ್‌, ಲೈನ್‌ಮ್ಯಾನ್‌ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಿದೆ. ಅಲ್ಲದೆ ಬೆಸ್ಕಾಂ ನಿಂದ ಕುಟುಂಬಕ್ಕೆ ಸೂಕ್ತ ಪರಿಹಾರ ಬರಬೇಕಿದೆ. ಇದನ್ನೂ ಓದಿ:  ಸೈನ್ಸ್ ಓದಲು ಇಷ್ಟವಿಲ್ಲದೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿದ್ಯುತ್ ತಂತಿ ಸರಿಪಡಿಸಲು ಹೋಗಿ ಲೈನ್‍ಮ್ಯಾನ್ ಸಾವು

    ವಿದ್ಯುತ್ ತಂತಿ ಸರಿಪಡಿಸಲು ಹೋಗಿ ಲೈನ್‍ಮ್ಯಾನ್ ಸಾವು

    ತುಮಕೂರು: ವಿದ್ಯುತ್ ತಂತಿ ಸರಿಪಡಿಸಲು ಹೋಗಿ ಲೈನ್ ಮ್ಯಾನ್ (LineMan) ಒಬ್ಬರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಮಹೇಶ್ ಗೌಡ (40) ಎಂದು ಗುರುತಿಸಲಾಗಿದೆ. ಗುಬ್ಬಿ ತಾಲೂಕಿನ ತಿಪಟೂರಿನಲ್ಲಿ ಅವಘಡ ಸಂಭವಿಸಿದೆ. ಮಹೇಶ್ ಅವರು ಕೆರೆ ಮಧ್ಯೆ ನೀರಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ (Power) ತಂತಿ ಸರಿಪಡಿಸಲು ಹೋಗಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ನೀರಿನಲ್ಲಿ ಈಜುತ್ತಾ ಸುಸ್ತಾಗಿ ಮುಳುಗಿ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ದಳ (Fire Fighter) ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಂಣೆಯ ಬಳಿಕ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ. ಇದನ್ನೂ ಓದಿ: ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮಹಿಳೆ ನೇಣಿಗೆ ಶರಣು

    ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ತೆಲುಗು ನಟ ತ್ರಿಗುಣ್‌ ಕನ್ನಡ ಪ್ರೀತಿ ನೋಡಿ, ಭೇಷ್‌ ಎಂದ ಫ್ಯಾನ್ಸ್‌

    ತೆಲುಗು ನಟ ತ್ರಿಗುಣ್‌ ಕನ್ನಡ ಪ್ರೀತಿ ನೋಡಿ, ಭೇಷ್‌ ಎಂದ ಫ್ಯಾನ್ಸ್‌

    ಕ್ಷಿಣದ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ತ್ರೀಗುಣ್ ಈಗ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಈ ಚಿತ್ರಕ್ಕಾಗಿ ಕನ್ನಡ ಕೂಡ ತ್ರಿಗುಣ್‌ ಕಲಿಯುತ್ತಿದ್ದಾರೆ. ನಟನ ಕಲಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ.

    ತಮಿಳು ಮತ್ತು ತೆಲುಗಿನ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತ್ರಿಗುಣ್‌ ಈಗ `ಲೈನ್ ಮ್ಯಾನ್’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರಕ್ಕೆ ಯುವ ನಿರ್ದೇಶಕ ರಾಘು ಶಾಸ್ತ್ರಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಕನ್ನಡ ಮತ್ತು ತೆಲುಗು ದ್ವಿಭಾಷೆಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಇನ್ನು `ರನ್ ಆ್ಯಂಟನಿ’, `ಟಕ್ಕರ್’ ಚಿತ್ರದ ನಿರ್ದೇಶನದ ಮೂಲಕ ಈಗಾಗಲೇ ರಾಘು ಶಾಸ್ತ್ರಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಭಿನ್ನ ಕಥೆಯನ್ನ ಹೊತ್ತು ಲೈನ್‌ ಮ್ಯಾನ್ ಚಿತ್ರದ ಮೂಲಕ ಬರುತ್ತಿದ್ದಾರೆ.

    `ಲೈನ್ ಮ್ಯಾನ್’ ಸಿನಿಮಾ ಆಗಸ್ಟ್ 5ರಿಂದ ಶುರುವಾಗಲಿದೆ. ಚಾಮರಾಜನಗರ ಮತ್ತು ಚಂದಕವಾಡಿನಲ್ಲಿ ಚಿತ್ರೀಕರಣ ಶುರುವಾಗಲಿದೆ. ಶೂಟಿಂಗ್‌ಗಾಗಿ ಈಗಾಗಲೇ ತ್ರಿಗುಣ್‌ ಬೆಂಗಳೂರಿಗೆ ಬಂದಿದ್ದಾರೆ. ಚಿತ್ರಕ್ಕಾಗಿ ಕನ್ನಡ ಕಲಿಯುತ್ತಾ, ಕನ್ನಡ ಡೈಲಾಗ್ಸ್ ಕಡೆ ಗಮನ ಕೊಡ್ತಿದ್ದಾರೆ. ಪಕ್ಕದ ರಾಜ್ಯದ ನಟನ ಕನ್ನಡ ಕಲಿಕೆಯ ಶ್ರದ್ಧೆ ನೋಡಿ ಫ್ಯಾನ್ಸ್ ಕೂಡ ಭೇಷ್ ಎಂದಿದ್ದಾರೆ. ಈ ಹಿಂದೆ ʻಗಾರ್ಗಿʼ ಸಿನಿಮಾಗಾಗಿ ಸಾಯಿ ಪಲ್ಲವಿ ಕೂಡ ಕನ್ನಡ ಕಲಿತು, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದರು. ಈಗ ತ್ರಿಗುಣ್‌ ಕೂಡ ಕನ್ನಡ ಕಲಿಕೆಯತ್ತ ಆಸಕ್ತಿ ತೋರಿಸಿದ್ದಾರೆ. ಇದನ್ನೂ ಓದಿ:ಸೋದರ ಸೊಸೆ ತಾನ್ಯ ಸಾವಿನ ಕುರಿತು ದಿಯಾ ಮಿರ್ಜಾ ಭಾವುಕ

     

    View this post on Instagram

     

    A post shared by V . Raghu Shashtry (@raghushashtry)

    ಶೂಟಿಂಗ್ ಶುರುವಾಗುವ ಮುಂಚೆ ತೆರೆಮರೆಯಲ್ಲಿ ಸಿನಿಮಾಗಾಗಿ ಚಿತ್ರತಂಡ ಭರ್ಜರಿ ತಯಾರಿ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಘು ಶಾಸ್ತ್ರಿ ಮತ್ತು ತ್ರಿಗುಣ್‌ ಕಾಂಬಿನೇಷನ್ ಸಿನಿಮಾ ಹೇಗೆಲ್ಲಾ ಮೋಡಿ ಮಾಡಬಹುದು ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ತಗುಲಿ – ಲೈನ್ ಮ್ಯಾನ್ ಸಾವು

    ವಿದ್ಯುತ್ ತಗುಲಿ – ಲೈನ್ ಮ್ಯಾನ್ ಸಾವು

    ಬೆಂಗಳೂರು: ಬೆಸ್ಕಾಂ ಟ್ರಾನ್ಸ್ಫಾರ್ಮರ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ ಪರಿಣಾಮ ಕಂಬದ ಮೇಲಿಂದ ಕೆಳಗೆ ಬಿದ್ದ ಲೈನ್ ಮ್ಯಾನ್ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಯಮರೆ ಗ್ರಾಮದಲ್ಲಿ ನಡೆದಿದೆ.

    ಉತ್ತರ ಕರ್ನಾಟಕ ಮೂಲದ ಪವನ್ ಮೃತ ಲೈನ್ ಮ್ಯಾನ್. ನಗರದ ಹೊರವಲಯದ ಆನೇಕಲ್ ತಾಲೂಕಿನ ಯಮರೆ ಗ್ರಾಮದಲ್ಲಿ ಟ್ರಾನ್ಸ್ಫಾರ್ಮರ್ಸ್ ಸಮಸ್ಯೆಯನ್ನು ಬಗೆಹರಿಸಲು ಪವನ್ ಹಾಗೂ ಮುರಳಿ ಅವರು ವಿದ್ಯುತ್ ಕಂಬವನ್ನು ಹತ್ತಿದ್ದರು ಜೊತೆಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು

    ಆದರೆ ಕಂಬ ಹತ್ತಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಹರಿದ ಹಿನ್ನೆಲೆಯಲ್ಲಿ ವಿದ್ಯುತ್ ತಗುಲಿ ಮೇಲಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಲೈನ್ ಮ್ಯಾನ್ ಅವರಿಗೆ ಗಂಭೀರ ಗಾಯಗಳಾಗಿ ಚಿಕಿತ್ಸೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಕಳೆದು ಹೋಗಿದ್ದ ಬೆಕ್ಕು 17 ವರ್ಷಗಳ ಬಳಿಕ ಪತ್ತೆ- ಈ ರೋಚಕ ಕಥೆ ಸಖತ್ ಥ್ರಿಲ್ಲಿಂಗ್

    ಪ್ರತಿಬಾರಿ ಅಮಾಯಕ ಲೈನ್ ಮ್ಯಾನ್‍ಗಳು ಸಾವನ್ನಪ್ಪುತ್ತಿದ್ದರೂ ಸಹ ಯಾವುದೇ ಕಾರಣಕ್ಕೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಬಡವರ ಜೀವಗಳ ಜೊತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆ. ಈ ಘಟನೆಗೆ ನೇರ ಹೊಣೆ ಬೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಬೆಸ್ಕಾಂ ಹಿರಿಯ ಅಧಿಕಾರಿಗಳ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮುದ್ದು ಕಂದಮ್ಮನ ಮುಖ ನೋಡುವ ಮುನ್ನವೇ ಕೊರೊನಾಗೆ ಬಲಿಯಾದ ಪವರ್ ಮ್ಯಾನ್

    ಮುದ್ದು ಕಂದಮ್ಮನ ಮುಖ ನೋಡುವ ಮುನ್ನವೇ ಕೊರೊನಾಗೆ ಬಲಿಯಾದ ಪವರ್ ಮ್ಯಾನ್

    ದಾವಣಗೆರೆ: ಪತ್ನಿ ತುಂಬು ಗರ್ಭಿಣಿ, ಹೆರಿಗೆಗಾಗಿ ಪತ್ನಿಗೆ ವೈದ್ಯರು ಮುಂದಿನ ತಿಂಗಳು 3ಕ್ಕೆ ದಿನಾಂಕ ನೀಡಿದ್ದರು, ಮಗುವಿನ ಆಗಮನಕ್ಕೆ ಇಡೀ ಕುಟುಂಬ ಕಾತರದಿಂದ ಕಾಯುತ್ತಿತ್ತು. ಆದರೆ ಮುದ್ದು ಕಂದಮ್ಮನ ಮುಖ ನೋಡುವ ಮುನ್ನವೇ ಮಹಾಮಾರಿ ಕೊರೊನಾ ಲೈನ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ತಂದೆಯನ್ನು ಬಲಿ ಪಡೆದಿದೆ.

    ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಐನಹಳ್ಳಿ ಗ್ರಾಮದ ನಿವಾಸಿ ಸುರೇಶ್ ನಾಯ್ಕ್, ಜಿಲ್ಲೆಯ ಸಂತೇಬೆನ್ನೂರು ಗ್ರಾಮದಲ್ಲಿ ಹಲವು ವರ್ಷಗಳಿಂದ ಬೆಸ್ಕಾಂ ನಲ್ಲಿ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. 15 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಇಂದು ಕೊರೊನೆಯುಸಿರೆಳೆದಿದ್ದಾರೆ. ಮೃತ ಸುರೇಶ್ ನಾಯ್ಕ್ ಪತ್ನಿ ರೋಜಾ ತುಂಬು ಗರ್ಭಿಣಿ. ಜೂನ್ 3 ರಂದು ವೈದ್ಯರು ಹೆರಿಗೆ ದಿನಾಂಕ ನೀಡಿದ್ದರು, ಪತಿಯ ಸಾವಿನಿಂದ ತುಂಬು ಗರ್ಭಿಣಿಯ ರೋಧನೆ ನೋಡಿ ಮುಗಿಲು ಮುಟ್ಟಿದ್ದು, ಕುಟುಂಭಸ್ಥರಲ್ಲಿ ಸಹ ದುಃಖ ಮನೆ ಮಾಡಿದೆ. ಇದನ್ನೂ ಓದಿ: ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಮಾಸಿಕ 3,500 ರೂ. ಪರಿಹಾರ – ಸಿಎಂ ಮಹತ್ವದ ಘೋಷಣೆ

    ಸಂತೇಬೆನ್ನೂರು ಗ್ರಾಮದಲ್ಲಿ ಬೆಸ್ಕಾಂ ಲೈನ್ ಮ್ಯಾನ್ ಆಗಿ ಕೆಲಸ ಮಾಡುತ್ತ ಅದೇ ಗ್ರಾಮದ ರೋಜಾಳನ್ನು ಸುರೇಶ್ ನಾಯ್ಕ್ ಮದುವೆಯಾಗಿದ್ದರು. ಪತ್ನಿ ರೋಜಾ ತುಂಬು ಗರ್ಭಿಣಿಯಾಗಿದ್ದು, ಹೆರಿಗೆಯಾಗಲು ವೈದ್ಯರು ದಿನಾಂಕ ಸಹ ಹೇಳಿದ್ದರು. ಆದರೆ ಹೆರಿಗೆ ಆಗಲು ಮೂರ್ನಾಲ್ಕು ದಿನ ಬಾಕಿ ಇರುವಾಗ ಮಗುವಿನ ಮುಖ ನೋಡುವ ಮುನ್ನವೇ ತಂದೆ ಸುರೇಶ್ ನಾಯ್ಕ ಕೊರೊನಾ ಮಹಾಮರಿಗೆ ಬಲಿಯಾಗಿದ್ದಾರೆ. ಈ ಸುದ್ದಿ ಕೇಳಿದ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.

  • ಲೈನ್‍ಮ್ಯಾನ್‍ಗಳ ಕೆಲಸಕ್ಕೆ ಸಿಗಲಿಲ್ಲ ಗೌರವ- ಬೇಸರವಾಗಿದೆ ಹಗಲು, ರಾತ್ರಿ ದುಡಿದ ಜೀವ

    ಲೈನ್‍ಮ್ಯಾನ್‍ಗಳ ಕೆಲಸಕ್ಕೆ ಸಿಗಲಿಲ್ಲ ಗೌರವ- ಬೇಸರವಾಗಿದೆ ಹಗಲು, ರಾತ್ರಿ ದುಡಿದ ಜೀವ

    ಬೆಂಗಳೂರು: ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೆಲಸ ಮಾಡಿದ ಹಲವು ಇಲಾಖೆಗಳಿಗೆ ಕೊರೊನಾ ವಾರಿಯರ್ಸ್ ಅಂತ ಹೆಸರು ಕೊಡಲಾಯ್ತು. ಜೀವಕ್ಕೆ ಹೆದರದೆ ಕೊರೊನಾ ಸೋಂಕಿತರಿಗಾಗಿ ಕೆಲಸ ಮಾಡಿದವರಿಗೆ ಮನ್ನಣೆ ಕೊಡಲಾಯ್ತು. ಆದರೆ ಕೆಇಬಿಯ ಲೈನ್‍ಮ್ಯಾನ್‍ಗಳಿಗೆ ಯಾವುದೇ ಗೌರವ ಸಲ್ಲಲಿಲ್ಲ ಅನ್ನೋ ಬೇಸರ ಹಲವರಲ್ಲಿದೆ. ಲಾಕ್‍ಡೌನ್ ಟೈಮ್‍ನಲ್ಲಿ ಕೆಲಸ ಮಾಡಿದ ಅನುಭವ ಹೇಗಿತ್ತು..? ಏನಾಯ್ತು ಅನ್ನೊದ್ರ ಬಗ್ಗೆ ಲೈನ್‍ಮ್ಯಾನ್‍ಗಳು ಡಿಟೈಲ್ ಆಗಿ ಹೇಳಿಕೊಂಡಿದ್ದಾರೆ.

    ಲಾಕ್‍ಡೌನ್ ಅನೌನ್ಸ್ ಆಯ್ತು. ಕೊರೊನಾ ಕಂಟಕದಿಂದ ಪಾರಾಗಲು ಮನೆಯಲ್ಲೇ ಇರಬೇಕು ಅಂತ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೌನ್ಸ್ ಮಾಡಿತ್ತು. ಪ್ರಾಣ ಉಳಿಸಿಕೊಳ್ಳಲು ಜನ ಮನೆ ಸೇರಿದರು. ಬೇಸಿಯ ಧಗೆಗೆ ಪ್ಯಾನ್ ಹಾಕಿಕೊಂಡು ಟಿವಿ ನೋಡ್ಕೊಂಡು ಆರಾಮಾಗಿದ್ದರು. ಆದರೆ ಮನೆ ಸೇರಿರೋ ಜನ ಮನೆಬಿಟ್ಟು ಹೊರಗೆ ಬರದಂತೆ ನೋಡಿಕೊಳ್ಳುವಲ್ಲಿ ವಿದ್ಯುತ್ ಸರಬರಾಜು ಮಂಡಳಿಯ ಲೈನ್ ಮ್ಯಾನ್‍ಗಳು ಅತಿ ಮುಖ್ಯ ಪಾತ್ರವಹಿಸಿದ್ರು. ಯಾವುದೇ ದೂರು ಬಂದರೂ ಅದನ್ನ ಆದಷ್ಟು ಬೇಗ ಅಟೆಂಡ್ ಮಾಡಿ ಜನ ರೋಡಿಗಿಳಿಯದಂತೆ ನೋಡಿಕೊಂಡ್ರು.

    ಒಂದು ದಿನ ಪವರ್ ಕಟ್ ಆದರೂ ಮನೆಯಲ್ಲಿ ಸೆಕೆ ಜಾಸ್ತಿ, ಟಿವಿ ಇಲ್ಲ ಎಸಿ ಇಲ್ಲ ಅಂತ ಜನ ಮನೆ ಬಿಟ್ಟು ಬೀದಿಗೆ ಬಂದು ಬಿಡುತ್ತಿದ್ದರು. ಈ ರೀತಿಯ ಅವಘಡಗಳು ನಡೆಯದಂತೆ ಲೈನ್‍ಮ್ಯಾನ್‍ಗಳು ಒಳ್ಳೆ ಕೆಲಸ ಮಾಡಿದರು. ಆದರೆ ಸರ್ಕಾರ ಮಾತ್ರ ಇವರನ್ನ ಮರೆತು ಬಿಟ್ಟಿರೋ ಹಾಗೆ ಕಾಣ್ತಿದೆ. ಕೆಇಬಿಯ ಲೈನ್‍ಮ್ಯಾನ್‍ಗಳಿಗೆ ಯಾವುದೇ ಮನ್ನಣೆ ಕೊಡದ ಸರ್ಕಾರದ ನಡೆಯ ಬಗ್ಗೆ ಹಲವರಿಗೆ ಬೇಸರವಾಗಿದೆ.

    ಕೆಲವು ಲೈನ್‍ಮ್ಯಾನ್‍ಗಳು ನಮ್ಮ ಕೆಲಸ ನಾವು ಮಾಡಿದ್ದೀವಿ ಬಿಡಿ ಸಾರ್ ಅಂತಿದ್ದಾರೆ. ಆದರೆ ಇನ್ನು ಕೆಲವರು ನಾವು ಮಾಡಿದ ಕೆಲಸಕ್ಕೆ ಸರ್ಕಾರ ಸೂಕ್ತ ಗೌರವ ಕೊಡಬೇಕಿತ್ತು ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಮಗಾಗಿ ಕೊರೊನಾ ಮಹಾಮಾರಿಯನ್ನ ಲೆಕ್ಕಿಸದೆ ಹಗಲು ರಾತ್ರಿ ದುಡಿದ ನಮ್ಮ ಲೈನ್‍ಮ್ಯಾನ್‍ಗಳಿಗೆ ಮನ್ನಣೆ ಸಿಗುವಂತಾಗಲಿ ಅನ್ನೊದೇ ಎಲ್ಲರ ಆಶಯ.

  • ಪ್ರವಾಹದ ವೇಳೆ ಉತ್ತಮ ಸೇವೆ ಸಲ್ಲಿಸಿದ್ದ ಲೈನ್‍ಮ್ಯಾನ್‍ಗಳಿಗೆ ಸನ್ಮಾನ

    ಪ್ರವಾಹದ ವೇಳೆ ಉತ್ತಮ ಸೇವೆ ಸಲ್ಲಿಸಿದ್ದ ಲೈನ್‍ಮ್ಯಾನ್‍ಗಳಿಗೆ ಸನ್ಮಾನ

    ಯಾದಗಿರಿ: ಕಳೆದ ಆಗಷ್ಟ್ ತಿಂಗಳಲ್ಲಿ ಬಂದಿದ್ದ ನೆರೆಪ್ರವಾಹದ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ, ವಿದ್ಯುತ್ ಸಮಸ್ಯೆ ಗ್ರಾಮಗಳಿಗೆ ಬೆಳಕಿನ ಸೌಲಭ್ಯ ಕಲ್ಪಿಸಲು ಕಾರಣಿಭೂತರಾಗಿದ್ದ ಲೈನ್‍ಮ್ಯಾನ್‍ಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

    ಯಾದಗಿರಿ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಯುವ ಬ್ರಿಗೇಡ್ ಸಹಯೋಗದಲ್ಲಿ ಶಕ್ತಿಮಾನ್ ಲೈನ್‍ಮ್ಯಾನ್‍ಗಳಿಗೆ ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಹಾಗೂ ಜೆಸ್ಕಾಂ ಅಧಿಕಾರಿ ಹಾಗೂ ಗಣ್ಯರು ಸನ್ಮಾನಿಸಿ ಗೌರವಿಸಿದರು.

    ಈ ವೇಳೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಪ್ರವಾಹ ಸಂದರ್ಭದಲ್ಲಿ ಕಷ್ಟನಷ್ಟಗಳ ನಡುವೆ ಯಾದಗಿರಿ ಜಿಲ್ಲೆಯಲ್ಲಿ ಲೈನ್‍ಮ್ಯಾನ್‍ಗಳು ಉತ್ತಮ ಸೇವೆ ಸಲ್ಲಿಸಿ ವಿದ್ಯುತ್ ಸಮಸ್ಯೆಯಾಗದಂತೆ ಕಾಳಜಿ ವಹಿಸಿದ್ದು ಮೆಚ್ಚುವಂತದ್ದು ಎಂದರು.

    ಇದೇ ವೇಳೆ ಪುಲ್ವಾಮ ದಾಳಿ ವೇಳೆ ಹುತಾತ್ಮ ಯೋಧರ ಕಾರ್ಯ ಕೊಂಡಾಡಿದ ಸೂಲಿಬೆಲೆ, ಪುಲ್ವಾಮ ದಾಳಿ ಬಗ್ಗೆ ಕೇವಲ ಶೋಕಾಚರಣೆ ಮಾಡಿದ್ರೆ ಸಾಲದು, ಪಾಕಿಸ್ತಾನ ನೆಲದಲ್ಲಿ ಸರ್ಜಿಕಲ್ ದಾಳಿ ನಡೆಸಿ ಉಗ್ರರನ್ನು ಹತ್ಯೆ ಮಾಡಿದ ಯೋಧರ, ಶೌರ್ಯ ಕಾರ್ಯ ಶ್ಲಾಘಿಸುವ ಕೆಲಸವಾಗಬೇಕು ಎಂದು ತಿಳಿಸಿದರು.