Tag: ಲೈಟ್ ಕಂಬ

  • ಲೈಟ್ ಕಂಬದ ವಿಚಾರಕ್ಕೆ ಜಗಳ – ನಾದಿನಿಗೆ ಹಿಗ್ಗಾಮುಗ್ಗ ಥಳಿಸಿದ ಬಾವ

    ಲೈಟ್ ಕಂಬದ ವಿಚಾರಕ್ಕೆ ಜಗಳ – ನಾದಿನಿಗೆ ಹಿಗ್ಗಾಮುಗ್ಗ ಥಳಿಸಿದ ಬಾವ

    – ಬಾವನಿಗೆ ನಾದಿನಿಯಿಂದ ಪೊರಕೆ ಸೇವೆ

    ಕೋಲಾರ: ಕ್ಷುಲ್ಲುಕ ಕಾರಣಕ್ಕೆ ಉಂಟಾದ ಜಗಳದಲ್ಲಿ ವ್ಯಕ್ತಿಯೋರ್ವ ತನ್ನ ತಮ್ಮನ ಹೆಂಡತಿಯನ್ನು ಹಿಗ್ಗಾಮುಗ್ಗ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಲ್ಲುಕುಂಟೆ ಗ್ರಾಮದಲ್ಲಿ ನಡೆದಿದೆ.

    ಮನೆ ಬಳಿ ವಿದ್ಯುತ್ ಕಂಬ ಅಳವಡಿಸುವ ವಿಚಾರದಲ್ಲಿ ಬಾವನೊಂದಿಗೆ ಜಗಳ ಕಿತ್ತ ನಾದಿನಿ, ಮೊದಲಿಗೆ ಬಾವನಿಗೆ ಪೊರಕೆ ಸೇವೆ ಮಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ಹೆಚ್ಚಾದಾಗ ಜಗಳ ಬಿಡಿಸುವ ನೆಪದಲ್ಲಿ ಬಂದ ಬಾವನ ಮಗನೂ ಕೂಡ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿ ಕಾಲಿನಲ್ಲಿ ಒದ್ದು ದೌರ್ಜನ್ಯವೆಸಗಿರುವ ವಿಡಿಯೋ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

    ಕಲ್ಲುಕುಂಟೆ ಗ್ರಾಮದ ರತ್ನಮ್ಮ ಹಲ್ಲೆಗೊಳಗಾದ ನಾದನಿಯಾಗಿದ್ದು, ಭಾವ ಶಂಕರಪ್ಪ ಹಾಗೂ ಬಾವನ ಮಗ ಶೇಖರ್ ಬಾಬು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ಮಹಿಳೆಯನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇಷ್ಟೆಲ್ಲ ದೌರ್ಜನ್ಯ ನಡೆದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ.

  • ಮನೆ ಮುಂದೆ ವಿದ್ಯುತ್ ತಂತಿ ಸ್ಪರ್ಶಿಸಿ 6ರ ಬಾಲಕ ಸಾವು

    ಮನೆ ಮುಂದೆ ವಿದ್ಯುತ್ ತಂತಿ ಸ್ಪರ್ಶಿಸಿ 6ರ ಬಾಲಕ ಸಾವು

    ಬಳ್ಳಾರಿ: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಳ್ಳಾರಿ ತಾಲೂಕಿನ ಹಂದ್ಯಾಳ್ ಗ್ರಾಮದಲ್ಲಿ ನಡೆದಿದೆ.

    ಬಳ್ಳಾರಿ ತಾಲೂಕಿನ ಹಂದ್ಯಾಳ್ ಗ್ರಾಮದ ಮಹಮ್ಮದ್ ಶರೀಫ್ (6) ಮೃತಪಟ್ಟ ದುರ್ದೈವಿ ಬಾಲಕ ಎಂದು ಗುರುತಿಸಲಾಗಿದೆ. ಮನೆ ಮುಂದಿನ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಅರ್ಥಿಂಗ್ ತಂತಿಯನ್ನು ಆಟವಾಡುವ ಸಂದರ್ಭದಲ್ಲಿ ಮುಟ್ಟಿದ ಕಾರಣ ವಿದ್ಯುತ್ ಪ್ರವಹಿಸಿ ಬಾಲಕ ಸಾವಿಗೀಡಾಗಿದ್ದಾನೆ.

    ಹಲವಾರು ದಿನಗಳಿಂದ ವಿದ್ಯುತ್ ತಂತಿಯನ್ನು ತೆರೆವುಗೊಳಿಸುವಂತೆ ಮನೆಯವರು ಆಗ್ರಹಿಸಿದ್ದರು. ಆದರೆ ಜೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ. ಈಗ ಅಧಿಕಾರಿಗಳ ನಿರ್ಲಕ್ಷ್ಯವೇ ಇಂದು ಮಗು ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಸ್ತೆ ಮಧ್ಯೆ ಲೈಟ್ ಕಂಬ – ಕಾಮಗಾರಿ ಕೈಬಿಟ್ಟ ಗುತ್ತಿಗೆದಾರ

