Tag: ಲೈಕ್

  • ಇನ್‍ಸ್ಟಾಗ್ರಾಮ್‍ನಲ್ಲಿ ಲೈಕ್, ಕಾಮೆಂಟ್ ವಿಚಾರಕ್ಕೆ ಜಗಳ – ಇಬ್ಬರ ಕೊಲೆಯಲ್ಲಿ ಅಂತ್ಯ

    ಇನ್‍ಸ್ಟಾಗ್ರಾಮ್‍ನಲ್ಲಿ ಲೈಕ್, ಕಾಮೆಂಟ್ ವಿಚಾರಕ್ಕೆ ಜಗಳ – ಇಬ್ಬರ ಕೊಲೆಯಲ್ಲಿ ಅಂತ್ಯ

    ನವದೆಹಲಿ: ಇನ್‍ಸ್ಟಾಗ್ರಾಮ್‍ನಲ್ಲಿ ಲೈಕ್ಸ್ ಮತ್ತು ಕಾಮೆಂಟ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನವದೆಹಲಿಯಲ್ಲಿ (Delhi) ನಡೆದಿದೆ.

    ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಮಹಿಳೆ ವಿಚಾರಕ್ಕೆ ದೆಹಲಿಯ ಹೊರಭಾಗದಲ್ಲಿರುವ ಭಾಲ್ಸ್ವಾ ಡೈರಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿದೆ. ಘಟನೆ ಬಳಿಕ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಶೇ.50 ಪೂರ್ಣ – ಯೋಗಿ ಆದಿತ್ಯನಾಥ್‌

    ಮುಕುಂದಪುರ ಭಾಗ-2 (Mukundpur Part 2)ಪ್ರದೇಶದಲ್ಲಿ ತನ್ನನ್ನು ಭೇಟಿಯಾಗುವಂತೆ ಮಹಿಳೆ ಇಬ್ಬರಿಗೂ ಹೇಳಿದ್ದಳು. ಆದರೆ ಅಲ್ಲಿಗೆ ಬಂದಾಗ ವ್ಯಕ್ತಿಗಳ ಮೇಲೆ ದಾಳಿ ನಡೆದಿದೆ. ಅನೇಕ ಬಾರಿ ಚಾಕುವಿನಿಂದ ಇರಿದಿದ್ದರಿಂದ ವ್ಯಕ್ತಿ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಚಾಕುವಿನಿಂದ ಚುಚ್ಚುವುದಕ್ಕೂ ಮುನ್ನ ಕೂಡ ಆರೋಪಿಗಳು ಬೆದರಿಕೆಯೊಡ್ಡಿ ಎಸ್ಕೇಪ್ ಆಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೊಬೈಲ್ ಕಳ್ಳನ ಕಾಲಿಗೆ ಪೊಲೀಸರಿಂದ ಫೈರಿಂಗ್ – ದ್ವಿಚಕ್ರ ವಾಹನ, ಮೂರು ಮೊಬೈಲ್ ವಶಕ್ಕೆ

    Live Tv
    [brid partner=56869869 player=32851 video=960834 autoplay=true]

  • ನನ್ನ ವಾಂಟೆಡ್ ಪೋಸ್ಟರ್‌ಗೆ 15 ಸಾವಿರ ಲೈಕ್ ಕೊಡಿಸಿ – ಪೊಲೀಸರಿಗೆ ಆರೋಪಿ ಸವಾಲು

    ನನ್ನ ವಾಂಟೆಡ್ ಪೋಸ್ಟರ್‌ಗೆ 15 ಸಾವಿರ ಲೈಕ್ ಕೊಡಿಸಿ – ಪೊಲೀಸರಿಗೆ ಆರೋಪಿ ಸವಾಲು

    ವಾಷಿಂಗ್ಟನ್: ತನ್ನ ವಾಂಟೆಡ್ ಪೋಸ್ಟರ್‌ಗೆ 15 ಸಾವಿರ ಲೈಕ್ ಕೊಡಿಸಿ. ನಾನೇ ಬಂದು ಶರಣಾಗುತ್ತೇನೆ ಎಂದು ಆರೋಪಿಯೊಬ್ಬ ಪೊಲೀಸರಿಗೆ ಬೇಡಿಕೆ ಇಟ್ಟಿರುವ ವಿಚಿತ್ರ ಪ್ರಸಂಗವೊಂದು ಅಮೆರಿಕದಲ್ಲಿ ನಡೆದಿದೆ.

