Tag: ಲೆಹೆಂಗಾ

  • ನಾರಿಮಣಿಯರ ಮನಗೆದ್ದ ಸಾದಾ ಲೆಹೆಂಗಾಗಳು

    ನಾರಿಮಣಿಯರ ಮನಗೆದ್ದ ಸಾದಾ ಲೆಹೆಂಗಾಗಳು

    ಸಿಂಪಲ್ ಟ್ರೆಡಿಷನಲ್ ವಿನ್ಯಾಸದ ಸಾದಾ ಶೇಡ್‌ನ ಡಿಸೈನರ್ ಲೆಹೆಂಗಾಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಟ್ರೆಡಿಷನಲ್ ಲುಕ್ ನೀಡುವ ಲೆಹೆಂಗಾ ಬೇಕು. ಆದರೆ, ಹೆವ್ವಿ ಡಿಸೈನ್‌ನ ಗ್ರ‍್ಯಾಂಡ್ ಲೆಹೆಂಗಾ (Lehenga) ಬೇಡ. ಭಾರವಿರದ ಲೈಟ್‌ವೈಟ್ ಲೆಹೆಂಗಾ ಬೇಕು, ಧರಿಸಿದಾಗ ಆಕರ್ಷಕವಾಗಿಯೂ ಕಾಣಿಸಬೇಕು ಎನ್ನುವವರಿಗಾಗಿಯೇ ಇದೀಗ ಸಿಂಗಲ್ ಶೇಡ್‌ನ ಸಾಲಿಡ್ ಕಲರ್ ಹಾಗೂ ಮಾನೋಕ್ರೋಮ್ ಶೇಡ್‌ನ ಸೆಲ್ಫ್ ಡಿಸೈನ್‌ನ ಕಲರ್‌ನ ಸಿಂಪಲ್ ಸಾದಾ ಲೆಹೆಂಗಾ ಡಿಸೈನರ್‌ವೇರ್‌ಗಳು ಫ್ಯಾಷನ್ ಲೋಕಕ್ಕೆ ಕಾಲಿಟ್ಟಿವೆ. ಇದನ್ನೂ ಓದಿ:ಹೊಸ ಸಿನಿಮಾ ಅನೌನ್ಸ್ ಮಾಡಿದ ಹೊಂಬಾಳೆ ಫಿಲ್ಮ್ಸ್- ಪೋಸ್ಟರ್ ರಿವೀಲ್

    ಯಾವ್ಯಾವ ಬಗೆಯವು ಸದ್ಯ ಚಾಲ್ತಿಯಲ್ಲಿವೆ? ಆಯ್ಕೆ ಹಾಗೂ ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಲೆಹೆಂಗಾಗಳು ಎಂದಾಕ್ಷಣ ಎಲ್ಲರೂ ಗ್ರ‍್ಯಾಂಡ್ ಲುಕ್‌ಗಾಗಿ ಎಂದುಕೊಳ್ಳುತ್ತಾರೆ. ಸಿಂಪಲ್ ಡಿಸೈನ್‌ನವು ದೊರೆಯುವುದಿಲ್ಲ ಎಂದು ಇತರೇ ಎಥ್ನಿಕ್‌ವೇರ್‌ಗಳ ಆಯ್ಕೆ ಮಾಡುತ್ತಾರೆ. ಆದರೆ, ಇದೀಗ ಲೆಹೆಂಗಾದ ಈ ಕಾನ್ಸೆಪ್ಟ್ ಬದಲಾಗಿದೆ. ಸಿಂಪಲ್ ಹುಡುಗಿಯರಿಗಾಗಿ ಹಾಗೂ ಹೆಚ್ಚು ಅಡಂಬರ ಬಯಸದ ಯುವತಿಯರಿಗಾಗಿ ಸಾದಾ ಸೀದಾ ಸಿಂಪಲ್ ಲೆಹೆಂಗಾಗಳು ಬಿಡುಗಡೆಗೊಂಡಿವೆ.

    ಪಾಸ್ಟೆಲ್ ಶೇಡ್‌ನ ಸಾದಾ ಡಿಸೈನ್‌ನ ಲೆಹೆಂಗಾಗಳು ಅತಿ ಹೆಚ್ಚು ಟ್ರೆಂಡಿಯಾಗಿವೆ. ಇನ್ನು, ಇವನ್ನು ಹೊರತುಪಡಿಸಿದಲ್ಲಿ, ಸಾಲಿಡ್ ಕಲರ್ ಅಥವಾ ಡಾರ್ಕ್ ಶೇಡ್‌ನ ಸೆಲ್ಫ್ ಕಲರ್ ಇರುವಂತಹ ಬಿಗ್ ಬಾರ್ಡರ್‌ನ ಲೆಹೆಂಗಾ ಸೆಟ್‌ಗಳು ಕೂಡ ಚಾಲ್ತಿಯಲ್ಲಿವೆ. ಒಂದೇ ಕಲರ್‌ನ ಲಂಗ ಹಾಗೂ ಬ್ಲೌಸ್ ಮತ್ತು ದುಪಟ್ಟಾ ಇರುವಂತಹ ಈ ಸಿಂಪಲ್ ಲೆಹೆಂಗಾಗಳು ಲೆಕ್ಕವಿಲ್ಲದಷ್ಟು ಕಲರ್‌ನಲ್ಲಿ ಬಿಡುಗಡೆಗೊಂಡಿವೆ.

    ಇನ್ನು, ಬಹಳಷ್ಟು ನಾರಿಮಣಿಯರು ಬೋಟಿಕ್‌ಗಳಲ್ಲಿ ಸಾದಾ ಅಥವಾ ಬಾರ್ಡರ್ ಇರುವಂತಹ ಸೆಲ್ಫ್ ಕಲರ್ ಇರುವಂತಹ ಹಳೆಯ ಸೀರೆಗಳಲ್ಲಿ ಲೆಹೆಂಗಾ ಡಿಸೈನ್ ಮಾಡಿಸುತ್ತಿದ್ದಾರೆ. ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂಬ ಮಾತಿನಂತೆ ಕಾಲ ಕಾಲಕ್ಕೆ ನಯಾ ಫ್ಯಾಷನ್‌ಗಳಿಗೆ ನಾರಿಮಣಿಯರು ಆದ್ಯತೆ ಕೊಡುತ್ತಿದ್ದಾರೆ.

    ಫ್ಯಾಷನ್ ಟಿಪ್ಸ್:

    ಹುಡುಗಿಯರಿಗೆ ಸಾದಾ ಲುಕ್ ನೀಡುವ ಪಾಸ್ಟೆಲ್ ಶೇಡ್ ಆಕರ್ಷಕವಾಗಿ ಕಾಣುತ್ತದೆ.
    ನಾನಾ ಬಗೆಯಲ್ಲಿ ಡ್ರೇಪ್ ಮಾಡಿದಾಗ ಡಿಫರೆಂಟ್ ಲುಕ್ ನಿಮ್ಮದಾಗುತ್ತದೆ.
    ದಾವಣಿ ಬದಲಿಸಿದಲ್ಲಿ ಹೊಸ ರೂಪ ನೀಡಿ ಮರು ಬಳಕೆ ಮಾಡಬಹುದು.
    ಗೋಲ್ಡ್ ಜ್ಯುವೆಲರಿ ಅಥವಾ ಕಾಂಟ್ರಸ್ಟ್ ಆಭರಣಗಳನ್ನು ಧರಿಸಿದಲ್ಲಿ ಅಂದವಾಗಿ ಕಾಣಿಸುತ್ತದೆ.
    ಟ್ರೆಡಿಷನಲ್ ಮೇಕೋವರ್ ಸುಂದರವಾಗಿ ಕಾಣಿಸುತ್ತದೆ.

  • ನಮ್ಮ ಮಕ್ಕಳು ಲೆಹೆಂಗಾ ಧರಿಸಿ ಶಾಲೆಗೆ ಹೋಗ್ತಾರೆ: ಹಿಜಬ್‌ ವಿರುದ್ಧ ಬಿಜೆಪಿ ಶಾಸಕ ಹೇಳಿಕೆ

    ನಮ್ಮ ಮಕ್ಕಳು ಲೆಹೆಂಗಾ ಧರಿಸಿ ಶಾಲೆಗೆ ಹೋಗ್ತಾರೆ: ಹಿಜಬ್‌ ವಿರುದ್ಧ ಬಿಜೆಪಿ ಶಾಸಕ ಹೇಳಿಕೆ

    – ಕರ್ನಾಟಕ ಆಯ್ತು.. ಈಗ ರಾಜಸ್ಥಾನದಲ್ಲಿ ಹಿಜಬ್‌ ವಿವಾದ

    ಜೈಪುರ: ಹಿಜಬ್‌ (Hijab) ವಿವಾದವು ಈಗ ಕರ್ನಾಟಕದಿಂದ ರಾಜಸ್ಥಾನ (Rajasthan) ಪ್ರವೇಶಿಸಿದೆ. ಹಿಜಬ್‌ ವಿರುದ್ಧ ಮಾತನಾಡುವಾಗ ಬಿಜೆಪಿ ಶಾಸಕ ಬಾಲ ಮುಕುಂದ್ ಆಚಾರ್ಯ, ನಮ್ಮ ಮಕ್ಕಳು ಲೆಹೆಂಗಾ ಧರಿಸಿ ಶಾಲೆಗೆ ಹೋಗಬಹುದು ಎಂದು ಹೇಳಿಕೆ ನೀಡಿದ್ದಾರೆ.

    ಬಿಜೆಪಿಯ ಬಾಲ ಮುಕುಂದ್ ಆಚಾರ್ಯ (Bal Mukund Acharya) ಅವರು ಗಣರಾಜ್ಯೋತ್ಸವದ ವೇಳೆ ವಾಲ್ಡ್ ಸಿಟಿಯ ಗಂಗಾಪೋಲ್ ಪ್ರದೇಶದ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು. ಅಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್‌ ಧರಿಸಿದ್ದನ್ನು ಕಂಡು ವಸ್ತ್ರ ಸಂಹಿತೆ ಬಗ್ಗೆ ಪ್ರಶ್ನಿಸಿದ್ದರು. ಇದನ್ನೂ ಓದಿ: ಹಿಜಬ್‌ ನಿಷೇಧ ವಾಪಸ್‌ ಪಡೆಯೋಕೆ ಕೇವಲ 30 ನಿಮಿಷ ಸಾಕು: ಸಿದ್ದರಾಮಯ್ಯ ವಿರುದ್ಧ ಓವೈಸಿ ವಾಗ್ದಾಳಿ

    ಇವರ ಹೇಳಿಕೆಯನ್ನು ವಿರೋಧಿಸಿ ಕೆಲ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ‘ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಶಾಸಕರು ನಮ್ಮನ್ನು ಒತ್ತಾಯಿಸಿದರು. ಕೆಲವು ಹುಡುಗಿಯರು ಮೌನವಾಗಿದ್ದಾಗ, ಅವರಿಗೆ ಘೋಷಣೆ ಕೂಗುವಂತೆ ಸೂಚಿಸಿದರು. ಅಷ್ಟೇ ಅಲ್ಲ, ಶಾಲೆಯಲ್ಲಿ ಹಿಜಾಬ್ ಧರಿಸುವುದನ್ನು ಅನುಮತಿಸಲಾಗುವುದಿಲ್ಲ’ ಎಂದಿದ್ದರು ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

    ಈ ವೇಳೆ ಪ್ರತಿಭಟನಾನಿರತರನ್ನು ಪೊಲೀಸರು ಮನವೊಲಿಸಿದ್ದಾರೆ. ಬಳಿಕ ವಿದ್ಯಾರ್ಥಿಗಳು ಪ್ರತಿಭಟನಾ ಸ್ಥಳದಿಂದ ಹೊರಟರು. ಇದಾದ ಬಳಿಕ ಶಾಸಕ ಆಚಾರ್ಯ ತಮ್ಮ ನಿಲುವನ್ನು ಸ್ಪಷ್ಟಪಡಿಸುವ ವೀಡಿಯೊವನ್ನು ಬಿಡುಗಡೆ ಮಾಡಿದರು. ‘ಇವರಿಗೆ ಎರಡು ವಿಭಿನ್ನ ವಸ್ತ್ರ ಸಂಹಿತೆ ಇದೆಯೇ ಎಂದು ನಾನು ಪ್ರಾಂಶುಪಾಲರನ್ನು ಕೇಳಿದ್ದೆ. ಗಣರಾಜ್ಯೋತ್ಸವದ ಸಮಾರಂಭ ಅಥವಾ ಯಾವುದೇ ಸರ್ಕಾರಿ ಕಾರ್ಯಕ್ರಮ ನಡೆದಾಗ, ಬೇರೆ ಡ್ರೆಸ್ ಕೋಡ್ ಇದೆಯೇ? ಹಾಗಾದರೆ, ನಮ್ಮ ಮಕ್ಕಳೂ (ಹಿಂದೂ ಹೆಣ್ಣುಮಕ್ಕಳು) ಲೆಹೆಂಗಾ ಚುನ್ನಿ ಹಾಕುತ್ತಾರೆ’ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್‌ ವಾಪಸ್‌- ಕಾನೂನು ಪರಿಶೀಲಿಸಿಯೇ ಕ್ರಮ: ಪರಮೇಶ್ವರ್‌

    ಕಿಶನ್‌ಪೋಲ್‌ನ ಕಾಂಗ್ರೆಸ್ ಶಾಸಕ ಅಮೀನ್ ಕಗಾಜಿ ಅವರು, ಬಿಜೆಪಿ ಶಾಸಕ ಸೌಹಾರ್ದ ಮತ್ತು ಕೋಮು ಸೌಹಾರ್ದವನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ವಿರುದ್ಧ ಫೆ.2ರೊಳಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

    ಹಿಜಬ್ ಮೊಘಲರು ತಂದ ‘ಗುಲಾಮಗಿರಿಯ ಸಂಕೇತ’. ಕೆಲವು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಹಿಜಬ್ ಧರಿಸೋದಕ್ಕೆ ಅನುಮತಿ ಇಲ್ಲ. ಅದು ಇಲ್ಲಿಯೂ ಆಗಬಾರದು ಎಂದು ಬಿಜೆಪಿ ಸಚಿವ ಕಿರೋರಿ ಲಾಲ್ ಮೀನಾ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್‌ ನಮ್ಮ ಹಕ್ಕು, ಇನ್ಮುಂದೆ ಅಣ್ಣ-ತಮ್ಮಂದಿರಂತೆ ಬದುಕೋಣ – ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ಮುಸ್ಕಾನ್‌

    ಬಿಜೆಪಿ ಶಾಸಕ ಬಾಲ್ ಮುಕುಂದ್ ಆಚಾರ್ಯ ವಿವಾದಿತ ಹೇಳಿಕೆಗಳನ್ನು ನೀಡಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ಚುನಾವಣೆಯಲ್ಲಿ ಗೆದ್ದ ನಂತರ, ಅಕ್ರಮ ಮಾಂಸದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೀದಿಗಿಳಿದಿದ್ದರು.

    ಕರ್ನಾಟಕದಲ್ಲೇನಾಗಿತ್ತು?
    ಹಿಜಬ್ ಸಮಸ್ಯೆ ಎರಡು ವರ್ಷಗಳಿಂದ ಕರ್ನಾಟಕವನ್ನು ತಲ್ಲಣಗೊಳಿಸಿತ್ತು. 2022 ರಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಶಿಕ್ಷಣ ಸಂಸ್ಥೆಗಳಲ್ಲಿ ಶಿರಸ್ತ್ರಾಣವನ್ನು ನಿಷೇಧಿಸಿತ್ತು. ಇದು ಭಾರೀ ಗದ್ದಲಕ್ಕೆ ಕಾರಣವಾಯಿತು. ಕರ್ನಾಟಕ ಹೈಕೋರ್ಟ್ ಹಿಜಬ್‌ ನಿಷೇಧದ ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು. ಹಿಜಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ. ಆದರೆ ಶಿಕ್ಷಣ ಸಂಸ್ಥೆಗಳು ತಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಅನ್ನು ನಿರ್ಧರಿಸಬಹುದು ಎಂದು ಹೇಳಿತ್ತು. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಈಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಪ್ರಕರಣ ಈಗ ಸುಪ್ರೀಂ ಅಂಗಳದಲ್ಲಿದೆ. ಇದನ್ನೂ ಓದಿ: PublicTV Explainer: ಇರಾನ್‌ನಲ್ಲಿ ಹಿಜಬ್‌ ವಿರುದ್ಧದ ಹೋರಾಟದ ಹೊತ್ತಲ್ಲೇ ನೂರಾರು ಶಾಲಾ ವಿದ್ಯಾರ್ಥಿನಿಯರಿಗೆ ವಿಷವಿಕ್ಕಿದ ದುರುಳರು – ಏನಾಗ್ತಿದೆ ಅಲ್ಲಿ?

