Tag: ಲುಲು ಮಾಲ್

  • ಲುಲು ಮಾಲ್ ವಿವಾದ – ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟುನ ಕ್ರಮ: ಆದಿತ್ಯನಾಥ್

    ಲುಲು ಮಾಲ್ ವಿವಾದ – ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟುನ ಕ್ರಮ: ಆದಿತ್ಯನಾಥ್

    ಲಕ್ನೋ: ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಉದ್ಘಾಟನೆಗೊಂಡಿದ್ದ ಲುಲು ಮಾಲ್‌ನಲ್ಲಿ ಕೆಲವರು ನಮಾಜ್ ಮಾಡಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಅಲ್ಲಿನ ವಾತಾವರಣ ಬಿಗಡಾಯಿಸಿದ್ದು, ಹಲವು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

    ಇದೀಗ ಲುಲು ಮಾಲ್ ವಿಚಾರವಾಗಿ ಶಾತಿಯನ್ನು ಕದಡಲು ಪ್ರಯತ್ನಿಸುವ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಲಕ್ನೋ ಆಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.

    ಅಬುಧಾಬಿ ಮೂಲದ ಲುಲು ಗ್ರೂಪ್ ನಡೆಸುತ್ತಿರುವ ಉತ್ತರ ಪ್ರದೇಶದ ಲುಲು ಮಾಲ್ ಅನ್ನು ಜುಲೈ 10 ರಂದು ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಿದ್ದರು. ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಮಾಲ್ ಒಳಗಡೆ ಕೆಲವರು ನೆಲದಲ್ಲಿ ಕುಳಿತುಕೊಂಡು ನಮಾಜ್ ಮಾಡಿದ ವೀಡಿಯೋ ವೈರಲ್ ಆಗಿತ್ತು. ಇದನ್ನೂ ಓದಿ: 10ನೇ ಕ್ಲಾಸ್ ವಿದ್ಯಾರ್ಥಿಯಿಂದಲೇ ಡಿಕೆಶಿ ಶಾಲೆಗೆ ಬಾಂಬ್ ಬೆದರಿಕೆ!

    ಮಾಲ್‌ನಲ್ಲಿ ನಮಾಜ್ ಮಾಡಿದ 8 ಮುಸ್ಲಿಂ ವ್ಯಕ್ತಿಗಳ ಪೈಕಿ ನಾಲ್ವರನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ. ನಮಾಜ್ ಮಾಡುತ್ತಿದ್ದ ವೀಡಿಯೋ ವೈರಲ್ ಆಗುತ್ತಿದ್ದಂತೆ ಕೆಲವು ಹಿಂದೂ ಸಂಘಟನೆಗಳು ಸಾರ್ವಜನಿಕ ಸ್ಥಳಗಳನ್ನು ಧಾರ್ಮಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಕೋಮು ಸೌಹಾರ್ದದ ಉಲ್ಲಂಘನೆ ಎಂದು ಆರೋಪಿಸಿವೆ. ಇದರ ಬೆನ್ನಲ್ಲೇ ಬಲಪಂಥೀಯ ಸಂಘಟನೆಗಳು ಮಾಲ್‌ನಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಲು ಮುಂದಾಗಿದ್ದವು. ಆದರೆ ಅದನ್ನು ತಡೆಯಲಾಗಿತ್ತು.

    ಮಾಲ್ ಮಾಲೀಕರು ಧಾರ್ಮಿಕವಾಗಿ ಪಕ್ಷಪಾತ ಮಾಡುತ್ತಿವೆ ಎಂದು ಕೆಲವು ಸಂಘಟನೆಗಳು ಹೇಳಿದ್ದು, ಬಳಿಕ ಆಡಳಿತ ಮಂಡಳಿ ಧಾರ್ಮಿಕ ಆಚರಣೆಗೆ ಇಲ್ಲಿ ಅನುಮತಿಯಿಲ್ಲ ಎಂದು ಬೋರ್ಡ್ ಅನ್ನು ಅಳವಡಿಸಿದೆ. ಲುಲು ಮಾಲ್ ಎಲ್ಲಾ ಧರ್ಮಗಳನ್ನೂ ಗೌರವಿಸುತ್ತದೆ. ಆದರೆ ಇಲ್ಲಿ ಯಾವುದೇ ಪೂಜೆಗೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ನಾವು ನಮ್ಮ ಸಿಬ್ಬಂದಿಗೆ ಇಂತಹ ಘಟನೆಗಳ ಮೇಲೆ ನಿಗಾ ಇಡಲು ಕಟ್ಟುನಿಟ್ಟಿನ ಕ್ರಮ ವಹಿಸಿದ್ದೇವೆ ಎಂದು ಜನರಲ್ ಮ್ಯಾನೇಜರ್ ಸಮೀರ್ ವರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರಾದವರು ಸಿಎಂ ಆಗುವುದು ಸಂಪ್ರದಾಯ: ಡಿ.ಕೆ ಶಿವಕುಮಾರ್

    Live Tv
    [brid partner=56869869 player=32851 video=960834 autoplay=true]

  • ಲುಲು ಮಾಲ್‍ನಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದ ಇಬ್ಬರ ಬಂಧನ

    ಲುಲು ಮಾಲ್‍ನಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದ ಇಬ್ಬರ ಬಂಧನ

    ಲಕ್ನೋ: ಲುಲು ಮಾಲ್‍ಗೆ ನುಗ್ಗಿ ಶನಿವಾರ ಹನುಮಾನ್ ಚಾಲೀಸಾ ಪಠಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ನೂತನವಾಗಿ ನಿರ್ಮಾಣವಾಗಿರುವ ಲುಲು ಶಾಪಿಂಗ್ ಮಾಲ್‍ಗೆ ಪ್ರವೇಶಿಸಲು ಪ್ರಯತ್ನಿಸಿ ಗಲಾಟೆ ಮಾಡಿದ್ದ ಸುಮಾರು 15 ಮಂದಿಯನ್ನು ವಶಕ್ಕೆ ಪಡೆಯಲಾಯಿತು.

    ಈ ಕುರಿತಂತೆ ಪ್ರತಿಕ್ರಿಯಿಸಿದ ಉಪ ಪೊಲೀಸ್ ಆಯುಕ್ತ (ದಕ್ಷಿಣ) ಗೋಪಾಲ್ ಕೃಷ್ಣ ಚೌಧರಿ ಅವರು, ಮಾಲ್ ಒಳಗೆ ಪ್ರವೇಶಿಸಿದ ಇಬ್ಬರು ನೆಲದ ಮೇಲೆ ಕುಳಿತು ಹನುಮಾನ್ ಚಾಲೀಸಾ ಓದಲು ಆರಂಭಿಸಿದರು. ಈ ಬಗ್ಗೆ ಮಾಲ್‍ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಇಬ್ಬರನ್ನು ಅರೆಸ್ಟ್ ಮಾಡಲಾಯಿತು. ಇದರಿಂದಾಗಿ ಮತ್ತೊಂದು ಪ್ರತಿಭಟನಾಕಾರರ ಗುಂಪು ಮಾಲ್‍ಗೆ ಪ್ರವೇಶಿಸಲು ಯತ್ನಿಸಿ ಗಲಾಟೆ ಮಾಡಲು ಆರಂಭಿಸಿದರು. ಹೀಗಾಗಿ ಯಾವುದೇ ಅಹಿತಕರ ಘಟನೆ ಸಂಭವಿಸಬಾರದೆಂಬ ಉದ್ದೇಶದಿಂದ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದು ನಂತರ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಯಿತು ಎಂದು ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಲುಲು ಮಾಲ್‍ನ ಒಳಗಡೆ ಮುಸ್ಲಿಮರ ಗುಂಪೊಂದು ನಮಾಜ್ ಮಾಡುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೀಗಾಗಿ ನಮಾಜ್ ಮಾಡಿದ ಗುಂಪಿನವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯ) ಅಡಿಯಲ್ಲಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು.

    ನಂತರ ಮಾಲ್ ಅಧಿಕಾರಿಗಳು ಶುಕ್ರವಾರ ಯಾವುದೇ ಧರ್ಮದ ಧಾರ್ಮಿಕ ಪ್ರಾರ್ಥನೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ಮಾಲ್‍ನ ಹಲವು ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಹಾಕಿದ್ದಾರೆ. ಬಳಿಕವೂ ಮತ್ತೊಂದು ವೀಡಿಯೊ ಬಿಡುಗಡೆಯಾಗಿತ್ತು. ಇದನ್ನು ಖಂಡಿಸಿ ಅಖಿಲ ಭಾರತ ಹಿಂದೂ ಮಹಾಸಭಾ ಮಾಲ್ ಹೊರಗೆ ಪ್ರತಿಭಟನೆಗೆ ಮುಂದಾಗಿತ್ತು. ತಾವೂ ಕೂಡ ಹನುಮಾನ್ ಚಾಲೀಸಾವನ್ನು ಪಠಿಸಲು ಅನುಮತಿ ನೀಡಬೇಕೆಂದು ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ, ಈ ಮನವಿಯನ್ನು ಅಧಿಕಾರಿಗಳು ತಿರಸ್ಕರಿಸಿದ್ದರು. ಹೀಗಾಗಿ ಮಾಲ್ ಮುಂದೆ ಪ್ರತಿಭಟನೆಯನ್ನು ಆರಂಭಿಸಿದ ಪ್ರತಿಭಟನಾಕಾರರು, ಹನುಮಾನ್ ಚಾಲೀಸಾ ಪಠಿಸಲು ಲುಲು ಮಾಲ್‍ನ ಒಳಗೆ ಬಂದಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರನ್ನು ಕಂಡು ಕೆಲ ಪ್ರತಿಭಟನಾಕಾರರು ಓಡಿದ್ದಾರೆ. ಕೊನೆಗೂ ಪೊಲೀಸರು ಪ್ರತಿಭಟನೆಯಲ್ಲಿ ತೊಡಗಿದ್ದ ಎಲ್ಲರನ್ನು ವಶಕ್ಕೆ ಪಡೆದಿದ್ದಾರೆ.

    ಜುಲೈ 10ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲುಲು ಮಾಲ್ ಅನ್ನು ಉದ್ಘಾಟಿಸಿದ್ದರು. ಈ ಮಾಲ್ ಅನ್ನು ಭಾರತೀಯ ಮೂಲದ ಬಿಲಿಯನೇರ್ ಯೂಸುಫ್ ಅಲಿ ಎಂಎ ನೇತೃತ್ವದ ಅಬುಧಾಬಿ ಮೂಲದ ಲುಲು ಗ್ರೂಪ್ ತೆರೆದಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಲ್‌ನಲ್ಲಿ ನಮಾಜ್ – ಮಾಲ್ ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳಿಂದ ಕರೆ

    ಮಾಲ್‌ನಲ್ಲಿ ನಮಾಜ್ – ಮಾಲ್ ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳಿಂದ ಕರೆ

    ಲಕ್ನೋ: ಕೆಲವು ದಿನಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಲುಲು ಮಾಲ್‌ನಲ್ಲಿ ಕೆಲವರು ನಮಾಜ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೀಗ ಮಾಲ್ ಒಳಗಡೆಯೇ ನಾಮಾಜ್ ಮಾಡಿರುವುದಕ್ಕೆ ಹಿಂದೂ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ.

    ಮಾಲ್‌ನಲ್ಲಿ ನಮಾಜ್ ಮಾಡಿದ ಹಿನ್ನೆಲೆ ಭಾರತ ಹಿಂದೂ ಮಹಾಸಭಾ ಆಕ್ಷೇಪ ವ್ಯಕ್ತಪಡಿಸಿ, ಹಿಂದೂಗಳು ಮಾಲ್‌ಗಳನ್ನು ಬಹಿಷ್ಕರಿಸುವಂತೆ ಕೇಳಿಕೊಂಡಿದೆ.

    ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ. ಇದೀಗ ಲುಲು ಮಾಲ್‌ನಲ್ಲಿ ಜನರು ನೆಲದಲ್ಲಿ ಕುಳಿತುಕೊಂಡು ನಮಾಜ್ ಮಾಡಿದ್ದಾರೆ. ಇದು ಸರ್ಕಾರದ ಆದೇಶದ ಉಲ್ಲಂಘನೆ ಎಂಬುದು ವೀಡಿಯೋದಲ್ಲಿ ಸ್ಪಷ್ಟವಾಗಿ ತೋರುತ್ತಿದೆ ಎಂದು ಹಿಂದೂ ಮಹಾಸಭೆಯ ರಾಷ್ಟ್ರೀಯ ವಕ್ತಾರ ಶಿಶಿರ್ ಚತುರ್ವೇದಿ ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ಯುವತಿಯ ಅಪಹರಣ, ಬಲವಂತದಿಂದ ಮತಾಂತರ ಮಾಡಿ ಮುಸ್ಲಿಂ ಯುವಕನೊಂದಿಗೆ ಮದುವೆ

    ಇಂತಹ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳಲು ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಚತುರ್ವೇದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವಿನಂತಿಸಿದ್ದಾರೆ. ವೈರಲ್ ವೀಡಿಯೋ ಕುರಿತು ಲುಲು ಮಾಲ್ ವಿರುದ್ಧ ಹಿಂದೂ ಸಂಘಟನೆ ಲಕ್ನೋ ಪೊಲೀಸರಿಗೆ ದೂರು ಸಲ್ಲಿದೆ. ಇದನ್ನೂ ಓದಿ: ಸಂಸತ್ ಕಲಾಪದಲ್ಲಿ ಅಸಂಸದೀಯ ಪದಗಳಿಗೆ ಕತ್ತರಿ – ಈ ಪದಗಳು ಬ್ಯಾನ್

    11 ಅಂತಸ್ತಿನ ಪಾಕಿಂಗ್ ಸ್ಥಳ, 2.2 ಮಿಲಿಯನ್ ಚದರ ಅಡಿಗಳಲ್ಲಿ ಸುಮಾರು 300 ಅಂಗಡಿಗಳನ್ನು ಹೊಂದಿರುವ ಲಕ್ನೋವಿನ ಲುಲು ಮಾಲ್ ಅನ್ನು ಜುಲೈ 10 ರಂದು ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಿದ್ದರು.

    Live Tv
    [brid partner=56869869 player=32851 video=960834 autoplay=true]