Tag: ಲೈಕಾ ಪ್ರೊಡಕ್ಷನ್

  • ಪೊನ್ನಿಯಿನ್ ಸೆಲ್ವನ್ ನಿರ್ಮಾಣ ಸಂಸ್ಥೆ ಮೇಲೆ ED  ದಾಳಿ

    ಪೊನ್ನಿಯಿನ್ ಸೆಲ್ವನ್ ನಿರ್ಮಾಣ ಸಂಸ್ಥೆ ಮೇಲೆ ED ದಾಳಿ

    ಮಿಳಿನ (Tamil) ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) (ED Raid) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಣಿರತ್ನಂ ನಿರ್ದೇಶನದಲ್ಲಿ ಮೂಡಿ ಬಂದಿರುವ ಪೊನ್ನಿಯಿನ್ ಸೆಲ್ವನ್ (Ponniyin Selvan)  ಸಿನಿಮಾ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಬೆನ್ನಲ್ಲೇ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಹಲವು ಗಂಟೆಗಳಿಂದ ಸಂಸ್ಥೆ ಹಾಗೂ ಮಾಲೀಕರ ಮನೆ ಮೇಲೂ ದಾಳಿ ಮಾಡಿದ್ದಾರಂತೆ.

    ಲೈಕಾ ಪ್ರೊಡಕ್ಷನ್ ((Lyca Production)) ದಕ್ಷಿಣ ಭಾರತದ ಅತ್ಯಂತ ದೊಡ್ಡ ನಿರ್ಮಾಣ ಸಂಸ್ಥೆ. ತಮಿಳಿನ ಬಹುತೇಕ ಸ್ಟಾರ್ ನಟರ ಚಿತ್ರಗಳಿಗೆ ಈ ಸಂಸ್ಥೆ ಹಣ ಹೂಡಿದೆ. ಪೊನ್ನಿಯಿನ್ ಸೆಲ್ವನ್ ಸಿನಿಮಾ ನಿರ್ಮಾಣಕ್ಕಾಗಿಯೇ ಅದು 600 ಕೋಟಿ ರೂಪಾಯಿಗೂ ಹೆಚ್ಚು ಹಣ ಹೂಡಿತ್ತು. ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿ ಬಂದಿತ್ತು. ಎರಡೂ ಭಾಗಗಳೂ ಸೂಪರ್ ಹಿಟ್ ಆಗಿವೆ. ಎಂಟು ನೂರು ಕೋಟಿಗೂ ಅಧಿಕ ಹಣವನ್ನು ವಾಪಸ್ಸು ತಂದುಕೊಟ್ಟಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮುಂದಿನ ಪೀಳಿಗೆಯೂ ಕೊಲ್ಲೂರಿಗೆ ಬರಬೇಕಂದ್ರೆ ‘ದಿ ಕೇರಳ ಸ್ಟೋರಿ’ ಮೂವಿ ನೋಡಿ

    ಲೈಕಾ ಪ್ರೊಡಕ್ಷನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದ್ದರಿಂದ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಂಸ್ಥೆಗೆ ಸೇರಿದ ಒಟ್ಟು ಎಂಟು ಕಚೇರಿಗಳ ಮೇಲೆ ಇಡಿ ದಾಳಿ ನಡೆದಿದೆ. 2014ರಿಂದ ಈ ಸಂಸ್ಥೆಯನ್ನು ಪ್ರಾರಂಭಿಸಿರುವ ಎ ಸುಭಾಸ್ಕರನ್ (A. Subhaskaran) ಇದರ ಮಾಲೀಕರು. ಕತ್ತಿ, ದಿಯಾ, 2.0, ಡಾನ್ ಸೇರಿದಂತೆ ಸಾಕಷ್ಟು ಚಿತ್ರಗಳನ್ನು ಈ ಸಂಸ್ಥೆ ನಿರ್ಮಾಣವಾಗಿದೆ.

  • ಲೈಕಾ ಪ್ರೊಡಕ್ಷನ್ಸ್ ತೆಕ್ಕೆಗೆ ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ: ಕೊಟ್ಟಿದ್ದು ಎಷ್ಟು ಕೋಟಿ?

    ಲೈಕಾ ಪ್ರೊಡಕ್ಷನ್ಸ್ ತೆಕ್ಕೆಗೆ ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ: ಕೊಟ್ಟಿದ್ದು ಎಷ್ಟು ಕೋಟಿ?

    ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ದೇಶಕ ಆರ್.ಚಂದ್ರು  (R. Chandru)ಅವರ, ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Sudeep) ಕಾಂಬಿನೇಷನ್ ನ ‘ಕಬ್ಜ’ (Kabzaa) ಸಿನಿಮಾಗೆ ದೇಶಾದ್ಯಂತ ಭಾರೀ ಬೇಡಿಕೆ ಬಂದಿದೆ. ಬಾಲಿವುಡ್ ನಂತರ ತಮಿಳಿನಲ್ಲೂ (Tamil) ಪ್ರತಿಷ್ಠಿತ ಸಂಸ್ಥೆಯೇ ವಿತರಣಾ ಹಕ್ಕು ಪಡೆದುಕೊಂಡಿದೆ. ಈಗಾಗಲೇ ಅದ್ಧೂರಿ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ (Lyca Production) ‘ಕಬ್ಜ’ ಚಿತ್ರದ ವಿತರಣಾ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ತಮಿಳಿನಲ್ಲೂ ಕಬ್ಜ ಹವಾ ಕ್ರಿಯೇಟ್ ಮಾಡಿದೆ.

    ಲೈಕಾ ಸಂಸ್ಥೆಯ ಮುಖ್ಯಸ್ಥ ಸುಭಾಷ್ ಕರಣ್ ಬಹುಕೋಟಿ ನೀಡಿ ವಿತರಣಾ ಹಕ್ಕುಗಳನ್ನು ಖರೀದಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ, ಎಷ್ಟು ಕೋಟಿಗೆ ಅದು ಸೇಲ್ ಆಗಿದೆ ಎನ್ನುವ ವಿಚಾರವನ್ನು ಮಾತ್ರ ಲೈಕಾ ಸಂಸ್ಥೆ ಬಹಿರಂಗ ಪಡಿಸಿಲ್ಲ. ಮಾರ್ಚ್ 17 ರಂದು ದೇಶಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ತಮಿಳಿನಲ್ಲೇ ಮುನ್ನೂರಕ್ಕೂ ಹೆಚ್ಚು ಥಿಯೇಟರ್ ನಲ್ಲಿ ತೆರೆಕಾಣಲಿದೆಯಂತೆ. ಇದನ್ನೂ ಓದಿ: ನಟಿ ಇಲಿಯಾನ ಡಿ ಕ್ರೂಸ್ ಗೆ ಬ್ಯಾನ್ ಬಿಸಿ: ಫಿಲ್ಮ್ ಚೇಂಬರ್ ನಿರ್ಧಾರ

    ಮೊನ್ನೆಯಷ್ಟೇ ಅಮಿತಾಭ್​ ಬಚ್ಚನ್​ ಅವರಿಂದ ಅಧಿಕೃತವಾಗಿ ಟ್ರೈಲರ್ ರಿಲೀಸ್ ಆಗಿದ್ದು ಈ ಟ್ರೇಲರ್​ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದ್ದು, ಅದರಲ್ಲೂ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಾಲಿವುಡ್​ ನಟ-ನಟಿಯರು ಮತ್ತು ತಂತ್ರಜ್ನರಾದ ಅಜಯ್​ ದೇವಗನ್​, ರಾಕೇಶ್​ ರೋಶನ್​, ಮನೋಜ್​ ಬಾಜಪೇಯಿ, ಶ್ರೇಯಸ್​ ತಲ್ಪಾಡೆ, ಕಶ್ಮೀರಾ ಶಾ, ರೋನಿತ್ ರಾಯ್​, ಮಧುರ್​ ಭಂಡಾರ್ಕರ್​, ಮೀರಾ ಚೋಪ್ರಾ, ಕುನಾಲ್​ ಕೋಹ್ಲಿ ಸೇರಿದಂತೆ ಹಲವರು ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಿಪಡಿಸಿದ್ದಾರೆ. ಚಿತ್ರದ ಪಾತ್ರಗಳು, ಗ್ರಾಫಿಕ್ಸ್​, ಮೇಕಿಂಗ್​ ಎಲ್ಲವೂ ಅದ್ಭುತವಾಗಿದೆ ಎನ್ನುವುದರ ಜತೆಗೆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

    ‘ಕಬ್ಜಾ’ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಉಪೇಂದ್ರ, ಸುದೀಪ್​, ಶಿವರಾಜ್​ಕುಮಾರ್​, ಶ್ರೀಯಾ ಶರಣ್​, ಕಬೀರ್ ದುಹಾನ್​ ಸಿಂಗ್​, ಪ್ರಮೋದ್​ ಶೆಟ್ಟಿ, ನವಾಬ್​ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  • ರಜನಿಯ 170ನೇ ಚಿತ್ರ ಘೋಷಿಸಿದ ಲೈಕಾ ಪ್ರೊಡಕ್ಷನ್ : ನಿರ್ದೇಶಕ ಯಾರು ಗೊತ್ತಾ?