    ಈ ಘಟನೆ ಟೊರಿಂಗ್ಟನ್ ಎಂಬ ನಗರದಲ್ಲಿ ನಡೆದಿದೆ. ಇಲ್ಲಿನ ಪೊಲೀಸರು ಆರೋಪಿಯನ್ನು ಬಂಧಿಸುವ ಸಲುವಾಗಿ ಜೋಸ್ ಸಿಮ್ಸ್ (29) ಆರೋಪಿಯ ವಾಂಟೆಡ್ ಪೋಸ್ಟರ್ ಅನ್ನು ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿತ್ತು.

    https://www.facebook.com/TorringtonPD/posts/2188826954506060

    ಆದರೆ ಇದಕ್ಕೆ ಯಾರು ಕೂಡ ಲೈಕ್ ಮಾಡಿರಲಿಲ್ಲ. ಇದನ್ನು ಕಂಡ ಆರೋಪಿ ಜೋಸ್ ಸಿಮ್ಸ್ ಫೇಸ್‍ಬುಕ್ ಮೂಲಕವೇ ಟೊರಿಂಗ್ಟನ್ ಪೊಲೀಸರನ್ನು ಸಂಪರ್ಕಿಸಿ, ನನ್ನ ವಾಂಟೆಡ್ ಪೋಸ್ಟರ್‌ಗೆ ನೀವು 15 ಸಾವಿರ ಲೈಕ್ ಕೊಡಿಸಿದರೆ ನಾನೇ ಬಂದು ಶರಣಾಗುತ್ತೇನೆ ಎಂದು ಸವಾಲು ಹಾಕಿದ್ದಾನೆ.

    ಇದಕ್ಕೆ ಒಪ್ಪಿಕೊಂಡಿರುವ ಟೊರಿಂಗ್ಟನ್ ಪೊಲೀಸರು ಮತ್ತೆ ತಮ್ಮ ಖಾತೆಯಲ್ಲಿ ಜೋಸ್ ಸಿಮ್ಸ್‍ನ ವಾಂಟೆಡ್ ಪೋಸ್ಟರ್ ಅನ್ನು ಹಾಕಿ ಇದಕ್ಕೆ ಸಾರ್ವಜನಿಕರು ಲೈಕ್ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಜೋಸ್ ವಿರುದ್ಧ ಏಳು ವಾರೆಂಟ್ ದಾಖಲಾಗಿದ್ದು, ಹಲವಾರು ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

    ಈಗ ಜೋಸ್ ಸಿಮ್ಸ್ ವಾಂಟೆಡ್ ಪೋಸ್ಟರ್ ಗೆ 24 ಸಾವಿರ ಲೈಕ್ ಮತ್ತು 26 ಸಾವಿರ ಪ್ರತಿಕ್ರಿಯೆಗಳು ಬಂದಿದೆ. ಆದರೆ ಆರೋಪಿ ಇನ್ನೂ ಪೊಲೀಸರಿಗೆ ಶರಣಾಗಿಲ್ಲ. ಈ ಮಧ್ಯೆ ಕೆಲವರು ಅವನನ್ನು ಫೇಸ್‍ಬುಕ್ ಮೂಲಕ ಸಂಪರ್ಕಿಸಿದ್ದಾರೆ. ಈ ವೇಳೆ ಅವನು ನಾನೊಬ್ಬ ಪ್ರಚಾರಪ್ರಿಯ ಎಂದು ಹೇಳಿಕೊಂಡಿದ್ದಾನೆ.

  • ‘ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್’

    ‘ಝೀರೋ’ನ ಹಿಂದಿಕ್ಕಿದ ‘ಕೆಜಿಎಫ್’

    ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಸಿನಿಮಾ ‘ಝೀರೋ’ ಸಿನಿಮಾವನ್ನು ಕೆಜಿಎಫ್ ಹಿಂದಿಕ್ಕಿ ಮುನ್ನುಗ್ಗುತ್ತಿದೆ.

    ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಅಭಿನಯದ ‘ಝೀರೋ’ ಸಿನಿಮಾಗಿಂತಲೂ ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್’ ಸಿನಿಮಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕ ಲೈಕ್ಸ್ ಬಂದಿದೆ. ಬುಕ್ ಮೈ ಶೋದಲ್ಲಿ ‘ಕೆಜಿಎಫ್’ ಸಿನಿಮಾ 3 ಲಕ್ಷದ 57 ಸಾವಿರ ಲೈಕ್ಸ್ ಪಡೆದಿದೆ. ಇನ್ನು ಶಾರೂಕ್ ಖಾನ್ ನಟನೆಯ ‘ಝೀರೋ’ ಸಿನಿಮಾ 2 ಲಕ್ಷದ 59 ಸಾವಿರ ಲೈಕ್ಸ್ ಪಡೆದಿದೆ.

