Tag: ಲೆಕ್ಚರರ್

  • ಆನ್‍ಲೈನ್ ಕ್ಲಾಸ್‍ನಲ್ಲಿ ಶಿಕ್ಷಕನಿಗೆ ‘ದಿಸ್ ಮ್ಯಾನ್ ಸೋ ಸೆಕ್ಸಿ’ ಎಂದ ವಿದ್ಯಾರ್ಥಿನಿ

    ಆನ್‍ಲೈನ್ ಕ್ಲಾಸ್‍ನಲ್ಲಿ ಶಿಕ್ಷಕನಿಗೆ ‘ದಿಸ್ ಮ್ಯಾನ್ ಸೋ ಸೆಕ್ಸಿ’ ಎಂದ ವಿದ್ಯಾರ್ಥಿನಿ

    – ಎಲ್ಲ ಕೇಳಿಸ್ತು ಎಂದು ಗೆಸ್ಟ್ ಲೆಕ್ಚರರ್

    ವಾಷಿಂಗ್‍ಟನ್: ಆನ್‍ಲೈನ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿ ಶಿಕ್ಷಕನಿಗೆ ಸೆಕ್ಸಿ ಎಂದು ಕರೆದಿರುವ ವೀಡಿಯೋ ಟಿಕ್‍ಟಾಕ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟಿಕ್‍ಟಾಕ್ ನಲ್ಲಿ 50 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, 8 ಸಾವಿರಕ್ಕೂ ಹೆಚ್ಚು ಕಮೆಂಟ್ ಬಂದಿವೆ.

    ಕೊರೊನಾ ಹಿನ್ನೆಲೆ ಸರ್ಕಾರಗಳು ಆನ್‍ಲೈನ್ ತರಗತಿಗಳಿಗೆ ಹೆಚ್ಚು ಒತ್ತು ನೀಡುತ್ತಿವೆ. ವಿದೇಶಗಳಲ್ಲಿ ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ವರ್ಚುವಲ್ ತರಗತಿಗಳು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಆನ್‍ಲೈನ್ ಕ್ಲಾಸ್ ಗಳನ್ನು ರೆಕಾರ್ಡ್ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಕಾಲೇಜ್ ಆದ್ರೆ ಕೊನೆ ಬೆಂಚಿನಲ್ಲಿ ಕುಳಿತು ಪಿಸುಗುಟ್ಟಿದರೂ ಅದು ಶಿಕ್ಷಕರಿಗೆ ಕೇಳಿಸಲ್ಲ. ಇದೇ ರೀತಿ ಪಿಸುಗುಟ್ಟ ವಿದ್ಯಾರ್ಥಿನಿಯ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಪಾದರಸದಂತೆ ಹರಿದಾಡುತ್ತಿವೆ.

    ವಿದ್ಯಾರ್ಥಿನಿ ಹೇಳಿದ್ದೇನು?: ಆನ್‍ಲೈನ್ ಕ್ಲಾಸ್ ಆರಂಭವಾದ ಕೂಡಲೇ ಅತಿಥಿ ಉಪನ್ಯಾಸಕ ಎಲ್ಲ ವಿದ್ಯಾರ್ಥಿಗಳು ಹಾಜರಾಗಿರೋದನ್ನ ಖಚಿತ ಪಡಿಸಿಕೊಳ್ಳುತ್ತಿರುತ್ತಾರೆ. ಈ ವೇಳೆ ಕ್ಲಾಸ್‍ಗೆ ಹಾಜರಾದ ವಿದ್ಯಾರ್ಥಿನಿ, ಈ ವ್ಯಕ್ತಿ ತುಂಬಾನೇ ಸೆಕ್ಸಿ ಆಗಿದ್ದಾನೆ. ನೀನು ನನಗೆ ಜೋಕ್ ಮಾಡಿದೆಯಾ? ಎಂದು ಹೇಳಿದ್ದಾಳೆ. ವಿದ್ಯಾರ್ಥಿನಿ ಮಾತು ಕೇಳುತ್ತಲೇ ಒಂದು ಕ್ಷಣ ಶಾಕ್ ಆದ ಲೆಕ್ಚರರ್ ನಿಮ್ಮ ಎಲ್ಲ ಮಾತುಗಳು ಕೇಳಿಸಿತು ಅಂದಾಗ ಯುವತಿಗೆ ತಾನು ಮೈಕ್ರೋಫೋನ್ ಆನ್ ಆಗಿರೋದ ಗಮನಿಸಿ ಆಶ್ಚರ್ಯಗೊಂಡಿದ್ದಾಳೆ.

    ಇನ್ನು ವಿದ್ಯಾರ್ಥಿನಿಯ ಮಾತನ್ನ ಆನ್‍ಲೈನ್ ಕ್ಲಾಸ್ ನಲ್ಲಿ ಬಹುತೇಕರು ಕೇಳಿಸಿಕೊಂಡಿದ್ದಾರೆ. ಯುವತಿ ಅತಿಥಿ ಉಪನ್ಯಾಸಕರ ಬಳಿ ಕ್ಷಮೆ ಕೇಳಿ. ತನ್ನ ಮಾತುಗಳನ್ನು ಹಿಂಪಡೆದುಕೊಳ್ಳುವದಾಗಿ ತಿಳಿಸಿದ್ದಾಳೆ.