Tag: ಲೆಜೆಂಡ್

  • ಸ್ಯಾಂಡಲ್‍ವುಡ್ ಲೆಜೆಂಡ್‍ನ ಕಂಡರೆ ಸ್ವಾಭಾವಿಕವಾಗಿ ತಲೆ ಬಾಗುತ್ತಾರೆ ಕಿಚ್ಚ!

    ಸ್ಯಾಂಡಲ್‍ವುಡ್ ಲೆಜೆಂಡ್‍ನ ಕಂಡರೆ ಸ್ವಾಭಾವಿಕವಾಗಿ ತಲೆ ಬಾಗುತ್ತಾರೆ ಕಿಚ್ಚ!

    ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ, ಲೆಜೆಂಡ್ ಅನಂತ್ ನಾಗ್ ಅವರನ್ನು ಕಂಡರೆ ನಾನು ಸ್ವಾಭಾವಿಕವಾಗಿ ತಲೆ ಬಾಗುತ್ತೇನೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಿಳಿಸಿದ್ದಾರೆ.

    ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದರು. ನಾನು ಚಿತ್ರರಂಗದಲ್ಲಿ ತುಂಬಾ ಕಡಿಮೆ ಜನರ ಮುಂದೆ ಸ್ವಭಾವಿಕವಾಗಿ ತಲೆ ಬಾಗುತ್ತೇನೆ. ಅದರಲ್ಲಿ ಅನಂತ್ ನಾಗ್ ಸರ್ ಕೂಡ ಒಬ್ಬರು. ಅನಂತ್‍ನಾಗ್ ಅವರನ್ನು ನೋಡಿದಾಗೊಮ್ಮೆ ಒಂದು ರೀತಿ ಖುಷಿ ನನ್ನಲ್ಲಿ ಆಗುತ್ತದೆ. ಆ ಖುಷಿಗೆ ಕಾರಣ ಏನೆಂದು ಮಾತ್ರ ನನಗೆ ಗೊತ್ತಿಲ್ಲ. ನೇರ ನುಡಿ ಹಾಗೂ ಸ್ವಭಾವಗಳ ವಿಚಾರದಲ್ಲಿ ಅವರು ನನಗೆ ಟೀಚರ್ ಎಂದು ಕಿಚ್ಚ ತಿಳಿಸಿದ್ದಾರೆ.

    ಅನಂತ್ ನಾಗ್ ಅವರು ಕೂಡ ಸುದೀಪ್ ಜೊತೆಯಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಸುದೀಪ್ ನನ್ನನ್ನು ಹೆಚ್ಚು ಇಷ್ಟಪಡುತ್ತಾರೆ. ನನಗೆ ಅವರ ಸ್ವಭಾವ ನೋಡಿ ತುಂಬಾ ಖುಷಿಯಾಗುತ್ತೆ ಎಂದು ಅನಂತ್ ನಾಗ್ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಕಿಚ್ಚ ಸುದೀಪ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಾನು ಚಿತ್ರರಂಗದಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಹಾಗೂ ಪ್ರಕಾಶ್ ರೈಗೆ ಶರಣಾಗಿದ್ದಾನೆ ಎಂದು ಹೇಳಿದ್ದರು. ನಾನು ವಿಷ್ಣುವರ್ಧನ್ ಸರ್ ಮೇಲೆ ಅಪಾರ ಅಭಿಮಾನ ಹೊಂದಿದ್ದೇನೆ. ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರೀಕರಣದ ವೇಳೆ ವಿಷ್ಣು ಸರ್ ಅವರಿಗೆ ನಾನು ಶರಣಾದೆ ಎಂದು ಸುದೀಪ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.

    ವಿಷ್ಣುವರ್ಧನ್ ಅವರನ್ನು ಬಿಟ್ಟರೆ ನಾನು ಪ್ರಕಾಶ್ ರೈ ಅವರಿಗೆ ಶರಣಾದೆ. ಪ್ರಕಾಶ್ ರೈ ಮಾತನಾಡುವಾಗ ಎಕೋ ಹೊಡೆಯುತ್ತೆ. ಅವರು ಎದುರಿಗಿದ್ದರೆ ನನಗೆ ನಟಿಸುವುದ್ದಕ್ಕೆ ಕಷ್ಟ ಆಗುತ್ತದೆ. ನಾನು ಅವರ ಜೊತೆ ರನ್ನ ಚಿತ್ರದಲ್ಲಿ ನಟಿಸಿದೆ. ರನ್ನ ಚಿತ್ರದಲ್ಲಿ ಅವರು ನಟಿಸುವಾಗ ನಾನು ಮಾತನಾಡುತ್ತಿರಲಿಲ್ಲ. ನಾನು ಹಾಗೂ ಪ್ರಕಾಶ್ ರೈ ಹಾರ್ಡ್ ಡಿಸ್ಕ್ ಇದ್ದ ಹಾಗೆ. ಅವರೊಳಗೆ ತುಂಬಾ ವಿಷಯವಿದೆ. ನಾನು ಪ್ರತಿಸಲ ಅವರನ್ನು ಭೇಟಿ ಆಗುವಾಗ ಅವರಿಂದ ಸ್ಫೂರ್ತಿಗೊಳ್ಳುತ್ತೇನೆ ಎಂದು ಪ್ರಕಾಶ್ ರೈ ಬಗ್ಗೆ ಸುದೀಪ್ ಮಾತನಾಡಿದ್ದರು.

