Tag: ಲೇಖಕ

  • ವೆಂಟಿಲೇಟರ್‌ನಲ್ಲಿ ಸಲ್ಮಾನ್ ರಶ್ದಿ – ಆರೋಗ್ಯ ಸ್ಥಿತಿ ಗಂಭೀರ, ಕಣ್ಣು ಕಳೆದುಕೊಳ್ಳುವ ಸಾಧ್ಯತೆ

    ವೆಂಟಿಲೇಟರ್‌ನಲ್ಲಿ ಸಲ್ಮಾನ್ ರಶ್ದಿ – ಆರೋಗ್ಯ ಸ್ಥಿತಿ ಗಂಭೀರ, ಕಣ್ಣು ಕಳೆದುಕೊಳ್ಳುವ ಸಾಧ್ಯತೆ

    ವಾಷಿಂಗ್ಟನ್‌: ಪಶ್ಚಿಮ ನ್ಯೂಯಾರ್ಕ್‍ನಲ್ಲಿ ನಿನ್ನೆ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೇಖಕ ಸಲ್ಮಾನ್ ರಶ್ದಿ (75) ಆರೋಗ್ಯ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

    ಅಮೆರಿಕದ ನ್ಯೂಯಾರ್ಕ್‍ನಲ್ಲಿ ನಿನ್ನೆ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ತಮ್ಮನ್ನು ಪರಿಚಯಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ದಾಳಿಕೋರ ಕುತ್ತಿಗೆ ಮತ್ತು ಹೊಟ್ಟೆಗೆ 15 ರಿಂದ 20 ಬಾರಿ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಕುಸಿತಗೊಂಡಿದ್ದ ರಶ್ದಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಶ್ದಿ ಪ್ರಸ್ತುತ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಶ್ದಿ ಅವರ ಕುತ್ತಿಗೆ, ಹೊಟ್ಟೆ ಮತ್ತು ಕಣ್ಣುಗಳಿಗೆ ಚಾಕು ಇರಿತವಾಗಿದ್ದು, ಅವರು ಕಣ್ಣು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಖ್ಯಾತ ಕಾದಂಬರಿಕಾರ ಸಲ್ಮಾನ್‌ ರಶ್ದಿ ಮೇಲೆ ದುಷ್ಕರ್ಮಿಗಳಿಂದ ಚಾಕು ಇರಿತ

    ಆಸ್ಪತ್ರೆ ಮೂಲಗಳ ಪ್ರಕಾರ ಸಲ್ಮಾನ್ ರಶ್ದಿ ಅವರ ತೋಳಿನಲ್ಲಿ ನರಗಳು ತುಂಡಾಗಿದ್ದು, ಅವರ ಯಕೃತ್ತಿಗೆ ಹಾನಿಯಾಗಿದೆ. ಕಣ್ಣುಗಳಿಗೆ ಗಂಭೀರ ಹಾನಿಯಾಗಿದ್ದು, ಕಣ್ಣುಗಳು ಶಾಶ್ವತವಾಗಿ ಕಾರ್ಯನಿರ್ವಹಿಸದೇ ಇರಬಹುದು ಎಂಬ ಆತಂಕಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅಮೆರಿಕದ ಲೇಖಕ ಆಂಡ್ರ್ಯೂ ವೈಲಿ ಮಾಹಿತಿ ಹಂಚಿಕೊಂಡಿದ್ದು, ಸಲ್ಮಾನ್ ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು, ಅವರ ತೋಳಿನ ನರಗಳು ತುಂಡಾಗಿದೆ. ಯಕೃತ್ತಿಗೆ ಚಾಕು ಇರಿತವಾಗಿದ್ದು, ಗಂಭೀರವಾಗಿ ಹಾನಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ

    https://twitter.com/disclosetv/status/1558111458201899008

    ದಾಳಿಕೋರನ ಗುರುತು ಪತ್ತೆ:
    ಸಲ್ಮಾನ್ ರಶ್ದಿ ಮೇಲೆ ದಾಳಿ ಮಾಡಿದ ದಾಳಿಕೋರನನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದು, ದಾಳಿಕೋರನನ್ನು 24 ವರ್ಷದ ಹದಿ ಮಾತರ್ ಎಂದು ಗುರುತಿಸಲಾಗಿದ್ದು, ಈತ ನ್ಯೂಜೆರ್ಸಿಯ ನಿವಾಸಿ ಎನ್ನಲಾಗಿದೆ. ರಶ್ದಿ ಅವರ ಮೇಲೆ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸೈದ್ದಾಂತಿಕ ವಿರೋಧಗಳು ದಾಳಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲೇಖಕ ಆಕಾರ್ ಪಟೇಲ್ ವಿರುದ್ಧ ಎಫ್‍ಐಆರ್ ದಾಖಲು

    ಲೇಖಕ ಆಕಾರ್ ಪಟೇಲ್ ವಿರುದ್ಧ ಎಫ್‍ಐಆರ್ ದಾಖಲು

    ಬೆಂಗಳೂರು: ಟ್ವಿಟರ್‌ ಮೂಲಕ ಪ್ರತಿಭಟನೆಗೆ ಕರೆ ನೀಡಿದ ಆರೋಪದಡಿ ಲೇಖಕ ಆಕಾರ್ ಪಟೇಲ್ ಅವರ ವಿರುದ್ಧ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೊರೊನಾ ವೈರಸ್ ಹರಡುವ ಭೀತಿಯಿಂದಾಗಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಹೀಗಿದ್ದರೂ ಅಮೆರಿಕ ಮಾದರಿಯಲ್ಲಿ ಭಾರತದಲ್ಲಿಯೂ ದಲಿತರು ಪ್ರತಿಭಟನೆ ಮಾಡುವಂತೆ ಲೇಖಕ ಆಕಾರ್ ಪಟೇಲ್ ಕರೆ ನೀಡಿದ್ದರು. ಈ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡಿದ್ದಕ್ಕೆ ಜೆಸಿ ನಗರ ಪೊಲೀಸರು ಸ್ವಯಂ ಪ್ರೇರಿತ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?:
    ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಡಿಯೋವನ್ನು ಅಲ್ಲಿನ ಮಾಧ್ಯಮವೊಂದು ಟ್ವೀಟ್ ಮಾಡಿದೆ. ಇದನ್ನೂ ರಿಟ್ವೀಟ್ ಮಾಡಿರುವ ಲೇಖಕ ಆಕಾರ್ ಪಟೇಲ್, “ದಲಿತರು, ಮುಸ್ಲಿಮರು, ಆದಿವಾಸಿಗಳು, ಬಡವರು ಮತ್ತು ಮಹಿಳೆಯರಿಂದ ಭಾರತದಲ್ಲಿ ಈ ರೀತಿಯ ಪ್ರತಿಭಟನೆಗಳು ನಡೆಯಬೇಕಿದೆ. ಇದರಿಂದಾಗಿ ಜಗತ್ತು ನಮ್ಮತ್ತ ಗಮನಿಸುತ್ತದೆ. ಪ್ರತಿಭಟನೆ ಒಂದು ಕರಕುಶಲ” ಎಂದು ಬರೆದುಕೊಂಡಿದ್ದಾರೆ.

    ಲೇಖಕ ಆಕಾರ್ ಪಟೇಲ್ ಅವರ ಈ ಹೇಳಿಕೆಗೆ ಕೆಲ ನೆಟ್ಟಿಗರು ಬೆಂಬಲ ವ್ಯಕ್ತಪಡಿಸಿದೆ, ಕೆಲವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಕೋವಿಡ್-19 ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡುವುದು ಎಷ್ಟು ಸರಿ? ಪ್ರತಿಭಟನೆ ಈಗ ಅಗತ್ಯವಿದೆಯೇ” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

    https://twitter.com/mehta24772485/status/1267287366131056641

  • ಹಿರಿಯ ಕನ್ನಡ ವಿದ್ವಾಂಸ ಪ್ರೊ. ಟಿ.ಆರ್. ಮಹದೇವಯ್ಯ ಇನ್ನಿಲ್ಲ

    ಹಿರಿಯ ಕನ್ನಡ ವಿದ್ವಾಂಸ ಪ್ರೊ. ಟಿ.ಆರ್. ಮಹದೇವಯ್ಯ ಇನ್ನಿಲ್ಲ

    ಬೆಂಗಳೂರು: ಹಿರಿಯ ಕನ್ನಡ ವಿದ್ವಾಂಸ ಪ್ರೊ. ಟಿ.ಆರ್. ಮಹದೇವಯ್ಯ (82) ಇಂದು ನಗರದ ನಾಗರಬಾವಿಯ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

    ಮಹದೇವಯ್ಯ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕನ್ನಡ ನಿಘಂಟು ರಚನೆಗಾಗಿ ನಾಲ್ಕು ದಶಕಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ. ಮಹದೇವಯ್ಯ
    ಅವರು ವಚನಜ್ಯೋತಿ ಬಳಗದ ಗೌರವಾ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ.

    ತಮ್ಮ ಸಾವಿನ ಬಳಿಕ ತಮ್ಮ ದೇಹವನ್ನು ದಾನ ಮಾಡಬೇಕೆಂಬ ಇಚ್ಚೆಯನ್ನು ಮಹದೇವಯ್ಯ ಅವರು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಜೆಎಸ್‍ಎಸ್ ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಮಹದೇವಯ್ಯನವರು ಸಮಗ್ರ ಚಿಂತನೆ ಸೇರಿದಂತೆ ಹತ್ತಾರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ.