Tag: ಲೂಸಿಫರ್

  • ಮಾಲಿವುಡ್ ಚಿತ್ರರಂಗಕ್ಕೆ ‘ಲೈಕಾ’ ಎಂಟ್ರಿ: ‘ಲೂಸಿಫರ್ ಪಾರ್ಟ್-2 ಚಿತ್ರಕ್ಕೆ ಬಂಡವಾಳ

    ಮಾಲಿವುಡ್ ಚಿತ್ರರಂಗಕ್ಕೆ ‘ಲೈಕಾ’ ಎಂಟ್ರಿ: ‘ಲೂಸಿಫರ್ ಪಾರ್ಟ್-2 ಚಿತ್ರಕ್ಕೆ ಬಂಡವಾಳ

    ಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಮಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದೆ. ಇಂಡಿಯನ್, ದರ್ಬಾರ್, ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾ, 2.0, ಖೈದಿ 150 ಅಂತಹ ಅದ್ಧೂರಿ ಹಾಗೂ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ಸಿನಿಮಾ ರಂಗಕ್ಕೆ ಕೊಡುಗೆಯಾಗಿ ಕೊಟ್ಟಿರುವ ಲೈಕಾ ಮಾಲಿವುಡ್ ಸೂಪರ್ ಡೂಪರ್ ಹಿಟ್ ಚಿತ್ರ ಲೂಸಿಫರ್ ಪಾರ್ಟ್-2 (Lucifer 2)ಗೆ ಬಂಡವಾಳ ಹೂಡುತ್ತಿದೆ.

    ಲೈಕಾ ಒಡೆಯ ಸುಭಾಷ್ ಕರಣ್ (Subhash Karan), ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ (Mohanlal) -ಪೃಥ್ವಿ ರಾಜ್ ಸುಕುಮಾರ್ (Prithvi Raj Sukumar) ಜೊತೆ ಕೈ ಜೋಡಿಸಿದ್ದಾರೆ. 2019ರಲ್ಲಿ ರಿಲೀಸ್ ಆಗಿದ್ದ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಲೂಸಿಫರ್ ಸಿನಿಮಾ ಕಮರ್ಷಿಯಲ್ ಹಾಗೂ ವಿಮರ್ಶಕರಿಂದಲೂ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಮೋಹನ್ ಲಾಲ್ ಅಭಿನಯ, ಪೃಥ್ವಿರಾಜ್ ಡೈರೆಕ್ಷನ್ ಬಗ್ಗೆ ಸಿನಿಮಾ ರಸಿಕರು ಚಪ್ಪಾಳೆ ತಟ್ಟಿದ್ದರು. ಇದೀಗ ಲೂಸಿಫರ್ ಪಾರ್ಟ್-2 ನಿರ್ದೇಶಕ ಪೃಥ್ವಿರಾಜ್ ಸುಕುಮಾರ್ ಸಜ್ಜಾಗಿದ್ದು, ಲೈಕಾ ಜೊತೆಯಾಗಿ ನಿಂತಿದೆ. ಇದನ್ನೂ ಓದಿ:ಹುಟ್ಟುಹಬ್ಬಕ್ಕೆ ಬ್ರೇಕ್‌ ಹಾಕಿದ ರಚಿತಾ- ಸೋಶಿಯಲ್‌ ಮೀಡಿಯಾದಲ್ಲಿ ನಟಿ ಮನವಿ

    ಲೂಸಿಫರ್ ಎರಡನೇ ಅಧ್ಯಾಯಕ್ಕೆ ‘ಎಂಪುರನ್’ (Empuran) ಎಂಬ ಟೈಟಲ್ ಇಡಲಾಗಿದೆ. ಮಲಯಾಳಂನ ಖ್ಯಾತ ನಿರ್ಮಾಣ ಸಂಸ್ಥೆ ಆಶೀರ್ವಾದ ಸಿನಿಮಾಸ್ ಜೊತೆಗೂಡಿ ಲೈಕಾ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಜಿ.ಕೆ.ಎಂ. ತಮಿಳ್ ಕುಮಾರನ್ ಲೈಕಾ ಪ್ರೊಡಕ್ಷನ್‌ನ ಮುಖ್ಯಸ್ಥರಾಗಿದ್ದಾರೆ. ಮುರಳಿ ಗೋಪಿ ಈ ಚಿತ್ರಕ್ಕೆ ಚಿತ್ರಕಥೆ ಬರೆಯುತ್ತಿದ್ದಾರೆ, ಸುಜಿತ್ ವಾಸುದೇವ್ ಛಾಯಾಗ್ರಹಣವನ್ನು ನಿಭಾಯಿಸುತ್ತಿದ್ದಾರೆ. ದೀಪಕ್ ದೇವ್ ಸಂಗೀತ ಸಂಯೋಜಿಸಿದ್ದಾರೆ.

    ಸುರೇಶ್ ಬಾಲಾಜಿ ಮತ್ತು ಜಾರ್ಜ್ ಪಯಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ‘ಎಂಪುರನ್’ ಅಧಿಕೃತ ಘೋಷಣೆಯ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ವಿಶೇಷವಾಗಿ ಆಶೀರ್ವಾದ್ ಸಿನಿಮಾಸ್ ಆಂಟೋನಿ ಪೆರುಂಬವೂರ್-ಲೈಕಾ ಪ್ರೊಡಕ್ಷನ್ಸ್ ಸುಭಾಸ್ಕರನ್-ಮೋಹನ್ ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಕಾಂಬೋದ ಲೂಸಿಫರ್-2 ಝಲಕ್ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿದ ಸಲ್ಮಾನ್ ಖಾನ್

    ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿದ ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ನಟ ಸಲ್ಮಾನ್ ಖಾನ್ ದಕ್ಷಿಣ ಭಾರತದ ಎರಡು ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈಗಾಗಲೇ ಬಾಲಿವುಡ್‍ನ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಸಲ್ಮಾನ್ ಖಾನ್, ಈ ಮಧ್ಯೆ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್‍ನಲ್ಲಿ ಸಲ್ಮಾನ್ ಖಾನ್‍ಗೆ ಅಪಾರ ಅಭಿಮಾನಿ ಬಳಗವಿದೆ. ಸಲ್ಮಾನ್ ಯಾವುದೇ ಚಿತ್ರದಲ್ಲಿ ಅಭಿನಯಿಸಿದರೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಲದೇ ಸಲ್ಮಾನ್ ಚಿತ್ರಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಈ ನಡುವೆ ಸಲ್ಮಾನ್ ಖಾನ್ ತೆಲುಗು ಹಾಗೂ ತಮಿಳು ಚಿತ್ರರಂಗದತ್ತ ಮುಖಮಾಡಿದ್ದಾರೆ. ಟಾಲಿವುಡ್ ನಟ ಚಿರಂಜೀವಿ ಅಭಿನಯದ 153ನೇ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿರುವುದು ಬಹುತೇಕ ಪಕ್ಕಾ ಆಗಿದೆ. ಅಲ್ಲದೇ ಈ ಸಿನಿಮಾ ಮಲಯಾಳಂನ ಲೂಸಿಫರ್ ಸಿನಿಮಾದ ರಿಮೇಕ್ ಆಗಿದ್ದು, ಇದೊಂದು ಮಾಫಿಯಾ ಹಾಗೂ ಕುಟುಂಬ ಪ್ರೇಮ ಕಥಾಹಂದರ ಸಿನಿಮಾವಾಗಿದೆ. ಈ ಚಿತ್ರದಲ್ಲಿ ನಟ ಮೋಹನ್ ಲಾಲ್ ಹಾಗೂ ಪೃಥ್ವಿರಾಜ್ ಅಭಿನಯಿಸಿದ್ದು, ತೆಲುಗಿನಲ್ಲಿ ಮೋಹನ್‍ಲಾಲ್ ಪಾತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳುತ್ತಿದ್ದು, ಪೃಥ್ವಿರಾಜ್ ಪಾತ್ರದಲ್ಲಿ ಸಲ್ಮಾನ್ ಖಾನ್ ಅಭಿನಯಿಸಲಿದ್ದಾರೆ. ಒಟ್ಟಾರೆ ಈ ಸಿನಿಮಾದಲ್ಲಿ ಚಿರಂಜೀವಿ ಬಲಗೈ ಭಂಟನಾಗಿ ಸಲ್ಮಾನ್ ಖಾನ್ ಇದೇ ಮೊದಲ ಬಾರಿಗೆ ತೆಲುಗಿನಲ್ಲಿ ಬಣ್ಣಹಚ್ಚಲಿದ್ದಾರೆ.

    ಕಾಲಿವುಡ್ ಇಳಯ ದಳಪತಿ ನಟ ವಿಜಯ್ ಅಭಿನಯದ ಬೀಸ್ಟ್ ಸಿನಿಮಾದಲ್ಲಿ ಕೂಡ ಸಲ್ಮಾನ್ ಖಾನ್ ಅಥಿತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಸಲ್ಮಾನ್ ಖಾನ್‍ರ ಮುಂದಿನ ಸಿನಿಮಾದಲ್ಲಿ ವಿಜಯ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂಬ ಸುದ್ದಿ ಬಾಲಿವುಡ್ ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಯುರೋಪ್‍ನಲ್ಲಿ ಕಂಗನಾ ಹಾಟ್ ಪೋಸ್ – ಅಭಿಮಾನಿಗಳು ಕ್ಲೀನ್ ಬೋಲ್ಡ್