Tag: ಲೈಂಗಿಕ ದೌರ್ಜನ್ಯ ಪ್ರಕರಣ

  • ಕಾನೂನು ಬಿಟ್ಟು ನಾನೇನು ಮಾತಾಡಲ್ಲ, ಕೈ ಮುಗಿಯುತ್ತೇನೆ ಬಿಟ್ಟುಬಿಡಿ: ಹೆಚ್.ಡಿ ರೇವಣ್ಣ

    ಕಾನೂನು ಬಿಟ್ಟು ನಾನೇನು ಮಾತಾಡಲ್ಲ, ಕೈ ಮುಗಿಯುತ್ತೇನೆ ಬಿಟ್ಟುಬಿಡಿ: ಹೆಚ್.ಡಿ ರೇವಣ್ಣ

    ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದ (Kidnap Case) ಆರೋಪ ಹೊತ್ತಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಕಾನೂನು ಬಿಟ್ಟು ನಾನೇನು ಮಾತನಾಡಲ್ಲ. ಕೈ ಮುಗಿಯುತ್ತೇನೆ ಬಿಟ್ಟು ಬಿಡಿ ಎಂದು ಗರಂ ಆದ ಘಟನೆ ವಿಧಾನಸೌಧದಲ್ಲಿ ನಡೆದಿದೆ‌.

    ವಿಧಾನಸಭೆಯ ಕಾಗದ ಪತ್ರ ಸಮಿತಿ ಅಧ್ಯಕ್ಷರಾಗಿರುವ ಹೆಚ್‌.ಡಿ ರೇವಣ್ಣ ಅವರಿಂದು ಸಮಿತಿಯ ಸಭೆಗೆ ವಿಧಾನಸೌಧಕ್ಕೆ (Vidhana Soudha) ಬಂದಿದ್ದರು. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೆ ಮೌನವಾಗಿಯೇ ತೆರಳಿದ ರೇವಣ್ಣ, 15 ನಿಮಿಷಗಳಲ್ಲೇ ಕಾಗದ ಪತ್ರ ಸಮಿತಿ ಸಭೆ ಮುಗಿಸಿ ಹೊರಟರು.

    ಸದ್ಯ ರೇವಣ್ಣ ಅವರನ್ನು ಕಾಗದ ಪತ್ರ ಸಮಿತಿ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡುವಂತೆ ಮನವಿ ಸಹ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ದೇಶದ ಬೆಳವಣಿಗೆಗೆ ಸಾಕ್ಷಿಯಾಗಲು ತೃಪ್ತಿಕರವಾಗಿದೆ: ಮೋದಿ ಪ್ರತಿಕ್ರಿಯೆಗೆ ರಶ್ಮಿಕಾ ಸಂತಸ

    ವಿಧಾನಸೌಧದಿಂದ ವಾಪಾಸ್ ಹೋಗುವಾಗ, ಪ್ರತಿಕ್ರಿಯೆ ಕೊಡಲು ನಿರಾಕರಿಸಿದ ರೇವಣ್ಣ ಅವರು, ಅಸಮಧಾನ, ಬೇಸರ, ಕೋಪದ ನಡುವೆಯೇ ನಾನು ಏನೂ ಮಾತಾಡಲ್ಲ, ಕಾನೂನು ಬಿಟ್ಟು ಏನೂ ಮಾತಾಡಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ ಎಂದು ಗರಂ ಆಗಿದ್ದಾರೆ. ಬಳಿಕ ಸಿಡುಕುತ್ತಲೇ ವಿಧಾನಸೌಧದಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ

  • ನಟಿ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ – ನಟ ದಿಲೀಪ್‌ ಮನೆ ಮೇಲೆ ಕೇರಳ ಪೊಲೀಸರ ದಾಳಿ

    ನಟಿ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ – ನಟ ದಿಲೀಪ್‌ ಮನೆ ಮೇಲೆ ಕೇರಳ ಪೊಲೀಸರ ದಾಳಿ

    ತಿರುವನಂತಪುರಂ: 2017ರಲ್ಲಿ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ವಿಭಾಗದ ಕೇರಳ ಪೊಲೀಸ್‌ ತಂಡವು ನಟ ದಿಲೀಪ್‌ ಮತ್ತು ಆತನ ಸಹೋದರನ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿದೆ.

    ದಿಲೀಪ್‌ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಕ್ಲಿಪ್‌ವೊಂದನ್ನು ಟಿವಿ ವಾಹಿನಿಯೊಂದು ಬಿಡುಗಡೆ ಮಾಡಿತ್ತು. ಹೀಗಾಗಿ ಭಾನುವಾರ ನಟನ ವಿರುದ್ಧ ಪ್ರಕರಣ ದಾಖಲಾಗಿತ್ತು. ನಟ, ತನಿಖಾಧಿಕಾರಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಆಡಿಯೋದಲ್ಲಿ ಇದೆ. ಇದನ್ನೂ ಓದಿ: ಲೋಕಲ್ ಕಂಟೈನ್ಮೆಂಟ್‍ಗೆ ಮೋದಿ ಸಲಹೆ

    ನಟಿಯೊಬ್ಬರ ಮೇಲಿನ ಹಲ್ಲೆ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದಿಲೀಪ್‌ ವಿರುದ್ಧ ನಿರ್ದೇಶಕ ಬಾಲಚಂದ್ರಕುಮಾರ್‌ ಹಲವು ಹೇಳಿಕೆಗಳನ್ನು ನೀಡಿದ್ದರು. ತನಿಖಾಧಿಕಾರಿಗಳ ಮೇಲೆ ದಾಳಿ ನಡೆಸುವ ಸಂಚಿನ ಕುರಿತು ಹಲವು ಚರ್ಚೆಗಳು ನಡೆದಿದ್ದವು ಎಂದು ಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ.

    ಕಳೆದ ವರ್ಷ ನ.25 ರಂದು ಬಾಲಚಂದ್ರಕುಮಾರ್‌, ಕೇರಳ ಸಿಎಂಗೆ ದೂರು ಸಲ್ಲಿಸಿದ್ದರು. ನಟ ದಿಲೀಪ್‌ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಟನ ಮನೆಯಲ್ಲಿ ಪ್ರಮುಖ ಆರೋಪಿ ಪಲ್ಸರ್‌ ಸುನಿ ಕಾಣಿಸಿಕೊಂಡಿದ್ದನ್ನು ನಾನು ನೋಡಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದಿಲೀಪ್‌ ಕೂಡ ಆರೋಪಿ ಎಂದು ದೂರಿದ್ದಾರೆ. ಇದನ್ನೂ ಓದಿ: UP Election – ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ 50 ಮಹಿಳೆಯರು, ಅತ್ಯಾಚಾರ ಸಂತ್ರಸ್ತೆ ತಾಯಿಯೂ ಅಭ್ಯರ್ಥಿ

    POLICE JEEP

    ನಟ ದಿಲೀಪ್‌ ಅವರಿಗೆ ಸಂಬಂಧಿಸಿದ ಮೂರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲು ಅಧಿಕಾರಿಗಳ ಮೂರು ತಂಡಗಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಬದುಕುಳಿದಿದ್ದ ನಟಿ, ನಟ ದಿಲೀಪ್‌ ಕುಮಾರ್‌ ವಿರುದ್ಧ ತನಿಖೆಗೆ ಒತ್ತಾಯಿಸಿದ್ದರು. ಸಂತ್ರಸ್ತೆ ನಟಿ ತಮಿಳು, ತೆಲುಗು, ಮಲಯಾಳಂ ಭಾಷೆ ಸಿನಿಮಾಗಳಲ್ಲೂ ನಟಿಸಿದ್ದಾರೆ. ಪ್ರಕರಣದಲ್ಲಿ 10 ಆರೋಪಿಗಳಿದ್ದು, ಆರಂಭದಲ್ಲಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ದಿಲೀಪ್‌ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.