Tag: ಲೈಂಗಿಕ ಶಿಕ್ಷಣ

  • ಲೈಂಗಿಕ ಶಿಕ್ಷಣ ಕುರಿತು ಸಿನಿಮಾ ಮಾಡಲಿದ್ದಾರೆ ಬಾಲಿವುಡ್ ನಟ ಅಕ್ಷಯ್ ಕುಮಾರ್

    ಲೈಂಗಿಕ ಶಿಕ್ಷಣ ಕುರಿತು ಸಿನಿಮಾ ಮಾಡಲಿದ್ದಾರೆ ಬಾಲಿವುಡ್ ನಟ ಅಕ್ಷಯ್ ಕುಮಾರ್

    ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ರೆಡ್ ಸಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವೆಲ್ ನಲ್ಲಿ ಭಾಗಿ ಆಗಿರುವ ಅವರು, ತಮ್ಮದೊಂದು ಹೊಸ ಸಿನಿಮಾ ಬರುತ್ತಿದ್ದು, ಅದು ಲೈಂಗಿಕ ಶಿಕ್ಷಣ ಕುರಿತಾದ ಚಿತ್ರವಾಗಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸತತ ಸೋಲಿನ ಬೆನ್ನಲ್ಲೇ ಈ ಸಿನಿಮಾ ಘೋಷಿಸಿರುವುದು ಮ‍ತ್ತೊಂದು ಚರ್ಚೆಗೆ ಕಾರಣವಾಗಿದೆ.

    ರೆಡ್ ಸಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮಾತನಾಡಿರುವ ಅವರು ಈಗಾಗಲೇ ಸಮಾಜಕ್ಕೆ ಸಂದೇಶ ನೀಡುವಂತಹ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಇದೀಗ ಲೈಂಗಿಕ ಶಿಕ್ಷಣದ ಕುರಿತು ಸಿನಿಮಾ ಮಾಡುವ ತಯಾರಿ ನಡೆದಿದೆ. ಇದು ನನ್ನ ಜೀವನದಲ್ಲೇ ಅತೀ ಶ್ರೇಷ್ಠ ಸಿನಿಮಾ ಆಗಿರಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಎಲ್ಲ ಕಡೆಗಳಲ್ಲೂ ಇದು ಇಲ್ಲ. ಇಂತಹ ವಿಷಯಗಳನ್ನು ನಾವು ಕಲಿಸಲೇಬೇಕಾಗಿದೆ ಎಂದಿದ್ದಾರೆ ಅಕ್ಷಯ್. ಇದನ್ನೂ ಓದಿ: `ಅವತಾರ್ 2′ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ: 2 ಕೋಟಿ ಟಿಕೆಟ್ ಸೋಲ್ಡ್ ಔಟ್

    ಪ್ಯಾಡ್ ಮ್ಯಾನ್ ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಸಾಮಾಜಿಕ ಸಂದೇಶವನ್ನು ನೀಡುತ್ತಲೇ ಬಂದಿದ್ದಾರೆ ಅಕ್ಷಯ್ ಕುಮಾರ್. ಇದೇ ಮೊದಲ ಬಾರಿಗೆ ಅವರು ಲೈಂಗಿಕ ಶಿಕ್ಷಣದ ಕುರಿತಾಗಿ ಯೋಚಿಸಿದ್ದಾರೆ. ಕಮರ್ಷಿಯಲ್ ಮತ್ತು ತೃಪ್ತಿ ನೀಡುವಂತಹ ಸಿನಿಮಾಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಎಲ್ಲ ಸಿನಿಮಾಗಳನ್ನೂ ದುಡ್ಡಿಗಾಗಿಯೇ ಮಾಡುವುದಕ್ಕೆ ಆಗುವುದಿಲ್ಲ ಎನ್ನುವುದು ಅವರ ಮಾತು.

    ಈಗಾಗಲೇ ಅಕ್ಷಯ್ ಕುಮಾರ್ ಸೋಲಿನ ಹೊಡೆತಕ್ಕೆ ಕಂಗಾಲಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರಗಳು ಸಾಲು ಸಾಲು ಸೋತಿವೆ. ಹೀಗಾಗಿಯೇ ಅವರು ಮತ್ತೊಂದು ರೀತಿಯ ಚಿತ್ರಕ್ಕೆ ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಕೆಲವು ಮಾಹಿತಿಯನ್ನು ಮಾತ್ರ ಅವರು ಹೊರ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಷಯಗಳನ್ನು ಅವರು ಬಹಿರಂಗ ಪಡಿಸಬಹುದು.

    Live Tv
    [brid partner=56869869 player=32851 video=960834 autoplay=true]

  • ಶಾಲಾ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸಲು ತಮಿಳು ನಾಡು ಸರಕಾರಕ್ಕೆ ಮನವಿ ಮಾಡಿದ ನಿರ್ದೇಶಕ ವೆಟ್ರಿಮಾರನ್

    ಶಾಲಾ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸಲು ತಮಿಳು ನಾಡು ಸರಕಾರಕ್ಕೆ ಮನವಿ ಮಾಡಿದ ನಿರ್ದೇಶಕ ವೆಟ್ರಿಮಾರನ್

    ಶಾಲಾ ಮಕ್ಕಳು ಲೈಂಗಿಕ ಶಿಕ್ಷಣವನ್ನು ಕಲಿಯುವುದರ ಅವಶ್ಯಕತೆ ಇದೆ. ಶಾಲಾ ಪಠ್ಯಕ್ರಮದ ಭಾಗವಾಗಿ ಲೈಂಗಿಕ ಶಿಕ್ಷಣವನ್ನು ಸೇರ್ಪಡೆ ಮಾಡುವುದರ ಬಗ್ಗೆ ಕೇರಳ ಹೈಕೋರ್ಟ್ ಅಭಿಪ್ರಾಯ ವ್ಯಕ್ತ ಪಡಿಸಿರುವ ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್, ಇದನ್ನು ತಮಿಳುನಾಡಿನಲ್ಲೂ ಜಾರಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ವಿಶ್ವ ಲೈಂಗಿಕ ಆರೋಗ್ಯ ದಿನ ಸಂದರ್ಭದಲ್ಲಿ ಮಾತನಾಡಿದ ಅವರು ಸಲಿಂಗ ವಿವಾಹವನ್ನೂ ಬೆಂಬಲಿಸುವುದಾಗಿ ಘೋಷಿಸಿದ್ದಾರೆ.

    ಬಾಂಗ್ಲಾದೇಶದ ಮಹಿಳೆ ಮತ್ತು ತಮಿಳುನಾಡಿನ ಮಹಿಳೆಯ ನಡುವೆ ನಡೆದ ಮದುವೆಯನ್ನು ಉದಾಹರಣೆಯಾಗಿ ತಗೆದುಕೊಂಡ ಅವರು ಇಂತಹ ಮದುವೆಯನ್ನು ನಾಗರೀಕ ಸಮಾಜ ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು. ಅಲ್ಲದೇ, ತಮಿಳುನಾಡಿನ ಸುಭಿಕ್ಷಾ ಸುಬ್ರಮಣಿ ಹಾಗೂ ಟೀನಾ ದಾಸ್ ಸಲಿಂಗಿಗಳು ತಮಿಳು ಸಾಂಪ್ರದಾಯಿಕ ಶೈಲಿಯಲ್ಲಿ ಮದುವೆಯಾಗಿದ್ದನ್ನೂ ಅವರು ನೆನಪಿಸಿಕೊಂಡರು. ಇದನ್ನೂ ಓದಿ: ಮತ್ತೆ ಶುರುವಾಯ್ತು ಬಾಲಿವುಡ್ ಬಾಯ್‌ಕಾಟ್ ಟ್ರೆಂಡ್: `ಬ್ರಹ್ಮಾಸ್ತ್ರʼ ಚಿತ್ರಕ್ಕೆ ವಿರೋಧ

    ಪ್ರತಿಯೊಬ್ಬರೂ ತಮ್ಮ ತಮ್ಮ ಹಕ್ಕುಗಳನ್ನು ಪಡೆದುಕೊಂಡು ಬದುಕಬೇಕು. ತೃತಿಯ ಲಿಂಗಿಗಳಿಗೆ ತಮ್ಮದೇ ಆದ ಬದುಕಿನ ಹಕ್ಕು ನೀಡುವಂತೆ ಕರೆಕೊಟ್ಟ ವೆಟ್ರಿಮಾರನ್, ಲೈಂಗಿಕ ಶಿಕ್ಷಣದ ಬಗ್ಗೆ ಒತ್ತು ನೀಡುವಂತೆ ಅವರು ಕೇಳಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಕಾಂಡೋಮ್ ರೇಸ್-ಬೀದಿಗಿಳಿದು ಪೋಷಕರ ಪ್ರತಿಭಟನೆ

    ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಕಾಂಡೋಮ್ ರೇಸ್-ಬೀದಿಗಿಳಿದು ಪೋಷಕರ ಪ್ರತಿಭಟನೆ

