Tag: ಲೈಗರ್ ಟೀಸರ್

  • ಲೈಗರ್ ಟೀಸರ್ ರಿಲೀಸ್ – ರಗಡ್ ಲುಕ್‍ನಲ್ಲಿ ವಿಜಯ್ ದೇವರಕೊಂಡ ಫುಲ್ ಮಿಂಚಿಂಗ್

    ಲೈಗರ್ ಟೀಸರ್ ರಿಲೀಸ್ – ರಗಡ್ ಲುಕ್‍ನಲ್ಲಿ ವಿಜಯ್ ದೇವರಕೊಂಡ ಫುಲ್ ಮಿಂಚಿಂಗ್

    ಹೈದರಾಬಾದ್: ಟಾಲಿವುಡ್ ರೌಡಿ ನಟ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಟೀಸರ್ ಬಿಡುಗಡೆಯಾಗಿದೆ.

    ಹೊಸ ವರ್ಷದ ಹಿಂದಿನ ದಿನ ಲೈಗರ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಖಡಕ್ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಬೀದಿ, ಬೀದಿಗಳಲ್ಲಿ ಚಾಯ್ ಮಾರುವ ಯುವಕ ನಂತರ ಎಂಎಂಎಯಲ್ಲಿ ಬಾಕ್ಸಿಂಗ್ ಚಾಂಪಿಯನ್ ಆಗುವ ಕಥೆಯನ್ನು ಟೀಸರ್‌ನಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: RRR ಸಿನಿಮಾ ದೇಹವಾದರೆ ಅಜಯ್ ಆತ್ಮ, ಆಲಿಯಾ ಶಕ್ತಿ: ರಾಜಮೌಳಿ

    ಇದೊಂದು ಸ್ಫೂರ್ತಿದಾಯಕ ಸಿನಿಕಹಾನಿಯಾಗಿದ್ದು, ಟೀಸರ್ ಪ್ರಾರಂಭದಲ್ಲಿ ಎಂಎಂಎ ನಿರೂಪಕ ವಿಜಯ್ ದೇವರಕೊಂಡ ಅವರನ್ನು ಲೈಗರ್ ಆಗಿ ಪರಿಚಯಿಸುತ್ತಾರೆ. ಭಾರತದ ಹುಡುಗ, ಮುಂಬೈನ ಸ್ಲಂ ಡಾಗ್, ಬೀದಿ ಬೀದಿಯಲ್ಲಿ ಚಹಾ ಮಾರುವವನು ಲೈಗರ್ ಎಂದು ಹೇಳುವುದನ್ನು ಕೇಳಬಹುದಾಗಿದೆ. ಅದರಲ್ಲಿಯೂ ಭಾರತದ ಧ್ವಜ ಧರಿಸಿ ಎಂಎಂಎಗೆ ಎಂಟ್ರಿ ನೀಡುವ ದೃಶ್ಯ ಹಾಗೂ ನಾವು ಭಾರತೀಯರು ಎಂಬ ವಿಜಯ್ ಖಡಕ್ ಡೈಲಾಗ್ ಟೀಸರ್‌ನ ಹೈಲೆಟ್ ಆಗಿದೆ. ಇದನ್ನೂ ಓದಿ: ಚಿತ್ರರಂಗದಲ್ಲಿ 5 ವರ್ಷ ಪೂರೈಸಿದ ರಶ್ಮಿಕಾ – ಕಲಿತ ಪಾಠಗಳೇನು ಗೊತ್ತಾ?

    ಲೈಗರ್ ಸಿನಿಮಾಕ್ಕಾಗಿ ವಿಜಯ್ ದೇವರಕೊಂಡ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಚಿತ್ರದ ನಿರ್ಮಾಣ ಮತ್ತು ಬಿಡುಗಡೆ ವಿಳಂಬವಾಗಿದೆ. ಆದರೆ ಹೊಸ ವರ್ಷದ ಹಿಂದಿನ ದಿನದಂದು ಲೈಗರ್ ಸಿನಿಮಾದ ಟೀಸರ್ ಬಿಡುಗಡೆಗೊಳಿಸುವುದಾಗಿ ಅಭಿಮಾನಿಗಳಿಗೆ ವಿಜಯ್ ಭರವಸೆ ನೀಡಿದ್ದರು. ಅದರಂತೆ ಇದೀಗ ಚಿತ್ರದ ಟೀಸರ್ ಬಿಡುಗಡೆಗೊಳಿಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

    ಈ ಚಿತ್ರಕ್ಕಾಗಿ ವಿಜಯ್ ಸುಮಾರು 2 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಲೈಗರ್‌ನಲ್ಲಿ ವಿಜಯ್‍ಗೆ ಜೋಡಿಯಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ನಿರ್ದೇಶಕ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದು, ವಿಷ್ಣು ಶರ್ಮಾ ಅವರ ಛಾಯಾಗ್ರಹಣ, ಥಾಯ್ಲೆಂಡ್‍ನ ಕೇಚಾ ಸಾಹಸ ನಿರ್ದೇಶನ ಮಾಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ರಮ್ಯಾ ಕೃಷ್ಣ ಮತ್ತು ರೋನಿತ್ ರಾಯ್ ಅಭಿನಯಿಸಿದ್ದಾರೆ. ತೆಲುಗು ಹಾಗೂ ಹಿಂದಿಯಲ್ಲಿ ಲೈಗರ್ ಸಿನಿಮಾ ತಯಾರಾಗಿದ್ದು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಡಬ್ಬಿಂಗ್ ಆಗಲಿದೆ. 2022ರ ಆಗಸ್ಟ್ 25ರಂದು ಈ ಸಿನಿಮಾ ಬಿಡುಗಡೆಯಾಲಿದೆ.