    ರಜನಿಯ 170ನೇ ಚಿತ್ರ ಘೋಷಿಸಿದ ಲೈಕಾ ಪ್ರೊಡಕ್ಷನ್ : ನಿರ್ದೇಶಕ ಯಾರು ಗೊತ್ತಾ?

    ಮಿಳಿನ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ (Lyca Production) ರಜನಿಕಾಂತ್ (Rajinikanth) ನಟನೆಯ 170ನೇ ಸಿನಿಮಾವನ್ನು (New Cinema) ಘೋಷಣೆ ಮಾಡಿದೆ. ಲೈಕಾ ಸಂಸ್ಥೆಯ ಮುಖ್ಯಸ್ಥ ಸುಭಾಸ್ಕರನ್ ಹುಟ್ಟು ಹಬ್ಬದ ದಿನದಂದು ಈ ಮಹತ್ವದ ಸುದ್ದಿಯನ್ನು ಪ್ರಕಟಿಸಿದ್ದು, ಜೈ ಭೀಮ್ (Jai Bheem) ಚಿತ್ರ ಖ್ಯಾತಿಯ ಟಿ.ಜಿ ಜ್ಞಾನವೇಲ್ (Gnanavel) ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಿಕೊಂಡಿದೆ.

    ಸದ್ಯ ರಜನಿಕಾಂತ್ 169ನೇ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಜೈಲರ್ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಹಲವು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಕನ್ನಡದಿಂದ ಶಿವರಾಜ್ ಕುಮಾರ್, ಮಲಯಾಳಂನಿಂದ ಮೋಹನ್ ಲಾಲ್ ಸೇರಿದಂತೆ ಹಲವು ಹೆಸರಾಂತ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಮಂಗಳೂರು ಸೇರಿದಂತೆ ದೇಶದ ನಾನಾ ಕಡೆ ಚಿತ್ರೀಕರಣವಾಗಿದೆ. ಈ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ 170ನೇ ಸಿನಿಮಾದಲ್ಲಿ ತೊಡಗಲಿದ್ದಾರೆ ರಜನಿ.

    ಜೈ ಭೀಮ್ ಸಿನಿಮಾದ ಮೂಲಕ ತಮಿಳು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದ್ದ ಜ್ಞಾನವೇಲು, ಮತ್ತೊಂದು ಹೊಸ ಕಥೆಯೊಂದಿಗೆ ಲೈಕಾ ಪ್ರೊಡಕ್ಷನ್ ಜೊತೆ ಕೈ ಜೋಡಿಸಿದ್ದಾರೆ. ರಜನಿಕಾಂತ್ ಗಾಗಿಯೇ ಅವರು ಹೊಸ ಬಗೆಯ ಪಾತ್ರವನ್ನು ಬರೆದುಕೊಂಡಿದ್ದು, ಈ ಮೂಲಕ ಮತ್ತೊಂದು ಸಮಾಜಮುಖಿ ಸಿನಿಮಾವನ್ನು ನೀಡಲಿದ್ದಾರಂತೆ. ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ ಸ್ವೀಟ್‌ ಹಾರ್ಟ್‌ಗೆ ವಿಶ್‌ ಮಾಡಿದ ರಿಷಬ್ ಶೆಟ್ಟಿ

     

    ಲೈಕಾ ಪ್ರೊಡಕ್ಷನ್ ಈ ಮೊದಲು ರಜನಿಕಾಂತ್ ನಟನೆಯ ದರ್ಬಾರ್ ಮತ್ತು ಕಾಲ ಚಿತ್ರವನ್ನು ನಿರ್ಮಾಣ ಮಾಡಿದೆ. ಇದೇ ಮೊದಲ ಬಾರಿಗೆ ಜ್ಞಾನವೇಲ್ ಚಿತ್ರಕ್ಕೆ ಹಣ ಹೂಡುತ್ತಿದೆ. ಹೆಸರಾಂತ ಸಂಸ್ಥೆಯ ಜೊತೆಗೆ ಹೆಸರಾಂತ ನಟ ಮತ್ತು ಪ್ರತಿಭಾವಂತ ನಿರ್ದೇಶಕ ಒಟ್ಟಾಗಿರುವುದರಿಂದ ರಜನಿಯ 170ನೇ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಮೂಡಿದೆ.