  • ಬಾಲಿವುಡ್ ಲೆಜೆಂಡ್ ಜೊತೆ ಚಂದನ್ ಶೆಟ್ಟಿ ಹಾಡಿಗೆ ರಶ್ಮಿಕಾ ಮಂದಣ್ಣ ಡ್ಯಾನ್ಸ್: ವಿಡಿಯೋ ವೈರಲ್

    ಬಾಲಿವುಡ್ ಲೆಜೆಂಡ್ ಜೊತೆ ಚಂದನ್ ಶೆಟ್ಟಿ ಹಾಡಿಗೆ ರಶ್ಮಿಕಾ ಮಂದಣ್ಣ ಡ್ಯಾನ್ಸ್: ವಿಡಿಯೋ ವೈರಲ್

    ಬೆಂಗಳೂರು: ಬಾಲಿವುಡ್ ಸೂಪರ್ ಸ್ಟಾರ್ ಅನಿಲ್ ಕಪೂರ್ ಜೊತೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.

    ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಅತಿಥಿಯಾಗಿ ಭಾಗವಹಿಸಿದ್ದರು. ರಶ್ಮಿಕಾ ಕೂಡ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅನಿಲ್ ಕಪೂರ್ ಜೊತೆ ಚಂದನ್ ಶೆಟ್ಟಿ ‘ಮೂರೇ ಮೂರು ಪೆಗ್ಗಿಗೆ’ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನಿಲ್ ಕಪೂರ್ ನಾನು ಕನ್ನಡ ಹಾಡಿಗೆ ಡ್ಯಾನ್ಸ್ ಮಾಡಲು ಇಷ್ಟಪಡುತ್ತೇನೆ ಆದರೆ ರಶ್ಮಿಕಾ ಮಂದಣ್ಣ ನನ್ನ ಜೊತೆಯಲ್ಲಿ ಡ್ಯಾನ್ಸ್ ಮಾಡಲು ಒಪ್ಪಿದ್ದರೆ ಮಾತ್ರ ಡ್ಯಾನ್ಸ್ ಮಾಡುತ್ತೇನೆ ಎಂದು ಹೇಳಿದರು.

    ಅನಿಲ್ ಕಪೂರ್ ಕನ್ನಡ ಹಾಡಿಗೆ ಡ್ಯಾನ್ಸ್ ಮಾಡಲು ತುಂಬಾ ಆತುರಾಗಿದ್ದರು. ಸಾಮಾನ್ಯವಾಗಿ ನಾನು ಸ್ಟಾರ್ ಗಳ ಜೊತೆ ಇದ್ದರೆ ನನಗೆ ಏನೂ ಮಾಡಬೇಕು ಎಂದು ತೋಚುವುದಿಲ್ಲ. ಆದರೆ ಲೆಜೆಂಡ್ ಒಬ್ಬರ ಜೊತೆ ವೇದಿಕೆ ಮೇಲಿದ್ದಾಗ ತುಂಬಾನೇ ಭಯಗೊಂಡಿದ್ದೆ. ಅನಿಲ್ ಕಪೂರ್ ಜೊತೆ ನಾನು ಹೇಗೆ ಡ್ಯಾನ್ಸ್ ಮಾಡಲಿ” ಎಂದು ಮನಸ್ಸಿನಲೇ ಯೋಚಿಸುತ್ತಿದೆ ಎಂದು ರಶ್ಮಿಕಾ ಡ್ಯಾನ್ಸ್ ಅನುಭವ ಹಂಚಿಕೊಂಡಿದ್ದಾರೆ.

    ನಾನು ವೇದಿಕೆ ಮೇಲೆ ಹೋದಾಗ ಅನಿಲ್ ಕಪೂರ್ ತಮ್ಮನ್ನು ತಾವು ಪರಿಚಯಿಸಿಕೊಳ್ಳುತ್ತಿದ್ದರು. ಆಗ ನಾನು ಸರ್ ನೀವು ನಿಮ್ಮ ಪರಿಚಯ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದೆ. ನಂತರ ಜನರು ಅವರನ್ನು ನೋಡಿ ಅವರು “ಲಿವಿಂಗ್ ಲೆಜೆಂಡ್” ಎಂದು ಕೂಗುತ್ತಿದ್ದರು ಎಂದು ರಶ್ಮಿಕಾ ಹೇಳಿದ್ದಾರೆ.

    ಸದ್ಯ ಅನಿಲ್ ಕಪೂರ್ ಜೊತೆ ಡ್ಯಾನ್ಸ್ ಮಾಡಿದ ವಿಡಿಯೋವನ್ನು ರಶ್ಮಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ಅಬ್ಬಾ, ಆ ಕ್ಷಣದಲ್ಲಿ ನನಗೆ ತುಂಬಾ ನಾಚಿಕೆ ಆಗುತ್ತಿತ್ತು. ಅನಿಲ್ ಎಲ್ಲ ಚಿತ್ರರಂಗದವರ ಜೊತೆ ತುಂಬಾ ಫ್ರೆಂಡ್ಲಿ ಆಗು ಇರುತ್ತಾರೆ. ಆದರೆ ಆ ಕ್ಷಣ ಅದ್ಭುತವಾಗಿತ್ತು. ನಾವು ಯಾವುದೇ ಭಾಷೆಯಲ್ಲಿ ಎಷ್ಟೇ ಸಿನಿಮಾ ಮಾಡಿದರು ನಾವು ಒಟ್ಟಿಗೆ ಬಂದಾಗ ತುಂಬಾ ಸಂತೋಷದಿಂದ ಇರುತ್ತೇವೆ. ನಾನು ಅನಿಲ್ ಕಪೂರ್ ತರಹ ಇರಲು ಇಷ್ಟ ಪಡುತ್ತೇನೆ” ಎಂದು ರಶ್ಮಿಕಾ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.