  • ಲೆಹೆಂಗಾ ಬಟನ್‌ನಲ್ಲಿ ಲಕ್ಷ – ಲಕ್ಷ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದವನ ಬಂಧನ

    ಲೆಹೆಂಗಾ ಬಟನ್‌ನಲ್ಲಿ ಲಕ್ಷ – ಲಕ್ಷ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದವನ ಬಂಧನ

    ನವದೆಹಲಿ: ವಿದೇಶಿ ಕರೆನ್ಸಿಯನ್ನಯನ್ನು ಲೆಹೆಂಗಾ ಗುಂಡಿಗಳಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದವನನ್ನು ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, 41 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.

    ಬಂಧಿತ ಪ್ರಯಾಣಿಕ ಮಿಸಾಮ್ ರಾಝಾ ಎಂದು ಗುರುತಿಸಲಾಗಿದೆ. ಈತ ಸ್ಪೈಸ್‌ಜೆಟ್ ವಿಮಾನದಲ್ಲಿ ದೆಹಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದನು. ಸೆಂಟ್ರಲ್ ಇಂಡಸ್ಟ್ರಿಯಲ್‌ ಸೆಕ್ಯುರಿಟಿ (ಸಿಐಎಸ್‌ಎಫ್) ಹಾಗೂ ವಿಮಾನ ನಿಲ್ದಾಣದಲ್ಲಿನ ಗುಪ್ತಚರ ಅಧಿಕಾರಿಗಳು ಟರ್ಮಿನಲ್-3ರಲ್ಲಿ ನಿಂತಿದ್ದ ಈ ವ್ಯಕ್ತಿಯ ವರ್ತನೆಯನ್ನು ಕಂಡು ಅನುಮಾನಗೊಂಡಿದ್ದಾರೆ. ಬಳಿಕ ಈತನ ಚಟುವಟಿಕೆಗಳನ್ನು ಗಮನಿಸಿದ್ದಾರೆ. ಅನುಮಾನದ ಮೇಲೆ ಆತನ ಲಗೇಜ್‌ಗಳನ್ನು ಪರಿಶೀಲಿಸಲಾಯಿತು. ಇದನ್ನೂ ಓದಿ: ನಿಮಗೆ ಅಧಿಕಾರದ ಅಮಲೇರಿದೆ: ಕೇಜ್ರಿವಾಲ್‍ಗೆ ಅಣ್ಣಾ ಹಜಾರೆ ಪತ್ರ

    ಸಾಂದರ್ಭಿಕ ಚಿತ್ರ

    ಎಕ್ಸ್ರೇ ಮೂಲಕ ಲಗೇಜ್ ಬ್ಯಾಗ್ ಅನ್ನು ತಪಾಸಣೆ ನಡೆಸಿದಾಗ ದೊಡ್ಡ ಗಾತ್ರದ ಗುಂಡಿಗಳು ಪತ್ತೆಯಾಗಿದೆ. ಅದನ್ನು ಪರಿಶೀಲಿಸಿದಾಗ ಕರೆನ್ಸಿ ನೋಟುಗಳನ್ನೇ ಗುಂಡಿ ರೂಪದಲ್ಲಿಟ್ಟು ಸಾಗಿಸಲಾಗುತ್ತಿತ್ತು ಎಂಬುದು ಗೊತ್ತಾಗಿದೆ. ಬ್ಯಾಗ್‌ನಿಂದ ಹೊರತೆಗೆದಾಗ 1,85,500 ಸೌದಿ ರಿಯಾಲ್(41 ಲಕ್ಷ ರೂ.) ಲೆಹೆಂಗಾ ಬಟನ್‌ನಲ್ಲಿ ಇದ್ದದ್ದು ಕಂಡುಬಂದಿದೆ.

    ಸಿಐಎಸ್‌ಎಫ್ ಸಿಬ್ಬಂದಿ ಕಸ್ಟಮ್ಸ್ ಕಚೇರಿಗೆ ಆತನನ್ನು ಕರೆತಂದಿದ್ದು, ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • ಲೆಹೆಂಗಾದಲ್ಲಿ ಡ್ರಗ್ಸ್ ಇಟ್ಟು ಸಾಗಾಟ – ಹೈದರಾಬಾದ್ ಟು ಆಸ್ಟ್ರೇಲಿಯಾಗೆ ಸಪ್ಲೈ

    ಲೆಹೆಂಗಾದಲ್ಲಿ ಡ್ರಗ್ಸ್ ಇಟ್ಟು ಸಾಗಾಟ – ಹೈದರಾಬಾದ್ ಟು ಆಸ್ಟ್ರೇಲಿಯಾಗೆ ಸಪ್ಲೈ

    – ಬೆಂಗಳೂರಿನಲ್ಲೇ ಸಿಕ್ಕಿಬಿತ್ತು ಮಾದಕ..!

    ಬೆಂಗಳೂರು: ಡ್ರಗ್ಸ್ ಪೊಲೀಸರು ಎಷ್ಟೇ ಪ್ರಯತ್ನ ಮಾಡಿದ್ರು ಡ್ರಗ್ಸ್ ಪೆಡ್ಲರ್ ಗಳು ಮಾತ್ರ ಪೊಲೀಸರ ಕಣ್ತಪ್ಪಿಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅರಾಮಾಗಿ ಸಪ್ಲೈ ಮಾಡ್ತಾನೆ ಇದ್ದಾರೆ. ಬೆಂಗಳೂರು ಎನ್‍ಸಿಬಿ ಅಧಿಕಾರಿಗಳು ಇಂದು ಮತ್ತೊಂದು ಡ್ರಗ್ಸ್ ಜಾಲವನ್ನು ಪತ್ತೆ ಮಾಡಿದ್ದಾರೆ. ಲೆಹೆಂಗಾದ ಫಾಲ್ಸ್ ಲೈನ್‍ನಲ್ಲಿ ಡ್ರಗ್ಸ್ ಇಟ್ಟು ಆಸ್ಟ್ರೇಲಿಯಾಗೆ ಪಾರ್ಸಲ್ ಮಾಡ್ತಿದ್ದ ಖತರ್ನಾಕ್ ಡ್ರಗ್ ಪೆಡ್ಲರ್‍ನನ್ನ ಬಂಧಿಸಿದ್ದಾರೆ.

    ಬೆಂಗಳೂರಿನಿಂದ ಸ್ವಿಫ್ಟ್ ಕಾರಿನಲ್ಲಿ ಹೈದರಾಬಾದ್‍ಗೆ ಡ್ರಗ್ಸ್ ಸಾಗಿಸಲಾಗ್ತಿತ್ತು. ಹೈದ್ರಾಬಾದ್‍ನಿಂದ ಆಸ್ಟ್ರೇಲಿಯಾಗೆ ಡ್ರಗ್ಸ್ ರೀಚ್ ಆಗ್ಬೇಕಿತ್ತು. ಮಾಲ್ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್‍ಸಿಬಿ ಪೊಲೀಸರು ದೇವನಹಳ್ಳಿ ಟೋಲ್ ಬಳಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ಲೆಹೆಂಗಾಗಳಲ್ಲಿ ಇರಿಸಲಾಗಿದ್ದ ಸ್ಯೂಡೋಫೆಡ್ರಿನ್ ಎಂಬ ಸುಮಾರು 3 ಕೆಜಿ ಬಿಳಿ ಬಣ್ಣದ ಹರಳಿನ ರೂಪದಲ್ಲಿರುವ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.

    ಇನ್ನು ಚೆನ್ನೈನಿಂದ ಡ್ರಗ್ಸ್ ರವಾನಿಸಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಅದೇನೇ ಇರಲಿ ಉದ್ಯಾನನಗರಿ, ಸಿಲಿಕಾನ್ ಸಿಟಿ ಅಂತಾ ಕರೆಸಿಕೊಳ್ಳುವ ನಮ್ಮ ಬೆಂಗಳೂರಿನಿಂದಲೇ ಬೇರೆ ಬೇರೆ ಕಡೆ ಡ್ರಗ್ಸ್ ಸಪ್ಲೈ ಆಗ್ತಿರೋದು ವಿಪರ್ಯಾಸ. ಇದನ್ನೂ ಓದಿ: ಡಿಲೇ ಆಗಿದ್ದಕ್ಕೆ ಯಾವ ಮಾನಮರ್ಯಾದೆ ಹೋಗಲ್ಲ, ಬದನೆಕಾಯಿಯೂ ಆಗಿಲ್ಲ: ಸುದೀಪ್

  • ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಅತ್ತೆ ಮನೆಗೆ ಹೊರಟ ಬಿಗ್‍ಬಾಸ್ ಸ್ಪರ್ಧಿ

    ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಅತ್ತೆ ಮನೆಗೆ ಹೊರಟ ಬಿಗ್‍ಬಾಸ್ ಸ್ಪರ್ಧಿ

    – ವೀಡಿಯೋ ವೈರಲ್, ನಟಿ ವಿರುದ್ಧ ನೆಟ್ಟಿಗರ ಕಿಡಿ

    ಮುಂಬೈ: ನಟಿ, ಗಾಯಕಿ ಜಸ್ಲೀನ್ ಮಾಥಾರೂ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲ ನೆಟ್ಟಿಗರ ಆಕ್ರೋಶಕ್ಕೆ ತುತ್ತಾಗಿದೆ.

    ವಧು ರೀತಿಯಲ್ಲಿ ಡ್ರೆಸ್ ಮಾಡಿಕೊಂಡ ನಟಿ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟು ಪೋಸ್ ನೀಡಿರುವ ವೀಡಿಯೋವನ್ನ ಜಸ್ಲೀನ್ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಧುವಿನಂತೆ ರೆಡ್ ದುಪ್ಪಟಾ, ರೆಡ್ ಟಾಪ್, ಬಿಂದಿ, ಆಭರಣ ಧರಿಸಿರುವ ಜಸ್ಲೀನ್, ಲೆಹೆಂಗಾ ಬದಲು ತಿಳಿ ನೀಲಿ ಬಣ್ಣದ ಶಾರ್ಟ್ಸ್ ಧರಿಸಿ ಅತ್ತೆಯ ಮನೆಗೆ ಹೊರಟಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಇದೀಗ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಚಾರಕ್ಕಾಗಿ ಭಾರತೀಯ ಸಂಸ್ಕ್ರತಿಗೆ ಧಕ್ಕೆಯುಂಟು ಮಾಡಿದ್ದೀರಿ. ಹಾಗಾಗಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕೆಂದು ಕೆಲ ನೆಟ್ಟಿಗರು ಆಗ್ರಹಿಸಿದ್ದಾರೆ. ಇನ್ನು ಹಲವರು ನಟಿಯ ವೀಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.

    ಬಿಗ್‍ಬಾಸ್ ಸೀಸನ್ 12ರಲ್ಲಿ ಕಾಣಿಸಿಕೊಂಡಿದ್ದ ಜಸ್ಲೀನ್ ಹೆಚ್ಚು ಸದ್ದು ಮಾಡಿದ್ದರು. ಬಿಗ್‍ಬಾಸ್ ಮನೆಯಿಂದ ಹೊರ ಬಂದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಜಸ್ಲೀನ್ ವೃತ್ತಿ ಮತ್ತು ಖಾಸಗಿ ಜೀವನದ ಮಾಹಿತಿಯನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ.

  • ಮುಂದಿನ ವರ್ಷ ಮದ್ವೆಗೆ ಈಗ್ಲೇ ಲೆಹೆಂಗಾ ಆರ್ಡರ್ ಮಾಡಿದ ಆಲಿಯಾ

    ಮುಂದಿನ ವರ್ಷ ಮದ್ವೆಗೆ ಈಗ್ಲೇ ಲೆಹೆಂಗಾ ಆರ್ಡರ್ ಮಾಡಿದ ಆಲಿಯಾ

    ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಅವರು ಮುಂದಿನ ವರ್ಷದಲ್ಲಿ ಮದುವೆಯಾಗುತ್ತಿದ್ದು, ಈಗಲೇ ಅವರು ಸಬ್ಯಸಾಚಿ ವಿನ್ಯಾಸದ ಲೆಹೆಂಗಾವನ್ನು ಆರ್ಡರ್ ಮಾಡಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ.

    ನಟ ರಣ್‍ಬೀರ್ ಕಪೂರ್ ಹಾಗೂ ಅಲಿಯಾ ಭಟ್ 2018ರಿಂದ ಒಬ್ಬರಿಗೊಬ್ಬರು ಡೇಟಿಂಗ್ ನಡೆಸುತ್ತಿದ್ದರು. ಈಗ ಅವರು 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಅವರು ಈಗಲೇ ಲೆಹೆಂಗಾ ಬುಕ್ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

    ಆಲಿಯಾ ವಸ್ತ್ರವಿನ್ಯಾಸಕ ಸಬ್ಯಸಾಚಿ ಅವರನ್ನು ಏಪ್ರಿಲ್ ತಿಂಗಳಲ್ಲಿ ಭೇಟಿ ಮಾಡಿ ಮದುವೆಯ ಲೆಹೆಂಗಾ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈಗ ಆ ಲೆಹೆಂಗಾ ತಯಾರಿಸುವ ಕೆಲಸ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಈ ಮೊದಲು ಸಬ್ಯಸಾಚಿ ಅವರು ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕ ಚೋಪ್ರಾ ಮದುವೆಯ ಲೆಹೆಂಗಾವನ್ನು ವಿನ್ಯಾಸ ಮಾಡಿದ್ದಾರೆ.

    ರಣ್‍ಬೀರ್ ಹಾಗೂ ಅಲಿಯಾ ಈಗ ‘ಬ್ರಹ್ಮಾಸ್ತ್ರ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ವರದಿಗಳ ಪ್ರಕಾರ ರಣ್‍ಬೀರ್ ಅವರ ತಂದೆ, ಹಿರಿಯ ನಟ ರಿಷಿ ಕಪೂರ್ ಅವರು ಭಾರತಕ್ಕೆ ಮರಳಿದ ನಂತರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ರಿಷಿ ಕಪೂರ್ ಅವರು ಸೆಪ್ಟೆಂಬರ್ ತಿಂಗಳಿನಿಂದ ಅಮೆರಿಕದಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರು ಗುಣಮುಖರಾಗಿದ್ದು, ಮುಂಬೈಗೆ ಯಾವಾಗ ಹಿಂತಿರುಗುತ್ತಾರೆ ಎಂಬ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿಲ್ಲ.

  • ಲೆಹೆಂಗಾ ಮೇಲೆ ಬ್ರಾ ಧರಿಸಿದ ದಿಶಾ ಪಠಾಣಿ- ಫೋಟೋ ವೈರಲ್

    ಲೆಹೆಂಗಾ ಮೇಲೆ ಬ್ರಾ ಧರಿಸಿದ ದಿಶಾ ಪಠಾಣಿ- ಫೋಟೋ ವೈರಲ್

    ಮುಂಬೈ: ಬಾಲಿವುಡ್ ಹಾಟ್ ನಟಿ ದಿಶಾ ಪಠಾಣಿ ದೀಪಾವಳಿಗಾಗಿ ವಿಶೇಷ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್‍ನಲ್ಲಿ ದಿಶಾ ಲೆಹೆಂಗಾ ಮೇಲೆ ಒಳಉಡುಪನ್ನು ಧರಿಸಿದ್ದು, ಸದ್ಯ ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ದೀಪಾವಳಿ ಹಬ್ಬಕ್ಕಾಗಿ ಗೋಲ್ಡನ್ ಲೆಹೆಂಗಾ ಧರಿಸಿ ಅದಕ್ಕೆ ಒಳಉಡುಪು ಹಾಕಿ ಕೈಯಲ್ಲಿ ದೀಪ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ. ಹೋಟೆಲ್‍ನ ರೂಂವೊಂದರಲ್ಲಿ ದಿಶಾ ಫೆಸ್ಟಿವ್ ಲುಕ್‍ನಲ್ಲಿ ಈ ರೀತಿ ಫೋಟೋಶೂಟ್ ಮಾಡಿಸಿದ್ದಾರೆ. ಲೆಹೆಂಗಾಗೆ ದಿಶಾ ಹಣೆಗೆ ಬೈತಲೆ ಬೊಟ್ಟು ಹಾಕಿದ್ದಾರೆ.