  • ಕಿಚ್ಚ ಸುದೀಪ್ ಸಿನಿಮಾ ಮಾಡಲಿದೆ ತಮಿಳಿನ ಪ್ರಸಿದ್ಧ ನಿರ್ಮಾಣ ಸಂಸ್ಥೆ

    ಕಿಚ್ಚ ಸುದೀಪ್ ಸಿನಿಮಾ ಮಾಡಲಿದೆ ತಮಿಳಿನ ಪ್ರಸಿದ್ಧ ನಿರ್ಮಾಣ ಸಂಸ್ಥೆ

    ಸುದೀಪ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವುದರ ಬಗ್ಗೆ ಯಾವುದೇ ಕ್ಲ್ಯಾರಿಟಿ ಇಲ್ಲ. ಯಾವತ್ತು ಆ ಸಿನಿಮಾದ ಬಗ್ಗೆ ಮಾಹಿತಿ ಸಿಗಲಿದೆ ಎನ್ನುವುದೂ ಗೊತ್ತಿಲ್ಲ. ಆದರೂ, ಸುದೀಪ್ ಅವರ ಸಿನಿಮಾದ ಸುದ್ದಿಗಳು ಬರುತ್ತಲೇ ಇವೆ. ಈಗಾಗಲೇ ಸುದೀಪ್ ಎರಡು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಒಂದು ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದರೆ, ಮತ್ತೊಂದು ಚಿತ್ರಕ್ಕೆ ನಂದ ಕಿಶೋರ್ ನಿರ್ದೇಶಕರು. ಈ ಎರಡರಲ್ಲಿ ಯಾವುದು ಮೊದಲಾಗುವುದೋ ಕಾದು ನೋಡಬೇಕು.

    ಈ ಮಧ್ಯ ಮತ್ತೊಂದು ಸುದ್ದಿ ಹೊರಬಂದಿದ್ದು, ತಮಿಳಿನ ಹೆಸರಾಂತ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ ಈ ಬಾರಿ ಸುದೀಪ್ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸುದೀಪ್ ಅವರ ಜೊತೆ ಮಾತುಕತೆ ಕೂಡ ನಡೆದಿದೆಯಂತೆ. ಲೈಕಾ ಸಂಸ್ಥೆಯು ಯಾವ ಸಿನಿಮಾ, ನಿರ್ದೇಶಕರು ಯಾರು ಎನ್ನುವುದನ್ನು ಬಹಿರಂಗ ಪಡಿಸದೇ ಇದ್ದರೂ ಕನ್ನಡ ಸಿನಿಮಾ ರಂಗದಲ್ಲಿ ಈ ಸುದ್ದಿಯಂತೂ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ: ನಟಿ ಅಶು ರೆಡ್ಡಿ ಕಾಲು ಹಿಡಿದ ರಾಮ್ ಗೋಪಾಲ್ ವರ್ಮಾ: ನೆಟ್ಟಿಗರು ಶಾಕ್

    ಹೊಂಬಾಳೆ ಬ್ಯಾನರ್ ನಲ್ಲೂ ಸುದೀಪ್ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೊಂಬಾಳೆ ಕಾರ್ತಿಕ್ ಅವರೇ ಸುದೀಪ್ ಜೊತೆಗಿನ ಫೋಟೋವನ್ನು ಹಂಚಿಕೊಂಡು ಸಣ್ಣದೊಂದು ಸುಳಿವನ್ನೂ ನೀಡಿದ್ದಾರೆ. ಈ ಸಿನಿಮಾ ಯಾವಾಗ ಆಗಲಿದೆ ಎನ್ನುವುದು ಬಹಿರಂಗವಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಈ ಸುದ್ದಿಯೂ ಅಭಿಮಾನಿಗಳಿಗೆ ಸಂಭ್ರಮ ತರುವುದಂತೂ ಸುಳ್ಳು ಅಲ್ಲ. ಇಷ್ಟರ ಮಧ್ಯ ಸುದೀಪ್ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವುದನ್ನು ಕಾದು ನೋಡೋಣ.

    Live Tv
    [brid partner=56869869 player=32851 video=960834 autoplay=true]