    ರಸ್ತೆ ಮಧ್ಯೆ ಲೈಟ್ ಕಂಬ – ಕಾಮಗಾರಿ ಕೈಬಿಟ್ಟ ಗುತ್ತಿಗೆದಾರ

    ಮಡಿಕೇರಿ: ಗ್ರಾಮ ಪಂಚಾಯತಿ ರಸ್ತೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ರಸ್ತೆ ಕಾಮಗಾರಿ ನಡೆಸುವ ಸಂದರ್ಭ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ರಸ್ತೆ ಮಧ್ಯ ಇರುವುದರಿಂದ ಗುತ್ತಿಗೆದಾರ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದ ಘಟನೆ ಕೊಡಗಿನಲ್ಲಿ ನಡೆದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೊಂದಿಬಸವನ ಹಳ್ಳಿಯಲ್ಲಿ ರಸ್ತೆ ಕಾಮಗಾರಿ ಮಾಡುವ ಸಂದರ್ಭ ಗ್ರಾಮಸ್ಥರು ವಿದ್ಯುತ್ ಕಂಬ ತೆಗೆದು ಕೆಲಸ ಮಾಡುವಂತೆ ಗುತ್ತಿಗೆದಾರಿಗೆ ತಿಳಿಸಿದ್ದಾರೆ. ಅದರೆ ವಿದ್ಯುತ್ ಇಲಾಖೆಗೆ ಸರಿಯಾದ ಮಾಹಿತಿ ನೀಡದೇ ಕಾಮಗಾರಿ ಮಾಡಿಕೊಂಡು ರಸ್ತೆಗೆ ಅಡ್ಡಲಾದ ಕರೆಂಟ್ ಕಂಬದ ವರೆಗೆ ಕೆಲಸ ಮಾಡಿ ಅರ್ಧಕ್ಕೆ ಕೈ ಬಿಟ್ಟಿದ್ದಾರೆ.

    ಇದರಿಂದ ಅಕ್ರೋಶಗೊಂಡ ಗ್ರಾಮಸ್ಥರು ವಿದ್ಯುತ್ ಕಂಬ ತೆರವು ಮಾಡಿ ರಸ್ತೆ ಕಾಮಗಾರಿಗೆ ಅನುವು ಮಾಡಿಕೊಂಡುವಂತೆ ವಿದ್ಯುತ್ ಇಲಾಖೆಗೆ ಮಾನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ವಿದ್ಯುತ್ ಇಲಾಖೆಯ ಅಧಿಕಾರಿಗಳು ವಿದ್ಯುತ್ ಕಂಬವನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದು ರಸ್ತೆ ಕಾಮಗಾರಿ ಕೆಲಸ ಅರಂಭವಾಗಿದೆ.

  • ಹೆಂಡದ ನಶೆಯಲ್ಲಿ ಹೆಂಡತಿಯನ್ನು ಕೊಂದ ಪಾಪಿ ಪತಿ

    ಹೆಂಡದ ನಶೆಯಲ್ಲಿ ಹೆಂಡತಿಯನ್ನು ಕೊಂದ ಪಾಪಿ ಪತಿ

    ಹಾಸನ: ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಲೆ ಮಾಡಿದ್ದ ಪತಿಯನ್ನು ಗ್ರಾಮಸ್ಥರು ಲೈಟ್ ಕಂಬಕ್ಕೆ ಕಟ್ಟಿ ಹಾಕಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಕುರಿಕಾವಲ್ ಗ್ರಾಮದಲ್ಲಿ ಇಂದು ನಡೆದಿದೆ.

    ಮುನಿಯಮ್ಮ (35) ಕೊಲೆಯಾದ ಮಹಿಳೆ. ಗಂಗಬೋವಿ ಕೊಲೆ ಮಾಡಿರುವ ಆರೋಪಿ. ಶುಕ್ರವಾರ ರಾತ್ರಿ ವೇಳೆ ಗಂಗಬೋವಿ ಮನೆಗೆ ಕುಡಿದು ಬಂದಿದ್ದನು. ಕುಡಿದ ಅಮಲಿನಲ್ಲಿ ತನ್ನ ಪತ್ನಿಯ ಬಳಿ ಜಗಳವಾಡಿ, ದೊಣ್ಣೆಯಿಂದ ತೆಲೆಗೆ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದಾನೆ. ಈ ಘಟನೆ ಕುರಿತು ಗ್ರಾಮಸ್ಥರಿಗೆ ತಿಳಿಯುತ್ತಿದಂತೆ ಆರೋಪಿಯನ್ನು ಲೈಟ್ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಅಲ್ಲದೆ ಆರೋಪಿ ಗಂಗಬೋವಿ ವಿರುದ್ಧ  ಪೊಲೀಸ್ ಠಾಣೆಯಲ್ಲಿ ಕುರುಕಾವಲ್ ಗ್ರಾಮಸ್ಥರು ದೂರು ದಾಖಲಿಸಿದ್ದಾರೆ.

    ಗ್ರಾಮಸ್ಥರ ದೂರಿನ ಆಧಾರದ ಮೇರೆಗೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv