Tag: `ಲೂಸಿಯಾ’

  • ಡೈರೆಕ್ಷನ್ ಮಾಡಲು ನಟಿ ಶ್ರುತಿ ಹರಿಹರನ್ ಸಿದ್ಧತೆ

    ಡೈರೆಕ್ಷನ್ ಮಾಡಲು ನಟಿ ಶ್ರುತಿ ಹರಿಹರನ್ ಸಿದ್ಧತೆ

    ಲೂಸಿಯಾ (Lucia) ಮೂಲಕ ನಾಯಕಿಯಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿರುವ ನಟಿ ಶ್ರುತಿ ಹರಿಹರನ್ (Shruti Hariharan), ನಿರ್ದೇಶನಕ್ಕೂ (Director) ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತಾಯಿಯಾದ ನಂತರ ಸಿನಿಮಾ ರಂಗದಿಂದ ದೂರವಾಗಿದ್ದ ಶ್ರುತಿ, ಇದೀಗ ಮತ್ತೆ ಸಕ್ರೀಯರಾಗಿದ್ದಾರೆ. ಮೂರು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಸದ್ಯದಲ್ಲೇ ಅವರು ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರಂತೆ.

    ಸ್ಟ್ರಾಬೆರಿ, ಈಗ ಮತ್ತು ಸಾರಾಂಶ ಸಿನಿಮಾಗಳಲ್ಲಿ ಮಹತ್ವದ ಪತ್ರಗಳನ್ನು ಮಾಡುತ್ತಿರುವ ಶ್ರುತಿ ಹರಿಹರನ್ ಮುಂದಿನ ದಿನಗಳಲ್ಲಿ ನಿರ್ದೇಶನವನ್ನೂ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲೇ ಅವರೇ ಹೆಚ್ಚಿನ ಮಾಹಿತಿಯನ್ನೂ ನೀಡಲಿದ್ದಾರೆ. ಈ ಮೂಲಕ ನಟಿಯೊಬ್ಬರು ನಿರ್ದೇಶನಕ್ಕೆ ಇಳಿದ ಯಾದಿಗೆ ಅವರು ಸೇರ್ಪಡೆಯಾಗಲಿದ್ದಾರೆ. ಸಂಪೂರ್ಣ ತಯಾರಿಯೊಂದಿಗೆ ಅಖಾಡಕ್ಕೆ ಇಳಿಯುವ ಮಾತುಗಳನ್ನೂ ಅವರು ಆಡಿದ್ದಾರೆ. ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ

    ಕನ್ನಡ ಸಿನಿಮಾ ರಂಗಕಂಡ ಪ್ರತಿಭಾವಂತೆ ಶ್ರುತಿ ಹರಿಹರನ್, ಸಿನಿಮಾ ರಂಗದ ಯಾವುದೇ ಹಿನ್ನೆಲೆ ಇಲ್ಲದೇ, ವಿಭಿನ್ನ ಎನಿಸುವಂತಹ ಚಿತ್ರಗಳಲ್ಲಿ ನಟಿಸಿದವರು. ನಾತಿಚರಾಮಿ ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಅವರು ಪಡೆದವರು. ಅಲ್ಲದೇ, ಕನ್ನಡ ಸಿನಿಮಾ ರಂಗದ ಹೆಸರಾಂತ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿ ಮಾತ್ರವಲ್ಲ, ಇತರ ಭಾಷೆಗಳ ಚಿತ್ರದಲ್ಲೂ ಅವರು ನಟಿಸಿದ್ದಾರೆ. ವ್ಯಾಪಾರಿ ಮತ್ತು ಕಲಾತ್ಮಕ ಚಿತ್ರಗಳ ಮೂಲಕ ಗುರುತಿಸಿಕೊಂಡ ಪ್ರತಿಭಾನ್ವಿತ ನಟಿ ಕೂಡ ಇವರಾಗಿದ್ದಾರೆ.

    ನಟಿಯಾಗಿ ಸಾಕಷ್ಟು ಹೆಸರು ಮಾಡಿರುವ ಶ್ರುತಿ ಹರಿಹರನ್, ಇದೀಗ ನಿರ್ದೇಶಕಿಯಾಗಿ ಅಭಿಮಾನಿಗಳ ಎದುರು ನಿಲ್ಲುತ್ತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಸೂಕ್ಷ್ಮ ಕಥೆ ಮತ್ತು ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು, ತಮ್ಮ ನಿರ್ದೇಶನದ ಸಿನಿಮಾಗೆ ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ಸದ್ಯಕ್ಕೀರುವ ಕುತೂಹಲ. ಮುಂದಿನ ದಿನಗಳಲ್ಲಿ ಈ ಕುರಿತು ಅವರೇ ಹೇಳಲಿದ್ದಾರಂತೆ. ಅಲ್ಲಿವರೆಗೂ ಕಾಯಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತೆ ಸಾಲು ಸಾಲು ಸಿನಿಮಾಗಳಲ್ಲಿ `ರಾಟೆ’ ನಟಿ ಶೃತಿ ಹರಿಹರನ್ ಬ್ಯುಸಿ

    ಮತ್ತೆ ಸಾಲು ಸಾಲು ಸಿನಿಮಾಗಳಲ್ಲಿ `ರಾಟೆ’ ನಟಿ ಶೃತಿ ಹರಿಹರನ್ ಬ್ಯುಸಿ

    ಸ್ಯಾಂಡಲ್‌ವುಡ್ ನಟಿ ಶೃತಿ ಹರಿಹರನ್ ಚಿತ್ರರಂಗಕ್ಕೆ ಮತ್ತೆ ಕಮ್‌ಬ್ಯಾಕ್ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುವ ಮೂಲಕ ಶ್ರುತಿ ಮತ್ತೆ ಸುದ್ದಿಯಲ್ಲಿದ್ದಾರೆ.

    `ಲೂಸಿಯಾ’ ಚಿತ್ರದಲ್ಲಿ ಸತೀಶ್ ನೀನಾಸಂಗೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ನಟಿ ಶೃತಿ ಹರಿಹರನ್, ಕನ್ನಡ ಮತ್ತು ಪರಭಾಷಾ ಚಿತ್ರಗಳಲ್ಲೂ ಬಿಗ್ ಸ್ಟಾರ್‌ಗಳ ಜೊತೆ ತೆರೆಹಂಚಿಕೊಂಡಿರೋ ಪ್ರತಿಭಾವಂತ ನಾಯಕಿ ಶೃತಿ ಮತ್ತೆ ಚಿತ್ರರಂಗದಲ್ಲಿ ಹೊಸ ಚಿತ್ರಗಳ ಮೂಲಕ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ: ತಮ್ಮದೇ ಹೆಸರಿನ ಚಿತ್ರದಲ್ಲಿ ತೆಲುಗಿನ ಸ್ಟಾರ್ ನಟ ಬಾಲಕೃಷ್ಣ

    ಜೀವನದಲ್ಲಿ ಸಾಕಷ್ಟು ಸವಾಲುಗಳನ್ನ ಎದುರಿಸಿದ ಬಳಿಕ ಮದುವೆ, ಸಂಸಾರ ಅಂತಾ ಬ್ಯುಸಿಯಿದ್ದ `ರಾಟೆ’ ನಟಿ ಶೃತಿ ಪವರ್‌ಫುಲ್ ಪಾತ್ರಗಳ ಮೂಲಕ ಕಮಾಲ್ ಮಾಡಲು ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

    ಇನ್ನು ಶೃತಿ ಬತ್ತಳಿಕೆಯಲ್ಲಿ ಇದೀಗ ಅಧಿಕೃತವಾಗಿ ನಾಲ್ಕು ಸಿನಿಮಾಗಳಿವೆ. `ಸಾಲುಗಾರ’, `ಸ್ಟ್ರಾಬೆರಿ’, ಡಾಲಿ ಜೊತೆ `ಹೆಡ್‌ಬುಷ್’, `ಏಜೆಂಜ್ ಕನ್ನಾಯಿರಾಮ್’, ಜತೆಗೆ ಶಂಕರ್ ಎನ್. ಸೊಂಡೂರ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ಶೃತಿ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ವರ್ಷದ ಕೊನೆಯಿಂದ ಶೃತಿ ಮೇನಿಯಾ ಶುರುವಾಗೋದು ಗ್ಯಾರೆಂಟಿ.