    ಸ್ಯಾಕ್ರಮೆಂಟೋ : ಶಾಲೆಗಳಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಶಿಕ್ಷಣ ನೀಡುತ್ತಾರೆ. ಪಠ್ಯದ ಜೊತೆಗೆ ಆಟಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಕ್ಯಾಲಿಫೋರ್ನಿಯಾದ ಶಾಲೆಗಳಲ್ಲಿ ಕಾಂಡೋಮ್ ರೇಸ್ ನಡೆಸಲು ಅಲ್ಲಿಯ ಶಿಕ್ಷಣ ಮಂಡಳಿ ಆದೇಶಿಸಿದೆ. ಶಿಕ್ಷಣ ಮಂಡಳಿ ತನ್ನ ಆದೇಶವನ್ನು ಹಿಂಪಡೆಯಬೇಕೆಂದು ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

    ಏನಿದು ಕಾಂಡೋಮ್ ರೇಸ್?
    ಶಾಲೆಗಳಲ್ಲಿ ಸುಮಾರು 10 ರಿಂದ 12 ವಯಸ್ಸಿನ ವಿದ್ಯಾರ್ಥಿನಿಯರು ತನ್ನ ಎಲ್ಲ ಸಹಪಾಠಿಗಳ (ಹುಡುಗರು ಸೇರಿದಂತೆ) ಮುಂದೆ ಕಾಂಡೋಮ್ ಬಳಕೆಯನ್ನು ತೋರಿಸಬೇಕು. ಆಟಿಕೆಯ ವಸ್ತುವಿಗೆ ಕಾಂಡೋಮ್ ಹಾಕುವ ಮೂಲಕ ಎಲ್ಲರಿಗೆ ಬಳಕೆಯ ವಿಧಾನದ ಬಗ್ಗೆ ತಿಳಿಸುವುದು.

    ಈ ಕುರಿತು ಪ್ರತಿಕ್ರಿಯಿಸಿರುವ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ರೆಬೆಚಾ ಫ್ರೀಡ್ರಿಚ್, ಇದೊಂದು ಶಾಕಿಂಗ್ ನಿರ್ಧಾರವಾಗಿದ್ದು, 10ರಿಂದ 12 ವರ್ಷದ ವಿದ್ಯಾರ್ಥಿನಿಯರು ಎಲ್ಲರ ಮುಂದೆ ಆಟಕೆಗೆ ಕಾಂಡೋಮ್ ತೊಡಿಸುವ ವಿಧಾನ ಶಾಲೆಗಳಲ್ಲಿ ಜಾರಿಗೆ ತಂದಿರೋದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಸಾರ್ವಜನಿಕವಾಗಿ ಲೈಂಗಿಕ ಶಿಕ್ಷಣದ ಕುರಿತು ತುಂಬಾ ಎಚ್ಚರಿಕೆಯಿಂದ ಮಾತನಾಡುತ್ತೇನೆ. ನನ್ನ ಮಾತುಗಳಿಂದ ಯಾರು ಮುಜುಗರಕ್ಕೆ ಒಳಗಾಬಾರದೆಂಬವುದು ನನ್ನ ನಿಲುವು. ಶಾಲೆಯ ಕೊಠಡಿಯಲ್ಲಿ ಹುಡುಗರ ಮುಂದೆ ವಿದ್ಯಾರ್ಥಿನಿಯರು ಕಾಂಡೋಮ್ ಬಳಕೆಯ ಬಗ್ಗೆ ಮಾತನಾಡುವುದು ಅಪಾಯಕಾರಿ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಲೈಂಗಿಕ ಶಿಕ್ಷಣ ನೀಡಬೇಕೆಂದು ಪ್ರೀಡ್ರಿಚ್ ಸ್ಥಳೀಯ ಶಿಕ್ಷಣ ಮಂಡಳಿಗೆ ಸಲಹೆ ನೀಡಿದ್ದಾರೆ.

    ಶಿಕ್ಷಣ ಮಂಡಳಿ ಮೇ ನಲ್ಲಿ ಈ ಆದೇಶವನ್ನು ಹೊರಡಿಸಿದೆ. ಶಿಕ್ಷಣ ಮಂಡಳಿ ಕೂಡಲೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕೆಂದು ಕ್ಯಾಲಿಫೋರ್ನಿಯಾದೆಲ್ಲಡೆ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೋಷಕರ ಪ್ರತಿಭಟನೆಗೆ ಹೋರಾಟಗಾರ್ತಿ ಪ್ರೀಡ್ರಿಚ್ ಬೆಂಬಲ ನೀಡಿದ್ದಾರೆ.