Tag: ಲುಲಿಯಾ ವಂಟೂರ್

  • ತನ್ನ ನೆಚ್ಚಿನ ನಟಿ ಯಾರೆಂದು ಹೇಳಿ ಮುಗುಳ್ನಕ್ಕ ಸಲ್ಮಾನ್ ಖಾನ್

    ತನ್ನ ನೆಚ್ಚಿನ ನಟಿ ಯಾರೆಂದು ಹೇಳಿ ಮುಗುಳ್ನಕ್ಕ ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬ್ಯೂಸಿ ಆಗಿದ್ದರೂ, ಕಿರುತೆರೆಯಲ್ಲಿಯೂ ರಿಯಾಲಿಟಿ ಶೋಗಳ ನಿರೂಪಣೆಯನ್ನು ಮಾಡುತ್ತಿದ್ದಾರೆ. ಖಾಸಗಿ ಚಾನೆಲ್ ನ ಕಾರ್ಯಕ್ರಮದ ನಿರೂಪಣೆ ವೇಳೆ ಸಲ್ಮಾನ್ ಸದ್ಯದ ತಮ್ಮ ನೆಚ್ಚಿನ ನಟಿ ಯಾರೆಂದು ಹೇಳಿ ನಾಚಿ ನೀರಾಗಿದ್ದಾರೆ.

    ಶನಿವಾರ ಪ್ರಸಾರವಾದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ನಟ ಧರ್ಮೇಂದ್ರ ಮತ್ತು ಪುತ್ರ ಬಾಬಿ ಡಿಯೋಲ್ ಆಗಮಿಸಿದ್ದರು. ಕಾರ್ಯಕ್ರಮದ ಮಧ್ಯದಲ್ಲಿ ಬಾಬಿ ಕೆಲವ ಪ್ರಶ್ನೆಗಳನ್ನು ಕೇಳಲಾರಂಭಿಸಿದರು. ಈ ಹಿಂದೆ ಮತ್ತು ಇಂದು ನಿಮ್ಮ ನೆಚ್ಚಿನ ನಟಿ ಯಾರೆಂದು ಪ್ರಶ್ನಿಸಿದರು. ಮಧುಬಾಲಾ ನನ್ನ ನೆಚ್ಚಿನ ನಟಿ, ಇಂದು ಎಲ್ಲರಿಗೂ ಇಷ್ಟವಾಗುತ್ತಿರುವ ಕತ್ರಿನಾ ಕೈಫ್ ಅಚ್ಚುಮೆಚ್ಚಿನ ನಟಿ ಎಂದು ಹೇಳಿ ಮುಗಳ್ನಕ್ಕರು.

    ಸಲ್ಮಾನ್ ಮತ್ತು ಕತ್ರಿನಾ ಮದುವೆ ಆಗಲಿದ್ದಾರೆ ಎಂಬ ಸುದ್ದಿಯೊಂದು ಬಹಳ ವರ್ಷಗಳ ಹಿಂದೆ ಹರಿದಾಡುತ್ತಿತ್ತು. ವೈಯಕ್ತಿಕ ಕಾರಣಗಳಿಂದ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಬ್ರೇಕಪ್ ಬಳಿಕ ಸಲ್ಮಾನ್ ಹೆಸರು ರೋಮ್ಯಾನಿಯಾ ಬೆಡಗಿ ಲುಲಿಯಾ ವಂಟೂರ್ ಜೊತೆ ಕೇಳ ಬರತೊಡಗಿತು. ಇತ್ತ ಕತ್ರಿನಾ ಹೆಸರು ಸಹ ರಣ್‍ಬೀರ್ ಕಪೂರ್ ಜೊತೆ ಕೇಳಿ ಬಂತು. ಇದಕ್ಕೆ ಸಾಕ್ಷಿ ಎಂಬಂತೆ ಕತ್ರಿನಾ ಮತ್ತು ರಣ್‍ಬೀರ್ ನಡುವಿನ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ರೋಮ್ಯಾನಿಯಾ ತೊರೆದು ಭಾರತಕ್ಕೆ ಬಂದಿರುವ ಲುಲಿಯಾ ಸಹ ಸಲ್ಮಾನ್ ಮತ್ತು ಕುಟುಂಬಸ್ಥರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

    ಬ್ರೇಕಪ್ ಬಳಿಕ ಕತ್ರಿನಾ ‘ಬಾಡಿಗಾರ್ಡ್’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಲ್ಮಾನ್ ಜೊತೆ ಹೆಜ್ಜೆ ಹಾಕಿದ್ದರು. ಬಾಡಿಗಾರ್ಡ್ ನಂತರ ‘ಏಕ್ ಥಾ ಟೈಗರ್’ ನಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದರು. ಸಿನಿಮಾ ಸಹ ಬಾಕ್ಸ್ ಆಫೀಸ್ ನ್ನು ಕೊಳ್ಳೆ ಹೊಡೆದಿತ್ತು. ಇದಾದ ಬಳಿಕ ಸಲ್ಮಾನ್ ಮತ್ತು ಕತ್ರಿನಾ ಹತ್ತಿರ ಆಗುತ್ತಿದ್ದಾರೆಂದು ಎಂಬ ಗಾಸಿಪ್ ಬಾಲಿವುಡ್ ಅಂಗಳದಲ್ಲಿ ಹರಿದಾಡಲಾರಂಭಿಸಿತು. ಏಕ್ ಥಾ ಟೈಗರ್ ಸೂಪರ್ ಹಿಟ್ ಆದ ಬಳಿಕ ‘ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಕತ್ರಿನಾ ಜೊತೆಯಾದ್ರು.

    ಟೈಗರ್ ಜಿಂದಾ ಹೈ ಚಿತ್ರದ ಚಿತ್ರೀಕರಣ ವಿದೇಶದಲ್ಲಿ ನಡೆದಿದ್ದರಿಂದ ಸಲ್ಮಾನ್ ಮತ್ತು ಕತ್ರಿನಾ ಖಾಸಗಿಯಾಗಿ ಸಾಕಷ್ಟು ಸಮಯ ಜೊತೆಯಾಗಿ ಕಳೆದಿದ್ದರಿಂದ ಇಬ್ಬರ ನಡುವಿನ ಮುನಿಸು ಮಾಯವಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಲುಲಿಯಾ ವಂಟೂರ್ ದೂರ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸಲ್ಮಾನ್ ಮತ್ತು ಕತ್ರಿನಾ ಮತ್ತೊಮ್ಮೆ ‘ಭಾರತ್’ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಭಾರತ್ ಮುಂದಿನ ವರ್ಷ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಲ್ಮಾನ್ ಗೆಳತಿ ಲುಲಿಯಾ ಜೊತೆ ಮನೀಶ್ ಪೌಲ್ ರೊಮ್ಯಾನ್ಸ್!

    ಸಲ್ಮಾನ್ ಗೆಳತಿ ಲುಲಿಯಾ ಜೊತೆ ಮನೀಶ್ ಪೌಲ್ ರೊಮ್ಯಾನ್ಸ್!

    ಮುಂಬೈ: ಬಾಲಿವುಡ್ ದಬಂಗ್ ಸಲ್ಮಾನ್ ಖಾನ್ ಗೆಳತಿ ಲುಲಿಯಾ ವಂಟೂರ್ ನಟ, ನಿರೂಪಕ ಮನೀಶ್ ಪೌಲ್ ಜೊತೆ ನಟಿಸಿರುವ ‘ಹರ್ ಜಾಯಿ’ ಸಾಂಗ್ ಅಲ್ಬಮ್ ರಿಲೀಸ್ ಆಗಿದೆ. ವಿಡಿಯೋ ಸಾಂಗ್‍ನಲ್ಲಿ ಲುಲಿಯಾ ಮತ್ತು ಮನೀಶ್ ಇಬ್ಬರೂ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

    ಸಲ್ಮಾನ್‍ಗಾಗಿ ತನ್ನ ದೇಶವನ್ನು ತೊರೆದು ಭಾರತಕ್ಕೆ ಬಂದಿರುವ ಲುಲಿಯಾ ಸದ್ಯ ತಮ್ಮ ಕೆರಿಯರ್ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಈ ಬಗ್ಗೆ ಸಲ್ಮಾನ್ ಕೂಡ ತನ್ನ ಗೆಳತಿಯ ಪ್ರೊಫೆಶನಲ್ ಲೈಫ್ ಬಗ್ಗೆ ಹಲವರೊಂದಿಗೆ ಮಾತುಕತೆಯನ್ನು ಸಹ ನಡೆಸಿದ್ದಾರೆ. ಲುಲಿಯಾರ ಸಾಂಗ್ ಅಲ್ಬಮ್ ರಿಲೀಸ್ ಆಗುತ್ತಿದೆ ಎಂದು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.

    ಸಾಂಗ್ ಅಲ್ಬಮ್‍ರ ಒಂದು ಟೀಸರ್ ಬಿಡುಗಡೆಯಾಗಿದ್ದು, ಬಾಲಿವುಡ್‍ನಲ್ಲಿ ಸಂಚಲನ ಮೂಡಿಸಿದೆ. ಮೂಲತಃ ಗಾಯಕಿಯಾಗಿರುವ ಲುಲಿಯಾ ‘ಹರ್ ಜಾಯಿ’ ಹಾಡಿಗೆ ಧ್ವನಿ ನೀಡಿದ್ದಾರೆ. ಸಾಂಗ್‍ನಲ್ಲಿ ಲುಲಿಯಾ ಜೊತೆ ಮನೀಶ್ ಪೌಲ್ ರೊಮ್ಯಾಂಟಿಕ್ ಲುಕ್ ನಲ್ಲಿ ಕಾಣಸಿಗುತ್ತಾರೆ. ಹರ್‍ಜಾಯಿ ಹಾಡು ಮನೀಶ್ ಪೌಲ್ ಮತ್ತು ಸಚಿನ್ ಗುಪ್ತಾ ಕಂಠಸಿರಿಯಲ್ಲಿ ಕೇಳುಗರನ್ನು ರಂಜಿಸುತ್ತಿದೆ.

    ಟೀಸರ್ ಕೇವಲ 35 ಸೆಕೆಂಡ್ ಹೊಂದಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಸಾಂಗ್ ಅಲ್ಬಮ್ ಮೆಲೋಡಿಯಿಂದ ಕೂಡಿರಲಿದೆ ಎಂದು ಹೇಳಲಾಗುತ್ತಿದೆ. ಫುಲ್ ಸಾಂಗ್ ಅಲ್ಬಮ್ ಬುಧವಾರ ರಿಲೀಸ್ ಆಗಲಿದೆ.

  • ಗೆಳತಿ ಲೂಲಿಯಾ, ಕುಟುಂಬಸ್ಥರ ಜೊತೆ ಸೋದರಳಿಯನ ಹುಟ್ಟುಹಬ್ಬ ಆಚರಿಸಿದ ಸಲ್ಮಾನ್ ಖಾನ್ -ಫೋಟೋಗಳಲ್ಲಿ ನೋಡಿ

    ಗೆಳತಿ ಲೂಲಿಯಾ, ಕುಟುಂಬಸ್ಥರ ಜೊತೆ ಸೋದರಳಿಯನ ಹುಟ್ಟುಹಬ್ಬ ಆಚರಿಸಿದ ಸಲ್ಮಾನ್ ಖಾನ್ -ಫೋಟೋಗಳಲ್ಲಿ ನೋಡಿ

    ಮಾಲ್ಡೀವ್ಸ್: ಬಾಲಿವುಡ್‍ನ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಗೆಳತಿ ಲೂಲಿಯಾ ವಂಟೂರು ಜೊತೆ ಸೋದರಿ ಅರ್ಪಿತಾ ಮಗನ ಮೊದಲ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ.

    ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಪುತ್ರ ಆಹಿಲ್‍ನ ಮೊದಲ ಹುಟ್ಟುಹಬ್ಬವನ್ನು ಖಾನ್ ಕುಟುಂಬಸ್ಥರೆಲ್ಲರೂ ಮಾಲ್ಡೀವ್ಸ್ ನಲ್ಲಿ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಸಲ್ಮಾನ್ ಖಾನ್ ಸದ್ಯ `ಜಿಂದಾ ಹೈ ಟೈಗರ್’ ಚಿತ್ರದಲ್ಲಿ ನಟಿಸುತ್ತಿದ್ದು, ಕೆಲಸದ ಒತ್ತಡದ ನಡುವೆ ಸೋದರಳಿಯನ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಆಹಿಲ್‍ಗೆ ಬರ್ತಡೇ ವಿಶ್ ಮಾಡಿದ್ದಾರೆ. ಇದರ ಫೋಟೋಗಳನ್ನು ಇನ್ಸ್ ಟಾಗ್ರಾಮ್‍ನಲಿ ಹಂಚಿಕೊಳ್ಳಲಾಗಿದ್ದು, ಸಲ್ಮಾನ್ ಕುಟುಂಬಸ್ಥರೊಂದಿಗೆ ಲೂಲಿಯಾ ಕೂಡ ಇದ್ದಿದ್ದು ವಿಶೇಷವಾಗಿತ್ತು. ರೊಮಾನಿಯಾದ ಮಾಡೆಲ್, ಗಾಯಕಿ ಹಾಗೂ ನಟಿಯಾಗಿರುವ ಲೂಲಿಯಾ ಸಲ್ಮಾನ್ ಖಾನ್‍ರನ್ನ ಮದುವೆಯಾಗಲಿದ್ದಾರೆ ಎಂಬ ವದಂತಿ ವರ್ಷದ ಹಿಂದಿನಿಂದಲೂ ಇದೆ.

    ಸಲ್ಮಾನ್ ಖಾನ್ ನಟನೆಯ `ಟ್ಯೂಬ್‍ಲೈಟ್’ ಚಿತ್ರ ಜೂನ್ 25 ರಂದು ಈದ್ ವಿಶೇಷವಾಗಿ ತೆರೆಕಾಣಲಿದೆ. ಇನ್ನೂ `ಏಕ್ ಥಾ ಟೈಗರ್’ ಚಿತ್ರದ ಮುಂದುವರಿದ ಭಾಗವಾದ ಚಿತ್ರ ಡಿಸೆಂಬರ್ ತಿಂಗಳಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಸಲ್ಮಾನ್ ಜೊತೆಯಾಗಿ ಕತ್ರಿನಾ ಕೈಫ್ ಜಿಂದಾ ಹೈ ಟೈಗರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    https://www.instagram.com/p/BSQLXllDMXN/

    https://www.instagram.com/p/BSOb1YuDL3j/

    https://www.instagram.com/p/BSQtAu5A6Fe/

     

    https://www.instagram.com/p/BSOYr0QD4eP/?taken-by=arpitakhansharma

    https://www.instagram.com/p/BSWD2mqjCPs/?taken-by=arpitakhansharma

    https://www.instagram.com/p/BSPJ2_djwEc/?taken-by=arpitakhansharma