     

    View this post on Instagram

     

    ????????????????????

    A post shared by disha patani (paatni) (@dishapatani) on

    ದಿಶಾ ಈ ಫೋಟೋ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ 19 ಗಂಟೆಯಲ್ಲಿ 16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಸದ್ಯ ದಿಶಾ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಫೋಟೋ ನೋಡಿದ ಜನರು ದಿಶಾ ಲೆಹೆಂಗಾಗೆ ಬ್ಲೌಸ್ ಧರಿಸುವುದನ್ನು ಮರೆತಿದ್ದಾರೆ ಎಂದು ಕಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ.

    ದಿಶಾ ಲೆಹೆಂಗಾ ಮೇಲೆ ಬ್ಲೌಸ್ ಧರಿಸುವ ಬದಲು ಒಳಉಡುಪು ಧರಿಸಲು ಕಾರಣವಿದೆ. ದಿಶಾ ಒಳಉಡುಪಿನ ಬ್ರ್ಯಾಂಡ್ ಕಂಪನಿಗೆ ಈ ರೀತಿಯ ಜಾಹೀರಾತು ನೀಡಿದ್ದಾರೆ. ದಿಶಾ ಈ ಬ್ರ್ಯಾಂಡ್ ಕಂಪನಿಯನ್ನು ಬಹಳ ಸಮಯದಿಂದ ಪ್ರಚಾರ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

    View this post on Instagram

     

    Just wrapped???? A great association coming up real soon with my most favourite brand❤️ most excited????

    A post shared by disha patani (paatni) (@dishapatani) on

  • ಬರೋಬ್ಬರಿ 30 ಕೆ.ಜಿ ತೂಕದ ಗೋಲ್ಡನ್ ಲೆಹೆಂಗಾ ಧರಿಸಿ ಕರೀನಾ ಮಿಂಚಿಂಗ್!

    ಬರೋಬ್ಬರಿ 30 ಕೆ.ಜಿ ತೂಕದ ಗೋಲ್ಡನ್ ಲೆಹೆಂಗಾ ಧರಿಸಿ ಕರೀನಾ ಮಿಂಚಿಂಗ್!

    ಮುಂಬೈ: ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಕಾರ್ಯಕ್ರಮವೊಂದರಲ್ಲಿ ಬರೋಬ್ಬರಿ 30 ಕೆ.ಜಿ ತೂಕದ ಲೆಹೆಂಗಾ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ದೆಹಲಿಯಲ್ಲಿ ನಡೆಯುತ್ತಿರುವ ಫಾಲ್ಗುನಿ ಹಾಗೂ ಶೇನ್ ಪೀಕಾಕ್ ಅವರ ಇಂಡಿಯಾ ಕೌಚುರ್ ವೀಕ್ 2018ರ ಕಾರ್ಯಕ್ರಮದಲ್ಲಿ ಡಿಸೈನರ್ ತಾವು ಡಿಸೈನ್ ಮಾಡಿದ ಉಡುಪುಗಳನ್ನು ಪ್ರರ್ದಶಿಸುತ್ತಿದ್ದರು. ಈ ವೇಳೆ ನಟಿ ಕರೀನಾ ಕಪೂರ್ ಗೋಲ್ಡನ್ ಬಣ್ಣದ ಲೆಹೆಂಗಾ ಧರಿಸಿ ಶೋ ಸ್ಟಾಪರ್ ಆಗಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಡಿಸೈನರ್ ಡಿಸೈನ್ ಮಾಡಿದ ಉಡುಪುಗಳನ್ನು ಪ್ರರ್ದಶಿಸಲಾಗುತ್ತಿತ್ತು. ಮಾಡೆಲ್‍ಗಳು ರ‍್ಯಾಂಪ್ ವಾಕ್ ಮಾಡಿದ ಮೇಲೆ ಕರೀನಾ ಕಪೂರ್ ರನ್ ವೇ ಮೇಲೆ ರ‍್ಯಾಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಕರೀನಾ ರ‍್ಯಾಂಪ್ ವಾಕ್ ಮಾಡುವಾಗ ಗೋಲ್ಡನ್ ಲೆಹೆಂಗಾ ಧರಿಸಿದ್ದರು. ಈ ಲೆಹೆಂಗಾ ಬರೋಬ್ಬರಿ 30 ಕೆ.ಜಿ ತೂಕವಿದೆ. ಈ ಲೆಹೆಂಗಾಗೆ ಕರೀನಾ ಫುಲ್ ಸ್ಲೀವ್ಸ್ ಬ್ಲೌಸ್ ಧರಿಸಿ ನ್ಯೂಡ್ ಗ್ಲಿಟರಿಂಗ್ ದುಪಟ್ಟಾ ಧರಿಸಿದ್ದರು. ಈ ಲೆಹೆಂಗಾ ಧರಿಸಿ ಕರೀನಾ ತಮ್ಮ ಕೂದಲನ್ನು ಕರ್ಲ್ ಮಾಡಿಕೊಂಡಿದ್ದರು.

