Tag: ಲೈಂಗಿಕ

  • ನ್ಯಾಯ ಕೇಳಲು ಬಂದ ಮಹಿಳೆಗೆ ಕಿರುಕುಳ: ಪ.ಪಂ ಮುಖ್ಯಾಧಿಕಾರಿ ಅಮಾನತು

    ನ್ಯಾಯ ಕೇಳಲು ಬಂದ ಮಹಿಳೆಗೆ ಕಿರುಕುಳ: ಪ.ಪಂ ಮುಖ್ಯಾಧಿಕಾರಿ ಅಮಾನತು

    ಬಳ್ಳಾರಿ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯಾಗಿದ್ದ ಶಿವಕುಮಾರ ಕಟ್ಟಿಮನಿಯನ್ನು ಅಮಾನತು ಮಾಡಲಾಗಿದೆ.

    ಕಳೆದ ತಿಂಗಳು ಕಮಲಾಪುರ ಪಟ್ಟಣದ ಮಹಿಳೆಯೊಬ್ಬರ ಆಶ್ರಯ ಮನೆ ಮುಂದಿನ ಒತ್ತುವರಿ ತೆರವುಗೊಳಿಸಲು ಮುಖ್ಯಾಧಿಕಾರಿ ಲೈಂಗಿಕ ಕಿರುಕುಳ ನೀಡಿದ್ದರು. ಅಲ್ಲದೇ ಮಹಿಳೆ ದೂರು ನೀಡದಂತೆ ಬೆದರಿಕೆ ಸಹ ಹಾಕಿದ್ದರು.

    ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯ ಲೈಂಗಿಕ ಕಿರುಕುಳದ ಬಗ್ಗೆ ಪಬ್ಲಿಕ್ ಟವಿ ಆಡಿಯೋ ಸಮೇತ ಸುದ್ದಿ ಪ್ರಸಾರ ಮಾಡಿತ್ತು. ಇದೀಗ ಮಹಿಳೆಯ ದೂರಿನ ಮೇರೆಗೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಶಿವಕುಮಾರ ಕಟ್ಟಿಮನಿಯನ್ನು ಜಿಲ್ಲಾ ಯೋಜನಾ ನಿರ್ದೇಶಕರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ: ನ್ಯಾಯ ಕೇಳಲು ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಪುರಸಭೆ ಮುಖ್ಯಾಧಿಕಾರಿ!

     

  • ನ್ಯಾಯ ಕೇಳಲು ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಪುರಸಭೆ ಮುಖ್ಯಾಧಿಕಾರಿ!

    ನ್ಯಾಯ ಕೇಳಲು ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ಪುರಸಭೆ ಮುಖ್ಯಾಧಿಕಾರಿ!

    ಬಳ್ಳಾರಿ: ನ್ಯಾಯ ಕೇಳಿಕೊಂಡು ಬಂದ ಮಹಿಳೆಗೆ ಪುರಸಭೆ ಮುಖ್ಯಾಧಿಕಾರಿ ಲೈಂಗಿಕ ಕಿರುಕುಳ ನೀಡಿದ ಘಟನೆ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ.

    ಹೊಸಪೇಟೆ ತಾಲೂಕಿನ ಕಮಲಾಪುರ ಪುರಸಭೆಯ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ ಮಹಿಳೆಯ ಸಮಸ್ಯೆ ಬಗೆಹರಿಸಿಲು ಮಂಚಕ್ಕೆ ಕರೆದ ಘಟನೆ ಇದಾಗಿದೆ. ಆಶ್ರಯ ಮನೆ ಮುಂದಿನ ಒತ್ತುವರಿ ತೆರವು ಮಾಡುವ ವಿಚಾರವಾಗಿ ಮಹಿಳೆಯೊಬ್ಬರು ಮುಖ್ಯಾಧಿಕಾರಿಗೆ ಮನವಿ ಮಾಡಿದ್ರು. ಹೀಗಾಗಿ ಒತ್ತುವರಿ ತೆರವು ಮಾಡಲು ಪುರಸಭೆ ಮುಖ್ಯಾಧಿಕಾರಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಮಂಚಕ್ಕೆ ಕರೆದಿದ್ದಾನೆ.

    ಇದನ್ನು ವಿರೋಧಿಸಿದ ಮಹಿಳೆಗೆ ಆಡಿಯೋ ಡಿಲೀಟ್ ಮಾಡದಿದ್ದರೇ ಪೊಲೀಸ್ ಕಂಪ್ಲೇಂಟ್ ನೀಡುವುದಾಗಿ ಸಹ ಬೆದರಿಕೆ ಹಾಕಿದ್ದಾನೆ. ಪುರಸಭೆ ಮುಖ್ಯಾಧಿಕಾರಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಬೆದರಿಕೆಯೊಡ್ಡಿದ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.