    ಎಲ್ಲಾ ಅಡೆತಡೆಗಳನ್ನು ಮೀರಿ ದೇಶಾದ್ಯಂತ ಹವಾ ಎಬ್ಬಿಸಿದ್ದ ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್’ ಸಿನಿಮಾ ತೆರೆಗೆ ಅಪ್ಪಳಿಸಿದ್ದು, ವಿಶ್ವಾದ್ಯಂತ 2 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಐದು ಭಾಷೆಗಳಲ್ಲಿ ತೆರೆ ಕಂಡಿದೆ.

    ರಾಜ್ಯದೆಲ್ಲೆಡೆ 350 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಯಶ್ ಅಭಿಮಾನಿಗಳು ಮಧ್ಯರಾತ್ರಿಯಿಂದ ಚಳಿಯಲ್ಲೇ ಕಾದು ಕುಳಿತಿದ್ದರು. ಆನ್‍ಲೈನ್ ಟಿಕೆಟ್ ಬುಕ್ಕಿಂಗ್‍ಗೆ ಭಾರೀ ಬೇಡಿಕೆ ಬಂದಿದ್ದು, ಈಗಾಗಲೇ ಟಿಕೆಟ್‍ಗಳು ಸೇಲ್ ಆಗುತ್ತಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲೂ ಕೆಜಿಎಫ್ ರಿಲೀಸ್ ಆಗಿದೆ. ಬರೋಬ್ಬರಿ 2 ವರ್ಷಗಳ ಬಳಿಕ ಯಶ್ ಚಿತ್ರ ರಿಲೀಸ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂರು ಫೋಟೋ ಹಾಕಿ ಅಭಿಮಾನಿಗಳಿಗೆ ಹಾಟ್ ಗಿಫ್ಟ್ ಆಫರ್ ಕೊಟ್ಟ ಪೂನಂ ಪಾಂಡೆ

    ಮೂರು ಫೋಟೋ ಹಾಕಿ ಅಭಿಮಾನಿಗಳಿಗೆ ಹಾಟ್ ಗಿಫ್ಟ್ ಆಫರ್ ಕೊಟ್ಟ ಪೂನಂ ಪಾಂಡೆ

    ಮುಂಬೈ: ಬಾಲಿವುಡ್ ನಟಿ ಹಾಗೂ ಸೂಪರ್ ಮಾಡೆಲ್ ಪೂನಂ ಪಾಂಡೆ ತನ್ನ ಇನ್‍ಸ್ಟಾಗ್ರಾಂನಲ್ಲಿ ಹಾಟ್ ಫೋಟೋಗಳನ್ನು ಹಾಕುತ್ತಿರುತ್ತಾರೆ. ಆದರೆ ಈ ಬಾರಿ ಪೂನಂ ತನ್ನ ಪೋಸ್ಟ್ ಲೈಕ್ ಮಾಡೋರಿಗೆ ಹಾಟ್ ಗಿಫ್ಟ್ ನೀಡಲಿದ್ದಾರೆ.

    ತನ್ನ ಮೂರು ಫೋಟೋವನ್ನು ಪೋಸ್ಟ್ ಮಾಡಿರುವ ಪೂನಂ ಅದಕ್ಕೆ, “ನನ್ನ ಕೊನೆಯಲ್ಲಿರುವ ಮೂರು ಪೋಸ್ಟ್ ಲೈಕ್ ಮಾಡಿ. ನಾನು ನಿಮಗೆ ಹಾಟ್ ಗಿಫ್ಟ್ ನೀಡುತ್ತೇನೆ” ಎಂದು ಬರೆದುಕೊಂಡಿದ್ದಾರೆ.

    ಈ ಆಫರ್ ಅಲ್ಲಿ ಪೂನಂ ತನ್ನ ಮೂರು ಹಾಟ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೊಟೋಗಳನ್ನು ಲೈಕ್ ಮಾಡಿದರೆ ಪೂನಂ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲಿದ್ದಾರೆ.

    ಪೂನಂ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲ್ಲೂ ಸಕ್ರಿಯರಾಗಿರುತ್ತಾರೆ. ಅಲ್ಲದೇ ತಮ್ಮ ಹಾಟ್ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈಗ ಮೂರು ಫೋಟೋ ಹಾಕಿ ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ್ದಾರೆ.

    😉

    A post shared by Poonam Pandey (@ipoonampandey) on

    Gift for you ❤

    A post shared by Poonam Pandey (@ipoonampandey) on

    Real girls aren’t perfect. Perfect girls aren’t real. ❤

    A post shared by Poonam Pandey (@ipoonampandey) on