    ಈ ಲೆಹೆಂಗಾ ಧರಿಸಿ ನಾನು ಶೈನಿಂಗ್ ಸ್ಟಾರ್ ತರಹ ಕಾಣಿಸುತ್ತಿದ್ದೇನೆ. ಇದು ಪಾಲ್ಗುನಿ ಹಾಗೂ ಶಾನ್ ಪೀಕಾಕ್ ಅವರ ಕಾರ್ಯಕ್ರಮವಿಲ್ಲದಿದ್ದರೆ ನಾನು ಇಷ್ಟು ತೂಕವಿರುವ ಲೆಹೆಂಗಾವನ್ನು ಧರಿಸುತ್ತಿರಲಿಲ್ಲ. ನಾನು 10 ವರ್ಷಗಳಿಂದ ರ‍್ಯಾಂಪ್ ವಾಕ್ ಮಾಡುತ್ತಿದ್ದು, ಆದರೆ ಇದೇ ಮೊದಲ ಬಾರಿಗೆ ನಾನು 30 ಕೆ.ಜಿ ತೂಕದ ಉಡುಪು ಧರಿಸಿದ್ದೇನೆ ಎಂದು ಕರೀನಾ ಕಪೂರ್ ತಿಳಿಸಿದ್ದಾರೆ.

  • ಮದುವೆ ದಿನ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟ ವಧು- ಫೋಟೋ ವೈರಲ್

    ಮದುವೆ ದಿನ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟ ವಧು- ಫೋಟೋ ವೈರಲ್

    ಸಾಮಾನ್ಯವಾಗಿ ಮದುವೆ ಅಂತ ಅಂದಾಗ ಮದುಮಗಳು ದುಬಾರಿ ವೆಚ್ಚದ ಸಾರಿ ಅಥವಾ ಲೆಹೆಂಗಾ ಮುಂತಾದ ಬಟ್ಟೆಗಳನ್ನು ಕೊಂಡು ಹಾಕುವ ಮೂಲಕ ಮಿಂಚುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬಳು ವಧು ತನ್ನ ಮದುವೆಯ ದಿನ ಲೆಹೆಂಗಾ ಬ್ಲೌಸ್ ಹಾಕಿ ಸ್ಕರ್ಟ್ ಹಾಕೋ ಬದಲು ಶಾರ್ಟ್ಸ್ ಹಾಕುವ ಮೂಲಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾಳೆ.

    ಆದ್ರೆ ಮದುವೆ ಎಲ್ಲಿ ನಡೆದಿದೆ ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಫೋಟೋ ಮಾತ್ರ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.

    ಫೋಟೋದಲ್ಲಿ ವರ ಜೊತೆ ನಿಂತಿದ್ದ ವಧು ಕೆಂಪು ಬಣ್ಣದ ಲೆಹೆಂಗಾ ಬ್ಲೌಸ್, ದುಪ್ಪಟ್ಟ ತೊಟ್ಟು, ಚಿನ್ನಾಭರಣಗಳನ್ನು ಧರಿಸಿ ಚೆನ್ನಾಗಿಯೇ ಮಿಂಚುತ್ತಿದ್ದಾಳೆ. ಆದ್ರೆ ಲೆಹೆಂಗಾ ಸ್ಕರ್ಟ್ ತೊಡುವ ಬದಲು ಶಾರ್ಟ್ಸ್ ಹಾಕಿರುವುದರಿಂದ ಇದೀಗ ಈಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದಾಳೆ.

    ಈ ಫೋಟೋ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಗೆ ಅಪ್ಲೋಡ್ ಆದ ತಕ್ಷಣವೇ ಟಿಟ್ಟರಿಗರಲ್ಲಿ ಕೆಲವರು ಫನ್ನಿಯಾದ ಕಮೆಂಟ್ಸ್ ಗಳನ್ನು ಹಾಕಿದ್ದಾರೆ. ಕೆಲವರು ಈ ರೀತಿ ಚಡ್ಡಿ ಹಾಕಿ ಪೋಸು ಕೊಟ್ಟಿರೋದನ್ನು ಟೀಕಿಸಿದ್ದರೆ, ಇನ್ನು ಕೆಲವರು 15-20 ಕೆ.ಜಿ ತೂಕವಿರುವ ಲೆಹೆಂಗಾ ತೊಡುವ ಬದಲು ಚಡ್ಡಿ ಹಾಕುವ ಮೂಲಕ ಸಮಾಜದ ಸಂಪ್ರದಾಯದ ವಿರುದ್ಧ ಹೋಗಿರುವುದಕ್ಕೆ ಶ್ಲಾಘಿಸಿದ್ದಾರೆ.

    https://twitter.com/sagarcasm/status/869607318249287680?ref_src=twsrc%5Etfw&ref_url=http%3A%2F%2Fwww.hindustantimes.com%2Ffashion-and-trends%2Fthis-bride-wore-shorts-instead-of-a-lehenga-and-inspired-the-funniest-of-internet-jokes%2Fstory-uixTDyRPBcDQ6P8IufJDTK.html

    https://twitter.com/mailpp/status/869608616021467136?ref_src=twsrc%5Etfw&ref_url=http%3A%2F%2Fwww.hindustantimes.com%2Ffashion-and-trends%2Fthis-bride-wore-shorts-instead-of-a-lehenga-and-inspired-the-funniest-of-internet-jokes%2Fstory-uixTDyRPBcDQ6P8IufJDTK.html

    https://twitter.com/auntybharvi/status/869632068300525569?ref_src=twsrc%5Etfw&ref_url=http%3A%2F%2Fwww.hindustantimes.com%2Ffashion-and-trends%2Fthis-bride-wore-shorts-instead-of-a-lehenga-and-inspired-the-funniest-of-internet-jokes%2Fstory-uixTDyRPBcDQ6P8IufJDTK.html

    https://twitter.com/musical_sia/status/869525322479304706?ref_src=twsrc%5Etfw&ref_url=http%3A%2F%2Fwww.hindustantimes.com%2Ffashion-and-trends%2Fthis-bride-wore-shorts-instead-of-a-lehenga-and-inspired-the-funniest-of-internet-jokes%2Fstory-uixTDyRPBcDQ6P8IufJDTK.html